ಹೊಸತಿರಲಿ

5

 
 
ಸೆಳೆತದೆದುರು ಸಂಣ
ಹರಿಣ ಈಜಿ ನೆರೆದಾಟಿ 
ಭೂ ಸ್ಪರ್ಷ ...
ಉಗಾದಿ
 
ಸವೆದ ದಾರಿ ಸರಿಸಿ 
ಹೊಸ ಹಾರಿನಲ್ಲಿಎತ್ತರದ 
ಮರದಲ್ಲಿ ಹಕ್ಕಿ ಗೂಡು ...
ಉಗಾದಿ
 
ವಸಂತಗಳ ಮುಕ್ಕಿದ
ಮುದಿಯಾಗದವರು ಹಕ್ಕು 
ಚಲಾಯಿಸುವ ಸಾಲು ...
ಉಗಾದಿ
 
ಚರ್ಮಕ್ಕಂಟಿದ
ಮನಸ್ಸುಗಳ ಒಗೆದೊಗೆದು
ಒಪ್ಪ ಓರಣ ಧಾರಣ ...
ಉಗಾದಿ
 
ಹಳಿವ ನಾಲಿಗೆಗಳಲ್ಲಿ
ಸಮ್ಮಾನಿಸುವ ಪ್ರಜ್ಞೆ 
ಜೇನ ಹನಿ ದನಿಗಳು...
ಉಗಾದಿ
 
ಏಕಲವ್ಯರ ಉದ್ದಂಡ
ಸವಲುತ್ತುಗಳ ಉಡಾಫ಼ೆ
ತೊರೆದು ಬಿದ್ದಿವೆ ...
ಉಗಾದಿ
 
ಕಂದನ ಮುಷ್ಟಿಯಲ್ಲಿ
ನಗುವ ಹೊಳೆ ನಕ್ಷತ್ರಗಳ
ಹೊಸ ವಿಸ್ಮಯಗಳು...
 ಉಗಾದಿ
 
ಶಿಲೆಯ ತಲೆಗೆ
ಮನುಜ ಮುಡಿಗೇರದೆ ಹೂ
ಗಿಡಗಳಲ್ಲಿ ನಳನಳಿಸಿ...
ಉಗಾದಿ
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.