ಹೊಸ ನಗೆಹನಿ

ಹೊಸ ನಗೆಹನಿ- ೫೩ ನೇ ಕಂತು

ಒಬ್ಬ ವಿಜ್ಞಾನಿ ಮತ್ತು ಒಬ್ಬ ತತ್ವಜ್ಞಾನಿಗಳನ್ನು ಒಂದು ಸಿಂಹ ಬೆನ್ನು ಹತ್ತಿತ್ತು . ವಿಜ್ಞಾನಿ ಹಿಂತಿರುಗಿ ನೋಡಿ ಬೇಗ ಬೇಗ ಲೆಕ್ಕ ಹಾಕಿ ತತ್ವಜ್ಞಾನಿಗೆ ಹೇಳಿದ - ನಾವು ಸಿಂಹವನ್ನು ಹಿಂದೆ ಹಾಕಲು ಸಾಧ್ಯವಿಲ್ಲ.
ತತ್ವಜ್ಞಾನಿ ಹೇಳಿದ- ನಾನು ಹಿಂದೆ ಹಾಕಲು ಪ್ರಯತ್ನಿಸ್ತಿ ರೋದು ಸಿಂಹವನ್ನಲ್ಲ , ನಿನ್ನನ್ನು !

*****

ಅವರಿವರ ಬಗ್ಗೆ ಆಡಿಕೊಳ್ಳುವ ಅವಳು ಅವನ ಬಗ್ಗೆ ಹೇಳಿದಳು - ಅವನು ಮಹಾ ಕುಡುಕ , ಅವನ ಕಾರು ಸೆರೆಯಂಗಡಿಯ ಮುಂದೆ ನಿನ್ನೆ ಇಡೀ ದಿನ ನಿಂತಿತ್ತು.
ಅವನ ಕಿವಿಗೆ ಇದು ಬಿತ್ತು. ಅವಳತ್ತ ದುರುಗುಟ್ಟಿ ನೋಡಿದ.
ಅವತ್ತು ರಾತ್ರಿ ತನ್ನ ಕಾರನ್ನು ಅವಳ ಮನೆ ಮುಂದೆ ನಿಲ್ಲಿಸಿ ಹೋಗಿ ಬಿಟ್ಟ!!

*****

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹೊಸ ನಗೆಹನಿ- ೫೧ ನೇ ಕಂತು

- ಅವಳ ಜತೆ ಮಾತಾಡ್ತಿರೋನು ಸ್ವತಂತ್ರ ವಿಚಾರಧಾರೆಯ ಯುವಕ
- ಅವನು ಅವಿವಾಹಿತನೋ , ವಿಧುರನೋ ?

******

( ತಾಯಿ ತನ್ನ ಐದು ವರುಷದ ಮಗನಿಗೆ) - ಹಾಗೆಲ್ಲ ಗುಸು ಗುಸು ಮಾತಾಡುವುದು ಕೆಟ್ಟದ್ದು. ನೀನು ಏನು ಹೇಳಬೇಕಂತೀಯೋ ಅದನ್ನು ಬಾಯಿ ಬಿಟ್ಟು ಜೋರಾಗಿ ಹೇಳು
ಮಗ - ಆದರೆ ಅದು ಇನ್ನೂ ಕೆಟ್ಟದ್ದಾಗಿರುತ್ತದೆ ಅಮ್ಮ !

******

ಅವಳು ಮನೆಗೆ ಬಂದ ಸೇಲ್ಸ್‌ಮನ್‌ಗೆ ಹೇಳಿದಳು - ಹಾಗೆಲ್ಲ ನಾವು ಮನೆಗೆ ಬರುವ ಮಾರಾಟಗಾರರಿಂದ ಏನೂ ಕೊಳ್ಳುವದಿಲ್ಲ

ಸೇಲ್ಸ್‌ಮನ್‌ - ಹಾಗಾದರೆ ನೀವು ನನ್ನಿಂದ "ಮಾರಾಟಗಾರರಿಗೆ ನಿಷೇಧ" ಬೋರ್ಡ್ ಕೊಳ್ಳಬಹುದು

******

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.8 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಈ ನಗೆಹನಿಗಳನ್ನ ಈಗಾಗಲೇ ಕೇಳಿದ್ದರೆ.. (50ನೇ ಕಂತು)

ಇನ್ನೊಮ್ಮೆ ನಕ್ಕು ಬಿಡಿ! ಯಾಕೆಂದರೆ ....
- - - - - -
ಗುಂಪಿನಲ್ಲಿ ಒಬ್ಬ- ನಾನು ಈಗ ಹೇಳಲಿರುವ ನಗೆಹನಿಯನ್ನು ಸಜ್ಜನರಾದ ನೀವು ಯಾರಾದರೂ ಈಗಾಗಲೇ ಕೇಳಿದ್ದರೆ ನನ್ನನ್ನು ತಡೆಯಿರಿ .
ಯಾರೋ ಒಬ್ಬರು ಬಾಯಿ ಹಾಕಿದರು - ನೀವು ಮುಂದುವರೆಸಿ ; ಸಜ್ಜನರಾರೂ ಯಾವುದೇ ನಗೆಹನಿಯನ್ನ ಅದಕ್ಕೂ ಮೊದಲು ಕೇಳಿರುವುದಿಲ್ಲ!
- - - -
- ಕೋಳಿಗಳು ತತ್ತಿ ಇಡುವುದು ಏಕೆ ?
-ಎಸೆದರೆ ಒಡೆದು ಹೋಗುವವಲ್ಲ , ಅದಕ್ಕೆ !
- - - - -
ನ್ಯಾಯಾಧೀಶ - ನೀವು ಗಂಡನಿಗೆ ಕುರ್ಚಿಯಿಂದ ಹೊಡೆದದ್ದೇಕೆ ?
ಮಹಿಳೆ - ಯಾಕೆಂದರೆ ಟೇಬಲ್ ತುಂಬಾ ಭಾರವಾಗಿತ್ತು.
- - - - -
(ನಿಜಕ್ಕೂ ನಡೆದ ಸಂಭಾಷಣೆ )
- ಕಚೇರಿಯ ಕಕ್ಕಸು ಕಟ್ಟಿಕೊಂಡಿದೆ, ತುಂಬಾ ಗಲೀಜಾಗಿದೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಗೆಹನಿಗಳು - 49 ನೇ ಕಂತು

ಹೆಂಡತಿ ಊರಿಗೆ ಹೋಗುವಾಗ ಬಹುತೇಕ ಗಂಡಸರು ಅವಳನ್ನು ಬೀಳ್ಕೊಡಲು ರೈಲು ನಿಲ್ದಾಣಕ್ಕೆ ಹೋಗುತ್ತಾರೆ …. ಅವಳು ಹೋದುದನ್ನು ಖಚಿತಪಡಿಸಿಕೊಳ್ಳಲು !
------------
- ಅಜ್ಜಿ , ನೀನು ಪತ್ರಿಕೆಯ ಶ್ರದ್ದಾಂಜಲಿ , ಚಿರಸ್ಮರಣೆ ಜಾಹೀರಾತುಗಳನ್ನೇ ಯಾಕೆ ಓದೋದು ?
- ಚಿಂತಿಸಬೇಡ ,ಮಗೂ. ಯಾರ್ಯಾರೆಲ್ಲ ಮತ್ತೆ ಒಬ್ಬಂಟಿಗರಾದರು ಅಂತ ತಿಳಿದುಕೊಳ್ಳಲು , ಅಷ್ಟೇ !
------------
ನೆರೆಮನೆಯವ ಬಂದು ಹೇಳಿದ -"ನಿಮ್ಮ ನಾಯಿ ನನ್ನ ಅತ್ತೆಯನ್ನು" ಕಚ್ಚಿದೆ"
ಮನೆಯಾತ ಗಾಬರಿಯಾಗಿ ಕ್ಷಮೆ ಬೇಡುತ್ತ ಕೇಳಿದ - "ನೀವು ಬಹುಶಃ ಹಣಕಾಸಿನ ಪರಿಹಾರ ಬಯಸುತ್ತೀರಾ, ಅಲ್ಲವೇ?"
ನೆರೆಮನೆಯವ - "ಖಂಡಿತ ಇಲ್ಲ , ನಿಮ್ಮ ನಾಯಿಯನ್ನು ನನಗೆ ಮಾರುತ್ತೀರಾ ಅಂತ ಕೇಳಲು ಬಂದೆ "
------------

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (6 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಗೆಹನಿಗಳು - 48 ನೇ ಕಂತು

-ನೀವು ದಿನಕ್ಕೆ ಎಷ್ಟು ಸಲ ದಾಡಿ (shave) ಮಾಡುತ್ತೀರಿ ?
- 15-20 ಸಲ
- ದೇವರೇ, ನಿಮಗೇನು ಹುಚ್ಚೇ ?
- ಇಲ್ಲ , ನಾನೊಬ್ಬ ಕ್ಷೌರಿಕ
-----------
ನನ್ನದು ಸ್ವಚ್ಛ ಮನಸ್ಸಾಕ್ಷಿ , ಈತನಕ ಅದನ್ನು ಬಳಸಿಯೇ ಇಲ್ಲ .
-----------
ಟೀಚರ್ ಕೇಳಿದರು - ಯಾಕೋ ಶಾಲೆಗೆ ಬರಲು ತಡ ?
ಹುಡುಗ ಹೇಳಿದ - ದಾರಿಯಲ್ಲಿ ಒಂದು ಬೋರ್ಡ್ ಇತ್ತು , ಅದರಲ್ಲಿ ಬರೆದಿದ್ದರು , 'ಮುಂದೆ ಶಾಲೆ ಇದೆ , ನಿಧಾನವಾಗಿ ಹೋಗಿ' ಅಂತ.
--------
ಎರಡು ಬಸವನಹುಳುಗಳು ( ನಿಮಗೆ ಗೊತ್ತು ತಾನೇ ? ಬರಹ ನಿಘಂಟು ನೋಡಿ , ಮತ್ತೆ ನಿಘಂಟು ?? ) ರಸ್ತೆಯ ಪಕ್ಕದಲ್ಲಿ ಇದ್ದವು.
ಒಂದು ಹೇಳಿತು - ನಾನು ರಸ್ತೆ ದಾಟಬೇಕು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಗೆಹನಿಗಳ ಅನುವಾದ - 47 ನೇ ಕಂತು

ರಜಾದಿನಗಳಲ್ಲಿ ಪ್ರವಾಸ ಹೋಗುವ ಬಗ್ಗೆ ಇವತ್ತು ನನ್ನ ಹೆಂಡತಿ ಭಾರೀ ಜಗಳ ಮಾಡಿದಳು. ನನಗೆ ಪ್ಯಾರಿಸ್ ಗೆ ಹೋಗಬೇಕು ಅಂತ , ಅವಳಿಗೆ ನನ್ನ ಜತೆ ಬರಬೇಕು ಅಂತ.
----
ತಾಯಿ - ಪುಟ್ಟಾ, ಇವತ್ತು ಶಾಲೆಯಲ್ಲಿ ಏನು ಮಾಡಿದಿರಿ?
ಪುಟ್ಟ - ಇವತ್ತು ಸ್ಫೋಟಕಗಳನ್ನು ಮಾಡಿದಿವಿ
ತಾಯಿ - (ಶಾಲೆಯಲ್ಲಿ ಈಗ ಏನೇನೆಲ್ಲ ಕಲಿಸುತ್ತಾರೋ! ) ನಾಳೆ ಶಾಲೆಯಲ್ಲಿ ಏನು ಮಾಡುತ್ತೀರಿ ?
ಪುಟ್ಟ - ಶಾಲೆ ? ಯಾವ ಶಾಲೆ ?
-------
-------
ಪತ್ನಿ ತನ್ನ ತಾಯಿಗೆ ಫೋನ್ ಮಾಡಿದಳು: "ಇಂದು ನನ್ನ ಗಂಡನೊಂದಿಗೆ ತುಂಬಾ ಜಗಳ ಆಯಿತು, ನಾನು ನಿನ್ನೊಂದಿಗೆ ಬಂದು ಇರುತ್ತೇನೆ
ತಾಯಿ: ಇಲ್ಲ , ಅವನ ತಪ್ಪಿಗೆ ಶಿಕ್ಷೆ ಆಗಲೇಬೇಕು. ನಾನೇ ನಿನ್ನೊಂದಿಗೆ ವಾಸಿಸಲು ಬರುತ್ತೇನೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅನುವಾದ ಮಾಡಿದ ನಗೆಹನಿಗಳು- 46 ನೇ ಕಂತು

ತುಂಬಾ ಹಣವುಳ್ಳಾತ ತನ್ನನ್ನು ಜೈಲಿಗೆ ಕಳುಹಿಸಬಹುದಾದ ಒಂದು ಕೇಸಿನಲ್ಲಿ ತನ್ನನ್ನು ಉಳಿಸುವಂತೆ ಆ ವಕೀಲನ ಮೊರೆ ಹೋದ .
ವಕೀಲ ಭರವಸೆ ನೀಡಿದ - ಚಿಂತಿಸಬೇಡಿ , ಇಷ್ಟೊಂದು ಹಣ ಇಟ್ಟುಕೊಂಡು ನೀವು ಜೈಲಿಗೆ ಹೋಗಲು ಸಾಧ್ಯವೇ ಇಲ್ಲ.
ಅಂತೆಯೇ ಆಯಿತು. ಅವನು ಬಿಡಿಕಾಸೂ ಇಲ್ಲದೆ ಜೈಲಿಗೆ ಹೋದ!
---------
ಯಾವುದೇ ವಾಗ್ವಾದದಲ್ಲಿ, ಹೆಂಡತಿಯದೇ ಕೊನೆಯ ಮಾತು.
ಗಂಡ ಆ ಕೊನೆಯ ಮಾತಿನ ನಂತರ ಗಂಡನು ಏನನ್ನಾದರೂ ಹೇಳಿದರೆ ಅದುವೇ ಹೊಸ ವಾಗ್ವಾದದ ಆರಂಭ.
---------
ಹುಡುಗಿ: ಒಂದು ದಿನ ನಾನು ಮದುವೆಯಾಗುತ್ತೇನೆ. ಆ ದಿನ ಬಹಳಷ್ಟು ಪುರುಷರು ದುಃಖ ಪಡುತ್ತಾರೆ.
ಹುಡುಗ: ಓಹ್, ಎಷ್ಟು ಪುರುಷರನ್ನು ನೀನು ಮದುವೆಯಾಗಲಿದ್ದೀಯ ?
-----------

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಗೆಹನಿಗಳ ಅನುವಾದ - 45 ನೇ ಕಂತು

ಆತನ ಹೆಂಡತಿ ಸಿಟ್ಟಿಗೆದ್ದು ಅವನ ಗಂಟೆಮೂಟೆ ಕಟ್ಟಿ , 'ಎಲ್ಲಾದರೂ ಹಾಳಾಗಿ ಹೋಗು , ಮರಳಿ ಬರಬೇಡ ' ಎಂದು ಅರಚಿದಳು.
ಆತ ಗಂಟೆಮೂಟೆ ಎತ್ತಿಕೊಂಡು ಬಾಗಿಲು ದಾಟುತ್ತಿದ್ದಂತೆ 'ನೀನು ನಿಧಾನವಾಗಿ ನರಳಿ ನರಳಿ ಸಾಯಿ' ಅಂತ ಕಿರುಚಿದಳು.
ಆತ ಕೂಡಲೇ ನಿಂತು 'ಹಾಗಾದರೆ ನಾನು ಈಗ ವಾಪಸ್ ಬರಬೇಕು ಅಂತ ನೀನು ಹೇಳ್ತಿದೀಯ ?' ಅಂತ ಕೇಳಿದ.
------
ನನ್ನ ಹೆಂಡತಿ ಮತ್ತು ನಾನು ಮದುವೆಯಾಗಿ 43 ವರ್ಷ ಆದವು . ವಿಚ್ಛೇದನದ ಬಗ್ಗೆ ನಾವು ಎಂದಿಗೂ ಯೋಚಿಸಲಿಲ್ಲ. ಕೊಲೆಯ ಬಗ್ಗೆ ?, ಹೌದು. ಆದರೆ ವಿಚ್ಛೇದನ? ಇಲ್ಲವೇ ಇಲ್ಲ
-------
ಒಬ್ಬ ಗಂಡ ತನ್ನ ಹೆಂಡತಿಗೆ ಕೇಳಿದ - ನಾನು ಸತ್ತರೆ ನೀನು ಮತ್ತೆ ಮದುವೆ ಆಗುವಿಯಾ ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಗೆಹನಿಗಳು - 43 ನೇ ಮತ್ತು ಕೊನೆಯ ಕಂತಿನ ನಂತರ 44 ನೇ ಕಂತು!

ಭಯೋತ್ಪಾದಕರಿಗೆ ನಾನು ಹೆದರುವವನಲ್ಲ- ನನ್ನ ಮದುವೆ ಆಗಿ ಎಷ್ಟೋ ವರುಷ ಆಗಿವೆ
-----
ಅರವತ್ತು ವರ್ಷದ ಶ್ರೀಮಂತ ಹರೆಯದ ಸುಂದರಿಯನ್ನು ಮದುವೆ ಆದ. ಎಲ್ಲ ಗೆಳೆಯರಿಗೂ ಆಶ್ಚರ್ಯ - ಅದು ಹೇಗೆ ಅವಳು ಅವನನ್ನು ಒಲಿದಳು ? ಅಂತ.
ಅವನನ್ನೇ ಕೇಳಿದಾಗ ಹೇಳಿದ - ಏನಿಲ್ಲ, ಅವಳಿಗೆ ನನ್ನ ವಯಸ್ಸಿನ ಬಗ್ಗೆ ಸುಳ್ಳು ಹೇಳಿದೆ , ಅಷ್ಟೇ!
ಅವರು ಕೇಳಿದರು -ಎಷ್ಟು ಅಂತ ಹೇಳಿದೆ ?
ಅವನು ಹೇಳಿದ - 85 !
-----
- ಅಪ್ಪಾ, ಮದುವೆಗೆ ಎಷ್ಟು ಹಣ ಖರ್ಚಾಗುತ್ತದೆ ?
- ಒಟ್ಟು ಎಷ್ಟು ಅಂತ ಈಗಲೇ ಹೇಳಲು ಬರುವುದಿಲ್ಲ ಮಗೂ , ನಾನು ಇನ್ನೂ ಹಣ ಕೊಡುತ್ತಲೇ ಇದ್ದೇನೆ .
-----

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.8 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಗೆಹನಿಗಳು ( ಹೊಸವು ?) - 43 ನೇ ಮತ್ತು ಕೊನೇ ಕಂತು

( ಇಂಗ್ಲೀಷ್ ನ ಜೋಕುಗಳ ಹಳೆಯ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮ್ಮ ಸಂತೋಷಕ್ಕಾಗಿ ಕನ್ನಡಿಸುತ್ತಿದ್ದೇನೆ
)
****
- ನೀವು ದಿನವೂ ಏಳುವುದು ಯಾವಾಗ ?
- ಸೂರ್ಯನ ಪ್ರಥಮ ಕಿರಣ ನನ್ನ ಕಿಟಕಿಯನ್ನು ಪ್ರವೇಶಿಸಿದ ಕೂಡಲೇ ಎದ್ದುಬಿಡುತ್ತೇನೆ.
- ಅದು ತುಂಬಾ ಬೇಗ ಅಲ್ಲವೇ ?
- ಅಲ್ಲ, ನನ್ನ ಕೋಣೆಯ ಕಿಟಕಿ ಪಶ್ಚಿಮಕ್ಕಿದೆ!
****
- ಅಮೇರಿಕದಲ್ಲಿ ಹೆಂಗಸರು ಏಕೆ ಅಧ್ಯಕ್ಷರಾಗುತ್ತಿಲ್ಲ ?
- ಅಧ್ಯಕ್ಷರಾಗುವುದಕ್ಕೆ ಕಡೇ ಪಕ್ಷ 35 ವರ್ಷ ವಯಸ್ಸಿನ ವರಾಗಿರಬೇಕು , ಅದಕ್ಕೆ !
****
- ಹುಲಿಬೇಟೆಯಲ್ಲಿ ನಿನಗೆ ಅದೃಷ್ಟ ಒಲಿಯಿತಾ ?
- ಓಹೋ , ಒಂದು ಹುಲಿಗೂ ನಾನು ಎದುರಾಗಲಿಲ್ಲ !

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (6 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಗೆಹನಿಗಳು ( ಹೊಸವು ?) - 42 ನೇ ಕಂತು

( ಇಂಗ್ಲೀಷ್ ನ ಜೋಕುಗಳ ಹಳೆಯ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮ್ಮ ಸಂತೋಷಕ್ಕಾಗಿ ಕನ್ನಡಿಸುತ್ತಿದ್ದೇನೆ
)
****
- ನಿನ್ನ ಬಗ್ಗೆ ಅವನು ಏನೆಲ್ಲಾ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾನೆ, ಗೊತ್ತೆ ?
- ಸುಳ್ಳು ತಾನೇ , ಹೇಳಲಿ. ನಿಜ ಏನಾದರೂ ಹೇಳಿದರೆ ಅವನನ್ನು ಕೊಂದೇ ಹಾಕುತ್ತೇನೆ!
****
- ಹಾಗಾದರೆ ನೀವು ಈ ವರ್ಷ ಪ್ಯಾರಿಸ್ ಗೆ ಹೋಗ್ತಾ ಇಲ್ಲವೇ ?
-ಇಲ್ಲ , ಅದು ಲಂಡನ್ , ಈ ವರ್ಷ ನಾವು ಹೋಗದೆ ಇರೋದು. ಪ್ಯಾರಿಸ್ - ನಾವು ಹೋದ ವರ್ಷ ಹೋಗದೆ ಇದ್ದದ್ದು !
****
ಲಾಯರುಗಳು ಜಾಸ್ತಿ ಇದ್ದಷ್ಟೂ ಕೇಸು ತೀರ್ಮಾನ ತಡ .
ಡಾಕ್ಟರುಗಳು ಜಾಸ್ತಿ ಇದ್ದಷ್ಟೂ ಕೇಸು ತೀರ್ಮಾನ ಬೇಗ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.3 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಗೆಹನಿಗಳು ( ಹೊಸವು ?) - 41 ನೇ ಕಂತು

( ಇಂಗ್ಲೀಷ್ ನ ಜೋಕುಗಳ ಹಳೆಯ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮ್ಮ ಸಂತೋಷಕ್ಕಾಗಿ ಕನ್ನಡಿಸುತ್ತಿದ್ದೇನೆ
)
****
- ಮೊನ್ನೆ ಒಂದು ಜೋಕ್ ಕೇಳಿದೆ. ನಿನಗೆ ಹೇಳಿದ್ದೀನೋ ಇಲ್ಲವೋ ……
- ಹಾಸ್ಯಮಯ ಆಗಿದೆಯೆ ಅದು ?
- ಹೌದು.
- ಹಾಗಾದರೆ ನೀನು ಹೇಳಿಲ್ಲ, ಈಗ ಹೇಳು.
****
- ಪತ್ರಿಕೆಗಳ ಸ್ಥಾನವನ್ನು ಇಂಟರ್‌ನೆಟ್ ವಹಿಸಲು ಸಾಧ್ಯವಿಲ್ಲ
- ಏಕೆ ?
- ಇಂಟರ್‌ನೆಟ್ ನಿಂದ ಗಾಳಿ ಹಾಕಿಕೊಳ್ಳಲು ಸಾಧ್ಯವೇ ?
ಇಂಟರ್‌ನೆಟ್ ಮೇಲೆ ಅವಲಕ್ಕಿ ಹಾಕಿಕೊಂಡು ತಿನ್ನಬಹುದೇ ?
****
- ಇವತ್ತಿನ ತಾರೀಕು ಏನು ?
- ನಿನ್ನ ಹತ್ತಿರ ಇರೋ ಪೇಪರ್ ನೋಡಬಾರದೇ ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.8 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಗೆಹನಿಗಳು ( ಹೊಸವು ?) - 40 ನೇ ಕಂತು

( ಇಂಗ್ಲೀಷ್ ನ ಜೋಕುಗಳ ಹಳೆಯ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮ್ಮ ಸಂತೋಷಕ್ಕಾಗಿ ಕನ್ನಡಿಸುತ್ತಿದ್ದೇನೆ
)
****
-ಕಣದಲ್ಲಿ ಇರುವ ಈ ಇಬ್ಬರು ಅಭ್ಯರ್ಥಿಗಳ ಬಗ್ಗೆ ನಿಮ್ಮ ಅಭಿಪ್ರಾಯ ಏನು ?
-ಸದ್ಯ, ಈ ಇಬ್ಬರಲ್ಲಿ ಒಬ್ಬ ಮಾತ್ರ ಗೆಲ್ತಾನೆ !
****
- ನಿನ್ನೆ ನೀವು ಹೋದ ನಾಟಕ ಸುಖಾಂತವಾಗಿತ್ತೆ ?
- ಹೌದು , ಅದು ಮುಗಿದದ್ದಕ್ಕೆ ಎಲ್ಲರೂ ಸಂತೋಷ ಪಟ್ಟರು!
****
ನಟ - ನನ್ನ ನಾಟಕ ಅಂದರೆ ಪ್ರೇಕ್ಷಕರು ಕುರ್ಚಿಗೆ ಅಂಟಿಕೊಂಡೇ ಇರ್ತಾರೆ.
- ಅಂಟು ? ಅವರನ್ನು ಎದ್ದು ಹೋಗದ ಹಾಗೆ ತುಂಬಾ ವಿಚಿತ್ರ ಉಪಾಯಾನೇ ಮಾಡಿದ್ದೀರಿ!
****
ಸಿನಿಮಾ ಥಿಯೇಟರ್ ನಲ್ಲಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಗೆಹನಿಗಳು ( ಹೊಸವು ?) - 39 ನೇ ಕಂತು

( ಇಂಗ್ಲೀಷ್ ನ ಜೋಕುಗಳ ಹಳೆಯ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮ್ಮ ಸಂತೋಷಕ್ಕಾಗಿ ಕನ್ನಡಿಸುತ್ತಿದ್ದೇನೆ
)
****
-ನಿಮ್ಮ ತಮ್ಮ ಸರಕಾರದ ನೌಕರಿಗಾಗಿ ಪ್ರಯತ್ನ ಮಾಡ್ತಾ ಇದ್ದನಲ್ಲ , ಅವನು ಈಗ ಏನು ಮಾಡುತ್ತಿದ್ದಾನೆ ?
- ಏನೂ ಮಾಡ್ತಾ ಇಲ್ಲ , ಆ ಕೆಲಸ ಸಿಕ್ಕಿದೆ.
****
- ಶಾಮಣ್ಣನಿಗೆ ಇಬ್ಬರು ಮಕ್ಕಳು. ಒಬ್ಬ ರಾಜಕಾರಣದಲ್ಲಿದ್ದಾನೆ , ಇನ್ನೊಬ್ಬ ಕೂಡ ಯಾತಕ್ಕೂ ಉಪಯೋಗವಿಲ್ಲ !
****
ರಾಜಕಾರಣಿ ಒಬ್ಬರನ್ನು ಭೇಟಿ ಆದವರು ಹೇಳಿದರು - ನಿಮ್ಮ ಬಗ್ಗೆ ಬಹಳಷ್ಟು ಕೇಳಿದ್ದೇನೆ
ರಾಜಕಾರಣಿ ಹೇಳಿದರು- ಅದನ್ನೆಲ್ಲ ಪ್ರೂವ್ ಮಾಡೋದಿಕ್ಕೆ ಸಾಧ್ಯವಿಲ್ರೀ
****

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಗೆಹನಿಗಳು ( ಹೊಸವು ?) - 38 ನೇ ಕಂತು

( ಇಂಗ್ಲೀಷ್ ನ ಜೋಕುಗಳ ಹಳೆಯ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮ್ಮ ಸಂತೋಷಕ್ಕಾಗಿ ಕನ್ನಡಿಸುತ್ತಿದ್ದೇನೆ
)
****
- ನಾನು ಆಸ್ಪತ್ರೆಗೆ ಹೋಗಿದ್ದೆ, ಅವನು ಇನ್ನೂ ಬಹಳ ಧಿನ ಅಲ್ಲೇ ಇರುತ್ತಾನೆ.
-ಅಲ್ಲಿ ಡಾಕ್ಟರ್ ಅನ್ನು ಕಂಡಿರಾ ?
- ಇಲ್ಲ , ನರ್ಸನ್ನ ಕಂಡೆ !
****
ಡಾಕ್ಟರ್ - ನೀವು ಇವತ್ತೇ ಬಂದದ್ದು ಒಳ್ಳೆಯದಾಯಿತು.
ರೋಗಿ - ಯಾಕೆ , ನೀವೇನಾದರೂ ಹಣದ ತೊಂದರೆಯಲ್ಲಿದ್ರಾ ?
****
ಧರ್ಮಪ್ರಚಾರಕ ತನ್ನ ಮೇಲಿನವರಿಗೆ ಸಂದೇಶ ( ಟೆಲಿಗ್ರಾಂ ಅಂತ ಬರೆಯಬಹುದಿತ್ತು , ಆದರೆ ಅದು ಈಗ ಇತಿಹಾಸವಾಗಿದೆ ) ಕಳುಹಿಸಿದ - ಹೆಂಡತಿ ತೀರಿಕೊಂಡಿದ್ದಾಳೆ ; ರವಿವಾರ ಬದಲಿ ವ್ಯವಸ್ಥೆ ಮಾಡಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಗೆಹನಿಗಳು ( ಹೊಸವು ?) - 37 ನೇ ಕಂತು

( ಇಂಗ್ಲೀಷ್ ನ ಜೋಕುಗಳ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮಗಾಗಿ ಕನ್ನಡಿಸುತ್ತಿದ್ದೇನೆ )
****
ಮನೆಗೆ ಕನ್ನ ಹಾಕಿದ ಆರೋಪದಿಂದ ಮುಕ್ತನಾದ ಅವನು ತನ್ನ ವಕೀಲರಿಗೆ ಹೇಳಿದ - ಒಳ್ಳೆಯದು, ಯಾವಾಗಲಾದರು ನಿಮ್ಮ ಮನೆಗೆ ಬರುತ್ತೇನೆ
ವಕೀಲರು ಹೇಳಿದರು - ಹಗಲು ಹೊತ್ತೇ ಬಾ.
****
ನ್ಯಾಯಾಧೀಶರು ಆರೋಪಿಗೆ ಹೇಳಿದರು - ನೀನು ಅಸಂಬದ್ಧವಾಗಿ ಸುಳ್ಳುಗಳನ್ನು ಹೇಳುತ್ತಿದ್ದೀಯ , ನೀನೇಕೆ ವಕೀಲರನ್ನು ಇಟ್ಟುಕೊಳ್ಳಬಾರದು ?
****
-ಈಗೀಗ ನನಗೆ ಮರೆವು ಕಾಡುತ್ತಿದೆ . ಅದಕ್ಕಾಗಿ ಡಾಕ್ಟರ್ ಹತ್ತಿರ ಹೋದೆ.
-ಅವರು ಏನಂದರು ?
-ಫೀಸನ್ನ ಮುಂಚಿತವಾಗಿ ಕೊಡಿ ಅಂದರು.
****

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಗೆಹನಿಗಳು ( ಹೊಸವು ?) - 36 ನೇ ಕಂತು

( ಇಂಗ್ಲೀಷ್ ನ ಜೋಕುಗಳ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮಗಾಗಿ ಕನ್ನಡಿಸುತ್ತಿದ್ದೇನೆ )
****
ಸೇಲ್ಸ್‌ಮನ್ ಗಳ ಮಾತು
- ಹೇಗೆ ನಡೆಯುತ್ತಿದೆ ನಿನ್ನ ಕೆಲಸ ? ಹೊಸ ಆರ್ಡರುಗಳು ಸಿಗುತ್ತಿವೆಯೇ ?
- ಆರ್ಡರುಗಳಿಗೇನಯ್ಯಾ ಕೊರತೆ ? ದಿನಾಲೂ ಸಿಗುತ್ತವೆ , ಧಂಡಿಯಾಗಿ , ನನ್ನ ಹೆಂಡತಿಯಿಂದ !
****
-ನಿಮ್ಮ ಫ್ಯಾಕ್ಟರಿ ಬೆಂಕಿಗೆ ಆಹುತಿ ಆದದ್ದು ವಿಷಾದನೀಯ. ಅದರಲ್ಲಿ ಏನು ಉತ್ಪಾದನೆ ಮಾಡುತ್ತಿದ್ದಿರಿ ?
- ಬೆಂಕಿ ಆರಿಸುವ fire extinguishers ಗಳನ್ನು
****
- ಹೇಗೆ ಅವನು ಇಷ್ಟೊಂದು ಹಣ ಗಳಿಸಿದ ?
- ದೇವರಿಗೇ ಗೊತ್ತು.
- ಅದಕ್ಕೇ ಅವನಿಗೆ ದೇವರಲ್ಲಿ ತುಂಬಾ ಭಯ, ಭಕ್ತಿ !

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಗೆಹನಿಗಳು ( ಹೊಸವು ?) - 35 ನೇ ಕಂತು

( ಇಂಗ್ಲೀಷ್ ನ ಜೋಕುಗಳ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮಗಾಗಿ ಕನ್ನಡಿಸುತ್ತಿದ್ದೇನೆ )
****
- ಅಮ್ಮ . ನಾನೂ ಈಜುತ್ತೀನಿ
- ಬೇಡ ಮಗೂ , ಅಲ್ಲಿ ತುಂಬಾ ಆಳ
- ಮತ್ತೆ , ಅಪ್ಪ ಅಲ್ಲಿ ಈಜ್ತಾ ಇಲ್ಲವೆ ?
- ಅವರ ವಿಷಯ ಬೇರೆ , ಅವರು ವಿಮೆ ಇಳಿಸಿದ್ದಾರೆ.
****
10 ನೇ ತಾರೀಕು, ಸ್ಥಳೀಯ ಬ್ಯಾಂಕ್ ನ ಜಾಹೀರಾತು - "ಕ್ಯಾಶಿಯರ್ ಬೇಕಾಗಿದ್ದಾನೆ".
11 ನೇ ತಾರೀಕು, ಗುಂಡ ಕ್ಯಾಶಿಯರ್ ಆಗಿ ಅಲ್ಲಿ ಸೇರಿಕೊಂಡ.
12 ನೇ ತಾರೀಕು, ಬ್ಯಾಂಕ್ ನ ಜಾಹೀರಾತು - "ಗುಂಡ ಬೇಕಾಗಿದ್ದಾನೆ".
****
- ರಾಮಕೃಷ್ಣ , ನೀನು ಷೇರುಪೇಟೆ ದಲ್ಲಾಳಿ ಇದ್ದೀಯ , ನನಗೆ ಏನಾದರೂ ಟಿಪ್ ಕೊಡು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಹೊಸ ನಗೆಹನಿ