೯೦ರ ತೆನೆ: ಇನ್ನುಳಿದ ದಿನಗಳ ಸಾರ್ಥಕ ಬದುಕಿಗಾಗಿ

4.92857

ತೊಂಬತ್ತು ವರುಷ ವಯಸ್ಸು ತುಂಬುತ್ತಿದೆ ನನಗೆ. ನಾನು ಸಾಕಷ್ಟು ದೀರ್ಘ ಕಾಲ ಬದುಕಿದ್ದೇನೆ ಅನಿಸುತ್ತದೆ. ಹಲವು ವ್ಯಕ್ತಿಗಳ ಸಾವಿನ ಸುದ್ದಿ ಓದಿದಾಗ ಅಥವಾ ಕೇಳಿದಾಗ, ನಾನು ಮೊತ್ತಮೊದಲು ಗಮನಿಸುವುದು ಅವರಿಗೆ ವಯಸ್ಸು ಎಷ್ತಾಗಿತ್ತೆಂದು.

ಹಾಗೆ ಗಮನಿಸಿದಾಗ ಪ್ರತಿ ಬಾರಿಯೂ ನಾನು ಕಂಡುಕೊಳ್ಳುವುದು ಏನೆಂದರೆ ಅವರು ವಯಸ್ಸಿನಲ್ಲಿ ನನಗಿಂತ ಕಿರಿಯರು ಎಂಬುದನ್ನು. ಹಾಗಿರುವಾಗ ತೊಂಬತ್ತರ ಹತ್ತಿರ ಬಂದಿರುವ ನಾನು ಇನ್ನೂ ಅದೇನು ಮಾಡುತ್ತಿದ್ದೇನೆ ಈ ಜಗತ್ತಿನಲ್ಲಿ?

ಈಗಲೇ ಈ ಜಗತ್ತಿಗೆ ವಿದಾಯ ಹೇಳಬೇಕೆಂದಿಲ್ಲ ನನಗೆ. ಜಿ. ಪಿ. ರಾಜರತ್ನಂ ಅವರ "ಜವರಾಯ"ನ ಬಗೆಗಿನ ಕವನದಲ್ಲಿ ಹೇಳಿದಂತೆ, ನಾನು ವಿದಾಯ ಹೇಳುವ ಮುನ್ನ ಇನ್ನೂ ಕೆಲವು ಕೆಲಸಗಳನ್ನು ಮಾಡಬೇಕಾಗಿದೆ ಅನಿಸುತ್ತದೆ.

ಮೊದಲನೆಯದಾಗಿ, ಯಾರೊಬ್ಬನ ಸ್ವಾರ್ಥ ಏನೇ ಇರಲಿ, ಪ್ರತಿಯೊಬ್ಬರಿಗೂ ಬದುಕುವುದಕ್ಕಾಗಿ ಒಂದು ಒಳ್ಳೆಯ ಮತ್ತು ಉದಾತ್ತ ಉದ್ದೇಶ ಇರಬೇಕು. ಹಾಗೂ ಅದನ್ನು ಸಾಧಿಸಲಿಕಾಗಿ ಆತನು ತನ್ನಿಂದಾಗುವ ಪ್ರಯತ್ನ ಮಾಡುತ್ತಲೇ ಇರಬೇಕು.

ನನ್ನ ಇಪ್ಪತ್ತನೆಯ ವಯಸ್ಸಿನಲ್ಲಿ ಆದರ್ಶ ಸಮಾಜವೊಂದರ ಸ್ಥಾಪನೆಗಾಗಿ ನಾನು ದೊಡ್ಡ ಕೆಲಸ ಮಾಡುತ್ತಿದ್ದೇನೆಂದು ಭಾವಿಸಿದ್ದೆ. ನನ್ನ ಜೀವನದ ಹಲವು ವರುಷಗಳನ್ನು ಆ ಚಿಂತನೆ ಸಾಕಾರಗೊಳಿಸಲಿಕ್ಕಾಗಿ ಮತ್ತು ಪಸರಿಸಲಿಕ್ಕಾಗಿ ವ್ಯಯಿಸಿದೆ. ಅನಂತರ ನನಗೆ ಅರಿವಾಯಿತು: ಅದು ನನ್ನಿಂದಾಗುವ ಕೆಲಸವಲ್ಲ.

ಬಳಿಕ ನಾನು ನಿರ್ಧರಿಸಿದೆ: ಬಹುಜನರಿಗೆ ಸಹಾಯವಾಗಬಲ್ಲ ವಿಷಯವೊಂದನ್ನು ಪ್ರಚಾರ ಮಾಡಬೇಕೆಂದು. ಅದೇನೆಂದರೆ, ಕೃಷಿಯನ್ನು ಸುಧಾರಿಸಲಿಕ್ಕಾಗಿ ವೈಜ್ನಾನಿಕ ಕೃಷಿ ವಿಧಾನಗಳನ್ನು ಜನಪ್ರಿಯಗೊಳಿಸುವುದು. ಈ ಉದ್ದೇಶ ಸಾಧನೆಗಾಗಿ ಶಕ್ತಿ ಮೀರಿ ಪ್ರಯತ್ನಿಸಿದೆ. ಆದರೆ ಇದರಲ್ಲಿಯೂ ನಾನು ಸಾಧಿಸಬೇಕಾದ್ದು ಬಹಳಷ್ಟಿದೆ.

ಅನಂತರ ನಾನು ದುಡಿದದ್ದು ನಮ್ಮ ಅಡ್ಡೂರು ಕುಟುಂಬದ ಮನೆ ಮತ್ತು ಜಮೀನನ್ನು ಉಳಿಸಿ ಅಭಿವೃದ್ಧಿ ಪಡಿಸಲಿಕ್ಕಾಗಿ.

ಕೊನೆಯದಾಗಿ ನಾನು ನನ್ನೆಲ್ಲ ಸಾಮರ್ಥ್ಯ ಮತ್ತು ಸಮಯ ಮೀಸಲಾಗಿಟ್ಟದ್ದು ನನ್ನ ತೋಟವನ್ನು ಮಾದರಿ ಸಾವಯವ ತೋಟವಾಗಿ ರೂಪಿಸಲಿಕ್ಕಾಗಿ. ಈಗ ಬದುಕಿನ ಕೊನೆಯ ಹಂತದಲ್ಲಿ ಅದನ್ನು ಸಾಧಿಸುತ್ತೇನೆಂಬ ನಂಬಿಕೆ ನನಗಿಲ್ಲ.  

ಅಂತಿಮವಾಗಿ ನನಗಿರುವ ಒಂದು ಆಶೆ: ಓದುತ್ತಾ ಓದುತ್ತಾ ಉಪಯುಕ್ತ ಜ್ನಾನವನ್ನೆಲ್ಲ ತಿಳಕೊಂಡು, ಅದನ್ನು ಜನರಲ್ಲಿ ಪಸರಿಸುವುದು. ಇದೊಂದು ಕೆಲಸವನ್ನು ಯೌವನದ ಕಾಲದಿಂದಲೂ ಮಾಡುತ್ತಿದ್ದೇನೆ ಮತ್ತು ಭವಿಷ್ಯದ ಕಾಲದಲ್ಲಿಯೂ ಮಾಡಲಿದ್ದೇನೆ.

ಇದರಲ್ಲಿಯೂ ನನಗೊಂದು ತೊಂದರೆಯಿದೆ. ಇತರು ಹೇಳಿದ್ದನ್ನು ಕೇಳಲು ಮತ್ತು ಅಭಿಪ್ರಾಯ ವಿನಿಮಯ ಮಾಡಲು ನನಗೆ ಸಾಧ್ಯವಾಗುತ್ತಿಲ್ಲ. ಯಾಕೆಂದರೆ ನನಗೀಗ ಕಿವಿ ಕೇಳಿಸುತ್ತಿಲ್ಲ. ನಾನು ಮಾತನಾಡಬಲ್ಲೆ. ಆದರೆ ನಾನು ಹೇಳುವುದನ್ನು ಕೇಳಲು ಇತರರಿಗೆ ಆಸಕ್ತಿಯಿದೆ ಎಂಬ ವಿಶ್ವಾಸ ನನಗಿಲ್ಲ.

ಅದೇನಿದ್ದರೂ, ನನ್ನ ಜೀವಮಾನದಲ್ಲಿ ನಾನು ಗಳಿಸಿದ ಜ್ನಾನವನ್ನು ಆಧರಿಸಿದ ಅಭಿಪ್ರಾಯಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ತಯಾರಾಗಿದ್ದೇನೆ. ಯಾವತ್ತಾದರೂ ಯಾರಾದರೊಬ್ಬರಿಗೆ ಅದರಿಂದ ಸಹಾಯವಾದೀತು. ನನ್ನ ಕೊನೆಯ ಉಸಿರಿನ ವರೆಗೆ ಈ ಕೆಲಸ ಮಾಡಲು ಆಶಿಸುತ್ತೇನೆ.

ಜ್ನಾನಪ್ರಸಾರದ ಕಾಯಕ ಮಾಡುತ್ತಲೇ ನಾನು ಪ್ರಪಂಚ ತೊರೆದರೆ ಅದೇ ಒಳಿತು. ಯಾಕೆಂದರೆ, ಒಂದಲ್ಲ ಒಂದು ದಿನ ಪ್ರತಿಯೊಬ್ಬರಿಗೂ ಸಾವು ಬರುತ್ತದೆ. ಹಾಗಿರುವಾಗ, ಎಲ್ಲರ ಒಳಿತಿಗಾಗಿ ಕಿಂಚಿತ್ ಕೆಲಸ ಮಾಡಿದ್ದೇನೆಂಬ ಭಾವದಲ್ಲಿ ಸಂತೋಷದಿಂದ ಸಾಯುವುದಿದೆಯಲ್ಲ, ಅದುವೇ ಒಳ್ಳೆಯ ಸಾವು.
                   
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ಹಿರಿಯರೇ- ತಮಗೆ ೯೦ ವರ್ಷಗಳು ತುಂಬಿದ ಸಂದರ್ಬದಲಿ ತಮಗೆ ಜನುಮ ದಿನದ ಶುಭಾಕಾಂಕ್ಷೆಗಳು... ನಿಮ್ಮ ಈ ಬರಹದಲ್ಲಿ ನೀವೇ ಹೇಳಿಕೊಂಡ ಹಾಗೆ ನೀವು ಸಹಜ ಕೃಷಿ ಪ್ರಿಯರು ಎಂತಲೂ ಮತ್ತು ವಯಸ್ಸಿನ ಕಾರಣವಾಗಿ ಅಂದುಕೊಂಡದ್ದನ್ನು ಸಾಧಿಸಲು ವಿಳಂಬ ಆಗುತ್ತಿದೆ ಅಂತಲೂ ಹೇಳಿದ್ದೀರಿ , ನನಗೂ ಮೊದಲಿಂದಲೂ ಸಹಜ ಕೃಷಿ ಬಗ್ಗೆ ಆಸಕ್ತಿ ಮತ್ತು ಇನ್ನೂ ೩-೪ ವರ್ಷಗಳ ನಂತರ ನಾ ೨-೩ ಎಕರೇ ಜಾಮೀನು(ನಮ್ಮ ಕಡೆ ಒಣ ಭೂಮಿ- ಮಳೆ ಆಧಾರಿತ) ಕೊಂಡುಕೊಂಡು ಸಹಜ ಕೃಷಿ ಮಾಡೂಅ ಅಂತಿದ್ದೆ, ಅದಕ್ಕೆ ಪೂರ್ವ ತಯಾರೀ ಅನುಭವ- ಎಲ್ಲವೂ ಬೇಕಲ್ಲವೇ? ಈಗ ನನ್ನ ಸುಧೈವಕ್ಕೆ ನೀವು ಇಲ್ಲಿ ಸಿಕ್ಕು ಈ ಬರಹ ನಾ ಓದಿ ನಿಮ್ಮಿಂದ ನನಗೆ ಈ ನಿಟ್ಟಿನಲ್ಲಿ ಏನಾದರೂ ಸಹಾಯವಾಗಬಹುದೇನೋ ಅನ್ನುವುದು ನನ್ ಆಶೆ... ನಿಮ್ಮಂತ ಹಿರಿಯರ- ಅನುಭವಿಗಳ ಮಾರ್ಗದರ್ಶನ ನಮಗೆ ಅವಶ್ಯವಿದೆ.. ನೀವ್ ನೂರಾರು ಕಾಲ ಸುಖವಾಗಿ ಬಾಳಿ... ಶುಭವಾಗಲಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪೂಜ್ಯರೇ ನಿಮ್ಮ ಜೀವನೋತ್ಸಹ, ಸಕಲರಿಗೂ ಒಳಿತನ್ನು ಹಾರೈಸುವ ಗುಣ, ಇಳಿ ವಯಸ್ಸಿನಲ್ಲೂ ಜ್ಞಾನ ಪ್ರಸಾರ ಮಾಡಬೇಕೆಂಬ ತವಕ, ಕೊನೆ ಗಳಿಗೆಯವರೆಗೂ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕೆಂಬ ಮನೋಭಾವ, ಸಂತೋಷವಾಗಿ ಸಾವನ್ನು ಸ್ವಾಗತಿಸುವ ಬೇಕೆಂಬ ಬಯಕೆ ಎಂತಹವರು ಮೆಚ್ಚಲೇ ಬೇಕು. ನಮ್ಮ ಆಶೀರ್ವಾದ ಮಾರ್ಗದರ್ಶನ ನಮಗೆಲ್ಲಾ ಸದಾಯಿರಲಿ. ನಿಮ್ಮ ಜೀವನೋತ್ಸಾಹ ನಮಗೆ ಚೈತನ್ಯವನ್ನು ನೀಡಲಿ ನಿಮಗೆ ಸಾಷ್ಟಾಂಗ ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಇಪ್ಪತ್ತಕ್ಕೇ ಓದು ಬೇಡ ಎನ್ನುವವರಿಗೆ ಮೂವತ್ತಕ್ಕೇ ಮುದಿತನ ಬಂತೆಂಬುವವರಿಗೆ ನಲವತ್ತಕ್ಕೇ ನಾಲ್ಕು ದಿನದ ಬದುಕು ಎಂಬುವರಿಗೆ ಐವತ್ತಕ್ಕೆ ಅರ್ಧ ಆಯಸ್ಸು ಮುಗಿಯಿತೆಂಬುವವರಿಗೆ ಅರವತ್ತಕ್ಕೇ ಇನ್ನೇನಿದೆ ಅನ್ನುವವರಿಗೆ ಎಪ್ಪತ್ತಕ್ಕೆ ಎದ್ದೇನಾಗಬೇಕಿದೆ ಎಂಬುವರಿಗೆ ಎಂಬತ್ತಕ್ಕೆ ಅಂದಿಲ್ಲದ್ದು ಇಂದೇನಿದೆ ಎಂಬುವವರಿಗೆ ನಿಮ್ಮ ಬದುಕು ಮಾರ್ಗದರ್ಶನವಾಗಲಿ ತಾನಿದ್ದು ಏನಾಗಬೇಕೆಂದುಕೊಳ್ಳುವುದೇ ಬದುಕಿದ್ದೂ ಸಾವು. ನಿಮ್ಮ ಆಶೀರ್ವಾದ ಬಯಸುವ ವಿಶ್ವಾಸಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

+೧ ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

+1
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

೯೦ ರ ಹರೆಯದ ವ್ಯಕ್ತಿಯ ಉತ್ಸಾಹಕ್ಕೆ ಸ್ವಾಗತ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಮ್ಮ ಜೀವನೋತ್ಸಾಹ ಎಲ್ಲರಿಗು ಮಾರ್ಗದರ್ಶನವಾಗಿದೆ.ನಿಮ್ಮ ಆಶೀರ್ವಾದ ನನಗಿರಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಹಿರಿಯರೇ ಮತ್ತು ಗೌರವಾನ್ವಿತರೇ, ನಿಮಗೆ ಇನ್ನೂ ಕೇವಲ 90 ವರ್ಷಗಳು. 116 ವರ್ಷಗಳ ಸುಧಾಕರ ಚತುರ್ವೇದಿಯವರು ಇನ್ನೂ ನಮ್ಮೊಂದಿಗಿದ್ದು ನಮಗೆ ಮಾರ್ಗದರ್ಶನ ಮಾಡುತ್ತಿದ್ದು ಅವರ ಜೀವನೋತ್ಸಾಹ ಕಂದಿಲ್ಲ, ಕುಂದಿಲ್ಲ. ನಿಮ್ಮಂತಹವರ ಮಾರ್ಗದರ್ಶನ ನಮ್ಮೆಲ್ಲರಿಗೂ ಬಹುದೀರ್ಘಕಾಲದವರೆಗೆ ಚೇತನದಾಯಿಯಾಗಿರಲಿ. -ನಾಗರಾಜ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪೂಜ್ಯರೇ!! ತಮ್ಮ ಅನುಭವಕ್ಕಾದ ವಯಸಲ್ಲಿನ ಕಾಲು ಪಾಲು ವಯಸೆನಗಾಗಿಲ್ಲ, ಆದರಿಂದ ತಮ್ಮ ಬರಹಕ್ಕೆ ಪ್ರತಿಯಾಗಿ ಬರೆವುದು ಸಮಂಜಸವಲ್ಲವೆಂದೆನಗನಿಸುತ್ತದೆ. ಆದರು ತಮ್ಮ ಮುಪ್ಪಾದ ದೇಹದ ಯೌವನದ ಹುರುಪಿನ ಮನಸಿಗೆ ನನ್ನ ತುಂಬು ಹೃದಯದ ಸ್ವಾಗತ. ನಿಮ್ಮ ಜೀವನೋತ್ಸಾಹ ನನಗು ದೊರೆಯಲೆಂದಾಶಿಸುತ್ತ ತಮ್ಮ ಆಶೀರ್ವಾದವ ಬೇಡುತ್ತಿದೇನೆ. .ನಿಮ್ಮ ಮೊಮ್ಮಗ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.