ಪದ್ಯ

ಹತ್ತು ಕೋತಿ ಮರಿಗಳು!

ಪುಟ್ಟದೊಂದು ಸಣ್ಣದೊಂದು ಚಿಕ್ಕದೊಂದು ಕೋತಿಮರಿ

ಕುಳ್ಳದೊಂದು ಡುಮ್ಮದೊಂದು ತೆಳ್ಳದೊಂದು ಕೋತಿಮರಿ ||

ಬೆಳ್ಳದೊಂದು ಕಪ್ಪಗೊಂದು ಕೆಂಚಗೊಂದು ಕೋತಿ ಮರಿ

ಮಳ್ಳನಂತೆ ಸುಳ್ಳನಂತೆ ಕೊನೆಯ ಕಳ್ಳ ಕೋತಿ ಮರಿ ||

ಮರದ ಮೇಲೆ ಕುಣಿಯುತಿದ್ದವೊಟ್ಟು ಹತ್ತು ಕೋತಿ ಮರಿ

ಒಟ್ಟು ಹತ್ತು ಕೋತಿ ಮರಿ! ಒಟ್ಟು ಹತ್ತು ಕೋತಿ ಮರಿ ||

 

ಹತ್ತು ಕೋತಿ ಮರಿಗಳು

ಬಾಳೆ ಹಣ್ಣು ತಿನ್ನಲು

ಒಂದಕುಸಿರು ಕಟ್ಟಿ ಉಳಿದ

ವೊಂಬತ್ತು ಕೋತಿ ಮರಿ!  || ೧||

 

ಒಂಬತ್ತು ಕೋತಿ ಮರಿಗಳು

ರಾತ್ರಿ ಮಲಗಿಕೊಂಡವು

ಒಂದು ಮತ್ತೆ ಏಳದೇನೆ

ಉಳಿದುವೆಂಟು ಕೋತಿ ಮರಿ! ||೨||

 

ಎಂಟು ಕೋತಿ ಮರಿಗಳು

ಆಟವಾಡುತಿದ್ದವು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಡಗರದ ದೀಪಾವಳಿ

ಪದ್ಯಪಾನದಲ್ಲಿ ಈ ಬಾರಿ ದೀಪಾವಳಿಯ ಸಂದರ್ಭಕ್ಕೆ ಹೊಂದುವ ಕೆಲವು ಅಲಂಕಾರಯುಕ್ತವಾದ ಪದ್ಯಗಳನ್ನು ಬರೆಯಲು ಕೇಳಿದ್ದರು. ಆ ಸಂದರ್ಭಕ್ಕೆಂದು ನಾನು ಬರೆದ ಭಾಮಿನೀ ಷಟ್ಪದಿಯಲ್ಲಿರುವ ಐದು ಪದ್ಯಗಳು ಇಲ್ಲಿವೆ. ಎಲ್ಲರಿಗೂ ದೀಪಾವಳಿ ಹಬ್ಬದ ಹಾರೈಕೆಗಳು!

ನೀರು ತುಂಬುವ ಹಬ್ಬ ಬಂದಿರೆ
ನೀರೆಯರು ಮನೆತುಂಬ ನಾನಾ-
ಕಾರದಲಿ ಚಿತ್ತಾರ ರಂಗೋಲಿಗಳ ಹಾಕುತಲಿ |
ಮಾರುಮಾರಿಗು ಬಣ್ಣಬಣ್ಣದ
ಹಾರಗಳ ಕಟ್ಟುತ್ತ ಸೊಗಸಿನ
ತೋರಣದ ಚಿಗುರಲ್ಲಿ ಕೋರುತಲೆಲ್ಲರೊಳಿತನ್ನು ||

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯೇಸು ಜನನ

ಇವತ್ತು ಕ್ರಿಸ್‍ಮಸ್. ಯೇಸು ಹುಟ್ಟಿದ ದಿನವೆಂದು ಆಚರಿಸುವ ಹಬ್ಬ. ಹೆಚ್ಚು ಜನರಿಗೆ ತಿಳಿಯದ ವಿಷಯವೆಂದರೆ, ಈ ಡಿಸೆಂಬರ್ ೨೫ರಂದು ಕ್ರಿಸ್ತಹುಟ್ಟಿದ್ದು ಎನ್ನುವುದರ ಆಚರಣೆ, ಕ್ರಿಸ್ತನ ನಂತರ ಹಲವು ಶತಮಾನಗಳಾದ ಮೇಲೆ ಬಂದದ್ದು. ಬೈಬಲ್ಲಿನ ಹೊಸ ಒಡಂಬಡಿಕೆ (New Testament) ನಲ್ಲಿ, ಇಂತಹದ್ದೇ ದಿನ ಕ್ರಿಸ್ತ ಹುಟ್ಟಿದ್ದು ಅನ್ನುವುದಕ್ಕೆ ಸರಿಯಾದ ಆಧಾರಗಳಿಲ್ಲವಂತೆ. ಅಲ್ಲದೇ, ಬೈಬಲ್ಲಿನಲ್ಲಿ ವಿವರಿಸಿರುವ ಘಟನೆಗಳನ್ನು ನೋಡಿದರೆ, ಡಿಸೆಂಬರ್ ಕೊನೆಯ ಚಳಿಗಾಲದಲ್ಲಿ ಕ್ರಿಸ್ತ ಹುಟ್ಟಿರುವುದು ಸಾಧ್ಯವಿಲ್ಲವೆಂದೂ, ಆ ದಿನ ವಸಂತದಲ್ಲೋ, ಹೇಮಂತದಲ್ಲೋ ಆಗಿರಬೇಕೆಂದೂ ಅಂತ ಕೆಲವು ಬೈಬಲ್ ವಿದ್ವಾಂಸರ ಅಭಿಪ್ರಾಯ ಕೂಡ ಇದೆ. ಪಂಚಾಗ ನೋಡಿ, ಇಂತಹ ತಿಥಿ ವಾರ ನಕ್ಷತ್ರ ಎಂದು ಬರೆದಿಟ್ಟಿದ್ದರೆ ನೋಡಿ, ಸರಿಯಾಗಿರುತ್ತಿತ್ತು, ಅಲ್ವೇ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯಾರೂ ನಡೆಯಬಹುದು...!

ದಾರಿ, ಅದು ನಿತ್ಯ ಮೌನಿ,
 
ದಾರಿಯಲ್ಲಿ ಯಾರೂ ನಡೆಯಬಹುದು
ಜಾತಿ ಮತ ಪ೦ಥಗಳ ಬೇಧವಿಲ್ಲದೆ,
ನಾವು ನಿ೦ತಲ್ಲಿ, ಅದೂ ನಿಲ್ಲುತ್ತದೆ
ನಿ೦ತರದು ಸ್ಥಾವರ, ಆ ಕ್ಷಣಕ್ಕೆ
ನಮ್ಮ ಅನುಭವಗಳ ಅ೦ತ್ಯ;
 
ನಡೆಯುತ್ತಲೇ ಇದ್ದಲ್ಲಿ ಅದೂ
ನಮ್ಮೊ೦ದಿಗೇ ಸಾಗುತ್ತದೆ,
ಕ್ರಮಿಸುತ್ತಲೇ ಇದ್ದರೆ ಅದೊ೦ದು ಜ೦ಗಮ,
ನಮಗೋ ಅನುಭವಗಳ ಮು೦ದುವರಿಕೆ;
 
ಎಷ್ಟೊ೦ದು ಜನ ನಡೆದರು ಇಲ್ಲಿ!
ಯಾರಿಗೂ ನಡೆಯಬೇಡಿ ಎನ್ನಲಿಲ್ಲ ಅದು
ಮೆಟ್ಟದಿರಿ ನನ್ನ ನೋವಾದೀತೆ೦ದು, ಅಳಲಿಲ್ಲವದು;
 
ಬುಧ್ಧ, ಗಾ೦ಧಿ, ಅಕ್ಕ, ಬಸವ ಎಲ್ಲರೂ ನಡೆದರು
ಅವರದೇ ಆಯ್ಕೆಯ ಅವರದೇ ದಾರಿಗಳಲ್ಲಿ;
ಭಿನ್ನ ದಾರಿಗಳ ಹಿಡಿದರೂ ಮುಟ್ಟಿದರು ಸಮಾನಗಮ್ಯವ,

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಡೆತ್ ವ್ಯಾಲಿ, ಕ್ಯಾಲಿಫೋರ್ನಿಯಾ

ನೆನ್ನೆ ಮೊನ್ನೆ Death Valley ಯನ್ನು ನೋಡಿ ಬಂದ ಮೇಲೆ, ಅಲ್ಲಿ ನಕ್ಷತ್ರಗಳು ಚೆಲ್ಲಿದ ರಾತ್ರಿಯಾಕಾಶ, ಬಣ್ಣ ಬಣ್ಣದ ಬೆಟ್ಟ ಸಾಲಿನಲ್ಲಿ ಸೂರ್ಯೋದಯ ಸೂರ್ಯಾಸ್ತಗಳ ಚೆಲುವನ್ನು ಕಂಡಾಗ ಹೊಳೆದ ಕೆಲವು ಭಾವಗಳು – ಕುಸುಮ ಷಟ್ಪದಿಯಲ್ಲಿ ಹೊಸೆದ ಎರಡು ಪದ್ಯಗಳು:

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.
ಸರಣಿ: 

ಚಳಿಗಾಲ

ಡಿಸೆಂಬರ್ ೨೧ರಂದು  so called   ’ಚಳಿಗಾಲದ ಮೊದಲ ದಿನ’ - ಅಥವಾ ಇನ್ನೂ ಸರಿಯಾಗಿ ಹೇಳಬೇಕೆಂದರೆ 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1.5 (2 votes)
To prevent automated spam submissions leave this field empty.

ಮಿಡತೆ ಸಂತೆ ಕತೆ

locust_USFWSಬೈರಾಗಿಯಾಗಿ
ಅಂಡಲೆಯೋ ಮಿಡತೆ ಕಾಲನ್ನ
ಅಪ್ಪಿತಪ್ಪಿ ಸವರಿಬಿಟ್ಟರಾಯ್ತು
ಅಮಲೇರ್ಸೋ ಸೆರಟೊನನ್ ತಲೇಲಿ ದ್ರವಸಿ
ಜಗ್ಗನೆ ಲೋಕದಾಸೆ ಹೊತ್ತಿ
ಹುಡಕ್ಕೊಂಡು ಹೋಗಿ ಮಿಡತೆ
ಹಿಂಡು ಸೇರ್ಕೊಂಡ್ಕೂಡಲೆ ಕೊಳ್ಳೆಬುದ್ಧಿ ವಿರಾಜಮಾನ.
ಇದರದ್ದದು ಅದರದ್ದಿದು ಕಾಲ್ಕೆರೆದೂ ಕೆರೆದೂ
ಮತ್ಮತ್ತೆ ಸೆರಟೊನನ್ ತಲೇಲಿ ಉಕ್ಕೀ ಉಕ್ಕಿ
ಹುಚ್ಚೆದ್ದು ಲಗ್ಗೆಯಿಟ್ಟಲ್ಲೆಲ್ಲಾ ಹಾವಳಿ;
ಮರಾ ಗಿಡಾ ಬೆಳೆಗಳಿಗೆಲ್ಲಾ
ಕಂಟಕಪ್ರಾಯ
ಈ ಬೈರಾಗಿ ಮಿಡತೆ ರೌಡಿ ಸಂತೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಹನಿ ಹನಿ ಧ್ಯಾನ(ಗೀತೆಗಳು)

ಹನಿ ಹನಿ ಧ್ಯಾನ(ಗೀತೆಗಳು)
೧. ಧ್ಯಾನದ ಸ್ಥಿತಿಯಲ್ಲಿ
ಕ್ಷಣಕ್ಷಣವೂ ಮರಣ,
ಪುನರಪಿ ಜನನ.

೨. ಧ್ಯಾನ ಎಂದರೆ ಅಳಿವು,
ನಾವಿಟ್ಟುಕೊಂಡ ನಂಬಿಕೆಗಳ
ಭ್ರಮೆಗಳ, ಸತ್ಯಗಳ
ಸಾವು.

೩. ಧ್ಯಾನ ಎಂದರೆ
ಸಂತೆಯಲ್ಲಿನ ಶಬ್ದಕ್ಕೆ
ಕಿವುಡಾದ ಮನ.

೪.ಧ್ಯಾನ ಎಂದರೆ ಪ್ರೀತಿಯ ಚಲನ,
ಮೊಗೆದಷ್ಟೂ ಬರಿದಾಗದೇ
ನಿಶ್ಚಿಂತವಾಗಿ ಹರಿವ ಗಂಗೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯಾಂತ್ರಿಕ ಬದುಕು

ಉತ್ತರಗಳೇ ಸಿಗದ ನೂರು
ಪ್ರಶ್ನೆಗಳು
ನಿಶಿ ಹಗಲೂ ಬಿಡದೇ
ಕತ್ತರಿಸುತ್ತಿದ್ದರೂ
ಬೆಳಗಿನ ಆ ಹೊನ್ನ
ಕಿರಣವದೇನೋ
ಹೊಸ ಹುರುಪನಿತ್ತು
ಗೊಂಬೆಗೆ ಕೀ ಕೊಟ್ಟಂತೆ
ನಡೆಸಿದೆ..
ಓಡಿಸಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಜೀವಸೆಲೆ

ಚಿಗುರೆಲೆಗಳ ನಡುವೆ
ಹೂವೊಂದು ನಕ್ಕು
ಬಿಸಿಲಿಗೆ ಎದೆ ಚಾಚಿ
ಮಳೆಗೆ ನಸು ನಾಚಿ
ಚಳಿಯೊಡನೆ ಚರಮಗೀತೆ
ಯ ಹಾಡಿ...
ಬಲಿತ ಎಲೆಗಳೂ
ನೆಲವನ್ನಪ್ಪಿ
ಬೆತ್ತಲಾಗಿ ನಿಂತ
ಮರ
ಮತ್ತೆಲ್ಲಿಯ ಜೀವ ಸೆಲೆ ?

ಮತ್ತೊಂದು ಕಾಲಚಕ್ರಕೆ
ಸಜ್ಜಾದ ಮರಕ್ಕೆ ತನ್ನದೇ ನೆಲೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಮ್ಮ ಅವ್ವಾ...

ಗೆಳೆಯರೆ,
ನನ್ನ ಗೆಳೆಯನ ಹತ್ತಿರ ಈ ಒಂದು ಹಾಡು ಇತ್ತು..ನಾನಿದನ್ನ ಎಲ್ಲಿಂದ ತಂದೆ ಅಂತ ಕೇಳಿದೆ. ಅವ ಹೇಳಿದ, ಹಿಂಗ ಒಂದು ಮೇಲ್ ನಿಂದ ಮೇಲ್ ಗೆ ಬಂದಿದ್ದು ಅಂತ ಅಂದ. ಅದನ್ನು ಇಲ್ಲಿ ಹಾಕೀನಿ ಯಾರು ಬರೆದಿದ್ದು ಅಂತ ನಿಮಗೇನರ ಗೊತ್ತಿದ್ದರ ಹೇಳ್ರಿ.. ಅಂದಂಗ ಇದು..ತಾರೆ ಜಮೀನ್ ಪರ್‍ ಚಿತ್ರದ..ಮೇರಿ ಮಾ ರಿಮಿಕ್ಸ..

ಅವ್ವಾ ನೀ ಚೂಡ ಮಾಡಿಟ್ಟಿರು
ಸಂಜೀಕ ಬಂದು ತಿಂತೀನಿ ನಾ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಗೆಳತಿ ಪತ್ರ

ಹೂಗಳ ಮಧ್ಯೆ ಇತ್ತಾ ಒಂದೊಂದು ಹೆಜ್ಜೆ
ತುಂತುರಿನ ಸ್ಪರ್ಶ ತಾಕಿದ ಘಳಿಗೆ
ಹರಿಯುವ ನೀರು ಪಾದ ತಾಕಿದ ವೇಳೆ
ನಿನ್ನ ನೆನಪೇ ಗೆಳೆಯಾ....ನಿನ್ನ ನೆನಪೇ....

ಕಾಲ ಮುಂದೆ ಹೋಗುತ್ತಿಲ್ಲಾ..?
ಸೂರ್ಯ ಕಣ್ಣಿಗೆ ಕಾಣುತ್ತಿಲ್ಲಾ..?
ಚಂದಿರನ ಕಾಯೋ ತಾಳ್ಮೆ ನನಗಿಲ್ಲಾ..?
ಹಸಿರಿನ ಮೈ ಮುಟ್ಟೋ ಮಳೆ ಹನಿ
ನನ್ನ ಕೈಯಲ್ಲಿಲ್ಲ...
ಮೋಡದಲ್ಲಿರೋ ಅಕಲ್ಮಶ ಪ್ರೀತಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕೂತು ತಿಂದರೆ..

ಕೂತು ತಿಂದರೆ ಕುಡಿಕೆ ಹಣ ಸಾಲದು,
ಕೂತು ತಿಂದರೆ ಕುಡಿಕೆ ಹಣ ಸಾಲದು,
ಹಾಗಾಗಿ ನಿಂತೇ ತಿನ್ನುವರು ನಮ್ಮ ಜನ
ದರ್ಶಿನಿ ಹೊಟೇಲುಗಳಲ್ಲಿ ! :-)

(ಪ್ರೊ. ಕೃಷ್ಣೇಗೌಡರ ’ಕವಣೆ ಕಲ್ಲು’ ಕವನ ಸಂಗ್ರಹದಿಂದ ಆಯ್ದದ್ದು)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ದೂರ ಎಲ್ಲಿಯೋ ಬೆಂಗಳೂರು

ಹೀಗೆಲ್ಲಾ ನನ್ನ ಪ್ರೀತಿಯ ನಗರವನ್ನು ನೆನಪಿಸಿಕೊಳ್ಳುತ್ತೇನೆ-
"ನಿನ್ನ ಗಲ್ಲಿ ಬಯಲು ವನದಲ್ಲಿ ಪ್ರೀತಿಸಿದ್ದೆ
ನಿನ್ನ ಸಂಜೆ ಬೆಳಗು ನಡುಹಗಲ ಬಿಸಿಲಲ್ಲಿ ಪ್ರೀತಿಸಿದ್ದೆ
ನಿನ್ನ ಸೊಮಾರಿ ಹಾಗೂ ಗಡಿಬಿಡಿಯ ದಿನಗಳಲ್ಲಿ ಪ್ರೀತಿಸಿದ್ದೆ
ನಿನ್ನ ಜನ ನಿಬಿಡಗಳಲ್ಲಿ ಜನ ರಹಿತಗಳಲ್ಲಿ ಪ್ರೀತಿಸಿದ್ದೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ತಲುಪುವುದಕ್ಕಲ್ಲ

ಪಯಣಗಳಿಂದು ತಲುಪುವುದಕ್ಕಲ್ಲ.
ತಲುಪಿದರೂ ಮತ್ತೆ ಹೊರಡುವುದಕ್ಕೆ
ತಂಗುದಾಣಗಳೇ ಎಲ್ಲ ಚಣ ನಿಂತು
ಕಾಫಿ ಹೀರಿ, ಎಲೆಯಡಿಕೆ ಅಗಿದು ಉಗಿಯಲಿಕ್ಕೆ.
ಗಂಟು ಮೂಟೆ ಇಳಿಸಿ ಬಂಧುಮಿತ್ರರ ಅಪ್ಪಿ
ಉಸ್ಸಪ್ಪ ನಿಲ್ದಾಣಗಳಲ್ಲ ದಾರಿಗುಂಟ ಸಿಕ್ಕುವುದೆಲ್ಲ.

ಇಲ್ಲಿರುವರಿಗೆ ಅಲ್ಲಿರುವ ಕನಸು, ಅಲ್ಲಿರುವರಿಗೆ ಇನ್ನೆಲ್ಲಿಯೋ ಕಣ್ಣು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಪದ್ಯ