ಪುಸ್ತಕ

ಗುಪ್ತಗಾಮಿನಿ ಸರಸ್ವತಿಯ ಹುಡುಕಾಟದಲ್ಲಿ...

 ನಾನು ಚಿಕ್ಕವನಿದ್ದಾಗ ಅಜ್ಜಿ ಎಷ್ಟೋ ಹಳೆಯ ವಿಚಾರಗಳ ಬಗ್ಗೆ ಹೇಳುತ್ತಿದ್ದರು. ಅವರು ಹೋಗಿದ್ದ ಊರುಗಳ ಪ್ರಸ್ತಾಪವೂ ಅಲ್ಲಲ್ಲಿ ಬರ್ತಿತ್ತು. ಅವುಗಳಲ್ಲಿ ಒಂದು ಪ್ರಯಾಗದ ತ್ರಿವೇಣಿ ಸಂಗಮ. ಅಲ್ಲಿ ಗಂಗೆ ಮತ್ತೆ ಯಮುನೆ ಎರಡೂ ನದಿಗಳು ಸೇರುತ್ತವೆ. ಕಪ್ಪು ಬಣ್ಣದ ಯಮುನಾ ಮತ್ತೆ ತಿಳಿಯಾದ ಗಂಗೆ ಎರಡೂ ಅಲ್ಲದೆ, ಬರಿಗಣ್ಣಿಗೆ ಕಾಣದ ಸರಸ್ವತೀ ಕೂಡ ಅಲ್ಲೇ ಸೇರುತ್ತೆ. ಅದು ಗುಪ್ತ ಗಾಮಿನಿ, ಹಾಗಾಗಿ ಇದಕ್ಕೆ ತ್ರಿವೇಣಿ ಸಂಗಮ ಅಂತ ಹೆಸರು (ವೇಣಿ = ಜಡೆ. ಜಡೆಗೆ ಮೂರು ಕಾಲುಗಳಿರುವುದರಿಂದ ಈ ಹೆಸರು ಇರಬೇಕು)ಅಂತೆಲ್ಲ ಅವರು ಹೇಳುತ್ತಿದ್ದು ನೆನಪಿದೆ. 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (6 votes)
To prevent automated spam submissions leave this field empty.

ಹಂಸನಾದದ ಮುನ್ನುಡಿ

 ಹಲವು ದಿನಗಳಿಂದ ನನ್ನ ಪುಸ್ತಕ ’ಹಂಸನಾದ’ಕ್ಕೆ ಪ್ರೊ. ಓ.ಎಲ್. ನಾಗಭೂಷಣಸ್ವಾಮಿ ಅವರು ಬರೆದಿರುವ ಚೆಂದದ ಮುನ್ನುಡಿಯನ್ನು ಇಲ್ಲಿ ಹಾಕಬೇಕೆಂದಿದ್ದೆ. ಅದಕ್ಕೆ ಈಗ ಕಾಲ ಕೂಡಿ ಬಂದಿದೆ!

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಹಂಸನಾದ - ಪುಸ್ತಕ ಪರಿಚಯ, ಕನ್ನಡ ಪ್ರಭದಲ್ಲಿ ಇಂದು

 ಇವತ್ತಿನ ಕನ್ನಡ ಪ್ರಭದ ಸಾಪ್ತಾಹಿಕ ಪ್ರಭದಲ್ಲಿ (೨೮ ಆಗ್ನ್ನಸ್ಟ್ ೨೦೧೧ ಸಂಚಿಕೆ) ನನ್ನ ಪುಸ್ತಕ "ಹಂಸನಾದ"ದ ಪರಿಚಯ ಮತ್ತು ವಿಮರ್ಶೆ ಓದಿನ ಮನೆ ಅಂಕಣದಲ್ಲಿ ಪ್ರಕಟವಾಗಿದೆ. ಬರೆದವರು ಡಾ.ವಾಸುದೇವ ಶೆಟ್ಟಿ ಅವರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪುಸ್ತಕ ಬಿಡುಗಡೆಯ ಕಾರ್ಯಕ್ರಮಕ್ಕೆ ಕರೆಯೋಲೆ

ಸಂಪದದಲ್ಲಿ ನಾನು ಬರೆಯತೊಡಗಿದ್ದು ಸುಮಾರು ನಾಲ್ಕು ವರ್ಷಗಳ ಹಿಂದೆ. ನನ್ನ ಬ್ಲಾಗ್ ಬರವಣಿಗೆಯಲ್ಲಿ ಸಂಪದಿಗರು ಬಹಳ ದೊಡ್ಡ ಪಾತ್ರ ವಹಿಸಿದ್ದಾರೆ ಎಂದು ಹೇಳಲು ಸಂತೋಷವಾಗುತ್ತೆ. ಸುಭಾಷಿತಗಳನ್ನು ಅನುವಾದ ಮಾಡುವ ಒಂದು ಹವ್ಯಾಸವನ್ನೇ ಇದು ನನ್ನಲ್ಲಿ ಹುಟ್ಟಿಸಿತು ಎಂದರೆ ತಪ್ಪಿಲ್ಲ! ಹೀಗೆ ಹಿಂದೆ ನಾನು ಮಾಡಿರುವ ಸುಭಾಷಿತಗಳಲ್ಲಿ  ಆಯ್ದ ಕೆಲವು ಸುಭಾಷಿತ ಅನುವಾದಗಳು ಒಂದು ಪುಸ್ತಕವಾಗಿ ಸದ್ಯದಲೇ ಹೊರಬರಲಿದೆ ಎಂಬ ವಿಷಯವನ್ನು ನಿಮ್ಮೊಡನೆ ಹಂಚಿಕೊಳ್ಳಲು ಬಹಳ ಸಂತೋಷವಾಗುತ್ತಿದೆ.
 
ಪುಸ್ತಕದ ಬಿಡುಗಡೆ ಜುಲೈ ೧೬ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಜೊತೆಯಲ್ಲೇ ನನ್ನ ಶ್ರೀಮತಿ ಪೂರ್ಣಿಮಾಳ ಕಥಾಸಂಕಲನವೊಂದು ಕೂಡ ಬಿಡುಗಡೆ ಆಗುತ್ತಿರುವುದು ನನ್ನ ಸಂತೋಷವನ್ನು ಇಮ್ಮಡಿಗೊಳಿಸಿದೆ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಸಂಪದಿಗರು ಓದಲೇಬೇಕಾದ ಎರಡು ಪುಸ್ತಕಗಳು

ದೇಶ ಸುತ್ತು - ಕೋಶ ಓದು ಅನ್ನೋ ಮಾತಿದೆ. ನಾಲ್ಕು ಊರು ನೋಡಿ, ತರಹೇವಾರಿ ಜನರನ್ನು ನೋಡಿ ಅವರ ನಡೆ ನುಡಿಯಿಂದ ಬೇಕಾದಷ್ಟು ಕಲಿಯಬಹುದು. ಇಲ್ಲದಿದ್ದರೆ ಬಾವಿಯೊಳಗಿನ ಕಪ್ಪೆಯಾಗುವ ಸಾಧ್ಯತೆ ಇದ್ದೇ ಇದೆ. ಮತ್ತೆ ಬಗೆ ಬಗೆತ ಪುಸ್ತಕಗಳನ್ನ ಓದಿ ನಮ್ಮ ಅರಿವಿನ ಹರಹನ್ನು ಹಿರಿದಾಗಿಸಿಕೊಳ್ಳಬಹುದು ಅನ್ನುವುದು ಈ ಮಾತಿನ ಸಾರಾಂಶ.

 

ಒಂದು ವಿಷಯದಲ್ಲಿ ನಮ್ಮ ತಿಳಿವು ಹೆಚ್ಚಬೇಕಾದರೆ ಅದರ ಹಲವಾರು ಮಗ್ಗುಲುಗಳನ್ನೂ ನೋಡುವುದು ಒಳ್ಳೆಯದು. ಇಲ್ಲದಿದ್ದರೆ, ನಮ್ಮ ತಿಳಿವೂ ನಾಲ್ಕು ಜನ ಕುರುಡರು ಆನೆಯ ಸ್ವರೂಪವನ್ನು ವಿವರಿಸಿದ ರೀತಿ ಆಗುವ ಭಯವೂ ಇದ್ದೇ ಇದೆ. ನಾನು ಸಾಕಿದ ಮೊಲಕ್ಕೆ ಮೂರೇ ಕೊಂಬು ಎಂದು ವಿತಂಡವಾದ ಮಾಡುವವರನ್ನು ನೋಡಿದಾಗಲೆಲ್ಲ ನನಗೆ ಈ ಕಥೆ ನೆನಪಾಗುತ್ತಲೇ ಇರುತ್ತದೆ.

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.
ಸರಣಿ: 

Magic of thinking BIG - ಮಾಯೆ ಮಾಡುವ ಚಿಂತನೆ

ಹೀಗೆ ಸುಮ್ಮನೆ ಪುಸ್ತಕಗಳ ಮೇಲೆ ಕಣ್ಣಾಡಿಸುತ್ತಿದ್ದಾಗ, ಡೇವಿಡ್ ಜೆ ಶ್ವಾರ್ಜ್ ಬರೆದ "Magic of thinking big" ಪುಸ್ತಕ ಕಣ್ಣಿಗೆ ಬಿದ್ದಿತು. ಇಂಗ್ಲಿಷಿನಲ್ಲಿ ಪರ್ಸನಾಲಿಟಿ ಡೆವಲಪ್ ಮೆಂಟ್ ಬಗ್ಗೆ ಸಹಸ್ರ ಸಹಸ್ರ ಪುಸ್ತಕಗಳು ಸಿಗುತ್ತವೆ, ಕನ್ನಡದಲ್ಲಿ ಇಂತಹ ಪುಸ್ತಕಗಳು ಬಹಳ ಕಡಿಮೆ. ಯಂಡಮೂರಿಯವರ ವಿಜಯಕ್ಕೆ ಐದು ಮೆಟ್ಟಿಲುಗಳು ಅಥವಾ ಶಿವ್ ಖೇರಾ ಅವರ "ನೀವೂ ಗೆಲ್ಲಬಲ್ಲಿರಿ" ಪುಸ್ತಕಗಳ ಅನುವಾದ ಬಿಟ್ಟರೆ ಅಂತಹ ಪ್ರಯತ್ನ ಬಂದಿದ್ದು ರವಿ ಬೆಳಗೆರೆ ಅವರಿಂದ.

ಆದರೆ ಕನ್ನಡ ಕಾದಂಬರಿಗಳಲ್ಲಿ ತರಾಸು ಚಿತ್ರಿಸುವ ವ್ಯಕ್ತಿ ಚಿತ್ರಗಳಿಂದ ಪರ್ಸನಾಲಿಟಿ ಡೆವಲಪ್ ಮೆಂಟ್ ಕಲಿಯುವುದಾದರೆ ಅದರ ಸೊಬಗೇ ಬೇರೆ. ಪೂಚಂತೆ ಸೃಷ್ಟಿಸಿದ ಜುಗಾರಿ ಕ್ರಾಸ್ ನ ಸುರೇಶನ ವ್ಯಕ್ತಿತ್ವವಾಗಲೀ ,ಕುವೆಂಪುರವರ ರಕ್ತಾಕ್ಷಿಯ ಬಸವಣ್ಣನಾಗಲಿ, ಬಿ ಎಂ ಶ್ರೀಯವರ ಅಶ್ವಥಾಮನ್ ಆಗಲೀ ಅದ್ವಿತೀಯರಷ್ಟೇ. ಈ ಸಂಚಿಕೆಯಲ್ಲಿ ನಾ ಹೇಳಬೇಕೆಂದಿರುವುದು ಈ ಪುಸ್ತಕದ ಬಗ್ಗೆ ಮಾತ್ರ. ಯೋಗವೂ ಯೋಗ್ಯತೆಯೂ ಕೈಗೂಡಿ ಬಂದರೆ ಇನ್ನಷ್ಟು ಹೇಳಬಹುದೇನೋ

"ಮಾಯೆ ಮಾಡುವ ಚಿಂತನೆ" Magic of thinking big ನಮ್ಮ ಚಿಂತನೆಗಳು ಇರಬೇಕಾದ ರೀತಿಯನ್ನು ಹೇಳಿಕೊಡುವ ಪ್ರಯತ್ನ ಮಾಡುತ್ತದೆ. ನಮ್ಮ ಚಿಂತನೆಗಳು ಹಿರಿಯವಾದಷ್ಟೂ ನಮ್ಮ ಸಾಧನೆ ದೊಡ್ಡದಾಗುತ್ತದೆನ್ನುವುದು ಈ ಪುಸ್ತಕದ ಸಾರಾಂಶ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (5 votes)
To prevent automated spam submissions leave this field empty.

ಛಂದ ಸ್ಪರ್ಧೆ - ಹಲೋ ಹಲೋ ಚಂದಮಾಮ

ಎಲ್ರಿಗೂ ಹೊಸ ವರ್ಷದ ಶುಭಾಶಯಗಳು :)

ಛಂದ ಪುಸ್ತಕ ಮುಖಪುಟ ಸ್ಪರ್ಧೆಗೆ ನಾ ರಚಿಸಿದ ‘ಹಲೋ ಹಲೋ ಚಂದಮಾಮ’ ಮುಖಪುಟ...ನಿಮಗೆ ಇಷ್ಟವಾಯ್ತಾ?! ತಿಳಿಸಿ :)

ಧನ್ಯವಾದಗಳು

-ಸವಿತ

(ಪೂರ್ಣ ಆವೃತ್ತಿಗೆ ಚಿತ್ರದ ಮೇಲೆ ಕ್ಲಿಕ್ ಮಾಡಿ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಇಂಚರಳ ಹರಟೆ - ನಾ ಓದಿದ ಪುಸ್ತಕ

ನಾನು ಕೂಡಾ ಎಲ್ಲಾ ಪುಸ್ತಕ ಪ್ರೇಮಿಗಳಂತೆ! ಓದಿದ್ದಕ್ಕಿಂತ ಹೆಚ್ಚಾಗಿ ಆ ಪುಸ್ತಕ ಓದಬೇಕು, ಈ ಪುಸ್ತಕ ಓದಬೇಕು ಎನ್ನುವ ಪಟ್ಟಿಯೇ ದೊಡ್ಡದು! ಜೊತೆಗೆ ಒಮ್ಮೆ ಓದಲು ಕುಳಿತರೆ, ಆ ಪುಸ್ತಕ ಪೂರ್ತಿ ಮುಗಿಯುವ ತನಕ ಕುಳಿತಲ್ಲಿಂದ ಏಳಲು ಮನಸ್ಸೇ ಬಾರದು. ಹಾಗಾಗಿ ದೊಡ್ಡ ಪುಸ್ತಕಗಳನ್ನು ಓದುವ ಸಾಹಸವೇ ಮಾಡುವುದಿಲ್ಲ. ಮಾಡಿದರೂ ಅದೆಲ್ಲಾ ರಜವಿರುವಾಗ ಮಾತ್ರ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕನ್ನಡ ಅರಸರ ಅಕನ್ನಡ ಪ್ರಜ್ಞೆ

ಸಪ್ನಾ ಬುಕ್ ಹೌಸಿಗೆ ಇತ್ತೀಚೆಗೆ ನಾನು ಹೋದಾಗ ಈ ಪುಟ್ಟ ಪುಸ್ತಕ ನನ್ನ ಗಮನಸೆಳೆಯಿತು. ಬರೆದವರು ಸಂಶೋಧಕ ಎಂ. ಎಂ. ಕಲಬುರ್ಗಿಯವರು . ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನದ ಪ್ರಕಟಣೆ . ಬೆಲೆ ಇಪ್ಪತ್ತೈದು ರೂಪಾಯಿ.
ಈ ಪುಸ್ತಕದ ಬಗ್ಗೆ ಕಿರು ಪರಿಚಯ ಇಲ್ಲಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಪಂಚಕಲಶ ಗೋಪುರ ಓದುತ್ತಾ

ಪುಸ್ತಕದ ಕೊನೆಯ ಕೆಲವು ಪುಟಗಳು
ಮುಗಿದೇ ಹೋಯ್ತು ಅಂತ ಬೇಜಾರು
ಮುಗಿಸದೇ ಸವೀಲಿಕ್ಕೆ ಅದರ ಸವಿಯ
ಕುಳಿತಿದ್ದೀನಿ ಕಳೆಯುತ್ತ ಸ್ವಲ್ಪ ಕಾಲ

**ಅಪೂರ್ಣವಾಗಿದೆ**

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಪುಸ್ತಕಗಳ ಲೋಕದಲ್ಲಿ - ಹೊಸ ಪುಸ್ತಕಗಳ ಸುತ್ತ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (5 votes)
To prevent automated spam submissions leave this field empty.

ಗುರು ಶಿಷ್ಯರು - ಎರಡು ಕತೆಗಳು

ಬಣ್ಣದ ಪೆನ್ಸಿಲ್ಲಿನಿಂದ ಸರ ಸರನೆ ಜಾಮೆಟ್ರಿ ಆಕಾರಗಳನ್ನು ಹಾಳೆಯ ಮೇಲೆ ಬಿಡಿಸುತ್ತ ಹೋದಂತೆ ಸ್ವಲ್ಪ ಹೊತ್ತಿನಲ್ಲೆ ಅಲ್ಲಿ ಪ್ರತ್ಯಕ್ಷವಾಗುತ್ತಿದ್ದ ಬೆಕ್ಕಿನ ಆಕಾರವನ್ನು ಕಂಡ ಕೂಡಲೆ, ಆ ಚಿತ್ರವನ್ನು ಬಿಡಿಸಲು ಮುಗ್ಗರಿಸುತ್ತಿದ್ದ ಮಗುವಿನ ಮುಖದಲ್ಲಿ ಏನನ್ನೋ ಕಂಡುಕೊಂಡ ಹೊಳಪು!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.

ಕೋತಿಗಳು ಸಾರ್ ಕೋತಿಗಳು

ಭಾನುವಾರ ಸಂಜೆ ತಾರಾಲಯಕ್ಕೆ ತಡವಾಗಿ ಹೊದದ್ದಕ್ಕೆ ಕಾರಣ ಇದೆ. 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಇಪ್ಪತ್ತೆರಡು ದಿನ ಹನ್ನೊಂದು ಪುಸ್ತಕ

ಕಳೆದ ಇಪ್ಪತ್ತೆರಡು ದಿನದಲ್ಲಿ ನಾನು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಿಂದ ಇಳಿಸಿಕೊಂಡು ಓದಿದ ಪುಸ್ತಕಗಳು ಹೀಗಿವೆ .
ಕೈಲಾಸಂ ಅವರ ನಾಟಕಗಳು
೧) ಟೊಳ್ಳುಗಟ್ಟಿ
೨) ಹೋಮ್ ರೂಲ್
(ಕೈಲಾಸಂ ನಾಟಕ ಓದಬೇಕೆಂಬ ಆಸೆ ಇತ್ತು . ಅದು ಸೊಲ್ಪ ಪೂರೈಸಿತು )
ಮತ್ತೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮೂರು ವಾರಗಳು , ಮತ್ತಷ್ಟು ಪುಸ್ತಕಗಳು ( "ಬಾಯಿ ಬಿಟ್ಟರೆ ಎಲ್ಲರೂ ತಪ್ಪು ಮಾತಾಡ್ತಾರೆ")

ಕಳೆದು ಮೂರು ವಾರಗಳಲ್ಲಿನ ನನ್ನ ಓದಿನ ಕಿರುಬರಹ ಇಲ್ಲಿದೆ.
೧-೨) ಸಾಹಿತ್ಯ ಅಕಾಡೆಮಿಯ ಎರಡು ಅನುವಾದ ಪುಸ್ತಕಗಳು . ಆವುಗಳ ಬಗ್ಗೆ ಈ ನಡುವಿನ ಬ್ಲಾಗೊಂದರಲ್ಲಿ ಬರೆದಿದ್ದೇನೆ .ಒಂದು ಖುಶಿ ಕೊಟ್ಟಿತು . ಇನ್ನೊಂದು ತಳಬುಡ ತಿಳಿಯದೆ ಕೆಳಗಿಡಬೇಕಾಯಿತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅಲ್ಕೆಮಿಸ್ಟನೂ, ಗುರಿ ಸಾಧನೆಯ ಹಾದಿಯೂ...

ಪೌಲೋ ಕೊಯ್ಲೋನ ಅಲ್ಕೆಮಿಸ್ಟ್ ಕಥೆ ಓದಿದೆ. ಸರಳವಾದ ಕಥೆ ಓದುತ್ತಿದ್ದಂತೆ
ನಮ್ಮದೇ ನೆಲದ ಹಲವು ಕಥೆಗಳನ್ನು ನೆನಪಿಸಿತು. ಡೆಸ್ಟಿನಿ ಅಥವಾ ನಿಜವಾದ ನೆಲೆಯನ್ನು
ಹುಡುಕುವವರು ದಾರಿಯಲ್ಲಿ ಬರುವ ಎಡರುಗಳಿಗೆ ಹೆದರುವದಿಲ್ಲ, ಅವರ ಆತ್ಮ ಸ್ಥೈರ್ಯ
ದೊಡ್ಡದು, ಎಂತಹ ಪರೀಕ್ಷೆಯ ಗಳಿಗೆಯಲ್ಲೂ ಅವರು ಕಂಗೆಡುವದಿಲ್ಲ. ಹುಡುಕಾಟದ ಹಾದಿಯ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ವಾರದ ಕೊನೆಯಲ್ಲಿ ನನ್ನ ಓದು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹೊತ್ತಲ್ಲದ ಹೊತ್ತಿನಲ್ಲಿ ಹೊತ್ತಿಗೆ ತೆರೆದು...

ರಾತ್ರಿಯಾಗಿದೆ.

ಎಲೆಕ್ಟ್ರಾನಿಕ್‌ ಗಡಿಯಾರವಾದ್ದರಿಂದ ಟಿಕ್‌ ಟಿಕ್‌ ಸದ್ದಿಲ್ಲ. ಡಿಜಿಟಲ್‌ ಅಂಕೆಗಳಿರುವುದರಿಂದ ಮುಳ್ಳುಗಳು ಕಾಣುವುದಿಲ್ಲ. ಗಂಟೆಗೊಮ್ಮೆ ಸಂಗೀತ ಮೊಳಗಿಸಿ, ಗಂಟೆಯ ಸದ್ದು ಹೊರಡಿಸುವುದನ್ನು ಬಿಟ್ಟರೆ ಗಡಿಯಾರ ತನ್ನ ಗಡಿ ದಾಟಿ ತೊಂದರೆ ಕೊಡುವುದಿಲ್ಲ.

ಮಕ್ಕಳು ಮಲಗಿರುತ್ತವೆ. ಮಡದಿಗೂ ಗಾಢ ನಿದ್ರೆ. ಕಚೇರಿಯ ಉದ್ವೇಗವನ್ನು ಇಳಿಸಿಕೊಳ್ಳಲು ಮೌನವಾಗಿ ಕೂತವನಿಗೆ ಕಂಪ್ಯೂಟರ್‌ ತೆರೆಯುವುದು ಏಕೋ ಬೇಸರ.

ಸ್ವಲ್ಪ ಹೊತ್ತು ಸುಮ್ಮನೇ ಕೂಡುತ್ತೇನೆ. ಸಾವಿರ ನೆನಪುಗಳು ಮುಕುರಿಕೊಳ್ಳುತ್ತವೆ. ಬಾಲ್ಯ, ಹರೆಯ, ಓದಿನ ಗುಂಗು, ಬಡತನ, ಹಳ್ಳಿ, ಬೀಸುವ ಗಾಳಿ, ಕೆಟ್ಟ ಬಿಸಿಲು, ಹಸಿವು ನೆನಪಾಗುತ್ತವೆ. ಗದಗ ಜಿಲ್ಲೆ, ರೋಣ ತಾಲ್ಲೂಕಿನ ಕೋಡಿಕೊಪ್ಪ ಎಂಬ ಹಳ್ಳಿಯಲ್ಲಿ ಕಳೆದ ಮೂರು ವರ್ಷಗಳು ಕಣ್ಮುಂದೆ ಸುಳಿಯುತ್ತವೆ. ನನ್ನ ಬದುಕು ಯಾವತ್ತೂ ಬದಲಾಗುವುದಿಲ್ಲ ಬಿಡು ಅಂತ ಅದೆಷ್ಟು ಸಾವಿರ ಸಲ ಹೇಳಿಕೊಂಡಿದ್ದೆನೋ ಅಲ್ಲಿ. ಆದರೆ, ನೋಡನೋಡುತ್ತ ಬದುಕು ಬದಲಾಗುತ್ತಲೇ ಹೋಯಿತು. ಹೌದು: Things fall apart. ಏಕೆಂದರೆ, centre can not hold.

ಪುಸ್ತಕಗಳು ಸೆಳೆಯುತ್ತವೆ. ಇದ್ದ ಷೆಲ್ಫ್‌ ತುಂಬಿದ್ದರಿಂದ, ಡಬ್ಬದಲ್ಲಿರುವ ಪುಸ್ತಕಗಳನ್ನು ಹೊರತೆಗೆಯಲೇ ಆಗಿಲ್ಲ. ಬೇಂದ್ರೆಯವರ ಬಹುತೇಕ ಕವನ ಸಂಕಲನಗಳು ಒಂದೆಡೆ ಕೂತಿವೆ. ಬೇಂದ್ರೆ ಓದುತ್ತಿದ್ದರೆ ಮನಸ್ಸು ಹರಿಯುವ ನೀರಾಗುತ್ತದೆ. ಅಲ್ಲಮಪ್ರಭು ಹೇಳಿದ್ದಾರಲ್ಲ: ಹರಿವ ನೀರಿಗೆ ಮೈಯೆಲ್ಲಾ ಕೈಕಾಲು. ಎಂಥ ಉದಾತ್ತ ವಿಚಾರ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮತ್ತೊಂದು ವಾರದ ನನ್ನ ಓದು

ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದಿಂದ ಇಳಿಸಿಕೊಂಡು ಓದಿದ ಪುಸ್ತಕಗಳು ಹೀಗಿವೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಾನು ಇತ್ತೀಚೆಗೆ ಓದಿದ ಪುಸ್ತಕಗಳು

ನಾನು ದಿನಕ್ಕೊಂದು ಪುಸ್ತಕ ಓದಬೇಕೆಂದುಕೊಂಡಿದ್ದೇನಷ್ಟೆ?
ಆ ಪ್ರಕಾರ ಒಂದು ವಾರ ಕಳೆದುದು .
ಈ ಅವಧಿಯಲ್ಲಿ ನಾನು ಓದಿದ ಪುಸ್ತಕಗಳು ಹೀಗಿವೆ.

೧) ರಾಕೇಶ್ ಮೋಹನರ ಹಿಂದೀ ನಾಟಕದ ಅನುವಾದ - ಅಧೇ ಅಧೂರೆ
೨) ಅರಕ್ಷಣೀಯರು - ಬಂಗಾಲಿಯ ಶರತ್ ಚಂದ್ರರ ಸಾಮಾಜಿಕ ಕಾದಂಬರಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ದಿನಕ್ಕೊಂದು ಪುಸ್ತಕದ ಓದು ?

ಓದುವ ಚಟವುಳ್ಳ ನನಗೆ ಡಿಜಿಟಲ್ ಲೈಬ್ರರಿಯಿಂದಾಗಿ ಒಂದು ನಿಧಿಯೇ ಸಿಕ್ಕಂತಾಗಿದೆ. ಕನ್ನಡದಲ್ಲಿ ೨೫ ಸಾವಿರ , ಇಂಗ್ಲೀಷಿನಲ್ಲಿ ಒಂದು ಲಕ್ಷ ಪುಸ್ತಕ ಇದ್ದು ಮನೆಗೆ ಇಂಟರ್ನೆಟ್ಟು ಬಂದು , ಅಲ್ಲಿ ಒಂದು ಸಣ್ಣ ಪ್ರೋಗ್ರಾಮ್ ಬರೆದುಕೊಂಡು ಪ್ರತಿ ದಿನಕ್ಕೆ ಸಾಧಾರಣ ನೂರು ಪುಟದ ಒಂದು ಪುಸ್ತಕ ಸುಮಾರು ೧೦ ರೂ ಖರ್ಚಿನಲ್ಲೇ ಇಳಿಸಿಕೊಂಡು ಓದುವದು ಸಾಧ್ಯವಾಗಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಓದಿದ್ದು ಕೇಳಿದ್ದು ನೋಡಿದ್ದು-94 ಮನಸ್ಸಿನ ಸಂತೋಷಕ್ಕೆ ಏನು ಮಾಡಬೇಕು?

 ಮನಸ್ಸಿನ ಸಂತೋಷಕ್ಕೆ ಏನು ಮಾಡಬೇಕು?

---------------------------------------------------------

ಜನರನ್ನು ಕಾಡುವ ರಾಜಕೀಯ ಸಮಾವೇಶಗಳು

asian age

--------------------------------------------------------------

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹೊತ್ತಿಗೆ-ಹಣ-ಹುಡುಗಿ

ಹೊತ್ತಿಗೆ - ಹಣವು - ಹುಡುಗಿ
ಬರುವುದುಂಟೇ ತಿರುಗಿ
ಕಂಡವರ ಕೈ ಸೇರಿದ ಮೇಲೆ?

ಬಾರವು ಬಾರವು!
ಒಂದುವೇಳೆ ಬಂದರೂ
ಹರಿದು ಕಿಲುಬಿ ನಲುಗಿ!

ಸಂಸ್ಕೃತ ಮೂಲ:

ಪುಸ್ತಕಂ ವನಿತಾ ವಿತ್ತಂ ಪರಹಸ್ತಗತಂ ಗತಂ
ಅಥವಾ ಪುನರಾಯಾತಿ ನಷ್ಟಂ ಭ್ರಷ್ಟಂ ಚ ಖಂಡಿತಂ 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (2 votes)
To prevent automated spam submissions leave this field empty.

ಸಪ್ನಾ ಆನ್‍ಲೈನ್ ನಿಂದ ಈಗ ಕನ್ನಡ ಪುಸ್ತಕಗಳು ಲಭ್ಯ

ಇದೀಗ ತಾನೇ ನನ್ನ ಇನ್-ಬಾಕ್ಸ್ ನಲ್ಲಿ ಬಂದ ಮೈಲ್ ಪ್ರಕಾರ ಕನ್ನಡ ಪುಸ್ತಕಗಳು ಇಂಟರ್‍ನೆಟ್ ಮೂಲಕ ಖರೀದಿಗೆ http://www.sapnaonline.com/KannadaBookDetails.aspx?lcPType=D ನಲ್ಲಿ ಲಭ್ಯ.
ನಾನು ಈ ಮೊದಲು ಸಪ್ನಾ ಆನ್‍ಲೈನ್ ಮೂಲಕ ಇಂಗ್ಲೀಷ್ ಪುಸ್ತಕಗಳನ್ನು ಕೊಂಡಿದ್ದೇನೆ. ಬಹಳ ಒಳ್ಳೆಯ ಸೇವೆ ಎಂದು ಅನಿಸಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಾರ್ತ್ರ್‍ ನ ’ಪದಚರಿತ’ - ಓದಿನ ಗೀಳು , ಬರಹದ ಗೋಳು .

( ಇಲ್ಲಿ ಬರೆದದ್ದೆಲ್ಲವೂ ನಾನು ಬರೆದಿದ್ದಲ್ಲ ; ನಾನು ಆಯ್ದ ವಾಕ್ಯಗಳೇ ಬಹಳ - ಶ್ರೀಕಾಂತ ಮಿಶ್ರೀಕೋಟಿ)

ಪ್ರಸಿದ್ಧ ತತ್ವಶಾಸ್ತ್ರಜ್ಞ , ಚಿಂತಕ, ಕಾದಂಬರಿಕಾರನ ಪ್ರಸಿದ್ಧ ಕೃತಿ ’ಲೆಮೊ’ ದ ಅನುವಾದವೇ ’ಪದಚರಿತ’ .
ಇದು ಅವನ ಬಾಲ್ಯದ ’ಆತ್ಮಚರಿತ್ರೆ’ ; ಅವನನ್ನು ಕಾಡಿದ ಬರೆದಿಟ್ಟ ಶಬ್ದಗಳ ಜತೆ ನಡೆಸಿದ ಒಂದು ಸುದೀರ್ಘ ಪ್ರಣಯ ಪ್ರಸಂಗ.
ಈ ಪುಸ್ತಕ ಜೀವನಾನುಭವದ ಸಂದರ್ಭದಲ್ಲಿ ಪುಸ್ತಕಗಳ ಮತ್ತು ಭಾಷೆಯ ಉಪಯುಕ್ತತೆ ಮತ್ತು ಉಪಯೋಗದ ಬಗ್ಗೆ ನಡೆಸಿರುವ ವಿಶಿಷ್ಟ ಸಂಶೋಧನೆ ಮತ್ತು ಮೌಲ್ಯಮಾಪನ. ಇದನ್ನು ಅನುವಾದ ಮಾಡಿದವರು ರಾಜಕಾರಣಿ ಕೆ. ಎಚ್. ಶ್ರೀನಿವಾಸರು . ಸುಮಾರು ಮೂರ್ನಾಲ್ಕು ವರ್ಷ ತಮ್ಮ ರಾಜಕಾರಣದ ನಡುವೆ ಶ್ರಮಿಸಿದ್ದಾರೆ .

ಪುಸ್ತಕವನ್ನು ಮೂಲದಲ್ಲಿ ಅರ್ಥ ಮಾಡಿಕೊಳ್ಳುವದೇ ಕಷ್ಟ ; ಪುಸ್ತಕ ಅಂತಹದು ; ಅಂಥದ್ದನ್ನು ಕನ್ನಡಕ್ಕೆ ಬಹಳ ಶ್ರಮಪಟ್ಟು ತಂದಿದ್ದಾರೆ .
ಸಾರ್ತ್ರ್‍ ತನ್ನ ಐವತೊಂಭತ್ತನೇ ವಯಸ್ಸಿನಲ್ಲಿ ಪುನರ್ ಗ್ರಹಿಸಿದ ಬಾಲ್ಯದ ಕತೆ ಇದು .
ಅವನು ಚಿಕ್ಕಂದಿನಲ್ಲಿದ್ದಾಗ ಅವನಿಗೆ ಜಾಣತನ , ಲೇಖಕತನ , ಒಳ್ಳೆಯತನವನ್ನು ಹೊರಿಸಲಾಯಿತು . ಅದರ ವಿವರಗಳು , ಓದು , ಬರಹದ ಗೀಳು , ಗೋಳು ಇಲ್ಲಿದೆ .
ಇಲ್ಲಿನ ವಾಕ್ಯಗಳನ್ನು ಅವಸರದಲ್ಲಿ ಓದಿ ತಿಳಿಯಲಾಗುವದಿಲ್ಲ . ಇಲ್ಲಿನ ವಾಕ್ಯಗಳ ರೀತಿಯೇ ಅದ್ಭುತ. ಕೊನೇಪಕ್ಷ ಅದಕ್ಕಾದರೂ ಇನ್ನೊಮ್ಮೆ ಮತ್ತೊಮ್ಮೆ ಓದಬೇಕೆನಿಸುತ್ತದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸ್ಟೈನ್ಬೆಕ್ಕನ 'ದಿ ಪರ್ಲ್'; ಒಂದು ಮುತ್ತಿನ ಕಥೆ

ಹೋದವಾರ ಜಾನ್ ಸ್ಟೈನ್ಬೆಕ್ ಬರೆದ ’ದಿ ಪರ್ಲ’ ಓದಿದೆ. ಸುಮಾರು ೧೧೦ ಪುಟಗಳ ಚಿಕ್ಕ ಪುಸ್ತಕ. ೧೯೪೫ರಲ್ಲಿ ಬರೆದದ್ದು. ಲೈಬ್ರರಿಯ ಸೆಕೆಂಡ್ ಹ್ಯಾಂಡ್ ಪುಸ್ತಕಗಳ ಮಾರಾಟದಲ್ಲಿ ೨೫ ಸೆಂಟಿಗೆ ಕೊಂಡ ಪುಸ್ತಕ. ಸರಳ ಕಥೆ, ಅದ್ಭುತ ಎನಿಸುವಂತಹ ನಿರೂಪಣೆ.

ದಿನನಿತ್ಯ ತನ್ನ ಸೊಂಟಕ್ಕೊಂದು ದೊಡ್ಡ ಕಲ್ಲನ್ನು ಕಟ್ಟಿಕೊಂಡು ಸಮುದ್ರದ ತಳಕ್ಕೆ ಇಳಿದು ಅಲ್ಲಿನ ಚಿಪ್ಪುಗಳಲ್ಲಿ ಮುತ್ತು ಹುಡುಕುವ ಕಾಯಕದ ಕೀನೊ ಕಥಾನಾಯಕ. ಯುವಾನ ಅವನ ಹೆಂಡತಿ ಹಾಗೂ ಅವರಿಗೊಬ್ಬ ಮಗ ಕೊಯೊಟಿಟೊ. ಒಂದಾನೊಂದು ದಿನ ಕೊಯೊಟಿಟೊನಿಗೆ ಚೇಳು ಕುಟುಕುತ್ತದೆ. ಕುಟುಕಿದ ಕ್ಷಣವೇ ಯುವಾನ ಚೇಳು ಕುಟುಕಿದ ಸ್ಥಳದಿಂದ ವಿಷವನ್ನು ಹೀರಿ ತೆಗೆಯುವ ಪ್ರಯತ್ನ ಮಾಡುತ್ತಾಳೆ. ಕೊನೆಗೆ ವೈದ್ಯನ ಹತ್ತಿರ ಹೋಗುವದೇ ಒಳ್ಳೆಯದು ಎಂದುಕೊಂಡು ಆ ಊರ ವೈದ್ಯನ ಮನೆಗೆ ಹೋಗುತ್ತಾರೆ. ಇವರ ಹತ್ತಿರ ಕೊಡಲು ಏನೂ ದುಡ್ಡಿಲ್ಲ ಎಂದು ತಿಳಿದುಕೊಂಡ ವೈದ್ಯ ಮನೆಯೊಳಗೇ ಕುಳಿತುಕೊಂಡು ತಾನು ಮನೆಯಲ್ಲಿಲ್ಲ ಎಂದು ಹೇಳಿಸುತ್ತಾನೆ.

ಇಂಥ ಪರಿಸ್ಥಿತಿಯಲ್ಲಿ ಹೇಗಾದರೂ ವೈದ್ಯ ತಮ್ಮ ಮಗನನ್ನು ನೋಡುವಂತಾಗಲಿ, ಆ ವೈದ್ಯನಿಗೆ ಕೊಡಲು ಒಂದು ಮುತ್ತಾದರೂ ಸಿಗಬಹುದೇನೋ ಎಂದುಕೊಂಡು ಅವತ್ತು ಮತ್ತೆ ಸಮುದ್ರಕ್ಕಿಳಿಯುತ್ತಾನೆ. ಅವನ ಅದೃಷ್ಟ, ಎಂದೂ ಕಂಡಿರದಂತಹ ಮುತ್ತೇ ಸಿಗುತ್ತದೆ ಅವತ್ತು. ಕೋಳಿ ಮೊಟ್ಟೆ ಗಾತ್ರದ ಮುತ್ತನ್ನು ನೋಡಿ ಕೀನೊ ಮತ್ತು ಯುವಾನಾಗೆ ಸ್ವರ್ಗವೇ ಸಿಕ್ಕಷ್ಟು ಖುಷಿ. ಈ ದೊಡ್ಡ ಮುತ್ತು ಸಿಕ್ಕ ಕಥೆ ಕ್ಷಣದಲ್ಲಿ ಊರ ತುಂಬೆಲ್ಲ ಹರಡಿ ಆ ಕ್ಷಣದಲ್ಲೆ ಕೀನೋಗೆ ಎಲ್ಲರಿಗೂ ಬೇಕಾದವನಾಗಿಬಿಡುತ್ತಾನೆ. ಹಿತಶತ್ರುಗಳೂ ಹುಟ್ಟಿಕೊಳ್ಳುತ್ತಾರೆ. ಚಿಕ್ಕ ಊರಿನಲ್ಲಿ ಇಂತಹ ವಿಷಯಗಳು ಹೇಗೆ ಹಲವರ ಮನಸ್ಸಿನಲ್ಲಿ ತಮ್ಮ ಸ್ವಾರ್ಥದ ವಿಚಾರಗಳನ್ನು ಪ್ರೇರಿಸುತ್ತವೆ ಎನ್ನುವದು ಬಹಳ ಸಮರ್ಥವಾಗಿ ಚಿತ್ರಿತವಾಗಿದೆ. ಆ ಊರ ಚರ್ಚಿನ ಪಾದ್ರಿಗೆ ಆಗಬೇಕಾದ ಚರ್ಚಿನ ರಿಪೇರಿಗಳ ನೆನಪಾಗುತ್ತದೆ. ಮನೆಯಲ್ಲಿದ್ದೂ ಹೊರಹೋಗಿದ್ದೇನೆ ಎಂದು ಹೇಳಿಸಿದ್ದ ವೈದ್ಯ ಇನ್ನೊಬ್ಬರ ಮುಂದೆ ಕೀನೋನ ಮಗನಿಗೆ ಕುಟುಕಿದ ಚೇಳಿನ ವಿಷಕ್ಕೆ ತಾನು ಮದ್ದು ಮಾಡುತ್ತಿರುವದಾಗಿ ಕೊಚ್ಚಿಕೊಳ್ಳುತ್ತಾನೆ. ಊರ ಬಟ್ಟೆ ಅಂಗಡಿ ಮಾಲೀಕರಿಗೆ ಕೀನೊ ಬಟ್ಟೆ ಕೊಳ್ಳುತ್ತಾನೆ ಎನ್ನುವ ಖುಷಿ. ಚರ್ಚಿನ ಬಾಗಿಲ ಬಳಿ ಕೂಡುವ ಭಿಕ್ಷುಕರಿಗಂತೂ ಒಮ್ಮಿಂದೊಮ್ಮೆಲೆ ಸಾಹುಕಾರನಾದ ಕೀನೊ ಒಳ್ಳೆ ಭಿಕ್ಷೆ ಹಾಕುತ್ತಾನೆ ಎನ್ನುವ ಭಾವನೆಯೇ ಖುಷಿಕೊಡುತ್ತದೆ. ಒಟ್ಟಿನಲ್ಲಿ ಕೀನೊ ಮತ್ತು ಅವನ ಮುತ್ತು ಆ ಮಲಗಿದಂತಹ ಊರಿನಲ್ಲಿ ಒಂದು ಸಂಚಲನವನ್ನೇ ಮಾಡುತ್ತದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಟಾಪ್ ಟೆನ್

ಅವಧಿ (http://avadhi.wordpress.com) ಬ್ಲಾಗ್ ನಿರ್ವಾಹಕರು ಅವರ ಓದುಗರೆಲ್ಲರಿಗೆ ನಿಮ್ಮ ಟಾಪ್ ಟೆನ್ ಪುಸ್ತಕ ಪಟ್ಟಿ ಹೇಳಿ ಎಂದಿದ್ದರು ಕೆಲವು ದಿನಗಳ ಹಿಂದೆ. ಪಟ್ಟಿ ಹೇಳುವುದು ಕಷ್ಟವೇ ಆದರೂ, ಆಗ ನೆನಪಾದವನ್ನು ಅವರಿಗೆ ಬರೆದು ಕಳಿಸಿದ್ದೆ. ಅದನ್ನೆ ಇಲ್ಲಿ ಮತ್ತೆ ಬರೆದಿದ್ದೇನೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಜೀವನವ್ಯಾಪಾರ - ನಾವು ಏಕೆ ಓದುತ್ತಿರಬೇಕು?

ವ್ಯಾಪಾರಿ ಇವತ್ತು ಆದ ವ್ಯಾಪಾರ - ಟರ್ನ್ ಓವರ್ ಎಷ್ಟೆಂದು ನೋಡುತ್ತಾನೆಯೇ ಹೊರತು ಲಾಭ-ಹಾನಿ ಲೆಕ್ಕಾಚಾರ ಮಾಡುವದಿಲ್ಲ ; ಇವತ್ತು ಬಂದ ಹಣವನ್ನು ಎನಿಸಿ ಅದೆಲ್ಲ ಲಾಭವೇ ಎಂಬಂತೆ ಸಂತೋಷಪಡುತ್ತಾನಂತೆ . ಹೀಗೆ ಬಾಳನ್ನು ನೋಡುವ ದೃಷ್ಟಿ ಎರಡಿವೆ . ಒಂದು - ವಿಕ್ರಯದ ಮೊತ್ತ ನೋಡಿ ಸಂತಸಪಡುವ ದೃಷ್ಟಿ . ಆತ ಲಾಭವನ್ನು ಗಣಿಸುವದಿಲ್ಲ . ಅಂಗಡಿಯಲ್ಲಿ ಹಗಲೆಲ್ಲ ಗಿರಾಕಿ ತುಂಬಿರಬೇಕು , ವ್ಯಾಪಾರವಾಗಬೇಕು . ಲೋಕದ ತತ್ವಜ್ನಾನಿಗಳು ಅಕೌಂಟಂಟರಂತೆ . ಎಲ್ಲವನ್ನು ಸಂಶಯದಿಂದ ನೋಡಿ , ವ್ಯವಹಾರಕ್ಕೆಲ್ಲ ಆಧಾರ ಕೇಳಿ ವ್ಯಾಪಾರದಲ್ಲಿ ಲಾಭವಿಲ್ಲೆಂದು ನಿರ್ವಿಕಾರವಾಗಿ ಹೇಳುವರು . ನಿಮ್ಮ ಆನಂದಕ್ಕೆ ಪ್ರಮಾಣ ಬೇಡುವರು . ಸವಕಳಿ ತೆಗೆಯುವರು , ದೋಷಗಳನ್ನು ಎತ್ತಿ ತೋರಿಸುವರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ರೇಷ್ಮೆ ರುಮಾಲು

ರೇಷ್ಮೆ ರುಮಾಲು: ರವಿ ಬೆಳಗೆರೆ

(ಮೂಲ: Confessions of a Thug(ಥಗ್ಗನೊಬ್ಬನ ತಪ್ಪೊಪ್ಪಿಗೆ) by Philip Meadows Taylor)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸುಭಾಷಿತ ಮಂಜರಿ

ಕನ್ನಡ ಸಾಹಿತ್ಯ ಪರಿಷತ್ತು ೧೯೭೭ರಲ್ಲಿ ಪ್ರಕಟಿಸಿದ ಪುಸ್ತಕ. ಇತ್ತೀಚೆಗೆ ಇದು ಮುದ್ರಣದಲ್ಲಿ ಇದೆಯೊ ಇಲ್ಲವೊ ಗೊತ್ತಿಲ್ಲ.

ಇದರಲ್ಲಿರುವ ಸುಭಾಷಿತಗಳನ್ನು ಎಲ್ಲಿಂದ ಹೆಕ್ಕಿ ತೆಗೆದಿದ್ದಾರೆ ಎಂಬುದನ್ನ ಮಾತ್ರ ತಿಳಿಸಿಲ್ಲ. ಕೆಲ ದಿನಗಳಿಂದ ಈ ಪುಸ್ತಕದ ಲಿಂಕ ಕೆಲಸ ಮಾಡ್ತಿಲ್ಲ. ಕೆಲಸ ಮಾಡಲು ಪ್ರಾರಂಭಿಸಿದರೆ ಯಾರದರೂ ಇದರ ಪಿ ಡಿ ಎಫ಼ ಮಾಡಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಪುಸ್ತಕನಿಧಿ: DLI ನಲ್ಲಿ ಈಗ ಪುಸ್ತಕದ ಹೆಸರುಗಳು ಕನ್ನಡದಲ್ಲಿ

http://dli.iiit.ac.in ತಾಣದಲ್ಲಿ ಪುಸ್ತಕದ ಹೆಸರುಗಳು ಈಗ ಕನ್ನಡದಲ್ಲಿ ಇವೆ . ತಪ್ಪು ತಪ್ಪಾಗಿದ್ದರೂ ಮೊದಲಿಗಿಂತ ಅನುಕೂಲಕರ ;
ನೋಡಿದ್ದೀರಾ ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಪುಸ್ತಕನಿಧಿ - ಆದಿಕವಿ ವಾಲ್ಮೀಕಿ - ಮಾಸ್ತಿಯವರ ಪುಸ್ತಕ

ನಿನ್ನೆ ತಮಸಾನದೀ ತೀರದಲ್ಲಿ ಎಂಬ ಪುಟ್ಟ ಬರಹವನ್ನು ಓದಿರಬಹುದು . ಇದನ್ನು
ಮಾಸ್ತಿ ವೆಂಕಟೇಶ ಅಯಂಗಾರರ ಈ ಪುಸ್ತಕದಲ್ಲಿ ಓದಿದ್ದು .
http://dli.iiit.ac.in/cgi-bin/Browse/scripts/use_scripts/advnew/metainfo...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಲಂಕೇಶ್ ಬ್ಲಾಗ್: ನೀಲು ಕಾವ್ಯ ಮತ್ತು ನೀಲುಗಳು

ಜಾಣ ಜಾಣೆಯರ "ಲಂಕೇಶ್ ಪತ್ರಿಕೆ"ಯಲ್ಲಿ ಲಂಕೇಶರು ನೀಲು ಅನ್ನೋ ಹೆಸರಿನಡಿ ಪದ್ಯಗಳನ್ನು ಬರೀತಿದ್ದರು. ನಾನಂತೂ ಅವುಗಳನ್ನಷ್ಟೇ ಓದಿ ಪತ್ರಿಕೆ ಮುಚ್ಚಿಡುತ್ತಿದ್ದ ದಿನಗಳಿದ್ದವು! ಇತ್ತೀಚೆಗೆ ನೀಲುಗಳು ಎಂಬ ಕೇಶವ ಕುಲ್ಕರ್ಣಿಯವರ ಬ್ಲಾಗಿನಲ್ಲಿ "ಹೈಕುಗಳ ಮಾದರಿಯಲ್ಲೇ ಕೆಲವೇ ಕೆಲವು ಸಾಲುಗಳಲ್ಲಿ ಕಾವ್ಯ ಬರೆದದ್ದು ಲಂಕೇಶ್, ನೀಲು ಹೆಸರಿನಲ್ಲಿ. ಕನ್ನಡದಲ್ಲಿ ಅಂಥ ಕಾವ್ಯ ಪ್ರಕಾರಕ್ಕೆ 'ನೀಲುಗಳು' ಎಂದು ನಾಮಕರಣ ಮಾಡಬಹುದೇ?" ಎಂದು ತಮ್ಮ ಒಂದೆರಡು ಕನ್ನಡದ ಹಾಯಿಕುಗಳನ್ನು "ನೀಲುಗಳು" ಎಂದು ಕರೆದಿದ್ದರು. ನೋಡಿ ತುಂಬಾ ಸಂತೋಷವಾಯಿತು. ಹೌದು, "ನೀಲುಗಳು" ಒಂದು ಕಾವ್ಯ ಪ್ರಕಾರವಾಗಬೇಕು ಅಂತ ಅನಿಸಿತು. ಅದಕ್ಕೆ ನೀಲು ಪದ್ಯಗಳ ಜಾಡಿನಲ್ಲೇ ಬರೆಯಬೇಕು ಅಂತ ಅನಿಸಿತು. ಇದು ನನ್ನ ಮೇಲಿನ ಲಂಕೇಶರ ಪ್ರಭಾವ ಅಂತಲೇ ಇಟ್ಕೊಳ್ಳಿ. ಹಾಗಾದರೆ ಲಂಕೇಶರ ಪದ್ಯಗಳು ಪ್ರಕಟವಾಗಿವೆಯೆ ಎಂದು ಹುಡುಕಿದಾಗ "ನೀಲು ಕಾವ್ಯ" ಅಂತ ಪ್ರಕಟವಾಗಿದೆ ಅಂತ ಪತ್ರಿಕೆಯಲ್ಲಿ ಓದಿದೆ. ತುಂಬಾ ಸಂಭ್ರಮದಿಂದ ತರಿಸಿಕೊಂಡು "ರೆಫೆರ್‍" ಮಾಡಲು ತೊಡಗಿದ್ದೇನೆ! ಈ ಸಂಪುಟದಲ್ಲಿ ಲಂಕೇಶರು 1981-1984 ರವರೆಗೆ ಬರೆದವುಗಳು ಮಾತ್ರ ಇವೆ. ಮುನ್ನುಡಿಯಲ್ಲಿ ಕಿ.ರಂ.ನಾಗರಾಜರು "ವಾರಕ್ಕೆ ಸರಾಸರಿ ಇಪ್ಪತ್ತು ಸಾಲುಗಳಂತೆ ಇಪ್ಪತ್ತು ವರ್ಷಗಳ ತುಂಬ ಹಬ್ಬಿಕೊಂಡಿದ್ದು"..."ಸುಮಾರು ಹದಿನೆಂಟು ಸಾವಿರ ಸಾಲುಗಳ" ಬರಹ ಇರಬಹುದೆಂದು ಅಂದಾಜು ಹಾಕುತ್ತಾರೆ ಮತ್ತು "ಈ ಕಾಲಮಾನದಲ್ಲಿ ನಮ್ಮ ಆಸುಪಾಸಿನಲ್ಲಿ ಇಷ್ಟು ವ್ಯಾಪಕವಾದ ಕಾವ್ಯ ರಚನೆಯಾದದ್ದು ಅಪರೂಪ" ಎಂದು ಅಭಿಪ್ರಾಯಪಡುತ್ತಾರೆ.ಮುಖಪುಟ

ತಮ್ಮ ಪತ್ರಿಕೆಯಲ್ಲಿ ಲಂಕೇಶರು "ಟೀಕೆ-ಟಿಪ್ಪಣಿ" ಎಂದು ಬರೆಯುತ್ತಿದ್ದರು. ಅದು ಈಗಾಗಲೇ ಪುಸ್ತಕರೂಪದಲ್ಲಿ ಹೊರಬಂದಿದೆ. ಅದು ಕೂಡ ಒಂದು ಪ್ರಜ್ಞಾವಂತ ಮನಸ್ಸಿಗೆ ಹಿಡಿದ ಕನ್ನಡಿಯಾಗಿದೆ. ಅವುಗಳನ್ನು ಲಂಕೇಶರ ಬ್ಲಾಗ್ ಅನ್ನಬಹುದು. ಆದರೆ ಅದಕ್ಕಿಂತ, ತುಂಬಾ ಭಿನ್ನವಾಗಿ, ಕಲಾತ್ಮಕವಾಗಿ, ಕಾವ್ಯಮಯವಾಗಿ "ನೀಲು" ಮೂಲಕ ಲಂಕೇಶರು ಮಾತಾಡಿದ್ದಾರೆ. ಕೆಲವು ಸಲ ತಮ್ಮ ಸ್ವಂತ ಅನಿಸಿಕೆಯನ್ನೂ ನೀಲುವಿನ ಮಾತಿನ ಚೂಪಿಗೆ ಒಡ್ಡಿದ್ದಾರೆ, ಟೀಕಿಸಿಕೊಂಡಿದ್ದಾರೆ ಎನ್ನುವುದು ನನ್ನೊಬ್ಬನ ಅನಿಸಿಕೆ ಇರಲಾರದು . ಲಂಕೇಶರು ತಮ್ಮನ್ನು ತಾವು ಮೀರುತ್ತಿದ್ದ ರೀತಿಯದು ಎಂದು ಬಗೆಯುತ್ತೇನೆ. ಹಾಗಾಗಿಯೇ "ನೀಲು" ಎಂಬ ತಮ್ಮ ಮತ್ತೊಂದು ಬದಿಯನ್ನು ಮುಖ್ಯವಾಗಿ ತಮ್ಮನ್ನು ತಾವು ಮೀರುವ ತಂತ್ರವಾಗಿ ಲಂಕೇಶರು ಬಳಸಿದ್ದಾರೆ. ಅದಕ್ಕೇ ನನಗೆ "ನೀಲು" ಪದ್ಯಗಳೂ ಒಂದು ರೀತಿಯ ನಿಯತಕಾಲಿಕ ಬ್ಲಾಗ್‌ನಂತೆ ಕಾಣುತ್ತದೆ. ಇತ್ತೀಚೆಗೆ ನಾನು ನನ್ನ ಬ್ಲಾಗುಗಳಿಗೆ ಬೇರೆ ಬೇರೆ ರೂಪಕೊಡುವ ಪ್ರಯತ್ನಪಟ್ಟಿದ್ದೇನೆ. ಆ ಪ್ರಯತ್ನಕ್ಕೂ, ಕೇಶವ ಕುಲಕರ್ಣಿಯವರ "ನೀಲುಗಳು" ಎಂಬ ತಲೆಪಟ್ಟಿಗೂ, ಲಂಕೇಶರ "ನೀಲು ಕಾವ್ಯ"ದ ಪ್ರಕಟಣೆಗೂ ಒಂದು ರೀತಿಯ ಯೋಗಾಯೋಗ ಸಂಬಂಧವಿದೆಯೇ ಎಂದು ಅಚ್ಚರಿಪಡುತ್ತಿದ್ದೇನೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಪುಸ್ತಕ ನಿಧಿ - ರಾಶಿ ರಾಶಿ ರುಗ್ವೇದ !

ಋಗ್ವೇದವನ್ನು world heritage ಎಂದೇನೋ ಗುರುತಿಸಿದ್ದಾರಂತೆ . Digital library of India ದಲ್ಲಿ ಸಾವ್ಸಾವ್ರ ಪುಟಗಳ ಮೂವತ್ತು ಸಂಪುಟಗಳು ಇವೆ.
ಚೆನ್ನಾಗಿ ಇರುವ ಹಾಗಿದೆ.
ಹೌದು ಒಟ್ಟು ೩೦೦೦೦ ಪುಟ!

ಮೊದಲನೆಯದರ ಕೊಂಡಿ ಇಲ್ಲಿದೆ
http://dli.iiit.ac.in/cgi-bin/Browse/scripts/use_scripts/advnew/metainfo...

ಉಳಿದ ಸಂಪುಟಗಳಿಗೆ Rxgveida ಎಂದು ಹುಡುಕಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

'ಸಲ್ಲಾಪ' - ಕನ್ನಡಸಾಹಿತ್ಯ.ಕಾಂ ನಿಂದ ಮತ್ತೊಂದು ಪ್ರಥಮ

http://www.kannadasaahithya.com                                 http://www.kanlit.com

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಒಳ್ಳೆಯ ಕನ್ನಡ ಪುಸ್ತಕಗಳು - ನನ್ನ ಪಟ್ಟಿ

ಈವರೆಗೆ ನಾನು ಓದಿ ಮೆಚ್ಚಿಕೊಂಡು ಮತ್ತೆ ಮತ್ತೆ ಓದಬಯಸುವ ಕನ್ನಡ ಪುಸ್ತಕಗಳ ಪಟ್ಟಿಯನ್ನು ಇಲ್ಲಿ ಕೊಡುತ್ತಿದ್ದೇನೆ. ಓದಿನ ಸುಖಕ್ಕೆ ನಿಮಗೆ ಶಿಫಾರಸು ಮಾದುತ್ತಿದ್ದೇನೆ .ನೀವೂ ಓದಿ ನೋಡಿ.

ಬಿ.ಜಿ.ಎಲ್ ಸ್ವಾಮಿಯವರ
ಕಾಲೇಜುರಂಗ ,
ಕಾಲೇಜುತರಂಗ ,
ಪ್ರಾಧ್ಯಾಪಕನ ಪೀಠದಲ್ಲಿ ,
ತಮಿಳು ತಲೆಗಳ ನಡುವೆ ,
ಹಸಿರು ಹೊನ್ನು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1.7 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಪುಸ್ತಕ