ನಾಟಕ

ಅತೀತ - ನಾಟಕ ವಿಮರ್ಶೆ

ಎಸ್.ಎನ್.ಸೇತುರಾಮ್ ಅವರ ರಚನೆ-ನಿರ್ದೇಶನದಲ್ಲಿ ಮೂಡಿಬಂದ ಒಂದು ಅಪೂರ್ವ ನಾಟಕ 'ಅತೀತ'. ಅತೀತ ಎಂಬುದರ ಅರ್ಥ ಕ್ರಮತಪ್ಪಿದ ನಡತೆ ಅಥವ ಮೀರಿದ ಎಂದು. ಕ್ರಮತಪ್ಪಿರುವುದಾದರು ಯಾವುದು? ಸಾಮಾಜಿಕ ಮೌಲ್ಯಗಳೊ? ಸಮಾಜದ ಸಮತೋಲನವೊ? ನಮ್ಮ ದರ್ಪ ದುಮ್ಮಾನಗಳೊ? ಜನಪ್ರಿಯತೆಯ ಅಹಂಕಾರ-ಗರ್ವಗಳೊ? ಹೆಣ್ಣಿನ ಸಹನೆಯೊ? ಅವಳ ಅಸಹಾಯಕತೆಯೊ? ಅವಳ ಪ್ರೀತಿ-ಅನುಕಂಪವೊ? ಗಂಡಿನ ಕಾಮವೊ? ಅವನ ದಬ್ಬಾಳಿಕೆಯೊ? ದುಡ್ಡಿನ ಮದವೊ? ಬಡತನವೊ? ಆಸೆಗಳೊ? ಕನಸುಗಳೊ? ಎಲ್ಲಾ ಪ್ರಶ್ನೆಗಳ ಹಾದು ಹೋಗುವ, ತಕ್ಕ ಮಟ್ಟಿಗೆ ಅದರ ಉತ್ತರ ಕೊಡುವ ನಾಟಕ ಅತೀತ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (8 votes)
To prevent automated spam submissions leave this field empty.

ಗಬ್ಬರ್ ಸಿಂಗ್ V 2.0

ಇದು ಕೆಲವು ತಿಂಗಳುಗಳ ಹಿಂದೆ, ನಾನು ಭಾಗವಹಿಸಿದ್ದ , ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದಲ್ಲಿ ನಡೆದ ಒಂದು ಕಿರುನಾಟಕದ ವಿಡಿಯೋ. 

ಅಂತೂ ಇದರ ವಿಡಿಯೋವನ್ನು ಇಲ್ಲಿ ಹಾಕುವುದಕ್ಕಿಂದು ಮುಹೂರ್ತ ಬಂತು. ನೋಡಿ!

ನಾಟಕವನ್ನು ಬರೆದು ನಿರ್ದೇಶಿಸಿದ್ದು ರವೀಂದ್ರ ವಿಶ್ವನಾಥ್

ಸಂಪದಿಗರೊಂದಿಗೆ ಹಂಚಿಕೊಳ್ಳಲು ಇಲ್ಲಿ ಹಾಕಿದ್ದೇನೆ.

‍‍‍-ಹಂಸಾನಂದಿ

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಪುಟ್ಟಮಲ್ಲಿಗೆ ಎಸ್ಟೇಟ್

ಎಷ್ಟೋ ದಿನಗಳಿಂದ ಇಲ್ಲಿ ಏನೂ ಬರೆದಿರಲಿಲ್ಲ. ಅದಕ್ಕೊಂದು ಒಳ್ಳೆಯ ಕಾರಣವೂ ಇದೆ :-)

2014ರ ಜನವರಿ ಮೊದಲವಾರದಲ್ಲಿ ರಂಗದ ಮೇಲೆ ಮೂಡಲಿದೆ

ನಾನು ಬರೆದು ಆಡಿಸುತ್ತಿರುವ ಒಂದು ಕುತೂಹಲಕಾರಿ ಪತ್ತೇದಾರಿ ನಾಟಕ

ಪುಟ್ಟಮಲ್ಲಿಗೆ ಎಸ್ಟೇಟ್

ಸ್ಯಾನ್ ಹೊಸೆ-ಸ್ಯಾನ್ ಫ್ರಾನ್ಸಿಸ್ಕೋ ಪ್ರದೇಶದಲ್ಲಿರುವ ಕನ್ನಡಿಗರೆ, ಬಂದು ನಾಟಕವನ್ನ ನೋಡಿ ಆನಂದಿಸಿ.

ಹಂಸನಾದದ ಬೇರೆಲ್ಲ ಓದುಗರೆ - ನಿಮ್ಮ ಹರಕೆ ನಮ್ಮ ಪ್ರಯತ್ನದ ಮೇಲಿರಲಿ!

 -ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.

ಕ್ರೌರ್ಯ (ನಾಟಕ)

ಅಮ್ಮ: ಹರ್ದಿರೋದನ್ನ ಹೊಲೆಯೋದು ಕಷ್ಟ ಮತ್ತೆ ಬೇಜಾರಿನ ಕೆಲ್ಸ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮತ್ತೆ ಬಂದಿದೆ ನಾಟಕ ಚೈತ್ರ!

 ಚಿಗುರು ತುಂಬಿರೆ ಸುತ್ತ ಮುತ್ತಲು

 

ಮುಗುಳು ತುಂಬಿರೆ ಸಾಲುಮರ ಮ-

 

ಲ್ಲಿಗೆಯ ಕಂಪಿನ ನೆನಪ ತಂದಿರೆ ಕನ್ನಡಿಗರಲ್ಲಿ

 

ನಗುವ ತಾರಲು ಮುದವ ತೋರಲು

 

ಸೊಗವ ತೋರುತ ಮನವನೊಮ್ಮೆಲೆ

 

ಹಗುರವಾಗಿಸೆ ಮತ್ತೆ ಬಂದಿದೆ ನಾಟಕದ ಚೈತ್ರ!

 

ಚಿತ್ರ ಕೃಪೆ: ಪೂರ್ಣಿಮಾ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.5 (2 votes)
To prevent automated spam submissions leave this field empty.

ನಾನು, ನಾಥೂರಾಮ ಮಾತನಾಡುತ್ತಿದ್ದೇನೆ (ನಾಟಕ) - ೨

ಭಗತ್ ಸಿ೦ಗ್: ಪ೦ಡಿತ್ ಇದೇನಾಗಿಹೋಯ್ತು ಲಾಲಾ ಲಜಪರ್ ರಾಯ್ ರ೦ಥ ಹಿರಿಯರ ಕೊಲೆಯನ್ನು ಮಹಾತ್ಮರು ತೀವ್ರಾವಾಗಿ ಖ೦ಡಿಸಲೇ ಇಲ್ಲ. ಬದಲಾಗಿ ಕೇವಲ ಸಾಮಾನ್ಯ ವಿಷಾದವೊ೦ದನ್ನು ಸೂಚಿಸಿ ತಮ್ಮ ಮೌನಕ್ಕೆ ಶರಣಾಗಿಬಿಟ್ಟರಲ್ಲ. ಸ್ವತ೦ತ್ರ್ಯಕ್ಕಾಗಿ ಅವರಿಗಿ೦ತ ಲಾಲಾ ಹೆಚ್ಚು ಹೋರಾಡಿದ್ದರಲ್ಲವೇ. ಅವರಿಗೆ ಸಿಗಬೇಕಾದ ಮರ್ಯಾದೆಯೇ ಸಿಗಲಿಲ್ಲ. ಇದೆ೦ಥಾ ಅನ್ಯಾಯ. ಇದಕ್ಕೆ ಸೇಡು ತೀರಿಸಿಕೊಳ್ಳಲೇ ಬೇಕು.


ಅಜಾದ್ : ನಾನೂ ಅದರ ಬಗ್ಗೆಯೇ ಯೋಚಿಸುತ್ತಿರುವೆ. ಆದರೆ ಮಾಹಾತ್ಮರಿಗೆ ಯಾವ ಮಾತನ್ನೂ ಹೇಳುವುದೂ ಬೇಡ. ಅವರು ನಮ್ಮ ಪಾಲಿಗೆ ಇದ್ದು ಇಲ್ಲದ೦ತೆಯೇ. ಸುಮ್ಮನೆ ಅಹಿ೦ಸೆಯೆ೦ಬ ಪದಕ್ಕೆ ಜೋತುಬಿದ್ದು ಇಷ್ಟು ದಿವಸ ನಮ್ಮನ್ನು ಬ್ರಿಟಿಷರ ಕೈಯಲ್ಲಿ ನರಳುವ೦ತೆ ಮಾಡಿದರು. ನಾವು ಯುವಕರು ಇನ್ನಾದರೂ ಎಚ್ಚೆತ್ತುಕೊಳ್ಳಲೇಬೇಕು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಾನು, ನಾಥೂರಾಮ ಮಾತನಾಡುತ್ತಿದ್ದೇನೆ (ನಾಟಕ) - ೧

ಆತ್ಮೀಯರೇ


ಈ ನಾಟಕದ ಪ್ರೇರಣೆ ಮರಾಠಿಯ ’ಮೆ ನಾಥೂರಾಮ್ ಬೋಲ್ತೋಯ್’ ಎ೦ಬ ನಾಟಕ. ಆ ನಾಟಕದ ಕೆಲವು ಸಾಲುಗಳನ್ನು ಇಲ್ಲಿ ಉಪಯೋಗಿಸಿಕೊ೦ಡಿದ್ದೇನೆ. ಮಿಕ್ಕ೦ತೆ ಇಡೀ ನಾಟಕ ನನ್ನ ಕಲ್ಪನೆಯ೦ತೆ ಸಾಗುತ್ತಾ ಹೋಗಿದೆ. ಇದರ ಮೊದಲ ಕ೦ತು ನಿಮ್ಮ ಮು೦ದೆ ಇಡುತ್ತಿದ್ದೇನೆ. ಓದಿ ಪ್ರತಿಕ್ರಿಯಿಸಿ. ನಾಟಕದಲ್ಲಿ ಪದಗಳು ಭಾವಗಳು ಪದೇ ಪದೇ ಬ೦ದ೦ತಾಗಿದೆ ಎ೦ದು ನನ್ನ ಅನಿಸಿಕೆ ಅದನ್ನು ಸರಿ ಪಡಿಸಲು ಪ್ರಯತ್ನ ಪಟ್ಟೆ ಸಾಧ್ಯವಾಗಲಿಲ್ಲ. ಅದಕ್ಕೆ ಕ್ಷಮೆ ಇರಲಿ


***************************


(ರ೦ಗದ ತು೦ಬಾ ಕತ್ತಲು ಆವರಿಸಿಕೊ೦ಡಿದೆ. ಸಣ್ಣದೊ೦ದು ದೀಪ ನಾಥೂರಾಮನ ಮೇಲೆ ಬಿದ್ದಿದೆ. ಅವನು ಪ್ರೇಕ್ಷರಿಗೆ ಹಿಮ್ಮುಖವಾಗಿ ನಿ೦ತಿದ್ದಾನೆ. ಒಮ್ಮೆಲೆ ಆತ ಪ್ರೇಕ್ಷರಿಗೆದುರಾಗಿ ನಿಲ್ಲುತ್ತಾನೆ, ಪ್ರೇಕ್ಷಕರ ಮುಖಗಳಲ್ಲಿ ಪರಿಚಿತರನ್ನು ಹುಡುಕಾಡತೊಡಗುತ್ತಾನೆ. ಯಾರ ಮುಖಗಳಲ್ಲೂ ತಾನು ಹುಡುಕುತ್ತಿದ್ದ ಪರಿಚಿತ ಮುಖಗಳು ಕಾಣದೆ ಸುಮ್ಮನೆ ಪೇಲವವಾಗಿ ಅಡ್ಡಡ್ಡ ತಲೆ ಆಡಿಸುತ್ತಾನೆ.)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.8 (6 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಮ ಧ್ರುವಗಳು ಪರಸ್ಪರ ವಿಕರ್ಷಿಸುತ್ತವೆ

LIKE POLES REPEL EACH OTHER

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಾಟಕ ಚೈತ್ರ ೨೦೧೦

ಒಂದಷ್ಟು ದಿನಗಳಿಂದ ನನ್ನ ಎಷ್ಟೋ ಮಾಮೂಲಿ ಕೆಲಸಗಳಿಗೆಲ್ಲ ಕತ್ತರಿ ಹಾಕಬೇಕಾಗಿ ಬಂದಿತ್ತು. ಕಾರಣ ನಾಟಕ ಚೈತ್ರ ೨೦೧೦!

ಚೈತ್ರ ಕಳೆದು ವೈಶಾಖವೂ ಕಳೆದಮೇಲೆ ಇನ್ನೇನು ಮತ್ತೆ ಚೈತ್ರ ಅಂತೀರಾ? ಅದು ಹಾಗಲ್ಲ. ಚೈತ್ರ ಅಂದ್ರೆ ಚಿಗುರು. ಚಿಗುರು ಅಂದ್ರೆ ಹೊಸತು. ಹಾಗಾಗಿ ಹೊಸದಾಗಿ ಏನು ಯೋಚಿಸಿದ್ರೂ ಮಾಡಿದ್ರೂ ಅದನ್ನ ಚೈತ್ರ ಅಂದ್ರೆ ಅದರಲ್ಲೇನಿದೆ ತಪ್ಪು? ಅಲ್ವಾ? ಅಷ್ಟೇ ಅಲ್ಲದೆ ಈ ನಾಟಕ ಚೈತ್ರಕ್ಕೆ ತಾಲೀಮು ಶುರು ಮಾಡಿದ್ದಂತೂ ಚೈತ್ರದಲ್ಲೇ.

ಸುಮಾರು ೨+ ತಿಂಗಳು ನಡೆಸಿದ ಅಭ್ಯಾಸದ ನಂತರ ನೆನ್ನೆ ಸ್ಯಾನ್ ಹೊಸೆಯ ಮೌಂಟ್ ಪ್ಲೆಸೆಂಟ್ ಪ್ರೌಢ ಶಾಲೆಯ ರಂಗ ಮಂದಿರದಲ್ಲಿ ಎರಡು ನಾಟಕಗಳನ್ನು ಆಡಿದ್ದಾಯಿತು. ಒಂದು ಟಿ ಎನ್ ಸೀತಾರಾಮರ ’ನಮ್ಮೊಳಗೊಬ್ಬ ನಾಜೂಕಯ್ಯ’ ಮತ್ತೆ ಮತ್ತೊಂದು ಡುಂಡಿರಾಜರ ’ಕೊರಿಯಪ್ಪನ ಕೊರಿಯೊಗ್ರಫಿ’.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.

ರಂಗಾಯಣದಲ್ಲೊಂದು ಸಂಜೆ

ಕಳೆದ ಭಾನುವಾರ, ಕೆಲ್ಸ, ಜೀವನದ ಮಧ್ಯ ತಲೆ ಕೆಡ್ಸಕೊಂಡು ಇದ್ದಾಗ ಸ್ನೇಹಿತರೊಬ್ರು
ಫೋನಾಯಿಸಿ ರಂಗಾಯಣಕ್ಕೆ ನಾನು ಹೋಗೇ ಇಲ್ಲ, ಸಂಜೆ ಹೋಗೋಣ ಅಂತಿದ್ದೀನಿ ಅಂದ್ರು. ಸರಿ,
ನಾನು ಬರ್ತೀನಿ ಅಂದೆ. ಸಂಜೆ ಹೊತ್ತಿಗೆ ಮತ್ತೊಬ್ಬ ಸ್ನೇಹಿತ ಬಂದು ನಾನು ಬರ್ತೀನಿ,
ಆದ್ರೆ ಈಗ್ಲೇ ಹೋಗ್ಬೇಕು ಕುಕ್ಕರಹಳಳಿ ಕೆರೆ ಸುತ್ತ ಒಂದು ವಾಕ್ ಮಾಡಿ ಹಾಗಿಂದಾನೇ
ಬರ್ತೀನಿ ಅಂದ್ರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಭಾನುವಾರದ ಮಳೆ, ಪಾಟೀಲರ ನಾಟಕ

ಜಯಲಕ್ಷ್ಮಿ ಪಾಟೀಲರು 'ನನ್ನದೊಂದು ನಾಟಕ ಇದೆ' ಎಂದು ಬರೆದದ್ದು ಸಮುದಾಯದ ಹೊಸಬರಲ್ಲಿ ಅಚ್ಚರಿ ಮೂಡಿಸಿರಲಿಕ್ಕೂ ಸಾಕು. ನಾಟಕದ ಕುರಿತು ನಡೆಸಿಕೊಡುತ್ತಿರುವವರೇ ಬರೆದು ಆಮಂತ್ರಣ ನೀಡುವುದು ಹಲವರಿಗೆ ಹೊಸತೆನಿಸಬಹುದು. ಆದರೆ ಹಲವು ವರ್ಷಗಳ ಕಾಲ ಹಲವು ಸಮುದಾಯಗಳಲ್ಲಿ ಪಾಲ್ಗೊಂಡವರಿಗೆ ಗೊತ್ತಿರುತ್ತದೆ, ಎಲ್ಲರೊಂದಿಗೆ ಬೆರೆತು ಎಲ್ಲರನ್ನೂ ಆಮಂತ್ರಿಸುವ ಈ ರೀತಿ ಸಮುದಾಯಗಳಲ್ಲಿ ಹೊಸತೇನಲ್ಲ ಎಂಬುದು. ಸಮುದಾಯದಲ್ಲಿ ಸಮಾನತೆ ಕಾಣಿಸುವ ಹಲವು ವಿಷಯಗಳಲ್ಲಿ ಇದೂ ಒಂದು.

ಅಂದು 'ನಾಟಕ ಇದೆ, ಬನ್ನಿ' ಎಂದು ಬರೆದ ಲೇಖನ ಸರಿಯಾಗಿ ಪ್ರಕಟವಾಗಿಲ್ಲವೆಂದು ಜಯಲಕ್ಷ್ಮಿಯವರು ಸಂಪರ್ಕಿಸಿದಾಗ ಅದನ್ನು ಸರಿಪಡಿಸುವುದು ಹೇಗೆಂದು ತಿಳಿಸಿ "ನಾವೂ ಬರುತ್ತೇವೆ" ಅಂದಿದ್ದೆ. "ಬರ್ತೀರಾ?" ಎಂದು ಎರಡೆರಡು ಸಾರಿ ಕೇಳಿದ್ದರು, ಇವರೆಲ್ಲ ಕಂಪ್ಯೂಟರ್ ಬಿಟ್ಟು ಹೊರಗೆ ಹೋಗುವುದೇ ನಂಬಲಾಗದು ಎಂಬಂತೆ.

ಭಾನುವಾರ ಬಂತು, ನಾಟಕ ನೋಡೋಕೆ ಹೊರಟಿದ್ದೇನೋ ಸೈ, ಆದರೆ ಎಂದಿನಂತೆ ನಮ್ಮ ಪ್ರೋಗ್ರಾಮಿನಲ್ಲಿ twists ಎಂಡ್ turnsಉ. ಅರವಿಂದ ಮೈಸೂರಿನಿಂದ ಬಂದಿದ್ದ, ಅವ ಹಿಂದಿನ ದಿನ ಫೋನ್ ಮಾಡಿ "ಶ್ರೀನಗರದಲ್ಲಿದೀನಿ, ಸಿಗೋಣ್ವ?" ಅಂದಿದ್ದ.

ದಾರಿಯುದ್ದಕ್ಕು ಮಳೆ ಬೇರೆ ಭೋರ್ ಎಂದು ಹೊಡೆಯುತ್ತಿತ್ತು. ಪಾಲನಿಗೆ "ನೀನು ಆಶ್ರಮ ಬಸ್ ಸ್ಟಾಪಿಗೆ ಬಂದುಬಿಡು" ಎಂದು ಹೇಳಿ ಘಂಟೆಗಳೇ ಆಗಿಹೋಗಿತ್ತು. ಅವ ನಾಲ್ಕೈದು ಕಾಫಿ ಕುಡಿಯುತ್ತ, ನಮಗೆ ಕಾಯುತ್ತ ತಾಳ್ಮೆಯನ್ನು ಪರೀಕ್ಷೆಗೆ ಹಚ್ಚಿದ್ದ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಮೃಗತೃಷ್ಣ.. ’ಮಣ್ಣ್ ದ ಲೆಪ್ಪು’

ಮುಂಬಯಿಯ ಸುಪ್ರಸಿದ್ಧ ಸಂಸ್ಥೆ ಕರ್ನಾಟಕ ಸಂಘದ ’ಕಲಾಭಾರತಿ’ ತಂಡವು ಕಳೆದ ಮೂರು ನಾಲ್ಕು ವರ್ಷಗಳಿಂದ ಪ್ರಸ್ತುತ ಪಡಿಸುತ್ತಿರುವ ಒಂದು ವಿಶೇಷ ನಾಟಕದ ಹೆಸರು ’ಮೃಗತೃಷ್ಣ’. ಖ್ಯಾತ ಲೇಖಕಿ ವಸುಮತಿ ಉಡುಪರು ಈ ನಾಟಕವನ್ನು ರಚಿಸಿದ್ದಾರೆ. ಅತ್ಯಂತ ಸರಳ Narrative ಹೊಂದಿರುವ ಈ ನಾಟಕವು, ಕೆಲವು ಕ್ಲಿಷ್ಟ ಪ್ರಶ್ನೆಗಳನ್ನು ಕೇಳುತ್ತದೆ.

ಭುವನ ವರ್ಮ ಎಂಬ ರಾಜ ಬೇಟೆಗೆಂದು ಕಾಡಿಗೆ ಬಂದಿರುತ್ತಾನೆ. ಅದೇ ಸಮಯದಲ್ಲಿ ದೇವಲೋಕದ ಕನ್ಯೆಯೊಬ್ಬಳು (ಸುಗಂಧಿನಿ), ದೇವಲೋಕದ ಕಟ್ಟುಪಾಡುಗಳನ್ನು ಮೀರಿ, ತನ್ನ ಸಖಿಯೊಂದಿಗೆ ಭೂಲೋಕಕ್ಕೆ ಇಳಿದು ಅದೇ ಅರಣ್ಯಕ್ಕೆ ಬಂದಿದ್ದಾಳೆ. ಕಾಡಿನ ಪಕ್ಕದಲ್ಲಿರುವ ಅಲಕನಂದಾ ನದಿಯ ತೀರದಲ್ಲಿ ಅವರಿಬ್ಬರ ಭೇಟಿಯಾಗಿ, ಪ್ರೇಮಾಂಕುರವಾಗುತ್ತದೆ. ಸುಗಂಧಿನಿ ಗರ್ಭಿಣಿಯಾಗುತ್ತಾಳೆ.

ಮರ್ತ್ಯನೊಬ್ಬನ ಜೊತೆ ಅಂಗಸಂಗ ಮಾಡಿದ್ದಕ್ಕಾಗಿ ಸಿಟ್ಟಿಗೆದ್ದ ದೇವಲೋಕದ ರಾಜ, ತನ್ನ ಮಗಳು ಸುಗಂಧಿನಿಯನ್ನು ಹೀಯಾಳಿಸುತ್ತಾನೆ. ಭುವನವರ್ಮನನ್ನು ಮರೆತುಬಿಡುವಂತೆ ಅವಳಿಗೆ ಆದೇಶಿಸುತ್ತಾನೆ. ಆದರೆ ಸುಗಂಧಿನಿ ಆತನ ಮಾತನ್ನು ಒಪ್ಪುವುದಿಲ್ಲ. ಮತ್ತೆ ಭೂಲೋಕಕ್ಕೆ ತೆರಳಿ, ತಾನು ಪ್ರೀತಿಸಿದ ರಾಜನ ಜೊತೆಯೇ ಬದುಕುವೆ ಎನ್ನುತ್ತಾಳೆ. ಅವಳ ತಾಯಿಯೂ (ದೇವಲೋಕದ ರಾಣಿ) ಆಕೆಯನ್ನು ಸಮರ್ಥಿಸಿದಾಗ, ದೇವತಾ ರಾಜ ಸುಗಂಧಿನಿಯನ್ನು ಮತ್ತೆ ಭೂಲೋಕಕ್ಕೆ ಕಳುಹಿಸಿಕೊಡಲು ಒಪ್ಪಿಗೆ ನೀಡುತ್ತಾನೆ. ಭುವನವರ್ಮನಿಗೆ ’ಚಿರಂಜೀವಿತ್ವದ’ ವರವನ್ನೂ ನೀಡುತ್ತಾನೆ. ಆದರೆ ಅವನದ್ದೊಂದು ಶರತ್ತು ಇದೆ. ಪ್ರೀತಿಯು ಮಾಸಿ, ಭೂಲೋಕದ ಸಹವಾಸ ಸಾಕು ಎನಿಸಿ ಆಕೆ ಮರಳಿ ದೇವಲೋಕಕ್ಕೆ ಬಂದರೆ, ಪುನಹ ಆಕೆ ಭೂಲೋಕಕ್ಕೆ ತೆರಳುವಂತಿಲ್ಲ ಎಂಬುದು. ಆ ಶರತ್ತನ್ನು ಮನಸಾರೆ ಒಪ್ಪಿ, ತಾನು ಪ್ರೀತಿಸುವ ರಾಜನಿಗೆ ’ಅಮರತ್ವದ’ ವರ ಸಿಕ್ಕಿದ್ದನ್ನು ಕೇಳಿ, ಸುಗಂಧಿನಿ ಅತ್ಯಂತ ಸಂತಸದಿಂದ ಭೂಲೋಕಕ್ಕೆ ಮರಳಿ, ಭುವನವರ್ಮನ ಜೊತೆ ಸಂಸಾರ ನಡೆಸುತ್ತಾಳೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಾಡುತ್ತಿರುವ ಒಂದು ಪ್ರಶ್ನೆಗೆ ಉತ್ತರಿಸಿ..ಪ್ಲೀಸ್

ಮುಂಬಯಿಯ ಕರ್ನಾಟಕ ಸಂಘದಲ್ಲಿ ಎರಡು ದಿನಗಳ ಅಖಿಲ ಭಾರತ ಕುವೆಂಪು ಸ್ಮಾರಕ ಏಕಾಂಕ ನಾಟಕ ಸ್ಪರ್ಧೆ ನಡೆಯಿತು.. ಈ ಬಾರಿ ’ಕೋಮು ಸೌಹಾರ್ದ’ ಎಂಬ ವಿಷಯವನ್ನು ನೀಡಲಾಗಿತ್ತು. ಅಂದರೆ ಎಲ್ಲ ನಾಟಕಗಳ ವಸ್ತು ’ಕೋಮು ಸೌಹಾರ್ದತೆ’ ಆಗಿರಬೇಕು ಎಂಬುದು. ಮೊದಲ ದಿನ (೨೧-೦೨-೨೦೦೯) ಭದ್ರಾವತಿಯ ಎಂ.ಪಿ.ಎಂ ಕಲಾವಿದರು ’ಒಬ್ಬನೇ ಚಂದಿರ’ ಅನ್ನುವ ನಾಟಕವನ್ನು ಪ್ರದರ್ಶಿಸಿದರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಮಷ್ಟಿ ನಾಟಕೋಟ್ಸವ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಬೆಂಗಳೂರು ಹಬ್ಬ ಇವರ ಸಹಯೋಗದಲ್ಲಿ

"ಸಮಷ್ಟಿ" ನಾಟಕೋಟ್ಸವ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

’ನೀ ಮಾಯೆಯೊಳಗೋ?... ನಿನ್ನೊಳು ಮಾಯೆಯೋ?’

ನಮ್ಮಲ್ಲಿ ಶ್ರೀರಂಗರನ್ನೂ, ಅವರ ನಾಟಕಗಳನ್ನೂ ಸಾರಾಸಗಟಾಗಿ ತಳ್ಳಿ ಹಾಕುವ, ತೆಗಳುವ ಹಲವಾರು ನಿರ್ದೇಶಕರಿದ್ದಾರೆ. ನಯಾ ಪೈಸೆ ಉಪಯೋಗವಿಲ್ಲದ ನಾಟಕಶಾಲೆಗಳಲ್ಲಿ ನಿರ್ದೇಶನವನ್ನು ಕಲಿತು (?) ಬಂದಿರುವ ಈ ಮಹಾಶಯರಿಗೆ ಶ್ರೀರಂಗರ ನಾಟಕಗಳೆಂದರೆ ಅದೇಕೋ ಅಲರ್ಜಿ-ಅಸಡ್ಡೆ. ನಿರ್ದೇಶಕನು ಮಾಡಬೇಕಾದ ಕ್ರಿಯೆಗಳನ್ನು, ಶ್ರೀರಂಗರು ತಾವೇ, ನಾಟಕ ರಚನೆಯ ವೇಳೆಯಲ್ಲಿ ಮಾಡಿಬಿಡುತ್ತಾರೆ, ಬ್ರಾಕೆಟ್ ನಲ್ಲಿ ನಿರ್ದೇಶನವನ್ನು ಮಾಡಿರುತ್ತಾರೆ ಎಂಬುದು ಇವರ ತಾತ್ಸಾರಕ್ಕೆ ಕಾರಣ. ಇತ್ತೀಚೆಗೆ ರಾಷ್ಟ್ರೀಯ ನಾಟಕ ಶಾಲೆಯಲ್ಲಿ (ಎನ್.ಎಸ್.ಡಿ) ಕಲಿಸುವ ಹಿರಿಯ ನಿರ್ದೇಶಕರೊಬ್ಬರು ಶ್ರೀರಂಗರನ್ನು ಸಾರಾಸಗಟಾಗಿ ಬಯ್ಯುವಾಗ ತಡೆದುಕೊಳ್ಳಲಾಗಲಿಲ್ಲ. ಒಂದು ಸಣ್ಣ ವಾಗ್ವಾದವೇ ನಡೆಯಿತು. ಅವರು ವಯಸ್ಸಿನಲ್ಲೂ, ಅನುಭವದಲ್ಲೂ ಸಾಕಷ್ಟು ಹಿರಿಯರು ಎಂಬ ಒಂದೇ ಕಾರಣದಿಂದ ವಾದವನ್ನು ಜಗಳದ ಮಟ್ಟಕ್ಕೆ ಏರಿಸಲಿಲ್ಲ ನಾನು. ಶ್ರೀರಂಗರನ್ನಷ್ಟೇ ಬಯ್ದಿದ್ದರೆ ಮುಗಿದುಹೋಗಿರುತ್ತಿತ್ತೇನೋ, ಆದರೆ ಆ ಮಹಾಶಯರು Authorial Intention ಅನ್ನುವುದೇ ಅಪ್ರಸ್ತುತ ಅನ್ನುವಂಥ ಒಂದು silly ಮಾತನ್ನು ಹೇಳಿದರು. ಅಂದರೆ ಈ ನಿರ್ದೇಶಕರ ಪ್ರಕಾರ "ನಾಟಕಕಾರನೊಬ್ಬ, ತನ್ನ ನಾಟಕದ ಮೂಲಕ ಏನು ಹೇಳಬಯಸುತ್ತಾನೋ, ಅದು ಅಪ್ರಸ್ತುತ. ನಾಟಕದ ರಚನೆ ಆದ ನಂತರ, ನಾಟಕಕಾರನಿಗೆ ಅದರ ಮೇಲೆ ಯಾವುದೇ ಹಕ್ಕಿರುವುದಿಲ್ಲ. ಆ ನಾಟಕವನ್ನು ಪ್ರದರ್ಶಿಸಲು ಕೈಗೆತ್ತಿಕೊಂಡ ನಿರ್ದೇಶಕನು, ಅದನ್ನು ತನಗೆ ಬೇಕಾದ ಹಾಗೆ interpret ಮಾಡಿಕೊಳ್ಳಬಹುದು".

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಂಸ ನಾಟಕಗಳೆಂದರೆ ‘ಮನ್ದಮಾರುತನ ಖೇಲನಗಳು...’

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹುರುಪುಳ್ಳವರಿಗೆ ಮಾಡಲಾಗದ್ದೇನು?

ಉರಿಯ ಹುಟ್ಟಿಸಬಹುದು ಕಟ್ಟಿಗೆಯ ಕಡೆದು
ನೀರ ಚಿಮ್ಮಿಸಬಹುದು ನೆಲವನಗೆದು
ಹುರುಪುಳ್ಳವರಿಗೆ ಮಾಡಲಾಗದು ಉಂಟೆ?
ಸರಿಯಾದ ಜತನಗಳು ಹಣ್ಣೇ ಆಗುವುವು!

ಸಂಸ್ಕೃತ ಮೂಲ: - ಭಾಸನ ಪ್ರತಿಜ್ಞಾ ಯೌಗಂಧರಾಯಣ ನಾಟಕದಿಂದ

ಕಾಷ್ಠಾದಗ್ನಿರ್ಜಾಯತೇ ಮಥ್ಯಮಾನಾತ್
ಭೂಮಿಸ್ತೋಯಂ ಖನ್ಯಮಾನಾ ದದಾತಿ
ಸೋತ್ಸಾಹಾನಾಂ ನಾಸ್ತ್ಯಸಾಧ್ಯಂ ನರಾಣಾಂ
ಮಾರ್ಗಾರಬ್ಧಾಃ ಸರ್ವಯತ್ನಾಃ ಫಲಂತಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಕರ್ಣ ರಸಾಯನ

ಕೆಲವು ವರ್ಷಗಳ ಹಿಂದೆ ನಮ್ಮ ಕನ್ನಡ ಕೂಟವು ನಡೆಸಿದ ಕನ್ನಡೋತ್ಸವದಲ್ಲಿ ನಾನು ನಾಟಕವೊಂದನ್ನು ಬರೆದು ಆಡಿಸಿದ್ದೆ. ಇದೊಂದು ತರಹದ ಹೊಸ ಪ್ರಯೋಗವಾಗಿತ್ತು. ಕರ್ನಾಟಕ ಎರಡು ಕಲೆಗಳಾದ ಗಮಕ ವಾಚನ ಮತ್ತು ಯಕ್ಷಗಾನ ಇವೆರಡೂ ಬೆರೆಸಿ ಮಾಡಿಸಿದ ನೃತ್ಯನಾಟಕ ಇದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ನಾಟಕ ಬೆಂಗ್ಳೂರು 08

ನಮ್ಮ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ರಾಷ್ಟ್ರೀಯ ನಾಟಕ ಶಾಲೆ, ಪ್ರಾದೇಶಿಕ ಸಂಪನ್ಮೂಲ ಕೆಂದ್ರ ಬೆಂಗಳೂರು ಇವರುಗಳು ರವಿಂದ್ರ ಕಲಾ ಕ್ಷೇತ್ರದಲ್ಲಿ ನಾಟಕ ಬೆಂಗ್ಳೂರು 08 ರಂಗಭೂಮಿ ಸಂಭ್ರಮ ನಡೆಸುತ್ತಿದ್ದಾರೆ. ಇದರಲ್ಲಿ ನಮ್ಮ ಕನ್ನಡದ ಹೆಸರಾಂತ ತಾಟಕ ತಂಡಗಳು ತಮ್ಮ ಅಭಿನಯವನ್ನು ಮಾಡುತ್ತಿದ್ದಾರೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಮಿಸ್.ಸದಾರಮೆ

ಇಂದು ಸಂಜೆ ರವಿಂದ್ರ ಕಲಾ ಕ್ಷೇತ್ರದಲ್ಲಿ ನಮ್ಮ ಸ್ನೇಹಿತರ ಅಹ್ವಾನದಿಂದ ನಾಟಕ ನೋಡಲು ಹೋದೆ ಅಲ್ಲಿ ನಾಟಕ ಬೆಂಗ್ಳೂರು 2008 ರಂಗಭೂಮಿ ಸಂಭ್ರಮ ನಡಿತಾ ಇತ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.

ಪುಸ್ತಕ ನಿಧಿ - ಶ್ರೀ ಗಿರೀಶ್ ಕಾರ್ನಾಡರ ತುಘಲಕ್ ನಾಟಕ

ಜ್ಞಾನಪೀಠ ಪ್ರಶಸ್ತಿವಿಜೇತ ಕನ್ನಡ ನಾಟಕಕಾರ ಶ್ರೀ ಗಿರೀಶ್ ಕಾರ್ನಾಡರ ತುಘಲಕ್ ನಾಟಕ ಇಲ್ಲಿದೆ .
http://dli.iiit.ac.in/cgi-bin/Browse/scripts/use_scripts/advnew/metainfo...
ಪುಸ್ತಕ ಚಿಕ್ಕದಿದೆ .
ಚೆನ್ನಾಗಿದೆ
ಓದಿ .

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.8 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಜೋಕುಮಾರಸ್ವಾಮಿ : ಹೊಗೆ ಇಲ್ಲದ ಬೆಂಕಿಯ ಹುಡುಕಾಟದಲ್ಲಿ

-೧-
ಜೋಕುಮಾರಸ್ವಾಮಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ೧೯೭೨ರಲ್ಲಿ ಪ್ರದರ್ಶನಗೊಂಡಿತು. ಬಿ.ವಿ.ಕಾರಂತರ ನಿರ್ದೇಶನದಲ್ಲಿ, ಚಂದ್ರಶೇಖರ ಕಂಬಾರ ಸಂಗೀತದಲ್ಲಿ ಕನ್ನಡ ರಂಗಭೂಮಿಗೆ ಹೊಸ ತಿರುವು, ಹೊಸ ನುಡಿಗಟ್ಟು ಮತ್ತು ಹೊಸ ಚೇತನವನ್ನು ನೀಡಿದ ಪ್ರದರ್ಶನವದು. ನಂತರ ಎಂಬತ್ತರ ದಶಕದಲ್ಲೂ ಬೆಂಗಳೂರಿನ "ಬೆನಕ" ತಂಡದವರು ಅದನ್ನು ನೂರಾರು ಬಾರಿ ಆಡಿದರು, ಈಗಲೂ ಆಡುತ್ತಿದ್ದಾರೆ. ಎಂಬತ್ತರ ದಶಕದಲ್ಲಿ ಜೋಕುಮಾರಸ್ವಾಮಿಯ ಹೆಚ್ಚು ಕಡಿಮೆ ೫೦-೬೦ ಪ್ರದರ್ಶನಗಳಲ್ಲಿ ನಾನು ತೊಡಗಿಕೊಂಡಿದ್ದೆ. ಮೇಳದಲ್ಲಿ ಹಾಡುಗಾರನಾಗಿ, ಗೌಡನ ಆಳುಗಳಲ್ಲಿ ಒಬ್ಬನಾಗಿ, ರಂಗಸಜ್ಜಿಕೆಯಲ್ಲಿ ಹೀಗೆ ನಾನಾ ರೀತಿಯಲ್ಲಿ. ಆಗ ಅದು ನನಗೆ ತುಂಬಾ ಖುಷಿಕೊಟ್ಟ ಅನುಭವ. ಒಂದು ನಾಟಕವನ್ನು ಮತ್ತೆ ಮತ್ತೆ ಮಾಡುವಾಗ ಬರುವ ಅನುಭವ ಬೇರೆಯೇ ರೀತಿಯದು. ನಾಟಕದ ಕ್ರಿಯೆಗಿಂತ ಅದರ ವಿನ್ಯಾಸದತ್ತ ನಮ್ಮ ಗಮನ ಹರಿಯಲು ಮರು ಪ್ರದರ್ಶನಗಳು ತುಂಬಾ ಸಹಾಯ ಮಾಡುತ್ತವೆ.ಮೇಳ
ಈಗ ೨೦೦೭ರಲ್ಲಿ ಸಿಡ್ನಿ ಕನ್ನಡ ಸಂಘ ಅದೇ ನಾಟಕವನ್ನು ಸಿಡ್ನಿಯಲ್ಲಿ ಮಾಡಲಾಗುತ್ತದೆಯೇ ಎಂದು ನನ್ನನ್ನು ಕೇಳಿದಾಗ ಬಹಳ ಖುಷಿಯಿಂದ ಅದನ್ನು ಒಂದು ಸವಾಲಾಗಿ ತೆಗೆದುಕೊಂಡೆ. ಸವಾಲೇಕೆಂದರೆ, ನಾಟಕಕ್ಕೆ ಬೇಕಾದ ಹಾಡುಗಾರರು ಮತ್ತು ನಟರ ಪೂರ್ವತಯಾರಿಯ ಬಗ್ಗೆ ನನಗೆ ಸ್ಪಷ್ಟ ಅರಿವು ಇದ್ದಿತ್ತು. ಬೆಂಗಳೂರಿನ ಪ್ರದರ್ಶನಗಳಲ್ಲಿ ಯಾವುದು ದತ್ತವಾಗಿತ್ತೋ ಅದನ್ನು ಇಲ್ಲಿ ಮೊದಲ ಬಾರಿಗೆ ಎಂಬಂತೆ ರೂಪಿಸುವ ಅವಶ್ಯಕತೆ ಇತ್ತು.
-೨-
ಮೊತ್ತ ಮೊದಲು ನಾನು ಮಾಡಿದ ನಿರ್ಧಾರವೆಂದರೆ, ಈ ನಾಟಕವನ್ನು ಬಿ.ವಿ.ಕಾರಂತರ ವಿನ್ಯಾಸದಲ್ಲೇ ಮಾಡುವುದು ಮತ್ತು ಅದಕ್ಕೆ ಚಂದ್ರಶೇಖರ ಕಂಬಾರರ ಸಂಗೀತ ಶೈಲಿಯನ್ನೇ ಬಳಸುವುದು ಎಂದು. ಈ ನಿರ್ಧಾರವನ್ನು ನಾಟಕ ಮಾಡಲು ಸುಲಭವಾಗುತ್ತದೆ ಎಂದು ಮಾಡಿಕೊಂಡ ನಿರ್ಧಾರವಲ್ಲ. ಏಕೆಂದರೆ ಆ ವಿನ್ಯಾಸದ ಸವಾಲುಗಳು ನನಗೆ ಚೆನ್ನಾಗಿ ಗೊತ್ತಿದ್ದವು. ಬಹುಶಃ ಬೇರೆಯೇ ವಿನ್ಯಾಸವಾಗಿದ್ದರೆ ಸುಲಭವಾಗಬಹುದಿತ್ತೇನೋ, ಆದರೆ ಮೂಲಕ್ಕೆ ಹೇಳಿ ಮಾಡಿಸಿದಂತಿದ್ದ ಆ ವಿನ್ಯಾಸ ಬಿಟ್ಟು ಬೇರೆ ಬಗೆಯಾಗಿ ಯೋಚಿಸುವುದು ಅನಗತ್ಯ ಅನಿಸಿತ್ತು. ಒಂದು ರೀತಿಯಲ್ಲಿ, ಚಂದ್ರಶೇಖರ ಕಂಬಾರರು ಆ ನಾಟಕವನ್ನು ಬರೆದು, ಆಡಿ, ತಿದ್ದಿ, ಆಡಿ, ತಿದ್ದಿರಬೇಕೆಂದು ನನ್ನ ಗುಮಾನಿ. ಯಾಕೆಂದರೆ, ನಾಟಕ ಮತ್ತು ಅದರ ವಿನ್ಯಾಸ ಅಷ್ಟು ಸೊಗಸಾಗಿ ಒಂದಕ್ಕೊಂದು ಮೇಳೈಸಿಕೊಂಡಿದೆ.

ಗೌಡ-ಗೌಡತಿ
ಸುಮರು ಎರಡು ಗಂಟೆಗೂ ಮೀರಿ ಇರುವ ನಾಟಕವನ್ನು ನಮಗೆ ಒಂದೂವರೆ ಗಂಟೆಯಲ್ಲಿ (ಮುಂದೆ ಅದು ಹಿಗ್ಗಿದರೂ ಕೂಡ) ಮಾಡಬೇಕಾದ ಅನಿವಾರ್ಯವಿತ್ತು. ಅದಕ್ಕೆ ಯಾವ ಭಾಗಗಳನ್ನು ಕೈಬಿಡುವುದೆಂದು ನಿರ್ಧರಿಸುವುದು ಕಷ್ಟವಾಯಿತು. ನಾಟಕ ತುಂಬಾ ಬಿಗಿಯಾಗಿರುವುದೇ ಆ ಕಷ್ಟಕ್ಕೆ ಕಾರಣ. ಒಂದು ದೊಡ್ಡ ಭಾಗವನ್ನು ಬಿಡಬೇಕಾದ ಅನಿವಾರ್ಯವಿತ್ತು. ನಾಟಕದಲ್ಲಿ ಬರುವ ಹೊಲೇರ ಸೂಳಿ ಶಾರಿ, ಗೌಡನ ಡೌಲಿನ ಹುಸಿತನವನ್ನು, ನಪುಂಸಕತೆಯನ್ನು ತೆರೆದಿಡುವ ಒಂದು ವಿಶಿಷ್ಟ ಪಾತ್ರ. ಗೌಡತಿಯ ಮಗುವಿನ ಹಂಬಲವನ್ನು ತೀಕ್ಷ್ಣ ಪರೀಕ್ಷೆಗೆ ಒಡ್ಡುವ ದೃಶ್ಯವಿದೆ. ಏನು ಬೇಕಾದರೂ ತನ್ನ ಮನೆಗೇ ಬಂದು ಬೀಳಿಸಿಕೊಳ್ಳಲು ಸಾಧ್ಯವಿರುವ ಗೌಡತಿ ಜೋಕುಮಾರನಿಗಾಗಿ, ಇನ್ನೊಬ್ಬಳ ಮನೆಗೆ ಬೇಡಿಕೊಂಡು ಹೋಗುತ್ತಾಳೆ. ಅದರಲ್ಲೂ ಆ ಇನ್ನೊಬ್ಬಳು ಸೂಳೆ. ಬೇರೆ ಹೆಂಗಸರು ತನ್ನ ಕಾಲಿಗೆ ಬೀಳುವುದೇ ಅಭ್ಯಾಸವಾಗಿರುವ ಗೌಡತಿ ಮತ್ತೊಬ್ಬಳ ಕಾಲಿಗೆ ಬಿದ್ದು ಬೇಡುತ್ತಾಳೆ. ಅದೂ ಕೂಡ ಒಬ್ಬ ಸೂಳೆಯ ಕಾಲಿಗೆ. ಆ ಎರಡು ಪಾತ್ರಗಳ ಮನೋವ್ಯಾಪಾರದ ದೂರವನ್ನು ಕಾರಂತರ ವಿನ್ಯಾಸದಲ್ಲಿ ಎಷ್ಟು ತೀವ್ರವಾಗಿ ರೂಪಿತವಾಗಿದೆಯೆಂದರೆ ಅದನ್ನು ನೋಡಿಯೇ ಅರಿಯಬೇಕು. ಗೌಡತಿ ಬೇಡುತ್ತಾ ಹಾಡುವ ಹಾಡು ಎಷ್ಟು ಕರುಣಾಜನಕವಾಗಿದೆಯೋ, ಶಾರಿ ಅವಳಿಗೆ ಬಯ್ಯುವುದು, ಹೀಯಾಳಿಸುವುದು ಎಲ್ಲ ಇರುವ ಹಾಡನ್ನು ಮಾತಲ್ಲಿ ಗಡುಸಾಗಿ ಹೇಳಿಸಿ ಅಷ್ಟೇ ಕ್ರೂರವಾಗುವಂತೆ ಮಾಡಿದ್ದಾರೆ. ಗೌಡತಿ ಹಾಡುತ್ತಾ ಬೇಡುತ್ತಾಳೆ, ಶಾರಿ ಹಾಡನ್ನು ಗದ್ಯದಂತೆ ಹೇಳುತ್ತಾ ಹೋಗುತ್ತಾಳೆ. ಈ ದೃಶ್ಯವನ್ನು ಏಕೆ ಇಷ್ಟು ವಿವರಿಸಿದೆನೆಂದರೆ, ಆ ದೃಶ್ಯವನ್ನು ಕೈಬಿಡುವ ನಿರ್ಧಾರ ತೆಳುವಾಗಿ ತೆಗೆದುಕೊಂಡದ್ದಲ್ಲ ಎಂಬುದಕ್ಕಾಗಿ. ನಾಟಕದ ಉದ್ದದ ಕಾರಣವಲ್ಲದೆ ಮತ್ತೊಂದು ಕಾರಣ, ಶಾರಿಯಂಥ ಗಡಸು ಹೆಣ್ಣಿನ ಪಾತ್ರ ಮಾಡಲು ಸಿಡ್ನಿಯಲ್ಲಿ ಯಾರೂ ಸಿಕ್ಕದೇ ಇದುದು. ಸೂಳೆ ಪಾತ್ರದ ಬಗ್ಗೆ ಹಿಂಜರಿಕೆಯಿದ್ದರೂ ಕೂಡ ಒಂದಿಬ್ಬರು ತಾವು ಮಾಡುವುದಾಗಿ ಒಪ್ಪಿಕೊಂಡರು. ಆದರೆ, ಶಾರಿಯ ನಿಜ ಸ್ವರೂಪವನ್ನು ಅವರಿಂದ ಚಿತ್ರಿಸುವುದು ಸಾಧ್ಯವೇ ಎಂದು ತಲೆ ಕೆಡಸಿಕೊಂಡು, ಪ್ರದರ್ಶನಕ್ಕೆ ಅದೇ ದುರ್ಬಲ ದೃಶ್ಯವಾಗುವ ಬದಲು ಅದನ್ನು ಕೈಬಿಡುವುದೇ ಒಳ್ಳೆಯದೆಂದು ನಿರ್ಧರಿಸಿದೆವು.
ಇನ್ನು ಉಳಿದಂತೆ ಗೌಡತಿಗೆ ಜೋಕುಮಾರನ ಮಹಿಮೆಯನ್ನು ವಿವರಿಸುವ ಬಸ್ಸಿಯ ಮಾತುಕತೆಯನ್ನು ಮೊಟಕುಗೊಳಿಸಿದೆವು. ಬಸಣ್ಣ-ಗೌಡತಿ ಒಂದಾಗುವ ದೃಶ್ಯವನ್ನು ಚುರುಕುಗೊಳಿಸಿದೆವು. ಇದಲ್ಲದೆ, ಇಡೀ ನಾಟಕದಲ್ಲಿ ಬರುವ ಗಿಣಿಯ ಸೂಚನೆಗಳನ್ನು ಕೈಬಿಟ್ಟೆವು. ಗಿಣಿಗಾಗಿ ಹಂಬಲಿಸುವ ಗೌಡತಿಯ ಮಾತುಗಳು ಹಲವು ಸ್ತರಗಳಲ್ಲಿ ಕೆಲಸ ಮಾಡುತ್ತದೆ ಎಂದು ಗೊತ್ತಿದ್ದೂ ಅದನ್ನು ಕೈಬಿಡಲು ಕಾರಣ, ಆ ಗಿಣಿಯನ್ನು ಗೌಡತಿ ನುಂಗಿದಳು ಎಂಬ ಮಾತು ಗುರಿಯ ಹೇಳುತ್ತಾನೆ. ಅಲ್ಲಿವರೆಗೆ ಕಟ್ಟಿಕೊಂಡು ಬಂದ ಗಿಣಿಯ ಪ್ರತಿಮೆ ಅಲ್ಲಿ ಯಾಕೋ ಒಡೆದು ಅದು ಯಾವುದಕ್ಕೆ ಪ್ರತೀಕವಾಗುತ್ತದೆ ಎಂದು ಗೊಂದಲವಾಗುತ್ತದೆ. ಹಕ್ಕಿಯ ಪ್ರತೀಕಗಳನ್ನು ಉಳಿಸಿಕೊಂಡು ಗಿಣಿಯ ಮಾತುಗಳನ್ನು ಕೈ ಬಿಟ್ಟೆವು. ಆದಷ್ಟು ಮಟ್ಟಿಗೆ ಹಾಡುಗಳ ಎಲ್ಲ ಸೊಲ್ಲುಗಳನ್ನು ಉಳಿಸಿಕೊಂಡೆವು, ಒಂದೆರಡು ಕಡೆ ಹೊರತುಪಡಿಸಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ನಾಟಕ