ತಂತ್ರಜ್ಞಾನ

My Documents ಫೋಲ್ಡರಿನ target ಬದಲಿಸುವುದು

ವಿಂಡೋಸ್ ಉಪಯೋಗಿಸುವ ಕೆಲವರಿಗೆ ತಮ್ಮ ದಾಖಲೆಗಳನ್ನು "My Documents" ಫೋಲ್ಡರಿನಲ್ಲಿ ಸೇವ್ ಮಾಡಿಟ್ಟುಕೊಳ್ಳುವ ಅಭ್ಯಾಸವಿರುತ್ತದೆ. ಈ "My Documents" ಫೋಲ್ಡರ್‍ ವಿಂಡೋಸ್ ಇರುವ ಡ್ರೈವ್‌ನಲ್ಲೇ ಇರುವುದರಿಂದ ವಿಂಡೋಸ್‌ಗೆ ಏನಾದರೂ ಹಾನಿಯಾದರೆ "My Documents" ಫೋಲ್ಡರಿನರುವ ದಾಖಲೆಗಳನ್ನೂ ಕಳೆದುಕೊಳ್ಳುವ ಅಪಾಯವಿರುತ್ತದೆ. ಆದ್ದರಿಂದ ನಿಮಗೆ "My Documents"ನಲ್ಲಿ ದಾಖಲೆಗಳನ್ನು ಉಳಿಸಿಕೊಳ್ಳುವ ಅಭ್ಯಾಸವಿದ್ದರೆ, ಅದರ Target ಬದಲಾಯಿಸಿಕೊಳ್ಳುವುದು ಒಳ್ಳೆಯದು.

ಅದಕ್ಕಾಗಿ ಮೊದಲು "My Documents" ಮೇಲೆ ರೈಟ್ ಕ್ಲಿಕ್ ಮಾಡಿ, Properties ಆರಿಸಿ.

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬ್ಲಾಗರ್‍ ಟೆಂಪ್ಲೇಟ್‌ನ್ನು restore ಮಾಡುವ ವಿಧಾನ

ಬ್ಲಾಗರ್‌ನಲ್ಲಿರುವ ನಿಮ್ಮ ಬ್ಲಾಗ್‌ನಲ್ಲಿ ಏನೇ ಬದಲಾವಣೆ ಮಾಡಬೇಕಾದರೂ ಮೊದಲು ಈಗಿರುವ ಟೆಂಪ್ಲೇಟ್‌ನ್ನು ಸೇವ್ ಮಾಡಿಟ್ಟುಕೊಳ್ಳಿ, ಇದರಿಂದ ಬದಲಾವಣೆ ಮಾಡಿದ ಮೇಲೆ ಏನಾದರೂ ತೊಂದರೆಯಾದರೆ ಮೊದಲಿದ್ದ ರೂಪಕ್ಕೇ ಬ್ಲಾಗನ್ನು ಮರಳಿಸಬಹುದು.

(ಚಿತ್ರಗಳನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)

ಅದಕ್ಕಾಗಿ ಮೊದಲು ನಿಮ್ಮ ಬ್ಲಾಗರ್‍ ಡ್ಯಾಶ್‌ಬೋರ್ಡ್‌ನಲ್ಲಿ Design ಮೇಲೆ ಕ್ಲಿಕ್ ಮಾಡಿ, ನಂತರ Edit HTML ಒತ್ತಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಅಂಗೈಲೊಂದು ಪುಸ್ತಕಾಲಯ

ಇಂದಿನ ವಿಜಯ ಕರ್ನಾಟಕದ ಲವ್ ಲವಿಕೆಯಲ್ಲಿ ಪ್ರಕಟವಾದ  ನನ್ನ ಲೇಖನದ ಅಂತರ್ಜಾಲ ಪುಟ ಇಲ್ಲಿ ಲಭ್ಯವಿದೆ.

(ಮೂಲ ಪ್ರತಿ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (9 votes)
To prevent automated spam submissions leave this field empty.

ಗೂಗಲ್ ಗಾಗಲ್ಸ್

ಗೂಗಲ್ ಲ್ಯಾಬ್ಸ್ ಎಂದಿನಂತೆ ತನ್ನ ಹೊಸತುಗಳ ಸುರಿಮಳೆಯಲ್ಲಿ ಹೊಸತೊಂದು ಕ್ರಾಂತಿ ಹುಟ್ಟಿಸುವ ತಂತ್ರಜ್ಞಾನ ಹೊರತಂದಿದೆ. ಅದರ ಹೆಸರು 'ಗೂಗಲ್ ಗಾಗಲ್ಸ್'. ಇದನ್ನು ಬಳಸಿ ಇನ್ನು ಮುಂದೆ ನೀವು ಫೋಟೋ ಹೊಡೆದು ಸರ್ಚ್ ಮಾಡಬಹುದು. ಅಥವ ಜಿ ಪಿ ಎಸ್ ಬಳಸಿ ನೀವಿರುವ ಜಾಗದ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು. ಸದ್ಯಕ್ಕೆ ಈ ತಂತ್ರಾಂಶ ಗೂಗಲ್ Android ಮೊಬೈಲ್ ಬಳಸುತ್ತಿರುವವರಿಗೆ ಮಾತ್ರ ಲಭ್ಯ. ಅದೂ Android 1.6+ (Donut ಅಥವ Eclair) ಬಳಸುತ್ತಿರುವವರಿಗೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಗೂಗಲ್ ವಾಯ್ಸ್ ಸರ್ಚ್ ವಿಶ್ವ ಸುತ್ತಿ ನೋಕಿಯಾ ಹುಡುಕಿ, ಚೈನೀಸ್ ಕಲಿತ ಕಥೆ

google-mobile-app-movie-times

ಗೂಗಲ್ ಸರ್ಚ್ ನ ವಾಯ್ಸ್ ಆವೃತ್ತಿ ಇಂಗ್ಲಿಷ್ ಮಾತನಾಡುವವರ ಪ್ರಪಂಚವನ್ನೆಲ್ಲಾ ಸುತ್ತಿ ಎಲ್ಲರ ಮಾತನಾಡುವ ಪರಿಯನ್ನು ಅರಿತು, ಬೆಳೆದು ನಿಂತಿದೆ. ಅಮೇರಿಕಾ, ಯುನೈಟೆಡ್ ಕಿಂಗ್ಡಮ್, ಆಸ್ಟ್ರೇಲಿಯಾ, ಭಾರತ ಹೀಗೆ ಹಲವು ದೇಶಗಳಲ್ಲಿ ಮಾತನಾಡುವ ಇಂಗ್ಲೀಷ್ ಅಸ್ಸೆಂಟ್ ಅನ್ನು ಇದು ಅರ್ಥ ಮಾಡಿಕೊಳ್ಳಬಲ್ಲದು. ಈಗ ಹೊಸ ಸುದ್ದಿ ಹೊರ ಬಿದ್ದಿದೆ. ನೋಕಿಯಾ ಎಸ್ ೬೦ ಮೊಬೈಲ್ ಗೂಗಲ್ ವಾಯ್ಸ್ ಸರ್ಚ್ ಹೊಂದಿದ್ದು, ಮ್ಯಾಂಡ್ರಿನ್ ಚೈನೀಸ್ ಅರ್ಥ ಮಾಡಿಕೊಳ್ಳುತ್ತದಂತೆ. ಗೂಗಲ್ ಬ್ಲಾಗ್ ಈ ವಿಷಯವನ್ನು ಹೊರಹಾಕಿದೆ.

ನೋಕಿಯಾದ ಎಸ್ ೬೦ ಫೋನ್ಗಳು ವಿಶ್ವದಾದ್ಯಂತ ಅತ್ಯಂತ ಪ್ರಸಿದ್ದಿ ಪಡೆದಿವೆ.  ನೀವೇನಾದರೂ ನೋಕಿಯಾ ಎನ್-ಸೀರೀಸ್ ಅಥವಾ ಇ-ಸೀರೀಸ್ ಫೋನ್ ಬಳಸುತ್ತಿದ್ದರೆ, ನೀವೂ ಕೂಡ ಎಸ್-೬೦ ಬಳಸುತ್ತೀರಿ ಎಂದರ್ಥ. ೧೨ ಗುಂಡಿಗಳ ಕೀ-ಪ್ಯಾಡ್ ಹೊಂದಿರುವ ಈ ಫೋನ್ ಗಳು ಕಾಲ್ ಮಾಡ್ಲಿಕ್ಕೆ ಸಮರ್ಥ ಆದ್ರೆ ಟೈಪ್ ಮಾಡ್ಲಿಕ್ಕೆ ಸ್ವಲ್ಪ ಕಷ್ಟ ಅಂತ್ಲೇ ಹೇಳಬಹುದು. ಅದರಿಂದಲೇ ಗ್ರಾಹಕರ ಆಗ್ರಹದ ಮೇರೆಗೆ ಗೂಗಲ್ ಸರ್ಚ್ ಅನ್ನು ವಾಯ್ಸ್ ಅಂದ್ರೆ ಧ್ವನಿಯ ಮೂಲಕ ಕೆಲಸ ಮಾಡುವಂತೆ ಮಾಡ್ಲಿಕ್ಕೆ ಆ ಒಂದು ಹೊಸ ತಂತ್ರಾಂಶವನ್ನು ತನ್ನ ಫೋನ್ ನಲ್ಲಿ ಅಳವಡಿಸಲು ನೋಕಿಯಾ ಶ್ರಮಪಡುತ್ತಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಟೆಕ್ ಸುದ್ದಿ - ವರ್ಚುಅಲ್ ಬಾಕ್ಸ್ ನಲ್ಲೀಗ ಆಟ ಆಡಿ, ಮಜಾ ಮಾಡಿ

  ವರ್ಚುಅಲ್ ಬಾಕ್ಸ್ - ಈಗಾಗಲೆ ಕಂಪ್ಯೂಟರಿನಲ್ಲಿ ನಡೀತಿರೋ ಆಪರೇಟಿಂಗ್ ಸಿಸ್ಟಂನ ಮೇಲೆ ಮತ್ತೊಂದು ಆಪರೇಟಿಂಗ್ ಸಿಸ್ಟಂ ಅನ್ನು, ಬೇರೆಯದೇ ಕಂಪ್ಯೂಟರ್ನಲ್ಲಿ ನೆಡೆಸಿ ಅದನ್ನು ನಮ್ಮ ಕಂಪ್ಯೂಟರ್ ತೆರೆಯ ಮೇಲೆಯೇ ಮೂಡುವಂತೆ ಮಾಡಬಲ್ಲ ತಂತ್ರಾಂಶ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಸಿಲಿಕಾನ್ wafer

ಹಳೆಯ ತಾಳೆಗರಿಗಳನ್ನು ಸಿಲಿಕಾನ್ ವೇಫರ್ (silicon wafer) ಮೇಲೆ ತರುವ ಉದ್ದೇಶವಿದೆಯಂತೆ ಇವರಿಗೆ. ಇದು ನಿಜವಾಗಿಯೂ ಒಳ್ಳೆಯ ಯೋಜನೆ ಅನ್ನಬಹುದು. ಇದರ ಬಗ್ಗೆ ನನ್ನೆರಡು ಮಾತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

22nm ಸೀಮಾಸ್ SRAM ಮೆಮೊರಿ ಸೆಲ್.

ನೆಟ್ ನಲ್ಲಿ ಅಡ್ಡಾಡ್ತಾ ಇದ್ದಾಗ ಈ ಕೊಂಡಿ ಸಿಕ್ತು. ನಂದು ಮೆಮೊರಿ ಡಿಸೈನ್ ಕೆಲಸ ಅಲ್ಲದೆ ಇದ್ದರೂ ಇದರ ಬಗ್ಗೆ ಬರೀಬೇಕು ಅನ್ನುಸ್ತು.

ಆಫೀಸಲ್ಲಿ ಟೈಮಿಲ್ಲ .. ಮನೇಲಿ ನೆಟ್ ಇಲ್ಲ. ಇರಲಿ reference ಗೆ ಅಂತ!.. ಮುಂದೆ ಯಾವತ್ತಾದರೂ ಒಮ್ಮೆ ಇದರ ಬಗ್ಗೆ ಸ್ವಲ್ಪ ಬರೆದೇನು! ;)

http://www.azom.com/news.asp?newsID=16652

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಒಬಾಮಾ, ಲ್ಯಾರಿ ಪೇಜ್, ಗೂಗಲ್ ಮತ್ತು ಮಿನುಗೋ ದೀಪಗಳು !!

ಒಬಾಮಾ ಅವರ Audacity of Hope  ಅನ್ನೋ ಪುಸ್ತಕದಿಂದ ಆಯ್ದ ಕೆಲವು ಸಾಲುಗಳನ್ನು ಗೆಳೆಯ ರೋಹಿತ್ ಕಳಿಸಿದ್ರು. ಒಬಾಮಾ ಅವರು ತಮ್ಮ ಪುಸ್ತಕದಲ್ಲಿ ಗೂಗಲ್ ಕಂಪನಿಯ ಸ್ಥಾಪಕ ಲ್ಯಾರಿ ಪೇಜ್ ಬಗ್ಗೆ ಬರೆಯುತ್ತಾ ಈ ಕೆಳಗಿನ ಸಾಲುಗಳನ್ನು ಬರೆಯುತ್ತಾರೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಚರ್ಚೆ: ಕನ್ನಡದಲ್ಲಿ ವಿಜ್ಞಾನ ಹಾಗು ತಂತ್ರಜ್ಞಾನ ಕುರಿತ ಬರವಣಿಗೆ

[ಸಂಪದ ಕಾರ್ಯಕ್ರಮ]

ಮ್ಮದೇ ಸಮುದಾಯದವರನ್ನು ತಲುಪುವುದು ತುಂಬ ಕಷ್ಟ ಎನ್ನುವುದು ನಿಜವಾದ ಸಂಗತಿ. ನಾವೆಲ್ಲ ಬೆಳೆದು ಬಂದ ಜಗತ್ತು ಈಗ ನಮ್ಮನ್ನೆಲ್ಲ ಹತ್ತಿರ ತಂದಿರುವ ಅದೇ ಭಾಷೆಯ ಸುತ್ತ ಪೋಣಿಸಿದ್ದು. ಹೀಗಾಗಿಯೇ ನಾವುಗಳು ಇಲ್ಲಿದ್ದೇವೆ, ನಮ್ಮ ಕೆಲಸಗಳಲ್ಲಿ ಬಳಸುವ ಭಾಷೆ ಬೇರೆಯದ್ದಾದರೇನು, ನಮ್ಮ ಭಾಷೆಯ ನಂಟು ಬಿಟ್ಟಿಲ್ಲ! ಸೂಕ್ಷ್ಮ ರೇಖೆಯಂತಿರುವ ಈ "ಭಾಷೆ" ಎಂಬ ಬಂಧ ಬೇರೆ ಬೇರೆ ಆಸಕ್ತಿ, ಬೇರೆ ಬೇರೆ ಅಭಿಪ್ರಾಯಗಳ ಬುತ್ತಿಯನ್ನು ಕಟ್ಟಿ ತರುವ ನಮ್ಮನ್ನೆಲ್ಲ ಅದು ಹೇಗೆ ಹಿಡಿದಿಟ್ಟಿದೆ ಎಂಬುದು ಒಮ್ಮೊಮ್ಮೆ ಆಶ್ಚರ್ಯ ಹುಟ್ಟಿಸುತ್ತದೆ.
ಕಾರ್ಯಕ್ರಮದ ದಿನದಂದು ಕಂಡುಬಂದ ಮುಖಗಳು ಸಂಖ್ಯೆಯ ಲೆಕ್ಕದಲ್ಲಿ ನಮಗೆ ಕೊಂಚ ಬೇಸರ ಮೂಡಿಸಿದರೂ, ಆ ದಿನ "ಕನ್ನಡದಲ್ಲಿ ವಿಜ್ಞಾನ ಹಾಗು ತಂತ್ರಜ್ಞಾನ ಕುರಿತ ಬರವಣಿಗೆ"ಯ ಸುತ್ತ ಒಂದು ಉತ್ತಮ ಚರ್ಚೆ ನಡೆದದ್ದು ಖುಷಿ ಕೊಟ್ಟಿತು. ಉದ್ದೇಶ ಇದ್ದದ್ದು ಹೀಗೆ ಬರೆಯಲು ಇಂಟರ್ನೆಟ್ ಬಳಸುವುದು ಹೇಗೆ? ಮತ್ತು ತದನಂತರ ಇಂಟರ್ನೆಟ್ಟಿನಿಂದ ಹೊರಗೆ, ಇಂಟರ್ನೆಟ್ ವ್ಯಾಪ್ತಿಯಿಲ್ಲದೆಡೆಗೆ ಅದನ್ನು ವಿಸ್ತರಿಸುವುದು ಹೇಗೆ ಎನ್ನುವುದರ ಸುತ್ತ. ಚರ್ಚೆ ನಡೆದದ್ದು ಭಾನುವಾರ ೨೯, ೨೦೦೯, ಸೆಂಟರ್ ಫಾರ್ ಇಂಟರ್ನೆಟ್ ಎಂಡ್ ಸೊಸೈಟಿ, ಕನ್ನಿಂಗ್ಹಾಮ್ ರೋಡಿನಲ್ಲಿ.

ಅಂದು ನಾವು ಕನ್ನಿಂಗ್ಹಾಮ್ ರೋಡಿಗೆ ಹೊರಟು ನಿಂತಾಗ ನಮಗದು 'ಮತ್ತೊಂದು ಭಾನುವಾರ'. ಆದರೂ ಎಷ್ಟು ಜನ ಬರುತ್ತಾರೋ, ಯಾರು ಯಾರು ಬರುವರು ಎಂಬ ಕುತೂಹಲ ನಮಗೆ! ನಾವುಗಳು ಎಲ್ಲರಿಗೂ ಆಮಂತ್ರಣ ಕಳುಹಿಸಿದ್ದೇ ಕೊಂಚ ತಡವಾಗಿ! ಕಾರ್ಯಕ್ರಮದ ಬಗ್ಗೆ ತಿಳಿಸಲು ಒಂದು ವಾರ ಕೂಡ ಇರಲಿಲ್ಲ. ಅದಕ್ಕೆ ಸೇರಿಕೊಂಡಂತೆ ಮೂರು ದಿನ ರಜೆ ಬೇರೆ - ಯುಗಾದಿ, ಶನಿವಾರ ಮತ್ತು ಭಾನುವಾರ!

ಆದರೆ ಆ ಭಾನುವಾರ ವಿಶೇಷ ದಿನವೆನಿಸಿದ್ದು ಹೌದು. ನಮ್ಮ ನೆಚ್ಚಿನ ವಿಷಯಗಳು - ತಂತ್ರಜ್ಞಾನ, ಕನ್ನಡ ಇವುಗಳೊಡನೆ - ಅಂತರ್ಜಾಲ ಕೂಡ ಬೆರೆತದ್ದಲ್ಲದೆ ಅವುಗಳ ಕುರಿತು ಉತ್ತಮ ಚರ್ಚೆ ನಡೆದದ್ದು ನಮ್ಮೆಲ್ಲರ ಮನಸ್ಸಿನಲ್ಲಿ ಅಚ್ಚಾಗಿ ಉಳಿಯುವ ನಿಮಿಷಗಳು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಡಿಸಿ - ಡಿಸಿ ಕನ್ವರ್ಟರ್

ಇದು ಲ್ಯಾಪ್ಟಾಪು, ಮೊಬೈಲ್ ಫೋನ್ಗಳು ಮುಂತಾದ ಅತ್ಯಾಧಿಕ ಆದರೆ portable ಸಾಧನಗಳ ಯುಗ. ತುಂಬಾ ಸಣ್ಣ ಗಾತ್ರದ ಇವನ್ನು ನಾವು ಯಾವಾಗಲೂ ಜೊತೆಯಲ್ಲಿ ಕೊಂಡೊಯುತ್ತಿರುತ್ತೇವೆ. ಹಾಗಾಗಿ ಇವಕ್ಕೆ ಬ್ಯಾಟರಿ ಗಳಿಂದಲೇ ಶಕ್ತಿ ( power) ಪೂರೈಕೆಯಾಗಬೇಕಾಗುತ್ತೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮೂರ್ ನ ಕಟ್ಟಳೆ!

moore's law, ಮೂರ್ಸ್ ಲಾ,  ಬಹುಶ ನೀವು ಈ ಪದ ಗುಚ್ಚವನ್ನು ಕೇಳೇ ಇರ್ತೀರಿ. ಇದು vlsi ಜಗತ್ತಿನಲ್ಲೇ ವರ್ಲ್ಡ್ ಫೇಮಸ್ಸು! ;)

ಈ "ಮೂರ್ ನ ಕಟ್ಟಳೆ" ಅನ್ನುವುದು ಒಂದು ರೀತಿ empirical ಫಾರ್ಮುಲ.  ಅಂದ್ರೆ ಅನುಭವದಿಂದ ಗಮನಕ್ಕೆ ಬಂದಿದ್ದು. ಯಾವುದೇ ಲೆಕ್ಕ , ಫಾರ್ಮುಲಗಳು ಇಲ್ಲಿ ಈ ಸಂಬಂಧವನ್ನು ಸಾಧಿಸುವಲ್ಲಿ ಪ್ರಾಮುಖ್ಯತೆ  ವಯಿಸಲ್ಲ.   

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಪ್ರ್ಯೆಮವೇರಾ ಇದರ ಬಗ್ಗೆ ಮಾಹಿತಿ ತಿಳಿದಿದೆಯೇ ?

ಸಂಪದೀಗರೇ !!!

 

ಪ್ರ್ಯೆಮಾವೇರಾ ಇದೊಂದು ಪ್ರಾಜೆಕ್ಟ್ ಮತ್ತು ಪೋರ್ಟ್ ಫೋಲಿಯೋ ಮ್ಯಾನೆಜ್ಮೆಂಟ್ ತಂತ್ರಾಂಶ. ಈ ತಂತ್ರಾಂಶದ ಸಹಾಯದಿಂದ ವ್ಯವಹಾರ ಮತ್ತು ಮ್ಯಾನೇಜ್ಮೆಂಟಗಳಿಗೆ ಉತ್ತಮ ಸಹಕಾರಿಯಾಗಬಲ್ಲದು. ಇದಕ್ಕೆ ೬೦೦ ಕೋಟಿ ಪ್ರಾಜೆಕ್ಟಗಳನ್ನು ತನ್ನ ತೆಕ್ಕೆಯಲ್ಲ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

CMOS ರೀತಿ

ಐ ಸಿ ( Integrated Circuit) ಅನ್ನೇ ನಾವು ಆಡುಭಾಷೆಯಲ್ಲಿ ಚಿಪ್ ಅಂತೀವಿ. ಈ ಅರೆವಾಹಕ ಸಲಕರಣೆ ಒಂದಕ್ಕೊಂದು ಜೋಡಣೆ ಹೊಂದಿರುವ ಟ್ರಾನ್ಸಿಸ್ಟರ್ಗಳ , ರೆಸಿಸ್ಟರ್ ಗಳ, ಕೆಪಾಸಿಟರ್ ಗಳ ( ಮತ್ತು ಇಂಡಕ್ಟರ್ ಗಳು ಇತ್ಯಾದಿ) ಗುಂಪನ್ನು ಹೊಂದಿರುತ್ತೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ತಂತ್ರಜ್ಞಾನದ ಚಂಚಲತೆ

ಹಾಗೆ ಹಳೆ ಸಿ.ಡಿ.ಗಳನ್ನು ನೋಡುತ್ತಿದ್ದೆ. ಕೆಲವು ಮೇಜಿನ ಮೇಲೆ ಇದ್ದರೆ ಕೆಲವು ಮೇಜಿನ ಡ್ರಾಯರ್ ಒಳಗೆ ಇದ್ದವು. ಹಾಗೆ ಕೆಲವು ಕಪಾಟಿನ ಒಳಗೆ ಇದ್ದವು. ಎಲ್ಲ ಸಿ.ಡಿ.ಗಳನ್ನು ಒಟ್ಟು ಮಾಡಿ ಒಂದು ಕಡೆ ಇಟ್ಟೆ. ಕೆಲವು ಸಿ.ಡಿ.ಗಳಿಗೆ ಟೈಟಲ್ ಇರಲಿಲ್ಲ. ಹಾಗೆ ಕೆಲವುಗಳಿಗೆ ಕವರ್ಗಳು ಇರಲಿಲ್ಲ. ಬಹಳ ಒಳ್ಳೆಯ ಸಂಗ್ರಹಗಳು ಇದ್ದವು. ಅದರಲ್ಲಿ ಟಿ.ಕೆ.ರಂಗಾಚಾರಿ, ಜಿ.ಎನ್.ಬಾಲಸುಬ್ರಮಣ್ಯಂ ಮೊದಲಾದ ಸಂಗೀತ ದಿಗ್ಗಜರ ಕಚೇರಿಗಳಿದ್ದವು. ಹಾಗೆ MIT ಪ್ರಾಧ್ಯಾಪಕರಾದ ಗಿಲ್ಬೆರ್ಟ್ ಸ್ಟ್ರಾಂಗ್ ಅವರ ಬೀಜಗಣಿತದ ಸಿ.ಡಿಗಳೂ ಇದ್ದವು.

ಇವುಗಳನ್ನೆಲ್ಲ ಕೂಡಿ ಇಡುವುದಕ್ಕೆ ಒಂದು ಸಿ.ಡಿ. ಪೌಚನ್ನು ತರಲು ಯೋಚಿಸಿದೆ.ಸ್ನೇಹಿತನೊಬ್ಬ ಮನೆಗೆ ಬರುವವನಿದ್ದ. ಹೇಗೂ ಅವನು ಕೃಷ್ಣರಾಜ ಮಾರುಕಟ್ಟೆ ಮೂಲಕವೇ ಬರಬೇಕು. ಹಾಗೆ ನಾನು ಬರುವಾಗ ಒಂದು ಪೌಚ್(೧೨೦ ಸಿ.ಡಿ ಸಾಮರ್ಥ್ಯ) ತರಲು ಫೋನ್ ಮಾಡಿ ಹೇಳಿದೆ. ಆಗ ಅವನು"ಈಗ ಯು.ಎಸ್.ಬಿ ಸ್ಟೋರೇಜ್ ಮಾಮೂಲಿ ಆಗಿದೆ. ನೀ ಇನ್ನು ಸಿ.ಡಿ. ಕಾಲದಲ್ಲೇ ಇದಿಯಲ್ಲ" ಅಂತ ಹಿಯಾಳಿಸಿದನು. ನನಗೂ ಹಾಗೆ ಎನಿಸಿತು. ಅವನ ಮಾತಿನಿಂದ ನನಗನಿಸಿದ್ದು ತಂತ್ರಜ್ಞಾನದ-ಚಂಚಲತೆ(technology-volatility) ಅಂದಾಜು ಮಾಡುವುದು ಬಹಳ ಕಷ್ಟ. ಆದರೂ ಹಳೆ ಸಿ.ಡಿ.ಗಳನ್ನು ಇಡಲು ಪೌಚ್ ಬೇಕಿತ್ತು. ಅದಕ್ಕೆ ತರಿಸಿದೆ.

ಹಾಗಾದರೆ ಇನ್ನು ಸಿ.ಡಿ, ಮಾಗ್ನೆಟಿಕ್ ಟೇಪ್ ಹಾಗೂ ಫ್ಲಾಪಿಯ ಹಾದಿ ಹಿಡಿಯುವುದು ನಿಶ್ಚಿತ ಅನ್ನಿಸುತ್ತದೆ. ಬಹುಷಃ ಡಿವಿಡಿ ಕೂಡ ಇದೆ ಹಾದಿ ಹಿಡಿಯುವುದೇನೋ? ಸೋನಿಯ ಬ್ಲೂ-ರೇ ಮುಂದೆ ಸೋಲುಂಡ ತೋಶಿಬಾ HD-ಡಿವಿಡಿ, ಸಿಕ್ಕಾಪಟ್ಟೆ ನಷ್ಟ ಅನುಭವಿಸಿತು. ಮಾತು ಅದಲ್ಲ. ಸೋನಿಯ ೫೦ಜಿಬಿ ಬ್ಲೂ-ರೇ ಡಿಸ್ಕ್ ಎಲ್ಲಿ, ೭೦೦ಎಮ್.ಬಿ ಸಿ.ಡಿ ಅಥವಾ ೭ಜಿಬಿ ದ್ವಿಮುಖ-ಪದರದ(dual-layer) ಡಿವಿಡಿ ಎಲ್ಲಿ? ಸೋನಿಯ ಬ್ಲೂ-ರೇ ಈಗ ಬಹಳ ದುಬಾರಿ ಇರಬಹುದು. ಯಾವುದು ದುಬಾರಿ ಇರಲಿಲ್ಲ ಹೇಳಿ. ಉಳ್ಳವರಿಗೆ ಮಾತ್ರ ಇದ್ದ ಮೊಬೈಲ್ ಫೋನ್, ಈಗ ನಾಯಿ ಬಾಲಕ್ಕೂ ಇದೆ ಎಂದು ಹಳ್ಳಿಯವರೂ ಹೇಳುತ್ತಾರೆ. ಅದೇ ರೀತಿಯಲ್ಲಿ ಬ್ಲೂ-ರೇ ಕೂಡ ಅಗ್ಗವಾಗುವುದರಲ್ಲಿ ಸಂಶಯವಿಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಜೀವ ಉಳಿಸಿದ ಬೋಸ್ ಹೆಡ್ ಫೋನ್ !!

ಟೈಟಲ್ ನೋಡಿ ವಿಚಿತ್ರ ಅನ್ನಿಸ್ತಾ? ಇದೊಂದು ತರಹ ವಿಚಿತ್ರದ ಘಟನೆ ಆದ್ರೂ ನಿಜ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

pre-indexing ಮತ್ತು post indexing ಎಂದರೆ ಏನು?

Computer science students ಯಾರಾದರೂ ಇದ್ದರೆ , ಗೊತ್ತಿದ್ದರೆ
ಈ ಮೇಲಿನವುಗಳಿಗೆ ಉತ್ತರ ಕೊಟ್ತು ಉಪಕರಿಸಿ.
ಈಗಾಗಲೆ ಗೂಗಲ್ ಸರ್ಚ್ ಮಾಡಿಯಾಗಿದೆ ಆದರೂ ಸಿಕ್ಕಿಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಗೂಗಲ್ ಮ್ಯಾಪ್ ಅನ್ನ ಸೇವ್ ಮಾಡೋದು ಹೇಗೆ

ಗೂಗಲ್ ಮ್ಯಾಪ್ ಅನ್ನ ಸೇವ್ ಮಾಡೋದು ಹೇಗೆ?
ನಮ್ಮಲ್ಲಿ ಪ್ರಿಂಟರ್ ಕೈ ಕೊಡ್ತು
ಆಫ್ಲೈನ್ ಸೇವ್ ಮಾಡಿಕೊಳ್ಳೋದು ಹೇಗೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?

ಮೊನ್ನೆ, ಪಲ್ಲವಿಯವರ ಲೇಖನಕ್ಕೆ ಪ್ರತಿಕ್ರಿಯೆ ನೀಡಿದಾಗ ಮೂಡಿದ ಪ್ರಶ್ನೆ ಇದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಲೈನಿಕ್ಸ್ ಸಂಭ್ರಮ - ವಂದನೆಗಳು : ಓಂ ಶಿವಪ್ರಕಾಶ್

ನೆನ್ನೆಯ ನನ್ನ ಲೈನಿಕ್ ಬೇಕಿದೆ ಬ್ಲಾಗ್‌ನ ನಂತರ ಸಂಪದದ ಗೆಳೆತನ ನನಗೆ ನೆರವಾಯಿತು
ಬೇಕೆಂದ ಕೂಡಲೆ ಸಿ.ಡಿಸ್ ಕಳಿಸಿಕೊಟ್ಟ ಓಂ ಶಿವಪ್ರಕಾಶ್ ರವರಿಗೆ ಥ್ಯಾಂಕ್ಸ್ ಹೇಳಬೇಕಾ ಹೇಳಿದರೆ ಅದು ಕಡಿಮೆಯಾಗಬಹುದೆಂಬ ಸಂಕೋಚ.
ಅವರು ಸಿಡಿ ಕೊಟ್ಟದ್ದಕ್ಕಿಂತ ಕೇವಲ ಫೋನ್‌ನಲ್ಲಿ ವಿವರಿಸಿದ ರೀತಿ ಎಂಥವರಿಗೂ ಲೈನಿಕ್ಸ‌ನಲ್ಲಿ ಆಸಕ್ತಿ ಹುಟ್ಟಿಸುವಂತಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನನ್ನ ಮೊಬೈಲು

೨ ತಿಂಗಳಿಂದ ನನ್ನ ಮೊಬೈಲ್ (ಸೋನಿ ಎರಿಕ್ಸನ್ ಕೆ೭೫೦ಐ) ತುಂಬ ತೊಂದರೆ ಕೊಡ್ತಾ ಇತ್ತು. ಆ ಮೊಬೈಲ್ ಬರೀ ೧.೫ ವರ್ಷ ಹಳೆಯದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಲೀನಕ್ಸು , ಉಬುಂಟು , ಕನ್ನಡ ( ಕನ್ನಡ ಕಂಪ್ಯೂಟರ್ ಪಾಠ )

ಲಿನಕ್ಸ್ ಅನ್ನೋದು ವಿಂಡೋಸ್ ತರಹ - ಕಾರ್ಯಕಾರೀ ವ್ಯವಸ್ಥೆ . ಆಪರೇಟಿಂಗ್ ಸಿಸ್ಟಮ್ಮು .
ವಿಂಡೋಸ್ ಗೆ ಬದಲಿ ಆಗಿ ಬಳಸಬಹುದು . ಅಗ್ಗ ; ಅನೇಕಸಲ ಪುಕ್ಕಟೆ !
ಬಹಳ ಹಣ ಕೊಟ್ಟು ವಿಂಡೋಸ್ ಖರೀದಿ ಮಾಡುವ ಬದಲು ಅಥವಾ ಕಳ್ಳ ವಿಂಡೋಸ್ ಬಳಸುವ ಬದಲು ಇದನ್ನು ಬಳಸಬಹುದು .

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಗೂಗಲ್ನಲ್ಲಿ ಚಂದ್ರ !!!

ಗೂಗಲ್ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ, ಅದೆ ಬಾಹ್ಯಾಕಾಶವನ್ನು ಹುಡುಕುವ ಕೆಲಸ. ತಲತಲಾಂತರದಿಂದ ಮನುಷ್ಯನ್ನ ಕಾಡುತ್ತಿರುವ ಪ್ರಶ್ನೆ "ಅಲ್ಲೇನಿದೆ ??"... ಈ ಪ್ರಯತ್ನದಿಂದ "ಅಲ್ಲಿದೆ ನಮ್ಮ ಮನೆ, ಇಲ್ಲಿ ಬಂದೆ ಸುಮ್ಮನೆ... " ಎನ್ನುವವರಿಗೆ ಸೂಕ್ತ ಜಾಗ ಕಲ್ಪಿಸಿಕೊಡಬಹುದೇ ? ಎಂದು ನೋಡಬೇಕು...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.3 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಆರ್ ಎಫ್ ಐ ಡಿ (RFID) - ಗುರುತಿಸಿಕೊಳ್ಳಲೂ ಒಂದು ತಂತ್ರಜ್ಞಾನ !!!

ಒಂದು ಕಡೆ ಮೊಬಿಲಿಟಿ ಆದಾಗ ಇನ್ನೊಂದು ತೊಂದರೆ ಇದೆ, ಎಲ್ಲವು ವೈರ್ ಲೆಸ್ ಆದರೆ ಎಲ್ಲವು ಚೆಲ್ಲಾ-ಪಿಲ್ಲಿಯಾಗೆ ಹೋಗುವ ಸಾದ್ಯತೆಗಳಿವೆ!!! ಆಗ ಈ-ವಸ್ತುಗಳನ್ನು, ಸಲಕರಣೆಗಳನ್ನು ಗುರುತಿಸುವುದೆ ಒಂದು ದೊಡ್ಡ ಕೆಲಸ !!! ಈ ತೊಂದರೆ ಮೊಬಿಲಿಟಿ ಆಗದಿದ್ದರು ಇದೆ !!!

ಇದಕ್ಕೆ ಪರಿಹಾರವಾಗಿ ಬರುತ್ತಿರುವುದೆ... ಆರ್ ಎಫ್ ಐ ಡಿ (RFID‍) Radio Frequency Identification 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅಂತರ್ಜಾಲದಲ್ಲಿ ಆಫೀಸ್ !!!

ಒಂದು ಆಫೀಸ್ ಅಂದ್ರೆ ... ಕೆಲವು ಕಡತಗಳು, ಈ-ಮೇಲ್ ಸೌಲಭ್ಯ ,ಚ್ಯಾಟ್ , ಬೇಕಂದಾಗ ಸಿಗಬೇಕಾದ ಸಹದ್ಯೋಗಿಗಳು, ಇವರೆಲ್ಲರನ್ನು ಬೇಕಾದದ್ದು ಒಂದು ಜಾಗ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಐ-ಫೊನ್ - ನಿಮಗಾಗಿ ಓಡೋಡಿ ಬಂದಿದೆ

  • ಮಾತಾಡಬಹುದು/ಕೇಳಿಸಿಕೊಳ್ಲಬಹುದು .... :)
  • ವಿಶಾಲವಾದ ಸ್ರ್ಕಿನ್ ....
  • ಯೊ-ಟ್ಯೊಬ್ ವಿಡಿಯೊ ನೋಡಬಹುದು
  • ನಕ್ಷೆಗಳನ್ನು ನೋಡಬಹುದು.
  • ಹವಾಮಾನ ವರದಿ
  • ನಿಮ್ಮ gmail/ಯಾಹೂ  ನೋಡಬಹುದು
  • ಐ-ಪಾಡ್ ಬೇಕಾಗಿಲ್ಲ,... ಅದೊ ಕೂಡ ಇದರಲ್ಲೆ ಇದೆ !!!
  • ಕೆಮರಾ ಬೇಕಾಗಿಲ್ಲ ...
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಆಫೀಸ್ ೨.೦ ಸಮಾವೇಶ -

ಈ ಆಫೀಸ್ಗೆ ಬೇಕಾದಂತಹ ಸಲಕರಣೆಗಳು , ಡಾಕ್ಯುಮೆಂಟ್ಗಳು, ಸ್ಪ್ರೆಡ್ ಶೀಟ್ಗಳು, ಇವುಗಳೆಲ್ಲವನ್ನು ಅಂತರ್ಜಾರಕ (browser) ನಿಂದ ಮಾಡುವ ನಿಟ್ಟನ್ನಲ್ಲಿ ಒಂದು ಸಮಾವೇಶ ಮಾಡ್ತಾಯಿದ್ದಾರೆ... ಆದ್ರೆ ಹೋಗಿ ಬನ್ನಿ :)

ಈ-ಮೇಲ್ ಅಟ್ಯಚ್ಮೆಂಟುಗಳನ್ನು ನಿಲ್ಲಿಸುವ ಬಗ್ಗೆ ಹೊಸ ಚಿಂತನೆ ನಡೆಯುತ್ತಿವೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಐಪಿ ಟೆಲಿಪೋನಿ - ಹೊಸ ಅಲೆ

ವಿಓಐಪಿ (VOIP) ಅನ್ನುವ ಟೆಕ್ನಾಲಜಿ ಕೊಡುವ ಸವಲತ್ತುಗಳು ಕಂಪನಿಗಳು ಪಿಬಿಎಕ್ಸಗಳನ್ನು ಬಿಟ್ಟು ಐಪಿ ಟೆಲಿಫೋನಿಗೆ ಬರುತ್ತಿದ್ದಾರೆ.

ಪಿಬಿಎಕ್ಸಗಳ(ಸದ್ಯಕ್ಕೆ ಇರುವಂತ ಟೆಕ್ನಾಲಜಿಗಳ ) ತೊಂದರೆಗಳು:

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕನ್ನಡ "ಬರಹ" ಕೀ ಮ್ಯಾಪ ತಂತ್ರಾಂಶ ಲಿನಕ್ಸ ಬಳಕೆದಾರರಿಗೆ ಲಭ್ಯವಿದೆ

ಕನ್ನಡ "ಬರಹ" ಕೀ ಮ್ಯಾಪ ತಂತ್ರಾಂಶ ಈಗ ಲಿನಕ್ಸ ಬಳಕೆದಾರರಿಗೆ ಲಭ್ಯವಿದೆ.

ಕ ಘ ಪ, ಇನ್ಟ್ರಾನ್ಸ , ಏಮ ೧೭-ಐಟ್ರಾನ್ಸ ಕೀ ಮ್ಯಾಪ ಬಳಸುತಿದ್ದ ಎಲ್ಲ ಲಿನಕ್ಸ ಬಳಕೆದಾರರಿಗೆ ಮತ್ತೊಂದು ಕೀ ಮ್ಯಾಪ,

http://code.indlinux.net/projects/baraha-maps

ಇದು ಇನ್ನೂ "ಅಲ್ಪಾ ರಿಲೀಸ", ಉಪಯೋಗಿಸಿ ನೋಡಿ :

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

'ರಾಮಾಯಣ'ದ ಆಟ ಆಡಿ...

ರಾಮಾಯಣ - ವರ್ಜಿನ್ ಕಾಮಿಕ್ಸ್
ಮಿಶ್ರಿಕೋಟಿಯವರು ಬರೆದಿರುವ ಪುಟ್ಟ ಬರಹ [:http://sampada.net/blog/shreekant_mishrikoti/22/08/2007/5475|ತಮಸಾ ನದೀ ತೀರದಲ್ಲಿ] ಓದಿ ನನಗೆ ಹಲವು ದಿನಗಳ ಹಿಂದೆ ಓದಿದ ಒಂದು ಸುದ್ದಿಯ ನೆನಪಾಯಿತು.

ರಾಮಾಯಣ ಈಗ MMO (Massively Multi-player Online game) ಆಗಿ ಹೊರಬರಲಿದೆಯಂತೆ. MMO ಎಂದರೆ ನೇರ ಅಂತರ್ಜಾಲದಲ್ಲಿ ಹಲವು ಆಟಗಾರರೊಂದಿಗೆ ಆಡಬಹುದಾದ ವಿಡಿಯೋ ಗೇಮ್. ಇದನ್ನು ಹೊರತರುತ್ತಿರುವುದು ಸೋನಿ ಕಂಪೆನಿಯಂತೆ.

ಮಿ. ಇಂಡಿಯ, ಬ್ಯಾಂಡಿಟ್ ಕ್ವೀನ್ ಹಾಗೂ ಎಲಿಝಬೆತ್ ಮುಂತಾದ ಪ್ರಮುಖ ಚಿತ್ರಗಳನ್ನು ನಿರ್ದೇಶಿಸಿದ ಶೇಖರ್ ಕಪೂರ್ ಇದರ ಹಿಂದೆ ಇದ್ದಾರಂತೆ. ಇವರು ಅದರ ಸ್ಕ್ರಿಪ್ಟ್ ಬರೆದವರು. ವರ್ಜಿನ್ ಕಾಮಿಕ್ಸ್ ಸ್ಥಾಪಿಸಿದವರಲ್ಲಿ ಇವರೂ ಒಬ್ಬರು. ವರ್ಜಿನ್ ಕಾಮಿಕ್ಸ್ ಹೋದ ವರುಷ ರಾಮಾಯಣವನ್ನು ಕಾಮಿಕ್ಸ್ ಜಗತ್ತಿಗೆ ಪಾಶ್ಚಿಮಾತ್ಯ ಜಗತ್ತಿಗೆ ಹಿಡಿಸುವ ರೀತಿಯಲ್ಲಿ ಹೊರತಂದದ್ದು ನೆನಪಿಸಿಕೊಳ್ಳಬಹುದು. ಪುಸ್ತಕ ಹಾಗೂ ಕಾಮಿಕ್ ಜಗತ್ತಿನಲ್ಲಿ ಪ್ರಖ್ಯಾತ ಹೆಸರುಗಳಾದ ದೀಪಕ್ ಚೋಪ್ರ ಹಾಗೂ ಅವರ ಮಗ ಗೋಥಮ್ (ಗೌತಮ್) ಚೋಪ್ರ ಕೂಡ ಇದರಲ್ಲಿದ್ದಾರಂತೆ (ಇವರುಗಳೂ ವರ್ಜಿನ್ ಕಾಮಿಕ್ಸ್ ಸ್ಥಾಪಕರು).

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಈಗ ಜಿ ಎನ್ ಯು / ಗ್ನೂ ಕನ್ನಡದಲ್ಲಿ

ಎಲ್ಲರಿಗೂ ಸ್ವಾತಂತ್ರೊತ್ಸವದ ಶುಭಾಶಯಗಳು,

 ಮುಕ್ತ ತಂತ್ರಾಂಶ ಪ್ರತಿಷ್ಠಾನ (ಎಪ್ಸೆಪ್) ದ ಜಿ ಎನ್ ಯು (ಗ್ನೂ) ವೆಬ್ ಸೈಟನ್ನು ಕನ್ನಡಕ್ಕೆ ಅನುವಾದಿಸುವ ಕೆಲಸವನ್ನ ಶುರು ಮಾಡಿದ್ದೇನೆ. ಗ್ನೂ ಬಗ್ಗೆ ತಿಳಿಯಲಿಚ್ಚಿಸುವ ಎಲ್ಲ ಕನ್ನಡಗರು ಇದರ ಉಪಯೊಗ ಪಡೆದು ಕೊಳ್ಳಬಹುದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ

ಸ್ನೇಹಿತರೆ,

ನಾನು ಸಂಪದದ ಒಬ್ಬ silent ಓದುಗ. ಇದು ನನ್ನ ಮೊದಲ ಗಳಹುವಿಕೆ.

ನಾನೊಬ್ಬ ಕನ್ನಡ ಸಾಫ್ಟ್ ವೇರ್ ತಜ್ಞ. ನಮ್ಮ ಕಂಪೆನಿಯಲ್ಲಿ MSDN subscription ತೆಗೆದುಕೊಂಡಿದ್ದಾರೆ. ನಾನು ಅದರ download ವಿಭಾಗದಲ್ಲಿ ಬೇರೇನೋ ಹುಡುಕುತ್ತಿದ್ದಾಗ ಅದರ ಪ್ರಥಮ ಪುಟದಲ್ಲೇ ನೀಡಿರುವ ಕನ್ನಡ ಮತ್ತು ಹಿಂದಿ glossary ನನ್ನ ಗಮನ ಸೆಳೆಯಿತು. ಅವರ ಪ್ರಕಾರ ಈ ಗ್ಲಾಸರಿಗಳು (ಇದಕ್ಕೆ ಕನ್ನಡ ಪದ ಏನು?) ವಿಂಡೋಸ್ ಮತ್ತು ಆಫೀಸ್ LIPಗಳಲ್ಲಿ ಬಳೆಕಯಾಗಿವೆ. ನೋಡೋಣವೆಂದು ಅವುಗಳನ್ನು ಡೌನ್ ಲೋಡ್ ಮಾಡಿಕೊಂಡೆ. ಹಿಂದಿಯ ಗ್ಲಾಸರಿ ಚೆನ್ನಾಗಿಯೇ ಇದೆ. ಆದರೆ ಕನ್ನಡದ ವಿಷಯಕ್ಕೆ ಬಂದಾಗ ಮಾತ್ರ ಹೊಟ್ಟೆಯಲ್ಲಿ ಚಾಕು ಇರಿದಂತಾಯಿತು. ಅದು ತುಂಬ ಕೆಟ್ಟದಾಗಿದೆ. ಯಾರೋ ಕನ್ನಡ ಗೊತ್ತಿಲ್ಲದವರು ಡಿಕ್ಶನರಿ ನೋಡಿ ಪದಗಳನ್ನು ಜೋಡಿಸಿದಂತಿದೆ. ಉದಾಹರಣೆಗೆ "estimated time left" ಎಂಬುದನ್ನು "ಎಡಕ್ಕೆ ಸಮಯ ಅಂದಾಜು" ಎಂದು ಅನುವಾದಿಸಿದ್ದಾರೆ. ಇದರ ಬಗ್ಗೆ ಯಾರಿಗೆ ದೂರು ಕೊಡಬೇಕು ಎಂದು ತಿಳಿಯುತ್ತಿಲ್ಲ.

ಸಂಪದದಲ್ಲಿ ಕೆಲವು ಗಣ್ಯ ವ್ಯಕ್ತಿಗಳು ಇರುವುದನ್ನು ಗಮನಿಸಿದ್ದೇನೆ. ಉದಾ -ಅನಂತ ಮೂರ್ತಿ, ಓ ಎಲ್ ಎನ್, ಇಸ್ಮಾಯಿಲ್, ಶ್ರೀವತ್ಸ ಝೊಶಿ, ಪವನಜ, ... ದಯವಿಟ್ಟು ನೀವೆಲ್ಲ ಸೇರಿ ಈ ಕನ್ನಡದ ಕೊಲೆಯನ್ನು ತೀವ್ರವಾಗಿ ಪ್ರತಿಭಟಿಸಬೇಕಾಗಿ ಕೇಳೀಕೊಳ್ಳುತ್ತೇನೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ತಂತ್ರಜ್ಞಾನ