ಸುಭಾಷಿತ

ವರುಷತೊಡಕಿನ ದಿನ

ಯುಗಾದಿಯಂಥ ವರ್ಷಾವಧಿ ಹಬ್ಬದ ಮರುದಿನವನ್ನ ವರ್ಷತೊಡಕಿನ ದಿನ ಅಂತ ಕರೆಯೋ ರೂಢಿ. ಚಿಕ್ಕವನಿರುವಾಗ, ಈ ವರ್ಷತೊಡಕಿನ ದಿನ ಏನು ಮಾಡಿದರೆ, ವರ್ಷವಿಡೀ ಅದನ್ನೇ ಮತ್ತೆ ಮತ್ತೆ ಮಾಡ್ತಿರ್ತೇವೆ ಅಂತ ಮನೆಯಲ್ಲಿ ಹೇಳುತ್ತಿದ್ದರು. ಅಂದ್ರೆ ಆ ದಿನ ಸಿನೆಮಾಗೆ ಹೋಗೋದು ಇತ್ಯಾದಿ ಚಟುವಟಿಕೆಗಳು ಮನ್ನಾ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕೇಳಬಾರದ್ದು

ಮೇಲ್ಮೆಯನು ಕೇಳು ನೀ ಚೆಲುವನಲ್ಲ

ನಡತೆಯೆಂಬುದ ಕೇಳು ಕುಲವನಲ್ಲ;

ಕೈಗೂಡಿಸಿದ ಕೇಳು ಕಲಿಕೆಯಲ್ಲ

ನಲಿವು ಪಡೆದುದ  ಕೇಳು ಗಳಿಕೆಯಲ್ಲ!

ಸಂಸ್ಕೃತ ಮೂಲ:

ಗುಣಂ ಪೃಚ್ಛಸ್ವ ಮಾ ರೂಪಂ ಶೀಲಂ ಪ್ರಚ್ಛಸ್ವ ಮಾ ಕುಲಂ

ಸಿದ್ಧಿಂ ಪೃಚ್ಛಸ್ವ ಮಾ ವಿದ್ಯಾ ಸುಖಂ ಪೃಚ್ಛಸ್ವ ಮಾ ಧನಂ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕನ್ನಡದ ಮೊದಲ ಸುಭಾಷಿತ ಆಂಡ್ರಾಯ್ಡ್ App !

ಈ ಸುದ್ದಿಯನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಬಹಳ ಸಂತಸವಾಗುತ್ತಿದೆ!

 ನನ್ನ ಧನ್ಯವಾದಗಳು ನನ್ನ ಪುಸ್ತಕದ ಪ್ರಕಾಶಕರಾದ ಆಕೃತಿ ಪುಸ್ತಕ, ಸಾರಂಗ ಮೀಡಿಯ , ಮತ್ತು ಆನ್ಡ್ರೋಯ್ಡ್ ಗೆ ಅಳವಡಿಸಿದ ಸಾರಂಗ ಇನ್ಫೋಟೆಕ್ ಗೆ ಸಲ್ಲುತ್ತವೆ.

ಕೆಳಗಿನ ಲೇಖನ ಇಂದಿನ (೮/೧/೨೦೧೨) ಗಿಜ್ ಬಾಟ್ ಪೋರ್ಟಲ್ ನಲ್ಲಿ ಬಂದಿದೆ. ಅದರ ಕೊಂಡಿ - http://kannada.gizbot.com/news/kannada-1st-android-app-on-subhashita

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.
ಸರಣಿ: 

ಹಾಳು ಮದನನಿಗೊಂದು ಧಿಕ್ಕಾರ

ಎರಡು ಕನಸು, ಬಂಧನ ಮೊದಲಾದ ಕನ್ನಡ ಚಲನಚಿತ್ರಗಳನ್ನು ನೋಡಿ ಪಳಗಿರುವವರಿಗೆ,  ಪ್ರೇಮ ತ್ರಿಕೋನಗಳೇನು ಹೊಸದಲ್ಲ. ಆದರೆ, ಪ್ರೇಮ ಚೌಕ , ಪ್ರೇಮ ಪಂಚಕೋನಗಳನ್ನ ಕಂಡಿದ್ದೀರ?  ಇಲ್ಲಿದೆ ನೋಡಿ ಅಂತಹದ್ದೊಂದು ಪ್ರಸಂಗ:

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಸರಣಿ: 

ವ್ಯತ್ಯಾಸ

 ಹಿಗ್ಗುತ ಕಾಲವ ಕಳೆಯುವರು

ಕಬ್ಬ-ಕಲಿಕೆಯಲಿ ತಿಳಿದವರು
ಕೆಟ್ಟ ಚಟಗಳಲಿ ಜಗಳದಲಿ
ಮತ್ತೆ ನಿದ್ದೆಯಲಿ ಕಡುಮೂಳರು
 
ಸಂಸ್ಕೃತ ಮೂಲ:
 
ಕಾವ್ಯಶಾಸ್ತ್ರವಿನೋದೇನ ಕಾಲೋ ಗಚ್ಛತಿ ಧೀಮತಾಮ್
ವ್ಯಸನೇನ ಚ ಮೂರ್ಖಾನಾಂ ನಿದ್ರಯಾ ಕಲಹೇನ ವಾ
 
काव्यशास्त्रविनोदेन कालो गच्छति धीमताम् ।
व्यसनेन च मूर्खाणां निद्रया कलहेन वा ॥
 
-ಹಂಸಾನಂದಿ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ತರುಣಿಯರ ಬೆಡಗು

ಮೊಗದಲ್ಲಿ ಮುಗುಳುನಗೆ ಕುಡಿನೋಟದೋಲಾಟ ಬಗೆ ಸೆಳೆವ ನುಡಿಯೊನಪು ಬೆಡಗು ವಯ್ಯಾರ ಚಿಗುರಂತೆಸೆವ ನಡಿಗೆ ಹೊಸಹರೆಯ ಮುಟ್ಟಿರುವ ಚಿಗರೆಗಣ್ಣಿಯರಲ್ಲದಾವ ಸೊಗಸಿರದು?

ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕ, ೬): ಸ್ಮಿತಂ ಕಿಂಚಿದ್ವಕ್ತ್ರೇ ಸರಲತರಲೋ ದೃಷ್ಟಿ ವಿಭವಃ ಪರಿಸ್ಪಂದೋ ವಾಚಾಮಾಭಿನವ ವಿಲಾಸೋಕ್ತಿ ಸರಸ: | ಗತಾನಾವಾರಂಭಃ ಕಿಸಲಯಿತ ಲೀಲಾ ಪರಿಕರಃ ಸ್ಪೃಶಂತ್ಯಾಸ್ತಾರುಣಂ ಕಿಮಿವ ನ ಹಿ ರಮ್ಯಂ ಮೃಗದೃಶಃ || -ಹಂಸಾನಂದಿ ಕೊ: ಬಗೆ = ಮನಸ್ಸು ಅನ್ನುವುದಕ್ಕೊಂದು ಅಚ್ಚಕನ್ನಡದ್ದೇ ಪದ. ಕೊ.ಕೊ : ಮೊದಲ ಸಾಲಿಗೆ "ಸ್ಮಿತಂ ಕಿಂಚಿನ್ಮುಗ್ಧಂ." ಎನ್ನುವ ಪಾಠಾಂತರವೂ ಇದೆ. ಅರ್ಥದಲ್ಲಿ ಬಹಳ ಹೆಚ್ಚಿನ ಬದಲಾವಣೆಯಾಗದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.8 (4 votes)
To prevent automated spam submissions leave this field empty.
ಸರಣಿ: 

ಇಷ್ಟು ದೊರಕಿದರೆ ....

ಇರುವುದೇ ಮುಗಿತಾಯ ಮನದಾಸೆಗಳಿಗಿಲ್ಲಿ

ವರುಷ ಕಳೆದಿರಲೇನು ಸಾವಿರವೊ ಲಕ್ಷ ?

ನೆರವೇರಿರಲು ಒಮ್ಮೆ ಬಯಕೆಗಳ  ಸಾಲೊಂದು

ಮರಳಿ ಹುಟ್ಟುವುವಲ್ಲ ಮಗದೊಂದು ಸಾಲು!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.3 (3 votes)
To prevent automated spam submissions leave this field empty.

ದಿಟದ ಒಡವೆಗಳು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಮೆಲ್ಲ ಮೆಲ್ಲನೆ ಬಂದು ಗಲ್ಲಕೆ ಮುತ್ತು ಕೊಟ್ಟು...

ಮಗುವೆಂದು ತಿಳಿಯುತ್ತ

ಮುತ್ತಿಟ್ಟ ಗೋಪಿಯರ

ತುಟಿಕಂಪ  ಸವಿಯುವನು ಈತ!

ಮಗುವೆಂದು ಅಪ್ಪಿದರೆ

ಬರಸೆಳೆದು ಕುತ್ತಿಗೆಯ

ಬಣ್ಣ ಕೆಂಪೇರಿಸಿದ ಈತ!

ಮಗುವೆಂದು  ಮುದ್ದಿನಲಿ

ತೊಡೆಮೇಲೆ ಏರಿಸಲು

ಮುಟ್ಟುತಲೆ ನಾಚಿಸುವ ಈತ!

ಕೇಡಿಗನು ಈ ಮಗುವೆ

ಕಳುಹಿಸಲಿ ಬಲುದೂರ

ನಮ್ಮೆಲ್ಲ  ಕೇಡುಗಳ ಈಗ!

ಸಂಸ್ಕೃತ ಮೂಲ (ಲೀಲಾಶುಕನ ಕೃಷ್ಣಕರ್ಣಾಮೃತ 2-68 ):

ಓಷ್ಟಂ ಜಿಘ್ರನ್ ಶಿಶುರಿತಿ ಧಿಯಾ ಚುಂಬಿತೋ ವಲ್ಲವೀಭಿಃ

ಕಂಠಂ ಗೃಹ್ಣನ್ ಅರುಣಿತ ಪದಂ ಗಾಢಮಾಲಿಂಗಿತಾಂಗಃ |

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಬಗೆ ಬಗೆಯ ಜನರು

ಯೋಗ್ಯರಿವರು ತಮ್ಮೊಳಿತನೂ ಕಡೆಗಣಿಸಿ ಪರಹಿತವನೆಸಗುವವರು;
ನಾಡಾಡಿಗಳು ಸ್ವಾರ್ಥವನು ಬಿಡದೇ ಉಳಿದವರಿಗೊಳಿತು ಮಾಡಿಯಾರು.
ತಮಗೋಸುಗ ಹೆರವರೊಳಿತಿಗೆ ತಡೆಯಾದವರು ಮನುಜ ರಕ್ಕಸರು;

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಆಸೆ

ಕಾಣದಿರಲವಳ ನೋಟವೊಂದರ ಆಸೆ

ಕಂಡರಾಗುವುದು  ಅಪ್ಪಿ ಸುಖಿಸುವ ಆಸೆ ;

ಸೊಗಸುಗಣ್ಣಿಯನೊಮ್ಮೆ ಅಪ್ಪಿ ಮುದ್ದಿಡಲು

ಬರುವುದು ಒಡನೆಯೇ ಒಂದಾಗುವಾಸೆ!ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ) :ಅದರ್ಶನೇ ದರ್ಶನಮಾತ್ರ ಕಾಮಾ

ದೃಷ್ಟಾ ಪರಿಷ್ಟಂಗ ಸುಖೈಕ ಲೋಲಾ |

ಆಲಿಂಗಿತಾಯಾಂ ಪುನರಾಯತಾಕ್ಷ್ಯಾ

-ಮಾಶಾಸ್ಮಹೇ ವಿಗ್ರಹಯೇರಭೇದಮ್ ||-ಹಂಸಾನಂದಿಕೊ: ಈ ಅನುವಾದವನ್ನು ನೋಡಿದ ನನ್ನ ಗೆಳೆಯರೊಬ್ಬರು ಇದನ್ನ ಯಾವುದೋ ಸಿನೆಮಾದಲ್ಲಿ ಇಂತಹದ್ದೇ ಸಾಲುಗಳನ್ನ ಕೇಳಿದ ಹಾಗಿದೆ ಅಂದರು. ಇದ್ದರೂ ಇರಬಹುದು - ಜೈ ಭರ್ತೃಹರಿ! ಪಾಪ ಕ್ರೆಡಿಟ್ ಸಿಕ್ಕಿತೋ ಇಲ್ಲವೋ ಗೊತ್ತಿಲ್ಲ.

ಮಳೆಗಾಲದ ಅಗಲಿಕೆ

ಹುಬ್ಬೆನುವ ಬಿಲ್ಲಿನ ಚುರುಕು ಬಾಣಗಳು

ಗಂಡು ಸರಿದಾರಿಯಲಿ ನಡೆವನು  ಇಂದ್ರಿಯಗಳನಂಕೆಯಲಿಡುವನು
ನಾಚಿಕೆಯನು ಬಿಡನು ವಿನಯದಾಸರೆಯಲಿರುವನು;  ಯಾವತನಕ?
ಬೆಡಗಿಯರ ಸೆಳೆವ ಕುಡಿಹುಬ್ಬು ಬಿಲ್ಲಿನಲಿ ಹೂಡಿದ ಬಟ್ಟಲು ಕಣ್ಣಿನಾ
ನೋಟದಂಬುಗಳು  ತಗುಲಿ ಅವನೆದೆಗಾರಿಕೆಯನೇ ಕದಿವ ತನಕ  ! 

ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ*) :

ಸನ್ಮಾರ್ಗೇ ತಾವದಾಸ್ತೇ ಪ್ರಭವತಿ ಚ ನರಸ್ತಾವದೇವೇಂದ್ರಿಯಾಣಾಂ
ಲಜ್ಜಾಂ ತಾವದ್ವಿಧತ್ತೇ ವಿನಯಮಪಿ ಸಮಾಲಂಭತೇ ತಾವದೇವ |
ಭ್ರೂಚಾಪಾಕೃಷ್ಟ ಮುಕ್ತಾಃ ಶ್ರವಣಪಥಗತಾ ನೀಲ ಪಕ್ಷ್ಮಾಣ ಏತೇ
ಯಾವಲ್ಲೀಲಾವತೀನಾಂ ಹೃದಿ ನ ಧೃತಿ ಮುಷೋ ದೃಷ್ಟಿಭಾಗಾಃ ಪತಂತಿ ||

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಇನಿಯೆ?

ಬೇಗುದಿ ತರುವಳು ನೆನಪಿನಲೆ

ಮರುಳು ಹಿಡಿಸುವಳು ನೋಡಿದರೆ;

ಸೋಕಲು ಇವಳು ಮೈ ಮರವೆ!

ಇವಳಿಗಿನಿಯೆ ಎನ್ನುವ ಹೆಸರೆ? 
 
ಸಂಸ್ಕೃತ ಮೂಲ  (ಭರ್ತೃಹರಿಯ ಶೃಂಗಾರಶತಕದಿಂದ):
 
ಸ್ಮೃತಾ ಭವತಿ ತಾಪಾಯ ದೃಷ್ಟಾ ಚೋನ್ಮಾದಕಾರಿಣೀ |

ಸ್ಪೃಷ್ಟಾ ಭವತಿ ಮೋಹಾಯ ಸಾ ನಾಮ ದಯಿತಾ ಕಥಮ್ ||
 
-ಹಂಸಾನಂದಿ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಬದುಕುವ ದಾರಿ

ವಿಷವಿರದ ಹಾವಾದರೂ
ಹಿರಿದಾಗಿ ಹೆಡೆ ಎತ್ತಲಿ;
ವಿಷವು ಇಹುದೋ ಇಲ್ಲವೋ
ಹಗೆಯ ಹೆದರಿಸಿ ಗೆಲ್ಲಲಿ ;

ಸಂಸ್ಕೃತ ಮೂಲ (ಚಾಣಕ್ಯ ಪಂಡಿತನ ಚಾಣಕ್ಯನೀತಿಯಿಂದ):

ನಿರ್ವಿಷೇಣಾಪಿ ಸರ್ಪೇಣ ಕರ್ತವ್ಯಾ ಮಹತೀ ಫಣಾ |
ವಿಷಮಸ್ತು ನ ಚಾಪ್ಯಸ್ತು ಫಟಾಟೋಪೋ ಭಯಂಕರಃ ||

-ಹಂಸಾನಂದಿ 

ಕೊ: ಚಾಣಕ್ಯ ನೀತಿಯನ್ನು ಬರೆದ ಚಾಣಕ್ಯ ಪಂಡಿತನು ಚಂದ್ರಗುಪ್ತನ ಗುರುವಾದ, ಅರ್ಥಶಾಸ್ತ್ರವನ್ನು ಬರೆದ ಕೌಟಲ್ಯನೇ ಎಂದು ಒಂದು ಮತ. ಈ ಚಾಣಕ್ಯ ಪಂಡಿತ ಬೇರೊಬ್ಬ ನಂತರ ಬಂದ ಕವಿ ಎಂಬುದು ಇನ್ನೊಂದು - ಹೀಗೆ ಎರಡೂ ಅಭಿಪ್ರಾಯಗಳು ಚಲಾವಣೆಯಲ್ಲಿವೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಸರಣಿ: 

ಸಂಕೋಲೆಗಳು

ನಸುನಗೆ ತುಸುಲಜ್ಜೆ  ಜೊತೆಗಿನಿತು ದಿಗಿಲು
ತಿರುಗಿಸಿದ ಮೊಗ ಮತ್ತೆ ಅರಗಣ್ಣ ನೋಟಗಳು
ಮಚ್ಚರದ ಮಾತುಗಳು ಜಗಳಗಳು ಬೆಡಗುಗಳು
ಪರಿಪರಿಯ ಬಗೆಯಲ್ಲಿ ಸಂಕಲೆಯೇ ಹೆಣ್ಣುಗಳು!

ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ):

ಸ್ಮಿತೇನ ಭಾವೇನ ಚ ಲಜ್ಜಯಾ ಭಯಾ
ಪರಾಙ್ಮುಖೈರರ್ಧ ಕಟಾಕ್ಷ ವೀಕ್ಷಣೈಃ |
ವಚೋಭಿರೀರ್ಷ್ಯಾ ಕಲಹೇನ ಲೀಲಯಾ
ಸಮಸ್ತ ಭಾವೈಃ ಖಲು ಬಂಧನಂ ಸ್ತ್ರೀಯಃ ||

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.
ಸರಣಿ: 

ವಿಷವಾಗುವ ಅಮೃತ

ಕಣ್ಣ ಮುಂದಿರುವ ತನಕ ಈಕೆ
ಅಮೃತ ತುಂಬಿದ ಬಿಂದಿಗೆ;
ಕಣ್ಣ ಹಾದಿಯಲಿರದೆ ಹೋದರೆ 
ವಿಷಕ್ಕಿಂತಲೂ ಹೆಚ್ಚಿಗೆ!

ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ):

ತಾವದೇವಾಮೃತಮಯೀ ಯಾವಲ್ಲೋಚನ ಗೋಚರಾ |
ಚಕ್ಷುಶ್ಪಥಾತ್ ಅತೀತಾ ತು ವಿಷಾದಪಿ ಅತಿರಿಚ್ಯತೇ ||

-ಹಂಸನಾದ

ಕೊ:ಮೂಲದಲ್ಲಿಲ್ಲದ "ಬಿಂದಿಗೆ" ಅನ್ನುವ ಪದವು ಮೂಲದಲ್ಲಿ ಇಲ್ಲದಿದ್ದರೂ, ಅರ್ಥವನ್ನು ಹೊಮ್ಮಿಸುತ್ತದೆಂದು ಬಳಸಿದ್ದೇನೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ನೆರವಿಗೆ ಬರುವವರು

ಕಿರಿಯರಾದರೇನು? ನೆರವಾದಾರು;
ಹಿರಿಯರಿಂದಾಗದಿದ್ದರೆ ಏನು?
ದಾಹವಾರಿಸಲು ಆಗದು ಕಡಲಿಗೆ
ಬಾವಿನೀರದನು ತಣಿಸದೇನು?

ಸಂಸ್ಕೃತ ಮೂಲ:

ಉಪಕರ್ತುಂ ಯಥಾ ಸ್ವಲ್ಪಃ ಸಮರ್ಥಾ ನ ತಥಾ ಮಹಾನ್ ।
ಪ್ರಾಯಃ ಕೂಪಸ್ತೃಷಾಂ ಹಂತಿ ನ ಕದಾಪಿ ತು ವಾರಿಧಿಃ ॥

उपकर्तुं यथा स्वल्पः समर्थो न तथा महान् ।
प्रायः कूपस्तृषां हन्ति न कदापि तु वारिधिः ॥

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಹಂಸನಾದ - ಪುಸ್ತಕ ಪರಿಚಯ, ಕನ್ನಡ ಪ್ರಭದಲ್ಲಿ ಇಂದು

 ಇವತ್ತಿನ ಕನ್ನಡ ಪ್ರಭದ ಸಾಪ್ತಾಹಿಕ ಪ್ರಭದಲ್ಲಿ (೨೮ ಆಗ್ನ್ನಸ್ಟ್ ೨೦೧೧ ಸಂಚಿಕೆ) ನನ್ನ ಪುಸ್ತಕ "ಹಂಸನಾದ"ದ ಪರಿಚಯ ಮತ್ತು ವಿಮರ್ಶೆ ಓದಿನ ಮನೆ ಅಂಕಣದಲ್ಲಿ ಪ್ರಕಟವಾಗಿದೆ. ಬರೆದವರು ಡಾ.ವಾಸುದೇವ ಶೆಟ್ಟಿ ಅವರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಕಾರ್ಗಾಲದ ಹಂಬಲ

ಕಾರಮೋಡಗಳು ; ನೆಲಮರೆಸಿರುವ ಹೂವುಗಳಹಾಸು; ಅರಳಿದ ಕದಂಬ ಕಾಡುಮಲ್ಲೆಗಳ ಕಂಪ ಬೀರುವ ಗಾಳಿ; ಮಾರುದನಿಸುವ ಕುಣಿವ ನವಿಲುಗಳ ಕೇಕೆಯ ಸೊಲ್ಲು - ತರುವುವು ಹಂಬಲವ ಕೊರಗು ಸಂತಸದಲ್ಲಿಹರೆಲ್ಲರಿಗು ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ) ವಿಯದುಪಚಿತ ಮೇಘೋ ಭೂಮಯಃ ಕಂದಲಿನ್ಯೋ ನವಕುಟಜ ಕದಂಬಾಮೋದಿನೋ ಗಂಧವಾಹಾಃ | ಶಿಖಿಕುಲಕಲ ಕೇಕಾರವರಮ್ಯಾ ವನಾಂತಾಃ ಸುಖಿನಮಸುಖಿನಂ ವಾ ಸರ್ವಮುತ್ಕಂಠಯಂತಿ || -ಹಂಸಾನಂದಿ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ವಸಂತನ ತಪ್ಪು

 ವಸಂತದಲಿಂಪಾದ ಕೋಗಿಲೆಗಳ ಗಾನ
ಮಲೆನಾಡ ಗಿರಿಗಳಲಿ ಸುಳಿವ ತಂಗಾಳಿ
ಅಗಲಿ ನೊಂದವರ ಜೀವವನೇ ಸೆಳೆದಾವು
ಕೇಡುಗಾಲದಲಮೃತವೂ ಆದೀತು ನಂಜು!

ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ )

ಮಧುರಯಂ ಮಧುರೈರಪಿ ಕೋಕಿಲಾ-
ಕಲರವೈರ್ಮಲಯಸ್ಯ ಚ ವಾಯುಭಿಃ |
ವಿರಹಿಣಃ ಪ್ರಹಿಣಸ್ತಿ ಶರೀರಿಣೋಂ
ವಿಪದಿ ಹಂತ ಸುಧಾSಪಿ ವಿಷಾಯತೇ ||

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಹಣೆ ಬರಹ

ಆನೆ ಹಕ್ಕಿ ಹಾವುಗಳಿಗೆ ತಪ್ಪದ ಸೆರೆವಾಸ

ನೇಸರಚಂದಿರಗಿಹ ರಾಹುಕೇತುಗಳ ಕಾಟ
ಜೊತೆಗೆ ಅರಿವುಳ್ಳವರ ಬಡತನವ ನೋಡಿ
ಎನ್ನ ಮನವೆಂದಿತು "ಹಣೆ ಬರಹವೇ ಗಟ್ಟಿ"
 
ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ)
 
ಗಜ ಭುಜಂಗ ವಿಹಂಗಮ ಬಂಧನಂ
ಶಶಿ ದಿವಾಕರಯೋರ್ಗ್ರಹ ಪೀಡನಂ |
ಮತಿಮತಾಂ ಚ ನಿರೀಕ್ಷ್ಯ ದರಿದ್ರತಾಂ
ವಿಧಿರಹೋ ಬಲವಾನ್ ಇತಿ ಮೇ ಮತಿಃ ||
 
-ಹಂಸಾನಂದಿ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಉಳಿಸಬಾರದವುಗಳು

ಆರಿಸದೇ ಉಳಿದುರಿ ತೀರಿಸದ ಕಡ
ಮನದಲುಳಿದ ವೈರ ಇವು ಮೂರು
ಇರುವಲ್ಲೇ ಬೆಳೆಯುತ ಹೋಗುವುವು
ಅದಕೇ ಇವುಗಳ ಉಳಿಸದಿರು

ಸಂಸ್ಕೃತ ಮೂಲ:

ಅಗ್ನಿ ಶೇಷಂ ಋಣಃ ಶೇಷಂ
ಶತ್ರು ಶೇಷಂ ತಥೈವ ಚ |
ಪುನಃ ಪುನಃ ಪ್ರವರ್ಧಂತೇ
ತಸ್ಮಾತ್ಛೇಷಂ ನ ರಕ್ಷಯೇತ್ ||

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಕೊರತೆ ಮರೆಯಿಸುವ ಗುಣಗಳು

ಎಣಿಯಿರದ ರತುನಗಳ ಹೆತ್ತ ಪರ್ವತದ
ಸುತ್ತ ತುಂಬಿರುವ ಭಾರಿ ಹಿಮರಾಶಿಯೂ
ಅದರ ಹಿರಿಮೆಯ ಇನಿತೂ ಕುಂದಿಸದು;

ಒಳಿತಾದ ಗುಣಗಳೇ ತುಂಬಿ ತುಳುಕಿರಲು
ಮರೆಸಿ ಹೋದೀತು ಇರಲೊಂದು ಕುಂದು
ಬೆಳುದಿಂಗಳು ಚಂದಿರನ ಕಲೆ ಮರೆಸುವಂತೆ!

ಸಂಸ್ಕೃತ ಮೂಲ (ಕಾಳಿದಾಸನ ಕುಮಾರ ಸಂಭವದಿಂದ):

ಅನಂತರತ್ನ ಪ್ರಭವಸ್ಯ ಯಸ್ಯ
ಹಿಮಂ ನ ಸೌಭಾಗ್ಯವಿಲೋಪಿ ಜಾತಂ |
ಏಕೋ ಹಿ ದೋಷೋ ಗುಣಸನ್ನಿಪಾತೇ
ನಿಮಜ್ಜತೀಂದೋಃ ಕಿರಣೇಷ್ವಿವಾಂಕಃ ||

-ಹಂಸಾನಂದಿ
 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಕೊಂಕು ನೋಟದವಳ ಜಾಣ್ಮೆ

 ಮೋಡಿಗೊಳಿಸುವರು ಅಮಲೇರಿಸುವರು
ಮೇಲೆ ಕಟಪಟೆಯ ಕಟಕಿಯಾಡುವರು;

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ವಿದ್ಯೆಯೆಂಬ ಸಿರಿ

ತುಡುಗ ಕದಿಯಲಾರದ ಅರಸ ಕಸಿಯಲಾರದ
ಸೋದರರಲಿ ಪಾಲಾಗದ ಹೊರಲು ಭಾರವಿರದ
ಬಳಸುತ್ತ ಹೋದಂತೆ ದಿನದಿನವೂ ಹೆಚ್ಚುವ
ವಿದ್ಯೆಯೆಂಬ ಸಿರಿಮಿಗಿಲು ತಾನೆಲ್ಲ ಐಸಿರಿಗೂ!

ಸಂಸ್ಕೃತ ಮೂಲ:

ನ ಚೋರ ಹಾರ್ಯಂ ನ ಚ ರಾಜ ಹಾರ್ಯಂ
ನ ಭ್ರಾತೃ ಭಾಜ್ಯಂ ನ ಚ ಭಾರಕಾರೀ |
ವ್ಯಯೇ ಕೃತೇ ವರ್ಧತ ಏವ ನಿತ್ಯಮ್
ವಿದ್ಯಾಧನಂ ಸರ್ವಧನಪ್ರಧಾನಂ ||

न चोरहार्यं न च राजहार्यं
न भ्रातृभाज्यं न च भारकारी |
व्यये कृते वर्धत एव नित्यं
विद्याधनं सर्वधनप्रधानम् ||

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಮೇಲೆ - ಕೆಳಗೆ

ಕೊಡುವುದರಲ್ಲಿರುವಂಥ ಮೇಲ್ಮೆ
ಕೂಡಿಡುವುದರಲ್ಲಿಲ್ಲವೆ ಇಲ್ಲ;
ಮೋಡವು ನೀರ ನೀಡುತ ಮೇಲಿರೆ
ಕೂಡಿಡುವ ಕಡಲು ಕೆಳಗಿಹುದಲ್ಲ !

ಸಂಸ್ಕೃತ ಮೂಲ:

ಗೌರವಂ ಪ್ರಾಪ್ಯತೇ ದಾನಾನ್ನ ತು ವಿತ್ತಸ್ಯ ಸಂಚಯಾತ್ |
ಸ್ಥಿತಿರುಚ್ಚೈಃ ಪಯೋದಾನಾಂ ಪಯೋಧೀನಾಧಮಃ ಸ್ಥಿತಿಃ ||

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ತಿರುಕನ ಕುರುಹು

ಎಡವುವ ನಡಿಗೆ ಸೊರಗಿದ ದನಿಯು
ಒಡಲಲಿ ಬೆವರು ಅಂಜಿದ ತನುವು
ಮಡಿಯುವ ವೇಳೆಯ ಈ ಕುರುಹುಗಳೇ
ಬೇಡುವವನಲೂ ಕಾಣುವುವು!

ಸಂಸ್ಕೃತ ಮೂಲ:

ಗತೇರ್ಭಂಗಃ ಸ್ವರೋ ಹೀನೋ ಗಾತ್ರೇ ಸ್ವೇದೋ ಮಹದ್ಭಯಮ್
ಮರಣೇ ಯಾನಿ ಚಿಹ್ನಾನಿ ತಾನಿ ಚಿಹ್ನಾನಿ ಯಾಚಕೇ

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ದಂಡದ ಕೆಲಸಗಳು

ಸೊಕ್ಕಿದ ಸಲಗವ ಕಮಲದ ದಂಟಿನಲಿ
ಕಟ್ಟಿ ಹಿಡಿಯಲುಜ್ಜುಗಿಸುವಂತೆ

ಗಟ್ಟಿ ವಜ್ರವನು ಹೂವಿನ ದಳದಲಿ
ಪಟ್ಟೆನಿಸಿ ಮುರಿಯ ತೊಡಗುವಂತೆ

ಉಪ್ಪಿನ ಕಡಲನು ಜೇನ ಹನಿಯಿಂದ
ಹೆಚ್ಚು ರುಚಿಗೊಳಿಸ ಬಯಸುವಂತೆ

ಒಳ್ಳೆ ಮಾತಿನಲಿ ಮೂಳರ ದಾರಿಗೆ
ಜಗ್ಗಿಸಿ ತರಹೋಗುವುದು ದಂಡವಂತೆ!

ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ)

ವ್ಯಾಲಂ ಬಾಲ ಮೃಣಾಲ ತಂತುಭಿರಸೌ ರೋದ್ಧುಂ ಸಮುಜ್ಜೃಂಭತೇ
ಭೇತ್ತುಮ್ ವಜ್ರಮಣಿಂ ಶಿರೀಶಕುಸುಮ ಪ್ರಾಂತೇನ ಸನ್ನಹ್ಯತೇ||
ಮಾಧುರ್ಯಂ ಮಧುಬಿಂದುನಾ ರಚಯಿತುಂ ಕ್ಷಾರಾಂಬುಧೇರೀಹತೇ
ಮೂರ್ಖಾನ್ ಯಃ ಪ್ರತಿನೇತುಮಿಚ್ಛತಿ ಬಲಾತ್ ಸೂಕ್ತೈಃ ಸುಧಾಸ್ಯಯಂದಿಭಿಃ ||

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಜೀವದ ಗೆಳೆಯರು

ಹಾಲದು ತನ್ನೊಳು ಬೆರೆಸಿದ ನೀರಿಗೆ
ತನ್ನ ನಡತೆಯನೆಲ್ಲವ ನೀಡುವುದು
ಹಾಲ ಕಾಯಿಸಿರೆ ನೀರು ಗೆಳೆಯನ
ನೋವಿಗೆ ಮರುಗಿ ಹಬೆಯಾಡುವುದು

ನೀರಿನ ಗತಿಯ ನೋಡಿದ ಹಾಲು
ಉಕ್ಕಿ ಬೆಂಕಿಗಾಹುತಿಯಾಗುತಿರಲು
ಬೆರೆಸಲು ಅದಕೆ ತುಸುವೇ ನೀರನು
ಕೂಡಲೆ ತಣಿವನು ಹೊಂದುವುದು!

ಒಳ್ಳೆಯ ಗೆಳೆಯರ ಗೆಳೆತನವೆಂದರೆ
ಇರುವುದು ಇಂತಹ ರೀತಿ;
ನೋವಲಿ ನಲಿವಲಿ ಹೇಗೇ ಇರಲಿ
ಜೊತೆಯನು ಬಿಡದಿಹ ರೀತಿ!

ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ)

ಕ್ಷೀರೇಣಾತ್ಮಗತೋದಕಾಯ ಯಿ ಗುಣಾಃ ದತ್ತಾಃ ಪುರಾ ತೇSಖಿಲಾಃ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ವಾಣಿಯ ವೈಪರೀತ್ಯ

ನಿಕ್ಕುವದಿ ವಾಣಿಯ ಹೋಲುವ

ಬೊಕ್ಕಸವು ಬೇರೆಲ್ಲೂ ಇಲ್ಲ;

ವೆಚ್ಚ ಮಾಡಿದರೆ ಹೆಚ್ಚುತಲಿದ್ದು

ಬಚ್ಚಿಡಲು ಸೊರಗುವುದಲ್ಲ!

ಸಂಸ್ಕೃತ ಮೂಲ (ಸುಭಾಷಿತ ರತ್ನ ಭಾಂಡಾಗಾರದಿಂದ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (3 votes)
To prevent automated spam submissions leave this field empty.
ಸರಣಿ: 

ಶಿವನ ಒಲಿಸುವ ಪರಿ

ದಟ್ಟಕಾಡಲೊಬ್ಬಂಟಿ ಅಲೆವರು
ಬೆಟ್ಟದ ತುದಿಗೂ ಏರುವರು

ಕೊಳದಾಳದಲಿ ಮುಳುಗುವರು,
ತಿಳಿಗೇಡಿಗಳು ಹೂಗಳಿಗೆಂದು!

ಮನದ ಕೊಳದಲೇ ಅರಳಿದ
ಹೂವೊಂದ ನೆಚ್ಚಿ ಮುಡಿಸಲು

ಉಮೆಯರಸ ಮೆಚ್ಚಿ ನಲಿವ-

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಬೇಡುವವನ ಪಾಡು

ಎಡವುವ ನಡಿಗೆ ಅಡಗಿದ ಗಂಟಲು
ಒಡಲಲಿ ಬೆವರು ಬೆದರಿದ ತನುವು
ಸಾವು ಬಳಿಸಾರೆ ಕಾಂಬ ಗುರುತುಗಳು
ಬೇಡುವನಲೂ ಕಾಣ ಸಿಕ್ಕಾವು!

ಸಂಸ್ಕೃತ ಮೂಲ:

ಗತೇರ್ಭಂಗಃ ಸ್ವರೋ ಹೀನೋ ಗಾತ್ರೇ ಸ್ವೇದೋ ಮಹದ್ಭಯಮ್ |
ಮರಣೇ ಯಾನಿ ಚಿಹ್ನಾನಿ ತಾನಿ ಚಿಹ್ನಾನಿ ಯಾಚಕೇ ||

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಮಾಡಲಾರದ ಕೆಲಸ -೨

ಮೊಸಳೆ ಹಲ್ಲಿಗೆ ಸಿಲುಕಿದ ರತುನವ ಹೆಕ್ಕಿ ತರಬಹುದು
ಉಬ್ಬರದಿ ಮೊರೆವ ಕಡಲನ್ನು ಹಾಯಾಗಿ ದಾಟಬಹುದು;
ಭುಸುಗುಡುವ ನಾಗರವ ಹೂವಂತೆ ಮುಡಿಯಬಹುದು
ಕಡುಮರುಳರ ಮನವನು ಮಣಿಸಿ ಮೆಚ್ಚಿಸಲಾಗದು!

ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ)

ಪ್ರಸಹ್ಯ ಮಣಿಂ ಉದ್ಧರೇತ್ ಮಕರ ವಕ್ತ್ರದಂಷ್ಟ್ರಾಂತರಾತ್
ಸಮುದ್ರಮಪಿ ಸಂತರೇತ್ ಪ್ರಚಲದೂರ್ಮಿ ಮಾಲಾಂಕುಲಾಮ್|
ಭುಜಂಗಮಪಿ ಕೋಪಿತಂ ಶಿರಸಿ ಪುಷ್ಪವತ್ ಧಾರಯೇನ್ನತು
ಪ್ರತಿವಿಷ್ಟ ಮೂರ್ಖಜನ ಚಿತ್ತಮಾರಾಧಯೇತ್ ||

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಕಾಯ ಮರೆತಳಯ್ಯ ಮರುಳಿಗೆ ವಶವಾಗಿ!’ಆಡ ಹೋದ ಕೃಷ್ಣ ಈಗ ಮಣ್ಣು ತಿಂದನಮ್ಮ’! ’ಕೃಷ್ಣ, ಇದು ನಿಜವೇನು’?
’ಹೇಳಿದ್ಯಾರು’? ’ಇವನೇ, ಬಲರಾಮ’ ’ಬರೀ ಸುಳ್ಳು, ನೋಡು ಬಾಯಲಿ ’
ಎನ್ನುತಾವ ಮಗು ಬಾಯ ತೆರೆದಿರಲು ತಾಯಿ ಕಂಡು ಮೂರೂ ಜಗವನು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಗಳಿಕೆ

ಗಳಿಸಬಹುದೆಷ್ಟು ಹಣವನು? ಬೊಮ್ಮ ಹಣೆಯಲಿ ಬರೆದಷ್ಟು!

ಮರುಭೂಮಿಯಲಾದರೂ ಮೇರುಗಿರಿಗೆ ಹೋದರೂ ಹೆಚ್ಚು ಸಿಗುವುದಿಲ್ಲ;

ಸಿರಿವಂತ ಜಿಪುಣರ ಮುಂದೆರಗದೇ ನೀನು ದಿಟ್ಟನಾದರೆ ಲೇಸು.

ಬಾವಿಯೇನು? ಕಡಲೇನು? ಕೊಡದಲ್ಲಿ ಹೆಚ್ಚು ತುಂಬುವುದಿಲ್ಲ!

ಸಂಸ್ಕೃತ ಮೂಲ:

ಯದ್ಧಾತ್ರಾ ನಿಜಫಾಲಪತ್ರಲಿಖಿತಂ ಸ್ತೋಕಂ ಮಹದ್ವಾ ಧನಮ್

ತತ್ಪ್ರಾಪ್ನೋತೀ ಮರುಸ್ಥಲೋSಪಿ ನಿತರಾಮ್ ಮೇರೌ ತತೌ ನಾಧಿಕಂ |

ತದ್ಧೀರೋ ಭವ ವಿತ್ತವತ್ತ್ಸು ಕೃಪಣಂ ವೃತ್ತಿಂ ವೃಥಾ ಮಾ ಕೃಥಾಃ

ಕೂಪೇ ಪಶ್ಯ ಪಯೋನಿಧಿವಾಪಿ ಘಟಃ ಪ್ರಾಪ್ನೋತಿ ತುಲ್ಯಂ ಜಲಂ ||

यद्वात्रा निजफालपट्टलिखितं स्तोकं महद्वा धनं

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಂಸಾರ ತಾಪತ್ರಯಗಳು

ಒಂದಷ್ಟು ದಿನಗಳಿಂದ ಏನನ್ನೂ ಹೆಚ್ಚಿಗೆ ಬರೆಯೋಕೆ ಆಗ್ತಿಲ್ಲ. ಹಾಗಂತ ನಾನೇನು ದೊಡ್ಡ ಬರಹಗಾರ ಅಂತ ಅನ್ನೋ ಭ್ರಮೆ ಏನೂ ನನ್ನನ್ನು ಆವರಿಸಿಲ್ಲ. ಆಗ ಈಗ ಏನೋ ಒಂದು ನಾಕು ನಾಲು ಬರೆದರೆ ಮನಸ್ಸಿಗೂ ಹಗುರ ಅಷ್ಟೇ. ಯಾಕೆ ಬರೀಲಿಲ್ಲ ಅಂದ್ರೆ ಅದಕ್ಕೇನು ದೊಡ್ಡ ಕಾರಣ ಇಲ್ಲ ಬಿಡಿ. ನೂರೆಂಟು ಕೆಲಸ ಕಾರ್ಯ, ಸಂಸಾರ ತಾಪತ್ರಯಗಳು ಇದ್ದಿದ್ದೇ ಅಲ್ವೇ ನನಗೂ ನಿಮಗೂ ಎಲ್ಲರಿಗೂ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.

ಮಾಡಲಾರದ ಕೆಲಸ

ಮರಳ ಹಿಂಡುತ ನೀವು ಎಣ್ಣೆಯನೂ ತೆಗೆದೀರಿ
ಬಿಸಿಲುಗುದುರೆ ನೀರಲ್ಲೇ ದಾಹವ ನೀಗಿಸೀರಿ;
ಅಲೆದಾಡುತ ಕಂಡೀರಿ ಕೊಂಬಿರುವ ಮೊಲವನ್ನೂ
ಕಡುಮರುಳರ ಮನವನೆಂತು ಮಣಿಸಿ ಮೆಚ್ಚಿಸುವಿರಿ?

ಸಂಸ್ಕೃತ ಮೂಲ - ಭರ್ತೃಹರಿಯ ನೀತಿಶತಕದಿಂದ

ಲಭೇತ ಸಿಕತಾಸು ತೈಲಮಪಿ ಯತ್ನತಃ ಪೀಡಯನ್
ಪಿಬೇತ್ಚ ಮೃಗತೃಷ್ಣಿಕಾಸು ಸಲಿಲಂ ಪಿಪಾಸಾರ್ದಿತಃ ||
ಕದಾಚಿದಪಿ ಪರ್ಯಟನ್ಶಶವಿಷಾಣಮಾಸಾದಯೇನ್ನತು
ಪ್ರತಿನಿವಿಷ್ಟಮೂರ್ಖಜನಚಿತ್ತಮಾರಾಧಯೇತ್ ||

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಹೋಗಬಾರದ ಮನೆ

ಹೋದರೆದ್ದು ನಿಂತು ನಗುತಾ
’ಹದುಳವಿರುವಿರೇ?’ ಎನ್ನದ
ಕೆಡುಕು-ಒಳಿತನು ಹಂಚಿಕೊಳ್ಳದ
ಬೀಡನೆಂದೂ ಹೊಗದಿರು.

ಸಂಸ್ಕೃತ ಮೂಲ ( ಪಂಚತಂತ್ರದ ಮಿತ್ರಸಂಪ್ರಾಪ್ತಿಯಿಂದ)

ನಾಭ್ಯುತ್ಥಾನಕ್ರಿಯಾ ಯತ್ರ ನಾಲಾಪಾ ಮಧುರಾಕ್ಷರಾ |
ಗುಣದೋಷಕಥಾ ನೈವ ತತ್ರ ಹರ್ಮ್ಯೇ ನ ಗಮ್ಯತೇ ||

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಸರಣಿ: 

ಚೆಲುವೆಯ ನೋಟ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಜಿಂಕೆ ಕಣ್ಣವಳು ಮಾಡಿದ ತಪ್ಪು

ಅಲುಗುತಿಹ ಬಳೆಗಳಲಿ ಬಳುಕುವೊಡ್ಯಾಣದಲಿ
ಝಲ್ಲೆನುವ ಗೆಜ್ಜೆಯ ಹಂಸವ ನಾಚಿಸುವ ನಡೆಯಿರುವ
ತರಳೆಯರು ಅದಾರ ಮನವ ಅಂಕೆಗೆಡಿಸದೇ ಇಹರು
ತಮ್ಮಂಜಿದ ಮುಗುದೆ ಚಿಗರೆಯ ಹೋಲ್ವ ಕಣ್ಗಳಲಿ!

ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ)

ಏತಾಶ್ಚಲದ್ವಲಯ ಸಂಹತಿ ಮೇಖಲೋತ್ಥ
ಝಂಕಾರನೂಪುರ ಪರಾಜಿತ ರಾಜಹಂಸ್ಯಃ |
ಕುರ್ವಂತಿ ಕಸ್ಯ ನ ಮನೋ ವಿವಶಂ ತರುಣ್ಯೋ
ವಿತ್ರಸ್ತ ಮುಗ್ಧಹರಿಣೀಸದೃಶೈಃ ಕಟಾಕ್ಷೈಃ ||

-ಹಂಸಾನಂದಿ

ಕೊ: ಪೂರ್ತಿ ಪದಶಃ ಅನುವಾದವಲ್ಲದಿದ್ದರೂ ಭಾವವನ್ನು ಉಳಿಸಿದ್ದೇನೆ ಎಂದುಕೊಂಡಿದ್ದೇನೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಸರಣಿ: 

ಸವತಿ ಮಾತ್ಸರ್ಯ

ಎಲ್ಲ ಚುಕ್ಕಿಗೂ ಸವತಿ ಸ್ವಾತಿ ಎಂಬುವಳು
ಮುತ್ತುಗಳಿಗವಳಮ್ಮ ಎಂಬ ಮುನಿಸಿನಲಿ
ಹೆತ್ತಳು ರೋಹಿಣಿಯು ನೀಲರತುನವ ತಾನು
ಮತ್ತೆ ಗೋಪಿಯರೆದೆಯಲ್ಲಿ ಮೆರೆಯಲೆಂದು!

ಸಂಸ್ಕೃತ ಮೂಲ: (ಲೀಲಾ ಶುಕನ ಕೃಷ್ಣಕರ್ಣಾಮೃತ ಶ್ಲೋಕ ೬೫)

ಸ್ವಾತೀ ಸಪತ್ನೀ ಕಿಲ ತಾರಕಾಣಾಂ
ಮುಕ್ತಾಫಲಾನಾಂ ಜನನೀತಿ ರೋಷಾತ್|
ಸಾ ರೋಹಿಣೀ ನೀಲಮಸೂತ ರತ್ನಂ
ಕೃತಾಸ್ಪದಂ ಗೋಪವಧೂ ಕುಚೇಷು ||

-ಹಂಸಾನಂದಿ

ಕೊನೆಯ ಕೊಸರು : ದಕ್ಷ ಬ್ರಹ್ಮನಿಗೆ ೨೭ ಹೆಣ್ಣು ಮಕ್ಕಳು, ಅವರೆಲ್ಲರನ್ನೂ ಚಂದ್ರನಿಗೆ ಮದುವೆ ಮಾಡಿಕೊಟ್ಟ ಅನ್ನುವುದೊಂದು ಕಥೆ. ಇವರೇ ಕೃತ್ತಿಕೆಯಿಂದ ಭರಣಿಯ ವರೆಗಿನ ೨೭ ನಕ್ಷತ್ರಗಳು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.
ಸರಣಿ: 

ಬೆಲೆ ಅರಿಯದವರು

ವ್ಯಾಕರಣ ಬರೆದ ಪಾಣಿನಿಯನು ತಿಂದು ತೇಗಿತು ಸಿಂಹ
ಮದ್ದಾನೆ ತುಳಿತದಿಂದ ಮೀಮಾಂಸಕಾರ ಜೈಮಿನಿ ಸತ್ತ;
ಛಂದೋಜ್ಞಾನಿ ಪಿಂಗಳನ ಅಲೆಯಲ್ಲಿ ಸೆಳೆಯಿತು ಮೊಸಳೆ
ಅಗ್ಗಳರ ಹೆಗ್ಗಳಿಕೆಯರಿವು ಕೆರಳಿದ ತಿಳಿಗೇಡಿಗಿರುವುದುಂಟೆ?

ಸಂಸ್ಕೃತ ಮೂಲ (ಪಂಚತಂತ್ರದ ಮಿತ್ರ ಸಂಪ್ರಾಪ್ತಿ ಯಿಂದ)

ಸಿಂಹೋ ವ್ಯಾಕರಣಸ್ಯ ಕರ್ತುರಹರತ್ ಪ್ರಾಣಾನ್ ಪ್ರಿಯಂ ಪಾಣಿನೇಃ
ಮೀಮಾಂಸಾಕೃತಂ ಉನ್ಮಮಾಥಸಹಸಾ ಹಸ್ತೀ ಮುನಿಂ ಜೈಮಿನಿಮ್ |
ಛಂದೋಜ್ಞಾನನಿಧಿಂ ಜಘಾನ ಮಕರೋ ವೇಲಾತಟೇ ಪಿಂಗಲಮ್
ಅಜ್ಞಾನಾವೃತ ಚೇತಸಾಮತಿರುಷಾಂ ಕೋSರ್ಥಸ್ತಿರಸ್ಚಾಂ ಗುಣೈಃ ||

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಹೊಟ್ಟೆ ತುಂಬಿಸದ ಭಾಷೆ

ಈಚೀಚೆಗೆ ಏನ್ಗುರುನವರು ಕನ್ನಡ ಅನ್ನದ ಭಾಷೆಯಾಗಬೇಕು, ಅನ್ನದ ಭಾಷೆಯಾಗಬೇಕು ಅಂತ ಹೇಳ್ತಾ ಇರೋದನ್ನ ಕೇಳೇ ಇರ್ತೀರ. ಅದು ಸರಿ, ಎಲ್ಲರ ಗುರಿಯೂ ಒಂದೇ ಆಗಿರೋದಿಲ್ಲ ನೋಡಿ. ಒಬ್ಬರಿಗೆ ಕ್ರಿಕೆಟ್ ಅಂದ್ರೆ ಜೀವ. ಇನ್ನೊಬ್ಬರಿಗೆ ಅದು ಕಂಡರಾಗದು. ಒಬ್ಬರಿಗೆ ಸಂಗೀತ ಅಂದ್ರೆ ಆಗದು. ಇನ್ನೊಬ್ಬರಿಗೆ ಹಾಡನ್ನ ಕೇಳ್ದೇ ಇದ್ರೆ ತಲೆನೋವು ಬರುತ್ತೆ. ಈ ಯಾರಿಗೂ ಕ್ರಿಕೆಟ್ಟೇ ಆಗಲೀ, ಹಾಡು ಕೇಳೋದೇ ಆಗಲಿ, ಅನ್ನ ಕೊಡುವ ಕೆಲಸಗಳಲ್ಲ. ಆದರೂ ಅವರವರ ಸಂತೋಷಕ್ಕೆ ಅವರವರು ಮಾಡುವುದಷ್ಟೇ. ಎಷ್ಟೋ ಬ್ಲಾಗರುಗಳ ತುಂಬಾ ಒಳ್ಳೇ ಬರಹಗಳನ್ನ ಓದಿದೀನಿ. ಅದರಲ್ಲಿ ಎಷ್ಟು ಜನಕ್ಕೆ ಬರವಣಿಗೆ ಅನ್ನ ಕೊಡ್ತಿದೆಯೋ ಇಲ್ಲವೋ ನಾ ಕಾಣೆ. ಆದರೆ ನಾನು ಓದಿದಾಗ, ನನಗಂತೂ ಖುಷಿ ಅಂತೂ ಆಗ್ತಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಮೊಂಡು ಬುದ್ಧಿಯವರು

ಚುರುಕು ಬುದ್ಧಿಯವರು
ಮೊನಚು ಅಂಬಿನಂತೆ;
ತುಸು ಸೋಂಕಿದರೂ
ನೇರ ಒಳ ಹೊಗುವರು.

ಮೊಂಡ ಬುದ್ಧಿಯವರೋ
ಬೀರಿದ ಕಲ್ಲಿನಂತೆ;
ಎಷ್ಟು ತಗುಲಿದರೂ
ಹೊರಗೇ ಉಳಿವರು!

ಸಂಸ್ಕೃತ ಮೂಲ (ಶಿಶುಪಾಲವಧ , ೨-೭೮) :

ಸ್ಪೃಶಂತಿ ಶರವತ್ತೀಕ್ಷ್ಣಾಃ ಸ್ತೋಕಮಂತರ್ವಿಶಂತಿ ಚ |
ಬಹುಸ್ಪೃಶಾSಪಿ ಸ್ಥೂಲೇನ ಸ್ಥೀಯತೇ ಬಹಿರಶ್ಮವತ್ ||

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.
ಸರಣಿ: 

ಪುಣ್ಯವಂತರು

ನಡತೆಯಿಂದ ಸಂತಸನೆ ತರುವ ಮಗನು
ಮಡದಿ ಗಂಡನೊಳಿತ ಬಯಸುವಂಥವಳು
ಬದಲಾಗದ ಗೆಳೆಯ ನೋವಲೂ ನಲಿವಲೂ
ಹದುಳಿಗರಿಗೆ ಜಗದೊಳೀ ಮೂವರು ಸಿಕ್ಕಾರು!

ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ)

ಪ್ರೀಣಾತಿ ಯಃ ಸುಚರಿತಃ ಪಿತರಂ ಸ ಪುತ್ರೋ
ಯದ್ಭರ್ತುರೇವ ಹಿತಮಿಚ್ಛತಿ ತತ್ ಕಲತ್ರಂ |
ತನ್ಮಿತ್ರಮಾಪದಿ ಸುಖೇ ಚ ಸಮಕ್ರಿಯಂ ಯದ್
ಏತತ್ ತ್ರಯಂ ಜಗತಿ ಪುಣ್ಯಕೃತೋ ಲಭಂತೇ||

-ಹಂಸಾನಂದಿ

ಕೊ: ಹದುಳ = ಕ್ಷೇಮ, ಶ್ರದ್ಧೆ, ಸಂತೋಷ ಹೀಗೆಲ್ಲಾ ಅರ್ಥಗಳಿವೆ. ಹಾಗಾಗಿ, ಹದುಳಿಗ = ಪುಣ್ಯವಂತ ಅಂತ ಬಳಸಿದ್ದೇನೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಉರಿಯುವ ಕರ್ಪೂರ

ಕುತ್ತಿಗೆ ಬಿದ್ದರೂ ದೊಡ್ಡವರು
ತಮ್ಮಯ ನಡತೆಯ ಬಿಡದಿಹರು;
ಕಿಚ್ಚು ತಗುಲಿದರು ಕಪ್ಪುರವು
ಕಮ್ಮನೆ ಕಂಪನೇ ಬೀರುವುದು!

ಸಂಸ್ಕೃತ ಮೂಲ:

ಸ್ವಭಾವಂ ನ ಜಹಾತ್ಯೇವ ಸಾಧುರಾಪದ್ಗತೋSಪಿ ಸನ್ |
ಕರ್ಪೂರ: ಪಾವಕಸ್ಪೃಷ್ಟ: ಸೌರಭಂ ಲಭತೇತರಾಮ್ ||

-ಹಂಸಾನಂದಿ

ಕೊ.ಕೊ: ಇವತ್ತು ಸಂಕ್ರಾಂತಿ. ಎಳ್ಳು ತಿಂದು ಒಳ್ಳೇ ಮಾತಾಡ್ತಾ, ನಾವೆಲ್ಲರೂ ’ದೊಡ್ಡವ’ರಾಗೋಣ ಅನ್ನುವ ಹಾರೈಕೆ ನನ್ನದು!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಬುರುಡೆ ಇಲ್ಲದ ವೀಣೆ
 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (3 votes)
To prevent automated spam submissions leave this field empty.
ಸರಣಿ: 

ಬಾಳಿನಿಂದ ಬೆಂಕಿಗೆ!

ಮದನನೆಂಬ ಬೆಸ್ತ ಭರದಿ ಹಾಕಿಹನು
ಹೆಣ್ಣೆಂಬ ಗಾಳವನು ಬಾಳಗಡಲಿನಲಿ;
ಅವಳ ತುಟಿಗಳ ಸೆಳೆತಕ್ಕೀಡಾದವರನು
ಹಾಕಿ ಹುರಿಯುವನು ಒಲವ ಬೆಂಕಿಯಲಿ!

ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ)

ವಿಸ್ತಾರಿತಂ ಮಕರಕೇತನಧೀವರೇಣ
ಸ್ತ್ರೀಸಂಜ್ಞಿತಂ ಬಡಿಶಮತ್ರ ಭವಾಂಬುರಾಶೌ
ಯೇನಾಚಿರಾತ್ತಧರಾಮಿಷಲೋಲ ಮರ್ತ್ಯ-
ಮತ್ಸ್ಯಾಸ್ವಿಕೃಷ್ಯ ಸ ಪಚತ್ಯನುರಾಗವಹ್ನೋ

-ಹಂಸಾನಂದಿ

ಕೊ: ಮೂಲದಲ್ಲಿರುವ ’ಮಕರಕೇತನ’ = ಮೊಸಳೆಬಾವುಟದವನು = ಮನ್ಮಥ ಅನ್ನುವುದನ್ನು ಸುಲಭವಾಗಿ ತಿಳಿಯಲೆಂದು ’ಮದನ’ನೆಂದೇ ಇರಿಸಿದ್ದೇನೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಕೈ ಕೆಸರಾದರೆ ಬಾಯ್ಮೊಸರು

ಬಯಕೆಯು ಇದ್ದು ಜತುನವಿಲ್ಲದಿರೆ
ಕೆಲಸವೆಂದು ಕೈಗೂಡದು;
ಮಲಗಿದ ಸಿಂಹದ ಬಾಯಲಿ ಜಿಂಕೆಯು
ತಾನಾಗೇ ಹೊಕ್ಕಾಡದು!

ಸಂಸ್ಕೃತ ಮೂಲ (ಪಂಚತಂತ್ರದ ಮಿತ್ರ ಸಂಪ್ರಾಪ್ತಿ ಯಿಂದ)

ಉದ್ಯಮೇನ ಹಿ ಸಿದ್ಧ್ಯಂತಿ ಕಾರ್ಯಾಣಿ ನ ಮನೋರಥೈಃ|
ನ ಹಿ ಸುಪ್ತಸ್ಯ ಸಿಂಹಸ್ಯ ಪ್ರವಿಶಂತಿ ಮುಖೇ ಮೃಗಾಃ||

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಭಕ್ತಿ

ಮರದ ರೆಂಬೆಗೇ ಹತ್ತಿಕೊಳುವ ಅಂಕೋಲೆ ಬೀಜಗಳಂತೆ,
ಸೂಜಿಗಲ್ಲಿಗೇ ಅಂಟುವ ದಿಕ್ಸೂಚಿಯಂತೆ,
ಹದಿಬದೆಯು ತನ್ನ ಪತಿಯ ಜೊತೆ ಬಿಡದಿರುವಂತೆ,
ಬಳ್ಳಿ ಮರವನು ಹುಡುಕಿ ತಬ್ಬಿ ಹಬ್ಬುವಂತೆ,
ಕಡಲ ದಾರಿಯನರಸಿ ಹರಿದು ಸೇರುವ ಹೊಳೆಯಂತೆ,
ಓ ಶಿವನೆ, ಮನವೆನದು ಅರಸಿ ಅರಸಿ
ಕೊನೆಗೆ ಸೇರಿ ನಿಲ್ಲುವುದು ನಿನ್ನ ಅಡಿದಾವರೆಗಳಲೇ;
ಇದನೆ ತಾನೆ ಭಕ್ತಿಯೆಂದೆನುವುದು!

ಸಂಸ್ಕೃತ ಮೂಲ (ಶಂಕರಾಚಾರ್ಯರ ಶಿವಾನಂದಲಹರಿಯಿಂದ)

ಅಂಕೋಲಂ ನಿಜಬೀಜ ಸಂತತಿರಯಸ್ಕಾಂತೋಪಲಂ ಸೂಚಿಕಾ
ಸಾಧ್ವೀ ನೈಜವಿಭುಂ ಲತಾ ಕ್ಷಿತಿರುಹಂ ಸಿಂಧುಃ ಸರಿದ್ವಲ್ಲಭಂ |
ಪ್ರಾಪ್ನೋತೀಹ ಯಥಾ ತಥಾ ಪಶುಪತೇ ಪಾದಾರವಿಂದದ್ವಯಂ
ಚೇತೋವೃತ್ತಿರುಪೇತ್ಯ ತಿಷ್ಠತಿ ಸದಾ ಸಾ ಭಕ್ತಿರಿತ್ಯುಚ್ಯತೇ ||

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಸರಣಿ: 

ಪಾಲುದಾರರು

ಮಾಡಿದವ ಮಾಡಿಸಿದವ ಬೆಂಬಲಿಸಿದವ ಒಡಂಬಟ್ಟವ
ಕೆಡುಕಾಗಲಿ ಒಳಿತಾಗಲಿ ಆಗುವನು ಸಮ ಪಾಲುದಾರ!

ಸಂಸ್ಕೃತ ಮೂಲ:

ಕರ್ತಾ ಕಾರಯಿತಾಚೈವ ಪ್ರೇರಕಶ್ಚಾನುಮೋದಕ:
ಸುಕೃತೇ ದುಷ್ಕೃತೇ ಚೈವ ಚತ್ವಾರ: ಸಮಭಾಗಿನ:

-ಹಂಸಾನಂದಿ

ಕೊ: ಈಗ ತಾನೇ ವಿಕಾಸ ಹೆಗಡೆ ಅವರ ಗೂಗಲ್ ಬಜ್ ನಲ್ಲಿ ಓದಿದ್ದಿದು. ಚೆನ್ನಾಗಿದೆ ಅನ್ನಿಸಿ ತಕ್ಷಣ ಹೀಗೆ ಅನುವಾದಿಸಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಕೊಲ್ಲುವ ಕಣ್ಣ ನೋಟ

ಸರ್ರನೇ ಸರಿವಂಥ ಹೊಳೆವ ಚರ್ಮದ ಹಾವು
ಕಚ್ಚುವುದೂ ಮೇಲವಳ ದಿಟ್ಟಿ ಬೀಳ್ವುದಕಿಂತ
ಮದ್ದು ಕೊಟ್ಟಾರಿಲ್ಲಿ ಹಾವು ಕಚ್ಚಿದರೆ; ಚೆಲುವೆ-
ಗಣ್ಣ ಚಣನೋಟಕ್ಕೆನಗೆ ಸಿಗದು ಔಷಧಿಯು!

ಸಂಸ್ಕೃತ ಮೂಲ: (ಭರ್ತೃಹರಿಯ ಶೃಂಗಾರಶತಕದಿಂದ)

ವ್ಯಾದೀರ್ಘೇಣ ಚಲೇನ ವಕ್ರಗತಿನಾ ತೇಜಸ್ವಿನಾ ಭೋಗಿನಾ
ನೀಲಾಬ್ಜದ್ಯುತಿನಾಹಿನಾ ಪರಮಹಮ್ ದಷ್ಟೋ ನ ತಚ್ಚಕ್ಷುಷಾ|
ದಷ್ಟೇ ಸಂತಿ ಚಿಕಿತ್ಸಕಾ ದಿಶಿ ದಿಶಿ ಪ್ರಾಯೇಣ ಧರ್ಮಾರ್ಥಿನೋ
ಮುಗ್ಧಾಕ್ಷೀಕ್ಷಣವೀಕ್ಷಿತಸ್ಯ ನ ಹಿ ಮೇ ಮಂತ್ರೋ ನ ಚಾಪ್ಯೌಷಧಮ್||

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಮುನ್ನೆಚ್ಚರಿಕೆ

ಮೈಯಲ್ಲಿ ಆರೋಗ್ಯವಿರುವಾಗಲೇ ಸಾವಿನ್ನೂ ದೂರದಲ್ಲಿರುವಾಗಲೇ
ತನ್ನೊಳಿತ ತಾನೆ ಮಾಡಿಕೊಳದಿರೆ ಅಸುನೀಗುವಾಗಿನ್ನೇನು ಮಾಡುವೆ?

ಸಂಸ್ಕೃತ ಮೂಲ: (ಸುಭಾಷಿತ ರತ್ನ ಭಾಂಡಾಗಾರದಿಂದ)

ಯಾವತ್ಸ್ವಸ್ಥಮಿದಂ ದೇಹಂ ಯಾವನ್ಮೃತ್ಯುಶ್ಚ ದೂರತಃ |
ತಾವದಾತ್ಮಹಿತಂ ಕುರ್ಯಾತ್ ಪ್ರಾಣಾಂತೇ ಕಿಂ ಕರಿಷ್ಯಸಿ ||

-ಹಂಸಾನಂದಿ

ಕೊ: ಈ ಹಿಂದೆ ಸುಮಾರು ಇದೇ ಅರ್ಥ ಬರುವ ಇನ್ನೊಂದು ಸುಭಾಷಿತವನ್ನು ಇಲ್ಲಿ ಹಾಕಿದ್ದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಸರಣಿ: 

ಬಿಲ್ಲುಗಾರ್ತಿಗೆ

ಚೆಲುವೆ! ನಿನ್ನಂಥ ಬಿಲ್ಗಾರ್ತಿ
ಸುಲಭದಲಿ ಕಾಣಸಿಗುವುದಿಲ್ಲ;
ಬಾಣ ಹೂಡದೆ ಬರಿ ಸೆಳೆತದಲೇ**
ಮನಸುಗಳನು ಸೀಳಿಬಿಡುವೆಯಲ್ಲ!

ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ)

ಮುಗ್ಧೇ ಧಾನುಷ್ಕತಾ ಕೇಯಮಪೂರ್ವಾ ದೃಶ್ಯತೇ ತ್ವಯಿ |
ಯದಾ ವಿಧ್ಯಸಿ ಚೇತಾಂಸಿ ಗುಣೇರೈವ ನ ಸಾಯಕೈಃ ||

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಜೀವನವೆಂಬ ವನ

ಸಾವು ಬಳಿ ಬಂದಿರಲು ಯಾರು ಯಾರನು ಕಾಯುವರು?

ಹಗ್ಗ ಹರಿದಿರಲು ಬಿಂದಿಗೆಯ ಇನ್ಯಾರು ಹಿಡಿಯುವರು?

ಈ ಜಗದ ಬಾಳುವೆಯು ಅಡವಿಯ ಮರಗಳ ಸಾಟಿ

ಕಡಿಯುವುದು ಚಿಗುರುವುದು ನಡೆಯುತಲೆ ಇರುವುದು

ಸಂಸ್ಕೃತ ಮೂಲ - (ಸ್ವಪ್ನವಾಸವದತ್ತ  ನಾಟಕದ ಆರನೇ ಅಂಕದಿಂದ)

ಕಃ ಕಂ ಶಕ್ತೋ ರಕ್ಷಿತುಂ ಮೃತ್ಯುಕಾಲೇ

ರಜ್ಜುಚ್ಛೇದೇ ಕೇ ಘಟಂ ಧಾರಯಂತಿ |

ಏವಂ ಲೋಕಸ್ತುಲ್ಯಧರ್ಮೋ ವನಾನಾಂ

ಕಾಲೇ ಕಾಲೇ ಛಿದ್ಯತೇ ರುಹ್ಯತೇ ಚ ||

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಸರಣಿ: 

ಮದ್ದಿಲ್ಲದ ರೋಗ

ಬೆಂಕಿಗೆ ನೀರು, ಬಿಸಿಲಿಗೆ ಕೊಡೆ;
ನಂಜು ಏರಿದರೆ ಮಂತ್ರದ ತಡೆ;
ಮದಿಸಿದ ಆನೆಗೆ ಅಂಕುಶದಿರಿತ;
ಕತ್ತೆ ಆಕಳಿಗೆ ದೊಣ್ಣೆಯ ಗುದ್ದು,
ರೋಗ ರುಜಿನಕೆ ವೈದ್ಯನ ಮದ್ದು;
ಹುಡುಕಬಹುದು ಉಳಿದೆಲ್ಲಕು ಮದ್ದು,
ವಾಸಿಯಾಗದ್ದೊಂದೇ - ಪೆದ್ದನ ಮೊದ್ದು.

ಸಂಸ್ಕೃತ ಮೂಲ - ಭರ್ತೃಹರಿಯ ನೀತಿಶತಕದಿಂದ

ಶಕ್ಯೋ ವಾರಯಿತುಂ ಜಲೇನ ಹುತಭುಕ್ ಛತ್ರೇಣ ಸೂರ್ಯಾತಪೋ
ನಾಗೇಂದ್ರೋ ನಿಶಿತಾಂಕುಶೇನ ಸಮದೌ ದಂಡೇನ ಗೋಗರ್ದಭೌ
ವ್ಯಾಧಿರ್ಭೇಷಜ ಸಂಗ್ರಹೈಶ್ಚ ವಿವಿಧೈರ್ಮಂತ್ರಪ್ರಯೋಗೈರ್ವಿಷಂ
ಸರ್ವಸ್ಯೌಷದಮಸ್ತಿ ಶಾಸ್ತ್ರವಿಹಿತಂ ಮೂರ್ಖಸ್ಯ ನಾಸ್ತ್ಯೌಷಧಂ

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಪರೋಪಕಾರ

ಅರಳಿಸುವ ತಾವರೆಗಳ ಆ ನೇಸರ
ಬಿರಿಯಿಸುವ ನೈದಿಲೆಗಳನು ಚಂದಿರ
ಕೋರದೇ ಮಳೆಸುರಿಸೀತು ಮುಗಿಲು
ಹೆರವರೊಳಿತ ತಾವೇ ನಡೆಸುವರಗ್ಗಳರು

ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ):

ಪದ್ಮಾಕರಂ ದಿನಕರೋ ವಿಕಚೀಕರೋತಿ
ಚಂದ್ರೋ ವಿಕಾಸಯತಿ ಕೈರವಚಕ್ರವಾಲಮ್

ನಾಭ್ಯಾರ್ಥಿತೋ ಜಲಧರೋSಪಿ ಜಲಂ ದದಾತಿ
ಸಂತಃ ಸ್ವಯಂ ಪರಹಿತೇ ನಿಹಿತಾಭಿಯೋಗಾಃपद्माकरं दिनकरो विकचीकरोति

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ನಾಟ್ಯಗುರುವಿಗೊಂದು ನಮನ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ನಾಳೆಗಾಗಿ ಇಂದೇ ದುಡಿ!

ಒಡಲೆಂಬ ಮನೆಯು ಗಟ್ಟಿಮುಟ್ಟಾಗಿರಲು,
ಮುಪ್ಪೆನುವುದಿನ್ನೂ ಬಳಿಸಾರದೇ ಇರಲು,
ಕಿವಿಮೂಗುಕಣ್ಣುಗಳ ಕಸುವುಗುಂದದೇ ಇರಲು,
ಜೀವ ತಾನಿನ್ನೂ ಸೊರಗಿ ಹೋಗದೇ ಇರಲು,
ಅರಿತವರು ಆಗಲೇ ದುಡಿಯುತಲಿ ಇರಬೇಕು;
ತಮ್ಮ ಏಳಿಗೆಯನ್ನು ತಾವೆ ತರುತಿರಬೇಕು!
ಇದನು ಮಾಡದೆ ಹೋಗಿ ಮನೆ ಹತ್ತಿ ಉರಿವಾಗ
ಬಾವಿ ತೋಡಲು ಹೊರಡುವುದೆಂತಹ ಕೆಲಸ?

ಸಂಸ್ಕೃತ ಮೂಲ (ಭರ್ತೃಹರಿಯ ವೈರಾಗ್ಯ ಶತಕದಿಂದ):

ಯಾವತ್ಸ್ವಸ್ಥಮಿದಂ ಕಲೇಬರಗೃಹಂ ಯಾವಚ್ಚ ದೂರೇ ಜರಾ
ಯಾವಚ್ಚೇಂದ್ರಿಯಶಕ್ತಿರಪ್ರತಿಹತಾ ಯಾವತ್ ಕ್ಷಯೋ ನಾಯುಷಃ |

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ನರಕಕ್ಕೊಂದು ಸುಲಭದ ದಾರಿ

ಮರಗಳ ಕಡಿದು ಪಶುಗಳ ಕೊಂದು
ನೆತ್ತರ ಕೆಸರನು ಮಾಡಿದವರಿಗೂ
ಸ್ವರ್ಗದ ಬಾಗಿಲು ತೆರೆದಿಹುದಾದರೆ
ಮತ್ತಾರು ನರಕಕೆ ಹೋಗುವರು?

ಸಂಸ್ಕೃತ ಮೂಲ - ಪಂಚತಂತ್ರದ ’ಕಾಕೋಲೂಕೀಯ’ ದಿಂದ:

ವೃಕ್ಷಾಂಶ್ಚಿತ್ವಾ ಪಶೂನ್ಹತ್ವಾ ಕೃತ್ವಾ ರುಧಿರಕಾರ್ದಮಂ |
ಯದ್ಯೇವಂ ಗಮ್ಯತೇ ಸ್ವರ್ಗೇ ನರಕಃ ಕೇನ ಗಮ್ಯತೇ ||

वृक्षान्श्चित्वा पशून्हत्वा कृत्वा रुधिरकर्दमं ।
यद्देवम् गम्यते स्वर्गे नरकः केन गम्यते ॥

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಸರಣಿ: 

ಜನ್ಮಾಂತರದ ನೆನಹು

ಕಣ್ಣು ಸೊಗಸನು ಕಂಡಾಗ ಕಿವಿಗೆ ಇನಿದು ಕೇಳ್ದಾಗ
ನೆಮ್ಮದಿಯಲಿಹ ಮನಕೂ ಚಡಪಡಿಕೆ ಉಂಟಾಗೆ
ನಿಚ್ಚಯದಿ ಆ ಮನವು ಅರಿಯದೇ ನೆನೆದಿಹುದು 
ಮುನ್ನವಾವುದೋ ಹುಟ್ಟಿನ ಹಿತದ ಸಂಗತಿಗಳನು!

ಸಂಸ್ಕೃತ ಮೂಲ - ಕಾಳಿದಾಸನ 'ಅಭಿಜ್ಞಾನ ಶಾಕುಂತಲ' ನಾಟಕ (ಐದನೇ ಅಂಕ)
ರಮ್ಯಾಣಿ  ವೀಕ್ಷ್ಯ ಮಧುರಾಂಶ್ಚ ನಿಶಮ್ಯ ಶಬ್ದಾನ್
ಪರ್ಯುತ್ಸುಕೀ ಭವತಿ ಯತ್ ಸುಖಿತೋSಪಿ ಜಂತುಃ |
ತಚ್ಚೇತಸಾ ಸ್ಮರತಿ ನೂನಮ್ ಅಬೋಧ ಪೂರ್ವಂ
ಭಾವ ಸ್ಥಿರಾಣಿ ಜನನಾಂತರ ಸೌಹೃದಾನಿ ।।

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಬಿಡುಗಡೆಯ ಬೇಡಿ

ಇದ್ದರೆ ಆಸೆಯು ಮನುಜರಲಿ ಅದು
ಅಚ್ಚರಿ ತರಿಸುವ ಸಂಕಲೆಯಂತೆ;
ತೊಟ್ಟವರದನು ಓಡುತಲಿರುವರು
ಬಿಚ್ಚಲು ನಿಲುವರು ಹೆಳವರಂತೆ!

ಸಂಸ್ಕೃತ ಮೂಲ:

ಆಶಾ ನಾಮ ಮನುಷ್ಯಾಣಾಂ ಕಾಚಿದಾಶ್ಚರ್ಯ ಶೃಂಖಲಾ |
ಯಯಾ ಬದ್ಧಾಃ ಪ್ರಧಾವಂತಿ ಮುಕ್ತಾಃ ತಿಷ್ಠಂತಿ ಪಂಗುವತ್ ||

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಸರಣಿ: 

ಎರಡು ಸುಭಾಷಿತಗಳು

ಅದೇನೋ ಕೆಲವು ಅನುವಾದಗನ್ನು ಮಾಡತೊಡಗಿದಾಗ ಯಾವುದೋ ಒಂದು ಪದ ಹಿಡಿಸದೇ ಹೋದರೆ,  ಪ್ರಕಟಿಸದೇ ಹಾಗೇ ಕರಡಾಗೇ ಇಟ್ಟುಬಿಡುವುದು ನನ್ನ ರೂಢಿ. ಇವತ್ತು ಹಿಂದಿನ ಕರಡುಗಳನ್ನೆಲ್ಲ ನೋಡುವಾಗ ಒಂದೆರಡನ್ನ ಸರಿಮಾಡಿದ್ದಾಯ್ತು. ಅದನ್ನ ಒಟ್ಟಿಗೇ ಹಾಕಿದ್ದೇನೆ.

ಹೆಜ್ಜೆ ಇಡುವ ಮೊದಲು..

ಗಟ್ಟಿ ನೆಲದ ಮೇಲೆ ಮುಂಗಾಲಿಟ್ಟೇ
ಎತ್ತುವರು ಹಿಂಗಾಲನು ಜಾಣರು;
ಮತ್ತೆ ಮುಂಬರುವುದ ನೋಡದೆಲೆ
ಇದ್ದೆಡೆಯನು ನೀ ತೊರೆಯದಿರು!

ಸಂಸ್ಕೃತ ಮೂಲ:

ಚಲತ್ಯೇಕೇನ ಪಾದೇನ ತಿಷ್ಠತ್ಯೇಕೇನ ಪಂಡಿತಃ |
ನಾಸಮೀಕ್ಷ್ಯಾಪರಂ ಸ್ಥಾನಂ ಪೂರ್ವಮಾಯಾತನಂ ತ್ಯಜೇತ್ ||

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.
ಸರಣಿ: 

ಗ್ರಹಬಲ

ರಟ್ಟೆಯಲಿ ಕಸುವಿಲ್ಲದವಗೆ ಗಟ್ಟಿ ಮನಸು ಇಲ್ಲದವಗೆ
ನೆರವನು ನೀಡುವನೆಂತು ಆಗಸದಲಿರುವ ಚಂದಿರನು?

ಸಂಸ್ಕೃತ ಮೂಲ:

ಯೇಷಾಂ ಬಾಹುಬಲಂ ನಾಸ್ತಿ ಯೇಷಾಂ ನಾಸ್ತಿ ಮನೋಬಲಮ್ |
ತೇಷಾಂ ಚಂದ್ರಬಲಂ ದೇವಃ ಕಿಂ ಕರೋತಿ ಅಂಬರೇ ಸ್ಥಿತಮ್ ||

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಒಳಿತು

ಸಿರಿಯೆಂಬುದಕಿದೆ ಕಡಲ ಅಲೆಯಂತೆ ಹೊಯ್ದಾಟ
ಹರೆಯವೋ? ಇರಬಹುದು ನಾಲ್ಕಾರು ದಿವಸ;
ಹಿಂಗಾರ ತೆಳುಮುಗಿಲಂತೆ ವಯಸು ಕಳೆವಾಗ
ಹಣದಿಂದಲೇನು? ಪರರೊಳಿತಿನಲಿ ತೊಡಗು!

ಸಂಸ್ಕತ ಮೂಲ (ಸುಭಾಷಿತ ಸುಧಾನಿಧಿಯಿಂದ)

ಸಂಪದೋ ಜಲತರಂಗವಿಲೋಲಾ
ಯೌವನಂ ತ್ರಿಚತುರಾಣಿ ದಿನಾನಿ |
ಶಾರದಾಭ್ರಪರಿಪೇಲವಮಾಯುಃ
ಕಿಂ ಧನೈಃ ಪರಹಿತಾನಿ ಕುರುಧ್ವಮ್ ||

-ಹಂಸಾನಂದಿ

ಕೊ: ಸಂಸ್ಕೃತದ ’ತ್ರಿಚತುರಾಣಿ ದಿನಾನಿ’ ಅನ್ನುವುದನ್ನು ನಾನು ಕನ್ನಡದಲ್ಲಿ ಹೆಚ್ಚು ಬಳಕೆ ಇರುವ ’ನಾಲ್ಕಾರು ದಿವಸ’ ವಾಗಿ ಮಾರ್ಪಡಿಸಿರುವೆ.

ಕೊ.ಕೊ: ಶರತ್ಕಾಲದ ಮೋಡಗಳನ್ನು ನಾನು ’ಹಿಂಗಾರಿನ ಮೋಡ’ ವಾಗಿ ಬದಲಾಯಿಸಿದ್ದೇನೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಸಹವಾಸ ದೋಷ

ಕಾದ ಕಬ್ಬಿಣದ ಮೇಲೆ ಬೀಳಲು ನೀರಹನಿ ಹೆಸರಿಲ್ಲದಂತಳಿವುದು
ಕಮಲದೆಲೆಯ ಮೇಲೆ ಬೀಳಲದುವೇ ಮುತ್ತಿನ ಹೊಳಪು ತೋರುವುದು
ಸ್ವಾತಿಯಲಿ ಕಡಲ ಚಿಪ್ಪಿನಲಿ ಬಿದ್ದರೆ ಹನಿ ತಾನೆ ಮುತ್ತಾಗಿಬಿಡುವುದು
ಮೇಲು-ನಡು-ಕೀಳೆಂಬ ಹಲವು ದೆಸೆಗಳನು ಒಡನಾಟವೇ ತರುವುದು!

ಸಂಸ್ಕೃತ ಮೂಲ:

ಸಂತಪ್ತಾಯಸಿ ಸಂಸ್ಥಿತಸ್ಯ ಪಯಸೋ ನಾಮಾಪಿ ನ ಜ್ಞಾಯತೇ
ಮುಕ್ತಾಕಾರತಯಾ ತದೇವ ನಲಿನೀಪತ್ರಸ್ಥಿತಂ ರಾಜತೇ |
ಸ್ವಾತ್ಯಾಂ ಸಾಗರ ಶುಕ್ತಿಮಧ್ಯಪತಿತಂ ಸಮ್ಮೌಕ್ತಿಕಂ ಜ್ಞಾಯತೇ
ಪ್ರಾಯೇಣೋತ್ತಮಮಧ್ಯಮಾಧಮದಶಾ ಸಂಸರ್ಗತೋ ಜಾಯತೇ ||

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (4 votes)
To prevent automated spam submissions leave this field empty.

ಅರಿವೆನ್ನುವ ಅಂಕುಶ

ಸಿಕ್ಕೆಡೆ ಅಲೆವುದು ಮನಸೆನ್ನುವುದು
ಸೊಕ್ಕು ಏರಿರುವ ಆನೆಯೊಲು
ಬುದ್ಧಿಗೆ ಇರಲು ಅರಿವಿನ ಅಂಕುಶ
ಇದ್ದಲ್ಲೇ ಅದು ನಿಲಬಹುದು!

ಸಂಸ್ಕೃತ ಮೂಲ (ಸುಭಾಷಿತರತ್ನ ಭಾಂಡಾಗಾರದಿಂದ):

ಮನೋ ಧಾವತಿ ಸರ್ವತ್ರ ಮದೋನ್ಮತ್ತ ಗಜೇಂದ್ರವತ್
ಜ್ಞಾನಾಂಕುಶಸಮಾ ಬುದ್ಧಿಃ ತಸ್ಯ ನಿಶ್ಚಲತೇ ಮನಃ

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಗೌರಿಯ ಗುಟ್ಟು

"ಬೆವೆತಿಹೆಯೇಕೆ ಹೀಗೆ ನಲ್ಲೆ?" "ಉರಿಯಿಹುದಲ್ಲ ನಿನ್ನ ಕಣ್ಗಳಲೆ "
"ನಡುಕವೇಕೆ ತಿಂಗಳಮೊಗದವಳೆ?" "ಕೊರಳ ಹಾವಿನ ಅಂಜಿಕೆ"
"ದೇವಿ, ಮೈನವಿರೆದ್ದಿದೆಯಲ್ಲ?" "ಗಂಗೆಯ ತುಂತುರಿನಿಂದ"
ಇಂತು ಸಂಗಾತಿಯಲಿ ಇಂಗಿತವ ಮುಚ್ಚಿಡುವ ಗೌರಿ ಕಾಯಲೆಮ್ಮನ್ನು!

ಸಂಸ್ಕೃತ ಮೂಲ: (ಸುಭಾಷಿತ ರತ್ನಕೋಶದಿಂದ)

ಸ್ವೇದಸ್ತೇ ಕಥಮೀದೃಶಃ ಪ್ರಿಯತಮೇ ತ್ವನ್ನೇತ್ರವಹ್ನೇರ್ವಿಭೋ
ಕಸ್ಮಾದ್ವೇಪಿತಮೇತಾದಿಂದು ವದನೇ ಭೋಗೀಂದ್ರಭೀತೇರ್ಭವ ।
ರೋಮಾಂಚಃ ಕಥಮೇಶ ದೇವಿ ಭಗವನ್ ಗಂಗಾಂಭಸಾಂ ಶೀಕರೈಃ
ಇತ್ಥಂ ಭರ್ತಾರಿ ಭಾವಗೋಪನಪರಾ ಗೌರೀ ಚಿರಂ ಪಾತು ವಃ ॥

स्वॆदस्तॆ कथमीदृशः प्रियतमॆ त्वन्नॆत्रवह्नॆर्विभॊ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಕಮ್ಮಗೋಲನ ಚತುರ ಬಿಲ್ಗಾರಿಕೆ

ಹಲವು ಬಿಲ್ಲಾರರು ಇರುವರು ಜಗದಲ್ಲಿ
ಅಂಬಿನಲಿ ಒಂದನೆರಡಾಗಿ ಸೀಳುವವರು;
ಕಮ್ಮಗೋಲ*ನೋರ್ವ  ಬೇರೆತೆರದ ಬಿಲ್ಲಾಳು
ಗುರಿಯಿಟ್ಟು ಇಬ್ಬರನು ಒಂದಾಗಿಸುವವನು!

ಸಂಸ್ಕೃತ ಮೂಲ:

ಏವಸ್ತುಂ ದ್ವಿಧಾ ಕರ್ತುಮ್ ಬಹವಃ ಸಂತಿ ಧನ್ವಿನಃ ।
ಧನ್ವೀ ಸ ಮಾರ ಏವೈಕೋ ದ್ವಯೋಃ ಐಕ್ಯಃ ಕರೋತಿ ಯಃ ॥

एकवस्तुम् द्विधा कर्तुम् बहवः सन्ति धन्विनः ।
धन्वी स मार एवैको द्वयोः ऐक्यः करोति यः ॥

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ಸಲಿಗೆ ತಂದೀತು ಅನಾದರ!

ಸಲಿಗೆ ಹೆಚ್ಚಿದರೆ ಮೂಡುವುದಸಡ್ಡೆ;
ಹಲವು ಬಾರಿ ಹೋದರೆ ಉದಾಸೀನ.
ಮಲೆಯ ಮೇಲಿರುವ ಬೇಡತಿ ಮನೆಯಲಿ
ಒಲೆಯ ಉರಿಸಲು ಗಂಧದ ಕಟ್ಟಿಗೆ!

ಸಂಸ್ಕೃತ ಮೂಲ:

ಅತಿ ಪರಿಚಯಾದವಜ್ಞಾ ಸಂತತಗಮನಾತ್ ಅನಾದರೋ ಭವತಿ|
ಮಲಯೇ ಭಿಲ್ಲ ಪುರಂಧ್ರೀ ಚಂದನತರು ಕಾಷ್ಟಂ ಇಂಧನಂ ಕುರುತೇ||

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಸರಣಿ: 

ಮುಕ್ತಿ

ನೀಡುವುದಕೆ ಕೈ ಹೊರತು ಕಡಗ ತೊಡುವುದಕಲ್ಲ
ಮೀಯುವುದು ಶುಚಿ ಹೊರತು ಗಂಧಪೂಸುವುದಲ್ಲ;
ಮನ್ನಣೆ ಮನ ತಣಿಸುವುದು ಹೊರತು ತಿಂಡಿತಿಸಿಸಲ್ಲ
ಅರಿವಿಂದ ಬಿಡುಗಡೆ ಹೊರತು ತಲೆ ಬೋಳಿಸುವದಲ್ಲ!

ಸಂಸ್ಕೃತ ಮೂಲ:

ದಾನೇನ ಪಾಣಿರ್ನ ತು ಕಂಕಣೇನ
ಸ್ನಾನೇನ ಶುದ್ಧಿರ್ನ ತು ಚಂದನೇನ|
ಮಾನೇನ ತೃಪ್ತಿರ್ನ ತು ಭೋಜನೇನ
ಜ್ಞಾನೇನ ಮುಕ್ತಿರ್ನ ತು ಮುಂಡನೇನ||

-ಹಂಸಾನಂದಿ

ಕೊ: ಎಂದೋ ಓದಿದ್ದ ಈ ಸುಭಾಷಿತವನ್ನು ಮತ್ತೆ ನೆನಪಿಗೆ ತರಿಸಿದ ವೇದಸುಧೆ ಬ್ಲಾಗಿಗೆ ನಾನು ಆಭಾರಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಕೊಡುಗೈ ದಾನಿ

ಜಿಪುಣನಿಗಿಂತಲು ಕೊಡುಗೈ ದಾನಿ
ಹಿಂದಿರಲಿಲ್ಲ ಮುಂದೆ ಬರಲಾರ
ತಾ ಮುಟ್ಟದ ಹಣಕಾಸೆಲ್ಲವನೂ
ಕಂಡವರಿಗುಳಿಸಿ ಹೋಗುವನಲ್ಲ!

ಸಂಸ್ಕೃತ ಮೂಲ:

ಕೃಪಣೇನ ಸಮೋ ದಾತಾ ನ ಭೂತೋ ನ ಭವಿಷ್ಯತಿ|
ಅಸ್ಪೃಶನ್ನೇವ ವಿತ್ತಾನಿ ಯಃ ಪರೇಭ್ಯಃ ಪ್ರಯಚ್ಛತಿ ||

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ವಸಂತಕಾಲ ಬಂದಾಗ..

ಕಾಗೆಯು ಕಪ್ಪು ಕೋಗಿಲೆ ಕಪ್ಪು
ಹೇಗವುಗಳ ಬೇರ್ಪಡಿಸುವುದು?
ವಸಂತ ಕಾಲವು ಬಂದಿರಲು
ತನ್ನಲೆ ತಾನೇ ತೋರುವುದು!

ಸಂಸ್ಕೃತ ಮೂಲ:
ಕಾಕಃ ಕೃಷ್ಣಃ ಪಿಕಃ ಕೃಷ್ಣಃ ಕೋ ಭೇದೋ ಪಿಕ ಕಾಕಯೋಃ |
ವಸಂತಕಾಲೇ ಸಂಪ್ರಾಪ್ತೇ ಕಾಕಃ ಕಾಕಃ ಪಿಕಃ ಪಿಕಃ ||

-ಹಂಸಾನಂದಿ

ಕೊಸರು: ಮಾರ್ಚ್ ೨೦, ೨೦೧೦ರಂದು ಸಮಹಗಲಿರುಳು - ವಸಂತದ ಮೊದಲ ದಿನ. ಅದಕ್ಕೇ ಇರಬೇಕು, ಈ ಸುಭಾಷಿತ ಇನ್ನೊಮ್ಮೆ ನೆನಪಾದದ್ದು!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಸರಣಿ: 

ಮುಖ ನೋಡಿ ಮಣೆ ಹಾಕೋದು

ಉಡುಪು ತೊಡುವುದರಲ್ಲಿ ಇರಲಿ ತುಸು ಗಮನ
ಮಟ್ಟಕ್ಕೆ ತಕ್ಕುಡುಗೆ ಇದ್ದರದು ವಯಿನ*;
ಹಳದಿ ರೇಸಿಮೆಯುಟ್ಟವಗೆ ಮಗಳನೇ ಕೊಟ್ಟ
ಕಡಲೊಡೆಯ ತೊಗಲುಟ್ಟವಗೆ ನಂಜುಣಿಸಿಬಿಟ್ಟ!

ಸಂಸ್ಕೃತ ಮೂಲ:

ಕಿಂ ವಾಸಸೇತ್ಯತ್ರ ವಿಚಾರಣೀಯಮ್ ವಾಸಃ ಪ್ರಧಾನಂ ಖಲು ಯೋಗ್ಯತಾಯಾಃ
ಪೀತಾಂಬರಂ ವೀಕ್ಷ್ಯ ದದೌ ಸ್ವಕನ್ಯಾಂ ಚರ್ಮಾಂಬರಂ ವೀಕ್ಷ್ಯ ವಿಷಂ ಸಮುದ್ರಃ ||

किम् वाससॆत्यत्र पिचारणीयम् वासः प्रदानम् खलु यॊग्यतायाः |
पीतांबरम् वीक्ष्य ददौ स्वकन्यां चर्मांबरम् वीक्ष्य विषम् समुद्रः ||

-ಹಂಸಾನಂದಿ

ಕೊಸರು: ವಯಿನ, ವೈನ : ಸೊಗಸು, ತಕ್ಕದ್ದು, ಅಚ್ಚುಕಟ್ಟು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಸರಣಿ: 

ಹೆಣ್ಣುಗಳ ಸಿಂಗಾರ

ಕೊಂಕಾದ ಕುಡಿಹುಬ್ಬು ಕಡೆಗಣ್ಣುಗಳ ನೋಟ
ನಯವಾದ ಮೆಲುನುಡಿ ನಾಚಿಕೆಯ ನಸುನಗೆ
ಲೇಸಾದ ನಿಲುಮೆ ಜೊತೆಗೆ ಹಿತವಾದ ನಡಿಗೆ
ಪೆಣ್ಗಳಿಗಿವು ಸಿಂಗರವು ಮತ್ತವೇ ಆಯುಧವು!

ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ)

ಭ್ರೂ ಚಾತುರ್ಯಾಕುಂಚಿತಾಕ್ಷಾಃ ಕಟಾಕ್ಷಾಃ
ಸ್ನಿಗ್ಧಾ ವಾಚೋ ಲಜ್ಜಿತಾಶ್ಚೈವ ಹಾಸಾಃ |
ಲೀಲಾಮಂದ್ರಂ ಪ್ರಸ್ಥಿತಂ ಚ ಸ್ಥಿತಂ ಚ
ಸ್ತ್ರೀಣಾಮೇತದ್ ಭೂಷಣಂ ಚಾಯುಧಂ ಚ ||

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಗಟ್ಟಿಗರಿಗೂ ಇರಬೇಕು ಬೆಂಬಲ

ಗಟ್ಟಿಗನಾದರೂ ಬಲ್ಲವನಾದರೂ
ಒಬ್ಬನೇ ಏನನು ಮಾಡಬಹುದು?
ಸುಯ್ಯುವ ಗಾಳಿಯ ಬೆಂಬಲವಿಲ್ಲದ
ಕಿಚ್ಚದು ತಂತಾನೇ ನಂದುವುದು!

ಸಂಸ್ಕೃತ ಮೂಲ (ಪಂಚತಂತ್ರದ ಕಾಕೋಲೂಕೀಯದಿಂದ)

ಅಸಹಾಯಃ ಸಮರ್ಥೋSಪಿ ತೇಜಸ್ವೀ ಕಿಂ ಕರಿಷ್ಯತಿ |
ನಿರ್ವಾತೇ ಜ್ವಲಿತೋ ವಹ್ನಿಃ ಸ್ವಯಮೇವ ಪ್ರಶಾಮ್ಯತಿ ||

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಸರಣಿ: 

ಬೇಕಿರದ ವಸ್ತುಗಳು

ಮನ್ನಿಸುವ ಗುಣವಿರಲು ಕವಚವೇಕೆ?
ಮುಂಗೋಪಕಿಂತಲು ಹಿರಿಯ ಹಗೆಯುಂಟೆ?
ಸುಡುಬೆಂಕಿಯೇಕೆ ಪುಂಡುದಾಯಾದಿಗಳಿರಲು?
ಮನವನವರಿವ ಗೆಳೆಯಗೆ ಮಿಗಿಲು ಮದ್ದಿರುವುದೇ?
ಕೇಡಿಗರು ಬಳಿಯಲಿರೆ ಹಾವಿಗೆ ಅಂಜುವರೆ?
ನೆಮ್ಮದಿಯ ತಿಳಿವಿರಲು ಹಣದ ಹಂಗೇಕೆ?
ನಾಚುವ ಮೊಗಕೆ ಬೇರೆ ಸಿಂಗರ ಬೇಕೆ?
ನಲ್ಗಬ್ಬಗಳನೋದಿ ನಲಿಯುವನು ಆಳಬಯಸುವನೆ?

ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ):

ಕ್ಷಾಂತಿಶ್ಚೇದ್ಕವಚೇನ ಕಿಂ ಕಿಮರಿಭಿಃ ಕ್ರೋಧೋಸ್ತಿ ಚೇದ್ದೇಹಿನಾಂ
ಜ್ಞಾತಿಶ್ಚೇದನಲೇನ ಕಿಂ ಯದಿ ಸುಹೃದ್ದಿವ್ಯೌಷಧೈಃ ಕಿಂ ಫಲಂ |
ಕಿಂ ಸರ್ಪೈರ್ಯದಿ ದುರ್ಜನಾಃ ಕಿಮು ಧನೈರ್ವಿದ್ಯಾSನವದ್ಯಾ ಯದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಕ್ಷಮೆ ಎಂಬ ಆಯುಧ

ಮನ್ನಿಸುವ ಗುಣವೆಂಬ ಆಯುಧವು ಕೈಯಲಿರೆ
ಕೆಟ್ಟವರು ಏನ ತಾ ಮಾಡಬಹುದು?
ಹುಲ್ಲು ಗಿಡಗಂಟಿಯಿರದೆಡೆ ಬಿದ್ದ ಉರಿ
ತನ್ನಿಂದಲೇ ತಾ ನಂದಿ ಹೋಗುವುದು!

ಸಂಸ್ಕೃತ ಮೂಲ:

ಕ್ಷಮಾ ಶಸ್ತ್ರಂ ಕರೇ ಯಸ್ಯ ದುರ್ಜನಃ ಕಿಂ ಕರಿಷ್ಯತಿ |
ಅತೃಣೇ ಪತಿತೋ ವಹ್ನಿಃ ಸ್ವರ್ಯಮೇವೋಪಶಮ್ಯತಿ ||

क्षमा शस्त्रं करे यस्य दुर्जनः किं करिष्यति।
अतृणे पतितो वह्निः स्वयमेवोपशाम्यति॥

-ಹಂಸಾನಂದಿ

(ಇದೇ ತಾನೇ ಫೇಸ್‍ಬುಕ್ ನಲ್ಲಿ ಗೆಳೆಯರೊಬ್ಬರ ಪುಟದಲ್ಲಿ ಓದಿದ ಸುಭಾಷಿತ ಇದು)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಸರಣಿ: 

ಕೇಡಿಗನ ನಂಜು

ಚೇಳಿನ ನಂಜೋ ಬಾಲದ ತುದಿಯಲಿ
ನೊಣಕ್ಕದುವೆ ಬಾಯಲ್ಲೆಲ್ಲಾ!
ಹಾವಿನ ಹಲ್ಲಲಿ ತುಂಬಿರುವುದು ವಿಷ
ಕೇಡಿಗನಿಗೋ ಮೈಯಲ್ಲೆಲ್ಲಾ!

ಸಂಸ್ಕೃತ ಮೂಲ:

ವೃಶ್ಚಿಕಸ್ಯ ವಿಷಂ ಪುಚ್ಛೇ ಮಕ್ಷಿಕಾಯಾಶ್ಚ ಮಸ್ತಕೇ |
ತಕ್ಷಕಸ್ಯ ವಿಷಂ ದಂತೇ ಸರ್ವಾಂಗೇ ದುರ್ಜನಸ್ಯ ಚ ||

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (4 votes)
To prevent automated spam submissions leave this field empty.
ಸರಣಿ: 

ಮಾತು ಆಡಿದರೆ ಹೋಯಿತು; ಮುತ್ತು ಒಡೆದರೆ ಹೋಯಿತು!

ಬಾಯಿಂದ ಹೊರಬಿದ್ದ ಮಾತೆನುವ ಅಂಬುಗಳು
ಆಯಕಟ್ಟಿಗಿರಿದು ಕೊಟ್ಟಾವು ನೋವು ಹಗಲಿರುಳು;
ಅರಿವು ನಿನ್ನಲಿ ಇರಲು ಪರರ ನೋಯಿಸುವಂಥ
ನುಡಿಯಂಬುಗಳನೆಂದೂ ಬಿಡದಿರುವುದೇ ಲೇಸು.

ಸಂಸ್ಕೃತ ಮೂಲ:

ವಾಕ್ಸಾಯಕಾ ವದನಾನ್ನಿಷ್ಪತಂತಿ
ಯೈರಾಹತಃ ಶೋಚತಿ ರಾತ್ರ್ಯಹಾನಿ |
ಪರಸ್ಪರಂ ಮರ್ಮಸು ತೇ ಪತಂತಿ
ತಾನ್ ಪಂಡಿತೋ ನಾಪಸೃಜೇತ್ಪರೇಷು ||

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (7 votes)
To prevent automated spam submissions leave this field empty.
ಸರಣಿ: 

ಜೊತೆಬಾಳ್ವೆ

ಅಡವಿಯ ತೊರೆದ ಹುಲಿಯ ಕೊಲುವರು
ಹುಲಿಯಿರದ ಅಡವಿಯನೆ ಕಡಿವರು
ಹುಲಿಗೆ ಇರಬೇಕು ಅಡವಿಯ ಕಾವಲು
ಅಡವಿಗಾದರೋ ಹುಲಿಯೇ ಕಾವಲು

ಸಂಸ್ಕೃತ ಮೂಲ (ಮಹಾಭಾರತ, ಉದ್ಯೋಗಪರ್ವ ೨೯-೫೫):

ನಿರ್ವನೋ ವಧ್ಯತೇ ವ್ಯಾಘ್ರೋ ನಿರ್ವ್ಯಾಘ್ರಂ ಛಿದ್ಯತೇ ವನಂ|
ತಸ್ಮಾತ್ ವ್ಯಾಘ್ರೋ ವನಂ ರಕ್ಷೇತ್ ವನಂ ವ್ಯಾಘ್ರಂ ಚ ಪಾಲಯೇತ್ ||

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (6 votes)
To prevent automated spam submissions leave this field empty.
ಸರಣಿ: 

ಕೈಗೆಟುಕುವ ದೇವರು

ಕೈಯಳತೆಯಲೇ ಇರುವ ತಾಯಿ-ತಂದೆ-ಗುರುಗಳನುಳಿದು
ಕೈಯಲೆಂದೂ ನಿಲುಕದ ದೈವವೆಂಬುದನೆಂತು ನೆಚ್ಚುವುದು?

ಸಂಸ್ಕೃತ ಮೂಲ (ರಾಮಾಯಣ, ಅಯೋಧ್ಯಾಕಾಂಡ ೩೦-೩೩)

ಸ್ವಾಧೀನಂ ಸಮತಿಕ್ರಮ್ಯ ಮಾತರಂ ಪಿತರಂ ಗುರುಂ |
ಅಸ್ವಾಧೀನಂ ಕಥಂ ದೈವಂ ಪ್ರಕಾರೈರಭಿರಾಧ್ಯತೇ? ||

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಸರಣಿ: 

ಹಸಿ ಮಡಿಕೆಯ ಮೇಲೆ ಬರೆದ ಚಿತ್ತಾರ

ನೆನ್ನೆ ಸ್ಟಾನ್ಫರ್ಡ್ ರೇಡಿಯೋದಲ್ಲಿ ’ಇಟ್ಸ್ ಡಿಫ್’ ಶೋ ಕೇಳುತ್ತಾ ಬರುತ್ತಿದ್ದೆ. ಮಾನವ ಪ್ರಯತ್ನ ಮತ್ತೆ ಯಶಸ್ಸು ಸಿಗುವಲ್ಲಿ ಅದೃಷ್ಟದ ಪಾತ್ರ - ಇವುಗಳ ಬಗ್ಗೆ ಚೆನ್ನಾಗಿ ಮಾತುಕತೆ ನಡೆಯುತ್ತಿತ್ತು. ಆಗ ಕೇಳಿದ ಒಂದು ಹಳೇ ಕಥೆ - "ಮಾಡುವ ಕೆಲಸ ಸರಿಯಾಗಬೇಕಾದರೆ ಅದೃಷ್ಟ ಬೇಕೇ ಬೇಕು. ಹೇಗೆ? ನಾವು ಬತ್ತದ ಪೈರು ಬೆಳೀಬೇಕು ಅಂತಿಟ್ಕೊಳ್ಳಿ. ಮೊದಲು ನಮ್ಮದೇ ಆಗ ಜಮೀನಿರ್ಬೇಕು, ಅಥವಾ ಗುತ್ತಿಗೆ ತೊಗೊಬೇಕು. ಮತ್ತೆ ಅದನ್ನ ಉತ್ತು, ಬಿತ್ತು, ನಾಟಿ ಮಾಡಿ, ಕಳೆ ತೆಗೆದು ಎಲ್ಲಾ ಕೆಲಸ ಆಗಬೇಕಾದ ಸಮಯದಲ್ಲಿ ಮಾಡಬೇಕು. ಜೊತೆಗೆ ಸರಿಯಾದ ಸಮಯದಲ್ಲಿ ಮಳೆಯೂ ಬರಬೇಕು. ಈಗ ಮಳೆ ಸುರಿಯೋದು ನಮ್ಮ ಕೈಲಿದೆಯೇ? ಇಲ್ಲ. ಅದೇ ಅದೃಷ್ಟ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (3 votes)
To prevent automated spam submissions leave this field empty.
ಸರಣಿ: 

ಹಣೆ ಬರಹ

ಮುಳ್ಳು ಜಾಲಿಯಲೊಂದೆಲೆಯೂ ಇಲ್ಲದಿರೆ ಕೊರತೆ ವಸಂತನದೇನು?
ಗೂಬೆಗೆ ನಡುಹಗಲಲಿ ಕಣ್ಣು ಕಾಣದಿರೆ ನೇಸರನಲ್ಲಿಹುದೆ ಕುಂದು?
ಮಳೆನೀರು ಚಾತಕ*ದ ಬಾಯಲ್ಲಿ ಬೀಳದಿರೆ ತಪ್ಪುಗೈದುದೇನು ಮೋಡ?
ಮುನ್ನ ಹಣೆಯಲಿ ಬರೆದುದ ಸುಲಭದಲಿ ಅಳಿಸಲು ಯಾರಿಗಾಗುವುದು?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಬಲ್ಲವನೇ ಬಲ್ಲ ಬೆಲ್ಲದ ರುಚಿಯ

ಅರಿತವರ ಹೊರತು ಹೆರವರು ತಿಳಿವರೆ
ಗುಣಗಳ ನಡುವಲಿ ಇರುವ ದೂರವನು?
ಮೂಗಿನ ಹೊರತು ಕಣ್ಣು ತಿಳಿವುದೆ
ಜಾಜಿ-ಮಲ್ಲಿಗೆಯಲಿ ಕಂಪು ಬೇರೆಂಬುದನು?

ಸಂಸ್ಕೃತ ಮೂಲ:

ಗುಣಾನಾಮಂತರಂ ಪ್ರಾಯಸ್ತಜ್ಞೋ ವೇತ್ತಿ ನಾಪರಃ |
ಮಾಲತೀ* ಮಲ್ಲಿಕಾಮೋದಂ ಘ್ರಾಣಂ ವೇತ್ತಿನ ಲೋಚನಂ||

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (4 votes)
To prevent automated spam submissions leave this field empty.
ಸರಣಿ: 

ಸಜ್ಜನರ ಸಂಗವದು ಹೆಜ್ಜೇನ ಮೆದ್ದಂತೆ

ಜಡತೆ ನೀಗುವುದು; ಮಾತಿನಲಿ ದಿಟವ ಬೆರೆಸುವುದು;
ಹಿರಿಮೆ ಬೆಳೆಸುವುದು; ಉಳಿದ ಕೆಡುಕನಳಿಸುವುದು;
ಮನವ ನಲಿಸುವುದು; ಜೊತೆಗೆ ಹೆಸರ ಮೆರೆಸುವುದು!
ನಲ್ಗೆಳೆಯರೊಡನಾಟ ಅದೇನ ಮಾಡದೇ ಇಹುದು?

ಸಂಸ್ಕೃತ ಮೂಲ - (ಭರ್ತೃಹರಿಯ ನೀತಿಶತಕದಿಂದ)

ಜಾಡ್ಯಂ ಧಿಯೋ ಹರತಿ ಸಿಂಚತಿ ವಾಚಿ ಸತ್ಯಮ್
ಮಾನೋನ್ನತಿಂ ದಿಶತಿ ಪಾಪಮಪಾಕರೋತಿ |
ಚೇತಃ ಪ್ರಸಾದಯತಿ ದಿಕ್ಷು ತನೋತಿ ಕೀರ್ತಿಂ
ಸತ್ಸಂಗತಿ: ಕಥಯ ಕಿಂ ನ ಕರೋತಿ ಪುಂಸಾಮ್||

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (7 votes)
To prevent automated spam submissions leave this field empty.
ಸರಣಿ: 

ಯೋಗಿಗಳಿಗೂ ನಿಲುಕದ್ದು

ಸುಮ್ಮನಿದ್ದರೆ ಮೂಗ - ಮಾತಾಡುವನೋ? ಬಾಯಿಬಡುಕ;
ಸೈರಣೆಯಿರುವನು ಪುಕ್ಕಲ; ಇಲ್ಲದವನ ಹುಟ್ಟೇ ಸರಿಯಿಲ್ಲ!
ಬಳಿಯಲಿರುವನು ಕಾಲ್ತೊಡಕು; ದೂರದಲಿರುವನು ತಿಳಿಗೇಡಿ
ಪರರ ಚಾಕರಿಯನಿತು ಕಠಿಣ! ಯೋಗಿಗಳಿಗೂ ನಿಲುಕೋದಿಲ್ಲ!

ಸಂಸ್ಕೃತ ಮೂಲ: (ಭರ್ತೃಹರಿಯ ನೀತಿಶತಕದಿಂದ)

ಮೌನಾನ್ಮೂಕಃ ಪ್ರವಚನಪಟುರ್ವಾಚಕೋ ಜಲ್ಪಕೋ ವಾ
ಕ್ಷಾಂತ್ಯಾ ಭೀರುರ್ಯದಿ ನ ಸಹತೇ ಪ್ರಾಯಶೋ ನಾಭಿಜಾತಃ
ಧೃಷ್ಟಃ ಪಾರ್ಶ್ವೇ ವಸತಿ ನಿಯತ ದೂರತಶ್ಚಾಪ್ರಗಲ್ಭಃ
ಸೇವಾಧರ್ಮಃ ಪರಮ ಗಹನೋ ಯೋಗಿನಾಮಪ್ಯಗಮ್ಯಃ

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.3 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಕತ್ತೆಗೊಂದು ಕಿವಿಮಾತು

ಎಲೇ ಕತ್ತೆ, ಬಟ್ಟೆ ಗಂಟನು ಹೊರುತ ಒಣಹುಲ್ಲ ತಿನುವೆಯೇಕೆ?
ರಾಜಲಾಯಕೆ ನಡೆದು ನೀ ಕಡಲೆ ಉಸಳಿಯ ಸುಖದಿ ಮೆಲುತಿರು;
"ಬಾಲವಿದ್ದರೆ ಕುದುರೆ" ಎಂದೆನುವ ಜನರದೇ ಉಸ್ತುವಾರಿ ಅಲ್ಲಿ.
ಅವರು ನುಡಿದರೆ ರಾಜನೊಪ್ಪುವನು ಮಿಕ್ಕವರು ಉಳಿವರು ತೆಪ್ಪಗೆ!

ಸಂಸ್ಕೃತ ಮೂಲ:

ರೇ ರೇ ರಾಸಭ ವಸ್ತ್ರಭಾರವಹನಾತ್ ಕುಗ್ರಾಸಮಶ್ನಾಸಿ ಕಿಂ
ರಾಜಾಶ್ವಾವಸಥಂ ಪ್ರಯಹಿ ಚಣಕಾಭ್ಯೂಷಾನ್ ಸುಖಂ ಭಕ್ಷಯ
ಸರ್ವಾನ್ ಪೃಚ್ಛವತೋ ಹಯಾನಿತಿ ವದಂತ್ಯತ್ರಾಧಿಕಾರೇ ಸ್ಥಿತಾ
ರಾಜಾ ತೈರುದ್ದಿಷ್ಟಮೇವ ಮನುತೇ ಸತ್ಯಂ ತಟಸ್ಥಾಃ ಪರೇ

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.
ಸರಣಿ: 

ತಿಳಿಗೇಡಿಗಳ ಗುರುತು

ತಿಳಿಗೇಡಿಗಳ ಗುರುತಿಸುವುದು ಹೇಗೆನುವಿರಾ?
ಕೇಳಿ - ಇವೆಯಲ್ಲ ಕುರುಹುಗಳು ಐದು!
ಸಿಡುಕು; ಸೊಕ್ಕು; ಪರರ ಮಾತಲುದಾಸೀನ;
ಮೊಂಡುವಾದ ಜೊತೆಗೆ ಕೆಡುಕು ತುಂಬಿದ ಮಾತು!

ಸಂಸ್ಕೃತ ಮೂಲ:

ಮೂರ್ಖಸ್ಯ ಪಂಚ ಚಿಹ್ನಾನಿ ಗರ್ವೋ ದುರ್ವಚನಂ ತಥಾ |
ಕ್ರೋಧಶ್ಚ ದೃಢವಾದಶ್ಚ ಪರವಾಕ್ಯೇಶ್ವನಾದರಃ ||

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.4 (5 votes)
To prevent automated spam submissions leave this field empty.
ಸರಣಿ: 

ಕೈ ಹಿಡಿದು ನಡೆಸುವವರು

ಸ್ವಂತ ತಿಳಿವೇ ಇರದ ಕಡುಮರುಳರು
ತಾವೇ ’ದಿಟ್ಟರು-ಅರಿತವರು’ ಎಂಬುವ
ಭ್ರಮೆಯಲೇ ನಡೆಸಲೆಳಸುವರು ಪರರ,
ಕುರುಡರ ಮುನ್ನಡೆಸುವ ಕುರುಡನೊಲು!

ಸಂಸ್ಕೃತ ಮೂಲ- (ಕಠೋಪನಿಷತ್, ೧-೨-೫)

ಅವಿದ್ಯಾಮಂತರೇ ವರ್ತಮಾನಾಃ
ಸ್ವಯಂ ಧೀರಾಃ ಪಂಡಿತಂ ಮನ್ಯಮಾನಾಃ |
ದಂದ್ರಮ್ಯಮಾಣಾಃ ಪರಿಯಂತಿ ಮೂಢಾ
ಅಂಧೇನೈವ ನೀಯಮಾನಾ ಯಥಾಂಧಾಃ ||

(ಈ ಶ್ಲೋಕವನ್ನು ಮೊನ್ನೆ ತಾನೇ ನೋಡಿದೆ. ಅದರಲ್ಲಿ ಒಂದು ಪದಕ್ಕೆ ಎರಡು ಪಾಠಾಂತರವಿರುವುದೂ ಕಂಡುಬಂತು. ಅನುವಾದವನ್ನು ಮಾಡುವಲ್ಲಿ ಬೇರೆ ಬೇರೆ ಇಂಗ್ಲಿಷ್ ಅನುವಾದಗಳ ಸಹಾಯ ತೆಗೆದುಕೊಂಡಿರುವೆ. ಜೈ ಗೂಗಲೇಶ್ವರ!)

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಸರಣಿ: 

ಕೂಡಿಡುವ ಮೊದಲು ..

ಹಣವ ಬರಿದೆ ಕೂಡಿಡದಲೇ
ನೀಡು,ಬಳಸು,ಮತ್ತೇನಾದರೂ ಮಾಡು;
ಬಂಡನ್ನು ಸೇರಿಸುತ ಜೇನ್ದುಂಬಿಗಳು
ಮಾಡಿಟ್ಟ ಜೇನು ಕದ್ದು ತಿಂದವರ ಪಾಲು!

ಸಂಸ್ಕೃತ ಮೂಲ:

ದಾತವ್ಯಂ ಭೋಕ್ತವ್ಯಂ ಧನವಿಷಯೇ ಸಂಚಯೋ ನ ಕರ್ತವ್ಯಃ |
ಪಶ್ಯೇಹ ಮಧುಕರೀಣಾಂ ಸಂಚಿತಾರ್ಥಂ ಹರಂತ್ಯನ್ಯೇ ||

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ನಿಜವ ನುಡಿವುದು ಹೇಗೆ?

ದಿಟವ ನುಡಿಯುತಿರು ಹಿತವ ನುಡಿಯುತಿರು
ಹಿತವಿರದ ನಿಜ ನುಡಿಯೆ ಹಿಂಜರಿಯುತಿರು
ಹಿತವೆಂದು ಹುಸಿಯನೆಂದು ನೀ ನುಡಿಯದಿರು
ಮಾತು ಹಳತಾದರೂ ಇದನು ಮರೆಯದಿರು

ಸಂಸ್ಕೃತ ಮೂಲ: 

ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ ನ ಬ್ರೂಯಾತ್ ಸತ್ಯಮಪ್ರಿಯಮ್ |
ಪ್ರಿಯಂ ಚ ನಾನೃತಂ ಬ್ರೂಯಾತ್ ಏಷಃ ಧರ್ಮಃ ಸನಾತನಃ ||

-ಹಂಸಾನಂದಿ

(ಚಾಮರಾಜ ಸವಡಿ ಅವರ ಈ ಬರಹ ನೋಡಿದಾಗ ನೆನಪಾಗಿ ಮಾಡಿದ ಅನುವಾದ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.
ಸರಣಿ: 

ತಲೆಯ ಮೇಲಿನ ಹೊರೆ

ಎಳವೆಯಲುಣಿಸಿದ ತುಸು ನೀರಿನಾಸರೆಯನೇ ನೆನೆದು
ತಲೆಮೇಲೆ ಹೊರೆಯನಿಟ್ಟು ಕೊನೆಯವರೆಗೂ ತೆಂಗು
ಮರಳಿಸುವುದು ಮನುಜರಿಗೆ ಅಮೃತದೆಳನೀರನ್ನು;
ಮರೆಯರು ಸುಗುಣಿಗಳೆಂದೂ ನೆರವು ನೀಡಿದವರನು!

ಸಂಸ್ಕೃತ ಮೂಲ:

ಪ್ರಥಮವಯಸಿ ಪೀತಂ ತೋಯಮಲ್ಪಮ್ ಸ್ಮರಂತಂ
ಶಿರಸಿ ನಿಹಿತ ಭಾರಃ ನಾರಿಕೇಳಂ ನರಾಣಾಂ |
ಉದಕಮಮೃತಕಲ್ಪಂ ದದ್ಯುಃ ಆಜೀವನಾಂತಂ
ನಹಿಕೃತಮುಪಕಾರಂ ಸಾಧವೋ ವಿಸ್ಮರಂತಿ ||

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಸರಣಿ: 

ಬಾಯಿ ಸುಟ್ಟವರ ಕಥೆ

ಕೇಡಿಗರ ಕಿರುಕುಳದಿ ನೊಂದವರು
ಒಳಿತ ಬಯಸುವರನೂ ನಂಬರು;
ಬಿಸಿ ಹಾಲಿನಲಿ ಬಾಯಿ ಸುಟ್ಟವರು
ಮಜ್ಜಿಗೆಯ ’ಉಫ್’ ಎನಿಸಿ ಕುಡಿವರು!

ಸಂಸ್ಕೃತ ಮೂಲ:

ದುರ್ಜನ ದೂಷಿತಮನಸಾಂ ಪುಂಸಾಂ ಸುಜನೇSಪಿ ನಾಸ್ತಿ ವಿಶ್ವಾಸಃ
ದುಗ್ಧೇನ ಧಗ್ದವದನಸ್ತಕ್ರಂ ಫೂಕೃತ್ಯ ಪಾಮರಃ ಪಿಬತಿ

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಹುಡುಕಾಟ

ಮನವು ತಿಳಿಯಾಗಿರಲು ಬುವಿಯೆಲ್ಲ ಸೊಗಸೇ;
ಮನ ನೊಂದಿರುವಾಗ ಬುವಿ ಬರಿಯ ನೋವೇ.
ಸಂತಸದ ಆಸೆಯು ನಿನಗಿರುವುದಾದರೆ 
ಮನದಲೇ ನೆಮ್ಮದಿಯ ಮೊದಲು ನೀ ಗಳಿಸು

ಸಂಸ್ಕೃತ ಮೂಲ:

ಚಿತ್ತೇ ಪ್ರಸನ್ನೇ ಭುವನಂ ಪ್ರಸನ್ನಂ
ಚಿತ್ತೇ ವಿಷಣ್ಣೇ ಭುವನಂ ವಿಷಣ್ಣಂ |
ಅತೋಭಿಲಾಷೋ ಯದಿ ತೇ ಸುಖೇ ಸ್ಯಾತ್
ಚಿತ್ತಪ್ರಸಾದೇ ಪ್ರಥಮಂ ಯತಸ್ವ||

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.6 (5 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಹರಡುವ ಕಂಪು

ಅಸು ನೀಗುವಾಗಲೂ ಮರೆಯದೇ ಮನುಜರು
ಎಸಗುತಿರಬೇಕು ಪರರಿಗೆ ಒಳಿತನ್ನು;
ಹೊತ್ತಿ ಉರಿವಾಗಲೂ ಚಂದನದ ಮರವು
ದಿಸೆ ದಿಸೆಯಲು ಹರಡುವುದು ಕಂಪನ್ನು!

ಸಂಸ್ಕೃತ ಮೂಲ:

ಪ್ರಾಣನಾಶೇSಪಿ ಕುರ್ವೀತ ಪರೇಷಾಂ ಮಾನವೋ ಹಿತಂ
ದಿಶಃ ಸುಗಂಧಯತ್ಯೇವ ವಹ್ನೌ ಕ್ಷಿಪ್ತೋಪಿ ಚಂದನಃ

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ದುಡ್ಡಿದ್ದವನೇ ದೊಡ್ಡಪ್ಪ

ಅರಿವೂ ಮನೆತನವೂ ತರಲಾರವು ಹಿರಿಮೆ

ಎಂದಿಗೂ ಹಣವುಳ್ಳವರಲೇ ಜನರ ಒಲುಮೆ;

ಶಿವನು ತಲೆಯ ಮೇಲೆ ಹೊತ್ತಾಡಿದರೇನು?

ಗಂಗೆ ಸೇರುವುದು ರತ್ನಾಕರ*ನಲ್ಲವೇನು?

ಸಂಸ್ಕೃತ ಮೂಲ:

ನ ವಿದ್ಯಯಾ ನೈವ ಕುಲೇನ ಗೌರವಂ

ಜನಾನುರಾಗೋ ಧನಿಕೇಷು ಸರ್ವದಾ |

ಕಪಾಲಿನಾ ಮೌಲಿ ಧೃತಾಪಿ ಜಾಹ್ನವೀ

ಪ್ರಯಾತಿ ರತ್ನಾಕರಮೇವ ಸರ್ವಾದಾ ||

-ಹಂಸಾನಂದಿ

* ಕೊ.ಕೊ: ರತ್ನಾಕರ = ಮುತ್ತು ರತ್ನಗಳಿಗೆ ಆಗರವಾದ ಸಾಗರ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ತಾಳುವಿಕೆಗಿಂತನ್ಯ ತಪವು ಇಲ್ಲ

ಕೊಡುವುದಕಿಂತಲೂ ಬೇರೆ ಸಿರಿಯಿಲ್ಲ
ದಿಟವಾಡುವುದಕಿಂತ ನೋಂಪಿ ಮೊದಲಿಲ್ಲ
ನಡತೆ ಒಳ್ಳಿತಿರೆ ಒಸಗೆ ಬೇರೆ ಬೇಕಿಲ್ಲ
ತಾಳ್ಮೆಗೂ ಮೀರುವ ಸೇರಿಕೆಯು ಇಲ್ಲ

ಸಂಸ್ಕೃತ ಮೂಲ - (ಚತುರ್ವರ್ಗ ಸಂಗ್ರಹ ೧-೧೦)

ನ ದಾನತುಲ್ಯಂ ಧನಮನ್ಯದಸ್ತಿ
ನ ಸತ್ಯತುಲ್ಯಂ ವ್ರತಮನ್ಯದಸ್ತಿ |
ನ ಶೀಲತುಲ್ಯಂ ಶುಭಮನ್ಯದಸ್ತಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಬೆಲ್ಲದ ಕಟ್ಟೆಯ ಕಟ್ಟಿ...

ಬೆಲ್ಲದ ಬೆಟ್ಟದ ನಟ್ಟ ನಡು
ಬೇವಿನದೊಂದು ಬೀಜವ ನೆಟ್ಟು
ಸಾವಿರ ವರುಷ ಹಾಲ್ಮಳೆಗರೆಯಲು
ಸವಿಯಾದೀತೇ ಬೆಳೆಯುವ ಬೇವು?

ಸಂಸ್ಕೃತ ಮೂಲ:

गुलपर्वतमध्यस्थं निम्बबीजं प्रतिष्टितम्।
पयोवर्षसहस्रेण निम्बः किं मधुरं यते॥

ಕೊಸರು:
ಇದೇ ತಿಳಿವುಳ್ಳ ಬೆಲ್ಲದ ಕಟ್ಟೆಯ ಕಟ್ಟಿ ಬೇವಿನ ಬೀಜವ ಬಿತ್ತಿ ಅನ್ನುವ ಬಸವಣ್ಣನವರ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಋಣಂ ಕೃತ್ವಾ ಘೃತಂ ಪಿಬೇತ್

ಮರಳಿ ಬರುವ ದಾರಿಯಿದೆಯೆ
ಉರಿದು ಬೂದಿಯಾದ ಒಡಲು?
ಇರಲಿ ಅದಕೆ ಬಿಡದ ಜತುನ
ಎರವಲಲ್ಲೆ ತುಪ್ಪವುಣಲು!

ಉರಿದು ಬೂದಿಯಾದ ಒಡಲು
ಮರಳಿ ಬರುವ ದಾರಿಯೆಲ್ಲಿ?
ಇರಲೇಬೇಕು ಬಿಡದ ಜತುನ
ಎರವಲಲ್ಲೆ ತುಪ್ಪವುಣಲು!

ಸಂಸ್ಕೃತ ಮೂಲ (ಚಾರ್ವಾಕನದ್ದು ಎಂದು ಹೇಳುವುದುಂಟು- ಸರಿಯೋ ತಪ್ಪೋ ಕಾಣೆ):

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಮನೆ ಹತ್ತಿ ಉರಿವಾಗ...

ಕುತ್ತೊದಗಿದರೆ ಮಾಡುವುದೇನೆಂದು ಎಣಿಸಿರಬೇಕು ಮೊದಲೆ 
ಹತ್ತಿ ಉರಿವಾಗ ಮನೆ ಬಾವಿಯ ತೋಡುವುದು ತರವೆ? 

ಸಂಸ್ಕೃತ ಮೂಲ:

ಚಿಂತನೀಯಾ ಹಿ ವಿಪದಾಂ ಆದೌ ಏವ ಪ್ರತಿಕ್ರಿಯಾ |
ನ ಕೂಪಖನನಂ ಯುಕ್ತಂ ಪ್ರದೀಪ್ತೇ ವಹ್ನಿನಾ ಗೃಹೇ ||

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಕೇದಗೆಯ ಕಂಪು

ದೂರದ ನೆಲೆಯಿಹ ಅಗ್ಗಳ*ಗೆ ರಾಯಸ**ಕೆಂದಿವೆ ಹಿರಿಮೆಗಳು
ಹರಡಿದ ಕಂಪಿನ ಜಾಡಿನಲೆ ಕೇದಗೆಯ ಸಂದಾವು ಜೇನ್ದುಂಬಿಗಳು

ಸಂಸ್ಕೃತ ಮೂಲ:

ಗುಣಾಃ ಕರೋತಿ ದೂತತ್ವಂ ದೂರೇsಪಿ ವಸತಾಂ ಸತಾಂ|
ಕೇತಕೀಗಂಧಮಾಘ್ರಾಯ ಸ್ವಯಮಾಯಾಂತಿ ಷಟ್ಪದಾಃ ||

*ಅಗ್ಗಳ =ಉತ್ತಮ,ಶ್ರೇಷ್ಠ
**ರಾಯಸ = ದೂತ, ಹರಿಕಾರ, ಓಲೆಕಾರ

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಸಂಸಾರೊಂದಿಗರೋ? ಮನೆಗಾವಲಿನರೋ?

ದೂರದಿಂದಾರ ಮನೆಗೆ
ಅತಿಥಿಗಳು ಸಂತಸದಿ
ಬರುವರೋ - ಅವನೀಗ 
ದಿಟದಿ ಸಂಸಾರೊಂದಿಗ.

ಮಿಕ್ಕವರಿಗೆ ಏನೆನಬೇಕು
ಎಂದು ಕೇಳುವೆಯಾ?
ಅಲ್ಲವೇ ಅವರು ಬರಿಯ
ಮನೆಯ ಕಾವಲಿನವರು?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಮಂಗನ ಕೈಗೆ ಮಾಣಿಕ್ಯ

ಆಡುವುದು ಸವಿ ನುಡಿಗಳನು ಕಡು ಕೆಡುಕರೊಡನೆ
ನೀಡುವೊಲು ಮಿದು ಹೂ ದಂಡೆಯನು ಕೋಡಗನಿಗೆ

ಸಂಸ್ಕೃತ ಮೂಲ:

ಮಾ ದದ್ಯಾತ್ ಖಲಸಂಘೇಷು ಕಲ್ಪನಾ ಮಧುರಾಗಿರಃ |
ಯಥಾ ವಾನರಹಸ್ತೇಷು ಕೋಮಲಾಃ ಕುಸುಮಸ್ರಜಃ ||

मा दद्यात् खलसङ्घेषु कल्पनामधुरागिरः।
यथा वानरहस्तेषु कोमलाः कुसुमस्रजः॥

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಯಾರೆದುರು ಹೊಗಳಿಕೊಳ್ಳಬೇಕು?

ಬಲ್ಲವರೆದುರು ಹಿರಿಮೆಯ ಹೇಳದಿರು
ಅರಿತೇ ಅರಿಯುವರು ತಾವಾಗೇ;
ಹೇಳದಿರು ಹಿರಿಮೆಯ ಹುಂಬರೆದುರು
ಅರಿತವರ ನುಡಿಯ ಕೇಳದವರಿಗೆ!

ಸಂಸ್ಕೃತ ಮೂಲ:

ಬುಧಾಗ್ರೇ ನ ಗುಣಾನ್ ಬ್ರೂಯಾತ್ ಸಾಧು ವೇತ್ತಿ ಯತಃ ಸ್ವಯಂ
ಮೂರ್ಖಾಗ್ರೇSಪಿ ಚ ನ ಬ್ರೂಯಾತ್ ಬುಧಪ್ರೋಕ್ತಂ ನ ವೇತ್ತಿ ಸಃ||

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಬದ್ಕಿದ್ದಾಗ್ಲೇ ಸಾಯೋದ್‍ ಹೇಗೆ?

ಸಾಯೋದ್ ಹೇಗಿರತ್ತೆ ಅನ್ನೋದ್ನ
ತಿಳಿಯೋದ್ ಕಷ್ಟ ಇಲ್ಲ;

ಕೇಡ್ಗಿತ್ತಿ ಹೆಂಡ್ತಿ; ಮೋಸ್ಗಾರ ಗೆಳೆಯ
ಮಾತ್ಗೆದುರಾಡೋ ಬಂಟ, ಇಲ್ವೇ
ಹಾವ್ ಹೊಕ್ಕ್ ಮನೇಲ್ವಾಸ;

ಇಷ್ಟ್ರಲ್ ಯಾವ್ದ್ ಒಂದು ಸಿಕ್ಕಿದ್ರೂ
ನಾವಿರುವಲ್ಲೇ ಗೊತ್ತಾಗತ್ತಲ್ಲ!  

ಸಂಸ್ಕೃತ ಮೂಲ  (ಗರುಡಪುರಾಣ ೧-೧೦೮-೨೫):

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.2 (5 votes)
To prevent automated spam submissions leave this field empty.
ಸರಣಿ: 

ಕೊರತೆಯಲೂ ಕಾಣುವ ಹೊಳಪುಒರೆಹಚ್ಚಿ ಕಿರಿದಾಗಿಸಿದ ರತುನ ಕಾಳಗದಲಿ ಪೆಟ್ಟುನು ಉಂಡು ಗೆದ್ದಿಹ ಯೋಧ
ಮದವಡಗಿದ ಆನೆ ಹಿಂಗಾರಿನಲಿ ಮಳಲದಂಡೆಯ ತೋರುತಾ ಹರಿವಹೊಳೆ
ಹುಣ್ಣಿಮೆಯ ಹಿಂದಿನಿರುಳ ಚಂದಿರ ಬೇಟದಲಿ ಬಸವಳಿದ ಹರೆಯದ ಹುಡುಗಿ
ಕೊರತೆಯಲೆ ಮೆರುಗುವರು ಕೊಡುಗೈಯಲಿ ನೀಡಿ ಸಿರಿಯಳಿದವರ ತೆರದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಮಾತು ಎನ್ನುವ ಒಂದೇ ಒಡವೆಹೊಳೆವ ಕಡಗಗಳು ಚಂದಿರನ ಹೊಳಪಿರುವ ಹಾರಗಳು
ಸ್ನಾನವು ಪೂಸಿರುವ ಲೇಪಗಳು ಮುಡಿದಿರುವ ಹೂವುಗಳು
ಇವು ಅಲ್ಲ ಒಡವೆಗಳು! ನಿನಗಿರಲು ನಲ್ನುಡಿಯ ನಾಲಿಗೆಯು
ಮಾತಿನೊಡವೆಯ ಮುಂದುಳಿದೊಡವೆಗಳು ಸೊರಗುವುವು

ಸಂಸ್ಕೃತ ಮೂಲ - ಭರ್ತೃಹರಿಯ ನೀತಿಶತಕದಿಂದ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಗೆಳೆತನ

ಬಲವುಳ್ಳವರ ಗೆಳೆತನವೋ
ಬಲವಿರುವವರಿಗೇ ಮೀಸಲು;
ದೀಪವಾರಿಸುವ ಗಾಳಿರಾಯ
ಕಾಳ್ಗಿಚ್ಚನು ಪುಟಗೊಳಿಸುವನು!

ಸಂಸ್ಕೃತ ಮೂಲ:

ಬಲಿನೋ ಬಲಿನಃ ಸ್ನಿಹ್ಯಂತ್ಯಬಲಂ ತು ನ ಗೃಹ್ಣತೇ|
ದಾವಂ ದೀಪಯತೇ ಚಂಡೋ ದೀಪಂ ವ್ಯಾಹತಿ ಮಾರುತಃ ||

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಆರದ ಗಾಯ

ಕೊಡಲಿಯೇಟು ಬಿದ್ದರೂ
ಮರವು ಚಿಗುರಬಹುದು;
ಅಂಬಿನೇಟು ಬಿದ್ದ ಮೇಲೂ
ಗಾಯ ಮಾಯಬಹುದು;

ಕೆಡುಕರ ಕಹಿ ನುಡಿಯ
ಘೋರ ಮಾತಿನೇಟು
ಬಿದ್ದರೆಂದೂ ಮಾಯದು
ಮನಕೆ ಆದ ಏಟು.

ಸಂಸ್ಕೃತ ಮೂಲ:

ಸಂರೋಹತಿ ಶರೈರ್ವಿದ್ಧಂ ವರಂ ಪರಶುನಾ ಹತಂ |
ವಾಚಾ ದುರುಕ್ತಂ ಭೀಭತ್ಸಂ ನ ಸಂರೋಹತಿ ವಾಕ್‍ಕ್ಷತಮ್ ||

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (7 votes)
To prevent automated spam submissions leave this field empty.
ಸರಣಿ: 

ಪಾಣಿನಿಯ ತಪ್ಪು

ಮನಸು ಗಂಡಲ್ಲ ಹೆಣ್ಣಲ್ಲ
ಎನುವ ಪಾಣಿನಿಯ ನೆಚ್ಚಿ
ಮನವ ನಿನ್ನಲಿ ಕಳುಹಿ
ನಾನಂತೂ ಕೆಟ್ಟೆ ನಲ್ಲೆ!

ಮನವೇನೋ ನಲಿಯತಿದೆ
ನೆಲೆಸಿ ಅಲ್ಲೇನೇ; ಆದರೆ
ಪಾಣಿನಿಯ ತಪ್ಪಿಂದ
ನಾವಂತೂ ಸತ್ತೆವಲ್ಲೆ!

ಸಂಸ್ಸ್ಕೃತ ಮೂಲ (ಧರ್ಮಕೀರ್ತಿ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಮನದಾಟ

subhashita1
ಸು-
ಸಂಸ್ಕೃತ ವ್ಯಾಕರಣದ ಮೇಷ್ಟ್ರು ‘ಮನಸ್ಸು’ ನಪುಂಸಕ
ವೆಂದ ಹಳೆಯ ಪಾಠದ ನೆನಪು ಮರುಕಳಿಸಿದ್ದೇ ಹುಂಬನಂತೆ
ಎಗ್ಗಿಲ್ಲದೆ ಅಲೆದಾಡಲು ಬಿಟ್ಟುಕೊಂಡೆ ಅವಳನ್ನು
ನನ್ನ ಮನದ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.6 (5 votes)
To prevent automated spam submissions leave this field empty.

ಬೊಗಸೆಯ ಹೂವುಗಳು

ಬೊಗಸೆಯಲಿದ್ದರೆ ಹೂವುಗಳು
ಅಂಗೈಯೆರಡೂ ಘಮಘಮವು;
ಅಂತೆಯೆ ಪ್ರೀತಿಯು ಸುಜನರದು
ಎಡಬಲಕೆರಡಕು ಸರಿಸಮವು!

ಸಂಸ್ಕೃತ ಮೂಲ:

ಅಂಜಲಿಸ್ಥಾನಿ ಪುಷ್ಪಾಣಿ ವಾಸಯಂತಿ ಕರದ್ವಯಂ|
ಅಹೋ ಸುಮನಸಾಂ ಪ್ರೀತಿರ್ವಾಮದಕ್ಷಿಣಯೋಃ ಸಮಾ||

 -ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಎರಡು ಕಣ್ಣು ಒಂದು ನಾಲಗೆ

ಎರ್ಡೆರ್ಡ್ ಸಲ ನೋಡಕ್ಮೊದಲು
ಆಡೋದ್ಬೇಡ ಮಾತು ಅಂತ್ಲೇ
ಕೊಟ್ಟಿರ್ರ್ಬೇಕು ಮನುಷ್ಯರ್ಗೆ
ಎರ್ಡ್ ಕಣ್ಣು - ಒಂದೇ ನಾಲ್ಗೆ!

ಸಂಸ್ಕೃತ ಮೂಲ:

ಈಕ್ಷಣಂ ದ್ವಿಗುಣಂ ಪ್ರೋಕ್ತಂ ಭಾಷಣಸ್ಯೇತಿ ವೇಧಸಾ |
ಅಕ್ಷಿಣಿ ದ್ವೇ ಮನುಷ್ಯಾಣಾಂ ಜಿಹ್ವಾ ತ್ವೈಕೇವ ನಿರ್ಮಿತಾ ||

-ಹಂಸಾನಂದಿ 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.
ಸರಣಿ: 

ಕಾಲವನ್ನು ತಡೆಯೋರು ಯಾರೂ ಇಲ್ಲ!

ನೀನೊಳ್ಳೆ ಕೆಲ್ಸ ಮಾಡ್ಲಿ ಅಂತ
ರೋಗ ರುಜಿನ ಕಾಯೋದಿಲ್ಲ;
ನಿನ್ನಿಂದಿನ್ನೂ ಒಳ್ಳೇದಾಗ್ಬೇಕ್
ಅಂತ ಯಮನೂ ನಿಲ್ಲೋದಿಲ್ಲ;
ಮನಸ್ನೊಳಗೆ ಒಳ್ಳೇ ಕೆಲ್ಸ
ಮಾಡ್ಬೇಕಂತ ಅನ್ನಿಸ್ತಿದ್ರೆ
ಮಾಡಿಮುಗಿಸ್ಬೇಕ್ ಅವಾವಾಗ್ಲೇ
ಕಾಲವನ್ನ ತಡೆಯೋರಿಲ್ಲ!

ಸಂಸ್ಕೃತ ಮೂಲ ( ಮಹಾಭಾರತ, ಸಭಾಪರ್ವ ೫೬-೧೦ )

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಕತ್ತಿಯಲುಗಿನ ಮೇಲೆ ನಡಿಗೆ

ಗುಟ್ಟಿನಲಿ ನೀಡುವುದ ಬಂದವರ ಹದುಳದಲಿ ಕಾಣುವುದ
ಒಳಿತ ಮಾಡಿ ಮೌನದಲಿರುವುದ ಪರರ ನೆರವ ನುಡಿವುದ
ಐಸಿರಿಗರಳದ ಕಂಡವರ ತೆಗಳದೆಂತೆಂಬೀ ಕಡುಕಟ್ಟಳೆಗಳ
ಕತ್ತಿಯಲುಗಿನ ಮೇಲೆನಡೆವುದ ನೇಮಿಸಿದರಾರು ಸುಜನರಿಗೆ?

ಸಂಸ್ಕೃತ ಮೂಲ- ಭರ್ತೃಹರಿಯ ನೀತಿಶತಕದಿಂದ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಮೌನವೆಂಬ ಒಡವೆ

ಅರಿವಿಲ್ಲದಿರುವುದ ಮುಚ್ಚಿಡಲೆಂದೇ
ಸರಸಿಜಭವ*ನು ಕೊಟ್ಟಿಹನಲ್ಲ!
ಧರಿಸುವುದೊಳಿತು ಮೌನದ ಒಡವೆಯ
ಅರಿತವರೆ ಸುತ್ತಲು ನೆರೆದಿರುವಲ್ಲಿ

ಸರಸಿಜಭವ = ತಾವರೆಯಲ್ಲಿ ಹುಟ್ಟಿದವನು, ಬ್ರಹ್ಮ

ಸಂಸ್ಕೃತ ಮೂಲ: (ಭರ್ತೃಹರಿಯ ನೀತಿಶತಕದಿಂದ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಬೆಲೆಯಿರದ ನಿಧಿ

ಹೊತ್ತಿಗೆಯೊಳಗಡೆ ಅಡಗಿದ ಅರಿವು
ಕಂಡವರ ಕೈ ಸೇರಿದ ಹಣವು
ಬೇಕಾದೊಡನೆ ಸಿಗದಂತಿರಲು
ಅದಲ್ಲ ಅರಿವು! ಅದಲ್ಲ ಹಣವು!

ಸಂಸ್ಕೃತ ಮೂಲ:

ಪುಸ್ತಕಸ್ತಾತು ಯಾ ವಿದ್ಯಾ ಪರಹಸ್ತಂ ಗತಂ ಧನಂ|
ಕಾರ್ಯಕಾಲೇ ಸಮುತ್ಪನ್ನೇ ನ ಸಾ ವಿದ್ಯಾ ನ ತದ್ಧನಂ||

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.

ಮನವ ಕಸಿವ ಗುರು

ಕಲಿಸುವವರು ಹಲವರಿಹರು
ಕಲಿಯುವರ ಹಣವ ಕಸಿವರು;
ಬಲು ವಿರಳವದು ದೊರಕುವುದು
ಕಲಿವರ ಮನವ ಕಸಿವ ಗುರು!

ಸಂಸ್ಕೃತ ಮೂಲ:

ಗುರವೋ ಬಹವಃ ಸಂತಿ ಶಿಷ್ಯವಿತ್ತಾಪಹಾರಕಾಃ |
ದುರ್ಲಭಃ ಸ ಗುರುರ್ಲೋಕೇ ಶಿಷ್ಯಚಿತ್ತಾಪಹಾರಕಃ ||

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಹಿರಿಯರ ಸಿರಿ

ಕಡಲು ತಾನೇ ಮುತ್ತಿನೊಡವೆಯನು ತೊಡುವುದೆ?
ವಿಂಧ್ಯಗಿರಿ ಬಯಸುವುದೆ ಆನೆಗಳ ಪಹರೆ?
ಮಲೆನಾಡ ಗಿರಿಬೆಟ್ಟ ಗಂಧಲೇಪವ ಕೇಳೀತೆ?
ಹಿರಿಯರ ಸಿರಿಯೆಲ್ಲ ಪರರ ನೆರವಿಗೆಂದೆ!

ಸಂಸ್ಕೃತ ಮೂಲ (ಸುಭಾಷಿತರತ್ನಭಾಂಡಾಗಾರದಿಂದ):

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪಾಪ-ಪುಣ್ಯ

ಮಾನವ, ಪುಣ್ಯದ ಫಲ ಅಪೇಕ್ಷಿಸುತ್ತಾನಾದರೂ ಪುಣ್ಯದ ಕೆಲಸ ಮಾಡಲು ಇಚ್ಚಿಸುವುದಿಲ್ಲ.
ಪಾಪದ ಫಲ ಇಚ್ಚಿಸದಿದ್ದರೂ ಪಾಪದ ಕೆಲಸಕ್ಕೆ ಪ್ರಯತ್ನಿಸುತ್ತಾನೆ.

ಸುಭಾಷಿತ ಮೂಲ:

ಪುಣ್ಯಸ್ಯ ಫಲಮಿಚ್ಛಂತಿ ಪುಣ್ಯಂ ನ ಇಚ್ಚಂತಿ ಮಾನವಾಃ|
ನ ಪಾಪ ಫಲಮಿಚ್ಛಂತಿ ಪಾಪಂ ಕುರ್ವಂತಿ ಯತ್ನತ:||

------------------------------------------------

ಶಾಲೆಯಲ್ಲಿ ಓದಿದ್ದ ಸುಭಾಷಿತ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮರುಗದ ಜೊತೆಗೆ ಜಗಳ

ಕೂರೋದೊಳ್ಳೇದ್ ತಕ್ಕೋರ್ಜೊತೆಗೆ
ಒಡ್ನಾಟ ಇರ್ಲಿ ತಕ್ಕೋರ್ಜೊತೆಗೆ
ಗೆಳೆತನ ಆಗ್ಲೀ ಗುದ್ದಾಟ ಆಗ್ಲೀ
ಮಾಡ್ಬೇಕ್ ಬರೀ ತಕ್ಕೋರ್ಜೊತೆಗೆ

ಸಂಸ್ಕೃತ ಮೂಲ:

ಸದ್ಭಿರೇವ ಸಹಾಸೀತ ಸದ್ಭಿಃ ಕುರ್ವೀತ ಸಂಗತಿಮ್ |
ಸದ್ಭಿರ್ವಿವಾದಂ ಮೈತ್ರಿಂ ಚ ನಾಸದ್ಭಿಃ ಕಿಂಚಿದಾಚರೇತ್ ||

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹಾವ ತಿನ್ನುವ ಇರುವೆಗಳು

ಬೇಡ ಹಗೆ ಬಲು ಜನರೊಡನೆ
ತೊಡಕು ಗೆಲುವುದು ಗುಂಪನ್ನು;
ಕಟ್ಟಿರುವೆಗಳು ಕಚ್ಚಿ ತಿನ್ನಬಹುದು 
ಹೆಡೆಭುಸುಗುಡುತಿಹ ಹಾವನ್ನೂ!

ಸಂಸ್ಕೃತ ಮೂಲ - ಪಂಚತಂತ್ರದ ಕಾಕೋಲೂಕೀಯದಿಂದ

ಬಹವೋ ನ ವಿರೋದ್ಧವ್ಯಾ ದುರ್ಜಯಾ ಹಿ ಮಹಾಜನಾಃ
ಸ್ಫುರಂತಮಪಿ ನಾಗೇಂದ್ರಂ ಭಕ್ಷಯಂತಿ ಪಿಪೀಲಿಕಾಃ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ದಂಡ! ಬರೀ ದಂಡ!

ಕಡಲಿಗೆ ಸುರಿವ ಮಳೆಯದು ದಂಡ
ತುಂಬಿದ ಹೊಟ್ಟೆಗೆ ಭೂರಿ ಭೋಜನ
ಸಿರಿವಂತರಿಗೆ ಕೊಡುವುದು ದಂಡ
ಹಗಲಲಿ ಬೆಳಗುವ ದೀವಿಗೆ ದಂಡ

ಸಂಸ್ಕೃತ ಮೂಲ (ಚಾಣಕ್ಯ ನೀತಿಯಿಂದ):

ವೃಥಾ ವೃಷ್ಟಿಃ ಸಮುದ್ರೇಷು ವೃಥಾ ತೃಪ್ತಸ್ಯ ಭೋಜನಂ |
ವೃಥಾ ದಾನಂ ಧನಾಢ್ಯೇಷು ವೃಥಾ ದೀಪೋ ದಿವಾSಪಿ ಚ ||

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಗೆಜ್ಜೆಯ ದನಿ

ಕೇಡಿಗರ ಒರಟು ನುಡಿಗಳೋ ಕೊಳಕಿನೊಡನೆ
ಕಾಡುವುವು ಕಾಲ ಕಟ್ಟುವ ಸಂಕಲೆಯ ತೆರದಿ
ಸಾಧುಗಳ ಮೆಲುನುಡಿಯ ಮಾತುಗಳೊ ಮನವ
ಕದ್ದಾವು  ಕಾಲಂದುಗೆಯ ನಲುದನಿಯ ತೆರದಿ

ಸಂಸ್ಕೃತ ಮೂಲ: 

ಕಟು ಕ್ವಣಂತೋ ಮಲದಾಯಕಾಃ ಖಲಾಃ
ತುದಂತ್ಯಲಂ ಬಂಧನಶೃಂಖಲಾ ಇವ |
ಮನಸ್ತು ಸಾಧುಧ್ವನಿಭಿಃ ಪದೇ ಪದೇ 
ಹರಂತಿ ಸಂತೋ ಮಣಿನೂಪುರಾ ಇವ ||

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಕಹಿಮರದಲಿ ಸಿಹಿಹಣ್ಣುಗಳು

ಬಾಳ್ವೆಯೆನುವ ಈ ಕಹಿ ಮರದೊಳು
ಬಿಟ್ಟಾವು ನೋಡೆರಡು ಇನಿವಣ್ಗಳು
ನಲ್ವಾತು*ಗಳ ಸವಿಯುವುದೊಂದು
ಒಳ್ಳೆಯವರೊಡನಾಟ ಎರಡನೆಯದು

ನಲ್ವಾತು: ಒಳ್ಳೆಯ ಮಾತು

ಸಂಸ್ಕೃತ ಮೂಲ (ಸುಭಾಷಿತ ರತ್ನ ಭಾಂಡಾಗಾರದಿಂದ) :

ಸಂಸಾರಕಟು ವೃಕ್ಷಸ್ಯ  ದ್ವೇಫಲೇ ಹ್ಯಮೃತೋಪಮೇ |
ಸುಭಾಷಿತ ರಸಾಸ್ವಾದಃ ಸಂಗತಿಃ ಸುಜನೇ ಜನೇ || 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಶಿವರಾತ್ರಿಗೊಂದು ಶಿವಸ್ತುತಿ

ಹೋಗದಿರು ಇಲ್ಲಿಂದ ಕಾಲ್ದೆಗೆಯದೇ ಓ ಶಿವನೆ ನನ್ನಲ್ಲೆ ನೀ ನೆಲೆಸಿರು
ಹಿರಿಬೇಟೆಗಾರನೇ!  ಮನಸೆನ್ನುವೀ  ಕಗ್ಗಾಡಿನಲಿ ನಿನಗುಂಟು ಬಲು ಸುಗ್ಗಿಯು
ಮೋಹ ಮಚ್ಚರ ಸೊಕ್ಕು ಮೊದಲಾದ ಮಿಕಗಳು ಬಲು ತಿರುಗಾಡುತಿರಲು
ಅವುಗಳನು ಕೊಂದು ಬೇಟೆಯಾನಂದವನು ಹೊಂದುವುದೇ ನಿನಗೆ ಸರಿಯು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಬೆಂಕಿಯಲ್ಲದೇ ಸುಡುವುವಿವು

ಮನದನ್ನೆಯಗಲಿಕೆ ತಮ್ಮವರಿಂದಪಮಾನ
ಮುಗಿಯದುಳಿದ ಕದನ* ಕೇಡಿಗರ ಸೇವೆ
ಗತಿಗೆಟ್ಟಿರುವನಿಸಿಕೆ  ಎಣೆಗೆಡುಕರ ಕೂಟ
ಬೆಂಕಿಯೊಂದಿಲ್ಲದೇ  ಸುಡುವುದೊಡಲನ್ನು

ಸಂಸ್ಕೃತ ಮೂಲ: 

ಕಾಂತಾವಿಯೋಗಃ ಸ್ವಜನಾಪಮಾನೋ
ರಣಸ್ಯ ಶೇಷಃ ಕುನೃಪಸ್ಯ ಸೇವಾ |
ದರಿದ್ರ ಭಾವೋ ವಿಷಮಾ ಸಭಾ ಚ
ವಿನಾಗ್ನಿಮೇತೇ ಪ್ರದಹಂತಿ ಕಾಯಂ ||

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಕೊಟ್ಟದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ!

ಕಲಿಕೆಯೂ ಮರೆಯುವುದು ಕಾಲ ಕಳೆದಂತೆ
ಬೇರೂರಿಹ ಹೆಮ್ಮರಗಳೂ ಬೀಳಬಹುದಂತೆ
ಕೆರೆ ನದಿ ಕಡಲುಗಳೂ ಒಣಗಬಹುದಂತೆ
ಕೊಟ್ಟದ್ದು ಬಿಟ್ಟದ್ದು ಕೊನೆಗೂ ನಿಲುವುದಂತೆ 

ಸಂಸ್ಕೃತ ಮೂಲ (ಭಾಸನ ಕರ್ಣಭಾರ ನಾಟಕದಿಂದ):

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಕನ್ನಡಿಯೊಳಗಿನ ಆನೆ

ಅರಿಗರಪಾರ ಗುಣಗಳೂ ಕಿರಿದು
ತೋರೀತು ಕೀಳ್ಮನಸಿನ ಕಂಗಳಿಗೆ
ತೋರಿಕೆಯಿರುವುದು ನೋಡುವ ಮಟ್ಟಕೆ
ಕಿರುಗನ್ನಡಿಯೊಳಗಾನೆಯು ಕಂಡಂತೆ

ಸಂಸ್ಕೃತ ಮೂಲ:

ಮಹಾನಪ್ಯಲ್ಪತಾಂ ಯಾತಿ ನಿರ್ಗುಣೇ ಗುಣವಿಸ್ತರಃ
ಆಧಾರಾಧೇಯಭಾವೇನ ಗಜೇಂದ್ರ ಇವ ದರ್ಪಣೇ

-ಹಂಸಾನಂದಿ

ಚಿತ್ರ ಕೃಪೆ: ಗೂಗಲ್ ಇಮೇಜಸ್

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಅಪರೂಪದ ಮದ್ದು

ಅರಿಗರು ದೊರೆತರೂ ಹದುಳಿಗರು ದೊರೆಯರು
ದೊರೆವ ಹದುಳಿಗರೋ ಅರಿಯದವರಿರಬಹುದು 
ದೊರೆವುದತಿ ಅಪರೂಪ ರುಚಿಯಾದೌಷಧಿಯಂತೆ 
ಅರಿತವನೂ ಹದುಳಿಗನೂ ಆಗಿರುವ ಮಾನಿಸನು!

ಅರಿಗ = ವಿದ್ವಾಂಸ 
ಹದುಳಿಗ= ಹಿತಕರ, ಹಿತೈಷಿ
ಮಾನಿಸ = ಮನುಷ್ಯ, ಮಾನವ 

ಸಂಸ್ಕೃತ ಮೂಲ (ಸುಭಾಷಿತರತ್ನಭಾಂಡಾಗಾರದಿಂದ):

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಏಕೆ ಓದಬೇಕು?

ತಮ್ಮದೇ ನುಡಿಗಳನು ಕೇಳಿ ನಲಿವರಿಗರೂ*
ಪರರ ಕವಿತೆಗಳನೂ ಓದಿ ಸಂತೋಷಿಪರು
ಹೂಗಳಲೆ ಜೇನು ತುಂಬಿರುವ ಮಾವಿನ ಮರವು
ಕೊಡತುಂಬ ನೀರುಣಿಸ ಬಯಸದೇನು?

ಸಂಸ್ಕೃತ ಮೂಲ:

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ದುರ್ಲಭ ಯೋಜಕ!

ಆಮಂತ್ರಮಕ್ಷರಂ ನಾಸ್ತಿ,
ನಾಸ್ತಿ ಮೂಲ ಮನೌಷಧಂ!
ಅಯೋಗ್ಯಃ ಪುರುಷೋ ನಾಸ್ತಿ,
ಯೋಜಕಸ್ತತ್ರ ದುರ್ಲಭಃ !!

ಮಂತ್ರವಾಗದ ಅಕ್ಷರವುಂಟೆ?
ಔಷಧ ವಾಗದ ಮೂಲಿಕೆಯುನ್ಟೇ?
ಯೋಗ್ಯನಲ್ಲದ ಪುರುಶನುನ್ಟೆ?
ಯೋಜಕನ ಕೊರತೆಯುನ್ಟಲ್ಲದೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹೂ ಬಾಣ ಹಿಡಿದವಗೆ ಇನ್ನೊಂದು ನಮನ

ಕರ್ಪೂರದೊಲು ಉರಿದರೂ ಅಳವೇ*ರುತಲೆ ಇರುವ
ವೀರನಿಗೆ ನಾ ಮಣಿವೆ ಹೂ ಬಾಣ ಹಿಡಿದವಗೆ

(ಅಳವು = ಶಕ್ತಿ )

ಸಂಸ್ಕೃತ ಮೂಲ:

ಕರ್ಪೂರ ಇವ ದಗ್ಧೋಪಿ ಶಕ್ತಿಮಾನ್ ಯೋ ದಿನೇ ದಿನೇ
ನಮೋಸ್ತ್ವವಾರ್ಯ ವೀರ್ಯಾಯ ತಸ್ಮೈ ಕುಸುಮ ಧನ್ವನೇ

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಮೆತ್ಗಿದ್ದೋರ್ಗೆ ಮತ್ತೊಂದ್ಗುದ್ದು

ಕುದುರೆಯು ಬೇಡ ಆನೆಯೂ ಬೇಡ
ಹುಲಿಯಂತೂ ಮೊದಲೇ ಬೇಡ
ಕೊಡಬೇಕು ಬಲಿ ಆಡಿನ ಮರಿಯನು
ಮೆದುಗರ ದೇವರೂ ಕೊಲ್ಲುವನು

ಸಂಸ್ಕೃತ ಮೂಲ:

ಅಶ್ವಂ ನೈವ ಗಜಂ ನೈವ ವ್ಯಾಘ್ರಂ ನೈವ ಚ ನೈವ ಚ|
ಅಜಾಪುತ್ರಂ  ಬಲಿಂ ದಧ್ಯಾತ್ ದೇವೋ ದುರ್ಬಲಘಾತಕಃ||

ಕೊ.ಕೊ: ಇವತ್ತು ಸಂಪದದಲ್ಲೇ ಇನ್ನೊಂದು ಬರಹವನ್ನು ಓದಿದಾಗ, ನೆನಪಾದ ಸುಭಾಷಿತ ಇದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಹೆಸರುವಾಸಿ ಆಗೋದು ಹೇಗೆ?

ಮಡಿಕೆ ಒಡೀತೀಯಾ?
ಪರ್ವಾಗಿಲ್ಲ.
ಬಟ್ಟೆ ಹರ್ರ್ಕೊಳ್ತೀಯಾ?
ಚಿಂತೇ ಇಲ್ಲ!
ಕತ್ತೆ ಸವಾರಿ ಮಾಡುವೆಯಾ?
ಅದಿನ್ನೂ ಒಳ್ಳೇದೇ.
ಹೆಸರುವಾಸಿ ಆಗ್ಬೇಕಿದ್ರೆ
ಮಾಡ್ತಿರ್ಬೇಕು ಸದ್ದು ಗದ್ಲ! 

ಸಂಸ್ಕೃತ ಮೂಲ:

ಘಟಮ್ ಭಿಂದ್ಯಾತ್ ಪಟಮ್ ಛಿಂದ್ಯಾತ್ ಕುರ್ಯಾತ್ ರಾಸಭಾರೋಹಣಮ್|
ಯೇನಕೇನ ಪ್ರಕಾರೇಣ  ಪ್ರಸಿದ್ಧ ಪುರುಷೋ ಭವೇತ್ ||

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಕಲಿಕೆ

ತಾಯಂತೆ ಸಲಹುವುದು ತಂದೆಯೊಲು ನಡೆಸುವುದು
ಬೇಸರದಿ ಮನವ ನಲಿಸುವುದು ಇನಿಯೆಯೊಲು
ಸಿರಿಯ ತರಿಸುವುದು ಹೆಸರ ಮೆರೆಸುವುದು 
ಏನೇನ ಮಾಡದದು ಕಲಿಕೆಯ ಕಲ್ಪತರುವು!

ಸಂಸ್ಕೃತ ಮೂಲ:

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ನೀರು ಹರಿಯುವುದು ಕಡಲಿನ ಕಡೆಗೆ

ರೂಪ ಅವರು ಹಾಕಿದ್ದ  ಆಲದ ಮರದ ಬಿಳಲುಗಳ ಚಿತ್ರವನ್ನು ನೋಡಿದಾಗ ಏಕೋ ಈ ಸುಭಾಷಿತ ನೆನಪಾಯಿತು. ಅಥವಾ, ಇವತ್ತು ಇಲ್ಲಿ ಬೆಟ್ಟದ ಮೇಲೆ ಬೀಳುತ್ತಿರುವ ಮಂಜಿನಿಂದಲೋ? ಯಾಕೋ ಬಗೆಹರಿಯದು. ಬಿಡಿ. ಒಂದು ಒಳ್ಳೇ ಮಾತು ಹೇಳಲು ಪೀಠಿಕೆ ಬೇರೆ ಬೇಕಾ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಬಾಯ್ಬಿಟ್ಟು ನುಡಿಯಬೇಕೇ?

ಮಿಗಗಳೂ ತಿಳಿದಾವು ಬಾಯ್ಬಿಟ್ಟು ನುಡಿವುದನು
ಆನೆ ಕುದುರೆಗಳೂ ತೋರಿದುದ ಮಾಡುವುವು!
ಜನರವರು ಪಂಡಿತರು ಹೇಳದುದ ಎಣಿಸು*ವರು
ಪರರ ಮನವರಿಯುವುದದುವೆ ಚದುರತನಕೆ ಗೆಲುವು

*ಎಣಿಸು= ಊಹೆ ಮಾಡು, ತರ್ಕಿಸು

ಸಂಸ್ಕೃತ ಮೂಲ (ಹಿತೋಪದೇಶದ ಸುಹೃದ್ಭೇದ ದಿಂದ):

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ತಂತಾನೇ ಅರಳುವ ಹಿರಿಮೆ

ಹಿರಿಮೆಯಿರಲು ಮನುಜರಲಿ
ಅರಳುವುವು ಅವು ತಾವಾಗಿ.
ಪರಿಮಳ ಸೂಸಲು ಕತ್ತುರಿಗೆ
ಹೇರಬೇಕೇನು ಒತ್ತಾಯ?

ಸಂಸ್ಕೃತ ಮೂಲ:

ಯದಿ ಸಂತಿ ಗುಣಾಃ ಪುಂಸಾಂ ವಿಕಸಂತ್ಯೇವ ತೇ ಸ್ವಯಂ
ನ ಹಿ ಕಸ್ತೂರಿಕಾಮೋದಃ ಶಪಥೇನ ವಿಭಾವ್ಯತೇ

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಒಳ್ಳೆಯ ಆಸರೆ

ಹೆಚ್ಚಿನ ಬೆಲೆಯ ಮಾಣಿಕಕೂ
ಹೊನ್ನಿನಾಸರೆಯು ಬಲು ಸೊಗಸು
ಹೆಣ್ಣು ಹಂಬುಗಳು ಪಂಡಿತರು
ಒಳ್ಳೆ ಆಸರೆಯಲಿ ಮೆರುಗುವರು

ಸಂಸ್ಕೃತ ಮೂಲ: ( ಸುಭಾಷಿತ ರತ್ನ ಭಾಂಡಾಗಾರದಿಂದ)

ಅನರ್ಘ್ಯಮಪಿ ಮಾಣಿಕ್ಯಂ ಹೇಮಾಶ್ರಯಮಪೇಕ್ಷತೇ|
ಅನಾಶ್ರಯಾ ನ ಶೋಭಂತೇ ಪಂಡಿತಾ ವನಿತಾ ಲತಾಃ ||

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಚೆಲುವು ಇರುವುದೆಲ್ಲಿ?

ಎಲ್ಲಿಹುದು ಸಾಜದಲಿ
ಚೆಲುವಾದ್ದು ಅಲ್ಲದುದು?
ಒಲುಮೆ ಎಲ್ಲಿಹುದದುವೆ
ಚೆಲುವೆಂದು ತೋರುವುದು!

ಮೂಲ ಸಂಸ್ಕೃತ ಶ್ಲೋಕ (ಹಿತೋಪದೇಶದ ಸುಹೃದ್ಭೇದದಿಂದ):

ಕಿಮಪ್ಯಸ್ತಿ ಸ್ವಭಾವೇನ ಕಿಂ ಸುಂದರಮಸುಂದರಮ್
ಯದೇವ ರೋಚತೇ ಯಸ್ಮೈ ತದ್ಭವೇತ್ತಸ್ಯ ಸುಂದರಮ್

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಮುತ್ತುಗಕ್ಕೆ ಮೂರೇ ಎಲೆ!

ಅರಸ ಮೆಚ್ಚಿ ಎಷ್ಟು ಕೊಡುವ?
ಬರೆದಷ್ಟು ಹಣೆಯಲಿ ಬೊಮ್ಮ!
ಇರುಳುಹಗಲು ಸುರಿದರೂ ಮಳೆ
ಮೂರೇ ಎಲೆ ಮುತ್ತುಗಕೆ*

*- ಮುತ್ತುಗದ ಎಲೆಗಳು ಮೂರುಮೂರಾಗಿ ಒಟ್ಟಾಗಿರುತ್ತವೆ. ಅಲ್ಲದೆ, ಮೂಲದಲ್ಲಿ ಅರಸ ಎಂದಿದ್ದರೂ, ಇವತ್ತಿಗೂ ಹೊಂದುವ ಮಾತು ಎಂದು ನನಗನಿಸುತ್ತೆ.

ಚಿತ್ರ : ವಿಕಿಪಿಡಿಯಾದಿಂದ

ಸಂಸ್ಕೃತ ಮೂಲ:

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಗಳಿಕೆ ಹೇಗಿರಬೇಕು?

ಗಳಿಸುತಿರಬೇಕು ಹಣವ
ಉಳಿಸುತಲೂ ಜೊತೆಗೆ
ಬೆಳೆಸುತಲೂ ಇರಬೇಕು!
ಗಳಿಸದೇ ಮುಕ್ಕುತಿರೆ
ಅಳಿವುದದು ನಿಕ್ಕುವದಿ
ಮಲೆಯೆತ್ತರದೈಸಿರಿಯೂ!!

ಸಂಸ್ಕೃತ ಮೂಲ:

ಅರ್ಥಾನಾಮರ್ಜನಂ ಕಾರ್ಯಂ ವರ್ಧನಂ ರಕ್ಷಣಂ ತಥಾ
ಭಕ್ಷ್ಯಮಾಣೋ ನಿರಾದಾಯಃ ಸುಮೇರುರಪಿ ಹೀಯತೇ 

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಣ್ಣಿದ್ದೂ ಕುರುಡನಾಗುವುದು ಹೇಗೆ?

ಇರುವುದೊಂದನೆ ಕಣ್ಣು ಸಾಜದಾ ತಿಳಿವೆಂದು!
ಅರಿತವರ ಒಡನಾಟವೆರಡನೆಯದು!!
ಎರಡು ಇವು ಇರದಾತ ಹುಟ್ಟುಗುರುಡನು ತಾನೆ?
ದಾರಿ ತಪ್ಪಿದರೆ ತಪ್ಪವನದೇನು?

ಸಂಸ್ಕೃತ ಮೂಲ:

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಮುಖ ನೋಡಿ ಮಣೆ ಹಾಕುವುದು ಸರಿಯೇ?

ಚರಿಯೆ* ನೋಡಿ ಮನದಾಳವ 
ಅರಿಯುಬೇಕು ಚತುರರು!
ಅರಳದ ಕೇದಗೆ ಪರಿಮಳವನು
ಅರಿವಂತೆ ಅಲರುಣಿ**ಗಳು!

ಸಂಸ್ಕೃತ ಮೂಲ:

ಆಕಾರಾಣೈವ ಚತುರಾಃ ತರ್ಕಯಂತಿ ಪರೇಂಗಿತಂ
ಗರ್ಭಸ್ಥಂ ಕೇತಕೀ ಪುಷ್ಪಂ ಆಮೋದೇನೇವ ಷಟ್ಪದಾಃ

*ಕೊ:ಚರಿಯೆ ~= ಚರ್ಯೆ, ಚಹರೆ, ಹೊರಕ್ಕೆ ತೋರುವ ನಡವಳಿಕೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ನಮ್ಮವರ ಗೆಳೆತನ

ಸಣ್ಣವರು ಚಿಕ್ಕವರು ಪುಟ್ಟವರು ಎಂಥವರೂ
ನಮ್ಮವರು ಎಂದಾಗ ಗೆಳೆತನವ ಬಿಡದಿರು!
ಹೊಟ್ಟನ್ನು ತೆಗೆದು ಅಕ್ಕಿಯನು ಮಾಡಿರುವ
ಬತ್ತವದು ಮೊಳೆಯದೆಂಬುದ ಮರೆಯದಿರು!!

ಸಂಸ್ಕೃತ ಮೂಲ (ಹಿತೋಪದೇಶದ ಮಿತ್ರಲಾಭ ಭಾಗದಿಂದ) :

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹಾಳೂರಿಗುಳಿದವನೇ ...

ಅರಿತವರೇ ಇರದೂರಿನಲಿ
ಗೌರವ ದೊರೆತೀತು ಮಡೆಯನಿಗೂ!
ಮರಗಳೇ ಕಾಣದ ದೇಶದಲಿ
ಹರಳು ಗಿಡವನೇ ಮರವೆಂದಾರು!!

ಸಂಸ್ಕೃತ ಮೂಲ:

ಯತ್ರ ವಿದ್ವದ್ಜನೋ ನಾಸ್ತಿ ಶ್ಲಾಘ್ಯಸ್ತತ್ರಾಲ್ಪಧೀರಪಿ |
ನಿರಸ್ತ ಪಾದಪೇ ದೇಶೇ ಏರಂಡೋಪಿ ದ್ರುಮಾಯತೇ||

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಹೊತ್ತಿಗೆ-ಹಣ-ಹುಡುಗಿ

ಹೊತ್ತಿಗೆ - ಹಣವು - ಹುಡುಗಿ
ಬರುವುದುಂಟೇ ತಿರುಗಿ
ಕಂಡವರ ಕೈ ಸೇರಿದ ಮೇಲೆ?

ಬಾರವು ಬಾರವು!
ಒಂದುವೇಳೆ ಬಂದರೂ
ಹರಿದು ಕಿಲುಬಿ ನಲುಗಿ!

ಸಂಸ್ಕೃತ ಮೂಲ:

ಪುಸ್ತಕಂ ವನಿತಾ ವಿತ್ತಂ ಪರಹಸ್ತಗತಂ ಗತಂ
ಅಥವಾ ಪುನರಾಯಾತಿ ನಷ್ಟಂ ಭ್ರಷ್ಟಂ ಚ ಖಂಡಿತಂ 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (2 votes)
To prevent automated spam submissions leave this field empty.

ಹೂ ಬಾಣ ಹಿಡಿದವಗೆ ಒಂದು ನಮನ

ಹರಿ ಹರ ಬೊಮ್ಮರನೂ ಚಿಗರೆಗಣ್ಣಿಯರಿಂದ
ಮೂರ್ಕಾಲ ಮನೆಕೆಲಸದಾಳುಗಳಂತಾಗಿಸಿದ
ತೋರದಿಹ ನೋಟದಲಿ ಮಾತಿನಲಿ ನಿಲುಕದಾ ದೇ
-ವರಿಗೆ ನಮಿಸುವೆನು ಹೂ ಬಾಣಗಳ ಹಿಡಿದಿಹಗೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಅವಳ ನೋಟ

ಸರಸರನೆ ಹರಿಯುವ ಹೊಳೆವ ಚರ್ಮದ ಹಾವು
ಕಚ್ಚುವುದೇ ಮೇಲವಳ ಕಣ್ನೋಟಕಿಂತ
ವೈದ್ಯರಿಹರೆಲ್ಲೆಲ್ಲೂ ಹಾವು ಕಚ್ಚಿದರವಳ
ಕ್ಷಣನೋಟದ ಗಾಯಕೆ ಇಲ್ಲ ಔಷಧಿಯು

ಸಂಸ್ಕೃತ ಮೂಲ: (ಭರ್ತೃಹರಿ)

ವ್ಯಾದೀರ್ಘೇಣ ಚಲೇನ ವಕ್ರಗತಿನಾ ತೇಜಸ್ವಿನಾ ಭೋಗಿನಾ
ನೀಲಾಬ್ಜದ್ಯುತಿನಾಹಿನಾ ಪರಮಹಮ್ ದಷ್ಟೋ ನ ತಚ್ಚಕ್ಷುಷಾ|
ದಷ್ಟೇ ಸಂತಿ ಚಿಕಿತ್ಸಕಾ ದಿಶಿ ದಿಶಿ ಪ್ರಾಯೇಣ ಧರ್ಮಾರ್ಥಿನೋ
ಮುಗ್ಧಾಕ್ಷೀಕ್ಷಣವೀಕ್ಷಿತಸ್ಯ ನ ಹಿ ಮೇ ಮಂತ್ರೋ ನ ಚಾಪ್ಯೌಷಧಮ್||

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸುಭಾಷಿತ: ಐದು ಮರಗಳ ಸ್ವರ್ಗ

  "ಪಂಚೈತೆ ದೇವತರವ: ಮಂದಾರ: ಪಾರಿಜಾತಕ:|
  ಸಂತಾನ: ಕಲ್ಪವೃಕ್ಷ ಪುಂಸಿ ವಾ ಹರಿಚಂದನಂ||"
ಈ ಐದೂ ಮರಗಳು ಸ್ವರ್ಗದಲ್ಲಿ ಕಂಡುಬರುತ್ತವೆ, ಅಥವಾ ಯಾವೊಂದು ಸ್ಥಳದಲ್ಲಿ ಈ ಐದೂ ಮರಗಳು ಕಂಡುಬರುತ್ತವೆಯೋ ಅದನ್ನು ಸ್ವರ್ಗವೆನ್ನಬಹುದು. ಆ ಐದು ಮರಗಳು: ಮಂದಾರ, ಪಾರಿಜಾತ, ಸಂತಾನ, ಕಲ್ಪವೃಕ್ಷ(ತೆಂಗಿನಮರ) ಮತ್ತು ಶ್ರೀಗಂಧ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಗೆಳೆಯ

ಕೆಡುಕುಗಳ ಕಳೆದು ಒಳಿತ ಕೂಡಿಸುವ
ಗುಟ್ಟುಗಳ ಮುಚ್ಚಿಟ್ಟು ಗುಣಬಯಲಿಗೆಳೆವ
ಆಪತ್ತಿನಲಿ ಕೈ ಹಿಡಿದು ಬೇಕಾದ್ದ ಕೊಡುವ
ಇಂಥವನು ಇದ್ದರವ ನಿಜವಾದ ಗೆಳೆಯ

ಸಂಸ್ಕೃತ ಮೂಲ:

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮರಗಳೇಕೆ ಹಣ್ಣನೀಯುವುವು?

ಮನೆ-ಕೈತೋಟಕ್ಕೂ ಒಂದು ದಿನಾಚರಣೆ ಇದೆ ಎಂದು ನನಗೆ ಇವತ್ತು  ಹರ್ಷವರ್ಧನರ ಬರಹ ಓದುವವರೆಗೆ ತಿಳಿದಿರಲಿಲ್ಲ. ಅವರು ಉದ್ಧರಿಸಿರುವ ಚೀನೀ ಹೇಳಿಕೆಯ ಜೊತೆಯಲ್ಲೇ ಒಂದೆರಡು ಸುಭಾಷಿತಗಳು ನೆನಪಾದವು. ಅದನ್ನೇ ಇಲ್ಲಿ ಕನ್ನಡಿಸಿ ಬರೆದಿರುವೆ:

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಹಣೆಯಲ್ಲಿ ಬರೆದದ್ದು

ತಾನೆ ಲೋಕಕ್ಕೊಡೆಯ ಮಾವ ಬೆಟ್ಟಗಳೊಡೆಯ
ಗೆಳೆಯನೋ ಸಿರಿಗೊಡೆಯ  ಮಗ ಗಣಗಳೊಡೆಯ
ಅದಕೇನು? ತಿರಿದು ತಿಂಬುದು ತಪ್ಪಲಿಲ್ಲವು ಶಿವಗೆ
ಅದಕೆ ಹೇಳುವೆನಿಂದು ವಿಧಿಯೆ ಬಲವೆಂದು! 

ಮೂಲ ಸಂಸ್ಕೃತ ಪದ್ಯ ಹೀಗಿದೆ:

ಸ್ವಯಂ ಮಹೇಶಃ ಶ್ವಶುರಃ ನಗೇಶಃ ಸಖಾ ಧನೇಶಃ ತನಯಃ ಗಣೇಶಃ |
ತಥಾಪಿ ಭಿಕ್ಷಾಟನಮೇವ ಶಂಭೋಃ ಬಲೀಯಸೀ ಕೇವಲಮೀಶ್ವರಿಚ್ಛಾ! ||

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕತ್ತೆಯನು ಹತ್ತಿದವರು

ಕತ್ತೆಯನು ಏರುವ ಹೀನಾಯಕಿಂತ
ಲೇಸು ಕುದುರೆಯಿಂದೊಂದು ಒದೆತ!
ಮರುವರೊಡನೆ ಕೀಳು ಗೆಳೆತನಕಿಂತ
ಲೇಸು ಅರಿತವರೊಡನೆ ಸೆಣಸಾಟ!!

ಮೂಲ ಸಂಸ್ಕೃತ ಪದ್ಯ ಹೀಗಿದೆ:

ಹರೇ: ಪಾದಾಹತಿ: ಶ್ಲಾಘ್ಯಾ ನ ಶ್ಲಾಘ್ಯಾ ಖರಾರೋಹಣಂ |
ಸ್ಪರ್ಧಾಪಿ ವಿದುಷಾ ಯುಕ್ತಾ ನ ಯುಕ್ತಾ ಮೂರ್ಖ ಮಿತ್ರತಾ ||

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಹದಿನಾರರ ಹರೆಯ

ಮೊದಲ ಐದು ವರುಷದಲಿ
ಮುದ್ದು ಮಾಡು ಬಹಳ;
ಇನ್ನು ಮತ್ತೆ ಹತ್ತು ವರುಷ
ತಿದ್ದಬೇಕು ಬಹಳ;

ಬರಲು ಹದಿನಾರರ ಹರೆಯ,
ತಿಳಿಯೊ ಬೇಗ ಮರುಳ!
ಮಗನ ಕಾಣು ಗೆಳೆಯನಂತೆ
ಆಗೆಲ್ಲವು ಹದುಳ !!

(ಭಾವಾನುವಾದ ನನ್ನದು)

ಸಂಸ್ಕೃತ ಮೂಲ - ಚಾಣಕ್ಯ ಪಂಡಿತನದ್ದು:

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

(ಮನೆ) ಅಳಿಯ! ಮನೆ ತೊಳಿಯ !!

ದಿನವಿಡೀ ಮುನಿಸು ಎಂದಿಗೂ ವಕ್ರ
ಬಯಸುವನು ಮರಿಯಾದೆಯನು ಸದಾ
ಕನ್ಯಾರಾಶಿಯಲಿ ನೆಲೆನಿಂತಿಹನೋ ಈ
(ಮನೆ*) ಅಳಿಯನೆಂಬ ಹತ್ತನೇ ಗ್ರಹ! 

ಸಂಸ್ಕೃತ ಮೂಲ - ಕನ್ನಡ ಕಂದರ ಕೃಪೆಯಿಂದ

ಸದಾ ರುಷ್ಟಃ ಸದಾ ವಕ್ರಃ ಸದಾ ಪೂಜಾಮಪೇಕ್ಷತೇ
ಕನ್ಯಾರಾಶಿಸ್ಥಿತೋ ನಿತ್ಯಂ ಜಾಮಾತಾ ದಶಮೋ ಗ್ರಹಃ||

*: ಮೂಲದಲ್ಲಿ ಮನೆ ಅಳಿಯನೆಂದಿಲ್ಲ; ಬರೀ ಅಳಿಯನೆಂದಿದೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮರದಂತಹ ಮನಸ್ಸು

ನೆರೆನಂಬಿದವರಿಗೆ ನೆರಳನ್ನೀಯುತ
ಬಿಸಿಲಲಿ ತಾವೇ ನವೆಯುತಲಿ
ತನಿವಣ್ಣುಗಳನೆಲ್ಲ ಇತರರಿಗೀಯುವ
ಮರಗಳಂತಲ್ಲವೆ ಅಗ್ಗಳರು?

ಸಂಸ್ಕೃತ ಮೂಲ:

ಛಾಯಾಮನ್ಯಸ್ಯ ಕುರ್ವಂತೇ ತಿಷ್ಠಂತಿ ಸ್ವಯಮಾತಪೇ|
ಫಲಾನ್ಯಾಪಿ ಪರಾರ್ಥಾಯ ವೃಕ್ಷಾಃ ಸತ್ಪುರುಷಾಃ ಇವ||

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಅರಿತವರ ತೆರ

ಕಲಿತವರ ದುಡಿಮೆಯನು
ಕಲಿತವರೇ ಬಲ್ಲರು.
ಹೆರದವಳು ಅರಿಯುವಳೆ
ಹೆರಿಗೆ ನೋವನ್ನು?

(ಸಂಸ್ಕೃತದಿಂದ ಅನುವಾದ)

ಮೂಲ ಹೀಗಿದೆ:

ವಿದ್ವಾನೇವ ವಿಜಾನಾತಿ ವಿದ್ವಜ್ಜನ ಪರಿಶ್ರಮಂ
ನ ಹಿ ವಂಧ್ಯಾ ವಿಜಾನಾತಿ ಗುರ್ವೀಂ ಪ್ರಸವವೇದನಾಂ

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಕಿರಿಯರ ನುಡಿ

ಕಿರಿಯರು ನುಡಿದರೂ ಕೇಳುವರು
ಅರಿತಂತಹ ಹಿರಿಮನದವರು; ನೇ
ಸರ ಕಿರಣವು ತಲುಪದೆಡೆಗೂ ಸೊ-
ಡರಿನ ಬೆಳಕು ತೊಳಗುವುದೆಂದು

(ಹಿತೋಪದೇಶದ ಒಂದ ಶ್ಲೋಕದ ಅನುವಾದ)

ಮೂಲ ಹೀಗಿದೆ:

ಬಾಲಾದಪಿ ಗೃಹೀತವ್ಯಂ ಯುಕ್ತಮುಕ್ತಂ ಮನೀಷಿಭಿಃ
ರವೇರವಿಷಯೇ ಕಿಂ ನ ಪ್ರದೀಪಸ್ಯ ಪ್ರಕಾಶನಂ

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಆರು ಹುಸಿ ವಿದ್ಯೆಗಳು

ಕನ್ನಡಕಂದರು ಆರು ಬಗೆಯ ಹುಸಿವಿದ್ಯೆಗಳ ಬಗ್ಗೆ ಸಂಸ್ಕೃತ ಸುಭಾಷಿತಗುಚ್ಛವೊಂದನ್ನು ಹಾಕಿದ್ದರು. ನನಗೆ ಅರ್ಥವಾದ ಮಟ್ಟಿಗೆ ಕನ್ನಡಿಸಿರುವೆ.

ಇನ್ನೂ ಒಳ್ಳೆಯ ಅನುವಾದವನ್ನು ಕನ್ನಡಕಂದರು ಕೊಡುವ ಸಾಧ್ಯತೆ ಇದೆ ;) ಅಲ್ಲಿಯವರೆಗೆ ಇದು ಓದಿ!

ಕಲಿತದು ವಿದ್ಯೆ ಮಾಡಲದು ನೆರವು ತನಗೋ ಮೇಣ್ ಪರರಿಗೋ
ಅದಿಲ್ಲದೆ ಬರಿ ಹೊತ್ತಿಗೆಯೊಳಿರಲದರಿಂದೇನು ಭಾರವಿದ್ಯೆಯಿಂ? || 1||

ಹಿರಿಮೆಯಿಂದ ಒಯ್ಯಬೇಕದು ಸಟೆಯಿಂ ದಿಟದೆಡೆಗೆ
ಅಲ್ಲದೆ ದಿಟದಿಂ ಸಟೆಯೆಡೆಗೊಯ್ದರದು ಕೀಳುವಿದ್ಯೆಯು ||2||

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಹಣವೇ ಗುಣವೆ?

ಹಣವಿಲ್ಲದೇ ಈ ಜಗದಲ್ಲಿ ಬಾಳಲಾರೆವು ಎಂಬುದೇನು ಸುಳ್ಳಲ್ಲ. ಅಂದಹಾಗೆ, ಇದೇನು ಇವತ್ತಿನ ಮಾತೂ ಅಲ್ಲ - ಅನಾದಿ ಕಾಲದಿಂದಲೇ ನಡೆದುಕೊಂಡು ಬಂದಿರುವಂತಹದ್ದೇ. ವೇದಗಳಲ್ಲೇ, ಹಣವನ್ನು ಜೂಜಾಡಿ ಕಳೆದುಕೊಂಡ ವ್ಯಕ್ತಿ ಹೇಗೆ ತನ್ನ ಕುಟುಂಬದವರಿಂದಲೇ ಅನಾದರಕ್ಕೆ ಒಳಗಾಗುತ್ತಾನೆ ಅನ್ನುವುದರ ಪ್ರಸ್ತಾಪ ಬಂದಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಪುಣ್ಯದ ಫಲ

ಪುರಂದರದಾಸರು "ಮುನ್ನ ಮಾಡಿದ ದುಷ್ಕರ್ಮದಿ ಬಳಲಿದೆ, ಇನ್ನಾದರೂ ಎನ್ನ ಸಲಹೋ" ಎಂದು ಒಂದು ದೇವರನಾಮದಲ್ಲಿ ಹಾಡಿದ್ದಾರೆ. ಹಿಂದಿನ ದುಷ್ಕರ್ಮದಿಂದ ಬಳಲುತ್ತೇವೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ, ತೊಂದರೆಗೊಳಗಾಗಿದ್ದಾಗ,ಎಲ್ಲಿಂದಲೋ ಬಂದ ನೆರವಿನಿಂದ ಆ ತೊಂದರೆಯಿಂದ ಪಾರಾಗುವ ಘಟನೆಗಳ ಅನುಭವ ಎಲ್ಲರಿಗೂ ಆಗಿರುವುದೇ! ಇದನ್ನೇ ಪುಣ್ಯದ ಫಲ ಎನ್ನುವುದೇ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಎರಡು ಬಗೆಯ ಜನರು!!

ಈ ಮೊದಲು ಮೂರು ಬಗೆಯ ಜನರ ಬಗ್ಗೆ ಬರೆದಿದ್ದೆ. ಅದಕ್ಕೇ ಇರಬೇಕು, ಇದ್ದಕ್ಕಿದ್ದಂತೆ, ಇಂದು ಇನ್ನೊಂದು ಸುಭಾಷಿತ ನೆನಪಿಗೆ ಬಂತು. ಇದರಲ್ಲಿ ಎರಡು ಬಗೆಯ ಜನರನ್ನು ಸುಭಾಷಿತಕಾರ ಬಣ್ಣಿಸುತ್ತಾನೆ.

ಕಲಿಕೆ ತಗಾದೆಗೆ ಹಣವಿಹುದು ಗರುವಕೆ ಕೆಡುಕನ ಶಕುತಿಯೋ ಕಂಡವರ ಕಾಡಲಿಕೆ
ಸಾಧುಗಳಿಗಾಗುವುದದು ತಿರುವುಮುರುವು-ಅರಿವಿಗೆ,ಕೊಡಲಿಕೆ ಮತ್ತು ಕಾಪಿಡಲಿಕೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಮೂರು ಬಗೆಯ ಜನರು

ಎಡರುಗಳಿಗೆ ಹೆದರಿ ತೊಡಗರು ಬೀಡಾಡಿಗಳು
ನಡುನಡುವೆ ತಡೆಬರಲು ಬಿಡುವರು ನಾಡಾಡಿಗಳು
ಎಡಬಿಡದೆ ಬರುವೆಡರುತೊಡರುಗಳ ಹೊಡೆತದಲೂ
ಹಿಡಿದುದನು ಕೈ ಬಿಡದೆ ನಡೆಸು**ವವರಗ್ಗಳರು

(ಬೀಡಾಡಿ: ನೀಚ ; ನಾಡಾಡಿ : ಸಾಮಾನ್ಯ ; ಅಗ್ಗಳ : ಶ್ರೇಷ್ಟ)*

ಮೂಲ ಸಂಸ್ಕೃತ ಸುಭಾಷಿತ:

ಪ್ರಾರಭ್ಯತೇ ನ ಖಲು ವಿಘ್ನ ಭಯೇನ ನೀಚೈ:

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಇಳಿದ ಜ್ವರ

ಅರಿವಿರಲು ಮೊನೆಯಷ್ಟು ಕುರುಡಾಗಿದ್ದೆ ಸೊಕ್ಕಿದಾನೆಯೊಲು

ಗರುವದಲಿ ಮನವಿತ್ತು  ಎಲ್ಲನರಿತವವ ನಾನೆಂದು !

ಅರಿತವರ ಒಡನಾಟ ತರಲು ತುಸು ತುಸು ತಿಳಿವು,

ಮರುವ ನಾನೆಂದರಿತೆ; ಇಳಿಯಿತು ಸೊಕ್ಕಿನ ಜ್ವರವು.

(ಭರ್ತೃಹರಿಯ ಸುಭಾಷಿತವೊಂದರ ಭಾವಾನುವಾದ)

ಇದರ ಮೂಲ ಹೀಗಿದೆ:

ಯದಾ ಕಿಂಚಿದ್  ಜ್ಞೋಹಂ ಗಜ ಇವ ಮದಾಂಧಃ ಸಮಭವಮ್

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಚಾಣಕ್ಯ ನೀತಿ - ಮತ್ತೊಮ್ಮೆ

ಕೆಲವು ದಿನಗಳ ಹಿಂದೆ ಚಾಣಕ್ಯ ಪಂಡಿತನ ಕೆಲವು ಸುಭಾಷಿತಗಳನ್ನು ರೂಪಾಂತರಿಸಿ ಬರೆದಿದ್ದೆ.

ಇವತ್ತು ಅದೇ ನೀತಿದರ್ಪಣದ ಇನ್ನು ಕೆಲವು ಸುಭಾಷಿತಗಳು ಇಲ್ಲಿವೆ ನೋಡಿ. ಮೂಲವನ್ನೂ (ಕನ್ನಡ ಲಿಪಿಯಲ್ಲೇ) ಬರೆದಿದ್ದೇನೆ:

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.1 (8 votes)
To prevent automated spam submissions leave this field empty.

ಚಾಣಕ್ಯ ನೀತಿ

ಚಾಣಕ್ಯ ಪಂಡಿತನ ಚಾಣಕ್ಯ ನೀತಿ ದರ್ಪಣ ಎಂಬ ಪುಸ್ತಕದಿಂದ ನನಗೆ ಹಿಡಿಸಿದ ನಾಲ್ಕು ಸುಭಾಷಿತಗಳನ್ನು ಇಲ್ಲಿ ಕನ್ನಡಕ್ಕೆ ತಂದಿದ್ದೇನೆ.

ಈ ಚಾಣಕ್ಯ ಪಂಡಿತ ಅರ್ಥಶಾಸ್ತ್ರವನ್ನು ಬರೆದ ಕೌಟಿಲ್ಯನೇ (ಚಂದ್ರಗುಪ್ತನ ಗುರು, ಮಾರ್ಗದರ್ಶಿ), ಅಥವಾ ಬೇರೊಬ್ಬನೇ ಎಂಬುದು ನನಗೆ ತಿಳಿದಿಲ್ಲ.

ಮೂಲವನ್ನೂ ಇಲ್ಲೇ ಬರೆದಿದ್ದೇನೆ.

ಶೈಲೇ ಶೈಲೇ ಚ ಮಾಣಿಕ್ಯಂ ಮೌಕ್ತಿಕಂ* ನ ಗಜೇ ಗಜೇ
ಸಾಧವೋ ನಹಿ ಸರ್ವತ್ರ ಚಂದನಂ ನ ವನೇ ವನೇ

ಗಿರಿಬೆಟ್ಟಗಳಲೆಲ್ಲ ದೊರೆವುದೆ ಮಾಣಿಕ್ಯ?
ಎಲ್ಲ ಚಿಪ್ಪಿನಲು ಸಿಗುವುದೆ ಮುತ್ತುಗಳು ?
ಕಾಡುಕಾಡಲ್ಲೆಲ್ಲ ಇವೆಯೆ ಗಂಧದ ಮರವು?
ಒಳ್ಳೆಯ ಜನರೆಲ್ಲೆಲ್ಲೂ ಹೇಗೆ ದೊರೆತಾರು?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.