ದೀಪಾವಳಿ

ಸಡಗರದ ದೀಪಾವಳಿ

ಪದ್ಯಪಾನದಲ್ಲಿ ಈ ಬಾರಿ ದೀಪಾವಳಿಯ ಸಂದರ್ಭಕ್ಕೆ ಹೊಂದುವ ಕೆಲವು ಅಲಂಕಾರಯುಕ್ತವಾದ ಪದ್ಯಗಳನ್ನು ಬರೆಯಲು ಕೇಳಿದ್ದರು. ಆ ಸಂದರ್ಭಕ್ಕೆಂದು ನಾನು ಬರೆದ ಭಾಮಿನೀ ಷಟ್ಪದಿಯಲ್ಲಿರುವ ಐದು ಪದ್ಯಗಳು ಇಲ್ಲಿವೆ. ಎಲ್ಲರಿಗೂ ದೀಪಾವಳಿ ಹಬ್ಬದ ಹಾರೈಕೆಗಳು!

ನೀರು ತುಂಬುವ ಹಬ್ಬ ಬಂದಿರೆ
ನೀರೆಯರು ಮನೆತುಂಬ ನಾನಾ-
ಕಾರದಲಿ ಚಿತ್ತಾರ ರಂಗೋಲಿಗಳ ಹಾಕುತಲಿ |
ಮಾರುಮಾರಿಗು ಬಣ್ಣಬಣ್ಣದ
ಹಾರಗಳ ಕಟ್ಟುತ್ತ ಸೊಗಸಿನ
ತೋರಣದ ಚಿಗುರಲ್ಲಿ ಕೋರುತಲೆಲ್ಲರೊಳಿತನ್ನು ||

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು

ಎಲ್ಲರಿಗೂ ದೀಪಾವಳಿ ಹಬ್ಬದ (ಮುಂಗಡ) ಹಾರ್ದಿಕ ಶುಭಾಶಯಗಳು. ಈ ದೀಪಾವಳಿಯು ನಿಮ್ಮ ಮನೆ - ಮನಗಳನ್ನು ಬೆಳಗಿಸಲಿ ಎಂದು ಹಾರೈಸುತ್ತೇನೆ.

ದೀಪಾವಳಿ ಎಂದರೆ ದೀಪಗಳ ಹಬ್ಬ. ಅದು ದೀಪಗಳ ಹಬ್ಬ ಮಾತ್ರವೇ ಆಗಲಿ, ಬದಲಿಗೆ ಶಬ್ಧ ಹಾಗೂ ಹೊಗೆಯ ಹಬ್ಬ ಆಗುವುದು ಬೇಡ. ಆದ್ದರಿಂದ ದಯವಿಟ್ಟು ಪಟಾಕಿಗಳನ್ನು ಸುಡಬೇಡಿ. ಇದರಿಂದ ಪರಿಸರ ಮಾಲಿನ್ಯವಾಗುತ್ತದೆ ಹಾಗೂ ಎಲ್ಲರ ಆರೋಗ್ಯಕ್ಕೂ ತೊಂದರೆಯಾಗುತ್ತದೆ. ಆದ್ದರಿಂದ ಈ ಬಾರಿ ಪಟಾಕಿ ರಹಿತ ದೀಪಾವಳಿ ಆಚರಿಸಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅಮಾವಾಸ್ಸೆ ಮತ್ತು ದೀಪಾವಳಿ ಹಬ್ಬ

ಅಂದು ದೀಪಾವಳಿ ಹಬ್ಬ ಮತ್ತು ಅಮಾವಾಸ್ಸೆ , ಹೊಸದಾಗಿ ಮಾಡುವೆ ಆಗಿದ್ದ ನನ್ನ ಗೆಳೆಯ ಮತ್ತು ಅವನ ಹೆಂಡತಿ ಅತ್ತೆ ಮನೆಗೆ ದೀಪಾವಳಿ ಹಬ್ಬಕ್ಕೆ ಅಂತ ತನ್ನ ಹೊರಟರು. ಅವರ ಅತ್ತೆ ಮನೆ ಅವರ ಮನೆಯಿಂದ ಸುಮಾರು 45 ಕಿ.ಮೀಟರ್ ಹೋಗಬೇಕು. ಹೊಸದಾಗಿ ಮದುವೆಯಾಗಿದ್ದರಿಂದ ಹಣ್ಣು ಹಂಪಲು ಹೊಸ ಬಟ್ಟೆಯನ್ನು ಮತ್ತು ಪಟಾಕಿಯನ್ನು ಸಹ ಕರೀದಿಸಿ ಹೋದರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ದೀವಳಿಗೆಯ ದಿನಕ್ಕೊಂದು ನೆನಪು

ದೀಪಾವಳಿಯ ನರಕ ಚತುರ್ದಶಿಯ ದಿನವೇ ವಾಗ್ಗೇಯಕಾರ ಮುತ್ತುಸ್ವಾಮಿ ದೀಕ್ಷಿತರ ಪುಣ್ಯದಿನ.

ಅವರ ನೆನಪಿನಲ್ಲಿ ನಾನು ಬರೆದ ಒಂದು ಬರಹ ಇಂದು ದಟ್ಸ್ ಕನ್ನಡ ದಲ್ಲಿ ಪ್ರಕಟವಾಗಿದೆ - ಓದಲು ಕೆಳಗಿನ ಕೊಂಡಿಯನ್ನು ಚಿಟಕಿಸಿ:

ಮೀನ ಲೋಚನಿ ಪಾಶ ಮೋಚನಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ದೀಪಾವಳಿಗೊಂದು ಪುಟಾಣಿಯ ಚುಟುಕ!

ಪಟಾಕಿ ಡಂ ಡಂ
ಸುರ್-ಸುರ್-ಬತ್ತಿ ಸುರ್ ಸುರ್
ಭೂಚಕ್ರ ಬುರ್ ಬುರ್...

ಕಳೆದ ದೀಪಾವಳಿ ಸಮಯದಲ್ಲಿ, ಮೇಲಿನ ಮೂರು ಸಾಲುಗಳನ್ನು ನಮ್ಮ ಪುಟಾಣಿ, ಪ್ರದ್ಯುಮ್ನ ಕಟ್ಟಿದಾಗ ಎರಡೂವರೆ ವರ್ಷ...!

ಸಂಪದಿಗರಿಗೆಲ್ಲ ನಮ್ಮ ಪುಟಾಣಿಯಿಂದ ದೀಪಾವಳಿ ಹಬ್ಬದ ಹಾರೈಕೆಗಳು..."ಹುಷಾರಾಗಿ ಪಟಾಕಿ ಹೊಡಿರೀ.....ಆಯ್ತಾ?!" :)

--ಶ್ರೀ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಶುಭಾಶಯಗಳು

ಎಲ್ಲಾ ಸಂಪದ ಬಳಗದವರಿಗೆ ಹಾಗು ಕುಟುಂಬದವರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

*****ದೀಪಾವಳಿಯ ಬೆಳಕು ಸದಾ ನಿಮ್ಮ ಜೀವನದಲ್ಲಿ ಬೆಳಗುತ್ತಿರಲಿ *****

ನಿಮಗಾಗಿ ಪ್ರೀತಿಯಿಂದ ಇಲ್ಲಿ ಕ್ಲಿಕ್ಕಿಸಿ: http://cards.123greetings.com/cgi-bin/cards/showcard.pl?cardnum=ZRH81025...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

ದೀಪ

ಸಂಪದ ಬಳಗದವರಿಗೆ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು... 

ಈ ಬೆಳಕಿನ ಹಬ್ಬ ನಿಮ್ಮ ಬಾಳಲ್ಲಿ ಸುಖ, ಶಾಂತಿ, ನೆಮ್ಮದಿಯನ್ನು ತರಲಿ ಎಂದು ಹಾರೈಸುವೆ...

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಮ್ಮ ಮನೆಯ ದೀಪಾವಳಿ

ಮತ್ತೊಂದು ದೀಪಾವಳಿ ಸಂದಿದೆ. ನಾವು ವರುಷದಂತೆ ಸರಳ ಸುಂದರವಾಗಿ ಆಚರಿಸಿಕೊಂಡೆವು. ನಮ್ಮಲ್ಲಿ ದೀಪಾವಳಿಯೆಂದರೆ ತುಳಸೀ ಪೂಜೆ, ಗೋಪೂಜೆ, ಊಟ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ದೀಪಾವಳಿ