ಭಾರತಕ್ಕೆ ಮತ್ತೊಂದು ಪದಕ: ಕುಸ್ತಿಯಲ್ಲಿ ಕಂಚು

To prevent automated spam submissions leave this field empty.

ಭಾರತದ ಕುಮಾರ್ ಸುಶಿಲ್ ೬೬ಕೇಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಕಂಚು ಗೆದ್ದಿದ್ದಾರೆ. ಅವರು ಕಜ಼ಕಿಸ್ತಾನದ ಲಿಯೋನಿಡ್ ಸ್ಪಿರಿಡೊನೊವ್ ಅವರನ್ನು ೨-೧, ೦-೧, ೧- ೦ ಯಿಂದ ಸೋಲಿಸಿ ಕಂಚನ್ನು ತಮ್ಮದಾಗಿಸಿಕೊಂಡರು. ತುರ್ಕಿಯ ರಮಜ಼ನ್ ಸಹಿನ್ (Ramazan Sahin) ಚಿನ್ನ ಗೆದ್ದರೆ ಸ್ಟಾಡ್ನಿಕ್ ಆಂಡ್ರಿಯ್ (STADNIK Andriy) ಬೆಳ್ಳಿಯ ಪದಕ ಗೆದ್ದರು.
ಜಾರ್ಜಿಯಾದ ತುಶಿಶ್ವಿಲಿ ಒಟಾರ್ (TUSHISHVILI Otar) ಕೂಡ ಇದೇ ಸ್ಪರ್ಧೆಯಲ್ಲಿ ಕಂಚಿನ ಪದಕ ಗಳಿಸಿದರು.
ಅಥೆನ್ಸ್ ನ ಒಲಿಂಪಿಕ್ಸ್ ನಲ್ಲಿ ಕುಮಾರ್ ೧೪ನೇ ಸ್ಥಾನ ಹಾಗೂ ಸ್ಪಿರಿಡೊನೋವ್ ೪ನೇ ಸ್ಥಾನ ಪಡೆದಿದ್ದರು.

ಅವರ ಹಿಂದಿನ ಸಾಧನೆಗಳು ಹೀಗಿವೆ.
ಸ್ಥಾನ ಸ್ಪರ್ಧೆ ವರ್ಷ ಸ್ಥಳ
ಒಲಿಂಪಿಕ್ ಕ್ರೀಡೆಗಳು
14 Freestyle - 60kg 2004 Athens, GRE
ವಿಶ್ವ ಸ್ಪರ್ಧೆಗಳು
7 Freestyle - 66kg 2007 Baku, AZE
ಏಷಿಯಾ ಕ್ರೀಡೆಗಳು
2 Freestyle - 66kg 2007 Bishkek, KGZ
8 Freestyle - 66kg 2005 Wuhan, CHN
ಕುಮಾರ್ ಸುಶಿಲ್ ಅವರಿಗೆ ಎಲ್ಲ ಭಾರತೀಯರ ಅಭಿನಂದನೆಗಳು.

ಲೇಖನ ವರ್ಗ (Category):