ನಾಯಿಂದನ ಇಕ್ಕಟ್ಟು

To prevent automated spam submissions leave this field empty.

ಒಂದೂರಿನಲ್ಲಿ ಒಬ್ಬ ನಾಯಿಂದ ಇದ್ದ, ಆ ಊರಿಗೆಲ್ಲ ಒಬ್ಬನೆ ನಾಯಿಂದ. ಯಾರಿಗೆ ತಲೆ ಗಡ್ಡಗಳಾಗಬೇಕಾದರೂ ಇವನ ಅಂಗಡಿಗೆ ಬರಬೇಕು, ಇಲ್ಲ ಅವರಾಗಿಯೆ ಮಾಡಿಕೊಳ್ಳಬೇಕು. ನಮ್ಮ ಈ ನಾಯಿಂದ ಒಂದು ವ್ರತ ತೊಟ್ಟಿದ್ದ: ತಾನು ಕ್ಷೌರ ಮಾಡಬೇಕಾದರೆ ಅದು ತಾವೇ ಮಾಡಿಕೊಳ್ಳದವರಿಗೆ ಮಾತ್ರ; ತಾವೇ ಕ್ಷೌರ ಮಾಡಿಕೊಂಡವರಿಗೆ ಮಾಡಲಾರ.

ಈಗ ಹೇಳಿ: ಈ ನಾಯಿಂದನಿಗೆ ಕ್ಷೌರ ಮಾಡುವವರಾರು?

[ ನಿಮ್ಮಲ್ಲನೇಕರಿಗೆ ಇದು ತಿಳಿದಿರ ಬಹುದು; ಹೆಸರುವಾಸಿ ಗಣಿತಜ್ಞ ಬೆರ್ಟ್ರಂಡ್ ರಸೆಲ್ ಹಾಕಿದ ಪ್ರಶ್ನೆ ಇದು ]

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

[quote=gvmt] [ ನಿಮ್ಮಲ್ಲನೇಕರಿಗೆ ಇದು ತಿಳಿದಿರ ಬಹುದು; ಹೆಸರುವಾಸಿ ಗಣಿತಜ್ಞ ಬೆರ್ಟ್ರಂಡ್ ರಸೆಲ್ ಹಾಕಿದ ಪ್ರಶ್ನೆ ಇದು ] [/quote]

ಇದನ್ನು ಮತ್ತು ಇಂಥದೇ ಇನ್ನೂ ಕೆಲ ವಿರೋಧಾಭಾಸಗಳನ್ನು ವಿಚಿತ್ರಾನ್ನದ 'ರಾಧಾಮಾಧವ ವಿರೋಧಾಭಾಸ' ಎಂಬ ಶೀರ್ಷಿಕೆಯುಳ್ಳ ಸಂಚಿಕೆಯಲ್ಲಿ ನಾನು ಬಳಸಿಕೊಂಡಿದ್ದೆ.

- ಶ್ರೀವತ್ಸ ಜೋಶಿ

ಅವನೊಬ್ಬ ದೊಡ್ಡ ಗಡ್ಡಧಾರಿಯಾಗಿಯೂ, ಉತ್ತಮ ಸಾಹಿತಿಯಾಗಿಯೂ ಇದ್ದಿರಬೇಕು. ಅಲ್ವೇ?

ಏನೇ ಆಗಲಿ ಇಂತಹ ಚಿಂತನೆಗಳೆಲ್ಲಾ ಬರುವುದು ದೊಡ್ಡ ಮನುಷ್ಯರುಗಳಿಗೆ ಮಾತ್ರ (ತಮಾಷೆಗಾಗಿ).

ವಂದನೆಗಳೊಂದಿಗೆ
---
ತವಿಶ್ರೀನಿವಾಸ
[:http://asraya.net]