ದಾನದ ಹಬ್ಬ ಈದ್ -ಉಲ್ - ಫಿತರ್

To prevent automated spam submissions leave this field empty.

ಒಂದು ತಿಂಗಳ ಕಠಿಣ ವೃತಾಚರಣೆಯ ಬಳಿಕ ಈದ್ -ಉಲ್ - ಫಿತರ್ ಬಂದಿದೆ. ರಂಜಾನ್ ತಿಂಗಳ ಹಗಲಿನಲ್ಲಿ ತೊಟ್ಟು ನೀರೂ ಕುಡಿಯದೆ, ಕಠಿಣ ವೃತದ ಮೂಲಕ ಹಸಿವಿನ ಕಠಿಣತೆಯನ್ನು ಅರಿತು, ವಿಶ್ವ ಮುಸ್ಲಿಮರೆಲ್ಲರು ಸಮಾನರೆನಿಸಿದರು. ಅಲ್ಲಿ ಬಡವ - ಶ್ರೀಮಂತ ರೆನ್ನುವ ಭೇಧವಿಲ್ಲದೆ ಎಲ್ಲರೂ ವೃತಾಚರಣೆಯಲ್ಲಿ ತೊಡಗಿದರು. ದೇವಲೀನರಾಗಿ ಅಲ್ಲಾಹನನ್ನು ಪ್ರಾರ್ತಿಸುತ್ತಾ ಎಲ್ಲ ರೀತಿಯ ತಪ್ಪುಗಳಿಂದ ದೂರವಿದ್ದ ಒಂದು ತಿಂಗಳು ಕಳೆದು ಈದ್ -ಉಲ್ - ಫಿತರ್ ಬಂದಿದೆ. ಇದು ದಾನದ ಹಬ್ಬ. ಒಂದು ತಿಂಗಳ ಹಸಿವೆ ಯ ಪಾಠದಿಂದ ಬಡತನ -ಹಸಿವು ಏನೆಂಬುದು ಅರಿತ ಮುಸ್ಲಿಮನಿಗೆ ಈಗ ಬಡವನಿಗೆ -ಹಸಿದವನಿಗೆ ದಾನದ ಮೂಲಕ ಸಹಾಯಿಯಾಗುವುದು ಕರ್ತವ್ಯ. ಇಸ್ಲಾಂ ಎಂದೂ ಸಂಪತ್ತಿನ ಕೇಂದ್ರೀಕರಣ ವನ್ನು ವಿರೋಧಿಸುತ್ತದೆ. ಯಾವತ್ತೂ ಶೀಮಂತನನ್ನು ದಾನ ನೀಡುವುದಕ್ಕೆ ಪ್ರೇರೇಪಿಸುತ್ತದೆ. ಇಸ್ಲಾಮಿನ ಐದು ಪ್ರಧಾನ ಕರ್ಮಗಳಲ್ಲಿ ಒಂದಾದ 'ಝಕಾತ್' ಇದಕ್ಕೆ ಪುಷ್ಟಿ ನೀಡುತ್ತದೆ. ಅದಲ್ಲದೇ ಹಲವಾರು ಪುಣ್ಯ ಕಾರ್ಯಗಳ ಸಂದರ್ಭಗಳಲ್ಲೂ ದಾನ ನೀಡುವುದು ಕಡ್ಡಾಯಗೊಳಿಸುತ್ತದೆ. ಅಂತಹ ಒಂದು ಹಬ್ಬವಾಗಿದೆ ಈದ್ -ಉಲ್ - ಫಿತರ್. ಇಸ್ಲಾಂ ಆಚರಿಸುವ ಎರಡೂ ಹಬ್ಬಗಳೂ ದಾನವನ್ನು ಪ್ರೋತ್ಸಾಹಿಸುತ್ತದೆ. ಅದರಲ್ಲೂ ಈಗ ಬಂದಿರುವ ಈದ್ -ಉಲ್ - ಫಿತರ್ ಸಂದರ್ಭೋಚಿತವಾಗಿ 'ದಾನ್ಯ' ದಾನ ಮಾಡುವುದನ್ನು ಹೇಳುತ್ತದೆ. ಇದು ಪ್ರತೀ ಮುಸ್ಲಿಮನ ಕಡ್ಡಾಯ ಕರ್ಮವಾಗಿದೆ. ಈದ್ ದಿನದಂದು ಯಾರೂ ಹಸಿದಿರಬಾರದು ಎಂಬುದು ಈ ದಾನದಿಂದ ಉಧ್ದೇಶಿಸಲಾಗಿದೆ. ಒಬ್ಬ ಮುಸ್ಲಿಮ ಆತನ ಈದ್ ದಿನದ ಹಗಲಿನ ಮತ್ತು ಆರಾತ್ರಿಯ ಖರ್ಚುಗೆ ಬೇಕಾದ ಸ್ವತ್ತು ಕಳೆದು ಬೇರೇನಾದರೂ ಉಳಿದಲ್ಲಿ, ಖಡ್ಡಾಯ ವಾಗಿ ದಾನ ನೀಡ ತಕ್ಕದ್ದು. ಅದು ಆ ಊರಿನ ಆಹಾರ ದಾನ್ಯ ವಾಗಿರಬೇಕು ಮತ್ತು ಅದಕ್ಕಾಗಿ ಒಂದು ಅಳತೆಯನ್ನು ನಿಗದಿಪಡಿಸಿದೆ(ಪ್ರತೀ ವ್ಯಕ್ತಿಯ ಮೇಲೂ ಸುಮಾರು 3 ಕೆಜಿ - ಇದು ಮಝಹಬ್ ಗಳಿಗೆ ಅನುಸರಿಸಿ ಬದಲಾಗಬಹುದು). ಯಾರೆಲ್ಲ ಈ ದಾನ ನೀಡಲು ಸಮರ್ಥರಲ್ಲವೋ ಅವರೆಲ್ಲ ದಾನಪಡಯಲು ಅರ್ಹರು. ಆದರೆ ಈ ದಾನದ ಲೆಕ್ಕಾಚಾರದಲ್ಲಿ ಒಬ್ಬಾತನ ಮನೆಯಲ್ಲಿರುವ ಪಾತ್ರೆ ಮೊದಲಾದ ವಸ್ತುಗಳೂ ಒಳಗೊಳ್ಳುತ್ತದೆ. ಅಂದರೆ ಪಾತ್ರೆಗಳನ್ನು ಮಾರಿಯಾದರೂ ದಾನ ನಿಡಬೇಕು!!!. ಮಾತ್ರವಲ್ಲ ಒಂದು ಮನೆಯಲ್ಲಿರುವ ಪ್ರತಿವ್ಯಕ್ತಿಯ ಮೇಲೂ ಈ ದಾನ ಖಡ್ಡಾಯ ವಾಗಿದೆ.

ಹಾಗಿದ್ದರೆ ಯೋಚಿಸಿ ನೋಡಿ ವಿಶ್ವದ ಎಲ್ಲ ಮುಸ್ಲಿಮ ಈ ದಾನವನ್ನು ನೀಡಿದರೆ ಕನಿಷ್ಟ ಒಂದು ವಾರವಾದರೂ ಹಸಿವಿಲ್ಲದ ವಾರ ವಾಗಿರಬಹುದು!!. "ಜಿಹಾದ್-ಜಿಹಾದ್" ಅನ್ನುವ ನಾಮಧಾರಿ ಮುಸ್ಲಿಮ "ಝಕಾತ್ - ಝಕಾತ್" (ದಾನ) ಅಂದರೆ ಇಂದು ಹಸಿವಿನಿಂದ ಸಾಯುವವರ ಸಂಖ್ಯೆ ಬಹಳ ಕಡಿಮೆ ಇರುತ್ತಿತ್ತು.

ಸಾಹೋದರ್ಯ ಭಾವ ತುಂಬಿಸುವ ಈದ್ ನ ಈ ದಿನ ಎಲ್ಲರೂ ದಾನ ಕರ್ಮಗಳಿಂದ ಸುಂದರವಾಗಿಸಲು, ಸೃಷ್ಟಿಕರ್ತ ನಮನ್ನು ಕರುಣಿಸಲೀ (ಆಮೀನ್) ಎಂದು ಪ್ರಾರ್ತಿಸುತ್ತೇನೆ. ಎಲ್ಲರಿಗೂ ಈದ್ -ಉಲ್ - ಫಿತರ್ (ದಾನ್ಯ ದಾನದ ಹಬ್ಬ) ನ ಶುಭಾಶಯಗಳು.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಹಬ್ಬದ ಹಾರೈಕೆಗಳು

ನನ್ನ ಒಂದು ಸಂದೇಹ ಪರಿಹರಿಸಿ...
ನೀರು ಕುಡಿಯದಿರುವುದು ಸರಿ...ಆದರೆ ಎಂಜಲು?
ಈ ತಿಂಗಳಲ್ಲಿ ಹಲವಾರು ಮುಸ್ಲಿಂ ಭಾಂದವರು ಎಲ್ಲಂದರಲ್ಲಿ ಉಗುಳುತ್ತಾರೆ - ಇದೂ ಪದ್ದತಿಯಲ್ಲಿದೆಯೇ?
ತಪ್ಪನಿಸಿಕೆಗಳಿದ್ದರೆ ತಿದ್ದಿರಿ...

ನನ್ನಿ!

--ಶ್ರೀ

ಹೌದುರೀ...ಎಲ್ಲಂದರಲ್ಲಿ ಹೇಸಿಗೆ ಮಾಡೋದು ಅಸಹ್ಯ... :(
ಚಿಕ್ಕ ಮಕ್ಕಳು ದೊಡ್ಡವರು ಉಗಿಯುವುದನ್ನ ನೋಡಿ ಕಲೀತಾರೆ...
ಮುಕ್ಕಾಲು ಮಂದಿ ಇದು ತಪ್ಪು ಅಂತ ಕೂಡ ಹೇಳಲ್ಲ ಮಕ್ಕಳಿಗೆ...
ಇವೆಲ್ಲ ಯಾವಾಗ ಸುಧಾರಿಸುತ್ತೋ ನಮ್ ದೇಶದಲ್ಲಿ...

ಎಂಜಲು ನುಂಗಬಹುದು ...... ಆದರೆ "ಕಫ" ನುಂಗಕೂಡದು- ಅದು ಗಟ್ಟಿಯಾಗಿರುವುದರಿಂದ ಮತ್ತು ಅದಕ್ಕೆ ರುಚಿ ಇರುವುದರಿಂದ- ಹಾಗಂತ ಕಂಡಲ್ಲಿ ಉಗುಳುವವರು ಮಾಡುವುದು ಶುದ್ದ ಹೆಡ್ಡತನ....

ದಾನ್ಯ ದಾನದ ಹಬ್ಬ - ಈದ್ -ಉಲ್ - ಫಿತರ್ ಆಚರಿಸುವ ರಷೀದ್ ಹಾಗೂ ಎಲ್ಲರಿಗೂ ಶುಭಾಷಯಗಳು!

ರಷೀದ್ ರವರೆ, ಪವಿತ್ರ ಕುರಾನ್ ಕನ್ನಡದಲ್ಲಿ ಸಿಗುತ್ತದೆಯೇ? ನಾನು ಬೇರೆ ಭಾಷೆಗಳಲ್ಲಿ ನೋಡಿದ್ದೇನೆ, ಆದರೆ ಕನ್ನಡದಲ್ಲಿ ಇಸ್ಲಾ೦ ಧರ್ಮದಬಗ್ಗೆ ತಿಳಿದುಕೊಳ್ಳಬೇಕೆ೦ದು ನನ್ನ ಬಹಳ ದಿನದ ಹ೦ಬಲ.

ಉ೦ಟು ! ಆ ಅನುವಾದ ಮಾಡಿದವರು ಒಮ್ಮೆ ಗೋಖಲೆ ಸ೦ಸ್ಥೆಗೆ ಭಗವದ್ಗೀತೆ ಮೇಲೆ
ಭಾಷಣವನ್ನು ಕೊಡಲು ಬ೦ದಿದ್ದರು. ನ೦ಗೆ ಮರೆತೋಗಿದೆ.. ಅ೦ಕಿತದಲ್ಲಿ ಪ್ರಯತ್ನಿಸಿ..

ತಡ ಪ್ರತಿಕ್ರಿಯೆಗೆ ವಿಷಾದ ಈದ್ ರಜೆಯಲ್ಲಿದ್ದೆ...ಖುರ್ಆನ್ (ಕುರಾನ್) ಕನ್ನಡ ಅನುವಾದ ಲಬ್ಯವಿದೆ ಇಸ್ಲಾಮಿಕ್ ಪುಸ್ತಕದ ಅಂಗಡಿಗಳಲ್ಲಿ ಕೇಳಿಪಡೆಯಬಹುದು(ಅನುವಾದಿತ ಕೃತಿ ಅದರ ಮೂಲ ರೂಪದಲ್ಲಿರಬೇಕೆಂದೇನಿಲ್ಲ). ಇಸ್ಲಾಂ ಬಗ್ಗೆ ತಿಳಿಯುವ ಉದ್ದೇಶ ನಿಮ್ಮದಾಗಿದ್ದಲ್ಲಿ ಬೇರೆ ಪುಸ್ತಕಗಳನ್ನು ನೋಡುವುದು ಸೂಕ್ತ..... ಪುಸ್ತಕದ ಹೆಸರುಗಳೆಲ್ಲ ಗೊತ್ತಿಲ್ಲ.... ಕೇಳಿ ಪಡಕೊಳ್ಲಿ...... Google ಇದೆಯಲ್ಲ Search ಮಾಡಿ....ಇಸ್ಲಾಂ ಕುರಿತ ಹಲವು ತಾಣ ಗಳು ಲಬ್ಯವಿದೆ...

ಸಂಪದಿಗರ ಸಮುದಾಯದಲ್ಲಿನ ಹಿಂದೂಗಳು ತಮ್ಮೊಳಗೆ ಧರ್ಮಕಾರಣ ಕಚ್ಚಾಡಿಕೊಂಡರೂ, ಈ ಒಂದು ಪುಟದಲ್ಲಿ ಹಿಂದೂ ಮುಸ್ಲಿಂ ಭಾಂಧವ್ಯವನ್ನು ಬೆಳೆಸುವಂತಹ ಪ್ರತಿಕ್ರಿಯೆಗಳನ್ನು ಬರೆದದ್ದು ನೋಡಿ ಖುಷಿಯಾಯಿತು.