"ಬದುಕೋ ಆಸೇನೆ ಹೊರಟು ಹೋಗಿದೆ"

To prevent automated spam submissions leave this field empty.

"ಬದುಕೋ ಆಸೇನೆ ಹೊರಟು ಹೋಗಿದೆ"

ಹಾಗಂತ ಆ ಹುಡುಗ ನನ್ನ ಮುಂದೆ ಕಣ್ಣೀರಿಡುತ್ತಿದ್ದರೆ ನನಗೆ ನನ್ನ ಸಾಯಬೇಕೆನಿಸಿದ ಕ್ಷಣದ ಹಳೆಯ ನೆನಪು.

ಆತ ನಮ್ಮ ವಿದ್ಯಾರ್ಥಿ ನಮ್ಮಲ್ಲ್ಲಿ ಬಿಸಿಎ ಮಾಡುತ್ತಿದ್ದಾನೆ ಕೊನೆಯ ವರ್ಷದಲ್ಲಿದ್ದಾನೆ.

ಹುಡುಗ ಅಂದರೆ ಆತ ತೀರ ಚಿಕ್ಕವನೇನಲ್ಲ . (ನಮಗೆ ನಮ್ಮ ವಿದ್ಯಾರ್ಥಿಗಳೆಲ್ಲಾ ಎಷ್ಟೆ ವರ್ಷದವರಾದರೂ ಹುಡುಗ ಮತ್ತು ಹುಡುಗಿಯರೇ)

ಸುಮಾರು ೨೬-೨೭ ವರ್ಷದವನಿರಬೇಕು ಮಹದೇವ್ ಅಂತ ಅವನ ಹೆಸರು.

ಫಾರ್ಚೂನ್ ಇನ್ಫೋಟೆಕ್ ಎಂಬ ಮಲ್ಟಿ ಮಿಲ್ಲೇನಿಯರ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ್ದ .

ಮೂರು ಸಾವಿರ ತೆಗೆದುಕೊಳ್ಳುತ್ತಿದ್ದವನ ಕೈಗೆ ಏಕಾ ಏಕಿ ಆ ಕಂಪೆನಿ ೮ ಸಾವಿರ ಸಂಬಳ ಏರಿಸಿತು . ಸುಮಾರು ಸವಲತ್ತು ಕೊಟ್ಟಿತು

ಆತನಿಗೊಬ್ಬನಿಗೆ ಅಲ್ಲ ಆ ಕಂಪೆನಿಯಲ್ಲಿ ಕೆಲಸಗಾರರಿಗೆಲ್ಲಾ ಹೀಗೆ ಒಳ್ಳೆಯ ಸಂಬಳ . ಎಲ್ಲವೂ ಇತ್ತು

ಆತ ಹೋದವರ್ಷ ಮನ ಮೆಚ್ಚಿದವಳೊಡನೆ ಮದುವೆಯೂ ಆದ (ಮನೆಯವರ ವಿರೋಧದೊಂದಿಗೆ).

 ಹೋದ ವಾರ ತಾನೆ ಒಂದು ಹೆಣ್ನು ಮಗುವಿಗೆ ತಂದೆಯೂ ಆದ.

ಇದ್ದಕಿದ್ದಂತೆ ಕಂಪೆನಿ ಬಾಂಬ್ ಸಿಡಿಸಿತು ಕಂಪೆನಿಯ ಕೆಲಸಗಾರರನ್ನೆಲ್ಲಾ ಏಕಾ ಏಕಿ ತೆಗೆದು ಹಾಕಿತ್ತು ಅದೂ ಯಾವದೇ ಪರಿಹಾರವನ್ನೂ ಕೊಡದೇ(ಪರಿಹಾರದ ಬಗ್ಗೆ ನನಗೆ ಹೆಚ್ಚು ಗೊತ್ತಿಲ್ಲ).

ಮಹದೇವ ಈಗ ಗಲಿಬಿಲಿ ಯಾಗಿದ್ದಾನೆ

"ಮೇಡಮ್ ನಂಗೆ ಯಾಕೆ ಹೀಗಾಯ್ತು . ಪಿಯುಸಿ ಮಾಡಿದವನನ್ನ ಒಳ್ಳೇ ಕೆಲಸ ಕೊಟ್ಟು ಸಂಬಳ ಕೊಟ್ಟು ಮೇಲಕ್ಕೆ ಏರಿಸಿದ್ರು ಈಗ ನೋಡಿದರೆ ಇದ್ದಕಿದ್ದಂತೆ ಕೆಲಸದಿಂದ ತೆಗೆದು ಹಾಕಿದ್ರು ಈಗ ನಾನೇನು ಮಾಡಲಿ ಮೇಡಮ್.

ಕೋರ್ಸ್ ಕಂಪ್ಲೀಟ್ ಮಾಡಲಾ ಇಲ್ಲ ಬಿಡಲಾ ಇಲ್ಲ ಸಂಸಾರ ನೋಡಿಕೊಳ್ಳಲಾ ಮದುವೆಯಾಗಿದ್ದೇ ಇದನ್ನ ನಂಬಿಕೊಂಡು .

ಈಗ ಸಂಸಾರ ಹೇಗೆ ನಡೆಸಲಿ . ಕ್ರೆಡಿಟ್ ಕಾರ್ಡ್ ಕೊಟ್ಟಿದ್ದರು ಅದನ್ನು ಯೂಸ್ ಮಾಡಿಕೊಂಡು ಲೋನ್ ಬೇರೆ ತಗೊಂಡಿದೀನಿ . ಈಗ ಯಾವುದೇ ಕಂಪೆನಿಗೆ ಹೋದ್ರೂ ಡಾಟ ಎಂಟ್ರಿಗೆ ಮೂರು ಸಾವಿರಕ್ಕಿಂತ ಹೆಚ್ಚು ಕೊಡ್ತಿಲ್ಲ ಏನ್ಕಾಡಲಿ ಅಂತ ತಿಳಿತಿಲ್ಲ . ಬದುಕೋ ಆಸೇನೆ ಹೊರಟು ಹೋಗಿದೆ" ಹೇಗಾದ್ರೂ ಮಾಡಿ ಎಲ್ಲಾದ್ರೂ ಕೆಲಸ ಇದ್ರೆ ಕೊಡಿಸಿ ಮೇಡಮ್ ಇಲ್ಲ ಅಂದರೆ ನಂಗೆ ಇಲ್ಲಿ ಜೀವನ ನಡೆಸೋಕೆ ಆಗಲ್ಲ " ಆತ ತುಂಬಾ ಬೇಸರಿಸಿಕೊಂಡಿದ್ದ

ನಾನಾದರೂ ಏನೂ ಮಾಡುವಂತಿಲ್ಲ ನನಗೆ ಗೊತ್ತಿರುವೆಡೆಯಲ್ಲೆಲ್ಲ ಡಾಟ ಎಂಟ್ರಿಗೆ ನಾಕು ಸಾವಿರಕ್ಕೆ ಮೇಲೆ ಸಂಬಳ ಸಿಗುವುದಿಲ್ಲ

ಹಾಗೆ ಅವನನ್ನು ಸಮಾಧಾನ ಮಾಡಿ ಕೋರ್ಸಿನ ಫೀಸ್ ನಾನೆ ಭರಿಸಿ ಯೂನಿವರ್ಸಿಟಿಗೆ ಕಳಿಸುವುದಾಗಿ ಹೇಳಿ ಕೆಲಸ ಎಲ್ಲಾದರೂ ಇದ್ದರೆ ಹೇಳುವುದಾಗಿ ಭರವಸೆ ಕೊಟ್ಟು ಕಳಿಸಿದೆ.

ಆದರೆ ಇದು ಮಹದೇವನೊಬ್ಬನದೇ ಪ್ರಶ್ನೆಯಲ್ಲ .

ಈ ರೀತಿ ಇದ್ದಕಿದ್ದಂತೆ ಕಂಪೆನಿಗಳು ಮುಚ್ಚುವುದೋ ಇಲ್ಲ ಕೆಲಸಗಾರರನ್ನು ಮನೆಗೆ ಕಳಿಸುವುದೋ ಮಾಡಿದರೆ ಕೆಲಸಗಾರರ ಗತಿ ಏನು . ಇದಕ್ಕೆ ಯಾವುದೇ ಕಾನೂನು ಇಲ್ಲವೇ?

ಇದಕ್ಕೆ ಎಂದಿಗೆ ಕೊನೆ? ಎಂಟು ವರ್ಷದ ಹಿಂದಿನ ಪರಿಸ್ಟಿತಿ ಮತ್ತೆ ಬರುತ್ತಿದೆಯೇ . ಎಲ್ಲಕ್ಕೂ "ದೊಡ್ಡಣ್ಣ"ನನ್ನೇ ನೆಚ್ಚಿಕೊಂಡಿದ್ದರ ಫಲವೇ ಇದು? "ದೊಡ್ಡಣ್ಣ" ಬಿದ್ದರೆ ನಾವು ಏಕೆ ನರಳಬೇಕು? ನಮ್ಮ ಜೀವನ ಇನ್ನೊಬ್ಬರ ಮೇಲೇಕೆ ಆವಲಂಬಿಸಬೇಕು ?.

ಹೀಗೆ ಹುಟ್ಟಿಕೊಂಡ ಹಲವಾರು ಪ್ರಶ್ನೆಗಳಿಗೆ ಉತ್ತರ ನನಗೆ ಸಿಗದೆ ನೆನ್ನೆ ರಾತ್ರಿ ತಲೆ ಕೆಡಿಸಿಕೊಂಡಿದ್ದಷ್ಟೆ ಬಂತು .

ಅಂದ ಹಾಗೆ ನಿಮಗ್ಯಾರಿಗಾದರೂ ಯಾವುದಾದರೂ ಕೆಲಸ ಖಾಲಿ (ಬಿಪಿಒ ಕಂಪೆನಿಯಲ್ಲಿ ) ತಿಳಿಸಿ.  ಮಹದೇವ ಹಾಗು ಅವನ ಮಿತ್ರರಿಗೆ ನೆರವಾಗುವುದಕ್ಕೆ ಸಹಕರಿಸಿ.

 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ರೂಪ,
ಎಂತಹ ಒಳ್ಳೆಯ ಕೆಲಸದಲ್ಲಿದ್ದರೂ, ಆರು ತಿಂಗಳು ಸಂಬಳವಿಲ್ಲದೆ ಮನೆ ನಡೆಸುವಷ್ಟು ದುಡ್ಡನ್ನು ಬ್ಯಾಂಕಿನಲ್ಲಿ ಭದ್ರವಾಗಿಟ್ಟಿರಬೇಕು. ಇದನ್ನು ಈ ದೊಡ್ಡಣ್ಣನ ಮನೆಯಲ್ಲಿರುವ ನಾವೆಲ್ಲ ದೊಣ್ಣೆ ಪೆಟ್ಟು ಬಿದ್ದಾಗ ಕಲಿತುಕೊಂಡೆವು. ಈಗ ತಮ್ಮನ ಮನೆಯವರೂ ಕಲಿತುಕೊಳ್ಳಬೇಕಾಗುತ್ತಿದೆ ಅಷ್ಟೆ. ದುಡ್ಡಿದೆ ಅಂತ ಲಗಾಮಿಲ್ಲದೆ ಖರ್ಚು ಮಾಡಬಾರ್ದು. ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು, ಜೊತೆಗೆ, ಉದ್ದನೆಯ ಹಾಸಿಗೆ ಯಾರಾದರೂ ಹಾಸಿಕೊಟ್ಟರೂ, ನಾವು ನಮ್ಮ ಕಾಲಿದ್ದಷ್ಟೇ ಕಾಲು ಚಾಚಬೇಕು :-)
~ಕಲ್ಪನ

[quote] ಇದನ್ನು ಈ ದೊಡ್ಡಣ್ಣನ ಮನೆಯಲ್ಲಿರುವ ನಾವೆಲ್ಲ ದೊಣ್ಣೆ ಪೆಟ್ಟು ಬಿದ್ದಾಗ ಕಲಿತುಕೊಂಡೆವು. ಈಗ ತಮ್ಮನ ಮನೆಯವರೂ ಕಲಿತುಕೊಳ್ಳಬೇಕಾಗುತ್ತಿದೆ ಅಷ್ಟೆ. [/quote]

ಚೆನ್ನಾಗಿ ಹೇಳಿದಿರಿ ಕಲ್ಪನಾ ಅವರೆ!

[quote] ಇದಕ್ಕೆ ಯಾವುದೇ ಕಾನೂನು ಇಲ್ಲವೇ? [/quote]

ಇದಕ್ಕೆಲ್ಲ ಕಾನೂನು ಮಾಡಲಿಕ್ಕಾಗೋದಿಲ್ಲ. ಏಕಾಏಕಿ ಸಂಬಳ ಏರಿಕೆಯನ್ನು ಮಾಡುವಾಗ ಕಾನೂನನ್ನು ಯಾರೂ ಕೇಳಿರಲಿಲ್ಲ ಅಲ್ವೇ?

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

ಕಾನೂನು ಕೇಳುತ್ತಿರುವುದು ಕೆಲಸದಿಂದ ಒಮ್ಮೆಗೆ ತೆಗೆದು ಹಾಕಿದಾಗ
ಏಕಾಏಕಿ ಸಂಬಳ ಏರಿಕೆ ಮಾಡಿದ್ದು ಕಂಪೆನಿಯಯವರ ಹಿತಾಸಕ್ತಿಗಾಗಿ ನೌಕರರ ಹಿತಾಸಕ್ತಿಗಾಗಲ್ಲವಲ್ಲ ತಾನೆ?
ಸಾಲದೆಂದು ದೈಹಿಕ ಶ್ರಮವಿಲ್ಲದೆ ಐಶಾರಾಮವಾಗಿ ಬದುಕುವುದನ್ನು ಕಲಿಸುವುದು ಅವರೇ ಅಲ್ಲವೇ?
ಒಮ್ಮೆ ಕೆಲಸ ಕಳೆದುಕೊಂಡಿರುವವರ ಸ್ಠಾನದಲ್ಲಿ ನಿಂತು ನೋಡಿದರೆ ನಿಮಗೆ ಅರ್ಥವಾಗುತ್ತದೆ ಅದರ ನೋವು ನಿರಾಸೆ,

http://thereda-mana.blogspot.com/

ರೂಪ

ಇಲ್ಲಿ ಮಾತಾಡಿದ್ರೆ ಇಲ್ಲೇ ಮಾತಡ್ತಿರ್ತೀವಿ.... ಈ ನೋವ್ವು ಅವರಿಗ್ಗೊಬ್ಬರಿಗೆ ಸೀಮಿತವಲ್ಲ, ಆ ತರಹ ತಿಳ್ಕೊಬೇಕು ಅಂದ್ರೆ ಕೇವಲ ಸಂಪದದಲ್ಲಿ ಒಂದು ಲೇಖನ ಬರೆದು ಸಹಾಯ ಅಪೇಕ್ಷಿಸಿದರೆ ಅದು ಫಲ ಕೂಡ ನೀಡುವುದಿಲ್ಲ.. ಕನ್ನಡ/ಕನ್ನಡಿಗರಿಗೋಸ್ಕರ ಅಂತಾನೆ ತುಂಬಾ ಯಾಹೂ ಗುಂಪುಗಳಿವೆ ಅವಕ್ಕೆ ಸದಸ್ಯರಾದ್ರೆ ಸಹಾಯ ಮಾಡುವುದಕ್ಕೂ ಸಹಾಯ ಯಾಚಿಸುವುದಕ್ಕು ಸುಲಭ.. ಒಬ್ಬರ ಕಷ್ಟಕ್ಕೆ ಮತ್ತೊಬ್ಬರು ಸಹಾಯಕ್ಕೆ ಬರುತ್ತಾರೆ..