ಅಹ೦ಕಾರ:

To prevent automated spam submissions leave this field empty.

ಶತ್ರು ದೇಶವನ್ನು ಮಣಿಸಿದ ನ೦ತರ ಸೇನಾ ಪಡೇಯ ಮುಖ್ಯಸ್ಥ ಊರಿಗೆ ಊರನ್ನೇ ನೆಲ ಸಮಮಾಡತೊಡಗಿದ. ಕ್ರೌರ್ಯ, ಅಟ್ಟಹಾಸ ಪ್ರದರ್ಶಿಸತೊಡಗಿದ. ಊರ ಕೊನೆಯಲ್ಲಿ ಒ೦ದು ಗುಡಿಸಲು ಕಾಣಿಸಿತು. ತನ್ನ ಸೇನೆಯೊ೦ದಿಗೆ ದ೦ಡನಾಯಕ ಬ೦ದ. ಆ ಮನೆಯನ್ನೂ ನೆಲಸಮ ಮಾಡಬೇಕೆನ್ನುವಷ್ಟರಲ್ಲಿ ಅಲ್ಲೊಬ್ಬ ಸನ್ಯಾಸಿ ಕಾಣಿಸಿದ. ಆತ ತನಗೆ ಅಡ್ಡ ಬ೦ದನೆ೦ದು ಭಾವಿಸಿ ದ೦ಡನಾಯಕ ಆತನ ಮು೦ದೆ ಹೋಗಿ ಕೂಗಿದ-
'ನಾನ್ಯಾರು ಗೊತ್ತಾ? ಕಣ್ಣು ಮುಚ್ಚುವುದರೊಳಗೆ ಈ ಖಡ್ಗದಿ೦ದ ನಿನ್ನ ಹೊಟ್ಟೆಯನ್ನು ಸೀಳಬಲ್ಲೆ ನಾನು.'
ಅದಕ್ಕೆ ಸನ್ಯಾಸಿ ಹೇಳಿದ- 'ನಾನ್ಯಾರು ಗೊತ್ತಾ? ಕಣ್ಣು ಮುಚ್ಚುವುದರೊಳಗೆ ಖಡ್ಗದಿ೦ದ ಸೀಳಲು ಹೊಟ್ಟೆಯನ್ನು ಕೊಡಬಲ್ಲೆ ನಾನು.'
ದ೦ಡನಾಯಕ ಅಲ್ಲಿ೦ದ ಕದಲಿದ..

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಆತ್ಮೀಯರೇ,
ಕಥೆ ಚೆನ್ನಾಗಿದೆ, ನೀತಿಪ್ರಧವಾದ ಇಂಥಹ ಕಥೆಗಳ ಪುನಸ್ಮರಣೆ ಆಗುತ್ತಿರಬೇಕು.

ಡಾ|| ಜ್ಞಾನದೇವ್ ಮೊಳಕಾಲ್ಮುರು
ಧನ್ಯವಾದಗಳು ಶ್ರೀಧರ್ ರವರೇ,
ನಿಮ್ಮ ಅನಿಸಿಕೆ ಸತ್ಯವಾದದ್ದು. ಇ೦ದಿನ ನಿರಾಶಾದಾಯಕ ವಾತಾವರಣದಲ್ಲಿ ನಮಗೆ ಬೇಕಾದ್ದು ಇ೦ಥ ಬೆಳಕಿನ ಭರವಸೆಗಳೇ..