ಮರುಕಳಿಸಿದ ನೆನಪು : ನನ್ನ ತಾಯಿ, ’ಸಂಪ್ರದಾಯಗಳ ಹಾಡಿನ ರಾಧಮ್ಮನವರು” !

To prevent automated spam submissions leave this field empty.

ಸಂಪದದ ಓದುಗರೊಡನೆ ಹಂಚಿಕೊಳ್ಳುವ ಸಮಯ ಬಂತು. ಈ ವಿಷಯದಲ್ಲಿ ಬೆಳಕುಚೆಲ್ಲಿದ ನಮ್ಮ ಆಪ್ತಗೆಳೆಯ, ಶ್ರೀವತ್ಸಜೋಷಿಯವರಿಗೆ ಇದರ ಶ್ರೇಯಸ್ಸು ಸಲ್ಲಬೇಕು. ಅದಲ್ಲದೆ, ಶೈಲಜಾರವರಿಗೂ ಹಾಗೂ ನನ್ನ ಆಪ್ತ ಸಂಪದೀಯರಿಗೆಲ್ಲಾ ಸಹಿತ !

ನನ್ನ ತಾಯಿ, ಶ್ರೀಮತಿ. ರಾಧಮ್ಮನವರು, ಹಾಡಿಗೆ ಹೆಸರಾದ ವ್ಯಕ್ತಿ. ’ಸಂಪ್ರದಾಯಗಳ ಹಾಡಿನ ರಾಧಮ್ಮನವರು” ಎಂದೇ ಅಲ್ಲಿನ ಜನರಿಗೆ ಹೆಸರುವಾಸಿಯಾಗಿದ್ದ ವ್ಯಕ್ತಿ. ನಮ್ಮ ಊರು ಹಾಗೂ ಅಕ್ಕಪಕ್ಕಗಳ ಹಳ್ಳಿಯಜನರು, ಅವರ ಹಾಡನ್ನು ಕೇಳಿ ಆನಂದಿಸಿದ್ದರು. ಮದುವೆ, ಮುಂಜಿ, ಪ್ರಸ್ತ, ಅನ್ನಪ್ರಾಶನ, ಹಸೆಗೆಕರೆಯುವ ಸಮಯಗಳಲ್ಲಿ ಅವರನ್ನು ಸದಾ ಜ್ಞಾಪಿಸಿಕೊಳ್ಳುತ್ತಿದ್ದರು. ನಾವೆಲ್ಲಾ ನೀರಿನ ಅಭಾವಕ್ಕಾಗಿ, ನಮ್ಮ ಊರು ಹೊಳಲ್ಕೆರೆಯನ್ನು ಬಿಟ್ಟು ಬೆಂಗಳೂರಿಗೆ ಹೋದಾಗಲೂ, ಅವರ ವಿಷಯವನ್ನು ಕೇಳಿ, ಬೆಂಗಳೂರಿನ ಆಕಾಶವಾಣಿಯವರು, ಅವರ ಹಾಡುಗಳನ್ನು ದ್ವನಿಕರಿಸಿ, ತಮ್ಮ ಮಹಿಳೆಯರ ಕಾರ್ಯಕ್ರಮದಲ್ಲಿ ಬಿತ್ತಿರಿಸಿದ್ದದ್ದು, ಹಾಗೂ ನಮ್ಮ ವಠಾರದವರೆಲ್ಲಾ ಬೆರಗುಕಣ್ಣುಗಳಲ್ಲಿ ಕೇಳಿ ಅದರ ಬಗ್ಗೆ ವಾರಗಟ್ಟಲೆ ಮಾತಾಡಿಕೊಂಡಿದ್ದು, ಚರ್ಚಿಸಿದ್ದು, ಮುಂತಾದ ಸನ್ನಿವೇಷಗಳ ಸವಿ ನೆನೆಪುಗಳು ಇನ್ನೂ ನಮ್ಮ ಮನೆಯವರ ಮನಸ್ಸಿನಲಿ ಹಸಿರಾಗಿದೆ. ಆಗಿನ ಕಾಲದಲ್ಲಿ ಈಗಿನ ತರಹ ಪ್ರಚಾರವಿಲ್ಲದೆ, ಅವರಂತಹ ಕಲಾಕುಸುಮಗಳು ಹಿಂದಿನ ಬೆಂಚಿನವರಾಗಿದ್ದದ್ದು, ಒಂದು ವಿಪರ್ಯಾಸ.

ನಾನು ಇಂಟರ್ನೆಟ್ ನಲ್ಲಿ ಬರೆಯಲು ೨೦೦೫ ರಿಂದ ಪ್ರಾರಂಬಿಸಿದೆ. ಹಾಗೆಯೇ ಮುಂದೆ, ವಿಕಿಪೀಡಿಯದಲ್ಲೂ ಸಹಿತ. ರಾಧಾತನಯ ಎಂಬ ಹೆಸರಿನಲ್ಲಿ ಸುಮಾರು, ೧೨೦ ಲೇಖನಗಳನ್ನು ಬರೆದು ಪ್ರಕಟಿಸಿರುತ್ತೇನೆ. ಅದರಲ್ಲಿ ಮೊಟ್ಟಮೊದಲನೆಯದಾಗಿ ಬರೆದದ್ದು, ನಮ್ಮ ತಾಯಿಯವರ ಬಗ್ಗೆ. ಅಂದರೆ, ಆ ಬರಹಕ್ಕೆ ಕಳಸಪ್ರಾಯರಾಗಿದ್ದ, ರಾಧಮ್ಮನವರ ಬಗ್ಗೆ. ಅವರು ನನ್ನತಾಯಿಯಾಗಿದ್ದು ನನ್ನ ಪೂರ್ವಜನ್ಮದ ಸುಕೃತವೇ ಸರಿ !
ಅವರ ಬಗ್ಗೆ ಹೇಳುವುದಕ್ಕಿಂತ ವಿಕಿಪೀಡಿಯದ ಕೊಂಡಿಯನ್ನು ನೀವು ಜಾಲಾಡಿಸಿದರೆ, ಅವರ ಬಗ್ಗೆ ಮಾಹಿತಿ ಪಡೆಯುವಿರಿ.

ನಾನು ಬರೆದ ಇತ್ತೀಚಿನ ಲೇಖನ, ಡಾ. ಸುಕನ್ಯಾಪ್ರಭಾಕರ್ ರವರ ಬಗ್ಗೆ. ಪಾರ್ಸೀಗಳು, ಮುಂಬೈನ ಸುಪ್ರಸಿದ್ದ ಆಸ್ಪತ್ರೆಗಳು, ತಾಣಗಳು, ಆಗಿನ ಪ್ರಮುಖವ್ಯಕ್ತಿಗಳು, ನಮ್ಮ ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳು, ಶಂಕರಲಿಂಗ ಭಗವಾನರು, ಗುಬ್ಬಿ ಚಿದಂಬರ ಸ್ವಾಮಿಗಳು, ಇತ್ಯಾದಿ , ಇತ್ಯಾದಿ, ಎಲ್ಲಾ ವರ್ಗದ ಕನ್ನಡದವರು, ಹಾಗೂ ಕನ್ನಡೇತರ ಭಾರತೀಯರನ್ನು ನಾನು ಪ್ರತಿನಿಧಿಸಿದ್ದೇನೆ. ಬಾಲಮುರುಳಿಕೃಷ್ಣರಿದ್ದಾರೆ, ಪ್ರತಿಭಾಸಿಂಗ್ ಪಾಟೀಲ್ ರಿದ್ದಾರೆ, ಆರ್. ಕೆ. ಲಕ್ಷ್ಮಣ್ ಇದ್ದಾರೆ, ಡಿವಿಜಿಯರ ಮಗ, ಡಾ. ಸ್ವಾಮಿಯವರಿದ್ದಾರೆ, ರೆವರೆಂಡ್ ಕಿಟ್ಟೆಲ್ ರವರಿದ್ದಾರೆ, ಡಾ. ಹಿರಿಯಣ್ಣನವರಿದ್ದಾರೆ, ಉಚ್ಚಂಗಿ ಚೆನ್ನಬಸಪ್ಪನವರಿದ್ದಾರೆ, ಪ್ರೊ. ರಾಮಕೃಷ್ಣರಾಯರಿದ್ದಾರೆ, ನೀಳಾದೇವಿ, ಎಚ್. ವೈ. ಶಾರದಾಪ್ರಸಾದ್, ಜೆ. ಆರ್. ಡಿ ಟಾಟ, ಟಾಟರವರ ಪರಿವಾರದವರು, ಇನ್ನೂ ಅನೇಕರು.

ಅವರೆಲ್ಲರ ಮಧ್ಯೆ ನನ್ನ ಜನ್ಮದಾತೆ, ರಾಧಮ್ಮನವರು, ನನಗೆ ಸದಾ ಪ್ರತಃಸ್ಮರಣೀಯರು !

ವಿಕಿಪೀಡಿಯದ ಕೊಂಡಿ :

http://kn.wikipedia.org/wiki/%E0%B2%B8%E0%B2%82%E0%B2%AA%E0%B3%8D%E0%B2%...

ಲೇಖನ ವರ್ಗ (Category):