ಸ್ಥಿತಪ್ರಜ್ಞ

To prevent automated spam submissions leave this field empty.

ಒಬ್ಬ ವಯಸ್ಸಾದ ರೈತ ತನ್ನ ಬೆಳೆಗೋಸ್ಕರ ಹಲವಾರು ವರ್ಷಗಳು ದುಡಿದಿದ್ದ. ಒ೦ದು ದಿನ ಅವನ ಕುದುರೆ ಓಡಿ ಹೋಯಿತು. ಈ ಸುದ್ದಿ ತಿಳಿದ ನೆರೆಯವರು ಅವನನ್ನು ನೋಡಲು ಬ೦ದರು.
"ಎ೦ಥಾ ದುರದೃಷ್ಟ". ಅವರು ಕನಿಕರಿಸಿದರು.
"ನೋಡೋಣ" ರೈತ ಉತ್ತರಿಸಿದ.
ಮರುದಿನ ಬೆಳಗ್ಗೆ ಅವನ ಕುದುರೆ ಹಿ೦ತಿರುಗಿತು. ತನ್ನ ಜೊತೆಗೆ ಇತರ ಮೂರು ಕುದುರೆಗಳನ್ನೂ ತ೦ದಿತ್ತು.
"ಎ೦ಥಾ ಅದ್ಭುತ" ಉದ್ಗರಿಸಿದರು ನೆರೆಯವರು.
"ನೋಡೋಣ" ಮುದಿರೈತ ಉತ್ತರಿಸಿದ.
ಮರುದಿನ ಅವನ ಮಗ ಪಳಗಿಸದ ಕುದುರೆಯನ್ನು ಸವಾರಿ ಮಾಡಲು ಹೋಗಿ ತನ್ನ ಕಾಲೊ೦ದನ್ನು ಮುರಿದುಕೊ೦ಡ.
ನೆರೆಯವರು ಮತ್ತೊಮ್ಮೆ ಅವನಲ್ಲಿಗೆ ಬ೦ದು ತಮ್ಮ ಕನಿಕರ, ದುಃಖವನ್ನು ವ್ಯಕ್ತಪಡಿಸಿದರು.
"ನೋಡೋಣ" ರೈತನ ಅದೇ ಉತ್ತರ.
ಮರುದಿನ ಸೇನೆಯ ಅಧಿಕಾರಿಗಳು ಊರಿನ ಆರೋಗ್ಯವ೦ತ ಯುವಕರನ್ನು ಸೇನೆಗೆ ಸೇರಿಸಲು ಊರಿಗೆ ಬ೦ದಾಗ, ಕಾಲು ಮುರಿದುಕೊ೦ಡಿದ್ದ ರೈತನ ಮಗನನ್ನು ನೋಡಿ ಹಾಗೆಯೇ ಹೊರಟುಹೋದರು.
"ನಿನ್ನ ಅದೃಷ್ಟ ಚೆನ್ನಾಗಿತ್ತು," ನಿನ್ನ ಮಗ ಉಳಿದುಕೊ೦ಡ" ನೆರೆಯವರು ಅವನನ್ನು ಅಭಿನ೦ದಿಸಿದರು. ಎಲ್ಲವೂ ನಿನ್ನ ಪರವಾಗಿಯೇ ನಡೆಯುತ್ತಿದೆಯಲ್ಲಾ".
"ನೋಡೋಣ" ಅದೇ ಉತ್ತರ ರೈತನದು.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಚೆನ್ನಾಗಿದೆ ಜ್ಞಾನದೇವ್ ರವರೇ.

’ಆದದ್ದೆಲ್ಲಾ ಒಳಿತೇ ಆಯಿತು...’ ಅಂತ ಒಂದು ದಾಸರ ಪದ ಇದೆಯಲ್ಲ ಆಥರ.

ಎಷ್ಟು ಪ್ರಬುದ್ಧ ಚಿಂತನೆಗಳಿವು ಅಲ್ಲವೇ!!

ರಾಮಾಯಣದ ಒಂದು ಸಂಧರ್ಭದಲ್ಲಿ ಶ್ರೀರಾಮನೂ ಹಾಗೇ ಅಂದನಂತೆ. ಕಾಡಿಗಟ್ಟಿದ್ದು..ವನವಾಸ ಇವೆಲ್ಲಾ ಒಳಿತೇ ಆಯಿತು..ಒಬ್ಬ ರಾವಣನ ವಧೆಗಾಗಿ ಎಂಬರ್ಥದಲ್ಲಿ.

ಅಸಾಧ್ಯವೆ೦ಬುದು ಯಾವುದೂ ಇಲ್ಲ. (ಮನುಷ್ಯನ ಭಾವನೆಗೆ ಸ೦ಬ೦ಧಿಸಿದ೦ತೆ) ಜೆ.ಕೄಷ್ಣಮೂರ್ತಿಯವರು ಹೇಳಿದ೦ತೆ ಕ್ರಾ೦ತಿ ಎ೦ಬುದು ಯಾವಾಗಲೋ ಭವಿಷ್ಯದಲ್ಲಿ ಘಟಿಸುವುದು ಅಲ್ಲ . ಅದು ಇಲ್ಲಿ, ಈಗ ಈ ಕ್ಷಣದಲ್ಲಿ ಮಾತ್ರ.

ಡಾ|| ಜ್ಞಾನದೇವ್ ಮೊಳಕಾಲ್ಮುರು

ಸ್ಥಿತಪ್ರಜ್ಞೆ ಎಂದರೆ ಆದ ಒಳಿತು ಕೆಡುಕಿಗೆ ಮನಸ್ಸನ್ನು ಉದ್ವೇಗಗೊಳಿಸದೇ ಸಮಚಿತ್ತದಿಂದ ನೋಡುವುದು. ಮನಸ್ಸು ಸಂತೋಷ ತೀರಾ ಉಬ್ಬಿಹೋಗುವುದು ಅಥವಾ ದುಃಖದಿಂದ ಕುಗ್ಗಿಹೋಗುವುದು ಎರಡೂ ಸ್ಥಿತಪ್ರಜ್ಞೆಯಲ್ಲ. ಆದರೆ ಮನಸ್ಸು ಜಡವಾಗಬೇಕಿಲ್ಲ. ನಿಜವಾಗಿ ನೋಡಿದರೆ ಅನುದ್ವಿಗ್ನ ಮನಸ್ಸು ಉದ್ವಿಗ್ನ ಮನಸ್ಸಿಗಿಂತ ಚುರುಕಾಗಿರುತ್ತದೆ. ಯಾಕೆಂದರೆ ಆಗುಹೋಗುಗಳಿಗೆ ಪರಿತಪಿಸುವುದಱಿಂದಲೂ ಅಥವಾ ಕುಣಿದು ಕುಪ್ಪಳಿಸುವುದಱಿಂದಲೂ ವಿಶೇಷ ಲಾಭನಷ್ಟವಿಲ್ಲ. ಅೞುವುದಱಿಂದ ನಷ್ಟ ಕಡಿಮೆಯಾಗುವುದಿಲ್ಲ. ಉಬ್ಬಿಹೋಗುವುದಱಿಂದ ಲಾಭ ಹೆಚ್ಚಾಗುವುದಿಲ್ಲ. ಇಂದು ದುಃಖಿಸುವವ ಇನ್ನಾವುದೋ ಕಾರಣಕ್ಕೆ ನಾಳೆ ಸಂತೋಷ ಪಡಬಹುದು. ಇಂದು ಸಂತೋಷದಲ್ಲಿದ್ದವ ನಾಳೆ ದುಃಖಕ್ಕೊಳಗಾಗಬಹುದು.

ತಾಳ್ಮೆ ಪ್ರಬುದ್ದ ಮನುಷ್ಯನ ವಜ್ರ ಕವಚ ಎಂದು ಎಲ್ಲೋ ಓದಿದ ನೆನಪು, ಬಹುಶಃ ಈ ಕಥೆ ಅದನ್ನೇ ನೆನಪಿಸುತ್ತದೆ.

ನಿಮ್ಮ ಅಭಿಮಾನಿ ಹುಡುಗ
ಅರವಿಂದ್
http://aravindnimmava.wordpress.com
http://abhimanihuduga.blogspot.com

ಕೃಷ್ಣ ಹುಟ್ಟಿದ್ದು ಅಮಾವಾಸ್ಯೆಯಲ್ಲ. ಅಷ್ಟಮೀತಿಥಿ. ಮುಂದೆ ಅಮಾವಾಸ್ಯೆ ಬರುವುದಱಲ್ಲಿತ್ತು. ಅದಕ್ಕೆ ಕೃಷ್ಣಾಷ್ಟಮೀ ಎಂದು ಕೃಷ್ಣನ ಜನ್ಮದಿನವನ್ನು ಆಚರಿಸುವುದು. ಕೃಷ್ಣ ಹುಟ್ಟಿದ್ದು ಸೆಱೆಮನೆಯಲ್ಲಿ. ಆಗ ಕತ್ತಲಿದ್ದಿರಬಹುದು. ಆದರೆ ಹುಟ್ಟಿದ ದಿನ ಅಮಾವಾಸ್ಯೆಯಲ್ಲ.

ಕನ್ನಡಕ೦ದರವರೇ,
ಬಹುಶಃ ನನ್ನ ಪ್ರಮಾದವಿರಬಹುದು. ಕೇಳಿದ ನೆನಪು. ಮತ್ತೊಮ್ಮೆ ಖಚಿತ ಪಡಿಸಿಕೊಳ್ಳುತ್ತೇನೆ. ನಿಮ್ಮ ಜಾಗರೂಕತೆಗೆ hats off.

ಡಾ|| ಜ್ಞಾನದೇವ್ ಮೊಳಕಾಲ್ಮುರು