ಕಣ್ಣು-ಕುರುಡು ಹುಡುಗಿ (ಒಂದು ಚಿಕ್ಕ ಕಥೆ )....

To prevent automated spam submissions leave this field empty.

 

 

 

ಒಂದು ಊರಲ್ಲಿ ಒಬ್ಬ ಕುರುಡು ಹುಡುಗಿ ಇದ್ದಳು, ಅವಳು ಅವಳನ್ನೇ ತಾನು ಕುರುಡಿ ಆಗಿರುವ ಕಾರಣ ತನ್ನನ್ನೇ ದ್ವೆಶಿಸುತ್ತಿದ್ದಳು,

ಅವಳು ಪ್ರತಿಯೊಬ್ಬರನ್ನು,ಅವಳ ಪ್ರಿಯತಮನ ಹೊರತಾಗಿ ದ್ವೆಶಿಸುತ್ತಿದ್ದಳು, ಒಂದು ದಿನ ಅವಳು ಅವಳ ಪ್ರಿಯತಮನಿಗೆ , ಒಂದು ವೇಳೆ ಅವನು ಅವಳಿಗೆ ಕಣ್ಣು ಮರಳಿ ಬರಲು ಸಹಾಯ ಮಾಡಿದರೆ/ದೃಷ್ಟಿ ಬಂದು ಜಗತ್ತನ್ನು ನೋಡಲು ಸಹಾಯ ಮಾಡಿದರೆ , ಅವನನ್ನು ಮದುವೆಯಾಗುವುದಾಗಿ ಹೇಳಿದಳು.

ಆಗೊಂದು ದಿನ ಒಬ್ಬ ತನ್ನ ಕಣ್ಣು ದಾನವಾಗಿ ಕೊಟ್ಟು, ಅವಳಿಗೆ ದೃಷ್ಟಿ ಬರಲು ಸಹಕರಿಸಿದ. ಆಗ ಅವಳು ಅವಳ ಪ್ರಿಯತಮನ ಸಹಿತ ಜಗತ್ತೇ ನೋಬಲ್ಲವಲಾದಳು, ಆಗ ಅವಳ ಪ್ರಿಯತಮ ಅವಳನ್ನು ಕೇಳಿದ ಈಗ ನಿನ್ನ ಕಣ್ಣು ಕಾಣಿಸುತ್ತಿದೆಯಲ್ಲ, ಹಾಗಾಗಿ ಈ ಹಿಂದೆ ನೀನೆ ಹೇಳಿದ ಹಾಗೆ ನನ್ನ ಮದುವೆಯಾಗುವೆಯ? ಅವನ ಮುಖ ನೋಡಿದ ಹುಡುಗಿ ಗಾಬರಿಯಾದಳು, ಯಾಕೆಂದರೆ ಅವನಿಗೆ(ಅವಳ ಪ್ರಿಯತಮ) ಕಣ್ಣೇ ಇರಲಿಲ್ಲ, ಅದ್ದರಿಂದ ಅವಳು ಅವನನ್ನು ಮದುವೆಯಾಗಲು ನಿರಾಕರಿಸಿದಳು, ಅವಳ ಪ್ರಿಯತಮಕಣ್ಣಲ್ಲಿ ನೀರು ತುಂಬಿಕೊಂಡು ಹೋಗುತ್ತಾ ಅವಳಿಗೆ ಹೇಳಿದ, ನನ್ನ ಕಣ್ಣುಗಳನ್ನು ಸರಿಯಾಗಿ ಕಾಪಾಡಿಕೋ ಎಂದ.

(ಅವಳಿಗೆ ಕಣ್ಣು ಬರಲು ಅವನು ತನ್ನದೇ ಕಣ್ಣು ಕೊಟ್ಟಿದ್ದ) ಆದರೆ ಅವಳು ಕಣ್ಣು ಬಂದ ಕೂಡಲೇ ಅವನಿಗೆ ಕೈ ಕೊಟ್ಟಳು........

ಇದು ನನಗೆ ನನ್ನ ಸ್ನೇಹಿತನೊಬ್ಬ ಆರ್ಕುಟ್ ನಲ್ಲಿ ಸ್ಕ್ರಾಪ್ ಮಾಡಿದ್ದ ಅದು ಅಂಗ್ಲ ಭಾಷೆಯಲ್ಲಿ ಇತ್ತು , ಅದನ್ನು ನಾನು ಕನ್ನಡಕ್ಕೆ ತರ್ಜುಮೆ ಮಾಡಿದ್ದೇನೆ, ಇದು ಓದಲು ಅಷ್ಟು ಮಜವಲ್ಲದೆ ಇರಬಹುದು ...!! 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಸಪ್ತಗಿರಿ

ತುಮ್ಬಾ ಹಳೆಯ ಕತೆ ಚೆನ್ನಾಗಿದೆ

ಆದರೆ ಸ್ವಾರ್ಥಿಯಾಗಲು ಹುಡುಗಿ ಹುಡುಗ ಅಂತ ಏನಿಲ್ಲ ಅದೊಂದು ವ್ಯಕ್ತಿತ್ವ ಅಷ್ಟೆ

ಇಲ್ಲಿ ಪಾತ್ರಗಳನ್ನು ಅದಲುಬದಲು ಮಾಡಿ ಹುಡಿಗಿ ಕಣ್ಣು ಕೊಟ್ಟಳು ಹುಡುಗ ಕೈಕೊಟ್ಟ ಅಂತ ಬರೆಯ ಬಹುದು

ಆಗ ಅದನ್ನು ಓದುವವರ ಮನೋಭಾವ ಬದಲಾಗುತ್ತೆ ಅಷ್ಟೆ.

ಆದರೆ ಸತ್ಯವೆಂದರೆ ತಮ್ಮ ಕಣ್ಣನ್ನು ತಾವು ಬದುಕಿರುವಾಗಲೆ ಇನ್ನೊಬ್ಬರಿಗು ಕೊಡುವುದು ಕತೆ ಸಿನಿಮಾಗಳಲ್ಲಿ ಸಾದ್ಯವೇನೊ .

ಅಥವ ನಿಜ ಜೀವನದಲ್ಲಿ ಎಲ್ಲಿಯಾದರು ಆಗಿದೆಯ ಹುಡುಕಿ (ಇಂಟರ್ ನೆಟ್ ನಲ್ಲಿ)

 

parthasarathy

ಗುರುಗಳೆ- "ಆದರೆ ಸ್ವಾರ್ಥಿಯಾಗಲು ಹುಡುಗಿ ಹುಡುಗ ಅಂತ ಏನಿಲ್ಲ ಅದೊಂದು ವ್ಯಕ್ತಿತ್ವ ಅಷ್ಟೆ ಇಲ್ಲಿ ಪಾತ್ರಗಳನ್ನು ಅದಲುಬದಲು ಮಾಡಿ ಹುಡಿಗಿ ಕಣ್ಣು ಕೊಟ್ಟಳು ಹುಡುಗ ಕೈಕೊಟ್ಟ ಅಂತ ಬರೆಯ ಬಹುದು ಆಗ ಅದನ್ನು ಓದುವವರ ಮನೋಭಾವ ಬದಲಾಗುತ್ತೆ ಅಷ್ಟೆ. ಆದರೆ ಸತ್ಯವೆಂದರೆ ತಮ್ಮ ಕಣ್ಣನ್ನು ತಾವು ಬದುಕಿರುವಾಗಲೆ ಇನ್ನೊಬ್ಬರಿಗು ಕೊಡುವುದು ಕತೆ ಸಿನಿಮಾಗಳಲ್ಲಿ ಸಾದ್ಯವೇನೊ . ಅಥವ ನಿಜ ಜೀವನದಲ್ಲಿ ಎಲ್ಲಿಯಾದರು ಆಗಿದೆಯ ಹುಡುಕಿ (ಇಂಟರ್ ನೆಟ್ ನಲ್ಲಿ)" >>> ಅದು ನಿಜವೇ....... ಹೌದು ನೀವ್ ನನ್ನ ಬರಹಗಳ(ಹಳೆಯ) ಹಿಂದೆ ....!! ಇತ್ತೀಚಿನ ಪ್ರತಿಕ್ರಿಯೆಗಳು ನಲ್ಲಿ ನನ್ನ ಬರಹದ ಶೀರ್ಷಿಕೆ ನೋಡಿದ ಕೂಡಲೇ ಅನ್ನಿಸಿತು- ಅದು ನನ್ನ ಬರಹವೇ ಇರಬೇಕು-ಅದಕ್ಕೆ ಪ್ರತಿಕ್ರಿಯಸಿರಬೇಕು ಅಂತ... ಊಹೆ ನಿಜ ಆಯ್ತು... ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು... ಬದುಕಿರುವಾಗಲೇ ಯಾರು ಕಣ್ಣು ಕೊಡಲು ಸಾಧ್ಯವಿಲ್ಲ- ಆದರೆ ಯಾರಾರ ಒತ್ತಾಯಾಪೂರ್ವಕವಾಗಿ(ಸಿನೆಮಾದಲ್ಲಿ ತೋರಿಸುವಂತೆ) ಕಿತ್ತುಕೊಳ್ಳಬೇಕು ಅಸ್ಟೆ....:())) \|/