ಅಕ್ಷರದಲ್ಲಿ ಆಟ

To prevent automated spam submissions leave this field empty.

ಈ ಪ್ರಸಂಗ ಎಲ್ಲಿಯದು ಎಂದು ಮರೆತಿರುವೆ. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಎಂತಹ ಚಮತ್ಕಾರಗಳಿರುತ್ತವೆ! ಎಂಬುದನ್ನು ಇಲ್ಲಿ ನೋಡಿ. ಈ ವಾಕ್ಯ ಓದಿ...
"ದನವ ಕಡಿದು ಕಡಿದು ಗುಡಿಗೆ ತುಂಬಿದರು"
- ಇಂದಿನ ದಿನಗಳಲ್ಲಿ ಇಷ್ಟನ್ನೇ ಓದಿದರೆ ಎಂತಹ ಆಭಾಸ ವಾಗುತ್ತೆ, ಅಲ್ವಾ?
ಇಂತಹ ಒಂದು ವಾಕ್ಯದ ನಡುವೆ ಒಂದಕ್ಷರವನ್ನೂ ಅದಲು ಬದಲು ಮಾಡದೆ ಮೊದಲಿಗೆ ಒಂದಕ್ಷರವನ್ನು ಸೇರಿಸಿ ಎಂತಹ ಚಮತ್ಕಾರ ಮಾಡ ಬಹುದೆಂದರೆ ಕೇವಲ " ಚಂ" ಸೇರಿಸಿ ನೋಡಿ.
----------------------------------------------------------------------------------------
ನಾಲಿಗೆಗೊಂದು ಕಸರತ್ತು....... ಕಪ್ಪು ಕುಂಕುಮ-ಕೆಂಪು ಕುಂಕುಮ,  ಕಪ್ಪು ಕುಂಕುಮ-ಕೆಂಪು ಕುಂಕುಮ,      ಕಪ್ಪು ಕುಂಕುಮ-ಕೆಂಪು ಕುಂಕುಮ   ಈ  ಪದಗಳನ್ನು  ವೇಗವಾಗಿ ಪುನರುಚ್ಛಾರ ಮಾಡುತ್ತಾಹೋಗಿ. ಉಚ್ಛಾರ ತಪ್ಪಾಗಲಿಲ್ಲವೇ? ತಡವರಿಸಲಿಲ್ಲವೇ?
ಸರಿ ಹಾಗಾದರೆ ಮಕ್ಕಳ ಮೇಲೆ ಶುರುವಾಗಲೀ ಪ್ರಯೋಗ.
-----------------------------------------------------------------------------------------
Bittaa bought some butter, Butter was bitter, bittaa bought some better butter, to make bitter butter better.

ಇದನ್ನು ಬೇಗ ಬೇಗನೆ ಹೇಳಲು ಪ್ರಯತ್ನಿಸಿ. ಚಿಕ್ಕ ಮಕ್ಕಳಿಗೆ ಗೋಳು ಗುಟ್ಟಿಸಲು ಒಳ್ಳೆಯ ಸಾಮಗ್ರಿ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

"ಯಾಕ್ ಯಕ್ ಚಿಕಪ್ಪ ಕಣ್ ಕಣ್ ಬಿಡ್ತಿಯ" ಇದನ್ನು ವೇಗವಾಗಿ ಹೇಳುತ್ತಾ ಹೊದರೆ.. ಚಿಕಪ್ಪ.. ಚಿಪ್ಪಕ್ಕ ಆಗಿರುತ್ತಾನೆ..:)

ಇಲ್ಲ.. ಗೊತ್ತಿಲ್ಲ.. ಆದ್ರೆ ಒಂದು ವಚನದಲ್ಲಿ ಓದಿದ ನೆನಪು ಚಂದನವ ಕಡಿದು ಕೊರೆದು ತೈದೊಡೆ ನೊಂದೆನೆಂದು ..."

ಏನೆ ಆಗಲಿ ನೀವು ಬರೆದಿರುವ ಸಾಲು ಚೆನ್ನಾಗಿದೆ.. ಮಕ್ಕಳಿಗೆ ಕಲಿಸಬೇಕು.. ಭಾಷೆಯ ಜ್ನಾನ ಹೆಚ್ಚಿಸಲು....

http://www.hariharapurasridhar.blogspot.com

ಕೊಂಡಿ ನೀಡಿದ್ದಕ್ಕೆ ಧನ್ಯವಾದಗಳು
ಅಲ್ಲಿಂದ ಆರಿಸಿದ ಕೆಲವು ಇಲ್ಲಿದೆ.

Once Nagachandra posed this question to Kanti.

ಸತ್ತವಳೆದ್ದು ತವರಿಗೆ ಪೋದಳೇನಿದು ವಿಚಿತ್ರಂ!
(What a surprise! The woman, long dead, got up and ran away!)

Kanti had a quick response.

ಅತ್ತೆಯ ಕಾಟವು ಅಧಿಕಂ ಮತ್ತಿನ ಸವತಿಯರ ಕಾಟ ನಾದಿನಿ ಬೈವಳು
ಪೆತ್ತಮಕ್ಕಳಳಲ್ಕೆ ಸಲೆಗಂಡ ದೂಸರಿಗಾರದೆ ಬೇಸತ್ತವಳೆದ್ದು ತವರಿಗೆ ಪೋದಳೇನಿದು ವಿಚಿತ್ರಂ?

ಇಲಿಯಂ ತಿಂಬುದ ಕಂಡೆ ಜೈನರ ಮನೆಯೊಳ್ “ಸರಸಿಜಾಕ್ಷಿಯರ ಹಸ್ತದೊಳ್ ತಿಲತೈಲದಿ ಮಾಳ್ಪ ಚೆಕ್ಕಿಲಿಯಂ ತಿಂಬುದ ಕಂಡೆ ಜೈನರ ಮನೆಯೊಳ್”
ದನಮಂ ಕಡಿಕಡಿದು ಬಸದಿಗೆಳೆಯುತಿರ್ದರ್” -
ಸಚ್ಚಂದನಮಂ ಕಡಿಕಡಿದು ಬಸದಿಗೆಳೆಯುತಿರ್ದರ್”

ಇಸಮಂ ಸೇವಿಸಿ ಬಾಳ್ದರೇನಚ್ಚರಿಯೋ
“ಪಾಯಿಸಮಂ ಸೇವಿಸಿ ಬಾಳ್ದರೇನಚ್ಚರಿಯೋ!,

“ಕಾಗಜಮಂ ಕಟ್ಟಿ ಪೊತ್ತರು ಪೆಗಲೊಳ್”

http://www.hariharapurasridhar.blogspot.com

ಅದನ್ನೇ ಕೇಳಿದ್ದು, ಎಲ್ಲಿ ಓದಿದಿರಿ ಎಂದು. ನನಗೂ ಮರೆತು ಹೋಗಿದೆ. ಈಗ ಮತ್ತೊಮ್ಮೆ ಲಘು ಬರಹ ಓದಿ. ಅಲ್ಲಿ ಇನ್ನೊಂದು ಚಮತ್ಕಾರವಿದೆ. ನಿಮಗೆ ಈ ಮುಂಚೆಯೇ ತಿಳಿದಿದ್ದರೆ ಈಗ ನೆನಪಾಯ್ತಲ್ಲಾ , ಮನೇಲಿ ಮಕ್ಕಳಿದ್ದಾರೆ ತಾನೇ, ಇನ್ನೇಕೆ ತಡ?

>>ಮನೇಲಿ ಮಕ್ಕಳಿದ್ದಾರೆ ತಾನೇ?
ನಮ್ಮ ಮನೆಯಲ್ಲಿ ನಾನೇ ಮಗು. ;) ಆದ್ದರಿಂದ, ನಾನೇ ಪ್ರಯತ್ನ ಪಡಬೇಕು...

-ಅನಿಲ್.

http://www.hariharapurasridhar.blogspot.com

ಇವತ್ತು ರಾತ್ರಿ ಹನ್ನೆರಡಾದರೂ ನಿಮ್ಮ ಪಕ್ಕದಮನೆಯಲ್ಲೂ ಯಾರೂ ಮಲಗುವುದಿಲ್ಲ ಅಲ್ವಾ? ಅವರ ಮನೇಲೂ ಮಕ್ಕಳಿಲ್ವಾ?......... ಎಲ್ಲಾ ತಮಾಶೆಗಾಗಿ

ನಮ್ ರಸ್ತೆಯಲ್ಲಿರುವ ಮನೆಗಳಲ್ಲೇನೋ ಮಕ್ಕಳಿದ್ದಾರೆ, ಆದರೆ ಅವರೆಲ್ಲಾ ಈಗ ಗಲಾಟೆ ಮಾಡದೆ ಮಲಗಿದ್ದಾರೆ. :) (ಇದು ತಮಾಷೆಯಲ್ಲ ;))

-ಅನಿಲ್.

http://www.hariharapurasridhar.blogspot.com

ಯುಗಾದಿಯು ಹಿಂದು ಸಂಪ್ರದಾಯದಂತೆ ನಮಗೆ ಹೊಸ ವರ್ಷದ ಆರಂಭವಾದರೂ ಇಂಗ್ಳೀಶ್ ವರ್ಷವನ್ನು ನಮ್ಮ ವ್ಯವಹಾರಗಳಿಗೆ ಈಗಾಗಲೇ ಬಳಸುತ್ತಿರುವುದರಿಂದ ಇದೀಗ ಆರಂಭವಾಗುತ್ತಿರುವ ಹೊಸವರ್ಷ ನಿಮಗೆ ಶುಭವ ತರಲೆಂದು ಸರ್ವಶಕ್ತನಾದ ಭಗವಂತನಲ್ಲಿ ಪ್ರಾರ್ಥಿಸುವೆ.

ಸಖತ್ತಾಗಿದೆ.;)
ಇನ್ನೊಂದು ನಾಲಿಗೆ ಕಸರತ್ತು.
"ಕಾಗೆ ಪುಕ್ಕ ಗುಬ್ಬಿ ಪುಕ್ಕ"

ನಿಮ್ಮವ,
ಗಿರೀಶ ರಾಜನಾಳ
ಹಂತಾದು ಹಿಂತಾದು ಕೂಡಿ ಸಂತ್ಯಾಗ ಹೋದ್ರss..ಸಂತ್ಯಾಗೊಂದು ಹಂತಾದs ಸಿಕ್ಕಿತ್ತಂತ...!!!

ಸಖತ್ತಾಗಿದೆ.;)
ಇನ್ನೊಂದು ನಾಲಿಗೆ ಕಸರತ್ತು.
"ಕಾಗೆ ಪುಕ್ಕ ಗುಬ್ಬಿ ಪುಕ್ಕ"

ನಿಮ್ಮವ,
ಗಿರೀಶ ರಾಜನಾಳ
ಹಂತಾದು ಹಿಂತಾದು ಕೂಡಿ ಸಂತ್ಯಾಗ ಹೋದ್ರss..ಸಂತ್ಯಾಗೊಂದು ಹಂತಾದs ಸಿಕ್ಕಿತ್ತಂತ...!!!

ತುಂಬ ಚೆನ್ನಾಗಿದೆ ಸರ್

ಅದೆ ರೀತಿ " ಸಂಪಂಗಪ್ಪನ ಮಗ ಮರಿ ಸಂಪಂಗಪ್ಪ" ಇದನ್ನು ವೇಗವಾಗಿ ಹೇಳಿ :)

ನಿಮ್ಮವ
ಮಧುಸೂದನ್ ಗೌಡ

’ಸಂಪಿಗೆ ಕೆಂಪುಗಂಗಪ್ಪನ ಮಗ ಮರಿಕೆಂಪುಗಂಗಪ್ಪ’ ಅನ್ನೋದನ್ನ ಬೇಗಬೇಗ ಹೇಳುತ್ತಾ ಹೋದರೆ ಗಂಗಪ್ಪ ಗಂಗಮ್ಮನಾಗಿ ಬದಲಾಗುತ್ತಾನೆ. ಇಂಥದೇ ಒಂದು tongue twister ಇಂಗ್ಲಿಷಿನಲ್ಲೂ ಕೇಳಿದ್ದೇನೆ: she sells sea shells on sea shore ಅನ್ತ. ತಮಿಳಿನಲ್ಲೂ ಇಂಥದೊಂದು ಇದೆಯೆಂದು ಸ್ನೇಹಿತರು ಹೇಳಿದ್ದಿದೆ: ಇದು ಯಾರ್‍ ತೆಚ್ಚ ಚಟ್ಟೆ, ಎಂಗ ತಾತ ತೆಚ್ಚ ಚಟ್ಟೆ (ಇದು ಯಾರು ಹೊಲಿದ ಅಂಗಿ, ನಮ್ಮ ತಾತ ಹೊಲಿದ ಅಂಗಿ) ಇದನ್ನು ವೇಗವಾಗಿ ಹೇಳುತ್ತಿದ್ದರೆ ಎಲ್ಲೋ ಒಂದು ಕಡೆ ’ತಾತ ಚತ್ತ’ (ತಾತ ಸತ್ತ) ಅಂತ ಆಗಿಬಿಡುತ್ತೆ.

ಪ್ರೀತಿಯಿಂದ
ಸಿ ಮರಿಜೋಸೆಫ್
http://cmariejoseph.blogspot.com