ತೊಟ್ಟು ಕಿತ್ತ ಹೂವು

To prevent automated spam submissions leave this field empty.

ಎಂತ ಚಂದದ ಹೂವು
ಹೀಗಿದೇತಕೆ ಬಿತ್ತು
ಮನದಲ್ಲಿ ವ್ಯಥೆಯ ಹೊತ್ತು|
ಯಾವ ಬೆರಳಿದು ಕ್ರೂರ
ಕೊಟ್ಟಿದೇತಕೆ ನೋವ
ಉಗುರಲೀ ತೊಟ್ಟ ಕಿತ್ತು||
ನಗು ನಗುತಲಿದೆ ಇನ್ನೂ
ಮುಚ್ಚಲಿಲ್ಲವೋ ಕಣ್ಣು
ಪಾಪ, ಅದಕೇನು ಗೊತ್ತು:
ತಾನೀಗ ಕಾಲರಾಯನ ತುತ್ತು||
ಮೆಲ್ಲ ಮೆಲ್ಲನೆ ಮಾಸಿ
ಬಾಡುತಲಿದೆ ನೋಡು
ಕರಗುತಿದೆ ಕೊನೆಯ ಕಂತು|
ತನ್ನ ತಾನೇ ಮರೆತು
ಕೊಡುತಲಿದೆ ನೋಡು
ತುಳಿದವರ ಕಾಲಿಗೇ ಮುತ್ತು||

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ತನ್ನನು ಕಡಿಯಲೆ೦ದು ಬ೦ದ ಮರಕಟುಕನಿಗೂ ಆಶ್ರಯ ನೀಡುವ ಮರದ ನೆನಪಾಯಿತು. ಒ೦ದು ಭಾವುಕ ಕವನ. ಒಳ್ಳೆಯ ಪ್ರಯತ್ನ ಶ್ರೀಧರ್.

ಜ್ಞಾನದೇವ್ ಮೊಳಕಾಲ್ಮುರು.

http://www.hariharapurasridhar.blogspot.com

ಡಾ||ಜ್ಞಾನದೇವ್ ಮೊಳಕಾಲ್ಮುರು.

ಹಲವು ಭಾರಿ ನಾನು ನನ್ನ ಮನದಲ್ಲಿ ಅಂದುಕೊಳ್ಳುವುದುಂಟು, ಯಾರಾದರೂ ನನ್ನ ಮನಸ್ಸಿಗೆ ನೋವುಂಟು ಮಾಡಿದರೂ ಅವರ ಮೇಲೆ ಸಿಟ್ಟಾಗಬಾರದೆಂದು. ಹಾಗೂ ಹೀಗೂ ಸ್ವಲ್ಪ ಸಮಯ ಸಾಧ್ಯವಾಗುತ್ತೆ. ಆದರೆ ಯಾವಾಗಲೋ ನನ್ನರಿವಿಲ್ಲದೆ ಸಿಟ್ಟಾಗಿರುತ್ತೇನೆ.ಇನ್ನು "ತುಳಿದವರ ಕಾಲಿಗೇ ಮುತ್ತು" ಆಸ್ಥಿತಿ ತಲುಪುವುದು ಕಷ್ಟ ಅಲ್ಲವೇ? ಆದರೂ ಆ ಪ್ರಯತ್ನದಲ್ಲಿ ಸಾಗುವಾಸೆ.