ಕಾಗದ ಬಂದಿದೆ-ಓದುವಿರಾ?

To prevent automated spam submissions leave this field empty.

ಯಾವುದೋ ಹಳೆಯಪುಸ್ತಕ ಓದುತ್ತಿದ್ದೆ. ಅದರಲ್ಲಿದ್ದ ಒಂದು ಕಾಗದ ನನ್ನನ್ನು ಆಕರ್ಷಿಸಿತು.೧೯೪೫ ರಲ್ಲಿ ನಮ್ಮ ಸೋದರಮಾವ ನಮ್ಮ ತಾತನಿಗೆ ಬರೆದಿರುವ ಪತ್ರವದು. ಆ ಮೋಡಿ ಅಕ್ಷರವನ್ನು ಸಂಪದ ಓದುಗರಿಗೆ ತೋರಿಸ ಬೇಕೆನಿಸಿತು. ಫೋಟೋ ತೆಗೆದು ಅಪ್ ಲೋಡ್ ಮಾಡಿರುವೆ. ನನಗೆ ಅದರಲ್ಲಿ ಇನ್ನೂ ಹೆಚ್ಚು ಆಕರ್ಷಿಸಿದ್ದು-" ಇದು ನಾಜೂಕಿನ ಕಾಲ, ಮದುವೆಯನ್ನು ಒಂದೇ ದಿನ ಮಾಡಿದರೆ ಸಾಕು, ಹೊಳೇನರಸೀಪುರದಲ್ಲಾದರೆ ಖರ್ಚು ಜಾಸ್ತಿ, ಮಾವಿನಕೆರೆಯಲ್ಲಿ ಮಾಡೋಣ. ಬೆಳಿಗ್ಗೆಯೇ  ವರಪೂಜೆ ಮಾಡಿಕೊಂಡು ಅಂದೇ ಮದುವೆ ಮಾಡಿ ಮುಗಿಸೋಣ" ಇದು ಕಾಗದದಲ್ಲಿ ನಾನು ಓದಿದ್ದು. ಚಿತ್ರವನ್ನು ದೊಡ್ದದು ಮಾಡಿಕೊಂಡು ಪೂರ್ಣ ಓದಬಹುದು.ಇಂದಿನ ಮದುವೆಯ ಸಂಬ್ರಮ, ಅದರಖರ್ಚು, ಎಲ್ಲವನ್ನೂ ನೋಡಿದರೆ, ಅಂದಿನ ಸ್ಥಿತಿ ಹೇಗಿತ್ತು! ನೋಡಿ. ನಮ್ಮ ಕಾಲದಲ್ಲಿ ಮದುವೆ ಎಂದರೆ ಒಂದ ವಾರ ನಡೆಯುವ ಕಾರ್ಯಕ್ರಮ ಎನ್ನುವವರೂ ಇದ್ದಾರೆ. ಆದರೆ ಈ ಕಾಗದ ಅಂದಿನ ಹಣಕಾಸಿನ ಮುಗ್ಗಟ್ಟಿಗೆ ಹಿಡಿದ ಕನ್ನಡಿಯಲ್ಲವೇ?

ಚಿತ್ರ ಪುಟದಲ್ಲಿ ಮತ್ತೆರಡು ಕಾಗದಗಳ ಫೋಟೋ ಇದೆ.ಇಲ್ಲಿ ಕ್ಲಿಕ್ಕಿಸಿ ನೋಡಬಹುದು
http://sampada.net/image/15497
http://sampada.net/image/15496

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಹಳೇ ಪತ್ರಗಳು ನಮ್ಮ ಸಂಪತ್ತು ಇದ್ದ ಹಾಗೆ, ಅದನ್ನ ಇಷ್ಟು ವರ್ಷಗಳು ಕಾಪಾಡಿಕೊಂಡು ಬಂದಿದ್ದೀರಲ್ಲಾ ಖುಷಿಯಾಯ್ತು.
ಸ್ವಲ್ಪ ಹಿಂದೆ ಪತ್ರಗಳ ಬಗ್ಗೆ ಒಂದು ಲೇಖನ ಬರ್ದಿದ್ದೆ, ಬಿಡುವು ಮಾಡಿಕೊಂಡು ಓದಿ ನಿಮ್ಮ ಅಭಿಪ್ರಾಯ ತಿಳಿಸಿ: http://www.sampada.net/article/11673
--
PaLa

ಚೆನ್ನಾಗಿದೆ :)

ಒಂದು ಸಲಹೆ, ನಿಮ್ಮ ಈಮೈಲ್ ವಿಳಾಸಗಳನ್ನು ಹೀಗೆ ಹಾಕಬೇಡಿ, ಇದರಿಂದ ತೊಂದರೆಗಳೇ ಹೆಚ್ಚು. (spam ಜಾಸ್ತಿ ಆಗಬಹುದು ನಿಮ್ಮ ಮೈಲ್ ಗೆ, ಯಾರಾದರೂ ದುರುಪಯೋಗ ಪಡಿಸಿಕೊಳ್ಳಬಹುದು).

ನಿಮ್ಮವನೇ,
ಅರವಿಂದ | Aravinda
http://aravindavk.in

ಹಳೆಯ ಪತ್ರವನ್ನು ಸಂಪದ ಮಿತ್ರರಿಗೆ ತೋರಿಸಿದ್ದಕ್ಕಾಗಿ ಶ್ರೀಧರ್ ಅವರಿಗೆ ಮೆಚ್ಚುಗೆ.

ಕಾಗದದಲ್ಲಿ ಸಂಬೋಧನೆಯನ್ನು ಗಮನಿಸಿದೆ, "Dear Brother" ಅಂತಿದೆ. ಶ್ರೀಧರ್ ಬರೆದಿರುವಂತೆ "ನಮ್ಮ ಸೋದರಮಾವ ನಮ್ಮ ತಾತನಿಗೆ ಬರೆದ ಪತ್ರವಿದು", ಅಂದರೆ ಮಗ ತಂದೆಗೆ ಬರೆದದ್ದು. ಬಹುಶಃ ಎಷ್ಟೋ ಮನೆಗಳಲ್ಲಿ ಮಕ್ಕಳು ತಂದೆಯನ್ನು ’ಅಣ್ಣಾ’ ಎಂದು ಕರೆಯುವ ರೂಢಿಯು ಇಲ್ಲಿ ಇಂಗ್ಲೀಷ್‌ಗೆ ಭಾಷಾಂತರಗೊಂಡಿರಬೇಕು! ನನ್ನ ಊಹೆ ಸರಿಯೇ ಎಂದು ತಿಳಿಸುತ್ತೀರಾ ಶ್ರೀಧರ್?

ಶ್ರೀಧರ್ ಅವರಿಗೆ ನಮಸ್ಕಾರ.

ನಿಮ್ಮ ಉತ್ತರ ತೀರಾ ’ಶುಷ್ಕ’ (ಒಣ) ಎನಿಸಿತು, ಪರವಾ ಇಲ್ಲ.

ಹಾಗಾದರೆ ಪತ್ರವನ್ನು ಸೋದರಮಾವ ತಾತನಿಗೆ ಬರೆದದ್ದು ಅಲ್ಲವೆ? ನಿಮ್ಮ ಈ ಉತ್ತರವನ್ನು ನೋಡಿದರೆ, ಸೋದರಮಾವ ತಾತನ ಮನೆಯಲ್ಲಿದ್ದ ತನ್ನ ಅಣ್ಣನಿಗೆ ಬರೆದ ಪತ್ರವಿದು?

ಕ್ಷಮಿಸಿ, ನಾನು ಇದನ್ನು ಕೇಳುತ್ತಿರುವುದು ’ತನಿಖೆ’ಯ ಧಾಟಿ ಅಥವಾ ದೃಷ್ಟಿಯಿಂದಲ್ಲ, ಆ "Dear Brother" ಎನ್ನುವ ಸಂಬೋಧನೆ ನನ್ನ ಕುತೂಹಲವನ್ನು ತೀವ್ರವಾಗಿ ಕೆರಳಿಸಿತು. ಅದಕ್ಕಾಗಿ, ನಿಮ್ಮಲ್ಲಿ ಆತ್ಮೀಯವಾಗಿ ಕೇಳಿದೆ ಅಷ್ಟೆ. ದಯವಿಟ್ಟು ಅನ್ಯಥಾ ಭಾವಿಸದಿರಿ. ಅಥವಾ ಒಂದುವೇಳೆ ನನ್ನ ಪ್ರಶ್ನೆ ಅಸಂಬದ್ಧ ಎನಿಸಿದಲ್ಲಿ, ಉತ್ತರ ಕೊಡುವಲ್ಲಿ ನಿಮಗೆ ಇರುಸುಮುರುಸಿದೆ ಎನಿಸಿದಲ್ಲಿ, ಅದರ ಗೋಜಿಗೆ ಹೋಗಬೇಡಿ. ನನ್ನ ಕುತೂಹಲವನ್ನು ಕ್ಷಮಿಸಿಬಿಡಿ.

ಇತಿ ನಮಸ್ಕಾರಗಳೊಂದಿಗೆ,

ಶ್ರೀವತ್ಸ ಜೋಶಿ

ಪಿತನನ್ನು ಅಣ್ಣ ಎಂದು ಸಂಬೋಧಿಸುವ ಪರಿಪಾಠ ಇದ್ದಿರಬೇಕು. ಹಾಗಾಗಿ, Dear Brother ಎಂದಿದ್ದಾರೆ.
ಮಾವ, ತಾತ (ತನ್ನ ಪಿತ) ನಿಗೆ ಬರೆಯುವಾಗ ಮನೆಯಲ್ಲಿದ್ದ ತನ್ನ ಅಣ್ನನನ್ನು ಸಂಬೋಧಿಸುವ ಅಗತ್ಯ ಇರಲಾರದು. ಅಲ್ಲವೇ?
:-)
-ಆಸು ಹೆಗ್ಡೆ

ಆಸು ಹೆಗ್ಡೆಯವರೇ,

ಹೌದು. ಅದೇ ನನ್ನ ಊಹೆಯೂ ಆಗಿತ್ತು, ಆದರೆ ಶ್ರೀಧರ್ ಅವರನ್ನೇ ಕೇಳಿ ತಿಳಿದುಕೊಳ್ಳೋಣವೆಂದುಕೊಂಡದ್ದಕ್ಕೆ ಅವರೇನೋ ಹಾರಿಕೆಯ ಉತ್ತರ ಕೊಟ್ಟರು. ಬಹುಶಃ ನಾನು ಹಾಗೆ ಕೇಳಿದ್ದು ಅವರಿಗೆ ಇಷ್ಟವಾಗಿಲ್ಲವಿರಬಹುದು. ಕ್ಷಮಿಸುವಂತೆ ಅವರಿಗೆ ಬರೆದಿದ್ದೇನೆ.

ಕ್ಷಮಾಯಾಚನೆ ಏಕೆಂದೇ ನನಗರ್ಥ ಆಗಿಲ್ಲ ಜೋಶಿಯವರೇ.
ಜಿಜ್ಞಾಸುವಿಗೆ ತಿಳಿಯುವ ಆಸೆ ಇರುವುದು ತಪ್ಪೇನಲ್ಲ.
ತಪ್ಪು ಮಾಡದೇ ಕ್ಷಮಾಯಾಚನೆ ಮಾಡುವುದು, ತಪ್ಪು ಮಾಡಿದವ ತಪ್ಪನ್ನು ಅರಿತೂ ಕ್ಷಮಾಯಾಚನೆ ಮಾಡದಿರುವುದು ಎರಡೂ ಒಂದೇ ಎಂದು ನನ್ನ ಅನಿಸಿಕೆ.

-ಆಸು ಹೆಗ್ಡೆ

ಆಸು ಹೆಗ್ಡೆಯವರೇ,

ಅದು ತಪ್ಪಿರಬಹುದು, ಇಲ್ಲದಿರಬಹುದು, it's more of a relative judgement. ನಾನಂತೂ ಸ್ಪಷ್ಟೀಕರಿಸಿ, "ಕೆಣಕುವುದು ನನ್ನ ಉದ್ದೇಶವಾಗಿರಲಿಲ್ಲ, ಹಾಗೇನಾದರೂ ನಿಮಗೆ ಅನಿಸಿದರೆ ಕ್ಷಮಿಸಿ" ಎಂದದ್ದು.

ಶ್ರೀಧರ್ ಅವರು ಪ್ರೊಫೈಲ್‌ನಲ್ಲಿ "ಭಾವಜೀವಿ" ಎಂದು ಘೋಷಿಸಿಕೊಂಡಿದ್ದಾರೆ, ಹಾಗಾಗಿ ನನ್ನಂಥ ಅಭಾವಜೀವಿಗಳ ಮಾತು ಅವರ ಮನನೋಯಿಸುವ ಸಾಧ್ಯತೆಗಳೂ ಇಲ್ಲದಿಲ್ಲ. ಅಸಲಿಗೆ, "Dear Brother" ಸಂಬೋಧನೆಗೆ ಅವರಿಂದ ರಸಾಳವಾದ ಉತ್ತರವನ್ನು ನಾನು ನಿರೀಕ್ಷಿಸಿದ್ದೇ ಅವರ "ಭಾವಜೀವಿ" ಘೋಷಣೆಯ ದೆಸೆಯಿಂದ. ಹಾಗಾಗಿಯೇ ನನಗೆ ಅವರ ಒಂದುಸಾಲಿನ ಉತ್ತರ (ಅದೂ ಹೇಗೆ, ಸಿನೆಮಾ ದೃಶ್ಯಗಳಲ್ಲಿ ’ಕಣ್ಣಲ್ಲಿ ಕಣ್ಣಿಟ್ಟು ಮಾತಾಡಲು ಇಷ್ಟವಾಗದೆ ಬೆನ್ನುತೋರಿಸಿ ಸಂಭಾಷಿಸುವುದಿರುತ್ತದೆಯಲ್ಲ, ವಿಷ್ಣುವರ್ಧನ್ ಚಿತ್ರಗಳಲ್ಲಿ ಇದು ವೆರಿ ಕಾಮನ್) ನನಗೆ ಶುಷ್ಕ (ಒಣ) ಎನಿಸಿತು. ಜತೆಯಲ್ಲೇ, ಶ್ರೀಧರ್ ಅವರಿಗೆ ಬಹುಶಃ ನನ್ನ ಪ್ರಶ್ನೆ ಹಿಡಿಸಲಿಲ್ಲ ಎಂಬ ಸಂದೇಹವೂ ಬಂತು. ಆಪ್ರಕಾರ ಉತ್ತರಿಸಿದೆ. ಅಷ್ಟೇ.
:-)

@ಶ್ರೀವತ್ಸ ಜೋಷಿ, ಆತ್ರಾಡಿ ಸುರೇಶ್,
>>ಪಿತನನ್ನು ಅಣ್ಣ ಎಂದು ಸಂಬೋಧಿಸುವ ಪರಿಪಾಠ ಇದ್ದಿರಬೇಕು.

ನಮ್ಮ ಮನೆಯಲ್ಲಿ ತಂದೆಯನ್ನು "ಅಣ್ಣ" ಅಂತ ಕರೆಯೋದು.

-ಅನಿಲ್.

ಹರಿಹರಪುರಶ್ರೀಧರ್
ನಾವೆಲ್ಲಾ ನಮ್ಮ ಅಪ್ಪನನ್ನು ಅಣ್ಣ ಎಂದೇ ಕರೆಯುತ್ತಿದ್ದೆವು. ನಮ್ಮ ಮಕ್ಕಳು ಮಾತ್ರ ಅಪ್ಪ ಎನ್ನಲು ಶುರು ಮಾಡಿದ್ದಾರೆ.

ಜೋಶಿಯರೇ,
ನಮಸ್ತೆ,
ನನ್ನ ಕೆಲಸದ ಗಡಿಬಿಡಿಯಲ್ಲಿ ನಾನು ಪ್ರಮಾದಮಾಡಿದೆನೇನೋ ಅಂತಾ ಇಂದು ನನಗನ್ನಿಸುತ್ತಿದೆ.ನಿಜವಾಗಿ ಹೇಳುವೆ. ನಾನು ಹಾರಿಕೆ ಉತ್ತರ ಕೊಟ್ಟಿಲ್ಲ. ಅಲ್ಲದೆ ನಾನು ಆ ಕಾಗದವನ್ನು ಪೂರ್ಣವಾಗಿ ಅರ್ಥಮಾಡಿಕೊಂಡು ಓದಿಯೂ ಇಲ್ಲ. ೪೫ ನೇ ಇಸವಿಯ ಪತ್ರ ಅಯಾಚಿತ್ ಕಣ್ಣಿಗೆಬಿತ್ತು ಕೂಡಲೇ ಸಂಪದದಲ್ಲಿ ಹಾಕಿಬಿಟ್ಟೆ. ಪೂರ್ಣ ಓದುವೆ. ನಮ್ಮ ಸೋದರವಾವ ಎಂದರೆ ತಾಯಿಯ ತಮ್ಮನಲ್ಲ. ನಮ್ಮ ತಂದೆಯ ತಂಗಿಯ ಪತಿ. ನಮ್ಮ ತಂದೆಯತಂಗಿ ಸೋದರತ್ತೆ ಆದಮೇಲೆ ಅವರ ಪತಿ ಸೋದರ ಮಾವನಲ್ಲವೇ?. ಇಲ್ಲಿ ಗೊಂದಲಕ್ಕೆ ಇನ್ನೊಂದು ಕಾರಣವಿದೆ. ನಮ್ಮ ಇಬ್ಬರು ಸೋದರತ್ತೆಯರನ್ನು ಅಣ್ಣ-ತಮ್ಮಂದಿರಿಗೆ ಕೊಟ್ಟಿದೆ. ಅವರಲ್ಲಿ ಒಬ್ಬರು ಮಾವ ನಮ್ಮ ಮನೆಯಲ್ಲಿಯೇ [ಅವರ ಹೆಣ್ಣುಕೊಟ್ಟ ಮಾವನ ಮನೆಯಲ್ಲಿ] ಆಸಂದರ್ಭದಲ್ಲಿ ಒಂದೆರಡು ತಿಂಗಳು ಇದ್ದಿರಬಹುದು. ನಮ್ಮಪ್ಪ ಹೇಳುತ್ತಿದ್ದ ಮಾತು ನೆನಪಿದೆ-" ಅವರ ಅಕ್ಕ ತಂಗಿಯರು ಭಾವಂದಿರು ನಮ್ಮ ಮನೆಗೆ ಬಂದರೆ ಕೆಲವು ದಿನಗಳು ಇಲ್ಲೇ ಇರುತ್ತಿದ್ದರೆಂದು. ಇಷ್ಟೆಲ್ಲಾ ಬರೆಯಲು ಕಾರಣ ನಾನು ಹಾರಿಕೆ ಉತ್ತರ ಕೊಟ್ಟಿಲ್ಲವೆಂದು ತಿಳಿಸಲು. ಆದರೂ ನಿಮ್ಮ ಕಾಳಜಿಗೆ ಧನ್ಯವಾದಗಳು. ಈಗಲೂ ಆಫೀಸಿಗೆ ಹೋಗುವ ಗದಿಬಿಡಿಯಲ್ಲಿ ಬರೆದಿರುವೆ. ಇನ್ನೇನು ಪ್ರಮಾದ ವಾಗಿದೆಯೋ! ನಾಕಾಣೆ.

ಹರಿಹರಪುರಶ್ರೀಧರ್

ಶ್ರೀಧರ್ ಅವರಿಗೆ ನಮಸ್ಕಾರ!

ಮೊದಲಾಗಿ ಸವಿವರ ಸ್ಪಷ್ಟೀಕರಣಕ್ಕಾಗಿ ಧನ್ಯವಾದ.

ಆಗಲೇ ಹೇಳಿದಂತೆ ಮತ್ತು ಈಗ ಇನ್ನೊಮ್ಮೆ ಹೇಳುತ್ತಿರುವಂತೆ ಪ್ರಮಾದ ಹುಡುಕಾಟವಾಗಿರಲಿಲ್ಲ ನನ್ನ ಉದ್ದೇಶ. ಆ "Dear Brother" ಎಡ್ರೆಸ್ಸಿಂಗ್ ಹಿಂದೆ ಏನೋ ಆತ್ಮೀಯ ಸ್ವಾರಸ್ಯ ಖಂಡಿತ ಇದೆ ಎಂದು ನನ್ನ "ಸ್ವಾರಸ್ಯಾನ್ವೇಷಣೆಯ ಮೂಗಿಗೆ ಪರಿಮಳ ಬಡಿಯಿತು" :-) ನಿಮ್ಮನ್ನೇ ಕೇಳಿಬಿಡೋಣವೆಂದು ಕೇಳಿದೆ.

ಕೊನೆಗೂ ಸ್ವಾರಸ್ಯವೇ ಇತ್ತಲ್ಲ! ನೀವೀಗ ಅದನ್ನು ತಿಳಿಸಿದರಲ್ಲ! ಅದೇ ಸಂತೋಷ.

ಇನ್ನೊಂದು ವಿಚಿತ್ರವಾದರೂ ಸತ್ಯ ಸಂಗತಿಯನ್ನು ತಿಳಿಸುವೆ, ಇದಕ್ಕೆ ನಿಮ್ಮ ವಿಶ್ಲೇಶಣೆ ನಿರೀಕ್ಷಿಸುವೆ.

ನಮ್ಮ ತಂದೆಯ ಅಕ್ಕ ನಂಜಮ್ಮ. ಇವರ ಮಗಳು ಸೀತಾಲಕ್ಷ್ಮಿ. ನಂಜಮ್ಮನ ತಂಗಿ ಶೇಷಮ್ಮ. ಶೇಷಮ್ಮನ ಪತಿ ಹಿರಣ್ಣಯ್ಯ. ಹಿರಣ್ಣಯ್ಯನ ತಮ್ಮ ಲಿಂಗಪ್ಪಯ್ಯ. ಲಿಂಗಪ್ಪಯ್ಯ ಮದುವೆ ಯಾಗಿರುವುದು ಸೀತಾಲಕ್ಷ್ಮಿಯನ್ನು. ಇದೇ ಸೀತಾಲಕ್ಷ್ಮಿಗೆ ಹಿರಣ್ಣಯ್ಯ ನವರು ಚಿಕ್ಕಪ್ಪ ಅಲ್ವಾ? ಸೀತಾಲಕ್ಷ್ಮಿ ಇವರಿಗೆ ಮಗಳ ಸಮಾನ, ಅಲ್ವಾ? ಇವರ ತಮ್ಮನಿಗೂ ಮಗಳ ಸಮಾನವೇ ಅಲ್ವಾ? ಆದರೂ ಮದುವೆ ಇವರಿಬ್ಬರ ನಡುವೆ ನಡೆದು ಐವತ್ತು ವರ್ಷಗಳಿಗೂ ಜಾಸ್ತಿ ಯಾಯ್ತು.ಇದರ ವಿಷ್ಳೇಷಣೆ......

ಹರಿಹರಪುರಶ್ರೀಧರ್

ಶ್ರೀಧರ್ ಸರ್

ಒಳ್ಳೆಯ ಸಂಗ್ರಹ :)
ನಮ್ಮ ತಂದೆಯವರು ಸಹ ಹೀಗೆ ಅವರಿಗೆ ಬಂದ ಪತ್ರಗಳ ಒಂದು ಬಂಡಲ್ ಅನ್ನೇ ಇಟ್ಟಿದ್ದಾರೆ.

ರಾಕೇಶ್ ಶೆಟ್ಟಿ :)
ಎಲ್ಲರೋಳೊಗೊಂದಾಗು - ಮಂಕು ತಿಮ್ಮ

ಪತ್ರಗಳನ್ನು ಓದುವ ಮಾತಂತಿರಲಿ, ಅವುಗಳನ್ನು ನೋಡುವುದೇ ಒಂದು ರೀತಿಯ ಸಂಭ್ರಮ. ಅದೂ ಇಷ್ಟು ಹಳೆಯದು ಅಂದರೆ ಖುಷಿಯಾಯ್ತು. ಧನ್ಯವಾದಗಳು. ಹಳೆಯ ನೆನಪುಗಳು ಮತ್ತೆ ಮನದಂಗಳದಲ್ಲಿ ಅಡ್ದಾಡಿದವು.
ಪತ್ರಗಳನ್ನು ಸಂಗ್ರಹಿಸಿಡುವ ಹವ್ಯಾಸ ನನ್ನಲ್ಲೂ ಇದೆ. ನಾನು ೧೯೮೦ ರಲ್ಲಿ ಊರು ಬಿಟ್ಟ ಮೇಲೆ, ಪರವೂರಿನಿಂದ ನಮ್ಮ ಮಾತಾಪಿತರಿಗೆ ಬರೆದ (ವರುಷಕ್ಕೊಮ್ಮೆ ರಜೆಯಲ್ಲಿ ಊರಿಗೆ ಹೋದಾಗ ಅವನ್ನೆಲ್ಲಾ ಎತ್ತಿಕೊಂಡು ಬರುತ್ತಿದ್ದೆ) ಮತ್ತು ಅವರಿಂದ ನನಗೆ ಬರುತ್ತಿದ್ದ ಪತ್ರಗಳನ್ನು ಸಂಗ್ರಹಿಸಿ ಇಟ್ಟಿದ್ದೇನೆ. ವಾರಕ್ಕೆ ಎರಡು ಪತ್ರಗಳನ್ನು ಮಾತಾಪಿತರಿಗೆ ಬರೆಯುವ ಕಟ್ಟುನಿಟ್ಟಾದ ನಿಯಮವನ್ನು ನಾನು ಪಾಲಿಸುತ್ತಿದ್ದೆ. ಪತ್ರ ಬರೆಯುವುದಕ್ಕೂ ಉತ್ಸಾಹ ಇತ್ತು. ಓದುವುದಕ್ಕೂ ಇತ್ತು. ಈಗ ಓದುವವರು ಇಲ್ಲ. (http://sampada.net/article/14991)
ಪತ್ರ ಸಂಪರ್ಕ ೧೯೯೦ರ ದಶಕದ ಅಂತ್ಯದಲ್ಲಿ ನಿಂತು ಹೋಯಿತು. ಮತ್ತೇನಿದ್ದರೂ ದೂರವಾಣಿಯನ್ನೇ ಅವಲಂಬಿಸಿಬಿಟ್ಟೆವು. ೨೦೦೨ ರಲ್ಲಿ ಅಮ್ಮನವರಿಗೆ ಒಂದು ಪತ್ರಬರೆಯಲು ಆರಂಭಿಸಿ ಬರೋಬರಿ ೨೨ ಪುಟಗಳಷ್ಟು ಬರೆದು ಮುಗಿಸಿ ಗಣಕಯಂತ್ರದ ಸಹಾಯದಿಂದ ಮುದ್ರಿಸಿ, ರವಾನಿಸಿದ್ದೆ.
-ಆಸು ಹೆಗ್ಡೆ

ಹೆಗ್ಡೆಯವರೇ,
[ಜೋಶಿಯಯವರಿಗೆ ಬರೆದಿರುವ ಪ್ರತಿಕ್ರಿಯೆ ನಿಮ್ಮ ಗಮನಕ್ಕಾಗಿ ಹಾಕಿರುವೆ]

ಜೋಶಿಯರೇ,
ನಮಸ್ತೆ,
ನನ್ನ ಕೆಲಸದ ಗಡಿಬಿಡಿಯಲ್ಲಿ ನಾನು ಪ್ರಮಾದಮಾಡಿದೆನೇನೋ ಅಂತಾ ಇಂದು ನನಗನ್ನಿಸುತ್ತಿದೆ.ನಿಜವಾಗಿ ಹೇಳುವೆ. ನಾನು ಹಾರಿಕೆ ಉತ್ತರ ಕೊಟ್ಟಿಲ್ಲ. ಅಲ್ಲದೆ ನಾನು ಆ ಕಾಗದವನ್ನು ಪೂರ್ಣವಾಗಿ ಅರ್ಥಮಾಡಿಕೊಂಡು ಓದಿಯೂ ಇಲ್ಲ. ೪೫ ನೇ ಇಸವಿಯ ಪತ್ರ ಅಯಾಚಿತ್ ಕಣ್ಣಿಗೆಬಿತ್ತು ಕೂಡಲೇ ಸಂಪದದಲ್ಲಿ ಹಾಕಿಬಿಟ್ಟೆ. ಪೂರ್ಣ ಓದುವೆ. ನಮ್ಮ ಸೋದರವಾವ ಎಂದರೆ ತಾಯಿಯ ತಮ್ಮನಲ್ಲ. ನಮ್ಮ ತಂದೆಯ ತಂಗಿಯ ಪತಿ. ನಮ್ಮ ತಂದೆಯತಂಗಿ ಸೋದರತ್ತೆ ಆದಮೇಲೆ ಅವರ ಪತಿ ಸೋದರ ಮಾವನಲ್ಲವೇ?. ಇಲ್ಲಿ ಗೊಂದಲಕ್ಕೆ ಇನ್ನೊಂದು ಕಾರಣವಿದೆ. ನಮ್ಮ ಇಬ್ಬರು ಸೋದರತ್ತೆಯರನ್ನು ಅಣ್ಣ-ತಮ್ಮಂದಿರಿಗೆ ಕೊಟ್ಟಿದೆ. ಅವರಲ್ಲಿ ಒಬ್ಬರು ಮಾವ ನಮ್ಮ ಮನೆಯಲ್ಲಿಯೇ [ಅವರ ಹೆಣ್ಣುಕೊಟ್ಟ ಮಾವನ ಮನೆಯಲ್ಲಿ] ಆಸಂದರ್ಭದಲ್ಲಿ ಒಂದೆರಡು ತಿಂಗಳು ಇದ್ದಿರಬಹುದು. ನಮ್ಮಪ್ಪ ಹೇಳುತ್ತಿದ್ದ ಮಾತು ನೆನಪಿದೆ-" ಅವರ ಅಕ್ಕ ತಂಗಿಯರು ಭಾವಂದಿರು ನಮ್ಮ ಮನೆಗೆ ಬಂದರೆ ಕೆಲವು ದಿನಗಳು ಇಲ್ಲೇ ಇರುತ್ತಿದ್ದರೆಂದು. ಇಷ್ಟೆಲ್ಲಾ ಬರೆಯಲು ಕಾರಣ ನಾನು ಹಾರಿಕೆ ಉತ್ತರ ಕೊಟ್ಟಿಲ್ಲವೆಂದು ತಿಳಿಸಲು. ಆದರೂ ನಿಮ್ಮ ಕಾಳಜಿಗೆ ಧನ್ಯವಾದಗಳು. ಈಗಲೂ ಆಫೀಸಿಗೆ ಹೋಗುವ ಗದಿಬಿಡಿಯಲ್ಲಿ ಬರೆದಿರುವೆ. ಇನ್ನೇನು ಪ್ರಮಾದ ವಾಗಿದೆಯೋ! ನಾಕಾಣೆ.
ಹರಿಹರಪುರಶ್ರೀಧರ್

ಹರಿಹರಪುರ ಶ್ರೀಧರ್ ರವರೇ,

ಧನ್ಯವಾದಗಳು.
ಪ್ರತಿಕ್ರಿಯೆಯನ್ನು ಎಲ್ಲಿ ಹಾಕಿದರೂ ಪರವಾಗಿಲ್ಲ. ನಮ್ಮ ಗಮನಕ್ಕೆ ಬರುತ್ತದೆ.
ಸೋದರತ್ತೆಯ ಗಂಡ ಸೋದರ ಮಾವ ಆಗ್ತಾರೋ ಅನ್ನುವುದು ಈಗ ಮತ್ತೊಂದು ಜಿಜ್ಞಾಸೆಗೆ ಎಡೆಮಾಡಿದೆ.

"ಎಲ್ಲಿ ಮಂಥನ ನಡೆಯುವುದೋ ಅಲ್ಲಿ ಉಚ್ಚ ಮಟ್ಟದ ಸತ್ಯ ಕೈಗೂಡದಿದ್ದರೂ ಕೆಳಮಟ್ಟದ ಸತ್ಯ ಕೈಗೆ ಹತ್ತುವುದೇ ಹೊರತು ಅಸತ್ಯ ಯಾವಾಗಲೂ ಕೈಗೆ ಬರದು" — ವಿನೋಬಾ ಭಾವೆ (ಖುಷಿ ಆಯ್ತು ಓದಿ, ಸಾಂದರ್ಭಿಕ ಅನ್ನಿಸ್ತು, ಅದಕ್ಕೆ ಅದನ್ನು ಎತ್ತಿ ಹಾಕಿದೆ ಇಲ್ಲಿ)
-ಆಸು ಹೆಗ್ಡೆ

ಸಕ್ಕತ್ತಾಗಿದೆ.ಕಾಮ್ ಗೆ ಹಾಕಿಸಬಹುದು! (ಅದಕ್ಕೇ ಹೇಳೋದು ಓಲ್ಡ್ ಈಸ್ ಗೋಲ್ಡ್ ಅಂತ)

ಧನ್ಯವಾದಗಳು!
ರಸಿಕತೆ - ನನ್ನ ಬ್ಲಾಗ್: ರಂಗುರಂಗಿನರಸಿಕತೆಯಕಡಲು! ಸಂಪದದಲ್ಲಿ

ಡಾ|| ಮೀನಾ ಸುಬ್ಬರಾವ್, ನಮಸ್ತೆ,
ಕಾಲ ಬದಲಾಗುತ್ತಿದೆ. ಬದಲಾವಣೆ ಜಗತ್ತಿನ ನಿಯಮ. ಆದರೆ ಒಂದಿಷ್ಟು ಹಳೆಯದನ್ನು ಸ್ಮರಣೆಯಲ್ಲಿಟ್ಟುಕೊ೦ಡಿರುವ ಆಸೆ. ಅದಕ್ಕಾಗಿ ಯಾವ ಬರಹ ಬರೆದರೂ ಏನೇ ಪ್ರತಿಕ್ರಿಯಿಸಿದರೂ ಒಂದಷ್ಟು ಹಳೆಯ ನೆನಪು ಮಾಡಿಕೊಳ್ಳುತ್ತಿರುವೆ.ಜೀವನದ ಐದು ದಶಕಗಳ ಅನುಭವವೇ ನನ್ನ ಬಂಡವಾಳ.ಮುಂದಿನ ಪೀಳಿಗೆಗೆ ಒಂದಿಷ್ಟು ನೆನಪನ್ನಾದರೂ ಉಳಿಸೋಣ. ಅದಕ್ಕೆ ಎಲ್ಲಾ ಸಂಪದಿಗರ ಸಹಕಾರವೂ ಬೇಕು.ಸಂಪದದ ಸಂಪರ್ಕ ಸಮಾಧಾನ ತಂದಿದೆ. ಮುಂಗಡವಾಗಿ ಸಂಕ್ರಾಂತಿಯ ಶುಭಾಷಯಗಳು.

ಹರಿಹರಪುರಶ್ರೀಧರ್