ಪೂಜೆಗೆ ಬೇಕಾಗುವ ೮ ಹೂವುಗಳು

To prevent automated spam submissions leave this field empty.

ಅಹಿಂಸಾ ಪ್ರಥಮಂ ಪುಷ್ಪಂ ಪುಷ್ಪಮಿನ್ದ್ರಿಯ ನಿಗ್ರಹಃ|

ಸರ್ವಭೂತದಯಾಪುಷ್ಪಂ ಸತ್ಯಪುಷ್ಪಂ ವಿಶೇಷತಃ||

ಜ್ಞಾನಪುಷ್ಪಂ ತಪಃಪುಷ್ಪಂ ಕ್ರಿಯಾಪುಷ್ಪಂ ತಥೈವ ಚ|

ಧ್ಯಾನಂಚೈವಾಷ್ಟಮಂ ಪುಷ್ಪಂ ಏಭಿಸ್ತುಷ್ಯತಿ ಕೇಶವಃ||

೧. ಅಹಿಂಸೆ -ಯಾರನ್ನೂ ಹಿಂಸಿಸದಿರುವುದು.

೨. ಇಂದ್ರಿಯ ನಿಗ್ರಹ - ಎಲ್ಲವನ್ನು ಬಯಸುವ ಇಂದ್ರಿಯಗಳಿಗೆ ಸೂಕ್ತ ಕಡಿವಾಣ.

೩. ಸರ್ವಭೂತದಯೆ - ಎಲ್ಲಾ ಜೀವಿಗಳಲ್ಲಿ ದಯೆ.

೪. ಸತ್ಯ - ಸತ್ಯವನ್ನೇ ನುಡಿಯುವುದು.

೫. ಜ್ಞಾನ - ಒಳ್ಳೆಯ ತಿಳುವಳಿಕೆ.

೬. ತಪಸ್ಸು - ಉತ್ತಮ ಚಿಂತನೆ.

೭. ಕ್ರಿಯೆ - ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳುವುದು, ಉತ್ತಮ ಚಿಂತನೆಗಳನ್ನು ಕಾರ್ಯರೂಪಕ್ಕೆ ತರುವುದು.

೮. ಧ್ಯಾನ - ಅನುಕ್ಷಣ ಪರಮಾತ್ಮನ ಇರವನ್ನು ಅನುಭವಿಸುವುದು.

ಅನುದಿನವೂ ಈ ಹೂವುಗಳಿಂದ ದೇವರನ್ನು ಪೂಜಿಸಿರಿ. ಈ ಶ್ಲೋಕದ ಮೂಲ ಶ್ರೀಮದ್ಭಾಗವತ ಇರಬೆಕು, ಸರಿಯಾಗಿ ಗೊತ್ತಿಲ್ಲ. ನನಗೆ ಹೊಳೆದಂತೆ ಸ್ಥೂಲಾರ್ಥ ಬರೆದಿದ್ದೇನೆ, ತಪ್ಪಿದ್ದರೆ ಸಂಪದಿಗರು ತಿಳಿಸಬೇಕು.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಿಲ್ಲಬೇಕಿಲ್ಲಿ
ನಿಲ್ಲಲೇಬೇಕಿಲ್ಲಿ
ಬದುಕಬೇಕಿಲ್ಲಿ
ಬದುಕಲೆಬೇಕಿಲ್ಲಿ
ತಂಪ ನೀಡೋ ಮರದ್ಹಾಂಗ
ಯಾರಿಗೂ ನೋವ ಕೊಡದ
ತನಗೆ ತಾನೆ ನಿಂತ್ಹಾಂಗ
ಮನುಷ್ಯಾ ನಿನಗಾ ಅದ
ಎಲ್ಲರ್ಹಂಗಾ ಐದು ಅಂಗ
ಬಿಡಬ್ಯಾಡ ನಿನಗ ತಿಳಿದ್ಹಾಂಗ
ಯೋಚಿಸಿ ಇಡೋ ನೀ
ಕೊಟ್ಯಾನ ತಳಿ ಆ ಬೊಮ್ಮ
ನಿನ್ನವರಣ ಮಾತ್ರ
ಪ್ರೀತಿ ಮಾದಬ್ಯಾಡೋ
ನಿನ್ನ ಜೋಡಿ ಇಡೀ
ಭೂಮಿ ಅದ ತಿಳಕೋ
ಸುಳ್ಳಾಡಿದರ ನಿನಗಾ
ತೊಂದರಿ,ಬರಕೋ
ಬರೀ ಪುಸ್ತಕ್ ಓದಿ ಬರೆದು
ಬರಂಗಿಲ್ಲ ಬುಧ್ಧಿ
ಮಂದೀ ಕೂಡಿ ಓಡಾಡಿ
ಬರತದ, ಅವರ ಜೋಡಿ
ಒಳ್ಳೆ ಯೋಚನಾ ಮಾಡು
ಅದರ ಮ್ಯಾಲಿ ಗಮನಾ ಕೊಟ್ಟು
ಕೆಲಸ ಮಾಡೋ
ಭಗವಂತಾ ಕಾಣ್ತಾನ.

ನೀವು ಹೇಳಿದ ಎಂಟು ಪುಷ್ಪಗಳು ನಮ್ಮಲ್ಲಿದ್ದರೆ ?????
ಹರೀಶ್ ಆತ್ರೇಯ

ಚೆನ್ನಾಗಿದೆ, ಆದ್ರೆ ಇವಿಷ್ಟು ಸಾಲು ಅರ್ಥ ಅಗಿಲ್ಲಾ, ದಯವಿಟ್ಟು ತಿಳಿಸಿ
ಮನುಷ್ಯಾ ನಿನಗಾ ಅದ
ಎಲ್ಲರ್ಹಂಗಾ ಐದು ಅಂಗ
ಬಿಡಬ್ಯಾಡ ನಿನಗ ತಿಳಿದ್ಹಾಂಗ
ಯೋಚಿಸಿ ಇಡೋ ನೀ
ಕೊಟ್ಯಾನ ತಳಿ ಆ ಬೊಮ್ಮ

ಆತ್ಮೀಯ
ಇತರೆ ಪ್ರಾಣಿಗಳಿಗೂ ಇರುವಂತೆ ಮನುಷ್ಯನಿಗೂ ಪಂಚೇಂದ್ರಿಯಗಳು ಇವೆ ಅವೇ ಆ ಐದು ಅಂಗಗಳು ಅವುಗಳ ನಿಗ್ರಹ ಅವಶ್ಯ ಅವುಗಳನ್ನು ಯೋಚಿಸಿ ಉಪಯೋಗಿಸು ಅದಕ್ಕೆಂದೇ ಬ್ರಹ್ಮ ತಲೆ(ಬುಧ್ಧಿ )ಕೊಟ್ಟಿದ್ದಾನೆ ಎಂಬುದನ್ನೂ ಹೇಳಲು ಪ್ರಯತ್ನ ಪಟ್ಟಿದ್ದೇನೆ
ತಲಿ ಕ್ಷಮಿಸಿ ತಳಿ ಆಗಿದೆ
ಹರೀಶ್ ಆತ್ರೇಯ

ಹೀಗೆಯೇ ಇನ್ನೂ ಬರೆಯಿರಿ
ಶುಭಂ
------------------------------------------------------------------------
ಜ್ಞಾ- ಅಕ್ಷರ ಬರೆಯುವುದು ಕಷ್ಟವಾಯಿತಲ್ಲವೇ?
j ಒತ್ತಿ ನಂತರ ಶಿಫ್ಟ್ ಮೇಲೆ ಕೈ ಇಟ್ಟು ~ j ಒತ್ತಿ A ಒಮ್ಮೆ ಒತ್ತಿದರೆ ಜ್ಞ ಆಗುತ್ತೆ, ಎರಡು ಭಾರಿ ಒತ್ತಿದರೆ ಜ್ಞಾ ಆಗುತ್ತೆ.
ಶಿಫ್ಟ್ ಒತ್ತಿ ಬರೆಯುವಾಗ ಹುಷಾರಾಗಿರಬೇಕು.
ಹೇಳು, ಕೊಳೆ, ಇತ್ಯಾದಿ ಪದಗಳನ್ನು ಬರೆಯುವಾಗ ಶಿಫ್ಟ್ ಮೇಲೆನ ಒತ್ತಡ ಕಡಿಮೆಯಾದರೆ ನಮ್ಮ ಒತ್ತಡವನ್ನು ಜಾಸ್ತಿ ಮಾಡುತ್ತವೆ, ಜೋಪಾನ.
ಪಾಠ ಹೇಳುತ್ತಿಲ್ಲ. ಬೇಸರಿಸದಿರಿ. ನನಗಾಗಿರುವ ಅನುಭವ ಹೇಳಿದೆ[ಇಲ್ಲಿ ಮತ್ತೆ ಹುಷಾರು] ಅಷ್ಟೆ.

ಖಂಡಿತ ಬೇಸರವಿಲ್ಲ. ತುಂಬ ಧನ್ಯವಾದಗಳು.
ನಾನು ಜ್ಞಾನ ಎಂದೇ ಬರೆದೆ ಅಂತ ತಿಳಿದಿದ್ದೆ .
ಈಗ ನಿಮ್ಮ ಪ್ರತಿಕ್ರಿಯೆ ನೋಡಿ ಗಮನಿಸಿದಾಗ ತಪ್ಪಾಗಿದ್ದು ಗೊತ್ತಾಯಿತು.