ಮನೆ ಸಾಮನು

To prevent automated spam submissions leave this field empty.

ಮನೆ ಬಾಗಿಲು ಬೀಗ ಹಾಕಿ ಹೊರಗೆ ಹೊರಟ ಮೇಲೆ ಮನೆಯಲ್ಲಿ ಏನು ನೆಡೆಯುತ್ತದೆ ನಿಮಗೆ ಗೊತ್ತೇ? ನಿಮಗೆ ಗೊತ್ತಿಲ್ಲ ಅಂದರೆ ಮೊದಲು ಓದಿ !!

ಹೀಗೊಂದೆಡೆ ಮನೆಯವರೆಲ್ಲ ಎಲ್ಲೋ ಹೊರಗೆ ಹೋಗಿದ್ದರು. ಅವರೆಲ್ಲ ಹೋದ ಮೇಲೆ, ಮನೆಯಲ್ಲಿರುವ ಸಾಮನುಗಳಿಗೇನು ಕೆಲಸ. ಸ್ವಲ್ಪ ಹೊತ್ತು ಮಾತು ಕಥೆಯಾಡುತ್ತಿದ್ದಂತೆ, ಎಲ್ಲರೂ ರಸಮಂಜರಿ ಕಾರ್ಯಕ್ರಮ ಮಾಡೋಣ ಎಂದು ನಿರ್ಧರಿಸಿದರು. ಕಾರ್ಯಕ್ರಮದ ನಿರ್ವಹಣೆ ಗೋಡೆಗಂಟಿದ್ದ ಧ್ವನಿವರ್ಧಕದ್ದಾಗಿತ್ತು. ಎಲ್ಲರನ್ನೂ ಕಾರ್ಯಕ್ರಮಕ್ಕೆ ಸ್ವಾಗತಿಸಿ, ಒಬ್ಬರು ಹಾಡಿದ್ದನ್ನು ಮತ್ತೊಬ್ಬರು ಹಾಡುವ ಹಾಗಿಲ್ಲ ಎಂಬ ಸಾಮಾನ್ಯ ಕಟ್ಟಳೆಗಳನ್ನು ಎಲ್ಲರಿಗೂ ವಿವರಿಸಿ, ತಾನು ಹಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿತು:

{ ಹಾಡಿನ ಒಂದು ಸಾಲನ್ನು ಮಾತ್ರ ಹಾಕಿದ್ದೇನೆ}

ಧ್ವನಿವರ್ಧಕ: "ನಾ ಹಾಡಬೇಕೇ, ನೀ ಕೇಳಬೇಕೇ, ತಾಳ ಹಾಕಿದರೆ ನಾ ಹಾಡುವೆ"

ಸೋಫ಼ಾ: "ತೂಕಡಿಸಿ ತೂಕಡಿಸಿ ಬೀಳದಿರುವ ತಮ್ಮಾ, ನನ್ನ ತಮ್ಮಾ, ಮಂಕುತಿಮ್ಮಾ"

ಛತ್ರಿ : "ಬಿಸಿಲಾದರೇನು, ಮಳೆಯಾದರೇನೂ, ಜೊತೆಯಾಗಿ ಎಂದೂ ನಾನಿಲ್ಲವೇನೂ, ನೀ ನನ್ನ ಜೀವಾ ಎಂದಿಗೂ"

ಹಾಲೂಡಿಸುವ ಬಾಟಲ್: "ಜೋಜೋ ಲಾಲಿ ನಾ ಹಾಡುವೆ, ಚಿನ್ನಾ ನಿನ್ನಾ ಮುದ್ದಾಡುವೆ"

ಗೋಡೆ ಗಡಿಯಾರ : "ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಬರುತಿದೆ ಕಾಲ, ಅರಿವುದು ನಿನ್ನಾ ಮೋಸದ ಜಾಲ, ವೇಷವ ಕಳಚಿ ಹಾಕಿದ ಮೇಲೆ ಗೌರವ ನಿನಗಿಲ್ಲ"

ಕನ್ನಡಿ: "ಚೆಲುವೆಯೇ ನಿನ್ನ ನೋಡಲು, ಮಾತುಗಳು ಬರದವನು, ಬರೆಯುತಾ ಹೊಸ ಕವಿತೆಯಾ ಹಾಡುವ ನೋಡಿ ಅಂದವನೂ"

ಮಾಸಪತ್ರಿಕೆ: "ಇದು ಯಾರು ಬರೆದ ಕಥೆಯೋ, ನನಗಾಗಿ ತಂದ ವ್ಯಥೆಯೋ, ಕೊನೆ ಹೇಗೋ ಅರಿಯಲಾರೆ, ಮರೆಯಾಗಿ ಹೋಗಲಾರೆ"

ಮುರುಕಲು ಬೊಂಬೆ: "ಆಡಿಸಿದಾತ ಬೇಸರ ಮೂಡಿ, ಆಟ ಮುಗಿಸಿದಾ, ಸೂತ್ರವ ಹರಿದ, ಬೊಂಬೆಯ ಮುರಿದಾ, ಮಣ್ಣಾಗಿಸಿದಾ"

ಬಾಗಿಲ ಬಳಿಯ ಮ್ಯಾಟ್: "ನೀನಾ ಭಗವಂತಾ, ಜಗಕುಪಕರಿಸಿ, ನನಗಪಕರಿಸೋ ಜಗದೋದ್ಧಾರಕ ನೀನೇನಾ"

ಕರೆಗಂಟೆ: "ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ, ಕೂಗಿದರು ದನಿ ಕೇಳಲಿಲ್ಲವೇ, ನರಹರಿಯೆ ಬಾಗಿಲನು ತೆರೆದೂ"

ದೂರವಾಣಿ: "ಕರೆದರೂ ಕೇಳದೇ, ಪರಶಿವನೇ ಏಕೇ ನನ್ನಲ್ಲೀ ಈ ಮೌನಾ"

ಕಂಪ್ಯೂಟರ್: "ನನ್ನ ನೀನು ಗೆಲ್ಲಲಾರೆ, ತಿಳಿದೂ ತಿಳಿದೂ ಛಲವೇತಕೇ, ಎಲ್ಲರೆದುರು ಮಾನ ಹೋಗಿ ಕೊನೆಗೇ, ಮನೆಗೆ ಸೇರುವೇ"

ಖಾಲಿ ಡಬರಿ: "ನಾದಮಯಾ, ಈ ಲೋಕವೆಲ್ಲಾ, ನಾದಮಯಾ"

ಟಾರ್ಚ್: "ದಾರಿ ಕಾಣದಾಗಿದೆ ರಾಘವೇಂದ್ರನೇ, ಬೆಳಕ ತೋರಿ ನೆಡೆಸು ಬಾ ಯೋಗಿವರ್ಯನೇ"

ಫ಼ೆವಿಕಾಲ್: "ಈ ಬಂಧನಾ, ಜನುಮ ಜನುಮದಾ ಅನುಬಂಧನಾ, ಈ ಪ್ರೇಮ ಸಂದೇಶ"

ಇಸ್ಪೀಟ್ ಎಲೆ: "ಆಡೂ ಆಟ ಆಡೂ, ನೀ ಆಡು ಆಡು ಆಡಿ ನೋಡು, ಏ ರಾಜ, ಏ ರಾಣಿ, ಏ ಜಾಕಿ, ಓ ಜೋಕರ್, ಎದುರಲ್ಲಿ ನಿಗಾ ಇಡು"

ಮಂಚ: "ಚಂದಿರ ತಂದಾ ಹುಣ್ಣಿಮೆ ರಾತ್ರಿ, ಗಾಳಿಯು ತಂದಾ ತಣ್ಣನೆ ರಾತ್ರಿ, ಹಾಯಾಗಿ ನಾ ಮಲಗಿರಲೂ, ಆ ದಿಂಬು ಹಾಸಿಗೆ ನನ್ನ ನೂಕಿತು"

ನಲ್ಲಿ: "ಕನ್ನಡ ನಾಡಿನ ಜೀವ ನದಿ ಈ ಕಾವೇರಿ, ಈ ವಯ್ಯಾರಿ, "

ಬೂಟ್ಸ್-ಕಾಲುಚೀಲ: "ನಾನೂ ನೀನೂ ಒಂದಾದ ಮೇಲೆ, ಹೀಗೇಕೆ ನನ್ನನ್ನೇ ನೋಡುವೇ, "

ಈರುಳ್ಳಿ: "ಕಣ್ಣೀರ ಧಾರೆ, ಇದೇಕೆ, ಇದೇಕೆ, ನನ್ನೊಲವಿನಾ ಹೂವೆ, ಈ ಶೋಕವೇಕೆ"

ಕಸದಬುಟ್ಟಿಯ ಕಸ: "ನನ್ನ ಕಥೆಗೆ ಅಂತ್ಯ ಬರೆದು, ಕವಿಯು ಹರಸಿದ ನನ್ನನ್ನೂ"

{ಮನೆಯವರೆಲ್ಲ ಹಿಂದಿರುಗಿ ಬರುತ್ತಿರುವುದನ್ನು ಕಂಡು, ಆ ವಿಷಯವನ್ನು ಎಲ್ಲರಿಗೂ ಬಿತ್ತರಿಸಿತು ಮುಂಬಾಗಿಲು. ತಕ್ಷಣವೇ ಕಾರ್ಯಕ್ರಮವನ್ನು ನಿಲ್ಲಿಸಲಾಯಿತು. ಮುಂದಿನ ಕಾರ್ಯಕ್ರಮಕ್ಕೆ ಮಿಕ್ಕಿರುವ ಇನ್ನೂ ಹಲವಾರು ವಸ್ತುಗಳು ಯಾವ ಹಾಡು ಹಾಡಬಹುದು ಎಂದು ನೀವು ಬರೆದು ತಿಳಿಸುತ್ತೀರಾ ತಾನೇ ?}

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಚೆನ್ನಾಗಿದೆ ಶ್ರೀನಾಥ್,
ನನ್ಗೂ ಇದನ್ನು ಬರೆಯುವ ಪ್ಲಾನ್ ಇತ್ತು, ನೀವು ಬರೆದಿರಿ . ನನಗೆ ಗೊತ್ತಿರುವುದನ್ನು ಜೊತೆಗೆ ಸೇರಿಸಲು ಪ್ರಯತ್ನಿಸುತ್ತೇನೆ(ನೆನಪಿಗೆ ಬಂದಾಗ)
ಮೀನಾ

ಧನ್ಯವಾದಗಳು.. ಮಾತ್ತೊಂದಿಷ್ಟು ಹಾಡುಗಳ ನಿರೀಕ್ಷೆಯಲ್ಲಿ...
ಶ್ರೀನಾಥ್

ಶ್ರೀನಾಥ್,

ನಿಮ್ಮ creativity ಸಕ್ಕತಾಗಿದೆ. :D

ಹೀಗೇ ಬರೆಯುತ್ತಿರಿ.

-ಅನಿಲ್.

ಕರೆಂಟ್ : ಬಂತು ಬಂತು ಕರೆಂಟ್ ಬಂತು (ಕರೆಂಟ್ ಹೋಗಿ ಬಂದ ಮೇಲೆ) :-)

ಮನೆ: ಮನೆಯೆ ಮಂತ್ರಾಲಯ ಮನಸೇ ದೇವಾಲಯ...
ಬಾಗಿಲು: ತೆರೆದಿದೆ ಮನೆ ಓ ಬಾ ಅತಿಥಿ..ಹೊಸ ಬೆಳಕಿನ ಹೊಸ ದಾರಿಯಾ...

ಒಲುಮೆಯಿಂದ,
ಗಿರೀಶ ರಾಜನಾಳ.

ಶ್ರೀನಾಥ್

ಇದು ಓಕೆ ನಾ.....
ಕುಕ್ಕರ್ : ಕುಹೂ ಕುಹೂ ಹಾಡುವ ಕೋಗಿಲೆಯೆ ಅರಿತೆಯೇ ನಿನ್ನ್ ಸಂದೇಶ, ಅನ್ನವು ಆಗಿದೆ ಎಂದಿರಲೂ ಹೊಟ್ಟೆಗೆ ಏನೋ ಸಂತೋಷ
:)

ಅರವಿಂದ್

ಮನೆಯಲ್ಲಿ ಯಾರೂ ಇಲ್ಲ ಎಂದು ಗೊತ್ತಾಗಿ, ಗವಾಕ್ಷಿಯ ಮೂಲಕ ಪ್ರವೇಶಿಸಿದ ಪಿಶಾಚಿ:

"ರಾ ರಾ ಸರಸಕು ರಾರಾ...." ಹಾಡು ಮಾತ್ರವಲ್ಲ, ಒಂಚೂರು ಡಯಲಾಗ್ ಸಹ ಉದುರಿಸಿತು: "ನೇನುರಾ ನಾಗವಲ್ಲಿನಿ... ಚಂಪೇಸ್ತಾನು!"

ಬಹುಶ: ಆಗ ಇತರೆ ಸಾಮಾನುಗಳು ಹೀಗೆ ಕೇಳಬಹುದು
"ಯಾರು ಯಾರು ನೀ ಯಾರು, ಎಲ್ಲಿಂದ ಬಂದೆ ಯಾವಾರು" ಅಂತ
ಧನ್ಯವಾದಗಳು..

ಮತ್ಯಾವುದೋ ಸಾಮಾನಿಗೆ ಅಲ್ಲೇ ಉಚ್ಚೆಯಾಗಿ (pun not at all intended, as you can see, I have started from left margin itself) ಅದು ಹೇಳಿದ ಹಾಡು:

"ಹೃದಯದಲಿ ಇದೇನಿದೂ... ನದಿಯೊಂದು ಓಡಿದೆ...."

ಚೆನ್ನಾಗಿದೆ
ಇದಕ್ಕೊಂದು ಸೇರ್ಪಡೆ
ಟಿ.ವಿ: ನೋಡಿ ನೋಡಿ ನೋಡಿ ನೋಡಿ ಎಲ್ಲಾ ನೋಡಿ ಒಮ್ಮೆ ನೋಡಿ,
ಫ್ಯಾನ್: ತಂಪಾದ ಗಾಳಿ ಬೀಸಲಿ, ಇಂಪಾದ ರಾಗ ಹಾಡಲಿ.
ಟ್ಯೂಬ್‌ಲೈಟ್: ಹೊಸ ಬೆಳಕು ಮೂಡುತಿದೆ, ಹೊಸಬೆಳಕು ಮೂಡುತಿದೆ, ಬಂಗಾರದ ಜೊತೆಯಾಗಿದೆ, ಅತ್ತ ಇತ್ತಾ ಸುತ್ತಾ ಮುತ್ತ ಚೆಲ್ಲುತಾ ಕಾಂತಿಯ
ಫೋನ್: ಟೆಲಿಫೋನ್ ಗೆಳತಿ ವೆಲ್ಕಮ್ ವೆಲ್ಕಮ್ ಈ ಹೃದಯವೇ ನಿನಗೆ ಕಿಂಗ್ಡಮ್ ಕಿಂಗ್ಡಮ್

>>ನೋಡಿ ನೋಡಿ ನೋಡಿ ನೋಡಿ ಎಲ್ಲಾ ನೋಡಿ ಒಮ್ಮೆ ನೋಡಿ,

ರೂಪ,
ಇದು ಯಾವ ಚಿತ್ರದ ಹಾಡು?

ನಾನು ಕೇಳಿಲ್ಲ, ಅದಕ್ಕೆ ನಿಮ್ಮನ್ನು ಕೇಳ್ತಿದ್ದೀನಿ.

-ಅನಿಲ್.