ಒ೦ದು ಚಿಟ್ಟೆಯ ಕಥೆ

To prevent automated spam submissions leave this field empty.

ಒಮ್ಮೆ ಒಬ್ಬ ಮನುಷ್ಯನಿಗೆ ಒ೦ದು ಚಿಟ್ಟೆಯ ಗೂಡು ಕಣ್ಣಿಗೆ ಬಿತ್ತು. ಒ೦ದು ದಿನ ಅದರಲ್ಲಿ ರ೦ಧ್ರವೊ೦ದು ಕಾಣಿಸಿತು. ಅದರೊಳಗಿನ ಚಿಟ್ಟೆಯು ಆ ರ೦ಧ್ರದಿ೦ದ ತನ್ನ ದೇಹವನ್ನು ತೂರಿಸಿಕೊ೦ಡು ಹೊರಬರಲು ಗ೦ಟೆಗಟ್ಟಲೆ ಹರಸಾಹಸ ಪಡುತ್ತಿರುವುದನ್ನು ಅವನು ಗಮನಿಸಿದ. ನ೦ತರ ಅದು ತನ್ನ ಪ್ರಯತ್ನವನ್ನು ನಿಲ್ಲಿಸಿದ೦ತೆ ಕಾಣಿಸಿತು. ಇನ್ನು ಹೊರಬರುವ ತನ್ನೆಲ್ಲ ಪ್ರಯತ್ನ ಮಾಡಿ ಮತ್ತೆ ಮು೦ದೆ ಹೊರಹೋಗಲು ಅದಕ್ಕೆ ಸಾಧ್ಯವಾಗದಾಯಿತೇನೋ ಎ೦ದು ಕಾಣಿಸಿತು.
ಆ ಮನುಷ್ಯನಿಗೆ ಪಾಪ ಅನ್ನಿಸಿ ಅದಕ್ಕೆ ಸ್ವಲ್ಪ ಸಹಾಯ ಮಾಡೋಣ ಎನಿಸಿತು. ಒ೦ದು ಕತ್ತರಿ ತೆಗೆದುಕೊ೦ಡು ಗೂಡಿನ ಉಳಿದ ಭಾಗವನ್ನು ಕತ್ತರಿಸಿದ.
ಚಿಟ್ಟೆ ಸುಲಭವಾಗಿ ಹೊರಬ೦ತು. ಆದರೆ ಅದರ ದೇಹ ಊದಿಕೊ೦ಡಿತ್ತು, ಅದರ ರೆಕ್ಕೆಗಳು ಸಣ್ಣಗೆ ಕ್ಷೀಣಿಸಿ ಮುದುಡಿಕೊ೦ಡಿದ್ದವು.
ಆ ಮನುಷ್ಯ ನಿರೀಕ್ಷಿಸಿದ; ಇನ್ನೇನು ಯಾವಾಗ ಬೇಕಾದರೂ ಆ ಚಿಟ್ಟೆ ತನ್ನ ಊದಿದ ದೇಹವನ್ನು ಕುಗ್ಗಿಸಿಕೊ೦ಡು ಅದರ ರೆಕ್ಕೆಗಳನ್ನು ಹಿಗ್ಗಿಸಿಕೊ೦ಡು ಹಾರಿ ಹೋಗಬಹುದು ಎ೦ದುಕೊ೦ಡ.
ಊಹೂ! ತಾನೆಣಿಸಿದ ಯಾವುದೂ ನಡೆಯಲಿಲ್ಲ.! ನಿಜವಾಗಿ ಹೇಳಬೇಕೆ೦ದರೆ ಚಿಟ್ಟೆ ತನ್ನ ಉಳಿದ ಇಡೀ ಜೀವನವನ್ನು ತನ್ನ ಊದಿಕೊ೦ಡ ಶರೀರ, ಮುದುಡಿಕೊ೦ಡ ರೆಕ್ಕೆಗಳಿ೦ದ ತೆವಳಿಯೇ ಸಾಗಿಸಬೇಕಾಯಿತು. ಅದು ಎ೦ದಿಗೂ ಹಾರಲಾಗಲಿಲ್ಲ!
ತನ್ನ ಅನುಕ೦ಪ ಹಾಗು ಆತುರದಲ್ಲಿ ಆ ಮನುಷ್ಯ ಅರ್ಥಮಾಡಿಕೊಳ್ಳಲಾರದ ಸತ್ಯವೊ೦ದಿತ್ತು. ಆ ಸೀಮಿತ ಗೂಡಿನೊಳಗೇ ಆ ಚಿಟ್ಟೆ ತನ್ನ ಉಬ್ಬಿದ ಶರೀರವನ್ನು ಕುಗ್ಗಿಸಿಕೊ೦ಡು ಸತತ ಸ೦ಘರ್ಷ ಮಾಡಿ ಆ ಶರೀರದಲ್ಲಿನ ದ್ರವವು ಆ ರೆಕ್ಕೆಗೆ ಹಾಯುವ೦ತೆ ಮಾಡುವ ಭಗವ೦ತನ ನಿಯಮವನ್ನು ಆತ ಕಾಣದಾದ. ತನ್ನ ರೆಕ್ಕೆಗೆ ತ್ರಾಣ ಬ೦ದ ನ೦ತರ ಆ ಗೂಡನ್ನು ಭೇದಿಸಿ ಹೊರ ಹಾರಿಹೋಗುವ ಸ್ವಾತ೦ತ್ರ್ಯದ ಗುಟ್ಟನ್ನು ಅರಿಯದಾದ !!

(ಹಲವು ವೇಳೆ ನಮ್ಮ ಬದುಕಿನಲ್ಲಿ ನಮಗೆ ಅಗತ್ಯವಿರುವುದು, ಅನಿವಾರ್ಯವಿರುವುದು ಸ೦ಘರ್ಷಗಳು. ಯಾವ ಅಡಚಣೆಯಿಲ್ಲದೆ ನಮ್ಮ ಜೀವನ ಸಾಗುವ೦ತೆ ಭಗವ೦ತ ನಿರ್ಣಯ ಮಾಡಿದ್ದರೆ ನಾವು ಕು೦ಟರಾಗಿರುತ್ತಿದ್ದೆವು.
ನಾವೀಗ ಇರುವಷ್ಟು ಎ೦ದಿಗೂ ಬಲಶಾಲಿಯಾಗಿರುತ್ತಿರಲಿಲ್ಲವೇನೋ? ಎ೦ದಿಗೂ ಹಾರುತ್ತಿರಲಿಲ್ಲವೇನೋ?)

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಹೌದು! ಕೆಲವೊಮ್ಮೆ ನಾವು ಮಾಡುವ ಸಹಾಯ, ನಮಗರಿವಿಲ್ಲದೇ ಅಪಾಯಕ್ಕೆ ನಾಂದಿಯಾಗುತ್ತೆ.

ಬಶೀರ್ ಕೊಡಗು, ದುಬೈ

ಮಾಡುವ ಉಪಕಾರವನ್ನೂ ಸಹಾವಿವೇಚನೆಯಿಂದ ಯೋಚಿಸಿ ಮಾಡದಿದ್ದರೆ ಆಗ ಉಪಕಾರಕ್ಕಿಂತ ಅಪಕಾರವೇನೇ. ಸುಂದರವಾದ ಕಥೆ.
ಶೈಲಾಸ್ವಾಮಿ

ಹೌದು ಒಮ್ಮೊಮ್ಮೆ ನಾವು ತೋರುವ ಔದಾರ್ಯವೂ ಉರುಳಾಗಿ ಪರಿಣಮಿಸುತ್ತದೆ. ಅದು ಅವಿವೇಕದಲ್ಲಿ ಪರ್ಯಾವಸಾನವಾಗುತ್ತದೆ. ನಾವು ತೋರುವ ಪ್ರತಿ ಔದಾರ್ಯ, ಉಪಕಾರದ ಹಿ೦ದೆ ಜಾಗೃತಿಯ ಅಗತ್ಯವಿದೆ. ಧನ್ಯವಾದಗಳು ಬಶೀರ್, ಶೈಲಾಸ್ವಾಮಿಯವರೇ.

ಉದ್ಧರೇದಾತ್ಮನಾತ್ಮಾನಾಮ್
ಆತ್ಮಾನಮವಸಾಧಯೇತ್
ಆತ್ಮೈವಹ್ಯಾತ್ಮನೋ ಬಂಧು:
ಆತ್ಮೈವರಿಪುರಾತ್ಮನ:||

"ತನ್ನನ್ನು ತಾನೇ ಉದ್ಧರಿಸಿಕೊಳ್ಳಬೇಕು" ಅನ್ಯರಿಂದಲ್ಲ ಎಂಬುದನ್ನೂ ಇಲ್ಲಿ ಕಾಣಬಹುದಲ್ಲವೇ?

ಖ೦ಡಿತ ಸತ್ಯವಾದ ಮಾತು ಶ್ರೀಧರ್. ನಿನಗೆ ನೀನೇ ಬೆಳಕಾಗು ಎನ್ನುವ ಬುದ್ಧನ ಮಾತೂ ಇಲ್ಲಿ ಉಲ್ಲೇಖನೀಯ.

ನಿಜವಾಗಿಯೂ ಸ೦ಘರ್ಷಗಳು ಬಾಳಿನಲ್ಲಿ ಅವಶ್ಯಕ. ಇಲ್ಲೂ ಕೂಡ ಎಲ್ಲರೂ ತಮ್ಮದೇ ಆದ ಚಿಟ್ಟೆಯ ಕಥೆಯನ್ನು ಹೊಂದಿರುತ್ತಾರೆ...
ನಾನು ನೊಡಿದ ಹಾಗೆ Its Strange " Struggle makes the Character "