ಮುಸುಕಿನ ಜೋಳವನ್ನು ಪಾಪ್ ಕಾರ್ನ್ ಆಗಿಸುವ ಮೊಬೈಲುಗಳು

To prevent automated spam submissions leave this field empty.

ಗೆಳೆಯರೆ,
ಈ ಹಿಂದೆ ನಾನು ಮೊಟ್ಟೆಯನ್ನು ಬೇಯಿಸುವ ಮೊಬೈಲಿನ ಬಗ್ಗೆ ಬಗ್ಗೆ ಬರೆದಿದ್ದೆ. ಆಗ ಬಹಳಷ್ತು ಜನರು ಅದು ಅಸಾಧ್ಯ ಎಂದು ಸಾಧಾರವಾಗಿ ಬರೆದಿದ್ದರು. ಈಗ ನಾನು ಎರಡು ಚಿತ್ರ ತುಣುಕನ್ನು ಅಂತರ್ಜಾಲದಲ್ಲಿ ನೋಡಿದೆ. ನಾಲ್ಕು ಮೊಬೈಲುಗಳ ನಡುವೆ ಕೆಲವು ಮುಸುಕಿನ ಜೋಳದ ಕಾಳುಗಳನ್ನು ಇಟ್ಟು ಮೊಬೈಲನ್ನು ಸ್ವಿಚ್ ಮಾಡುವರು. ಸ್ವಲ್ಪ ಹೊತ್ತಿನಲ್ಲಿ ಜೋಳವು ಪಾಪ್ ಕಾರ್ನ್ ಆಗಿ ಸಿಡಿಯುತ್ತದೆ.
ಆ ಚಿತ್ರತುಣುಕುಗಳು ನನ್ನ ಬಳಿ ಇವೆ. ಅವನ್ನು ಇಲ್ಲಿ ಹೇಗೆ ಲಗತ್ತಿಸಬಹುದು ಎಂದು ನನಗೆ ತಿಳಿದಿಲ್ಲ. ತಿಳಿದವರು ಹೇಳಿದರೆ ಅವನ್ನು ಲಗತ್ತಿಸಿಯೇನು. ಅವು ತಲಾ ೧.೬ ಎಂ.ಬಿ. ಇವೆ.
ನನ್ನ ಪ್ರಶ್ನೆ - ಇದು ಸಾಧ್ಯವೆ?
-ನಾಸೋ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಸೋಮೇಶ್ವರ ಅವರೆ,

ನಿಮ್ಮ ಹತ್ತಿರ ಇರುವ ವಿಡಿಯೋ ತುಣುಕುಗಳನ್ನು ಗೂಗಲ್ ವಿಡಿಯೋ, ಅಥವಾ ಯುಟ್ಯೂಬ್ ಗೆ ಎತ್ತೇರಿಸಿ - ಅದನ್ನು ಇಲ್ಲಿ ನಿಮ್ಮ ಬರಹದೊಳಗೆ ಎಂಬೆಡ್ ಮಾಡಬಹುದು.

ಈಗಾಗಲೇ ಇದು youtube ನಲ್ಲಿ ಇದೆ. ನನಗೆ ನೋಡಿದ ನೆನಪು

http://in.youtube.com/rests?search_type=&search_query=mobile+%2B+pop+cor...

ಇಲ್ಲಿ ನೋಡಿ ಹಲವಾರು ವಿಡಿಯೋಗಳಿವೆ