ಜ್ಞಾನ ಮತ್ತು ವಿವೇಕ

To prevent automated spam submissions leave this field empty.

ಇ೦ಗ್ಲೆ೦ಡಿನ ಓರ್ವ ಬೇಟೆಗಾರ ಆಫ್ರಿಕಾಕ್ಕೆ ಹೋಗಿದ್ದ. ಅಲ್ಲಿ ಅವನನ್ನು ಅಲ್ಲಿಯ ನರಭಕ್ಷಕ ಮೂಲನಿವಾಸಿಗಳು ಸೆರೆಹಿಡಿದರು. ಅವರ ನಾಯಕ ಶುದ್ಧ ಇ೦ಗ್ಲೀಶ್ ನಲ್ಲಿ ಮಾತನಾಡುತ್ತಿದ್ದ.
'ಇದು ಹೇಗೆ ನಿನಗೆ ಸಾಧ್ಯವಾಯಿತು?' ಬೇಟೆಗಾರ ಕೇಳಿದ.
'ನಾನು ಆಕ್ಸ್ ಫರ್ಡಿನಲ್ಲಿ ಓದಿದ್ದೇನೆ.' ನರಭಕ್ಷಕ ಹೇಳಿದ.
'ಆಕ್ಸ್ ಫರ್ಡಿನಲ್ಲಿ ಓದಿದ್ದರಿ೦ದ ನಿನ್ನಲ್ಲೇನೂ ಪರಿವರ್ತನೆಯಾಗಲಿಲ್ಲವೇ?' ಮರುಪ್ರಶ್ನಿಸಿದ ಬೇಟೆಗಾರ.
'ಖ೦ಡಿತವಾಗಿಯೂ ಆಗಿದೆ. ಆಕ್ಸ್ ಫರ್ಡಿಗೆ ಹೋಗುವ ಮೊದಲು ನಾನು ಕೈಯಿ೦ದಲೇ ಮನುಷ್ಯರ ಮಾ೦ಸ ತಿನ್ನುತ್ತಿದ್ದೆ. ಈಗ ಫೋರ್ಕ್ ಮತ್ತು ಚೂರಿಗಳನ್ನು ಬಳಸುತ್ತೇನೆ.' ತಣ್ಣಗೆ ಉತ್ತರಿಸಿದ ಆ ನರಭಕ್ಷಕ ಮೂಲನಿವಾಸಿ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಆಕ್ಸ್ ಫರ್ಡಿನಲ್ಲಿ ಕಲಿತದ್ದು ಇಂಗ್ಲೀಶ್ ಭಾಷೆಯನ್ನು ಅಷ್ಟೆ.ಅಷ್ಟೇಕೆ ನಮ್ಮ ದೇಶದಲ್ಲೂ ಅದೇ ಆಗ್ತಿದೆ.ಆದರೆ ಸುಸಂಸ್ಕೃತ ಬದುಕು ಕಲಿಸುವ ಶಿಕ್ಷಣ ಇಲ್ಲೂ ಮರೆಯಾಗುತ್ತಿದೆಯಲ್ಲಾ!!

ಸುಸಂಸ್ಕೃತರನ್ನಾಗಿಸುವ ಶಿಕ್ಷಣದ ಕೊರತೆಯೂ ಇದೆ, ಜೊತೆಗೆ ಸುಸಂಸ್ಕೃತರಾಗಬೇಕು ಎನ್ನುವ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆ ಇದೆ, ಅಲ್ಲವೇ ಶ್ರೀಧರ್ ಜೀ?

"Knowledge is proud that he knows so much; wisdom is humble that he knows no more" ಜ್ಞಾನ ಮತ್ತು ವಿವೇಕ, ಓದಿದ ಮೇಲೆ ಈ ಮಾತು ನೆನಪಿಗೆ ಬಂತು.

ಮತ್ತೆ ಒಂದು ಕತೆ ಓದಿದ್ದೆ ಎಲ್ಲೋ,, ಪಟ್ಟಣದಲ್ಲಿ ತುಂಬಾ ಓದಿದ್ದ ಒಂದು ಹುಡುಗಿ ಹಳ್ಳಿಗೆ ಒಮ್ಮೆ ಹೋಗ್ತಾಳಂತೆ. ಮಾರುಕಟ್ಟೆಗೆ ಬಂದು ಟೋಮೇಟೋ, ಈರುಳ್ಳಿ, ಮತ್ತೆ ಒಂದಿಷ್ಟು ತರಕಾರಿ ಕೊಳ್ತಾಳಂತೆ. ಪಕ್ಕದಲ್ಲಿದ್ದ ಹಳ್ಳಿ ಹೆಂಗ್ಸು, "ನೀವು ಪಟ್ಟಣದಲ್ಲಿ ಓದಿದ ಹುಡ್ಗೀನ " ಅಂತ ಕೇಳ್ತಾರಂತೆ. ಈ ಹುಡ್ಗಿ ಖುಶಿಯಾಗಿ "ಹೌದು ನಿಮಗೆ ಹೇಗೆ ಗೊತ್ತಾಯ್ತು" ಅಂತಾಳೆ. ಅದಕ್ಕೆ ಹಳ್ಳಿ ಹೆಂಗ್ಸು, "ಟೊಮೇಟೋ ಮೊದ್ಲು ತಗೊಂಡು ಅದ್ರ ಮೇಲೆ ಎಲ್ಲಾ ತರ್ಕಾರೀನು ಬುಟ್ಟೀಲಿ ತುಂಬಿಸ್ಕೊಳ್ತಾ ಇದೀರಲ್ಲ" ಆವಾಗ ಗೊತ್ತಾಯ್ತು ಅಂತಾರಂತೆ.

ಧನ್ಯವಾದ
--
ಪಾಲ

ಒಂದು ಬದುಕುವುದಕ್ಕೆ ಸಹಕಾರಿಯಾಗುತ್ತದೆ, ಇನ್ನೊಂದು ಚೆನ್ನಾಗಿ ಬಾಳುವುದಕ್ಕೆ ಸಹಕಾರಿಯಾಗುತ್ತದೆ.

ಧನ್ಯವಾದಗಳು ಶ್ರೀಧರ್, ಪಾಲಚ೦ದ್ರ, ಆಸು ಹೆಗ್ಡೆ.
ಅಕ್ಷರಸ್ಥನಾಗುವ ವಿಚಾರವೇ ಬೇರೆ, ಸುಶಿಕ್ಷಿತನಾಗುವುದೇ ಇನ್ನೊದು ಸ೦ಗತಿ. ಇಲ್ಲಿ ಅಕ್ಷರಸ್ಥರೆ ಜಾಸ್ತಿ. ಹಾಗೆಯೇ ಅಕ್ಷರಸ್ಥನಾಗುವುದರಿ೦ದಲೇ ಶಿಕ್ಷಣ ಮುಗಿದ೦ತೆ ಎ೦ದು ಭಾವಿಸುವರೇ ಹೆಚ್ಚು. ಆ ಶಿಕ್ಷಣ ಮನುಷ್ಯನನ್ನು ಬರೀ ಮಾಹಿತಿಯಿ೦ದ ತು೦ಬಿ, ವಿವೇಕಿಯನ್ನಾಗಿ ಮಾಡದಿದ್ದರೆ ಅ೦ತಹ ಶಿಕ್ಷಣವೇ ವ್ಯರ್ಥವೆನ್ನುವ ಮಾರ್ಮಿಕ ಸ೦ದೇಶ ಈ ಪ್ರಸ೦ಗದಲ್ಲಿದೆ.

>>ನಿಮ್ಮವ
>>ಗೌಡ್ರು

ಒಂದೋ "ನಿಮ್ಮವ ಗೌಡ" ಇಲ್ಲಾಂದ್ರೆ "ನಿಮ್ಮವ್ರು ಗೌಡ್ರು" ಆಗ್ಬೇಕು ಅಲ್ವೇನ್ರೀ ನಮ್ಮವ್ರಾದ ಗೌಡ್ರೇ?

ಪ್ರತಿಕ್ರಿಯೆ ಅಂದ್ರೆ ಹೀಗಿರಬೇಕು-ಅಂತಾ ತೋರಿಸಿಕೊಟ್ಟಿರಿ. ಮಾಹಿತಿಗಳು ಬೆಳೆಯುತ್ತಾ ಬರಹಕ್ಕಿಂತ ಪ್ರತಿಕ್ರಿಯೆಗಳಲ್ಲಿ ಹೆಚ್ಚು ತಿಳುವಳಿಕೆ ಸಿಗುವಂತಿರಬೇಕು. ಸಂತೋಷ ವಾಯ್ತು.

ಸರ್,

ಎಂದಿನಂತೆ, ನಿಮ್ಮ ಎಲ್ಲ ಬರವಣಿಗೆಗಳು ಅರ್ಥಪೂರ್ಣವಾಗಿರುತ್ತದೆ.

ಈಗಿನ ಮಕ್ಕಳಿಗೆ ಸಿಗುವ ಶಿಕ್ಷಣ ಎಷ್ಟರ ಮಟ್ಟಿಗೆ ಸರಿ ಇದೆ??