ಪ್ಯಾಟಿಗೆ ಇಸ್ಕೂಲ್ಗೆ ಹೋಗಿಲ್ಲಾ

To prevent automated spam submissions leave this field empty.

ಕೃಷಿ ಬಗ್ಗೆ ಸಂಶೋಧನೆಗಾಗಿ ಒಬ್ಬ ವಿದ್ಯಾರ್ಥಿಯು ಹಳ್ಳಿಗೆ ಹೋಗುತ್ತಾನೆ. ಒಂದು ಹೊಲ. ಅದರಲ್ಲಿ ಒಂದು ಎತ್ತಿನ ಗಾಣ ಕಟ್ಟಿದೆ. ಎತ್ತು ಅದರಪಾಡಿಗೆ ಅದು ಸುತ್ತುತ್ತಿದೆ. ಗಾಣದಿಂದ ಬಂದ ಎಣ್ಣೆ ಡಬ್ಬ ತುಂಬುತ್ತಿದೆ.ಅಲ್ಲಿ ಯಾರೂ ಮನುಷ್ಯರು ಇಲ್ಲ. ವಿದ್ಯಾರ್ಥಿ ಸುತ್ತ ಮುತ್ತ ನೋಡುತ್ತಾನೆ. ಸಮೀಪದಲ್ಲಿಯೇ ಒಬ್ಬ ರೈತ ಹೊಲ ಉಳುತ್ತಿರುತ್ತಾನೆ. ಅವನ ಹತ್ತಿರ ಹೋಗಿ ವಿಚಾರಿಸುತ್ತಾನೆ. ಆ ಗಾಣ ಯಾರದು?

ರೈತ ಹೇಳುತ್ತಾನೆ.-" ನನ್ನದೇ ಸ್ವಾಮಿ"

- ನಿನಗೆ ಬುದ್ಧಿ-ಗಿದ್ಧಿ ಇದ್ಯಾ? ಎಣ್ಣೆ ಗಾಣ ತಿರುಗಲು ಬಿಟ್ಟು ಇಲ್ಲಿ ಬಂದು ಇಲ್ಲಿ ಹೊಲ ಉಳುತ್ತಿದ್ದೀಯಲ್ಲಾ? ಎಣ್ಣೆ ಡಬ್ಬ ತುಂಬಿ ಹೊರಚೆಲ್ಲಿದರೆ ಎಷ್ಟು ನ್ಯಾಶನಲ್ ವೇಸ್ಟ್ ಆಗುತ್ತೆ ಗೊತ್ತಾ?

- ಅಂಗಂದ್ರ ನಂಗ್ ಅರ್ಥ ಆಗಲಿಲ್ಲ ಬುದ್ಧಿ.

-  ಎಣ್ಣೆ ಡಬ್ಬ ತುಂಬಿ ಹೆಚ್ಚಾಗಿ ಹೊರಚೆಲ್ಲಿದರೆ ನಷ್ಟ ಆಗುತ್ತೆ ಅಂತಾ.ಇಷ್ಟೂ ಬುದ್ಧಿ ಇಲ್ವಲ್ಲಾ ನಿನಗೆ.

- ಅಂಗೆಲ್ಲಾ ಏನೂ ಆಕ್ಕಿಲ್ಲ ಬುದ್ಧಿ.

-ಅದು ಹೇಗೆ? ನೀನು ಇಲ್ಲಿದ್ದೀಯ.ವೇಸ್ಟ್ಆಗುಲ್ಲಾ ಅಂತೀಯಲ್ಲಾ?

-ನೋಡಿ ಬುದ್ಧಿ, ನಾನು ನಾಲ್ಕು ಸಾಲು ಉಳ್ಮೆ ಮಾಡೋ ಹೊತ್ತಿಗೆ ಒಂದು ಡಬ್ಬ ಎಣ್ಣೆ ತುಂಬಿರ್ತದೆ. ಇಲ್ಲಿ ಉಳಾದು ನಿಲ್ಸಿ ಅಲ್ಲಿ ಓಯ್ತೀನಿ. ಎಣ್ಣೆ ಡಬ್ಬ ಬದಲಿಸ್ತೀನಿ. ಬತ್ತೀನಿ.

-ಅದು ಹೇಗೆ ಅಷ್ಟು ಕರಾರುವಾಕ್ಕಾಗಿ ಹೇಳ್ತೀಯಾ? ನೀನು ಇಲ್ಲಿರುವಾಗ ಗಾಣದೆತ್ತು ತಿರುಗೋದು ನಿಲ್ಲಿಸಿಬಿಟ್ರೆ!

- ಇಲ್ಲಾ ಬುದ್ಧಿ, ಅಂಗಾಗಾಕಿಲ್ಲ. ಅದರ ಕುತ್ತಿಗೆಗೆ ಗಂಟೆ ಕಟ್ಟೀವ್ನಿ.ಅದು ಸುತ್ತುತ್ತಿರೋವಾಗ ನನಗೆ ಗಂಟೆ ಸದ್ದು ಕೇಳ್ತಾ ಇರ್ತದೆ.

- ಎತ್ತು ಏನಾದರೂ ನಿ೦ತಲ್ಲೇ ಕತ್ತು ಅಲ್ಲಾಡಿಸುತ್ತಾ ಗಂಟೆ ಶಬ್ಧ ಮಾಡುತ್ತಿದ್ದರೆ?

-ಅದು ನಿಮ್ಮಂಗೆ ಪ್ಯಾಟಿಗೆ ಇಸ್ಕೂಲ್ಗೆ ಹೋಗಿಲ್ಲಾ ಬುದ್ಧಿ.

 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಅದೇನಾದ್ರೂ ಆಗಲೀ ರಾಯರೇ ಎಲ್ಲಿ ನಿಮ್ಮ ದರ್ಶನವೇ ಅಪರೂಪವಾಯ್ತಲ್ಲಾ? ಇನ್ನು ನಿಮ್ಮ ಪ್ರತಿಕ್ರಿಯೆಗೆ ನೀವೇ ಉತ್ತರವನ್ನೂ ಕೊಡಬಹುದಲ್ಲವೇ?

<< - ಎತ್ತು ಏನಾದರೂ ನಿ೦ತಲ್ಲೇ ಕತ್ತು ಅಲ್ಲಾಡಿಸುತ್ತಾ ಗಂಟೆ ಶಬ್ಧ ಮಾಡುತ್ತಿದ್ದರೆ?
<< -ಅದು ನಿಮ್ಮಂಗೆ ಪ್ಯಾಟಿಗೆ ಇಸ್ಕೂಲ್ಗೆ ಹೋಗಿಲ್ಲಾ ಬುದ್ಧಿ.

:lol:

:) ಪ್ಯಾಟೆ ಸ್ಕೂಲ್ನಾಗೆ ಕತ್ತಾಡಿಸೋದನ್ನ್ ಹೇಳ್ಕೊಡ್ಲಿಕ್ಕೂ ಟೈಮಿಲ್ರಿ. ಎಲ್ಲಾರ್ನೂ ದನ ಕೂಡ್ಯಾಕ್ದಂಗ್ ಆಕಿರ್ತಾರ. ಅಲ್ಲಿ ತಲೆ ಅಲ್ಲಾಡಿಸ್ಕೋತ ಮಕ್ಳು ಗಲಾಟಾ ಮಾಡೋದು ಬೆಲ್ ಹೊಡ್ದಾಂಗಾ ಇರ್ತತಿ. ಸಕತ್ತಾಗಿ ಬರ್ದೀರಿ.

ಕೊನೆಯ ಸಾಲುಗಳನ್ನು ಓದಿ ಬಹಳ ನಗು ಬಂತು :D. ಆದರೂ ಕೆಲವೊಮ್ಮೆ ನೊಣಗಳು ಬಂದಾಗ ನಿಂತಲ್ಲೇ ತಲೆ ಅಲ್ಲಾಡಿಸುತ್ತವೆ ಅಲ್ಲವೇ :)
ಹೀಗೆ ಬರೆಯುತ್ತಿರಿ ಸರ್.

ನಂದಕುಮಾರ, ಒಳ್ಳೆ ಪಾಯಿಂಟ್, :)
ಶ್ರೀಧರ್, ನೀವು ಬರೆದಿದ್ದು ಚೆನ್ನಾಗಿದೆ, ಅವ್ನು ಏನು ಹೇಳ್ಬೋದು ಅಂತ ಯೋಚ್ನೆ ಮಾಡ್ತಿದ್ದೆ, ಉತ್ತರ ನೋಡಿ ಸಕತ್ ನಕ್ಕಿದೀನಿ :)