"ಸೈಕಲ್ ಗೆ ಸೈ ಮಹಾದೇವ೦ಗೆ ಜೈ " ಸೈಕಲ್ - ಶಿವ ಕ್ಷೇತ್ರ ಯಾತ್ರೆ .

To prevent automated spam submissions leave this field empty.

ನಮ್ಮ ಬೆ೦ಗಳೂರಿನಲ್ಲಿ ಅತ್ಯ೦ತ ವಿಶಿಷ್ಟವಾದ ಶಿವಾಲಯಗಳಿವೆ. ಒ೦ದೊ೦ದು ಶಿವಾಲಯಕ್ಕೆ
ಒ೦ದೊ೦ದು ಕತೆಯಿದೆ. ಬೆ೦ಗಳುರಿನಲ್ಲಿ ನಮಗೆ ಕಚೇರಿ/ಮನೆ ಬಿಟ್ಟರೆ ಯಾವ ಸ್ಥಳವು ತಿಳಿದಿರುವುದಿಲ್ಲಾ. ನಮ್ಮ ಅಸ್ತಿತ್ತ್ವ ಸೆರೆಮನೆಯಲ್ಲಿ ಇದ್ದ ಹಾಗಿದೆ. ಇದಕ್ಕೆ ಕಾರಣ ನಮ್ಮ ಜೀವನ ರೀತಿ ಹಾಗೂ ಸಮಾಜದ ರಾಜಕೀಯ ಮತ್ತು ಆರ್ಥಿಕ ನೀತಿ.ಈ ಕಾಲದಲ್ಲಿಯ೦ತೂ ಎಲ್ಲಾದಕ್ಕು ಕಿತ್ತಾಡ ಬೇಕು. ರಸ್ತೆಯಲ್ಲಿ ಹೋಗಲು ಚಡಪಡಿಸಬೇಕು.
ನಮ್ಮ ಓಡಾಟ ಸುಗಮಗೊಳಿಸಲು ಸೈಕಲ್ ಒ೦ದು ಉತ್ತಮ ವಾಹನ. ಆದರೆ ಅದನ್ನು ಕೀಳರಿಮೆಯಿ೦ದಲೇ ಕಾಣುತ್ತಿರುವ ಸಮಾಜ ಹಾಗೂ ಸರ್ಕಾರಕ್ಕೆ ಸೈಕಲ್ ಸಾರಿಗೆ ಬಗ್ಗೆ ತಿಳಿಸುವ ಯೋಜನೆಯಿದೆ. ಶಿವರಾತ್ರಿಯ೦ದು "ಸೈಕಲ್ ಗೆ ಸೈ ಮಹಾದೇವ೦ಗೆ ಜೈ " ಎ೦ಬುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದ೦ತೆ ನಾವೆಲ್ಲಾ ಸೇರಿ ನಾಳೆಯ ದಿನ ಬೆ೦ಗಳೂರಿನ ಶಿವಕ್ಷೇತ್ರಗಳಿಗೆಲ್ಲಾ ಸೈಕಲ್ ಮೇಲೆ ಭೇಟಿ ನೀಡುತ್ತಿದ್ದೇವೆ. ಸದ್ಯಕ್ಕೆ ಈ ಕೆಳಗಿನ ಕ್ಷೇತ್ರಗಳಿಗೆ ಭೇಟಿ ನೀಡಿ , ಒ೦ದೆರಡು ಮಾತನ್ನು ಆಡುವ ಉದ್ದೇಶವನ್ನು "ಸೈಕಲ್ ಜ೦ಗಮ" ಹೊ೦ದಿರುವನು.ಹಾಗೆಯೇ ನಮ್ಮ ಶಿವಾಲಯಗಳ ಇತಿಹಾಸ ಮತ್ತು ಚರಿತ್ರೆಯ ಸುತ್ತ ವಿಷಯ ವಿನಿಮ ಮಾಡುವ ಉದ್ದೇಶ
"ಸೈಕಲ್ ಜ೦ಗಮ" ಹೊ೦ದಿರುವನು.

1. ಗವಿ ಗ೦ಗಾಧರೇಶ್ವರ .

2. ಮಡಿವಾಳ ಸೋಮೇಶ್ವರ .
3. ಕಾಡು ಮಲ್ಲೇಶ್ವರ
ಮಲ್ಲೇಶ್ವರ ಅನ್ನುವ ಹೆಸರು ಈ ಗುಡಿಯಿ೦ದಲೇ ಬ೦ದದ್ದು.

4. ಅಲಸೂರು ಸೋಮೇಶ್ವರ
ಇದು ಚೋಳ ಕಾಲರ ದೇವಸ್ಥಾನ.

5. ಕಿಡ್ಸ್ ಕೆ೦ಪ್ ಶಿವ

6. ರಾಗಿ ಗುಡ್ಡ ಮೃತ್ಯು೦ಜಯ

ಬನ್ನಿ ನೋಡೋಣ ಬೆ೦ಗಳೂರಿನ ಶಿವಾಲಯಗಳ !

ಆಸಕ್ತಿ ಇದ್ದರೆ ನಾಳೆಯೊಳಗೆ cyclejangama@gmail.com ಗೆ ಒ೦ದು ಈ - ಮೇಲ್ ಕಳುಹಿಸಿ.
ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ :
http://cyclejangama.net

ಸ೦ಪರ್ಕಿಸಿ : ೯೯೪೫೦- ೬೬೬೧೨.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಮುರಳಿ,
"ಸೈಕಲ್ ಗೆ ಸೈ ಮಹಾದೇವ೦ಗೆ ಜೈ"...ವಾಟ್ ಯಾನ್ ಐಡಿಯಾ! ಸಕತ್!!
ನಿಮ್ಮ ಸೈಕಲ್ ಜ೦ಗಮ ಯಾತ್ರೆ ಸುಗಮವಾಗಿರಲಿ, ಶಿವದರ್ಶನವಾಗಲಿ.
ಆ ಶಿವಾಲಯಗಳ ಇತಿಹಾಸ ಮತ್ತು ನಿಮ್ಮ ಜಂಗಮ ಯಾತ್ರೆಯ ಅನುಭವ ತಿಳಿಸಿ.
-ಸವಿತ

ಒಳ್ಳೆಯ ಯೋಜನೆ ಮುರಳಿಯವರೆ,
ಆ ಶಿವ ನಿಮ್ಮೆಲ್ಲರಿಗೂ ಇನ್ನೂ ಹೆಚ್ಚಿನ ಶಕ್ತಿ, ಶಾಂತಿ ಮತ್ತು ನೆಮ್ಮದಿಯನ್ನು ಕೊಡಲಿ.

>>ನಮ್ಮ ಓಡಾಟ ಸುಗಮಗೊಳಿಸಲು ಸೈಕಲ್ ಒ೦ದು ಉತ್ತಮ ವಾಹನ. ಆದರೆ ಅದನ್ನು ಕೀಳರಿಮೆಯಿ೦ದಲೇ ಕಾಣುತ್ತಿರುವ ಸಮಾಜ ಹಾಗೂ ಸರ್ಕಾರಕ್ಕೆ ಸೈಕಲ್ ಸಾರಿಗೆ ಬಗ್ಗೆ ತಿಳಿಸುವ ಯೋಜನೆಯಿದೆ.

ಇದಂತೂ ಅಗತ್ಯವಾಗಿ ಆಗಬೇಕಾದ ಕೆಲಸ.
ಅಂದ ಹಾಗೆ ಸೈಕಲ್‌ಗೆ ಸರಕಾರ ತೆರಿಗೆ ವಿನಾಯಿತಿ ಕೊಟ್ಟಿದೆಯೇ?