ಇದ್ದರೆಷ್ಟು ಬಿಟ್ಟರೆಷ್ಟು

To prevent automated spam submissions leave this field empty.

ಫುಟ್‍ಪಾತ್ ಇಲ್ಲದ ರಸ್ತೆಗಳು
ಸಾಲು ಮರಗಳಿಲ್ಲದ ಹೆದ್ದಾರಿಗಳು
ಒಡೆಯ(ತಿ) ಇರದ ಮನೆಗಳು
ಚಿಂತನೆಗಳಿಲ್ಲದ ಮನಗಳು
ಇದ್ದರೆಷ್ಟು ಬಿಟ್ಟರೆಷ್ಟು

ಕೊನರದ ಬೋಳು ಮರಗಳು
ಚಿಗುರದ ಬಕ್ಕ ತಲೆಗಳು
ಪುಟಿಯದ ಚೆಂಡುಗಳು
ಮನತಣಿಸದ ನಗೆ ಬುಗ್ಗೆಗಳು
ಇದ್ದರೆಷ್ಟು ಬಿಟ್ಟರೆಷ್ಟು

ನೀರಿರದ ಬಾವಿಗಳು
ಪ್ರಜೆಗಳಿಲ್ಲದ ಊರುಗಳು
ಉಣಲು ಬಾರದ ತಿನಿಸುಗಳು
ನಡೆ ಇಲ್ಲದ ನುಡಿಗಳು (ನಡೆ = ನಡತೆ)
ಇದ್ದರೆಷ್ಟು ಬಿಟ್ಟರೆಷ್ಟು

ಜೋಡಿ ಇಲ್ಲದ ಎತ್ತುಗಳು
ರಿಕಾಪಿಲ್ಲದ ಕುದುರೆಗಳು
ಚಲನೆಯಿರದ ಕೈ ಕಾಲುಗಳು
ಎಣ್ಣೆ ಬತ್ತಿ ಇರದ ದೀಪಗಳು
ಇದ್ದರೆಷ್ಟು ಬಿಟ್ಟರೆಷ್ಟು

ಮೂಡಲಿ ಹೊಸ ಅರಿವು
ಮೈ ಏರಲಿ ಹೊಸ ಅರಿವೆ
ಪ್ರಾರಂಭವಾಗಲಿ ಹೊಸ ಬಾಳು
ಎಲ್ಲದರಲಿ ಮೂಡಲಿ ಹೊಸ ಚೇತನ

ಎಲ್ಲ ಇರಲಿ ಎಲ್ಲ ಬರಲಿ
ಇರದುದೆಲ್ಲ ಇರುವಂತಾಗಲಿ
ಬಿಡುವುದೇನೂ ಬೇಡ
ಜೀವ ಬರಡಾಗುವುದು ಬೇಡ

ಲೇಖನ ವರ್ಗ (Category):