ಅನ್ನವೆಂದರೆ ? - ೨

To prevent automated spam submissions leave this field empty.

ಅನ್ನಂ ನ ಪರಿಚಕ್ಷೀತ| ತದ್ ವ್ರತಂ |
ಆಪೋ ವಾ ಅನ್ನಂ | ಜ್ಯೋತಿರನ್ನಾದಂ |
ಅಪ್ಸು ಜ್ಯೋತಿ: ಪ್ರತಿಷ್ಠಿತಮ್ | ಜ್ಯೋತಿಷ್ಯಾಪ: ಪ್ರತಿಷ್ಠಿತಾ: |
ತದೇ ತದನ್ನಮನ್ನೇ ಪ್ರತಿಷ್ಠಿತಮ್ | ಸ ಯ ಏತದನ್ನಮನ್ನೇ ಪ್ರತಿಷ್ಠಿತಮ್ ವೇದ ಪ್ರತಿಷ್ಠತಿ |

ಅನ್ನವನ್ನು ನಿರಾಕರಿಸಬೇಡ.ಇದನ್ನು ವ್ರತದಂತೆ ಪಾಲಿಸು.ಜಲವೂ ಕೂಡ ಅನ್ನವೇ.ಬೆಳಕೂ ಕೂಡ ಅನ್ನವೇ .ನೀರು ಬೆಳಕಿನಲ್ಲಿ ಪ್ರತಿಷ್ಟಿತವಾಗಿದೆ.ಅಂತೆಯೇ ಬೆಳಕು ನೀರಿನಲ್ಲಿ ಪ್ರತಿಷ್ಟಿತವಾಗಿದೆ.ಅನ್ನದಲ್ಲಿ ಶಕ್ತಿ ಪ್ರತಿಷ್ಟಿತವಾಗಿರುತ್ತದೆ

ನಮ್ಮಲ್ಲಿ ಕೆಲವರು ಊಟ ಮಾಡಿಕೊಂಡು ಹೋಗು ಅಂತಾರೆ, ತುಂಬಾ ಅವಸರ ಇದ್ದರೆ ನಾವು, 'ಬೇಡ ನಂಗೆ ಟೈಮ್ ಆಗಿದೆ' ಅಂತ ಹೇಳಿ ಹೋಗಿ ಬಿಡ್ತೀವಿ.ಅನ್ನವನ್ನು ಬೇಡ ಅನ್ನಬೇಡಿ ಅವರು ಹಾಗೆ ಹೇಳಿದ್ದಕ್ಕಾದರೂ ಸ್ವಲ್ಪ ಸಕ್ಕರೆಯನ್ನೋ,ಇಲ್ಲ ಒಂದು ತುತ್ತು ಊಟ ಮಾಡಿ ಹೋಗಿ.(ನನ್ನ ಜೀವನದಲ್ಲಿ ಆದ ಘಟನೆಗಳು ಇದನ್ನ ಪುಷ್ಟೀಕರಿಸಿದೆ.ಎಷ್ಟೋ ಸರ್ತಿ ನಾನೂ ಊಟ ಮಾಡದೆ ಹಾಗೆ ಹೋದದ್ದುಂಟು ಅವಾಗ ಸಾಕಷ್ಟು ತೊಂದರೆಗಳನ್ನ ಅನುಭವಿಸಿದ್ದೇನೆ.ಅದು ಕಾಕತಾಳೀಯನೋ ಏನೋ ಗೊತ್ತಿಲ್ಲ.ನೀವು ಇದನ್ನ ಮೂಢ ನಂಬಿಕೆ ಅಂತನಾದ್ರೂ ಅನ್ನಿ ಆದ್ರೆ ಆಗಿದ್ದು ನಿಜ).ಇಲ್ಲ ಹೊರಡಲಿಕ್ಕಿಂತ ಮುಂಚೆ
ಅವರಿಗೆ ಹೇಳಿಬಿಡಿ 'ನಾನು ಬೇಗ ಹೋಗ ಬೇಕಾಗಿದೆ ಊಟಕ್ಕೆ ನಿಲ್ಲುವುದಿಲ್ಲ' ಅಂತ.
ನೀರು ಮತ್ತು ಬೆಳಕು ಧಾನ್ಯಗಳ ಬೆಳೆಯುವಿಕೆಗೆ ಸಹಕಾರಿ ಎಂಬುದು ನಮಗೆ ತಿಳಿದೇ ಇದೆ. ನೀರು , ಬೆಳಕು ಇವುಗಳ ಶಕ್ತಿಯನ್ನು ಹೀರಿಕೊಂಡು ಬೆಳೆದ ಅನ್ನವನ್ನು ನಾವು ತಿನ್ನುತ್ತೇವೆ .ನಾವು ತಿಂದ ಅನ್ನವು ಪ್ರಾಣವನ್ನು ದೇಹದಲ್ಲಿ ಪ್ರತಿಷ್ಟಾಪಿಸುತ್ತದೆ . ಇಲ್ಲಿ ಬೆಳಕು ಎಂದರೆ ಸೂರ್ಯ . ಸೂರ್ಯನಿಲ್ಲದೆ ನೀರಿಲ್ಲ (ಆವಿಯಾಗಿ, ಮೋಡವಾಗಿ, ಮಳೆ ಬರುವ ಕ್ರಿಯೆ ) .ಇವೆರಡೂ ಇಲ್ಲದೆ ದೇಹ, ಪ್ರಾಣಗಳಿಲ್ಲ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಅನ್ನದ ಬಗ್ಗೆ ನಮ್ಮ ಹಿಂದಿನವರು ಅಷ್ಟೊಂದು ಶ್ರದ್ಧೆ ಮೂಡಿಸಲು ಸಾಕಷ್ಟು ಸಕಾರಣಗಳಿವೆ.ಪ್ರತಿಯೊಂದು ಜೀವಿಗೂ ಆಹಾರ ಅನಿವಾರ್ಯ. ಕೆಲವರಿಗೆ ತಿಂದು ತೇಗುವಷ್ಟು ಆಹಾರ ಲಭ್ಯವಿದ್ದರೆ, ಕೆಲವರಿಗೆ ಗಂಜಿಗೆ ಗತಿ ಇರುವುದಿಲ್ಲ.ಕೆಲವರು ತಿಂದು ಹೆಚ್ಚಾಗಿ ಅನ್ನ ಚೆಲ್ಲಿದರೆ, ಪಕ್ಕದ ಗುಡಿಸಿಲಿನ ಮಗು ಅನ್ನವಿಲ್ಲದೆ ಹಸಿವಿನಿಂದ ಅಳುತ್ತಿರುತ್ತದೆ. ಆದ್ದರಿಂದ ಅನ್ನದ ಬಗ್ಗೆ ಶ್ರದ್ಧೆ ಮೂಡಿಸಿದರೆ ಅದು ಎಲ್ಲರಿಗೂ ಲಭ್ಯವಾಗಲಿ ಎಂಬ ಕಾರಣದಿಂದ. ಆದರೆ ಇಂದಿಗೂ ಅನೇಕ ಮನೆಗಳಲ್ಲಿ, ಸಮಾರಂಭಗಳಲ್ಲಿ ದೊಡ್ದ ದೊಡ್ದ ಪಾತ್ರೆಗಳಲ್ಲಿ ಅನ್ನವನ್ನು ಕಸದ ತೊಟ್ಟಿಗೆ ಹಾಕುವ ದೃಷ್ಯ ನೋಡಬಹುದಾಗಿದೆ. ಅಂತಹ ಸಂದರ್ಭಗಳಲ್ಲಿ ಅದೇ ಊರಿನ ಯಾವುದಾದರೂ ಅನಾಥಾಶ್ರಮಕ್ಕೋ, ಅಥವಾ ಎಲ್ಲಿ ಉಪಯೋಗವಾಗುತ್ತೋ ಅಲ್ಲಿಗೆ ಅದನ್ನು ಜೋಪಾನವಾಗಿ, ಗುಣಮಟ್ಟವನ್ನು ಕೆಡಿಸದೆ ತೆಗೆದುಕೊಂಡುಹೋಗಿ ಅಲ್ಲಿನ ಜನರೊಡನೆ ತಾವೂ ಕುಳಿತು ಊಟಮಾಡಿಬಂದರೆ ಅದಕ್ಕಿಂತ ಪುಣ್ಯದ ಕೆಲಸ ಬೇರೆ ಇದೆಯೆ?
ಓಂದು ಮಾತು. ಇಂತಹ ಸಂದರ್ಭದಲ್ಲಿ ಸಮಾಜದಲ್ಲಿರುವ ಹಸಿವು ಅರ್ಥವಾಗುತ್ತೆ. ನಂತರವಾದರೂ ತಮ್ಮ ಮನೆಯಲ್ಲಿ ಆಚರಿಸುವ ಹಬ್ಬ ಹರಿದಿನಗಳನ್ನು ತಾವು ಕಂಡ ಹಸಿದಜನರೊಡನೆ ಆಚರಿಸಿದರೆ ಅದರ ಆನಂದವೇ ಬೇರೆ.ನನ್ನ ಒಬ್ಬ ಮಿತ್ರರು ಅವರ ತಂದೆಯ ವಾರ್ಷಿಕ ಶ್ರಾದ್ಧದ ದಿನ ವೃದ್ಧಾಶ್ರಮಗಳಿಗೆ ಅಥವಾ ಅನಾಥಾಶ್ರಮಗಳಿಗೆ ಹೋಗಿ ಎಲ್ಲರಿಗೂ ಊಟಹಾಕಿ ತಾವೂ ಮಾಡಿಬರ್ತಾರೆ. ಅಪ್ಪನ ಶ್ರಾದ್ಧ ಮುಗಿಯಿತು.

’ಅನ್ನದೇವರ ಮುಂದೆ ಇನ್ನು ದೇವರು ಇಲ್ಲ’ ಎಂದರೆ ಹಸಿವು, ನೀರಡಿಕೆ, ನಿದ್ರೆ ನಮ್ಮ ಮೂಲಭೂತ ಅಗತ್ಯಗಳು. ಇವಿಲ್ಲದೇ ನಾವೇನೂ ಮಾಡಲಾಱೆವು. ಆದುದಱಿಂದ ಇದನ್ನು ಕಡೆಗಣಿಸಬಾರದು. ಹಸಿದವನಿಗೆ ವಿದ್ಯಾದಾನ ಮಾಡಲಾಗದು. ಅನ್ನದಾನ ಮಾಡಿದ ಮೇಲೆ ಉೞಿದ ದಾನ ಮಾಡಬಹುದು.