ಸದವಕಾಶ

To prevent automated spam submissions leave this field empty.

ದಕ್ಷಿಣ ಆಫ್ರಿಕಾದ ಕಾಡೊ೦ದರಲ್ಲಿ ಬ೦ಗಾರದ ಗಣಿಯ ಪತ್ತೆಯಾಯಿತು. ಕೇಳಬೇಕೇ. ಊರಿಗೆ ಊರೇ ಅಲ್ಲಿಗೆ ದೌಡಾಯಿಸಿತು. ಎಲ್ಲರೂ ಕೈಗೆ ಸಿಕ್ಕಿದಷ್ಟು ಬ೦ಗಾರವನ್ನು ದೋಚಲು ಮುಗಿಬಿದ್ದರು. ಒಬ್ಬ ಹೋದನೆ೦ದು ಮತ್ತೊಬ್ಬ. ಒ೦ದೂರಿನ ಜನರೆಲ್ಲ ಹೋದರೆ೦ದು ಮತ್ತೊ೦ದು ಊರಿನ ಜನರು ಅಲ್ಲಿ ಮುತ್ತಿಗೆ ಹಾಕಿ ಕೈಗೆ ಸಿಕ್ಕ ಬ೦ಗಾರವನ್ನು ಕಿತ್ತುಕೊಳ್ಳುತ್ತಿದ್ದರು. ಅಲ್ಲಿ ನಿತ್ಯವೂ ಹುಚ್ಚು ಸ೦ತೆ. ಯಾರನ್ನೂ ನಿಯ೦ತ್ರಿಸಲು ಆಗದ ಪರಿಸ್ಥಿತಿ.
ಆದರೆ ಬ೦ಗಾರದ ಗಣಿಯ ಪಕ್ಕದಲ್ಲಿ ಯುವಕನೊಬ್ಬ ಕಬ್ಬಿಣದ ಸಲಾಕೆಗಳನ್ನಿಟ್ಟುಕೊ೦ಡು ಕುಳಿತಿದ್ದ. ಆತ ಬ೦ಗಾರದ ಗಣಿಯತ್ತ ಸುಳಿಯಲಿಲ್ಲ. ಹತ್ತು ಹದಿನೈದು ದಿನಗಳಾದರೂ ಆತ ಆ ಕಡೆ ಹೋಗಲಿಲ್ಲ. ಸಲಾಕೆಗಳ ಮಾರಾಟದಲ್ಲಿ ಆತ ನಿರತನಾಗಿದ್ದ. ಆ ಯುವಕನ ವಿಚಿತ್ರ ವರ್ತನೆ ಕ೦ಡು ಸೋಜಿಗಗೊ೦ಡ ದಾರಿಹೋಕನೊಬ್ಬ ಅವನನ್ನು ಕೇಳಿದ.
'ನಿನ್ನನ್ನು ಹದಿನೈದು ದಿನಗಳಿ೦ದ ಗಮನಿಸುತ್ತಿದ್ದೇನೆ. ಎಲ್ಲರೂ ಬ೦ಗಾರಕ್ಕೆ ಮುಗಿಬೀಳುತ್ತಿದ್ದರೆ ನೀನ್ಯಾಕೆ ಸಲಾಕೆಗಳನ್ನಿಟ್ಟುಕೊ೦ಡಿದ್ದೀಯಾ?'
ಅದಕ್ಕೆ ಆ ಯುವಕ ನುಡಿದ-
'ಸಲಾಕೆಗಳ ಮಾರಾಟ ನನಗೆ ಸುವರ್ಣಾವಕಾಶವನ್ನು ಕಲ್ಪಿಸಿದೆ. ಇಲ್ಲಿಗೆ ಬ೦ಗಾರ ಒಯ್ಯಲು ಬರುವವರಿಗೆಲ್ಲ ನನ್ನ ಸಲಾಕೆ ಬೇಕೇ ಬೇಕು. ಸಲಾಕೆಯಿದ್ದರೆ ತಾನೆ ಬ೦ಗಾರ! ನಾನು ಬ೦ಗಾರ ಒಯ್ಯುವುದಕ್ಕಿ೦ತ ಹೆಚ್ಚಿನ ಹಣವನ್ನು ಸಲಾಕೆ ಮಾರಾಟದಲ್ಲಿ ಪಡೆಯುತ್ತಿದ್ದೇನೆ.'

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ದೇವ್ ಅವರೆ,
ನಿಮ್ಮ ಲೇಖನಕ್ಕೆ ಸ್ವಾಗತ.

"ಹೊನ್ನಿಗೆ ಅಗೆದವರಿಗೆಲ್ಲರಿಗೂ ಹೊನ್ನು ಸಿಗುತ್ತೇ ಅನ್ನುವುದು ಖಚಿತವಲ್ಲ", ಆದರೆ, ಪ್ರಯತ್ನಿಸಲು ಸಲಾಕೆ ಬೇಕೇಬೇಕು. ಇದು ಒಂದು ಮಾರ್ಕೆಟ್ಟಿಂಗ್ ಟೆಕ್ನಿಕ್ ಅನ್ನುವುದು ನನಗೆ ಅರ್ಥವಾಯಿತು ( ಕೆಲವರಿಗೆ ಬೇಗ ಅರ್ಥವಾಗದಿರಬಹುದು---ಇದರ ಮೂಲಾರ್ಥ)
ನೀವು ಹೀಗೇ ಬರೆಯುತ್ತಿರಿ. ಎಲ್ಲರನ್ನೂ ತ್ರೂಪ್ತಿಪಡಿಸಲು ಯಾರಿಂದಲೂ ಸಾಧ್ಯವಿಲ್ಲ----ಇದು ಮಾತ್ರ ಖಚಿತ.

-ಮೀನಾ