ಯಾವ ತಂತ್ರಜ್ಞಾನದ ಜ್ಞಾನ ಕನ್ನಡದಲ್ಲಿರಬೇಕು ?

To prevent automated spam submissions leave this field empty.

ಕನ್ನಡ ಸಾಹಿತ್ಯ ಬೆಳೆದಿರುವ ಪಥವನ್ನು ನೋಡಿದರೆ ನಮ್ಮ ಜನ ಮನುಷ್ಯ ಚೇತನದ ವಿಕಾಸ ಮತ್ತು ಅದರ ಉಗಮದ ಹಾದಿಯಲ್ಲಿ ನಡೆದಿರುವುದು ಸ್ಪಷ್ಟ. ಆದರೆ ಇಂದು ನಮ್ಮ ಸಾಹಿತ್ಯ ನಮ್ಮ ಸಮಸ್ಯೆಗಳಿಗೆ ಉತ್ತರವನ್ನು ಕೊಡುವಲ್ಲಿ ಎಷ್ಟರ ಮಟ್ಟಿಗೆ ಬೆಳೆದಿದೆ. ಆಧುನಿಕ ಜಗತ್ತಿನ ಮುಖ್ಯ ವಾಹಿನಿ ತಂತ್ರಜ್ಞಾನ .ಇದರ ಸೂಕ್ತ ಬಳಕೆ ನಮ್ಮ ಕೆಲವು ಸಂಕಟಗಳಿಗೆ ಪರಿಹಾರ ನೀಡ ಬಲದು. ಆದರೆ ಇದೆ ಜ್ಞಾನವನ್ನು ಸೂಕ್ತವಾಗಿ ಬಳಸದೇ ಹೋದರೆ ಅಥವಾ ಅನರ್ಥವಾಗಿ ಬಳಸಿದರೆ ನಮಗೆ ಹಾನಿಯಷ್ಟೇ ಅಲ್ಲಾ ಸರ್ವನಾಶವು ಆಗಬಹುದು.
"A great tool in the hand of a great fool remains still a useless tool" ಅನ್ನುವ ಹಾಗೆ ನಮ್ಮ ಕನ್ನಡ ದೇಶದ ಸಕಲ ಸಂಪನ್ಮೂಲಗಳನಿರ್ವಹಣೆ ಸರಿಯಾಗಿ ಆಗದೇ ಅನಾಹುತ ವಾಗುವ ಸಂಭವ ದೂರವೇನಿಲ್ಲಾ. ನಮ್ಮ ರಸ್ತೆಯನ್ನೇ ನೋಡಿ . ಒಂದು ರಸ್ತೆಯಲ್ಲಿ ಯೂ ಫುಟ್ ಪಾತ್ ಇಲ್ಲಾ. ಅಂದರೆ ನಮಗೆ ಅದನ್ನು ಕಟ್ಟುವ ಜ್ಞಾನ ವಿಲ್ಲಾ. ಅಕಸ್ಮಾತ್ ಕಟ್ಟಿದರೆ ಅದರ ನಿರ್ವಹಣೆಯ ಅಭಾವ ಕಂಡು ಬರುತ್ತದೆ. ಹೀಗೆ ರಸ್ತೆ ಕಟ್ಟುವ ಜ್ಞಾನ ದಿಂದ ಹಿಡಿದು ಸಿಟಿ ಪ್ಲಾನಿಂಗ್ ಇತ್ಯಾದಿ ನೆಲೆಗಳಲ್ಲಿ ನಮ್ಮ ಬಳಿ ನಮ್ಮ ನುಡಿಯಲ್ಲಿ ಯಾವುದೇ ಪುಸ್ತಕವಿಲ್ಲಾ. ಇದರಿಂದ ಸಾಮಾನ್ಯ ಜನರೂ ಕೈ ಚೆಲ್ಲಿ ಎಲ್ಲದಕ್ಕೂ ಸರ್ಕಾರದ ಕಡೆ ಮುಖ ಮಾಡಿ ಕೂತಿದ್ದಾರೆ.

ಇದೇ ವಿಷಯವಾಗಿ ಮೊನ್ನೆ ನಾವು ಒಂದು ಕಾರ್ಯಕ್ರಮವನ್ನು ಆಯೋಜಿಸಿದ್ದೆ. ಅಲ್ಲಿ ಮುಖ್ಯವಾಗಿ ಹೊರ ಬಂದ ಅಂಶವೆಂದರೆ ನಮ್ಮ ದಿನ ನಿತ್ಯದ ಸಮಸ್ಯೆಗಳಿಗೆ ಸರಳ ವಾದ ಪರಿಹಾರವನ್ನು ಕೊಡುವ ಜ್ಞಾನ ಭಂಡಾರವನ್ನು ನಾವು ಸ್ರುಷ್ಟಿ ಮಾಡ ಬೇಕು.
ಹಾಗಿದ್ದರೆ ನಮ್ಮ ದಿನ ನಿತ್ಯದ ಸಮಸ್ಯೆಗಳೇನು ?
1.ಟ್ರಾಫಿಕ್ ಸಮಸ್ಯೆ ಯಂತೂ ನಮ್ಮ ನ್ನು ಎಡಬಿಡದೇ ಕಾಡುವ ಪೆಡಂಭೂತವಾಗಿ ನಿಂತಿದೆ.
2.ನೀರು ನಮ್ಮ ಜೀವನಕ್ಕೆ ಆಸರೆ . ಅದನ್ನು ನಿರ್ವಹಿಸುವುದಕ್ಕೆ ಸಮುದಾಯಕ್ಕೆ ಆಗುತಿಲ್ಲಾ. ಹಾಗೇ ನೋಡಿದರೆ ನಮ್ಮ ಹಿಂದಿನವರು ಇದನ್ನು ಸಮರ್ಪಕವಾಗಿ ನಿರ್ವಹಿಸುವ ತಂತ್ರಜ್ಞಾನ ಮತ್ತು
ಜ್ಞಾನವನ್ನು ಹೊಂದಿದ್ದರು.
3.ಸದ್ಯಕ್ಕೆ ಮತ್ತೊಂದು ಸಮಸ್ಯೆ ಪವರ್ ಸಮಸ್ಯೆ. ಫ್ರಾಂಸ್ ದೇಶದಲ್ಲಿ ನ್ಯೂಕ್ಲಿಯರ್ ರಿಯಾಕ್ಟರ್ ಮೇಲೆ ಆವಲಂಭಿಸುವುದನ್ನು ಕಡೀಮೆ ಮಾಡುತ್ತಿರುವಾಗ ನಮ್ಮ ದೇಶ ನ್ಯೂಕ್ಲಿಯರ್ ರಿಯಾಕ್ಟರ್ ಗಳನ್ನು ಕಟ್ಟುವ ದು:ಸಾಹಸಕ್ಕೆ ಕೈ ಹಾಕಿದ್ದೇವೆ. ಪವರ್ ಸಮಸ್ಯೆ ರಾಜಕೀಯ ದುರೀಣರಿಂದ ಪರಿಹಾರವಗದಂತಹ ಸಮಸ್ಯೆ. ಇದಕ್ಕೆ ಉತ್ತಮ ಸಂಶೋಧನೆಯ ಆವಶ್ಯಕತೆಯಿದೆ.
ಸೋಲಾರ್ ಮತ್ತು ವಿಂಡ್ ಪವರ್ ಬಳಕೆಯನ್ನು ಮಾಡುವ ಬಗ್ಗೆ ತಿಳಿಸುವ ಪುಸ್ತಕ ಬೇಕು.
4.ಕಸ ನಿರ್ವಹಣೆ. ನಮ್ಮ ದೇಶದಲ್ಲಿ ಎಲ್ಲಿ ನೋಡಿದರು ಕಸವೇ ಕಸ. ಈ ಕಸವನ್ನು ರಸ ಮಾಡುವ ಸರಳ ದಾರಿ ಯನ್ನು ತಿಳಿಸುವ ಪುಸ್ತಕಗಳು ಹಾಗೂ ಸಿನಿಮಾಗಳು ಬರಬೇಕು.

5.ಆರೋಗ್ಯ ಮತ್ತು ಹೈಜಿನ್ ಬಗ್ಗೆ ನಮ್ಮ ಜನಕ್ಕೆ ನಿರ್ಲಕ್ಷ್ಯ . ಪಬ್ಲಿಕ್ ಟಾಯ್ಲೆಟ್ ಎಲ್ಲಿಯೂ ಇಲ್ಲಾ. ಈ ಟಾಯ್ಲೆಟ್ ಕಟ್ಟುವ ತಂತ್ರಗಳಾವುವು ಎ೦ಬುದರ ಅರಿವು ಬೇಕು.
6.ನಮ್ಮ ಖನಿಜ ಸಂಪತ್ತಿನ ಬಗ್ಗೆ ಯಾವುದೇ ಮಹಿತಿ ಕನ್ನಡದಲ್ಲಿ ಇಲ್ಲಾ. ಇ೦ದು ಇದು ಕೇವಲ ರೆಡ್ಡಿ ಸೋದರರಿಗೆ ತಿಳಿದಿರುವ ವಿಷಯವಾಗಿದೆ. ಈ ಖನಿಜ ಸಂಪತ್ತನ್ನು ಮಾಲಿನ್ಯ ರಹಿತ ವಾಗಿ ತೆಗೆಯುವುದು ಹೆ೦ಗೆ ?

ಮತ್ತೆ ಯಾವುದಾದರು ಮರೆತಿದ್ದರೆ ತಿಳಿಸಿ. ನೆನಪಿರಲಿ ಇದು ಸಾಮಾನ್ಯ ಮನುಷ್ಯರಿಗೆ ತಿಳಿವು ಮೂಡಿಸುವಂತಾಗಬೇಕು.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು