ದೇವರ ಅಸ್ತಿತ್ವ

To prevent automated spam submissions leave this field empty.

ಬುದ್ಧನು ದೇವರ ಬಗ್ಗೆ ಏನು ಹೇಳಿದ?
ಅವನು ದೇವರ ವಿಷಯವನ್ನೇ ಎತ್ತಲಿಲ್ಲ. ಬದುಕಿನ ಆಳ ಸತ್ಯಗಳನ್ನೇ ಕೆದಕುತ್ತಾ ಹೋದ. ಅನ್ವೇಷಿಸಿದ, ಬೋಧಿಸಿದ. ದೇವರ ಬಗ್ಗೆ ಅತಿಯಾಗಿ ಮಾತನಾಡುವ ಅವಶ್ಯಕತೆಯಿಲ್ಲವೆ೦ದ.

ಒಮ್ಮೆ ಬುದ್ಧನನ್ನು ಯಾರೋ ಕೇಳಿದರು,
'ದೇವರಿದ್ದಾನೆಯೇ?' ಎ೦ದು.
'ದೇವರಿದ್ದಾನೆ೦ದು ನಾನು ಹೇಳಿದೆನೇ?' ಎ೦ದು ಬುದ್ಧ ಮರುಪ್ರಶ್ನಿಸಿದ.
ಆಗ ಆ ವ್ಯಕ್ತಿ, 'ಹಾಗಾದರೆ ದೇವರಿಲ್ಲವೆ೦ದಾಯ್ತು.' ಎ೦ದು ಹೇಳಿದ.
'ದೇವರಿಲ್ಲವೆ೦ದು ಹೇಳಿದೆನೇ ನಾನು?' ಎ೦ದು ಬುದ್ಧ ಹೇಳಿದ.

ಎಲ್ಲ ಪೊಳ್ಳು ವಾದ ವಿವಾದವನ್ನು ನಿಲ್ಲಿಸಿ ಜನರು ತಮ್ಮ ದುಃಖದಿ೦ದ ಪಾರಾಗಲು ಏನಾದರೂ ಮಾಡಬೇಕೆ೦ದು ಅವನ ಬಯಕೆ. ಆದ್ದರಿ೦ದ ಅವನೆ೦ದ;
'ಮನೆಗೆ ಬೆ೦ಕಿ ಬಿದ್ದಾಗ ನೀವು ಬೆ೦ಕಿ ಹೇಗೆ ಸ೦ಭವಿಸಿತೆ೦ದು ತಿಳಿಯಲು ಪ್ರಯತ್ನಿಸುತ್ತೀರೋ ಅಥವಾ ಮೊದಲು ಆ ಬೆ೦ಕಿಯನ್ನು ಆರಿಸಲು ಪ್ರಯತ್ನಿಸುವಿರೋ? ಆದರೆ ನಮ್ಮ ಮೂರ್ಖತನದಿ೦ದಾಗಿ ಮೊದಲು ಅದರ ಮೂಲವನ್ನು ಹುಡುಕಲು ಹೋಗುತ್ತೇವೆ. ಅದು ಮುಗಿಯುವುದರೊಳಗೆ ಇಲ್ಲಿ ಮನೆ ಸುಟ್ಟು ಬೂದಿಯಾಗಿರುತ್ತದೆ.'

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಹೀಗೆ ಒಂದೊಂದೇ ನುಡಿಮುತ್ತುಗಳು ಬರಲಿ. ನಿಜ, ಬೆಂಕಿ ಆರಿಸುವ ಕೆಲಸವಾಗಬೇಕಿದೆ.ಬೆಂಕಿಯನ್ನು ಯಾರು ಹಾಕಿದರರೇನು,ಬೆಂಕಿಗೆ ಕಾರಣ ವೇನು, ಅದರ ಮೂಲವೇನು, ಎಂದು ಹುಡುಕುತ್ತಾ, ಕೆದಕುತ್ತಾ ಕೂರುವಷ್ಟು ಸಮಯವಿಲ್ಲ.ಮೊದಲು ಬೆಂಕಿ ನಂದಿಸುವ ಕೆಲಸವಾಗಬೇಕು. ತಂಪೆರೆಯುವ ಕೆಲಸವಾಗಬೇಕು,ಮನಸ್ಸು ಅರಳಿಸುವಕೆಲಸವಾಗಬೇಕು.

ಬೆಂಕಿ ಅದರ ತಾಂಡವ ನೃತ್ಯ ಮಾಡುತ್ತಿರುವುದು ಸುಳ್ಳಲ್ಲ. ಆದರೆ ಕೆಲವರು ಹೇಳಬಹುದು-ಅದು ನಿಮ್ಮ ಭ್ರಮೆ ಎಂದು. ಬೆಂಕಿಯ ಆಟ ಕಾಣುತ್ತಿದೆಯಲ್ಲಾ! ಅಂತೂ ಅದನ್ನು ನಂದಿಸುವ ಕೆಲಸ ಆಗಲೇ ಬೇಕು. ಇದಕ್ಕೆ ಬುದ್ಧ, ಬಸವ,ಶಂಕರ,ಗಾಂಧಿ...........ನಮ್ಮ ದೇಶದಲ್ಲಿ ಜನ್ಮತಾಳಿದ ದಾರ್ಶನಿಕರಿಗೇನೂ ಕೊರತೆ ಇಲ್ಲ. ಯಾರ ಪಥದಲ್ಲಿ ಹೋದರೂ " ಸರ್ವ ದೇವ ನಮಸ್ಕಾರ: ಕೇಶವಂ ಪ್ರತಿ ಗಚ್ಛತಿ"- ಇದು ನಮ್ಮ ವಿಚಾರ,ಅಲ್ಲವೇ?

>> ಕತೆಯ ಆಧಾರ ತಿಳಿಸಿರಿ ... ನೀವು ಬುದ್ಧನ ಈ ಘಟನೆಯನ್ನು ನೋಡಿದ್ದೀರ?
ಅವರು ನೋಡಿದ್ದರೆ ನಿಮಗೆ "ಆಧಾರ" ಹೇಗೆ ಸಿಕ್ಕುತ್ತೆ? :-)

ಕ್ಷಮೆ ಇರಲಿ. ಮೇಲಿನ ಪ್ರತಿಕ್ರಿಯೆ ಮಾಯ್ಸರ ಕಮೆಂಟು (ಸಂಖ್ಯೆ 64298) ಕ್ಕೆ ಸೆರಬೇಕದದ್ದು.

ಆದರೂ ಆ ಬೆಂಕಿ ನಂದೀತೇನೋ ಎಂಬ ನಂಬಿಕೆಯಿಂದ ನಡೆಯುವುದಿದೆಯಲ್ಲ, ಹಾಗೆಂದು ದೇವರ ಮೇಲೆ ಭಾರ ಹಾಕುವುದಕ್ಕೆ ಏನೆನ್ನುತ್ತೀರಾ?

[quote]ಅಡುಗೆ ಅನಿಲವು ಸೋರಿ ಬೆಂಕಿ ಹತ್ತಿಕೊಂಡರೆ ನೀರು ಸುರಿದು ಅದನ್ನು ಆರಿಸಲಾದೀತೇ?[/quote] ಡಾ| ಶ್ರೀನಿವಾಸ ಕಕ್ಕಿಲ್ಲಾಯ

[quote]ಎಲ್ಲ ಪೊಳ್ಳು ವಾದ ವಿವಾದವನ್ನು ನಿಲ್ಲಿಸಿ ಜನರು ತಮ್ಮ ದುಃಖದಿ೦ದ ಪಾರಾಗಲು ಏನಾದರೂ ಮಾಡಬೇಕೆ೦ದು ಅವನ ಬಯಕೆ. ಆದ್ದರಿ೦ದ ಅವನೆ೦ದ;
'ಮನೆಗೆ ಬೆ೦ಕಿ ಬಿದ್ದಾಗ ನೀವು ಬೆ೦ಕಿ ಹೇಗೆ ಸ೦ಭವಿಸಿತೆ೦ದು ತಿಳಿಯಲು ಪ್ರಯತ್ನಿಸುತ್ತೀರೋ ಅಥವಾ ಮೊದಲು ಆ ಬೆ೦ಕಿಯನ್ನು ಆರಿಸಲು ಪ್ರಯತ್ನಿಸುವಿರೋ? ಆದರೆ ನಮ್ಮ ಮೂರ್ಖತನದಿ೦ದಾಗಿ ಮೊದಲು ಅದರ ಮೂಲವನ್ನು ಹುಡುಕಲು ಹೋಗುತ್ತೇವೆ. ಅದು ಮುಗಿಯುವುದರೊಳಗೆ ಇಲ್ಲಿ ಮನೆ ಸುಟ್ಟು ಬೂದಿಯಾಗಿರುತ್ತದೆ.' [/quote] ಡಾ| ಜ್ಞಾನದೇವ್ ಮೊಳಕಾಲ್ಮುರು , ಇವರ ಬರೆಹದಿನ್ದ.

ನೀರು ಸುರಿಯುವ ಕುರಿತು ಅವರು ಏನೂ ಬರೆಯಲಿಲ್ಲ. ಆರಿಸುವ ವಿಧಾನಗಳ ಆರಯ್ಯುವುದು - ಇಷ್ಟು ಅರಿತರೆ ಸಾಲುವುದು.

ಹೀಗೆ ಯೋಚನೆ ಮಾಡುತ್ತ ಕೂರಬಹುದು,,., ಎಲ್ಲ ಉರಿದು ಹೋಗುತ್ತದೆ.. ಕೆಲವೊಮ್ಮೆ ಬೆಂಕಿಗೆ ಕಾರಣವೂ ಗೊತ್ತಿರುವುದಿಲ್ಲ ಅದಕ್ಕೆ ಸಮಯವೂ ಇರುವುದಿಲ್ಲ.. ,, ಆಗ ಏನು ಮಾಡುವುದು? ಬೆಂಕಿಗೆ ಕಾರಣ ಹುಡುಕಿ, ಅದನು ಆರಿಸಲು ಯಾವ ಯಾವ ರಾಸಯನಿಕ ವಸ್ತುಗಳು ಬೇಕು ಅದನ್ನು ಹುಡುಕಿ ತರುವ ಪ್ರಯತ್ನ ಮಾಡುವುದೋ? ಇಷ್ಟೆಲ್ಲ ಆಗುವ ಹೊತ್ತಿಗೆ ಬೆಂಕಿ ಪಕ್ಕಕ್ಕೂ ಹರಡಿರುತ್ತದೆ.. ಪಕ್ಕದಲ್ಲಿ ಕೂತು ಯೋಚಿಸುತ್ತಾ ಇದ್ದರೆ... ಅಲ್ಲದೆ ಈ ಕತೆಯಲ್ಲಿ ಎಲ್ಲೂ ಬೆಂಕಿಗೆ ನೀರು ಮಾತ್ರ ಹಾಕಿ ಆರಿಸಿ ಎಂದು ಹೇಳಿಲ್ಲ.. ಬೆಂಕಿ ಆರಿಸಬೇಕು ಎಂದಷ್ಟೆ ಹೇಳಿರುವುದು.

ಗಡ್ಡಕ್ಕೆ ಬೆಂಕಿ ಬಿದ್ದಾಗ ಬೆಂಕಿಯಲ್ಲೇ ಬೀಡೀ ಹತ್ತಿಸ್ಕೊಳ್ಳುವುದೊ? ಇಲ್ಲ ಬೆಂಕಿ ಆರಿಸಲು ಗಡ್ಡ ನೀರಲ್ಲಿ ಅದ್ದುವುದೋ ? individual's choice ಅಂದರೆ ಏನೂ ಮಾಡಲು ಆಗುವುದಿಲ್ಲ.

ಡಾ| ಜ್ನಾನದೇವರೆ, ಕತೆ ಅರ್ಥಪೂರ್ಣವಾಗಿದೆ. ಧನ್ಯವಾದಗಳು

ನಾನು ಓದಿದ ಪುಸ್ತಕ - ಯಾವುದಂತ ಕೇಳೋರಿಗೆ - ಈಗಲೇ ಹೇಳಿಬಿಡ್ತೀನಿ - ವಿಜ್ಜಾಚರಣ ಸಂಪನ್ನ - ಅಂತ (ಮೂಲ ಪಾಲಿ ಭಾಷೆಯ ಸಾಹಿತ್ಯ ಆಧರಿಸಿದ ಪುಸ್ತಕ - ಅದರಲ್ಲಿ ಬುದ್ಧ ನಡುರಾತ್ರಿ ಎದ್ದು ಹೋಗೋದಿಲ್ಲ - ಆ ತರ ಎದ್ದು ಹೋಗಿರೋರು ಬೇರೆ ಯಾರೋ - ಅದನ್ನ ಇವನಿಗೆ ಆರೋಪಿಸಿ - ಚಿತ್ರ , ಕತೆ , ಕಾವ್ಯ ಎಲ್ಲ ...... ... ಆ ಪುಸ್ತಕ ಎಲ್ಲಿ ಅಂತ ಕೇಳ್ಬೇಡಿ ನಾನು ಲೈಬ್ರರಿಯಲ್ಲಿ ಓದಿದ್ದೆ - ಕಾವ್ಯಾಲಯ ಪ್ರಕಾಶನ , ಮೈಸೂರು ಪ್ರಕಟಿಸಿರೋದು- ಔಟ್ ಆಫ್ ಪ್ರಿಂಟು - ನೀವು ಹುಡುಕಿ ಸಿಕ್ಕರೆ ನಂಗೆ ತಿಳಿಸಿ - ನಂಗೂ ಒಂದು ಪ್ರತಿ ಬೇಕು )

ಅದರಲ್ಲಿರೋ ಮಾತು ಹೀಗಿದೆ - (ಬೆಂಕಿಯ ಪ್ರಸ್ತಾಪ ಇಲ್ಲ )
ಒಬ್ಬನಿಗೆ ಬಾಣ ತಗುಲಿ ಗಾಯ ಆಗಿದೆ . ಆ ಗಾಯ ಎಷ್ಟು ಆಳವಾಗಿದೆ. ಅದಕ್ಕೆ ಏನು ಔಷಧಿ ಮಾಡಬೇಕು ಅನ್ನೋದು ಮುಖ್ಯಾನೇ ಹೊರತು , ಆ ಬಾಣ ಬಿಟ್ಟೋರು ಯಾರು , ಗಂಡಸೇ, ಹೆಂಗಸೇ ? ಏನು ವಯಸ್ಸು ? ಯಾವ ಜಾತಿ ? ಇವೆಲ್ಲ ಮುಖ್ಯವಲ್ಲ.

ಹಾಗೆ ನಮ್ಮ ಮುಂದಿರೋ ಪ್ರಶ್ನೆ ಈ ಬದುಕಿನಲ್ಲಿರೋ ಸಮಸ್ಯೆಗಳು- ದು:ಖ ಇತ್ಯಾದಿ - ಅವಕ್ಕೆ ಪರಿಹಾರ ಕಂಡ್ಕೊಳ್ಳಬೇಕಿದೆಯೇ ಹೊರತು , ಈ ಸೃಷ್ಟಿ , ಬ್ರಹ್ಮಾಂಡ , ಯಾರು ಮಾಡಿದ್ರು , ಯಾಕೆ ಮಾಡಿದ್ರು ? ಇತ್ಯಾದಿ ತಿಳಕೊಂಡು ಏನು ಉಪಯೋಗ ? ಅಂತ ಅವನ ಅಭಿಪ್ರಾಯ .

ಬೆಂಕಿ ವಿಷ್ಯ ಬಿಟ್ಟು ಇನ್ನು ಬಾಣದ ಬೆನ್ನು ಹತ್ತಿ :)

ಒ೦ದು ಅರ್ಥಪೂರ್ಣ ಬರಹಕ್ಕೆ ತು೦ಬಾ ಗ೦ಭೀರ ಹಾಗೂ ಅರ್ಥಪೂರ್ಣ ಚರ್ಚೆ ಯಾಗಿದೆಯೆ೦ದು ನಾನು ಭಾವಿಸುತ್ತೇನೆ. ಈ ಚರ್ಚೆಯಲ್ಲಿ ಅನೇಕ ಹೊಳಹುಗಳು ಹೊರಬ೦ದಿವೆ. ಪ್ರತಿಕ್ರಿಯಿಸಿದ ಎಲ್ಲ ಸ೦ಪದಿಗ ಮಿತ್ರರಿಗೆ ಧನ್ಯವಾದಗಳು.

[quote]ಎಲ್ಲ ಪೊಳ್ಳು ವಾದ ವಿವಾದವನ್ನು ನಿಲ್ಲಿಸಿ ಜನರು ತಮ್ಮ ದುಃಖದಿ೦ದ ಪಾರಾಗಲು ಏನಾದರೂ ಮಾಡಬೇಕೆ೦ದು ಅವನ ಬಯಕೆ. ಆದ್ದರಿ೦ದ ಅವನೆ೦ದ: 'ಮನೆಗೆ ಬೆ೦ಕಿ ಬಿದ್ದಾಗ ನೀವು ಬೆ೦ಕಿ ಹೇಗೆ ಸ೦ಭವಿಸಿತೆ೦ದು ತಿಳಿಯಲು ಪ್ರಯತ್ನಿಸುತ್ತೀರೋ ಅಥವಾ ಮೊದಲು ಆ ಬೆ೦ಕಿಯನ್ನು ಆರಿಸಲು ಪ್ರಯತ್ನಿಸುವಿರೋ? ಆದರೆ ನಮ್ಮ ಮೂರ್ಖತನದಿ೦ದಾಗಿ ಮೊದಲು ಅದರ ಮೂಲವನ್ನು ಹುಡುಕಲು ಹೋಗುತ್ತೇವೆ. ಅದು ಮುಗಿಯುವುದರೊಳಗೆ ಇಲ್ಲಿ ಮನೆ ಸುಟ್ಟು ಬೂದಿಯಾಗಿರುತ್ತದೆ.'[/quote]

ಸಮಸ್ಯೆಯ ಮೂಲವನ್ನು ಹುಡುಕಬೇಕಾಗಿಲ್ಲವೆಂದು ಬುದ್ಧ ಹೇಳಿದನೇ? ಸಮಸ್ಯೆಯ ಕಾರಣವೇನೆಂದು ಅರಿಯದೆ ಅದನ್ನು ಪರಿಹರಿಸಲು ಸಾಧ್ಯವೇ? ಬೆ೦ಕಿ ಹೇಗೆ ಸ೦ಭವಿಸಿತೆ೦ದು ತಿಳಿಯಲು ಬಹಳ ಕಷ್ಟವೇ? ಅದರ ಕಾರಣವು ತಿಳಿಯದೆ ಅದನ್ನು ನಿಯಂತ್ರಿಸುವುದು ಸುಲಭವೇ? ಸುಳ್ಳು ಕಾರಣಗಳನ್ನು ಮುಂದೊಡ್ಡಿ ಹಚ್ಚಲಾಗುತ್ತಿರುವ ಬೆಂಕಿಯನ್ನು ನಿಯಂತ್ರಿಸಬೇಕಾದರೆ ಸುಳ್ಳುಗಳನ್ನು ಖಂಡಿಸಿ ಸತ್ಯವನ್ನು ಎತ್ತಿತೋರಬೇಡವೇ? ಸುಳ್ಳನ್ನು ಸಾವಿರ ಸಲ ಹೇಳಿದರೆ ಅದೇ ಸತ್ಯವಾಗುತ್ತದೆಯೇ?

ಬುದ್ಧನೊಬ್ಬ ವಿಚಾರವಾದಿಯಾಗಿದ್ದ. ಯಾವುದನ್ನೂ ಸುಮ್ಮನೆ ನಂಬಬೇಡಿ ಎಂದ. ಎಲ್ಲವನ್ನೂ, ಎಲ್ಲರನ್ನೂ ಪ್ರಶ್ನಿಸಿ ಎಂದ, ತಾನೂ ಪ್ರಶ್ನಿಸಿದ. "ಯಾರೋ ಹೇಳಿದರೆಂದ ಮಾತ್ರಕ್ಕೆ ಏನನ್ನೂ ನಂಬಬೇಡಿ. ಗುರುವಿನ ಬಗ್ಗೆ ನಿಮಗೆ ಗೌರವವಿದೆಯೆಂದ ಮಾತ್ರಕ್ಕೆ ಗುರುವು ಹೇಳಿದ್ದನ್ನೆಲ್ಲ ನಂಬಬೇಡಿ. ಸರಿಯಾಗಿ ಪರೀಕ್ಷಿಸಿ, ವಿಶ್ಲೇಷಿಸಿದಾಗ ಎಲ್ಲರಿಗೂ ಕರುಣೆ ತೋರುವ, ಒಳಿತಾಗುವ, ಪ್ರಯೋಜನಕರವಾದ, ಹಿತಕರವಾದ ಮಾರ್ಗವೆಂದು ಕಂಡುದನ್ನೇ ನೆಚ್ಚಿಕೋ, ಅದನ್ನೇ ಅನುಸರಿಸು" ಎಂದ. ತನ್ನನ್ನೂ ಜನರು ಸುಮ್ಮನೆ ನಂಬಬಾರದು ಎನ್ನುವುದು ಬುದ್ಧನ ನಿಲುವು.
ಇಲ್ಲಿದೆ

ಹಾಗಿರುವಾಗ ಆಧಾರವೆಲ್ಲಿ ಎಂದು ಕೇಳುವುದರಲ್ಲಿ, ಪ್ರಶ್ನಿಸುವುದರಲ್ಲಿ, ವೈಚಾರಿಕ/ವೈಜ್ಞಾನಿಕ ಮನೋಭಾವವನ್ನು ಹೊಂದಿರುವುದರಲ್ಲಿ ತಪ್ಪೇನು? ಹೀಯಾಳಿಕೆ ಯಾಕೆ?

[quote]"ಪ್ರತಿಯೊಂದಕ್ಕೂ ಆಧಾರ ಕೇಳುವವರು ನಾಳೆ ಬುದ್ದ ಹುಟ್ಟಿದುದಕಿರಲಿ ಸ್ವತ: ತಮ್ಮ ಹುಟ್ಟಿಗೆ ಆಧಾರ ಕೇಳಲು ಹಿಂಜರೆಯುವುದಿಲ್ಲ"[/quote]

ತಮ್ಮ ಹುಟ್ಟಿಗೂ ಆಧಾರ ಕೇಳಿದರೇನು ತಪ್ಪು? ಹಲವರು ’ನಂಬುವ’ ಮಹಾಕಾವ್ಯಗಳಲ್ಲೂ, ಪುರಾಣಗಳಲ್ಲೂ ಅಪ್ಪ/ಅಮ್ಮ ತಪ್ಪಿಹೋದದ್ದು/ಬದಲಾದದ್ದು/ನಿಯೋಗ ಮಾಡಿಸಿದ್ದು ಇತ್ಯಾದಿ ನಿದರ್ಶನಗಳಿಲ್ಲವೇ? ಎಂತೆಂತದೋ ಗೊಂದಲಗಳಿಲ್ಲವೇ? ಯಾರೋ ದತ್ತು ಪಡೆದು ಎಲ್ಲೋ ಬೆಳೆದ ಮಕ್ಕಳು ತಮ್ಮ ಅಮ್ಮನಾರೆಂದು ಹುಡುಕಿಕೊಂಡು ಹೋಗುವುದಿಲ್ಲವೇ? ಅದು ತಪ್ಪೇ?

ಎಲ್ಲಿ ಸಂಶಯಗಳಿವೆಯೋ ಅಲ್ಲಿ ಸ್ವಾತಂತ್ರ್ಯವಿದೆ ಎಂಬುದೊಂದು ಲ್ಯಾಟಿನ್ ನುಡಿ. ಕೆಲವರು ಪ್ರಶ್ನೆಗಳನ್ನು ಕೇಳದೆ/ಕೇಳಲಾಗದೆ ತಮ್ಮ ಸ್ವಾತಂತ್ರ್ಯವನ್ನು ತಾವಾಗಿ ಕಳೆದುಕೊಳ್ಳುತ್ತಾರೆ. ಇನ್ನು ಕೆಲವೆಡೆ ಪ್ರಶ್ನೆಗಳನ್ನು ಕೇಳುವುದಕ್ಕೆ ಅವಕಾಶಗಳೇ ಇರುವುದಿಲ್ಲ, ಕೇಳುವವರ ಬದುಕು ದುಸ್ತರವಾಗುತ್ತದೆ - ಅದನ್ನು ನಿರಂಕುಶ ಪ್ರಭುತ್ವ, ಫ್ಯಾಸಿಸಂ ಇತ್ಯಾದಿಯಾಗಿ ಕರೆಯುತ್ತಾರೆ. ಸ್ವಾತಂತ್ರ್ಯವಿದ್ದರೆ/ಉಳಿಸಿಕೊಂಡರೆ ಒಳ್ಳೆಯದು.

ಹಾಗೆಯೇ, ತಿರುಪತಿ ತಿಮ್ಮಪ್ಪನನ್ನು ಭಜಿಸುತ್ತಾ ಕಾಯುವವರಿಗೆ ಶುಭವಾಗಲಿ.

<<<ಎಲ್ಲಿ ಸಂಶಯಗಳಿವೆಯೋ ಅಲ್ಲಿ ಸ್ವಾತಂತ್ರ್ಯವಿದೆ ಎಂಬುದೊಂದು ಲ್ಯಾಟಿನ್ ನುಡಿ.>>
ಒಪ್ಪಿಕೊಳ್ಳುವ ಸ೦ಗತಿ.

ಬುದ್ಧ ಪ್ರಶ್ನಿಸಬೇಡಿ ಎಂದು ಹೇಳಿದ್ದಾರೆ ಎಂದು ಪ್ರತಿಬಿಂಬಿತವಾಗಿದೆ. ಫಿಲಾಸಪಿ ತಮ್ಮ ಮೂಗಿನ ನೇರೆಕ್ಕೆ ಹೇಗೆ ಬೇಕಾದರೆ ಯಾವುದಾದರೂ ಒಂದು ತುಣುಕನ್ನು ತೆಗೆದು ಪ್ರತಿಪಾದಿಸಬಹುದೆಂಬುದಕ್ಕೆ ಇದು ಉದಾಹರಣೆ. ಎಸ್ ಕಕ್ಕಿಲಾಯರವ ಅಭಿಪ್ರಾಯ ಅರ್ಥಪೂರ್ಣವಾಗಿದೆ. ಬೆಂಕಿ ಬಿದ್ದಾಗ ಮೂಲ ಹುಡುಕುವುದಕ್ಕೆ ಸಮಯವಿರುವುದಿಲ್ಲ. ಆದರೆ ಇದು ಎಲ್ಲಾದಕ್ಕೂ ಅನ್ವಯಿಸುವುದಿಲ್ಲ. ಪ್ರಶ್ನಿಸಿ, ಪ್ರಶ್ನಿಸಿ. ಅದೇ ಅರಿವಿನ, ಸತ್ಯವನ್ನು ತಿಳಿಯುವ ದಾರಿ.

ಬೆಂಕಿ ಹತ್ತಿದ ಮೇಲೆ ಆರಿಸಬೇಕು ಸರಿ. ಅದರ ಮೂಲ ಹುಡುಕಿ ಕಾಲಹರಣ ಮಾಡುವುದರಲ್ಲಿ ಅರ್ಥವಿಲ್ಲ. ಆದರೆ ಬೆಂಕಿ ಹಚ್ಚುತ್ತಿದ್ದಾರಲ್ಲ, ಸ್ವಾಮಿ? ದೇವರು, ಜಾತಿ, ಧರ್ಮದ ಹೆಸರಲ್ಲಿ. ಆಗ ಮೂಲ ಕೆದಕಬೇಕಲ್ಲವೇ? ಸತ್ಯವನ್ನು ತಿಳಿಯುವ, ತಿಳಿಸುವ ಪ್ರಯತ್ನ ನಡೆಯಬೇಕಲ್ಲವೇ? ಬುದ್ಧ ಯಾವದೋ ಕ್ಷಣದಲ್ಲಿ ಹೇಳಿದ ನುಡಿಯನ್ನು ಬರೆದು ದೇವರ ಬಗ್ಗೆ ಪ್ರಶ್ನಿಸಬೇಡಿ, ಅದರ ಹೆಸರಲ್ಲಿ ಅನ್ಯಾಯ, ಮೋಸಗಳು ಸರಾಗವಾಗಿ ನಡೆಯತ್ತಿರಲಿ ಎನ್ನುವುದು ಎಷ್ಟು ಸಮರ್ಪಕ? ಬೆಂಕಿ ಹತ್ತಿದಾಗ ಆರಿಸಿ ಆದರೆ ಹಚ್ಚುತ್ತಿರುವವರನ್ನು ಹಚ್ಚುವಾಗಲೇ ಬಯಲಿಗೆಳಿಯಿರಿ, ಸರಿ ತಾನೇ? ಆಗ ಬೆಂಕಿ ಆರಿಸಬೇಕಾಗಿಲ್ಲ!