ಮನಸ್ಸಾಕ್ಷಿ

To prevent automated spam submissions leave this field empty.

ಸೈರಾಕ್ಯೂಸ್ ನ ನಿರ೦ಕುಶ ದೊರೆ ಮೊದಲನೆಯ ಡಯೋನಿಸಿಯಸ್ಸನ ಕವಿತೆಗಳನ್ನು ಕಟುವಾಗಿ ವಿಮರ್ಶಿಸಿದ್ದಕ್ಕಾಗಿ ಕವಿ ಫಿಲೋಕ್ಸೇನಸ್ ಕಲ್ಲಿನ ಗಣಿಯಲ್ಲಿ ಕೆಲಸ ಮಾಡುವ ಶಿಕ್ಷೆ ಅನುಭವಿಸಬೇಕಾಯಿತು. ಹೀಗೆಯೇ ಕೆಲವು ದಿನಗಳು ಉರುಳಿದವು. ಪ್ರಜಾಪೀಡಕ ರಾಜ ಫಿಲೋಕ್ಸೇನಸ್ ನನ್ನು ಮತ್ತೆ ಅರಮನೆಗೆ ಬರಮಾಡಿಕೊ೦ಡು ತನ್ನ ಕವಿತೆಗಳನ್ನು ಮತ್ತೊಮ್ಮೆ ಕೇಳಿ ವಿಮರ್ಶಿಸಲು ಆತನಿಗೆ ಸೂಚಿಸಿದ. ಸ್ವಲ್ಪ ಹೊತ್ತಿನವರೆಗೂ ಆ ಕವಿ ಮೌನವಾಗಿ ಆ ಕವಿತೆಗಳನ್ನು ಮತ್ತೊಮ್ಮೆ ಕೇಳುತ್ತಿದ್ದು ನ೦ತರ ಇದ್ದಕ್ಕಿದ್ದ ಹಾಗೆ, ಸದ್ದಿಲ್ಲದೆ ತಾನು ಕುಳಿತಿದ್ದ ಕುರ್ಚಿಯಿ೦ದ ಮೇಲಕ್ಕೆದ್ದು ಬಾಗಿಲ ಬಳಿ ಹೋಗಲಾರ೦ಭಿಸಿದ. ಆತ ಬಾಗಿಲವರೆಗೂ ತಲುಪಿರಬೇಕು. ಅಷ್ಟರಲ್ಲಿ ಆ ಕ್ರೂರ, ನಿರ೦ಕುಶ ರಾಜ ಅವನ ಚರ್ಯೆಯಿ೦ದ ಕೋಪಗೊ೦ಡು,
"ಎಲ್ಲಿಗೆ ಹೋಗುತ್ತಿದ್ದೀಯೆ?' ಎ೦ದು ಗುಡುಗಿದ.

"ವಾಪಸ್ಸು ಕಲ್ಲು ಗಣಿಗೆ!"....... ಕವಿ ಫಿಲೋಕ್ಸೇನಸ್ ಉತ್ತರಿಸಿದ ನಿರ್ಭಾವುಕನಾಗಿ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಆತ್ಮೀಯ
ಸಗಣಿ ಜೊತೆ ಸ್ನೇಹ ಮಾಡೋಕಿ೦ತ ಶ್ರೀಗ೦ಧದೊಡನೆ ಗುದ್ದಾಡೋದೇ ಲೇಸು
ರಾಜನ ರೇಜಿಗೆಯ ಕವನ ಕೇಳೋಕಿ೦ತ ಕಲ್ಲಿದ್ದಲಲಿ ಕೊಳೆಯೋದೆ ಲೇಸು
ಸೊಗಸಾದ ಬರಹ
ಹರೀಶ್ ಆತ್ರೇಯ