ಬೂಟಾಟಿಕೆ

To prevent automated spam submissions leave this field empty.
ಸಮಾಜದಿ ಇನ್ನೊಂದು ಪಿಡುಗಿನ ಬಗ್ಗೆ ನನ್ನ ಚಿಂತನೆ. ಇದರಿಂದ ಯಾರದೂ ಮನ ನೋಯುವುದಿಲ್ಲ ಎಂದು ನನ್ನ ಅನಿಸಿಕೆ. ಮನನೋಯುವಂತಿದ್ದರೆ ದಯವಿಟ್ಟು ತಿಳಿಸಿ - ಇದನ್ನು ತೆಗೆದಿಬಿಡುವೆ. ಜನಸಾಗರದಿ ಹಾದಿ ತೋರುವ ಅಧಿಪತಿ ದೇವರ ಅಪರಾವತಾರವೆನ್ನುವ ಮಠಾಧಿಪತಿ ದಿನಂಪ್ರತಿ ಜನಸಾಮಾನ್ಯರಿಗೆ ದಿವ್ಯದರ್ಶನ ಮ್ಯಾನೇಜರರು ಇವರಿಗೆ ತೋರಿಸುವರು ಲೋಕದರ್ಶನ ಜರಿಶಾಲು ಪಾದುಕೆಗಳ ತೊಟ್ಟವರ ದರ್ಬಾರು ಧರ್ಮದರ್ಶಿಗಳದೇ ಇಲ್ಲೆಲ್ಲಾ ಕಾರುಬಾರು ಎಲ್ಲರ ಮತಿಗಳಿಗೆ ಅಧ್ಯಾತ್ಮದ ಪ್ರವಚನ ಬಡವ ಬಲ್ಲಿದರಿಗೆ ತಕ್ಕಂಥ ಫಲದಾನ ಇಂದ್ರಜಾಲ ಮಾಯಾಜಾಲ ಇವರಿಗೆ ಲೀಲಾಜಾಲ ಸುಖದ ಸುಪ್ಪತ್ತಿಗೆ ತೋರಿಸುತಿಹುದು ತನ್ನ ಲೀಲ ಲೌಕಿಕ ಎಲ್ಲ ಬಿಟ್ಟ ನಿರಾಭರಣ ದೇವ ಧರ್ಮದರ್ಶಿಗಳ ಎದುರಿಸೆ, ಸೇರುವರು ದೈವ ದರ್ಶಿಗಳು ಹೇಳಿದಂತೆ ಕೇಳದಿರಲು ಇಳಿಯಬೇಕಾದೀತು ಬೃಂದಾವನದೊಳು ಜೀವನದಿ ಏಕೀ ಆಷಾಢಭೂತಿಯ ನಾಟಕ ಇವರಿಗೇ ಪ್ರತ್ಯೇಕವಾಗಿಹುದೇ ನಾಕ ನರಕ ಎಲ್ಲರಂತೆ ಇವರಲೂ ಇಹುದಲ್ಲವೇ ಆತ್ಮ ಇವರಿಗೆ ಮಾತ್ರ ಬೇರೆ ಪಂಕ್ತಿ ಇಟ್ಟಿಹನೇ ಪರಮಾತ್ಮ ಸಮಾಜದಿ ನಿಮ್ಮೊಳು ಕಾಣಿಹಿರೇ ನೀವು ಇಂಥವರನು ಇವರನು ನಾವೇನಂಥ ಹೆಸರಿಸಬಹುದು ಹೇಳಿ
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಕವನ ಚೆನ್ನಾಗಿದೆ. ಆದರೆ "ಎಲ್ಲರ ಮತಿಗಳಿಗೆ ಅಧ್ಯಾತ್ಮದ ಪ್ರವಚನ, ಬಡವ ಬಲ್ಲಿದರಿಗೆ ತಕ್ಕಂಥ ಫಲದಾನ" ಇದರ ಅರ್ಥ ಸರಿಯಾಗಿ ಆಗಲಿಲ್ಲ.ಸ್ವಲ್ಪ ಬಿಡಿಸಿ ಹೇಳಿ.

ಮಠ, ಆಶ್ರಮಗಳಲ್ಲಿ ಅಧ್ಯಾತ್ಮ ಪ್ರವಚನ ಎಲ್ಲರಿಗೂ ನೀಡುವರು. ಇಲ್ಲಿ ಭೇದಭಾವ ಮಾಡುವುದಿಲ್ಲ. ಆದರೆ ಸ್ವಾಮಿಗಳಿಂದ ಮರ್ಯಾದೆ ಮಾಡಿಸುವಾಗ (ವಿಶೇಷ ದಿನಗಳಲ್ಲಿ ಕಂಡು ಬರುವುದು), ಶ್ರೀಮಂತ ಭಕ್ತರಿಗೆ ಬೆಲೆಬಾಳುವ ಉಡುಗೊರೆ ಕೊಡುವರು. ಹಾಗೇ ಬಡವರಾದರೆ ಒಂದು ಬಾಳೆಹಣ್ಣನ್ನೋ ಅಥವಾ ಮಂತಾಕ್ಷತೆಯನನೋ ಕೊಡುವರು. ಸಾಮಾನ್ಯವಾಗಿ ಎಲ್ಲ ಮಠ, ಆಶ್ರಮಗಳಲ್ಲೂ ಕಾಣಬರುವುದು ಅಂದ್ರೆ ಅಲ್ಲಿಗೆ ಬರುವವರ ಅಂತಸ್ತಿಗೆ ತಕ್ಕಂತೆ ಮರ್ಯಾದೆ ನೀಡುವರು ಅಂದ್ರೆ ಮುಖ ನೋಡಿ ಮಣೆ ಹಾಕುವರು. ಅದನ್ನೇ ಇಲ್ಲಿ ತಿಳಿಸಿರುವುದು. ಕೆಲವರು ಮಠ ಅಥವಾ ಆಶ್ರಮಗಳಿಗೆ ಹತ್ತಿರವಾಗಿರುವರು. ಅವರಿಗೆ ಈ ಮಾತುಗಳು ಜೀರ್ಣಿಸುವುದಿಲ್ಲ. ಅದಕ್ಕೇ ಯಾರೂ ತಪ್ಪು ತಿಳಿಯಬಾರದು ಎಂದು ಮೊದಲೇ ತಿಳಿಸಿರುವೆ. ನಾನೂ ಒಂದು ಮಠೆಕ್ಕೆ ಹತ್ತಿರವಾಗಿದ್ದೆ. ಅಲ್ಲಿ ನೋಡಿದ್ದ ಕೆಲವು ಚಟುವಟಿಕೆಗಳಿಂದ ರೋಸಿ ಹೋಗಿದ್ದೆ. ಬಹುಶ: ನಾನು ತಪ್ಪಿಲ್ಲ ಎಂದು ತಿಳಿದಿರುವೆ. --- ತವಿಶ್ರೀನಿವಾಸ

ಸರಿ.
"ಬಡವ ಬಲ್ಲಿದರಿಗೆ ತಕ್ಕಂಥ ಫಲದಾನ"ದಲ್ಲಿ ಏನೂ ತಪ್ಪು ಕಾಣಲಿಲ್ಲ (ಎಲ್ಲರಿಗೂ ಅವರಿಗೆ ತಕ್ಕಂತಹ ಫಲಧಾನ ಕೊಟ್ಟರೆ ತಪ್ಪೇನು ಅನ್ನುವುದು).. ನಿಮ್ಮ ವಿವರಣೆ ನೋಡಿ ಅದರ ಅರ್ಥ ವಿಧಿತವಾಯ್ತು.
"ಕೆಲವರು ಮಠ ಅಥವಾ ಆಶ್ರಮಗಳಿಗೆ ಹತ್ತಿರವಾಗಿರುವರು. ಅವರಿಗೆ ಈ ಮಾತುಗಳು ಜೀರ್ಣಿಸುವುದಿಲ್ಲ..."
---ಇರಬಹುದು.. ನನಗೆ ಇದು ಅನ್ವಯಿಸುವುದಿಲ್ಲ, ಅಥವ ನಾನು ತಪ್ಪಾಗಿ ಭಾವಿಸಿಯೂ ಇಲ್ಲ. infact ಸ್ವಾಮಿಗಳಿಂದ ಮರ್ಯಾದೆ ಮಾಡಿಸಿಕೊಳ್ಳುವ ವಿಚಾರವೇ ನನಗೆ ತಿಳಿದಿರಲಿಲ್ಲ (ಅದನ್ನ ಕೇವಲ ಆಶೀರ್ವಾದ ಎಂದುಕೊಂಡಿದ್ದೆ)