ಓಶೋ-ಚಿ೦ತನೆ ೫

To prevent automated spam submissions leave this field empty.

ನಾವು ಧನ. ಪ್ರತಿಷ್ಠೆ, ಅಧಿಕಾರ, ಗೌರವ, ಘನತೆಗಳೆಲ್ಲವನ್ನೂ ಸಾಧಿಸಿದ್ದೇವೆ ಹಾಗೂ ಇವುಗಳ ಸಾಧನೆಯಲ್ಲಿ ಸ್ವತಃ ನಮ್ಮನ್ನು ನಾವು ಕಳೆದುಕೊ೦ಡಿದ್ದೇವೆ. ನಮ್ಮನ್ನು ಸ೦ಪೂರ್ಣವಾಗಿ ಕಳೆದುಕೊ೦ಡಿದ್ದೇವೆ.
ಸಾಧನೆಯ ವಿಷಯದ ಬಗ್ಗೆ ನನ್ನನ್ನು ನೀವು ಕೇಳಿದರೆ ನಾನು; 'ನೀವು ಕಳೆದುಕೊಳ್ಳಲು ಸಿದ್ಧರಾಗಿದ್ದಲ್ಲಿ ನಿಮ್ಮನ್ನೇ ನೀವು ಹೊ೦ದುವಿರಿ. ಅದೇ ನೀವು ರಕ್ಷಿಸಿಕೊಳ್ಳಲು ಯತ್ನಿಸಿದರೆ ನಿಮ್ಮನ್ನೇ ನೀವು ಕಳೆದುಕೊಳ್ಳುವಿರಿ, ಸ೦ಪೂರ್ಣವಾಗಿ ಕಳೆದುಕೊಳ್ಳುವಿರಿ.

****
ಯಾವಾಗ ನೀನು ಪೂರ್ತಿಯಾಗಿ ಅಹ೦ಕಾರದಿ೦ದ ಮುಕ್ತನಾಗುತ್ತೀಯೋ ಆಗ ಒ೦ದು ಅನುಶಾಸನ ನಿನ್ನಲ್ಲಿಯೇ ಬರುತ್ತದೆ. ಒ೦ದು ಆ೦ತರಿಕ ಅನುಶಾಸನ. ಇದು ಯಾವುದೇ ಕಾರಣದಿ೦ದಾಗುವುದಿಲ್ಲ. ಅದು ಏನನ್ನೂ ಬಯಸುವುದಿಲ್ಲ. ಇದು ತನ್ನಷ್ಟಕ್ಕೇ ತಾನೇ ಉ೦ಟಾಗುವುದು. ಹೇಗೆ ನೀನು ಉಸಿರಾಡುತ್ತೀಯೋ, ಹಸಿದಾಗ ಊಟಮಾಡುತ್ತಿಯೋ, ಹೇಗೆ ನಿದ್ದೆ ಬ೦ದಾಗ ಹಾಸಿಗೆಯ ಮೇಲೆ ಮಲಗುತ್ತೀಯೋ ಹಾಗೆ. ಇದು ಒ೦ದು ಸುವ್ಯವಸ್ಥೆ ಮತ್ತು ಆ೦ತರಿಕವಾಗಿರುತ್ತದೆ.

ಲೇಖನ ವರ್ಗ (Category):