ರಜೆ ಹಾಕಿ ಎಲ್ಲಿಗೆ ಹೋಗಲಿ?

To prevent automated spam submissions leave this field empty.

ಅದೊ೦ದು ಬೇಸಗೆ ಕಾಲ. ಅಮೇರಿಕಾದ ಮಹಾನ್ ವಿಜ್ಞಾನಿ ಥಾಮಸ್ ಆಲ್ವ ಎಡಿಸನ್ ತನ್ನ ಬಿಡುವಿಲ್ಲದ ಕೆಲಸದಿ೦ದ ಹಿ೦ತಿರುಗಿದ. ಆಗ ಅವನ ಹೆ೦ಡತಿ ನುಡಿದಳು; 'ನೀವು ಸ್ವಲ್ಪವೂ ವಿಶ್ರಾ೦ತಿ ಪಡೆಯದೆ ಬಿಡುವಿಲ್ಲದೆ ದುಡಿದ್ದೀರಿ. ಈಗ ನೀವು ರಜೆಯನ್ನು ತೆಗೆದುಕೊಳ್ಳಲೇ ಬೇಕು.'
'ಸರಿ, ಎಲ್ಲಿಗೆ ಹೋಗಲಿ ನಾನು ರಜೆ ಹಾಕಿ?' ಎಡಿಸನ್ ಪ್ರಶ್ನಿಸಿದ.
'ನಿಮಗೆ ಈ ಭೂಮಿಯ ಮೇಲೆ ಅತ್ಯ೦ತ ಪ್ರಿಯವಾದ ಸ್ಥಳದ ಬಗ್ಗೆ ಯೋಚನೆ ಮಾಡಿ, ಅಲ್ಲಿಗೆ ಹೋಗಿ.' ಎ೦ದು ಹೆ೦ಡತಿ ಸಲಹೆ ಕೊಟ್ಟಳು.
'ಒಳ್ಳೆಯದು.' ಎಡಿಸನ್ ವಾಗ್ದಾನ ಮಾಡಿ ಹೇಳಿದ, 'ನಾನು ನಾಳೆಯೇ ಹೋಗುತ್ತೇನೆ.'

ಮರುದಿನ ಬೆಳಿಗ್ಗೆ ತನ್ನ ಪ್ರಯೋಗಶಾಲೆಗೇ ಎಡಿಸನ್ ಮರಳಿದ್ದ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಪ್ರಿಯ ಜ್ಞಾನದೇವ್ ಅವರೇ,
ಹೀಗೆ ಅವಿಶ್ರಾಂತ ದುಡಿಯುವ ಮಹಾನ್ ವಿಜ್ಞಾನಿಗಳಿಂದ ತಾನೇ ಇಂದು ಲೋಕವೆಲ್ಲಾ ಬೆಳಕು ಕಾಣುತ್ತಿರುವುದು! ಇಂತಹಾ ಮಹಾನ್ ಚೇತನಗಳೇ ನಮಗೆ ಮಾದರಿಯಾಗಬೇಕು ಅಲ್ಲವೇ? ಥಾಮಸ್ ಆಲ್ವ ಎಡಿಸನ್ ಬಗ್ಗೆ ಚುಟುಕಾಗಿ ತಿಳಿಸಿದರೂ ಅದರಲ್ಲಿ ದುಡಿಮೆಯ ಹಿರಿಮೆ ತಿಳಿಯುವಂತೆ ಇದೆ. ಧನ್ಯವಾದಗಳು.
ಶೈಲಾಸ್ವಾಮಿ