ಕಮಲ ಪಕ್ಷದ ಕಲಸುಮೇಲೋಗರ

To prevent automated spam submissions leave this field empty.

ಬಿಜೆಪಿಯ ಜಾಹೀರಾತುಗಳನ್ನು ಗಮನಿಸಿದ್ದೀರಾ?

ತೆರಿಗೆ ಹೊರೆ ಇಳಿಸುವುದಾಗಿರಬಹುದು, ಬೆಲೆ ಏರಿಕೆಯ ತರಾಟೆಯಾಗಿರಬಹುದು, ವಿದ್ಯಾರ್ಥಿನಿಯರಿಗೆ ನೀಡಿದ ಸೈಕಲ್‌, ಉದ್ಯೋಗ ಭರವಸೆ- ಹೀಗೆ ಹಲವಾರು ವಿಷಯಗಳ ಬಗ್ಗೆ ಬರುತ್ತಿರುವ ಜಾಹೀರಾತುಗಳು ಅಪಕ್ವವಾಗಿವೆ.

ಸಾಮಾನ್ಯವಾಗಿ ಬಿಜೆಪಿಯ ಜಾಹೀರಾತುಗಳು ನೇರವಾಗಿರುತ್ತವೆ. ಹೇಳುವುದನ್ನು ಮನಮುಟ್ಟುವಂತೆ ಹೇಳುವುದು ಆ ಪಕ್ಷದ ಶೈಲಿ. ಆದರೆ, ಈ ಸಾರಿ ಅದ್ಯಾರು ಜಾಹೀರಾತು ಮಾಡಿದ್ದಾರೋ, ಒಂದಕ್ಕಿಂತ ಒಂದು ಅಧ್ವಾನವಾಗಿವೆ. ಕೆಟ್ಟದಾಗಿವೆ. ರೈತನ ಹೆಸರಲ್ಲಿ ತೋರಿಸುತ್ತಿರುವ ವ್ಯಕ್ತಿ ಪಿಂಚಣಿ ಸಿಗದ ಗುಮಾಸ್ತನಂತೆ ಘೋರವಾಗಿದ್ದಾನೆ. ಬಾಲಿಶ ಸಂಭಾಷಣೆಗಳು, ಚಿತ್ರಣಗಳು ಹಾಗೂ ಪ್ರಸ್ತುತಿ ಜಾಹೀರಾತುಗಳ ಮೂಲ ಉದ್ದೇಶವನ್ನೇ ಕೊಂದಿವೆ.

ಬಿಜೆಪಿ ಗೊಂದಲದಲ್ಲಿದೆ, ಅರ್ಜೆಂಟಿನಲ್ಲಿದೆ ಹಾಗೂ ಏನಾದರೂ ಮಾಡಿ ಅಧಿಕಾರಕ್ಕೆ ಬರುವ ಹಪಾಹಪಿಯಲ್ಲಿದೆ ಎಂಬುದನ್ನು ಬಿಂಬಿಸುವಂತಿವೆ ಈ ಜಾಹೀರಾತುಗಳು. ಲೋಕಸಭೆಯಂಥ ಚುನಾವಣೆಯನ್ನು ಎದುರಿಸಲು ಹೊರಟ ಪಕ್ಷಕ್ಕೆ, ಅದನ್ನು ಸಮರ್ಥವಾಗಿ ಬಿಂಬಿಸುವಂಥ ಜಾಹೀರಾತುಗಳನ್ನು ಮಾಡಲೂ ಆಗಲಿಲ್ಲವಲ್ಲ!

ಸಮರ್ಥ ನಾಯಕ, ನಿರ್ಣಾಯಕ ಸರ್ಕಾರ ಎಂಬ ಘೋಷಣೆ ಬಿಟ್ಟರೆ ಇಡೀ ಜಾಹೀರಾತು ಬಿಜೆಪಿಯ ಸಾಧನೆಗಳನ್ನಾಗಲಿ, ಪ್ರಣಾಳಿಕೆಯನ್ನಾಗಲಿ ಸರಿಯಾಗಿ ಬಿಂಬಿಸುವುದಿಲ್ಲ. ಬಿಜೆಪಿಯ ಥಿಂಕ್‌ ಟ್ಯಾಂಕ್‌ ಸೋರುತ್ತಿದೆ ಎಂಬುದಕ್ಕೆ ಸಾಕ್ಷ್ಯದಂತಿವೆ ಇವು.

- ಚಾಮರಾಜ ಸವಡಿ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಿಜ ಚಾಮರಾಜ್ ,

ಸಿಕ್ಕ ಸಿಕ್ಕವರನ್ನೆಲ್ಲಾ ಸೇರಿಸ್ಕೊಂಡು ಪಕ್ಷದ ತತ್ವ ನಿಷ್ಟೆ ಸಿದ್ದಾಂತ ಎಲ್ಲಾ ಮೂಲೆ ಗುಂಪು ಮಾಡಿ, ಹಾಳುಗೆಡವಿದ್ದಾರೆ.:(

ಭಾಸ್ಕರ್‌ ಅವರೇ, ಲೋಕಸಭಾ ಚುನಾವಣೆ ನಂತರ ರಾಜ್ಯ ಬಿಜೆಪಿಯಲ್ಲಿ ಭಾರಿ ಭಿನ್ನಮತ ಏಳಲಿದೆ. ಏಕೆಂದರೆ, ಬಿಜೆಪಿ ಹೇಳುವಂಥ ಸಮರ್ಥ ನಾಯಕನೂ ಇಲ್ಲ, ಇದು ನಿರ್ಣಾಯಕ ಸರ್ಕಾರವೂ ಅಲ್ಲ. ಎಲ್ಲರೂ ಚುನಾವಣೆ ಮುಗಿಯುವುದನ್ನೇ ಕಾಯ್ತಿದ್ದಾರೆ.

ಇರಬಹುದು ಚಾಮಾರಾಜ್ ಅವರೆ, ಶಿವಪ್ಪನವರಂತಹ ಹಿರಿಯ ನಾಯಕರೇ ವೇದಿಕೆ ಏರದೆ ಪತ್ರಕರ್ತರ ಸಾಲಿನಲ್ಲಿ ಕೂತು ಆಡ್ವಾನಿ ಭಾಷಣ ಕೇಳಿದರು ಅಂತ ಪತ್ರಿಕೆಯಲ್ಲಿ ಓದಿದೆ. ,
ನೋಡೋಣ.. ಸಿಕ್ಕ ಒಳ್ಳೆ ಅವಕಾಶವನ್ನ ಎಷ್ಟು ಬೇಗ , ಹೇಗೆ ಹಾಳು ಮಾಡೀಕೊಳ್ಳಬಹುದು ಅಂತ ತೋರಿಸಿ ಕೊಡುತ್ತಿದ್ದಾರೆ ರಾಜ್ಯ ನಾಯಕರು

ನಿಜ ಭಾಸ್ಕರ್‌, ಬಿಜೆಪಿಯಲ್ಲಿ ಇಂಥ ಅಭಾಸಗಳು ಸಾಕಷ್ಟಿವೆ. ಮನೆಯವರನ್ನು ತುಳಿದು, ಹೊರಗಿನವರಿಗೆ ಮನ್ನಣೆ ಕೊಡುವ ಕ್ರಮ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಹೌದಾ ಚಾಮರಾಜ್ ? ಜ್ಯೋತಿಷಿಗಳು ಯೆಡಿಯೂರಪ್ಪ ಮುಂದಿನ ದೀಪಾವಳಿಗೋ/ಯುಗಾದಿಗೋ ಮುಖ್ಯಮಂತ್ರಿಯಾಗಿ ಇರೋದಿಲ್ಲ ಅಂತ ಹೇಳಿದ್ದಾರೆ ?!.

<< ಜ್ಯೋತಿಷಿಗಳು ಯೆಡಿಯೂರಪ್ಪ ಮುಂದಿನ ದೀಪಾವಳಿಗೋ/ಯುಗಾದಿಗೋ ಮುಖ್ಯಮಂತ್ರಿಯಾಗಿ ಇರೋದಿಲ್ಲ ಅಂತ ಹೇಳಿದ್ದಾರೆ >>

ಜ್ಯೋತಿಷಿಗಳನ್ನು ಬಿಡಿ, ಸಾಮಾನ್ಯ ಜನರೂ ಅದನ್ನು ಹೇಳತೊಡಗಿದ್ದಾರೆ ಶ್ರೀಕಾಂತ್‌. ಮನೆಗೆ ಮಾರಿ, ಪರರಿಗೆ ಉಪಕಾರಿ ಮಾದರಿ ತುಂಬ ದಿನ ನಡೆಯುವುದಿಲ್ಲ.

ಚಾಮರಾಜ್,

ನೀವು ಕೇಳಿರಬಹುದು. ಹುಲಿಗೆ ಒಮ್ಮೆ ಮನುಷ್ಯರ ರಕ್ತದ ರುಚಿ ಸಿಕ್ಕರೆ ಅದು ನರಭಕ್ಷಕ ಆಗಿಬಿಡುತ್ತೆ.
ಆದೆ ರೀತಿ ಒಮ್ಮೆ ಅಧಿಕಾರದ ರುಚಿ ಸಿಕ್ಕ ಮೇಲೆ ಯಾರೇ ಆಗಿರಲಿ ಅದನ್ನು ಪಡೆಯಲು ಯಾವ ಮಟ್ಟಕ್ಕೂ ಹೋಗಲು ತಯಾರಾಗಿರುತ್ತಾರೆ. ಏನಂತಿರೀ ?