ನನ್ನ ಮನದಾಳದ ಮಾತು ಅ ನನ್ನ ಗುರುವಿಗೆ - ಭಾಗ 3

To prevent automated spam submissions leave this field empty.

ನನ್ನ ಪ್ರೀತಿಯ ಅರಿವಿದ್ದೂ ನಟಿಸುತ್ತಿರುವೆಯೋ
ಅರಿವಿಲ್ಲದೆ ನಟಿಸುತ್ತಿರುವೆಯೋ
ನಾ ಕಾಣೇ ....
ಏನೂ ಅರಿಯದ ಮುಗ್ದ ಮಗುವಿಗೆ ಹೊಲಿಸಲೋ
ತಿಳಿದು ನಟಿಸುವ ರಂಗ ನಾಯಕಿಗೆ ಹೊಲಿಸಲೋ
ನಾ ಅರಿಯೇ ....

ನಿನ್ನ ಪ್ರೀತಿಗಾಗಿ ಹಂಬಲಿಸಿ
ನಾ ಕಾದ ಅಸ್ಟೂ ವರ್ಷಗಳು
ಮಣ್ಣಿನಲ್ಲಿ ಮಣ್ಣಾಗಿಹವು.,
ನಿನ್ನಿಂದ ನಾ ಕಲಿತ ಪಾಠಗಳು
ಅ ಮಣ್ಣಲ್ಲೇ ಕುಡಿವಡೆದು ಹುವಾಗಿಹವು .,

ನಿನ್ನ ಮನಸಲ್ಲಿ ಏನುಂಟು ಏನಿಲ್ಲ ?
ಅದನ್ನರಿಯಲು ನಾ ಎಂದೂ ಯತ್ನಿಸಲಿಲ್ಲ .,
ಎಲ್ಲರಂತೆ ನನ್ನ ಪ್ರೀತಿಯು "ಕುರುಡು"
ಅದಕ್ಕೆ ಕಣ್ಣಿಲ್ಲ ., ಏನಿಲ್ಲ ..,


ಸಾಲು ಸಾಲು ಕವಿತೆಗಳ ಗೀಚಿ
ನಿನ್ನ ನೋಯಿಸುವ ಉದ್ದೇಶ ಎನಗಿಲ್ಲ .,
ನನ್ನ ಮನಸಲ್ಲಿರುವ ನಿನ್ನ ತಿಳಿನೀರಿನಲ್ಲಿ
ತೇಲಿಬಿಡುವಾಸೆ..,
ನಿನ್ನ ಮೇಲಿನ ನನ್ನ ಪ್ರೀತಿಯನ್ನ ಬಿಡಿಬಿಡಿಯಾಗಿ
ಚಿತ್ರಿಸುವಾಸೆ ., ಅಸ್ಟೆ

ನಿನ್ನ ಜೀವನದ ಭಾರಿ
ಆಸೆ-ಕನಸುಗಳು ಹಾಗು ಧ್ಯೇಯಗಳು
ನನ್ನನ್ನ ಚಿಂತನೆಗೆ ದೂಡಿವೆ.,
ಮಧ್ಯ-ರಾತ್ರಿಯಲಿ ಭೂತ- ಪ್ರೇತಗಳಾಗಿ
ನನ್ನ ನಿದ್ದೆ ಹಾಳುಗೆಡವುತ್ತಿವೆ

ಒಂದಿಷ್ಟು ಮಾತುಗಳು
ಒಂದಿಷ್ಟು ಕಿತ್ತೋಗಿರೋ ಭಾವನೆಗಳು.,
ಒಂದಿಷ್ಟು ಸಿಹಿ- ಕಹಿ ನೆನಪುಗಳು
ಒಂದಿಷ್ಟು ಒಟ್ಟಿಗೆ ಕಳೆದ ಕ್ಷಣಗಳು.,
ಇಂತಿಸ್ಟೇ ನನ್ನ ಬಾಳಲ್ಲಿ ನೀ
ಉಳಿಸಿರುವ ಶೇಷಗಳು ....

ಇಂದಿರುವವ ನಾಳೆಗೆ ಇರುವನೋ ಇಲ್ಲವೊ ?
ಇಂದಿರುವ ನಮ್ಮದು ನಾಳೆ ಮತ್ತಾರದೋ ??
ಕಾಲಚಕ್ರ ತಿರುಗಿದಂತೆ ನಮ್ಮ ಬಾಳಟ
ಮೇಲಿನವ ಆಡಿಸಿದಂತೆ ನಮ್ಮ ದೊಂಬರಾಟ .,
ಇದ ಅರಿತು ಬಾಳೆ , ಎಲೆ ಬಾಲೆ ..

ಒತ್ತಿ ಹಿಡಿಯುತ್ತಲೇ ಇರುವೆ
ನಿನ್ನ ಮೇಲಿನ ನನ್ನೆಲ್ಲ ಭಾವನೆಗಳ
ಕಟ್ಟುತ್ತಿರುವೆ ನೀನಿಲ್ಲದ ಹೊಸ ಕನಸುಗಳ
ನನಗರಿವಿಲ್ಲದೆ ನಾ ಹಿಡಿದಿರುವೆ
ಸುಖದ ಹಾದಿಯ .,


 

ಲೇಖನ ವರ್ಗ (Category):