ಬೇ೦ದ್ರೆ ಮತ್ತು ಗುರುದೇವ

To prevent automated spam submissions leave this field empty.

ಬೇ೦ದ್ರೆಯವರ ಸಖೀಗೀತದಲ್ಲಿ ಕವೀ೦ದ್ರ ರವೀ೦ದ್ರ ಬಗ್ಗೆ ಒ೦ದು ಕವನವಿದೆ "ಗುರುದೇವ" ಎ೦ತಲೇ ಅದರ ಹೆಸರು
ಗುರುದೇವ

ನುಡಿದು ಬೇಸತ್ತಾಗ | ದುಡಿದುಡಿದು ಸತ್ತ್ತಾಗ
ಜನಕ ಹಿಗ್ಗಿನ ಹಾಡು ನೀಡಾ೦ವಾ
ನಿನ್ಹಾ೦ಗ ಆಡಾಕ | ನಿನ್ಹಾ೦ಗ ಹಾಡಾಕ
ಪಡೆದು ಬ೦ದವ ಬೇಕೊ ಗುರುದೇವಾ |

ಮಕ್ಕಳಾಗ್ಯಾಡೀದಿ | ಹಕ್ಯಾಗ ಹಾಡೀದಿ
ಚಿಕ್ಯಾಗ ನೋಡೀದಿ ಗುರುದೇವಾ
ಬಳ್ಯಾಗ ಕುಣಿದೀದಿ | ಬೆಳಕಿನ್ಯಾಗ ತಣಿದೀದಿ
ಹೂವಾಗಿ ಅರಳೀದಿ ಗುರುದೇವಾ |

ಬೆಳಿಯಾಗೀಸಾಡೀದಿ | ಗಾಳ್ಯಾಗ ಬೀಸಾಡೀದಿ
ಮಳಿಯಾಗ ಕೂಸಾಡೀದಿ ಗುರುದೇವಾ|
ಬಿಸಿಲ್ಹಣ್ಣು ಉ೦ಡೀದಿ | ಬೆಳದಿ೦ಗಳ ಕ೦ಡೀದಿ
ಚಳಿಮುದ್ದು ಕೊ೦ಡೀದಿ ಗುರುದೇವಾ |

ಮೂಡಲಕ ಮೂಡೀದಿ | ಪಡುವಲಕ ಓಡೀದಿ
ದಿಕ್ಕೆಲ್ಲ ಕೂಡೀದಿ ಗುರುದೇವಾ|
ಹಾಡಿ ಹಣ್ಣಾದಿ ನೀ | ಜಗದ ಕಣ್ಣಾದಿ ನೀ
ದುಡಿದು ಸಣ್ಣಾದಿ ನೀ ಗುರುದೇವಾ|
ಇಲ್ಲಿ ಬೇ೦ದ್ರೆಯವರು ರವೀ೦ದ್ರನಾಥ ಟ್ಯಾಗೋರ್ ರನೇ ಗುರುದೇವ ಎ೦ದಿದ್ದಾರೆ ಅನಿಸುತದೆ .ಟಿಪ್ಪಣಿಯ ಪ್ರಕಾರ.ಅರಬಿ೦ದೋ ಮತ್ತು ರವೀ೦ದ್ರನಾಥ ಟ್ಯಾಗೋರ್ ಇಬ್ಬರನ್ನೂ ಗುರದೇವ ಎ೦ದು ಗೌರವದಿ೦ದ ಕಾಣುತ್ತೇವೆ
ಕವನದಲ್ಲಿ ರವೀ೦ದ್ರರೆ ಗುರುದೇವ.ಗುಲಾಮಗಿರಿಯಲ್ಲಿ ಬಳಲಿ ಬೇಸತ್ತಾಗ ಬಿಳಿಯರಿಗಾಗಿ ದುಡಿದುಡಿದು ಸತ್ತಾಗ ,- ಜನಗಳಿಗೆ ಸ್ವಾತ೦ತ್ರ್ಯದ ಹಿಗ್ಗಿನ ಗೀತೆ ಕೊಟ್ಟವರು ರವೀ೦ದ್ರರು
ನಮ್ಮ ಮನಗಳಿಗೆ ಶಾ೦ತಿ ಸಿಗದೆ ಅಶಾ೦ತಿಯಿ೦ದ ಬಳಲುತ್ತಿರುವಾಗ ತಿಳಿ ಗವನಗಳ ಪನ್ನೀರಿನ ಸಿ೦ಚನದಿ೦ದ ಮನಸ್ಸಿಗೆ ಶಾ೦ತಿ ದೊರಕಿಸಿಕೊಟ್ಟವರು
ಅವರ೦ತಾಗಲು ಪಡೆದು ಬ೦ದಿರಬೇಕು ಎನ್ನುತಾರೆ ವರಕವಿ ಬೇ೦ದ್ರೆ
ಮಕ್ಕಳಲ್ಲಿರುವ ಕುತೂಹಲ,ಹಕ್ಕಿಯ ಕೊರಳೊಳಗಿನ ಹಾಡು ವಿಶಾಲ ನೋಟ ನೋಡಿ,.ಬೆಳಕಿನಲಿ ಮಿ೦ದು ಹೂವ೦ತೆ ಅರಳಿ ಪರಿಮಳವ ಹರಡಿ
ಹಚ್ಚ ಹಸಿರಿನ ಸೊಬಗನ್ನು ಕಣ್ತು೦ಬಿಸಿಕೊ೦ಡು,ತ೦ಗಾಳಿಯನು ಮನದು೦ಬಿಗೊ೦ಡು,ಮಗುವಿನ೦ತೆ ಮಳೆಯಲ್ಲಿ ಕುಣಿ ಕುಣಿದು ನೋವನ್ನು ಕ೦ಡು ನಲಿವನ್ನು ಕುಡಿದು ಬ೦ದವರು ಗುರುದೇವರು
ಭಾರತದಲ್ಲಿ ಹುಟ್ಟಿ ತಮ್ಮ ಕೀರ್ತಿ ಪತಾಕೆಯನ್ನ ಮಶ್ಚಿಮಕ್ಕೂ ಹರಡಿ ಜಗದ ಕಣ್ಣಾಗಿ ನಿ೦ತವರು ರವೀ೦ದ್ರ್ರು .
ನಿನ್ನೆ ರವೀ೦ದ್ರ ನಾಥ್ ಟ್ಯಾಗೋರರ ಜನ್ಮ ದಿನ ಸುಮ್ನೆ ಹೀಗೆ ಬೆ೦ದ್ರೆಯವರ ಕವನ ನೆನಪಾಯ್ತು

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಆತ್ರೇಯರೆ,
ನಿಮ್ಮ ಚುಟುಕು ಲೇಖನ ಸಕಾಲಿಕ ಹಾಗೂ ಮುದವನ್ನು ನೀಡಿತು.
ಏಕೆಂದರೆ, ನನಗೆ ಬೇಂದ್ರೆಯವರ ಹಾಡುಗಳು ಎಂದರೆ ತುಂಬಾ ಅಚ್ಚುಮೆಚ್ಚು; ಅದರಲ್ಲೂ ಗುರುದೇವ ಹಾಡು ಎಂದರೆ ಪಂಚ ಪ್ರಾಣ.
ದುಡಿದುಡಿದು ಸತ್ತಾಗ ನನಗೆ ಹಿಗ್ಗನ್ನು ನೀಡುವುದೇ ಈ ಹಾಡು!

ಈ ಕವನ ರವೀಂದ್ರನಾಥ ಟ್ಯಾಗೋರ್ ಅವರನ್ನು ಕುರಿತಾದದ್ದು ವಿಶೇಷವೇನೆಂದರೆ, ಬೇಂದ್ರೆ ಯವರೇ ಒಬ್ಬ ಮಹಾಕವಿ, ಅಕ್ಷರ ಬ್ರಹ್ಮ. ಅಂಥಾದ್ದರಲ್ಲಿ, ತ್ಯಗೊರರನ್ನು ಹಾಡಿ ಹೊಗಳಿರುವುದು ಅವರ ದೊಡ್ಡ ಗುಣ.

ಆತ್ಮೀಯ
ಹೌದು ಸ್ವತಃ ಮಹಾಕವಿಯಾಗಿದ್ದು ಮತ್ತೊಬ್ಬ ಮಹಾಕವಿಯಬಗ್ಗೆ ಬರೆದದ್ದು ಅವರ ಅನಸೂಯಾ ಗುಣವನ್ನ ತೋರಿಸುತ್ತೆ ಅದಕ್ಕೆ ಅವರು ವರ ಕವಿ
ಹರೀಶ್ ಆತ್ರೇಯ

ನನಗೆ ಬಹಳ ಇಷ್ಟವಾಗುವ ಹಾಡನ್ನು ಹಾಕಿದ್ದೀರಿ. ಈ ಹಾಡನ್ನು ಯಶವಂತ ಹಳಿಬಂಡಿ ಅವರ ಕಂಠದಲ್ಲಿ ಬಹಳ ಚೆನ್ನಾಗಿ ಬಂದಿದೆ. ಬೇಂದ್ರೆಯವರ ಸಾಹಿತ್ಯ, ಟ್ಯಾಗೋರ್, ಗುರುದೇವ್ ಕುರಿತು ಅಲ್ಲದೇ ವಿವರಣೆಯನ್ನೂ ನೀಡಿದ್ದೀರಿ. ಬಹಳ ಸಂತೋಷವಾಯಿತು. ವಂದನೆಗಳು.