ಜೋಡಿ ಗುಲಾಬಿಗಳು!

To prevent automated spam submissions leave this field empty.

ಆರಾಮವಾಗಿ ಸೀಟಿನಲ್ಲಿ ಕುಳಿತಿದ್ದು ’ಸ್ವಲ್ಪ ಒತ್ತಿಕೊಳ್ಳಿ’ ಎಂದು ಅಡ್ಜಸ್ಟ್ ಮಾಡಿಕೊಳ್ಳುವಂತೆ ... ಛತ್ರಿ ಹಿಡಿದು ಹೋಗುವಾಗ ಮತ್ತೊಬ್ಬರು ಬಂದು ತೂರಿಕೊಳ್ಳುವಂತೆ ... ನಮ್ಮ ಮನೆಯ ಗುಲಾಬಿ ಗಿಡದಲ್ಲೂ ಇಷ್ಟು ರಷ್ ಇದೆ ಅಂತ ಗೊತ್ತಿರಲಿಲ್ಲ ...

ಈ ಜೋಡಿ ಹೂಗಳು ಮುಂಚೇನೇ ಬೆಳೆದಿದ್ದರೆ ಕುಮಾರಣ್ಣ-ಯಡಿಯೂರಪ್ಪ ಮುಖಮಂತ್ರಿಯ ಸ್ಥಾನವನ್ನು ಹಂಚಿಕೊಡಿದ್ದಾಗ ಇಬ್ಬರಿಗೂ ಸೇರಿ ಕೊಡಬಹುದಿತ್ತು

’ನಮ್ಮೂರ ಮಂದಾರ ಹೂವೆ’ ಯಂತಹ ತ್ರಿಕೋನ ಪ್ರೇಮದ ಚಲನಚಿತ್ರ ಬಂದ ಸಮಯದಲ್ಲಿ ಈ ಗುಲಾಬಿ ಮೂಡಿದ್ದರೆ, ರಮೇಶ್-ಶಿವರಾಜಕುಮಾರ್ ಇಬ್ಬರೂ ಸೇರಿ ಪ್ರೇಮಳಿಗೆ ಒಂದೇ ಹೂವು ಕೊಡಬಹುದಿತ್ತು.

ಕಳೆದ ವ್ಯಾಲಂಟೈನ್ ದಿನದಂದು ಈ ಜೋಡಿ ಮೂಡಿದ್ದರೆ, ನಮ್ಮ ತಿರುಪತಿ ತಿಮ್ಮಪ್ಪ ತನ್ನಿಬ್ಬರ ಪತ್ನಿಯರಿಗೆ ಕೊಟ್ಟು ಇಬ್ಬರನ್ನೂ ಸಮನಾಗಿ ಪ್ರೀತಿಸುತ್ತೇನೆ ಎಂದು ಸಾರಬಹುದಿತ್ತು

’ಏಕ್ ಫೂಲ್ ದೋ ಮಾಲಿ’ ಚಿತ್ರದ ನಿರ್ಮಾಪಕ/ನಿರ್ದೇಶಕ ದೇವೇಂದ್ರ ಗೋಯಲ್ ಇದ್ದಿದ್ದಲ್ಲಿ ಈಗ ’ದೋ ಫೂಲ್ ಏಕ್ ಮಾಲಿ’ ಚಿತ್ರದಲ್ಲಿ ನಾನು ಹೀರೋ ಆಗಬಹುದಿತ್ತು.. ಛೇ! ಚಾನ್ಸ್ ಮಿಸ್ ಆಯ್ತು !!

ಇದನ್ನು ಪಡೆಯಲು ಸೂಕ್ತ ವ್ಯಕ್ತಿಗಳು ಅಂದರೆ ಅಂಬಾನಿ ಸಹೋದರರು. ಯಾಕೆ ಅಂದಿರಾ? ಅವರಿಬ್ಬರೂ ಈ ಹೂಗಳ ಹಾಗೇ ಈಗ ವಿರುದ್ದ ದಿಕ್ಕಿನಲ್ಲಿ ಮುಖ ಮಾಡಿ ನಿಂತಿದ್ದಾರೆ.

ನನ್ನಂತೆಯೇ ನಿಮಗೂ ಚಾನ್ಸ್ ಮಿಸ್ಸ್ ಆದ ವಿಷಯಗಳು ತಲೆಗೆ ಹೊಳೆದರೆ ಅಥವಾ ಅಂಬಾನಿ ಸಹೋದರರಿಗಿಂತಾ ಸೂಕ್ತ ವ್ಯಕ್ತಿಗಳು ಈ
ಹೂಗಳನ್ನು ಪಡೆಯಲು ಅರ್ಹರಾಗಿದ್ದರೆ, ಬರೆದು ತಿಳಿಸಿ

ಚಿತ್ರ: ನಾನೇ ಸೆರೆಹಿಡಿದಿದ್ದು

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಈ ಹೂವು ನಮ್ಮ ತೋಟದಲ್ಲರಳಿದ್ದರೆ ಅವಳಿ ಸಹೋದರಿಯರ ಅರಸುತ್ತಿದ್ದೆ :)

ಮತ್ತೆ ಹೂವಿನ ಚಿತ್ರ ತೆಗೆಯುವುದಿದ್ದರೆ ಬಿಳಿ/ಕಪ್ಪು ಹಾಳೆ/ಬಟ್ಟೆ ಒಳ್ಳೆಯ ಹಿನ್ನೆಲೆ ಒದಗಿಸುತ್ತದೆ. ಫ್ಲಾಷ್ ಆಫ್ ಮಾಡಿ ಸಂಜೆಯ/ಬೆಳಗಿನ ಹೊಂಬೆಳಕು ಹೂವಿನ ಮೇಲೆ ಬೀಳುವಂತೆ ತೆಗೆದರೆ ಚಿತ್ರ.. ಹೂವು ಎದ್ದು ಬಂದಂಗೆ ಇರುತ್ತೆ

:-) ಚೆನ್ನಾಗಿದೆ ಪಾಲ ಅವರೇ

ಬಿಳೀ ಹಾಳೆಯ ಹಿನ್ನೆಲೆಯಲ್ಲೂ ಒಂದೆರಡು ಚಿತ್ರಗಳು ತೆಗೆದಿದ್ದೆ.. ನನಗೆ ಒಂದಕ್ಕಿಂತ ಹೆಚ್ಚು ಚಿತ್ರಗಳು ಇಲ್ಲಿ ಹಾಕುವುದು ಹೇಗೆ ಎಂದು ತಿಳಿಯಲಿಲ್ಲ... ಹಾಗಾಗಿ ಒಂದೇ ಚಿತ್ರವನ್ನು ಲಗತ್ತಿಸಿದೆ... ತಿಳಿಸಿ ಕೊಟ್ಟರೆ ನಾನು ಆಭಾರಿ

ಇದನ್ನ ಒಂದರ ಕೆಳಗೊಂದು ಹಾಗಿ ಬರುತ್ತೆ..

<img src="http://sampada.net/files/images/IMG_1064_0.preview.JPG">
<img src="http://sampada.net/files/images/IMG_1065.preview.jpg">
<img src="http://sampada.net/files/images/IMG_1064.preview.JPG">

ಇಲ್ಲಾಂದ್ರೆ ಬರೆಯೋ ಬಾಕ್ಸಿನ ಕೆಳಗೆ "Rich text editor " ಎನೇಬಲ್ ಮಾಡ್ಕೊಂಡು. ಚಿತ್ರ ಇನ್ಸರ್ಟ್ ಮಾಡಬಹುದು. ಚಿತ್ರಗಳಿಗೆ ಕೆಳಗಿನ ಪಾತ್ ಕೊಡಿ.
http://sampada.net/files/images/IMG_1064_0.preview.JPG
http://sampada.net/files/images/IMG_1065.preview.jpg
http://sampada.net/files/images/IMG_1064.preview.JPG

ಚೆನ್ನಾಗಿದೆ, ಶ್ರೀನಾಥ್,
ಹೀಗೇ ಪ್ರಕೃತಿ ವಿಸ್ಮಯಗಳನ್ನು ಹಾಕುತ್ತಾ ಇರಿ. ( ನನ್ನ ಕ್ಯಾಪ್ಶನ್ ಈ ಚಿತ್ರಕ್ಕೆ-----೬೩ ಅಲ್ಲ ೩೬ ---ಮದುವೆಯಾಗಿ ೩೦ ವರ್ಷ ಆದಮೇಲೆ ಗಂಡ - ಹೆಂಡತಿಯರು ಈ ರೀತಿ ಮುಖ ಮಾಡಿಕೊಂಡಿರುವುದು ಸಾಮಾನ್ಯ ಅಂತ ಎಲ್ಲೋ ಓದಿದ ನೆನಪು!)
~ಮೀನಾ.

ಜೋಡಿ ಹಣ್ಣು ಗಳು.,, ಬೇರೆ ರೀತಿಯ ಜೋಡಿ ಹೂಗಳನ್ನು ನೋಡಿದ್ದೆ ಆದರೆ ಜೋಡಿ ಗುಲಾಬಿ ನೋಡಿದ್ದು ಇದೆ ಮೊದಲು...
ಹೂವು ಗಿಡದಲ್ಲಿರುವಾಗಲೆ ಫೋಟೊ ತೆಗೆದಿದ್ದರೆ ಚೆನ್ನಾಗಿರುತಿತ್ತು........

ಹೂವುಗಳನ್ನು ಮನೆಯ ಒಳಗೆ ತಂದ ಮೇಲೆ ಗಮನಿಸಿದಾಗ ಈ ಜೋಡಿ ಕಣ್ಣಿಗೆ ಬಿತ್ತು .... ಆಗಲೇ ನನಗೂ ಅನ್ನಿಸಿದ್ದು ... ಮೊದಲೇ ನೋಡಿದ್ದರೆ ಚೆನ್ನಾಗಿತ್ತು ಅಂತ ... ಇಂದು ಬೆಳಿಗ್ಗೆ ದೇವರ ಕೋಣೆಯಲ್ಲಿ ಯಾರಿಗೆ ಅರ್ಪಿಸಲಿ ಎಂದು ನೋಡುತ್ತಿದ್ದಾಗ ಅವಳಿಗಳ ಡ್ಯಾಡ್ ’ಶ್ರೀರಾಮ’ನೇ ಉತ್ತಮ ಎಂದುಕೊಂಡು ’ಪುರುಷೋತ್ತಮ’ನಿಗೆ ಅರ್ಪಿಸಿದೆ :-)

ಜೋಡಿ ಗುಲಾಬಿಗಳು... ಲೇಖನ ಚೆನ್ನಾಗಿದೆ...
ಜೋಡಿ ಗುಲಾಬಿಗಳಿಗೆ ಉದಾಹರಣೆಯೆಂದರೆ.. ನಮ್ಮ ರಾಜ್ಯ ಹಾಗೂ ಕೇಂದ್ರ ಸರಕಾರ