ಅಲಲಾ....ಬ್ರಹ್ಮ ಕಮಲ!

To prevent automated spam submissions leave this field empty.

ಈ ಪ್ರಕೃತಿ ಮಾತೆ ತನ್ನ ಮಡಿಲೊಳಗೆ ಅದೆಷ್ಟು ವಿಸ್ಮಯಗಳನ್ನ ತುಂಬಿಕೊಂಡಿದೆಯೋ..?
ಯಾಕ್ ಈ ಪ್ರಶ್ನೆ ಅಂದ್ರೆ.. ಇಲ್ಲಿದೆ ನೋಡಿ ರಾತ್ರಿಲಿ ಮಾತ್ರ ಅರಳೋ ಹೂವು "ಬ್ರಹ್ಮಕಮಲ".. (ಇದಕ್ಕೆ ರಾತ್ರಿರಾಣಿ ಅಂಥಾನೂ ಹೆಸರಿದೆ ಅಂಥೆ...).

 

ನಾ ಚಿಕ್ಕವನಿದ್ದಾಗ ವಿಜ್ಞಾನದಲ್ಲಿ ಓದಿದ್ದು ಸಸ್ಯಗಳು ಬೆಳೆಯೋಕೆ ನೀರಿನ ಜೊತೆಗೆ ಸೂರ್ಯನ ಬೆಳಕು ಮುಖ್ಯ ಅಂಥ, ಅಂತದರಲ್ಲಿ ಈ ಬ್ರಹ್ಮಕಮಲದ ಬಗ್ಗೆ ಕೇಳಿದಾಗ ಅಚ್ಚರಿ ಮೂಡಿಸಿತ್ತು. ನನ್ನ ತಂದೆ ಮನೆಗೆ ಅದರ ಎಲೆ ತಂದು ನೆಡುವವರೆಗೆ(ಹೌದು ಎಲೆಗಳನ್ನೆ ನೆಟ್ಟಿದ್ದು..!), ನೆಟ್ಟು ಅದು ಅರಳುವವರೆಗೆ ಒಂದು ಅನುಮಾನ ಇದ್ದೆ ಇತ್ತು, ಹೀಗೂ ಉಂಟಾ ಅಂತ!

ಯಾವಾಗ ಅದು ಅರಳಿತೋ, ನನ್ನ ಅನುಮಾನ ಸುಳ್ಳಾಗಿ ಮತ್ತೊಮ್ಮೆ ಆಶ್ಚರ್ಯ ಹೂವಾಗಿ ಅರಳಿತು..!

ಒಮ್ಮೆಲೆ ಹತ್ತು-ಹದಿನೈದು ಮೊಗ್ಗಾಗಿ, ಅರಳಿ ಹೂವಾದವು ನೋಡಿ, ಮನ ಈ ಹೂವಿನಂತೆ ಅರಳಿದ್ದು ಸುಳ್ಳಲ್ಲ...

ಇದರ ಬಗ್ಗೆ ವೈಜ್ನಾನಿಕವಾಗಿ ನನಗೇನು ಗೊತ್ತಿಲ್ಲ.. ಗೊತ್ತಿದ್ದರೆ ತಿಳಿಸಿ ನನ್ನ ಕುತೂಹಲ ತಣಿಸ ಬೇಕಾಗಿ ಮನವಿ..

 

ಬ್ರಹ್ಮಕಮಲದ ಬಗ್ಗೆ ಏನಾದರು ಮಾಹಿತಿ ಸಿಗುತ್ತಾ ಎಂದು ಹುಡುಕುತಿರುವಾಗ , ಸಂಪದದಲ್ಲೆ ಎರಡು ಮೂರು ಲೇಖನಗಳು ಸಿಕ್ಕಿದ್ದು ಮತ್ತೊಂದು ಅಚ್ಚರಿ, ಹಾಗೆ ಇದರ ಬಗ್ಗೆ ಮಾಹಿತಿ ಕೂಡ ಸಿಕ್ಕಿದ್ದು ಸಂತಸದ ವಿಚಾರ.. ಅವುಗಳ ಕೊಂಡಿ ಇಲ್ಲಿದೆ ನೋಡಿ:

http://sampada.net/article/9721

http://sampada.net/image/6562

 

ಮತ್ತೆ ಈ ಲೇಖನ ಯಾತಕ್ಕೆ ಎಂದು ಮೂಗು ಮುರಿಯಬೇಡಿ.., ಇದು ನನ್ನ ತಮ್ಮನ ಆಸೆ ಆತನೆ ಕಷ್ಟಪಟ್ಟು ತನ್ನ ಮೊಬೈಲಿನಲ್ಲಿ ಈ ಚಿತ್ರಗಳ ಸೆರೆಹಿಡಿದದ್ದು.. ಅವನ ಖುಷಿಗೆ ಈ ಲೇಖನ..

images:

http://sampada.net/image/21537
http://sampada.net/image/21538
http://sampada.net/image/21539
http://sampada.net/image/21540


ನಿಮಗೂ ಈ ವಿಸ್ಮಯ ಸಿಕ್ಕಾಗ ಸಂತಸ ಹಂಚಿಕೊಳ್ಳಲು ಮರೆಯಬೇಡಿ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಸಸ್ಯ ಪ್ರಪಂಚದ ವಿಸ್ಮಯವೊಂದನ್ನು ನೆನಪಿಸಿದ್ದಕ್ಕೆ ವಂದನೆಗಳು. ಕೆಲವು ಸಸ್ಯಗಳು ಬೆಳಿಗ್ಗಿನ ಸಮಯದಲ್ಲರಳಿ ಸಂಜೆಯಾಗುತ್ತಿದಂತೆ ಬಾಡಿದರೆ ಇನ್ನು ಕೆಲವು ಸಂಜೆಯಲ್ಲರಳಿ ರಾತ್ರಿ ಬಾಡುತ್ತದೆ. ಇನ್ನು ಕೆಲವು ರಾತ್ರಿ ಅರಳಿ ಬೆಳಕಾಗಿತ್ತಿದಂತೆ ಬಾಡುತ್ತದೆ. ಹೂವು ಅರಳುವುದರಲ್ಲೇ ಎಷ್ಟೊಂದು ವೈವಿಧ್ಯತೆ ಅಲ್ಲವೇ?

ಸಸ್ಯಗಳ ಈ ಗುಣಕ್ಕೆ ಇಂತಹ ಕಾರಣವೇ ನಿಜವೆಂದು ಪ್ರಾಯೋಗಿಕವಾಗಿ ಪ್ರಮಾಣೀಕರಿಸಿದ ಬರಹ ಎಲ್ಲೂ ಓದಿದ ನೆನಪಿಲ್ಲ. ಸಸ್ಯಗಳು ಹೂವು ಬಿಡುವುದು ಪರಾಗ ಸ್ಪರ್ಶ ಕ್ರಿಯೆಗಾಗಿ. ಚಲನೆಯ ಗುಣ ಅವಕ್ಕಿಲ್ಲವಾದ್ದರಿಂದ, ಕೀಟ, ಹಕ್ಕಿಗಳ ಮೇಲೆ ಈ ಕ್ರಿಯೆಗೆ ಅವಲಂಭಿತವಾಗಿರುತ್ತವೆ. ಚಿಟ್ಟೆ, ಹೂವಿನ ಹಕ್ಕಿಗಳಂತಹ ಮಕರಂದ ಕುಡಿದು ಜೀವಿಸುವ ಜೀವಿಗಳು ಬೆಳಿಗ್ಗೆ ಸಂಚಾರಕ್ಕೆ ಹೊರಟರೆ, ಪತಂಗ (ಚಿಟ್ಟೆಗೂ ಪತಂಗಕ್ಕು ವ್ಯತ್ಯಾಸವಿದೆ) ಬಾವಲಿಗಳಂತಹ (ಬಾವಲಿ ಹಕ್ಕಿಯಲ್ಲ, ಸಸ್ತನಿ) ಜೀವಿಗಳು ರಾತ್ರಿಯ ಸಮಯದಲ್ಲಿ ಮಕರಂದ ಹೀರಲು ಹೊರ ಬೀಳುತ್ತವೆ. ಚಿಟ್ಟೆಗಳೇ ಇಲ್ಲದ ಪರಿಸರವೊಂದನ್ನು ಊಹಿಸಿದರೆ, ಹಗಲಲ್ಲಿ ಅರಳುವ ಹೂವಿನ ಸಸ್ಯಗಳ ಬೀಜ ಫಲಿಸದೇ ಅಳಿಯಬಹುದು. ಇಂತಹ ಸಂದರ್ಭದಲ್ಲಿ ಸಸ್ಯಗಳಿಗೆ ರಾತ್ರಿ ಹೂವು ಬಿಡುವ ಅನಿವಾರ್ಯತೆ ಬಂದಿರಬಹುದು. ಆದರೆ ಈ ಬದಲಾವಣೆ ಒಂದೆರೆಡು ದಿನಗಳ ಪ್ರಕ್ರಿಯೆಯಲ್ಲ ಎಂಬುದನ್ನು ಗಮನದಲ್ಲಿರಿಸಬೇಕು. ರಾತ್ರಿ ಹೂಗಳು ಬಣ್ಣದಲ್ಲಿ ಹೆಚ್ಚಿನ ವೈವಿಧ್ಯತೆ ಇರದೆ, ಗಾಢವಾದ ಸುವಾಸನೆ ಹೊಂದಿರುವುದು ಸಾಮಾನ್ಯ. ರಾತ್ರಿಯ ಮಂದ ಬೆಳಕಿನಲ್ಲಿ ಬಣ್ಣ ಗುರುತಿಸಲಾರದಿದ್ದರಿಂದ ಇರಬಹುದು. ನಿಶಾಚರಿ ಬಾವಲಿಯ ಕಿವಿ ಕಣ್ಣಿಗಿಂತ ಚುರುಕಾಗಿರಲು ಇದೇ ಕಾರಣ.

ಮೇಲಿನ ಊಹಿಗೆ ವ್ಯತಿರಿಕ್ತವಾಗಿ, ನಿಶಾಚರಿ ಕೀಟಗಳು ರಾತ್ರಿಯಲ್ಲಿ ಆಹಾರ ಸಿಗದೆ ಅಳಿವಿನಂಚಿನ ಸ್ಥಿತಿಯಲ್ಲಿ, ಬೆಳಿಗ್ಗಿನ ವಾತಾವರಣಕ್ಕೆ ಕ್ರಮೇಣ ಏಕೆ ಹೊಂದಿಕೊಂಡಿಲ್ಲ ಎಂಬುದು. ಅದೂ ಅಲ್ಲದೇ ಅನೇಕ ಸಸ್ಯಗಳು ಪರಾಗಸ್ಪರ್ಶದ ಪ್ರಕ್ರಿಯೆ ಇಲ್ಲದೆಯೂ ಸಂತಾನ ವೃದ್ಧಿಸಿಕೊಳ್ಳಬಹುದು. ಉದಾ: ದಾಸವಾಳ, ಬ್ರಾಹ್ಮಿ.ಒಂದು ವೇಳೆ ಹಗಲಿನ ಸಮಯದಲ್ಲಿ ಪರಾಗ ಸ್ಪರ್ಶಕ್ಕೆ ಕೀಟಗಳಿಲ್ಲವೆಂದಾದಲ್ಲಿ ಸಸ್ಯಗಳು ಈ ಗುಣಕ್ಕೆ ಮಾರ್ಪಾಡಾಗಬಹುದಿತ್ತಲ್ಲ ಎಂದೂ ವಾದಿಸಬಹುದು. ಇದೆಲ್ಲದಕ್ಕೂ ಉತ್ತರ ಸಸ್ಯಗಳು ಬೆಳೆದು ಬಂದ ಪರಿಸರ, ಅವುಗಳ ಮೇಲೆ ಒತ್ತಡ ಬೀರಿದಾದ ಅಂದಿನ ವಾತಾವರಣದ ಅಧ್ಯಯನ ಮಾಡಿದರೆ ಸಿಗಬಹುದೇನೋ. ಇಷ್ಟಕ್ಕೂ ಈ ಸಸ್ಯದ ಮೂಲವೇ ತಿಳಿದಿಲ್ಲ, ಇನ್ನು ಅದರ ಭೌಗೋಳಿಕ ಹಿನ್ನೆಲೆಯನ್ನು ಕಲ್ಪಿಸಿಕೊಳ್ಳುವುದು ಬಹಳ ತ್ರಾಸದಾಯಕ.

ಬ್ರಹ್ಮ ಕಮಲದ ವೈಜ್ಞಾನಿಕ ಹೆಸರು Epiphyllum oxypetalum, ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ: http://en.wikipedia.org/wiki/Epiphyllum_oxypetalum

ಇನ್ನಷ್ಟು ಚಿತ್ರ: http://me-damitr.blogspot.com/2008/06/beautiful-bramhakamal.html