ನಗೆ ಬಗೆ ಬಗೆ

To prevent automated spam submissions leave this field empty.

ನಗೆ ಬಗೆ ಬಗೆ!

ನಗುವಿಗುಂಟು ಸಾವಿರ ರೂಪ
ನಗುವಿಲ್ಲದ ಮುಖ ವಿರೂಪ
ನಗುವಿನ ದ್ವೇಶಿ ಕೋಪ
ನಕ್ಕು ನಗಿಸು(ವವ) ಬಾಳಭೂಪ!

ಗಹಗಹಿಸಿ ನಗುವರು
ಕಿಕ್ಕರಿಸು ನಗುವರು
ಹನಿಭಾಷ್ಪಸುರಿಸಿ ಕೆಲರು ನಗುವರು
ತನು ಕುಣಿಸಿ ನಗುವರಿತರರು

ಓಬ್ಬೊಬ್ಬರು ಒಂದೊಂದು ರೀತಿ
ತಬ್ಬಿ ತಮಗೆ ತಕ್ಕ ಸಹಾಯಕ ಚಾತಿ
ನಗು ನೋಡಿ ನಗುವ ರೀತಿ
ನಗುವಿಗಾಗ ಬಹು ಬಾಳಿನ ಜ್ಯೋತಿ

ನಗುವಿನ ದ್ವೇಶಿ ಉಗ್ರ ಭೀತಿ
ಭಿತಿಯಾಕಾರ ಹಲವು ರೀತಿ
ಆಗಾಗ ಬೀತಿಗೂ ನಗುವಿನ ಮದ್ದು
ಆಗ ನೊಂದಿಗೆ ಆನಂದ ಮುದ್ದು.

ನಗು ಮುಗುಳ್ನಗು ಮಂದಹಾಸ
ನಗುವಿನ ವಿವಿಧ ಪರ್ಯಾಸ
ಆದರೂ ಎಚ್ಚರಿಕೆ ಅನಿವಾರ್ಯ
ಆಗೀಗ ಕೆಲವರ ಕಪಟನಗು ವಿಪರ್ಯ

ಅವರಿವರ ಹುಸಿನಗು ನಂಬಿ
ಮರುಳಾಗಬಾರದು ನಂಬಿಕೆ ತುಂಬಿ
ನಗುನಗುವಿನ ನಡುವೆ ರೈಲುಕಂಬಿ
ಗಮನಿಸಿ ಸೇರಿ ಗುರಿಯ ನಾಭಿ!

ನಗುವಿಗೂ ವಿವಿಧ ರೂಪಗಳು
ಪರಿಪರಿಯ ಪರಿಸರದ ಗಾಳು
‚ಪ್ರೀತಿ’ಯ ಕೋಟಿ ದರ್ಶನಗಳಂತೆ
ನಗುವಿನ ಚೂಟಿ ಪ್ರದರ್ಶನಗಳ ನಡತೆ!

ನಗುವಿಲ್ಲದ ಬಾಳು ಹಾಳು
ಜೀವಿಸಲು ಅವಶ್ಯದಂತೆ ಉಸಿರು
ಬಾಳಿಗೆ ಬೇಕು ನಗುವಿನ ಹೋಳು
ದಿನಕೊಂದೆರಡು ಬಾರಿಯ ತೋರು!

ಸಾರಿಗೆ ಕೊಂಚ ಉಪ್ಪು ಬೇಕಾಗುವಂತೆ
ದಿನಚರಿಗೆ ನಗುವಿನ ಕಂಪು ಒಪ್ಪವಂತೆ
ಜೋಕು ಮಾತನಾಡಿ ನಗಿಸು ಕೈಲಾಸಂ ಅಂತೆ
ಹಾಸ್ಯ ಕೃತಿ ಕವನ ರಚಿಸಿ ರಾಜರತ್ನಂ ಅವರಂತೆ!

- ವಿಜಯಶೀಲ,

ಲೇಖನ ವರ್ಗ (Category): 
ಸರಣಿ: