ಶುಭಾಶಯಗಳ ಆಕಾಂಕ್ಷೆ

To prevent automated spam submissions leave this field empty.

ಶುಭಾಶಯಗಳ ಆಕಾಂಕ್ಷೆ
*
ಶುಭಾಶಯಗಳು ನೀರೀಕ್ಷಣೆಗಳು
ಆಸೆನಿರಾಶೆಗಳು ಸುಕದುಃಖಗಳು
ಹಗಲುರಾತ್ರಿಗಳಂತೆ ಸತತ ಜೊತೆ
ಎಡಬಿಡದ ಮಾನವತೆಯ ಚರಿತೆ!
**
“ಪ್ರೀತಿ, ಮಮತೆಯ ರಂಗು ಇದ್ದರೆ
ಸಾಕು, ಪ್ರತಿ ಗಳಿಗೆ“ - (ಅ.ಕ.ಡೊಂಗ್ರೆ)
**
ಇವೆಲ್ಲಾ ಶುಭಾಶಯಗಳನ್ನು ಆಶಿಸುವುದು
ಇನ್ನೆಲ್ಲಾ ಸೊಗಸಿನ ಬಾಳನ್ನು ಭಾವಿಸುದು
ಎಲ್ಲಾ ಕಾಲಗಳಿಗೆ, ಬರುವೆಲ್ಲಾ ಭವಿಷ್ಯಗಳಲಿ
ಎಲ್ಲೆಡೆಗೆ ಎಲೆಮೀರಿ ದೇಶಗಳೆಲ್ಲಾ ವಿಶ್ವದಲಿ.
**
ಯುಗಯುಗಗಳಿಂದ ಬಂದ ಸಂಪ್ರದಾಯ ವಾಡಿಕೆ
ಜಗದ ಮಹಾತ್ಮರಾತ್ಮದಿಂದ ಸತತೋದಯ ಬೇಡಿಕೆ.
ಆಹ್ವಾನಿಸುವರು ಹೋಳಿಹಬ್ಬದಲಾಶಿಸಿ ವಿಶ್ವಾಸಿಗಳು
ಅಹವಾಲು ವರ ಕೇಳಿ ಯುಗಾದಿಗೆನಿಸಿ ಆಶಾವಾದಿಗಳು.
ಹೊಸವರುಷದ ಶುಭಾಶಯವಾಡಿ ವಿಶ್ವದೊಳೆಲ್ಲೆಡೆ
ಪ್ರಸರಿಸಿ ನವದಿನಗಳಿಗೆ ನವಬಾಳಿನಂ(ದ)ಕದ ಕೊಡೆ.
**
“ಅರೆ, ಮಹಾರಾಯ!“ ಎನುವ ತಾತ್ವಿಕ ಮಾತಿನಂತೆ,
“ಮರುದಿನ ಬರುವುದು ನವದಿನವೊಂದು ಏಕೀಕೊರತೆ“?
ನಾಳೆಯ ದಿನಚರಿ ಅರಿಯರಾರು - ಸತ್ಯಮಾತು
ಇಳೆಯ ಚರಿತೆಯರಿತ ಆರ್ಯರೆನುವರದು ನಿತ್ಯಶರತ್ತು.
**
ಆಸೆಗಳು ನಿರಾಶೆಯಾಗಿ, ಭರವಸೆಗಳು ಮರೆತು ಸತ್ತು
ದಿಶೆಯಿಲ್ಲದೆ ದೀನರು ನೋಡಿ ಹಾಳಾದ ನೀತಿಗೊತ್ತು.
ಕ್ರೂರದಿನಚರಿಯ ಮೋಸನ್ಯಾಯದಿಡ್ಡೆಗಳೆಡವಿ ನೊಂದು
ತೀರವೇದನೆಯ ನೊಸಲಸುಕ್ಕು ಧರಿಸಿ ನಡೆವರು ಮುಂದು.
ಉಳಿವರೆನಿತೋ ಅಳಿವರೆನಿತೋ ಉಳಿದುನಿಂತು ಹಿಂದೆ
ತಿಳಿಯದೆ ತರಲು ಮನೆಮಕ್ಕಳಿಗೆ ತುತ್ತುಹಿಟ್ಟು ಒಂದುಒಂದೇ.
**
ಹಬ್ಬಹರಿದಿನಗಳು ಮುಗಿದು ನಿತ್ಯಸತ್ಯತೆ ಮತ್ತೆ ಬಂದಾಗ
ಉಬ್ಬಿಹರಿವ ಅಬ್ಬರದ ನದಿಯಲಿ ಗಾವಿಗನಂತೆ ನವೆದಾಗ,
ನೊಂದವರಿಗುಳಿವುದೊಂದೇ ಘೋರದಾರಿಯಾಗ - ಪ್ರಾರ್ಥನೆ.
ಅಂದವ ಪ್ರಕೃತಿಸಂಕಲ್ಪದ ಬಂಧಿ ಫಲವರಿಯದ ನೊಗ ಸಾರ್ಥನೆ!
**
ಕವಿ ಕವಯಿತ್ರಿಯ ಆಶಾಭಾವನೆಯ ಭವ್ಯಭುವಿಯ ಬೆಳಗು,
ದೇವದೇವತೆಯರ ದಿನಂಪ್ರತಿಯ ಎಚ್ಚರದಿರವಿನ ಸೊಭಗು!
ಬಹುಶಃ ಮಹಾಕಾವ್ಯಗಳಲಿ ಬಣ್ಣಿಸಿರುವ ಮನೋಹರ ಜಗತ್ತು
ಬಹುಭಾಗ ಮನಸಿನಲಿ ಮೆರೆವುದು ಮಾತ್ರ - ನಿಮಿತ್ತದ ಗೊತ್ತು!
**

ಯುಗಯುಗಗಳಿಂದ ವರುಷಗಳಳಿದುರುಳಿದವು ಅದೇರೀತಿ.
ಜಗದ ಜನರ ಮನದೊಳುಳಿಯದೆ ನಂಬಿಕೆ ನಿಯ್ಯತ್ತಿನನೀತಿ.
ರಾಜರ ರಾಜಕಾರಣಿಗಳ ಆಳ್ವಿಕೆ ಭರವಸೆಯ ಮಾತುಗಳು,
ನಿಜವಾಗಿ ಬರಲಿಲ್ಲ ತರಲಿಲ್ಲ ಉಳಿಕೆ ಮಾತುಹೊರತು ಪೊಳ್ಳು!
**
ಹಾಗಾಯಿತು ಅಳಿದ ವರುಷಗಳ ಹಾಳಾದ ಗತಿ, ಯುಗಾಂತರಗಳ ತಿತಿ!
ಹೇಗಾಗುವುದು ಬರುವ ದಿನಗಳ ವರ್ಣವರ್ಣಗಳ ಭವಿಷ್ಯದ ಪ್ರಗತಿ?
**
ಉತ್ತಮ ದಿನಗಳು ಬರುವ ಭರವಸೆಯಿತ್ತೇರುವರು ರಾಜಕಾರಣಿಗಳು
“ಉತ್ತಮ ನಾನು ನನ್ನ ಯೋಜನೆ, ಇತರ ರಾಜಕೀಯರಿಗಿಂತ“ ಎನುತ
ಮಂತ್ರಿ ಮತ್ತಿತರ ಸಾವಿರಾರು ಸಿಬ್ಬಂಧಿಗಳು ಏರುವರು ಲಾಭದಕುರ್ಚಿಗಳು.
ತಂತ್ರಿಗಳವರು ಎಲ್ಲಾ ದೇಶಗಳಲಿ, ನಡೆದಿದೆ ಕಪಟಮೋಸಲಂಚ ಸತತ!
**
ಆನುಭವ ತರುವುದು ಬುದ್ಧಿ ವಿವೇಕ ಜ್ಞಾನ
ಅತ್ಯವಶ್ಯ ಎಲ್ಲೆಡೆ ತಿಳಿಸುತಿದೆ ಚರಿತೆ ಲೋಕ ನೀತಿ,
ಅಕಟಾ! ಕಲಿತರಾರು ಪಾಠ, ತರಿಸಿ ಶಾಂತಿ ಸುಜ್ಞಾನ?
ಶತಶತಮಾನಗಳಿಂದ ಯುದ್ಧ ಆಹುತಿ ಉಳಿದು ಭೀತಿ!
**
ಬರಲಿ ಸಾಮಾನ್ಯ ಶುಭಾಶಯಗಳು, ವಾಯುವಿನಂತೆ.
ಬರುವ ರೀತಿನೀತಿ ತರುವ ಪರಿಣಾಮಗಳು ಭವಿಷ್ಯದಂತೆ.
ಕವಿಕವಯಿತ್ರಿಯರಾತ್ಮೀಯ ಶುಭಾಶಯಗಳಲಿ ಮಮತೆ!
ಕವಿದರಾತ್ರಿಯ ತೊರೆವ ರವಿರಶ್ಮಿಕಿರಣಗಳು ಬೆಳಗುವಂತೆ!
**
- ವಿಜಯಶೀಲ.

ಲೇಖನ ವರ್ಗ (Category): 
ಸರಣಿ: