ವೈದ್ಯೋ ನಾರಾಯಣೋ ಹರಿಃ |

To prevent automated spam submissions leave this field empty.

ಮನೋವೈದ್ಯ( psychiatrist), ಮನಃಶಾಸ್ತ್ರಜ್ಞ (clinical psychologist), ಮಾರ್ಗದರ್ಶಿ (psychiatric counsellor)  ಈ  3 ಶಬ್ದಗಳ ನಡುವಿನ ವ್ಯತ್ಯಾಸವನ್ನು ಅರಿತಿರುವುದು ಮುಖ್ಯ; ಕಾರಣ: ನಮ್ಮ ತೊಂದರೆಗಳಿಗೆ ಯಾವ ವರ್ಗದವರನ್ನು ನೋಡಬೇಕು ಎಂಬುದು ತಿಳಿದಿರಬೇಕಾದ್ದು ಒಳ್ಳೆಯದು.


ಮನೋವೈದ್ಯ ಎಂದರೆ ವೈದ್ಯಕೀಯ ಶಾಸ್ತ್ರ (MBBS, MD) ಓದಿ, ಔಷಧಿಗಳಿಂದ ಮಾನಸಿಕ ಕಾಯಿಲೆಗಳನ್ನು  ಗುಣಪಡಿಸುವವನು. 


Clinical Psychologist  ಇವರು psychological assessment ಮತ್ತು psycho therapyಗಳ ಮೂಲಕ ಮಾನಸಿಕ ತೊಂದರೆಗಳನ್ನು ನಿವಾರಿಸುವವರು. (ನೋಡಿ:   http://en.wikipedia.org/wiki/Clinical_psychology  ) 
ಮಾರ್ಗದರ್ಶಿ (psychiatric counsellor) ಗಳು ಮಾನಸಿಕ ಸಮಸ್ಯೆ ಇರುವವರಿಗೆ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಹುಡುಕುವಲ್ಲಿ ಸಹಾಯ/ಮಾರ್ಗದರ್ಶನ ಮಾಡುವವರು.


ಇದರ ಬಗ್ಗೆ ಡಾ| ದಿವಂಗತ ಮೀನಗುಂಡಿ ಸುಬ್ರಮಣ್ಯ ಇವರು ಕನ್ನಡದಲ್ಲಿ ಒಂದೆರಡು ಒಳ್ಳೆಯ ಪುಸ್ತಕಗಳನ್ನು ಬರೆದಿದ್ದಾರೆ.



(ಈ ಬರಹಕ್ಕೆ ಸ್ಪೂರ್ತಿ ಸಂಪದ್ ಮಿತ್ರ ಹರಿಹರಪುರ ಶ್ರೀಧರ್ ಅವರ ಪಾಂಡಿತ್ಯಪೂರ್ಣ ಲೇಖನ.  ಅವರಿಗೆ ನನ್ನ ಧನ್ಯವಾದಗಳು.)

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಿಮ್ಮ ಲೇಖನದ ಶೀರ್ಶಿಕೆ ನೋಡಿ ವಿವರಗಳಿಗೆ ಈ ತಾಣಕ್ಕೆ ಬಂದೆ. ಎಲ್ಲರಂತೆ ನೀವೂ "ವೈದ್ಯೋ ನಾರಾಯಣೋ ಹರಿಃ" - ವೈದ್ಯರು ನಾರಾಯಣನಿಗೆ ಸಮ ಎಂಬಂತೆ ಬರೆದಿದ್ದೀರಿ. ಆದರೆ ನಾನು ಕೇಳಿದಂತೆ ಈ ಸುಭಾಷಿತದ ಹಿನ್ನೆಲೆ ಗಮನಿಸಿದರೆ ಇಲ್ಲಿತುವ ಗೂಡಾರ್ಥವೇ ಬೇರೆ. ಪೂರ್ತಿ ಸುಭಾಷಿತವನ್ನು ವಿವರಣೆಯೊಂದಿಗೆ ಕೆಳಗೆ ನೀಡಿದ್ದೇನೆ. ಶರೀರೇ ಜರ್ಜರೀ ಭೂತೇ ವ್ಯಾಧಿಗ್ರಸ್ತೇ ಕಳೇಬರೇ| ಔಷದಂ ಜಾಹ್ನವೀ ತೋಯಂ ವೈದ್ಯೋ ನಾರಾಯಣೋ ಹರಿಃ| ಕಾಯಿಲೆಯಿಂದ ಜರ್ಜರಿತವಾಗಿ ಕಳೇಬರದಂತಾಗಿರುವನಿಗೆ / ಳಿಗೆ (ವಯಸ್ಸಾದ & ಬಹಳಕಾಲ ಕಾಯಿಲೆಯಿಂದ ನರಳುತ್ತಿರುವ) ಬೇರೇನೂ ಔಷಧಿ ನೀಡಲಾರದೆ ಬಾಯಿಗೆ ಗಂಗೆಯ ನೀರನ್ನು (ಇಲ್ಲಿ ಗಂಗೆಯೇ ಔಷಧಿ) ಹಾಕಿ, ಇನ್ನೇನಿದ್ದರೂ ಆ ನಾರಾಯಣನೇ ನೋಡಿಕೊಳ್ಳಬೇಕು ಎಂದು ಕೈಚೆಲ್ಲುವಾಗ ಹುಟ್ಟಿದ ಶುಭಾಷಿತ. ಈಗಲೂ ಪರಿಸ್ಥಿತಿ ಏನೂ ಬದಲಾಗಿಲ್ಲ. ಇಂದಿನ ವೈದ್ಯರ (ನೂರೆಂಟು ಬೇಕಿಲ್ಲದ Testing & analysisಗಳಿಂದ ಕಾಸು ಕೀಳುವ) ಕೈಯ್ಯಿಂದ ನಮ್ಮನ್ನು ಕಾಪಾಡಲು ನಾವು ನಾರಾಯಣನಿಗೇ ಮೊರೆ ಹೋಗಬೇಕು! :)

ಮಾನ್ಯರೇ, ಮೊದಲನೆಯದಾಗಿ ತಪ್ಪು ಶೀರ್ಷಿಕೆಗಾಗಿ ಕ್ಷಮೆ ಕೇಳುತ್ತೇನೆ. ಬೇರೇನೂ ತೋಚದಿದ್ದುದರಿಂದ ತಪ್ಪಾದರೂ ಈ ಪರಿಚಿತ ತಲೆಬರಹ ಕೊಟ್ಟೆ. ನಿಮ್ಮ ಕೊನೆಯ ವಾಕ್ಯ ಬಹಳ ಮನನೀಯವಾಗಿದೆ. ಇತ್ತೀಚೆಗಷ್ಟೇ ಮಲಬದ್ಧತೆಗಾಗಿ ಸಂತ ಜಾನರ ಆಸ್ಪತ್ರೆಗೆ ಹೋದಾಗ ಅಲ್ಲಿನ ದೊಡ್ಡ ಡಾಕ್ಟರು ಹೇಳಿದ್ದು: colonoscopy ಮಾಡಿಸಿಕೊಳ್ಳಿ ಎಂದು. ಸುಮಾರು ಮೂರು ಸಾವಿರ ಖರ್ಚಾಗುವುದು ಮಾತ್ರವಲ್ಲ ತುಂಬಾ ನೋವಿನ ವಿಧಾನ. ಪುಣ್ಯಕ್ಕೆ ಹಿರಿಯ ವೈದ್ಯರಾದ ನನ್ನ ಚಿಕ್ಕಮ್ಮ ಅದನ್ನು ಅಷ್ಟು ತರಾತುರಿಯಲ್ಲಿ ಮಾಡಿಸಿಕೊಳ್ಳುವುದು ಅನಗತ್ಯ ಎಂದದ್ದರಿಂದ ಮಾಡಿಸಹೊಗಲಿಲ್ಲ. ಮನೆವೈದ್ಯರಾದ ಬೋಪಯ್ಯನವರು ಮಲಬದ್ಧತೆಗೆ ಚಿಕಿತ್ಸೆ ಅಗತ್ಯವಿಲ್ಲ, ಅಭ್ಯಾಸಗಳನ್ನು ಬದಲಿಸಿಕೊಂಡರೆ ಸಾಕು ಎಂದರು. ಅದರಂತೆ, ಬೆಳಿಗ್ಗೆ ಎದ್ದ ತಕ್ಷಣ ನಾಲ್ಕು ದೊಡ್ಡ ಗ್ಲಾಸು ಉಗುರು ಬೆಚ್ಚಗಿನ ನೀರು ಕುಡಿದು, ಐದಾರು ಕರಿಬೇವಿನ ಎಸಳುಗಳನ್ನು ಜಗಿಯುವದನ್ನು ರೂಡಿ ಮಾಡಿಕೊಂಡ ಮೇಲೆ ಎಷ್ಟೋ ವಾಸಿ. ನನಗೆ ಸಂಶಯವಿದೆ: ಈ ದೊಡ್ಡ ಆಸ್ಪತ್ರೆಗಳಲ್ಲಿ ವೈದ್ಯರಿಗೆ incentive ಗಳು ಇರುವುವೇನೋ ಎಂದು - ಅನಗತ್ಯ ವಾಗಿ X-ray ತೆಗಿಸಿ, colonoscopy ಮಾಡಿ, scanning maaDisi, ityaadi ಎಂದು ಸಲಹೆ ಕೊಡುವುದರಿಂದ.