ಕನ್ನಡಗರಿಗೆ ಕನ್ನಡದಲ್ಲಿಯೇ ತಮ್ಮ ಜ್ಞಾನವನ್ನು ಹಂಚಿಕೊಳ್ಳುವ ವೇದಿಕೆ:ಏನಿದು ಯುಎನ್ ಸೊಲ್ಯುಶನ್ ಎಕ್ಸಚೇಂಜ್?

To prevent automated spam submissions leave this field empty.

ಏನಿದು ಯುಎನ್ ಸೊಲ್ಯುಶನ್ ಎಕ್ಸಚೇಂಜ್


ವಿಶ್ವಸಂಸ್ಥೆಯ ಏಜಿನ್ಸಿಗಳು ಭಾರತದಲ್ಲಿ ಸೊಲ್ಯುಶನ್ ಎಕ್ಸಚೇಂಜ್ ಕಾರ್ಯಕ್ರಮವನ್ನು ಅನುಷ್ಠಾನಮಾಡಿದೆ.ಇದು ಜ್ಞಾನದ ಹಂಚಿಕೆಗಾಗಿ ಪರಸ್ಪರ ಅಭಿವೃದ್ಧಿಪರ ಕಾರ್ಯನಿರತರನ್ನು ಒಂದುಗೂಡಿಸಿ ಆಮೂಲಕ ಸಹಸ್ರಮಾನದ ಅಭಿವೃದ್ಧಿಯ ಗುರಿಗಳನ್ನು ಮತ್ತು ಪಂಚವಾರ್ಷಿಕ ಯೋಜನೆಯ ಗುರಿಯನ್ನು ಸಾಧಿಸುವ ಗುರಿಯನ್ನು ಹೊಂದಿದೆ.


ಸಹಸ್ರಮಾನದ ಅಭಿವೃದ್ದಿಯ ಗುರಿಗಳು ಯಾವುವು?  • ಬಡತನ ಮತ್ತು ಹಸಿವನ್ನು ನಿರ್ಮೂಲನ ಮಾಡುವುದು

  • ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣವನ್ನು ಸಾಧಿಸುವುದು

  • ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣವನ್ನು ಉತ್ತೇಜಿಸುವುದು

  • ಎಚ್ ಐವಿ/ಏಡ್ಸ್, ಮಲೇರಿಯಾ ಮತ್ತು ಇನ್ನಿತರ ರೋಗಗಳೊಂದಿಗೆ ಹೋರಾಡುವುದು

  • ಶಿಶು ಮರಣದ ಪ್ರಮಾಣವನ್ನು ಕಡಿಮೆಮಾಡುವುದು

  • ತಾಯಿ ಆರೋಗ್ಯವನ್ನು ಉತ್ತಮಪಡಿಸುವುದು

  • ಪಾರಿಸರಿಕ ಸ್ವಶಕ್ತತೆ

  • ಅಭಿವೃದ್ಧಿಗಾಗಿ ಜಾಗತಿಕ ಪಾಲುದಾರಿಕೆಯನ್ನು ಬೆಳೆಸುವುದು

ಈ ಮೇಲಿನ ಸಹಸ್ರಮಾನದ ಅಭಿವೃದ್ಧಿ ಗುರಿಗಳನ್ನು ಸಾಧಿಸುವುದಕ್ಕಾಗಿ ವಿಶ್ವಸಂಸ್ಥೆಯು ತನ್ನ ಎಜೆನ್ಸಿಗಳ ಮುಖಾಂತರ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿದೆ. ಅದರಲ್ಲಿ ಯುಎನ್ ಸೊಲ್ಯುಶನ್ ಎಕ್ಸಚೇಂಜ್ ಕೂಡಾ ಒಂದು! ಒಂದೇ ಆಸಕ್ತಿ, ಸಮಾನ ಕಾಳಜಿಯನ್ನು ಹೊಂದಿರುವ ಜನಸಮುದಾಯವನ್ನು ಅಂತರ್ಜಾಲದ ಮೂಲಕ ಒಂದುಗೂಡಿಸಿ, ಪರಸ್ಪರ ನಂಬಿಕೆಯನ್ನು ಸೃಷ್ಟಿಸಿ, ಅವರನ್ನು ತಂಡವಾಗಿ ಬಲಪಡಿಸುತ್ತದೆ. ಭಾರತದಲ್ಲಿರುವ ವಿಶಾಲ ಜ್ಞಾನಸಂಪತ್ತನ್ನು ಒಂದೆಡೆ ಸಂಗ್ರಹಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ.


ಸೊಲ್ಯುಶನ್ ಎಕ್ಸಚೇಂಜ್ ಗೆ ಯಾರು ಸದಸ್ಯರಾಗಬಹುದು?


ಸರ್ಕಾರ, ಸರ್ಕಾರೇತರ, ಖಾಸಗಿ ಹಾಗೂ ಅಭಿವೃದ್ಧಿಪರ ವಿಷಯಗಳಲ್ಲಿ ಕೆಲಸನಿರ್ವಹಿಸುತ್ತಿರುವ ಜನತೆಗೆ ಇದೊಂದು ಮುಕ್ತವಾದ ವೇದಿಕೆಯಾಗಿದೆ. ಹೆಚ್ಚಿನ ಮಾಹಿತಿಗೆ ಈ ಮುಂದಿನ ವೆಬ್ ಸೈಟ್ ನ್ನು ಸಂಪರ್ಕಿಸಿ www.solutionexchange-un.net.in


 ಪ್ರಸ್ತುತ ಹನ್ನೆರಡು ಸೊಲ್ಯುಶನ್ ಎಕ್ಸಚೇಂಜ್ ಸಮುದಾಯಗಳು ಕಾರ್ಯನಿರ್ವಹಿಸುತ್ತಿವೆ. ಅದರಲ್ಲಿ ಕರ್ನಾಟಕ ಸಮುದಾಯವು ಒಂದು.


 ಸೊಲ್ಯುಶನ್ ಎಕ್ಸಚೇಂಜ್ ಕರ್ನಾಟಕ ಸಮುದಾಯ


ಇದು ಪ್ರಾದೇಶಿಕ ಸಮುದಾಯವಾಗಿದ್ದು ರಾಜ್ಯದ ಅಭಿವೃದ್ಧಿಗೆ ಮಾರಕವಾಗಿರುವ ವಿಷಯಗಳ ಬಗ್ಗೆ ಹೆಚ್ಚಿನ ಗಮನವನ್ನು ನೀಡುತ್ತದೆ.ಇದು ದ್ವಿಭಾಷೆಯಲ್ಲಿದ್ದು ಸದಸ್ಯರು ತಮ್ಮ ಅಭಿಪ್ರಾಯಗಳನ್ನು, ಅನುಭವಗಳನ್ನು ಕನ್ನಡ ಮತ್ತು ಇಂಗ್ಲೀಷ್ ಎರಡರಲ್ಲಿ ತಮಗೆ ಸುಗಮವಾಗಿರುವ ಭಾಷೆಯನ್ನು ಆರಿಸಿಕೊಳ್ಳಬಹುದು. ಮುಖ್ಯವಾಗಿ ಇಂಗ್ಲೀಷ್ ಭಾಷೆಯ ಮಿತಿಯಿಂದ ತಮ್ಮ ಜ್ಞಾನವನ್ನು ಯಾರೊಂದಿಗೂ ಹಂಚಿಕೊಳ್ಳದ ಜನತೆಗೆ ಕರ್ನಾಟಕ ಸಮುದಾಯವು ಉತ್ತಮ ಅವಕಾಶವನ್ನು ಕಲ್ಪಿಸಿಕೊಡುತ್ತದೆ.ಈ ಸಮುದಾಯವು ತಿಂಗಳಿಗೆರಡು ವಿಷಯಗಳ ಬಗ್ಗೆ ಚರ್ಚೆಯನ್ನು, ತಿಂಗಳಿಗೆರಡು ಕಮ್ಯುನಿಟಿ ಅಪ್ ಡೇಟ್ ನ್ನು ಬಿಡುಗಡೆಮಾಡುತ್ತದೆ.


ಅಂದಹಾಗೆ ಈ ಸಮುದಾಯದ ಸದಸ್ಯರಾಗಬಯಸುವವರು ಈ ಮುಂದಿನ ವೆಬ್ ಸೈಟ್ ವಿಳಾಸಕ್ಕೆ ಒಂದು ಕ್ಲಿಕ್ ಮಾಡಿ http://www.solutionexchange-un.net.in/subscribe/index.php?comm=kar

ಲೇಖನ ವರ್ಗ (Category):