ಭಕ್ತಿ- ಎರಡು ವಿಭಿನ್ನ ದೃಷ್ಟಿ

To prevent automated spam submissions leave this field empty.

                               ಭಕ್ತಿ-ಚಿಂತನೆ

ಶ್ರೀ ಕೃಷ್ಣ ಹೇಳಿದ್ದು -  ಭಕ್ತ್ಯಾತ್ವನನ್ಯಯಾ ಶಕ್ಯ ಅಹಮೇವಂ ವಿಧೋರ್ಜುನ|

ಅನನ್ಯವಾದ ಭಕ್ತಿಯಿಂದ ನನ್ನನ್ನು ತಿಳಿಯಬಹುದು.(ಭ.ಗೀ,೧೧-೫೪)

ಭಕ್ತಿಯೆಂದರೆ?

ಶಂಕರಾಚಾರ್ಯರ ಪ್ರಕಾರ-

ಮೋಕ್ಷಸಾಧನ ಸಾಮಗ್ರ್ಯಾಂ ಭಕ್ತಿರೇವ ಗರೀಯಸೀ|

ಸ್ವಸ್ವರೂಪಾನುಸಂಧಾನಂ ಭಕ್ತಿರಿತ್ಯಭಿಧೀಯತೇ||(ವಿವೇಕ ಚೂಡಾಮಣಿ-೩೧)

ಮೋಕ್ಷಕ್ಕೆ ಸಹಾಯಕವಾಗಿರುವ ಸಲಕರಣೆಗಳಲ್ಲಿ ಭಕ್ತಿಯೇ ಶ್ರೇಷ್ಠವಾದುದು.

ತನ್ನ ನಿಜವಾದ ಆತ್ಮ ಸ್ವರೂಪದ ಅನುಸಂಧಾನವೇ ಭಕ್ತಿಯೆನಿಸುವುದು.

(ಇಲ್ಲಿ ಅದ್ವೈತ ದೃಷ್ಟಿಯ ಪ್ರಕಾರ ಭಕ್ತಿಯ ಲಕ್ಷಣವನ್ನು ಹೇಳಿದೆ.)

ಮಧ್ವಾಚಾರ್ಯರ ಪ್ರಕಾರ-

ಮಾಹಾತ್ಮ್ಯ ಜ್ಞಾನಪೂರ್ವಸ್ತು ಸುಧೃಢಃ ಸರ್ವತೋಧಿಕಃ|

ಸ್ನೇಹೋ ಭಕ್ತಿರಿತಿ ಪ್ರೋಕ್ತಃ ತಯಾ ಮುಕ್ತಿರ್ನಚಾನ್ಯಥಾ||(ಭಾರತ ತಾತ್ಪರ್ಯ ನಿರ್ಣಯ)

ಮಾಹಾತ್ಮ್ಯ ಜ್ಞಾನಪೂರ್ವಕವಾದ ತನ್ನ, ತನಗೆ ಬೇಕಾದವರೆಲ್ಲರಮೇಲಿರುವ ಪ್ರೀತಿಗಿಂತಲೂ ಅಧಿಕವಾದ ಸ್ನೇಹಕ್ಕೆ (ಪ್ರೀತಿಗೆ)

ಭಕ್ತಿ ಎಂದು ಹೆಸರು.ಇದರಿಂದಲೇ ಮುಕ್ತಿ ಆಗುವುದಲ್ಲದೇ ಬೇರೆಯಾವುದರಿಂದಲೂ ಮುಕ್ತಿಯಾಗದು.

ಹೀಗೆ ಅದ್ವೈತಿಗಳ ಭಕ್ತಿಯ ಪರಿಕಲ್ಪನೆಯೂ ದ್ವೈತಿಗಳ ಪರಿಕಲ್ಪನೆಯೂ ಬೇರೆ ಬೇರೆ ಮಟ್ಟದ ಚಿಂತನೆಯಾಗಿದೆ. 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಇನ್ನೊಂದು ದೃಷ್ಟಿಕೋನ :: ಭಕ್ತಿಯೆಂಬುದ ಮಾಡಬಾರದು. ಗರಗಸದಂತೆ ಹೋಗುತ್ತ ಕೊರೆವುದು; ಬರುತ್ತ ಕೊಯ್ವುದು. ಘಟಸರ್ಪನಲ್ಲಿ ಕೈದುಡುಕಿದರೆ ಹಿಡಿಯದೆ ಮಾಬುದೆ ? ಕೂಡಲಸಂಗಮದೇವ.

ಧನ್ಯವಾದಗಳು. ಭಕ್ತಿ ಭಂಡಾರಿ ಬಸವಣ್ಣನವರಿಂದ ಇಲ್ಲಿ ಬರೀ ನೆಗೆಟಿವ್ ಅರ್ಥ ಮಾತ್ರ ಸೂಚಿತವಾಗಿದೆಯೆ? ಒಂತರಾ ನಿಂದಾ ಸ್ತುತಿ ಇದ್ದಹಾಗಿದೆಯಲ್ವಾ?