ಸ್ವಾಮಿ ವಿವೇಕಾನಂದರು ಹೇಳಿದ ಒಂದು ಕಥೆ....

To prevent automated spam submissions leave this field empty.

ನನಗೊಬ್ಬಳು ಗೆಳತಿ ಇದ್ದಳು, ನಮ್ಮಿಬ್ಬರದು ತುಂಬ ಒಳ್ಳೆಯ ಗೆಳೆತನ...


ಒಮ್ಮೆ ನಾನು ಅವಳು ಒಂದು ಸರೋವರದ ಹತ್ತಿರ ಕುಳಿತಿದ್ದಾಗ ಅವಳು ತನ್ನ ಬೊಗಸೆಯಲ್ಲಿ ನೀರು ಹಿಡಿದು ನನ್ನೆಡೆಗೆ ತೋರಿಸಿ ಹೀಗಂದಳು:


"ನಿ ಈ ನೀರನ್ನು ಸೂಕ್ಷ್ಮವಾಗಿ ಗಮನಿಸು..., ಇದು ಪ್ರೀತಿಯನ್ನು ಸೂಚಿಸುತ್ತದೆ.."


ಆದರೆ ನಾ ಅದನ್ನು ಹೀಗೆ ವಿಶ್ಲೇಷಿಸಿದೆ:


"ನಾವು ನೀರನ್ನು ಬೊಗಸೆಯಲ್ಲಿ ಹಗುರವಾಗಿ ಇಟ್ಟು ನೀರನ್ನು ತನ್ನ ಪಾಡಿಗೆ ಇರಲು ಬಿಟ್ಟರೆ ಅದು ಹೆಚ್ಚು ಹೊರಹೋಗದೆ ಅಲ್ಲೇ ಇರುತ್ತದೆ,


ಅದೇ ನಾವು ಬೊಗಸೆಯಲ್ಲಿನ ನೀರನ್ನು ಬಿಗಿಯಾಗಿ ಹಿಡಿಯಲು ಹೋಗಿ ನಮ್ಮ ಹತೋಟಿಯಲ್ಲಿ ಇಡಲು ಪ್ರಯತ್ನ ಪಟ್ಟರೆ ಅದು(ನೀರು) ಕೈ ಬದಿಯಲ್ಲಿ ಅದಷ್ಟು ಹೊರಚಲ್ಲಿ ಹೋಗಲು ಪ್ರಯತ್ನಿಸುತ್ತದೆ.


ಇದೇ ನನ್ನ ಪ್ರಕಾರ ಜನರು ಪರಸ್ಪರ ಭೇಟಿಯಾದಾಗ/ನೋಡಿದಾಗ ಮಾಡುವ ಡೊಡ್ಡ ತಪ್ಪು...:


ಪ್ರೀತಿ: ತಮ್ಮ ವಶಕ್ಕೆ ಪಡೆಯಲು/ತಮಗೆ ಆಗಲಿ ಎಂದು ಬಯಸುವುದು, ಅವರ ಆಕಾಂಕ್ಷೆ, ಅವರ ಬಯಕೆ.... ಬೊಗಸೆಯಲ್ಲಿನ ನೀರು ಕೈಯಿಂದ ಚಲ್ಲಿ ಹೊರಹೋಗುತ್ತಿರುವ ಹಾಗೆ....


ಪ್ರೀತಿಯೂ ಅದೇ ತರಹ..., ಅದು ಎಂದೆಂದೂ ಸ್ವತಂತ್ರ... ನಮಗೆ ಅದರ ಗುಣವನ್ನು ಎಂದೂ ಬದಲಾಯಿಸಲಾಗುವುದಿಲ್ಲ. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದೀರಾ ಅಂದರೆ ನೀವು ಅವರನ್ನು ಅದಷ್ಟು ಮುಕ್ತವಾಗಿ/ಸ್ವತಂತ್ರವಾಗಿ ಇರಲು ಬಿಡಿ...


ನಿಮ್ಮಿಂದಾದಷ್ಟು ಅವರಿಗೆ ಕೊಡಿ/ಸಹಾಯ ಮಾಡಿ.., ಅದರೆ ಅವರಿಂದ ಹೆಚ್ಚು ಬಯಸಬೇಡಿ....


ಅವರಿಗೆ ಸಲಹೆ ನೀಡಿ.., ಅದರೆ ಅವರ ಮೇಲೆ ಅಧಿಕಾರ ತೋರಿಸಬೇಡಿ....


ಕೇಳಿ.., ಅದರೆ ಬೇಡ ಬೇಡಿ...


ಇದು ಕೇಳುವುದಕ್ಕೆ/ಹೇಳುವುದಕ್ಕೆ ಸುಲಭವನಿಸಬಹುದು... ಅದರೆ ಪ್ರಯತ್ನ ಪಟ್ಟು ಅನುಸರಿಸಲು ಹೊರಟರೆ ನಿಮ್ಮ ಜೀವಮಾನವೇ ಸಾಕಾಗದಿರಬಹುದು... ಅದರೆ ಇದೇ ನಿಜವಾದ ಪ್ರೀತಿಯ ಗುಣ ಲಕ್ಷಣ... ಇದನ್ನ ನೀವು ಅನುಭವಿಸಬೇಕಂದರೆ ನೀವು ನಿಮ್ಮ ಪ್ರೀತಿ ಪಾತ್ರರಲ್ಲಿ ಹೆಚ್ಚನ್ನು ಬಯಸಬಾರದು.


ನಿಜ ಪ್ರೀತಿಗೆ ನಿಮ್ಮ ನಿಶ್ಕಲ್ಮಷ ಹೃದಯ, ನೀವು ತೋರುವ ಆ ಬೆಚ್ಚಗಿನ ಆರೈಕೆಯಷ್ಟೇ ಸಾಕು.., ಎಲ್ಲರ ಹೃದಯ ಗೆಲಲ್ಲು..."


-------------------------------------


--- ಇದು ಸ್ವಾಮಿ ವಿವೇಕಾನಂದರು ಹೇಳಿದ ಒಂದು ಸುಂದರವಾದ ಕಥೆ... ನಮ್ಮ ಬಾಳಿಗೆ ನಿಜವಾದ ದಾರಿದೀಪ. ಕಲ್ಕತ್ತ ದಲ್ಲಿನ ಒಂದು ಸಂಪ್ರದಾಯಸ್ಥ ಕಾಯಾಸ್ತ ಕುಟುಂಬದಲ್ಲಿ ೧೨ ಜನವರಿ ೧೮೬೩ ರಂದು ಹುಟ್ಟಿದ ಸ್ವಾಮಿ ವಿವೇಕಾನಂದರು ತಮ್ಮ ಅತಿ ಕಡಿಮೆ ಜೀವಿತಾವಧಿಯಲ್ಲಿ ಮಾಡಿದ ಕಾರ್ಯ ಅವರನ್ನು ಇಂದೂ ಸಹ ಭಾರತದ ಶ್ರೇಷ್ಠ ಪುತ್ರರಲ್ಲಿ ಒಬ್ಬರೆಂದು ಪೂಜಿಸಲಾಗುತ್ತದೆ. ರಾಮಕೃಷ್ಣ ಪರಮಹಂಸರ ಶಿಷ್ಯರಾಗಿ ಅವರು ವೇದಗಳ ಅಧ್ಯಯನ ಮಾಡಿ, ದೇಶದ ಉದ್ದಗಲಕ್ಕೂ ಸುತ್ತಿ, ನಮ್ಮ ದೇಶದ ಪರಮೋತ್ತಮ ಪ್ರತಿನಿಧಿಯಾಗಿ ೧೮೯೩ ರಲ್ಲಿ ನೆಡೆದ ವಿಶ್ವ ಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ವೇದಾಂತ, ಯೋಗ ಮತ್ತು ಹಿಂದುತ್ವದ ಬಗ್ಗೆ ಅಮೇರಿಕದಲ್ಲಿ ಪ್ರವಚನ ಮತ್ತು ಭಾಷಣಗಳನ್ನ ಮಾಡಿದರು. ೧೮೯೭ ರಲ್ಲಿ ಅವರು ಸ್ಥಾಪಿಸಿದ "ರಾಮಕೃಷ್ಣ ಮಠ" ಮತ್ತು "ರಾಮಕೃಷ್ಣ ಮಿಷನ್" ಇಂದೂ ಸಹ ವಿಶ್ವದ ಉದ್ದಗಲಕ್ಕೂ ಭಾರತ ಧರ್ಮದ ಐತಿಹ್ಯದ ಬಗ್ಗೆ ಪ್ರಚಾರ ಮಾಡುತ್ತಿದೆ, ಲಕ್ಷಾಂತರ ಅನುಯಾಯಿಗಳನ್ನು  ಪಡೆದಿದೆ...


ಇಂದು ಅವರ ೧೪೭ ನೇ ಜನ್ಮದಿನ... ಭಾರತ ಕಂಡ ಈ ಶ್ರೇಷ್ಠ "ಸಂತ" ನಿಗ ನಮ್ಮೆಲ್ಲರ ನಮನ....

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

>>ನಿ ಈ ನೀರನ್ನಾ ನೀ, ನೀರನ್ನು >>ಬೇಟಿ ಭೇಟಿ >> ಆಕಾಂಶೆ ಆಕಾಂಕ್ಷೆ >> ಸಂಪ್ರದಾಯಸ್ತ ಸಂಪ್ರದಾಯಸ್ಥ >> ಕಾಯಾಸ್ತ ಅಂದ್ರೆ??? >> ಅಧ್ಯಾಯನ ಅಧ್ಯಯನ >> ವೇದಂತ ವೇದಾಂತ >> ಅನುನ್ಯಾಯಿಗಳನ್ನು ಅನುಯಾಯಿ :( :(

ನನ್ನ ಲೇಖನದಲ್ಲಿ ಜಾಸ್ತಿಯೇ ತಪ್ಪುಗಳು ಇದ್ದವು... :( ನಿಮ್ಮ ಸೂಚನೆಯಂತೆ ಅವೆಲ್ಲವನ್ನು ಬದಲಾಯಿಸಿದ್ದೇನೆ ಪಾಲಚಂದ್ರರವರೆ.... ಅದಕ್ಕೆ ನಿಮಗೊಂದು ಧನ್ಯವಾದ :) ಕಾಯಸ್ತ/ಕಾಯಾಸ್ತ ಇದರ ಬಗ್ಗೆ wiki ಅಲ್ಲಿ ಮಾಹಿತಿ ಇದೆಃ http://en.wikipedia.... ನಿಮ್ಮ ಉಪಯೋಗಕ್ಕೆ ಬರಬಹುದು ಎಂದು ನಂಬಿರುತ್ತೇನೆ :) -- ಇತಿ ನಿಮ್ಮ ವಿನಯ್

ಮೊದ್ಮಣಿ ಯವರೆ, Kaayaasta/Kaayasta ಎಂಬ ಅಂಗ್ಲ ಪದದ ಪ್ರಯೋಗವನ್ನ ನಾನು ಅಂತರ್ಜಾಲ ಅವೃತ್ತಿಗಳಲ್ಲಿ ನೋಡಿದ್ದೇನೆ (ಕೆಲವು ಕಡೆ Kayastha ವೆಂತಲೂ ಇದೆ...). ನಾ ಅದನ್ನ ಬರಹದಲ್ಲಿ ಟೈಪ್ ಮಾಡಿದಾಗ "ಕಾಯಸ್ತ/ಕಾಯಾಸ್ತ" ವಾಯಿತು. ನನಗೆ ನಿಮ್ಮ ಪದ ಬಳಕೆ ("ಕಾಯಸ್ಥ") ಯೂ ಸರಿಎನಿಸುತ್ತಿದೆ.

<<ನಿಜ ಪ್ರೀತಿಗೆ ನಿಮ್ಮ ನಿಶ್ಕಲ್ಮಷ ಹೃದಯ, ನೀವು ತೋರುವ ಆ ಬೆಚ್ಚಗಿನ ಆರೈಕೆಯಷ್ಟೇ ಸಾಕು.., ಎಲ್ಲರ ಹೃದಯ ಗೆಲಲ್ಲು...">> ಈ ಸಾಲು ಬಹಳ ಇಷ್ಟವಾಯ್ತು. ಸ್ವಾಮಿ ವಿವೇಕಾನ೦ದರಿಗೆ ಅವರೇ ಸಾಟಿ. ನಾವು ಸುಮಾರು ೩೦ ದಿನಗಳು ಸೈಕಲ್ ತುಳಿದುಕೊ೦ಡು ದೆಹಲಿ ತಲುಪಿ, ೧೯೮೮ರ ಜನವರಿ ೧೨ ರ೦ದು ಅವರ ಹುಟ್ಟಿದ ದಿನವೇ ಯುತ್ ಹಾಸ್ಟೆಲ್ ನವರು ಆಯೋಜಿಸಿದ್ದ "ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಮತ್ತು ಸೈಕಲ್ ರಯಾಲಿ " ಯಲ್ಲಿ ಭಾಗವಹಿಸಿದ್ದೆವು. ೧೯೮೯ರಲ್ಲಿ ಮತ್ತೆ ಮಧ್ಯಪ್ರದೇಶದ ಬ್ಹೊಪಾಲಿನಲ್ಲಿ ಅದೇ ಜನವರಿ ೧೨ ರ೦ದು, ಒಹ್, ಅದೊ೦ದು ಮರೆಯಲಾಗದ ನೆನಪು.

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಮಂಜುನಾಥ ರವರೆ.... :) ಹಾಗೆಯೇ ನಿಮ್ಮ ಅನುಭವಗಳನ್ನು ಹಂಚಿಕೊಂಡಿದ್ದಕ್ಕೂ ಮತ್ತೊಮ್ಮೆ ನಿಮಗೆ ಧನ್ಯವಾದಗಳು.

ಚೆನ್ನಾಗಿದೆ ವಿನಯ್. ವಿವೇಕಾನಂದರು ಚಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಭಾಷಣ ಪ್ರಾರಂಭ ಮಾಡಿದ ಪದಗಳೇ ಪಾಶ್ಚಿಮಾತ್ಯರನ್ನು ದಂಗುಬಡಿಸಿತ್ತು. "Dear brothers and sisters of America " ಎಂಬ ಪ್ರಾರಂಭದ ಈ ಮಾತುಗಳೇ ಅವರನ್ನು ಅತಿ ಎತ್ತರಕ್ಕೆ ಏರಿಸಿತ್ತು. ಅವರ ತೇಜೋಭರಿತ ಕಣ್ಗಳು ಪಾಶ್ಚಿಮಾತ್ಯರನ್ನು ಸೆಳೆದಿದ್ದವು. ಮತ್ತೊಬ್ಬ ವಿವೇಕಾನಂದ ಹುಟ್ಟಲೇ ಇಲ್ಲ. ಯಾರೂ ವಿವೇಕಾನಂದರಿಗೆ ಸಾಟಿ ಎನಿಸಲಿಲ್ಲ.