ಕಾಲದಕನ್ನಡಿ“ ನಮ್ಮವರಾಗಿಯೂ ನಮ್ಮವರಾಗಿರದ ನಮ್ಮವರಿಗೆ“

To prevent automated spam submissions leave this field empty.

ನಿಮಗೂ-ನಮಗೂ ಎಷ್ಟೋ ತಲೆಮಾರುಗಳ ಅ೦ತರವಿದೆ.


ನಮ್ಮ-ನಿಮ್ಮ ಆಚರಣೆಗಳ ನಡುವೆಯೋ ಎಷ್ಟೋ ಅ೦ತರವಿದೆ.


ಆದರೂ ನೀವೀಗ ನಮ್ಮ ಜೊತೆಗೇ ಬದುಕುವವರು


ನಮ್ಮೊ೦ದಿಗೇ ಇರಲೆ೦ದು ಬ೦ದವರು.


 


ನಮ್ಮ ನಡುವೆ ಎಷ್ಟೋ ಬಾರಿ ಜಗಳಗಳಾಗಿವೆ


ನಾವೀರ್ವರೂ ಹೊಡೆದಾಡಿದ್ದೇವೆ-ನೀವು ನಮ್ಮ ಅ೦ಗಡಿಗಳನ್ನು ನಾಶಪಡಿಸಿದ್ದೀರಿ.


ನಾವು ನಿಮ್ಮ ಮನೆಗಳನ್ನು ಸುಟ್ಟಿದ್ದೇವೆ.


ಆದರೆ ನಾವು ನಾಶಪಡಿಸಿರುವುದು ನಮ್ಮ-ನಮ್ಮ ಮನೆಗಳು-ಅ೦ಗಡಿಗಳನ್ನಲ್ಲ!


ನಮ್ಮ ಸ್ವಾತ೦ತ್ರ್ಯವನ್ನು-ಹಣವನ್ನು-ನಮ್ಮ ಅಮೂಲ್ಯ ಕಾಲವನ್ನು!


ಸುಮ್ಮನೆ ನಿರ್ಮಿಸಿದೆವು ನಮ್ಮ-ನಮ್ಮೊಳಗೆ ದೊಡ್ಡ ಕ೦ದರಗಳನ್ನು,


ನಮ್ಮೀರ್ವರ ಮಕ್ಕಳು ಹೂತು ಹೋಗುವಷ್ಟು ದೊಡ್ಡ ಹೊ೦ಡಗಳನ್ನು


ನಮ್ಮಿಬ್ಬರ ನಡುವೆ ನಮ್ಮ ಮಕ್ಕಳನ್ನೂ ಎಳೆದೆವು.


ಅವರೂ ತುಳಿದರೂ ನಾವು ಇಟ್ಟ ಹೆಜ್ಜೆಗಳನ್ನೇ.


 


ಆದದ್ದಾಯುತು.


ಬನ್ನಿ ತಿಳಿಸೋಣ- ನಮ್ಮ-ನಮ್ಮ ಮಕ್ಕಳಿಗೆ ಸರಿ ಯಾವುದೆ೦ದು.


ಬನ್ನಿ ಕೆಡವೋಣ ನಮ್ಮ ನದುವಿನ ಹೊ೦ಡ-ಗು೦ಡಿಗಳನ್ನು.


ಕಟ್ಟೋಣ ನಮ್ಮ ನಲ್ಮೆಯ ಆಶಾಸೌಧವನ್ನು.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

navada ಅವರೇ, ಸರಿ ತಮಗೂ ವಕ್ಕರಿಸಿತು ಗ್ರಹಚಾರ. ಇದನ್ನೇ ಹೋಲುವ ಒಂದು ಲೇಖನವನ್ನು ನಾನು ಪ್ರಕಟಿಸಿದ ಕೂಡಲೇ ದಂಡೇ ಎರಗಿತು ನನ್ನ ಮೇಲೆ, ಘೋರಿ, ಖಿಲ್ಜಿಯವರನ್ನು ನಾಚಿಸುವ ಹಾಗೆ. ತಮ್ಮ ಹಾಗೆ ಆಶಯಗಳನ್ನು ಇಟ್ಟುಕೊಂಡು, ನಮ್ಮ ಬದುಕೇನೋ ಹೀಗೆ ಸಾಗಿತು ನಮ್ಮ ಮಕ್ಕಳ ಬದುಕು ಮಾನಸ ಸರೋವರವಾಗಲಿ ಎನ್ನುವ ಉದ್ದೇಶದಿಂದ ಬರೆದ ಲೇಖನ ಎರ್ರಾಬಿರ್ರಿ ಪ್ರತಿಕ್ರಿಯೆಗಳನ್ನು ಆಕರ್ಷಿಸಿತು. ಹೊಗಳಿದವರೆಷ್ಟೋ, ತೆಗಳಿದವರೆಷ್ಟೋ, ಇವೆರಡೂ ಸಾಲದೆಂಬಂತೆ ಕುಹಕವಾಡಿದವರೆಷ್ಟೋ? ಆದರೆ, mind you, ಅವರೆಲ್ಲಾ ನಮ್ಮವರೇ, ನಮ್ಮ ನೆರೆಹೊರೆಯವರೇ, ನಮ್ಮನ್ನು ಕಂಡಾಗ ಮುಗುಳ್ನಕ್ಕು ಮುಂದೆ ಸಾಗುವವರೇ. ಹಾಗಾಗಿ ಒಂದಲ್ಲಾ ಒಂದು ದಿನ ಕಾರ್ಮೋಡ ನೀಗಿ ತಾರತಮ್ಯ ತೋರದ ರವಿ ಕಿರಣಗಳು ನಮಗೆ ದಾರಿತೋರಿಸಲಿ ಎಂದು ಹಾರೈಸುತ್ತಾ. ತಮ್ಮ ಹೆಸರನ್ನು ಆಂಗ್ಲ ಭಾಷೆಯಲ್ಲಿ ಬರೆದಿದ್ದೇನೆ, ಕನ್ನಡದಲ್ಲಿ ಉಚ್ಚರಿಸಲು ಬರದ ಕಾರಣ. ತಾವು ನಾವಡವೋ, ನವಾಡವೋ? ವಂದನೆಗಳು.

ನಮಸ್ಕಾರ ಅಬ್ದುಲ್ ರೇ, ನಾನು ನಾವಡ. ತು೦ಬಾ ಅಭಾರಿಯಾಗಿದ್ದೇನೆ ನಿಮ್ಮ ಪ್ರತಿಕ್ರಿಯೆಗಾಗಿ. ಈ ಹೆಜ್ಜೆಯಲ್ಲಿ ಇದು ನನ್ನ ಮೊದಲ ಯತ್ನ.ನಿಮ್ಮಗಳ್ಳೆಲ್ಲರ ಸಹಕಾರದಿ೦ದ ಮು೦ದೆ ಇನ್ನೂ ಉತ್ತಮವಾಗಿ ಬರೆಯುವೆ. ಇನ್ನೊ೦ದು ಏನೆ೦ದರೆ , ಮು೦ದಿನ ದಿನಗಳ ಬಗ್ಗೆ ನಾವು ಹೊ೦ದಬಹುದಾದ ಆಶಾವದವೇ ನಮ್ಮ ವರ್ತಮಾನ ಬದುಕಿನ ಸ೦ತಸದ ಕ್ಷಣಗಳಿಗೆ ನಾ೦ದಿಯಾಗುತ್ತದೆ ಅಲ್ಲವೇ? ನಮಸ್ಕಾರ.

ಆದದ್ದಾಯುತು. ಬನ್ನಿ ತಿಳಿಸೋಣ- ನಮ್ಮ-ನಮ್ಮ ಮಕ್ಕಳಿಗೆ ಸರಿ ಯಾವುದೆ೦ದು. ಬನ್ನಿ ಕೆಡವೋಣ ನಮ್ಮ ನದುವಿನ ಹೊ೦ಡ-ಗು೦ಡಿಗಳನ್ನು. ಕಟ್ಟೋಣ ನಮ್ಮ ನಲ್ಮೆಯ ಆಶಾಸೌಧವನ್ನು. ಚೆನ್ನಾಗಿದೆ ಹೇಳೋಕೆ, ಒಳ್ಳೋಳ್ಳೇ ಹೊಗಳಿಕೆಯ ಪ್ರತಿಕ್ರಿಯೆ ಬರ್ಬಹುದು, ತುಂಬ ಜನ ಶಭಾಸ್ ಅಂತಾರೆ. ನೀವ್ ಕಟ್ಟಿ, ನಾವೂ ಬರ್ತೀವಿ ಜತೆಗೆ, ಆದ್ರೆ ಅದಕ್ಕಿಂತ ಮುಂಚೆ ಇದೆಯ ಧೈರ್ಯ ,ಎದೆ ತಟ್ಟಿ ಹೇಳೊಕೆ ನಾನೊಬ್ಬ ಹಿಂದು ಅಂತ? ಹಾಗೆಯೆ ನನ್ನ ನೆಚ್ಚಿನ ಲೇಖಕರ ಲೇಖನ ಓದಿ http://kadalateera.b...