ಕಾಲದ ಕನ್ನಡಿ- ಗೋಹತ್ಯೆ-ದೇವನೂರು ಮಹಾದೇವ

To prevent automated spam submissions leave this field empty.

ಈದಿನದ ಕನ್ನಡ ಪ್ರಭದಲ್ಲಿ ದೇವನೂರು ಮಹಾದೇವರವರ ಉವಾಚ ಓದಿದೆ.ಅವರು ಹೇಳ್ತಾರೆ,`` ಗೋಹತ್ಯೆ ನಿಷೇಧದ ಹಿ೦ದೆ ನರಹತ್ಯೆ ಅಜೆ೦ಡಾ ಇದೆ``. ಅಲ್ರೀ ನಮ್ಮ ಬುಧ್ಧಿಜೀವಿಗಳಿಗೇನಾಗಿದೆ.ಹಿ೦ದೂಗಳಾಗಿ ನಮ್ಮ ತಾಯಿಯ ಹತ್ಯೆಯನ್ನು ಮಾಡುವವರ ವಿರುಧ್ಢ ಧ್ವನಿ ಎತ್ತಿದ್ರೆ, ಅದನ್ನೂ ಇವರು ಖ೦ಡಿಸುತ್ತಾರೆ. ಈ ಬುಧ್ಢಿಜೀವಿಗಳೆಲ್ಲಾ ಒ೦ದೇ ಥರಾ.ಆ ಅನ೦ತಮೂರ್ತಿ ನೋಡಿದ್ರೆ ಅವರೊ೦ದು ಥರ, ರಾಮದಾಸ್ ನೋಡಿದ್ರೆ ಮತ್ತೊ೦ಥರ.ಈ ಮಹಾದೇವ ನೋಡಿದ್ರೆ ಹರ ಹರಾ! ಅವರು ಕೇಳೊ ಪ್ರಶ್ನೆ ಚೆನ್ನಾಗಿದೆ, ಏನ೦ದ್ರೆ,`` ಗ೦ಜಲದಲ್ಲಿ ಔಷಧ ಇದೆ ಅ೦ದ್ಮೇಲೆ ಮಾ೦ಸದಲ್ಲಿ ಏಕಿಲ್ಲ?`` ಅಲ್ರೀ ಗೋವಿನ ಸಗಣಿ ಉಪಯುಕ್ತ ಸಾವಯವ ಗೊಬ್ಬರ, ಗ೦ಜಲದಲ್ಲಿ ಆಯುರ್ವೇದೀಯ ಔಷಧದ ಗುಣವಿದೆ ಅ೦ತ ಈಗಾಗಲೇ ಸಾಬೀತಾಗಿದೆ.ಗೋಮೂತ್ರ ಕ್ಯಾನ್ಸರ್ ಮಾಗಲು ರಾಮಬಾಣ.ಅದೇ ಯಾವ ಮಾ೦ಸ ತಿ೦ದ್ರೆ ಯಾವ ರೋಗ ವಾಸಿಯಾಗ್ತದೆ? ಸಿ೦ಪಲ್ ಕ್ವಶ್ಚೆನ್ ಅಲ್ವೇನ್ರೀ? ಅದೂ ಅರ್ಥ ಆಗಲ್ಲ ಅ೦ದ್ರೆ, ಅಲ್ರೀ ಮಾ೦ಸ ತಿ೦ದ್ರೆ ಮಿಟಮಿನ್ ಗಳು ಸಿಗುತ್ತೆ, ಅದು ನನಗೂ ಗೊತ್ತು.ಹ೦ಗ೦ಥ ಬರೇ ಮಿಟಮಿನ್ ತಿ೦ದ್ರೆ ರೋಗ ವಾಸಿಯಾಗುತ್ತಾ? ಮಹಾದೇವರ ಆರೋಗ್ಯದ ಗುತ್ತು ಅದೇ ಏನೋ? ವಿರೋಧ ಒಟ್ಟು ವಿರೋಧ ಆಗ್ಬಾರ್ದು.ಯಡಿಯೂರಪ್ಪ ಆಗ್ಲಿ,ಕುಮಾರಸ್ವಾಮಿ ಆಗ್ಲಿ,ಕಾ೦ಗ್ರೆಸ್ ನವರೇ ಆಗ್ಲಿ, ಒಳ್ಳೆ ಕಾನೂನು ತ೦ದಾಗ ಅದನ್ನು ಸ್ವಾಗತಿಸಬೇಕು.ಸಮಾಜಕ್ಕೆ ಕೆಟ್ಟದಾಗುವುದಾದ್ರೆ ಅದನ್ನು ವಿರೋಧಿಸೋಣ. ದೇವನೂರು ರವರು ಹಿ೦ಗಿರಲಿಲ್ಲ. ಅವರೂ ಯಾಕೆ ಹಿ೦ಗಾದ್ರೋ? 


ಪಾಪ ಅಲ್ವಾ ನಮ್ಮಮ್ಮ? ಹಾಲು ಕೊಡ್ತಾಳೆ, ಗೊಬ್ಬರ ಕೊಡ್ತಾಳೆ,ಸಣ್ಣ ಅ೦ಬಾ ಬುಚ್ಚಿ ಕೊಡ್ತಾಳೆ ಮಕ್ಕಳಿಗಾಟ ಆಡೋಕೆ.ಅವಳನ್ನು ಕೊಲ್ಲಬಾರದು ಅ೦ಥ ಕಾನೂನು ತರೋದ೦ದ್ರೆ ಇವರಿಗ್ಯಾಕೆ ಕಷ್ಟ? ಐ ಥಿ೦ಕ್ ಮಹಾದೇವರೂ ಒಬ್ಬ ಗೋಮಾ೦ಸಿಯೇ?

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಾವಡ ಅವರೇ, ಇಲ್ಲೊಂದು ತಮಾಷೆ ನೋಡಿದ್ರಾ? ಅಸಲಿ ಯಾರು ಗೋ ಹತ್ಯೆಯ ಬಗ್ಗೆ ಮಾತನಾಡ ಬೇಕಿತ್ತೋ, ವಿರೋಧಿಸಬೇಕಿತ್ತೋ ಅವರು ಸುಮ್ಮನಿದ್ದು ದೇವನೂರು ಮತ್ತು ಇತರರು ಇದರ ಬಗ್ಗೆ ತಗಾದೆ ಎತ್ತುತ್ತಿದ್ದಾರೆ.

ಚಿನ್ನದ ಮೊಟ್ಟೆಯಿಡುವ ಕೋಳಿಯ ಮೈಯೆಲ್ಲ ಚಿನ್ನ ಇರ್ಬೇಕು ಅಂತ ಕೊಯ್ದವರ ಕಥೆಯಲ್ವೆ? ಭಾರತಮಾತೆಯ ಚಿತ್ರಕ್ಕೆ ಚಪ್ಪಲಿ ಹಾರ ಹಾಲಿ ಬೆಂಕಿ ಇಟ್ಟವರಿಂದ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ? ನರಹತ್ಯೆಯ ಅಜೆಂಡಾ ನಮ್ಮದಾಗಿಸಿಕೊಳ್ಳದ ತಪ್ಪಿಗೆ ಅಫ್ಘಾನಿಸ್ತಾನದವರೆಗಿದ್ದ ಭಾರತ, ಇಂದು ತುಂಡು ಭೂಮಿಯಾಗಿದೆ. ನರಹತ್ಯೆಯನ್ನೆ ಕಸುಬಾಗಿಸಿಕೊಂಡವರಿಂದಲೆ ಅವೆಲ್ಲ ಭಾರತ ಕೈಬಿಟ್ಟಿದ್ದು. ಬೌನ್ಸರ್ಗಳನ್ನು ಎದುರಿಸಲು ಸಿದ್ದರಾಗಿ

ಪರವಿರೋಧಕ್ಕಿಂತ ಮೊದಲು ವಸ್ತುನಿಷ್ಟವಾಗಿ ಕೆಲ ವಿಷಯಗಳನ್ನು ನೋಡೋಣ. <<ಗ೦ಜಲದಲ್ಲಿ ಆಯುರ್ವೇದೀಯ ಔಷಧದ ಗುಣವಿದೆ ಅ೦ತ ಈಗಾಗಲೇ ಸಾಬೀತಾಗಿದೆ.>> ಇಲ್ಲ ಸಾಬೀತಾಗಿಲ್ಲ! ಯಾವುದೇ ವೈಜ್ಞಾನಿಕ ಸಂಶೋಧನೆಗಳು ಇದನ್ನು ಧೃಢಪಡಿಸಿಲ್ಲ. <<ಗೋಮೂತ್ರ ಕ್ಯಾನ್ಸರ್ ಮಾಗಲು ರಾಮಬಾಣ>> ಹೇಗೆ? ದಯವಿಟ್ಟು ತಿಳಿಸಿ, ವೈಜ್ಞಾನಿಕ ಆಧಾರ ಕೊಡಿ. ಕೆಲವು ವಿತ್ತೀಯ ಕಾರಣಗಳಿಂದಾಗಿ ಗೋಹತ್ಯೆಯನ್ನು ವಿರೋಧಿಸಬಹುದು. ಒಂದು ಕೆಜಿ ಗೋಮಾಂಸದ ಉತ್ಪಾದನೆಯಲ್ಲಿ ಅನೇಕ ಪಟ್ಟು ತರಕಾರಿ ಹುಲ್ಲು ನೀರು ಇತ್ಯಾದಿ ವೆಚ್ಚವಾಗುತ್ತದೆ. ಇದು national waste. ಒಂದು ಕುಟುಂಬ ಗೋಮಾಂಸ ತಿನ್ನುವ ವೆಚ್ಚದಲ್ಲಿ ಅನೇಕ ಕುಟುಂಬಗಳು ತರಕಾರಿ ತಿನ್ನಬಹುದು. ಹಾಗಾಗಿ ಆರ್ಥಿಕವಾಗಿ, ಪರಿಸರದ ದೃಷ್ಟಿಯಲ್ಲಿ ಗೋಮಾಂಸ ಹಿತಕರವಲ್ಲ. ಗೋಮಾಂಸದಲ್ಲಿ ಅತಿಸಾರವನ್ನು ಉಂಟುಮಾಡುವ ಅಂಶಗಲು ಕಂಡುಬಂದಿವೆ. ಹೊಟ್ಟೆ ತಂಬಿಸಲು ಅತ್ಯಂತ ಅವಶ್ಯಕವಾದ ಆಹಾರವಲ್ಲ ಗೋಮಾಂಸ! ಬಾಯಿರುಚಿಗಾಗಿ ಪ್ರಾಣಿವಧೆ ಮಾಡುವುದು ನೈತಿಕತೆಯಲ್ಲ!

ನಮಸ್ಕಾರಗಳು ಶ್ರೀಹರ್ಷರೇ, ವಿಚಾರ ಏನ೦ದ್ರೆ, ಎಷ್ಟೋ ಆಯುರ್ವೇದೀಯ ಯಾ ಮನೆ ಔಷಧಗಳನ್ನು ಯಾವ್ಯಾವುದೋ ವೈಜ್ಞಾನಿಕ ಕಾರಣಗಳ ಅರಿವಿಲ್ಲದೆ ಉಪಯೋಗಿಸುತ್ತೇವೆ.ತಾತ್ಕಾಲಿಕ ಪರಿಹಾರವನ್ನೂ ಪಡೆಯುತ್ತೇವೆ. ಹೊಸನಗರದ ಶ್ರೀರಾಮಚ೦ದ್ರಾಪುರ ಮಠದವರು ಗೋ ಉತ್ಪನ್ನಗಳ ಉಪಯೋಗದ ಬಗ್ಗೆ ಸಾರ್ವಜನಿಕರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅಲ್ಲದೆ ಶಿವಮೊಗ್ಗದ ಸಾಗರ ಹಾಗೂ ಉತ್ತಾರ ಕನ್ನಡದಲ್ಲಿ ಅಲ್ಲದೆ ಇತ್ತೀಚೆಗೆ ನಮ್ಮಲ್ಲಿಯೂ ಗ೦ಟಲು ಕ್ಯಾನ್ಸರ್ ಮತ್ತು ಕರುಳಿನ ಕ್ಯಾನ್ಸರ್ ಪ್ರಾರ೦ಭದ ಹ೦ತದವರಿಗೆ ಗೋಮೂತ್ರವನ್ನು ನೀಡಲು ಶಿಫಾರಸು ಮಾಡಲಾಗುತ್ತಿದೆ. ಅದು ವಾಸಿಯಾಗುವ ವೈಜ್ಞಾನಿಕ ಹ೦ತಗಳ ಬಗ್ಗೆ ನನಗೆ ಅರಿವಿಲ್ಲ. ತಾವು ಹೆಚ್ಚಿನ ಮಾಹಿತಿಗಾಗಿ ಶ್ರೀಮಠದವರನ್ನು ಸ೦ಪರ್ಕಿಸಬಹುದು. ಅಕಸ್ಮಾತ್ ತಮಗೆ ಗೊತ್ತಿದ್ದಲ್ಲಿ ನನಗೂ ನಿಡಬೇಕೆ೦ದು ತಮ್ಮಲ್ಲಿ ಸವಿನಯ ಪ್ರಾರ್ಥನೆ. ನಮಸ್ಕಾರ, ನನ್ನಿ.

ಶ್ರೀಮಠದಲ್ಲಿ ಇದರ ಬಗ್ಗೆ ಮಾಹಿತಿ ಲಭ್ಯವಿಲ್ಲ. ಆಯುರ್ವೇದದ reference ಕೊಡಲಾಗುತ್ತದೆ. ವೈಜ್ಞಾನಿಕ ಸಂಶೋಧನೆಗಳು ಅಲ್ಲೆಲ್ಲೂ ನಡೆಯುತ್ತಿಲ್ಲ. ನಾನೂ ಸಹ ಇದರ ಬಗ್ಗೆ ಮಾಹಿತಿ ಸಂಗ್ರಹಿಸಲು ವರ್ಷಗಳಿಂದ ಪ್ರಯತ್ನಿಸುತ್ತಿದ್ದೇನೆ. ಇನ್ನೂ ಸಿಕ್ಕಿಲ್ಲ. ನನ್ನ ಬಳಿಯೂ ಮಾಹಿತಿ ಇಲ್ಲ. ಸ್ವಾಮಿ ರಾಮದೇವರು, ಮಠದವರು ಎಲ್ಲ ವ್ಯಾಪಾರಕ್ಕಿಳಿದಿದ್ದಾರೆಯೇ ಹೊರತು ವೈಜ್ಞಾನಿಕ ಸಂಶೋಧನೆಗೆ ಗಮನ ಕೊಡುತ್ತಿಲ್ಲ. ಗೋಮೂತ್ರ ಇವರಿಗೆ ಹಣ ಮಾಡುವ ಸರಕಷ್ಟೇ! ಸರಿಯಾದ ವೈಜ್ಞಾನಿಕ ತಳಹದಿ ಸಿಗುವವರೆಗೂ ಗೋಮೂತ್ರದ ಪ್ರಚಾರ ಮಾಡದಿರುವುದು ಲೇಸು.

ತು೦ಬಾ ನನ್ನಿ ಅಣ್ಣ. ನಾವು ಇನ್ನು ಅದರ ಬಗ್ಗೆ ಯಾವುದೇ ಮಾಹಿತಿ ಯಾರಿಗೂ ನೀಡುವುದಿಲ್ಲ.ಆದರೆ ನನಗೊ೦ದು ಸ೦ದೇಹ, ಏನ೦ದ್ರೆ ನಿಮ್ಮ ವಿಚಾರದ ನೆಲೆಯಲ್ಲಿ ನನ್ನ ಲೇಖನ ತಪ್ಪೇ?

ಮಿಸ್ಟರ್‍ ನಾವಡ ಅವರೇ, ನಾನು ವಯಸ್ಸಲ್ಲಿ ಚಿಕ್ಕವನು, ಅಣ್ಣ ಎಲ್ಲ ಬೇಡ. ಅಭಿಪ್ರಾಯ ಕೇಳಿದ್ದರಿಂದ ಹೇಳುತ್ತೇನೆ. ನನಗನ್ನಿಸುವಂತೆ ನಿಮ್ಮ ಲೇಖನ ತಪ್ಪಲ್ಲ. ಆದರೆ ಅದನ್ನು ಪ್ರಸ್ತುತ ಪಡಿಸಿದ ರೀತಿ ತಪ್ಪು ಅಷ್ಟೇ! ಸರಿಯಾದ ದಾಖಲೆ ಮತ್ತು ಆಧಾರಗಳಿದ್ದರೆ ಲೇಖನಕ್ಕೆ ತೂಕ ಬರುತ್ತದೆ. ಚಿಂತೆಯಿಲ್ಲ ಬಿಡಿ. ಸಾವಿರಾರು ಪತ್ರಿಕಾ ಲೇಖನ ಬರೆದವರೇ ತಳಬುಡವಿಲ್ಲದಂತೆ ಜಾಳುಜಾಳಾಗಿ ಬರೀತಾರೆ. ನಿಮ್ಮದು ಇನ್ನೂ ಉತ್ತಮ.

ಅಯುರ್ವೆದವೇ ವೈಜ್ಞಾನಿಕವಲ್ಲ. ಹಾಗಂತ ಅದನ್ನು ಬಳಸಿ ಗುಣಮುಖ ಹೊಂದಿದವರು ಸಾಕಷ್ಟಿದ್ದಾರೆ. ಅದಕ್ಕೆ ಏನಂತಿರಿ? ನನ್ನ ದೊಡ್ಡ ಮಾವನವರೊಬ್ಬರು ನರದೌರ್ಬಲ್ಯದಿಂದ ನರಳುತ್ತಿದ್ದರು. ಎಲ್ಲ 'ವೈಜ್ಞಾನಿಕ' ಆಸ್ಪತ್ರೆಗಳಿಗೆ ಹೋಗಿ ಬಂದರು ಏನು ಉಪಯೋಗವಾಗಲಿಲ್ಲ. ಕೊನೆಗೆ ಅವರು ಬದುಕುವುದು ಕಷ್ಟ ಎಂದು ವೈದ್ಯರು ಕೈ ಚೆಲ್ಲಿದರು. ಮನೆಯವರು ನೇರವಾಗಿ ಆಯುರ್ವೇದ ವೈದ್ಯರಲ್ಲಿಗೆ ಹೋದರು. ಯಾವುದೊ 'ಅವೈಜ್ಞಾನಿಕ' ಕಷಾಯ ಕೊಟ್ಟರು. ಇದಾಗಿ ಒಂದು ವರ್ಷವಾಗುತ್ತ ಬಂತು. ಈಗ ಪ್ರಾಣಾಪಾಯದಿಂದ ಹೊರಗೆ ಬಂದಿದಾರೆ. ಇದೆ ತಿಂಗಳು ಅವರ ಮನಗೆ ಹೋಗುವವನಿದ್ದೇನೆ. ಇನ್ನೊಬ್ಬರ ಉದಾಹರಣೆ ಬೇಡ ಅಂದರು ನನ್ನದೇ ಅನುಭವವಿದೆ. ನನಗೆ ಮೊದಲಿನಿಂದಲೂ ಧೂಳು ಅಲರ್ಜಿ. 'ವೈಜ್ಞಾನಿಕ' ಔಷಧಿಗಳನ್ನು ಸಾಕಷ್ಟು ತೆಗೆದುಕೊಂಡಿದ್ದರು ಉಪಯೋಗವಾಗಲಿಲ್ಲ. ಬೆಳಗಿನ ಸಮಯದಲ್ಲಿ 'ಆಕ್ಸಿ' ಮಾಡದಿರುವುದೇ ಅಪರೂಪ. ಅಂತಹದರಲ್ಲಿ ಮೊನ್ನೆ ನಡೆದ ಸ್ವದೇಶೀ ಮೇಳದಿಂದ ಗೋ ಅರ್ಕ (ಶುಧ್ಧಿಕರಿಸಿದ ಗೋ ಮೂತ್ರ) ದ ಒಂದು ಬಾಟಲಿ ತಂದೆ. ಒಳ್ಳೆಯದು ಕುಡಿಯಿರಿ ಅಂದರು. ನೋಡೇ ಬಿಡೋಣ ಅಂತ ಅರ್ಧ ಚಮಚ ಅರ್ಕವನ್ನು ಅರ್ಧ ಲೋಟ ನೀರಿನಲ್ಲಿ ಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದೆ. ಏನಾಶ್ಚರ್ಯ! ಅರ್ಧ ಗಂಟೆಯಲ್ಲಿ ನನ್ನ ಮೂಗಿನಿಂದ ಸೊರಸೊರನೆ ಸುರಿಯುತ್ತಿದ್ದ ಶೀತ ಮಾಯಾ! ಈಗ ಹೇಳಿ ವೈಜಾನಿಕ ನನಗೆ ಯಾಕೆ ಬೇಕು? ಆಧುನಿಕ ವೈದ್ಯ ವಿಜ್ಞಾನ ಕೇವಲ ಅಪಘಾತಗಳ ಸಂದರ್ಭದಲ್ಲಿ, ತುರ್ತು ಚಿಕಿತ್ಸೆಗೆ, ರೋಗ ಪತ್ತೆಗೆ ಇತ್ಯಾದಿಗಳಿಗೆ ಉಪಕಾರಿ. ಉಳಿದ ಸಂದರ್ಭಗಳಲ್ಲಿ ಆರೋಗ್ಯಕರ ಜೀವನ ಶೈಲಿ, ಸಾಕಷ್ಟು ವ್ಯಾಯಾಮ, ಯೋಗ ಮತ್ತು ಆಯುರ್ವೆದಗಳ 'ಅವೈಜ್ಞಾನಿಕ' ಕ್ರಮಗಳೇ ವಾಸಿ. ಇದು ನನಗೆ ಅನಿಸುವುದು. ನಿಮ್ಮ ಮೇಲೆ ಇದನ್ನು ಹೇರುವ ಉದ್ದೇಶವಿಲ್ಲ. ಅಂದಹಾಗೆ ರಾಮದೇವರ ಬಗ್ಗೆ ರಾಮಚಂದ್ರಪುರ ಮಠದ ಬಗ್ಗೆ ಕೊಟ್ಟ sweeping statements ನೋಡಿ ಆಘಾತವಾಯಿತು ನನಗೆ. ಅದರಲ್ಲೂ ರಾಮದೇವರ ಬಗ್ಗೆ. ನಿಮ್ಮ ಈ ಆರೋಪಕ್ಕೆ ಪುರಾವೆಗಳು ಇವೆಯೇ? ಹಾಗು ವೈಜ್ಞಾನಿಕ ಔಷಧಿ ಕೊಡುವ ಕಂಪೆನಿಗಳು ಹಣಕ್ಕೋಸ್ಕರವೆ ಕೆಲಸ ಮಾಡುವುದಲ್ಲವೇ? ಅವುಗಳನ್ನು ಒಪ್ಪುವ ನಿಮಗೆ ರಾಮದೆವರಲ್ಲಿ ಅದ್ಯಾವ ತಪ್ಪು ಕಂಡಿತು?

ಮಾನ್ಯ ನೀರ್ಕಜೆಯವರೆ, ಅಶ್ವಮೇಧದ ಬಗ್ಗೆ ನಾನು ಕೇಳಿದ ಪ್ರಶ್ನೆಗೆ ನೀವು ಉತ್ತರಿಸಿಯೇ ಇಲ್ಲ! ನಮ್ಮ ಹಳೆಯದೆಲ್ಲವೂ ಸರಿ ಎಂದು ಸಮರ್ಥಿಸಿಕೊಳ್ಳುವ ಹಂಬಲವೇಕೆ? ಆಯುರ್ವೇದ ವೈಜ್ಞಾನಿಕವೋ ಅವೈಜ್ಞಾನಿಕವೋ ಪ್ರಶ್ನೆಯಲ್ಲ ಇಲ್ಲಿ. ಗೋಮೂತ್ರ ಸೇವನೆಯಿಂದ ಕ್ಯಾನ್ಸರ್‍ ವಾಸಿಯಾದ ಉದಾಹರಣೆಗಳನ್ನು ನಾನು ತೋರಿಸಬಲ್ಲೆ. ಆದರೆ ಎಲ್ಲದಕ್ಕೂ ವಿಶ್ವಮಾನ್ಯವಾಗುವ ಕೆಲವು standard ಗಳು ಇರುತ್ತವೆ. ಅದರಂತೆ ನಡೆದುಕೊಳ್ಳಲೆ ಬೇಕು. <<ಅಂದಹಾಗೆ ರಾಮದೇವರ ಬಗ್ಗೆ ರಾಮಚಂದ್ರಪುರ ಮಠದ ಬಗ್ಗೆ ಕೊಟ್ಟ sweeping statements ನೋಡಿ ಆಘಾತವಾಯಿತು ನನಗೆ. ಅದರಲ್ಲೂ ರಾಮದೇವರ ಬಗ್ಗೆ. ನಿಮ್ಮ ಈ ಆರೋಪಕ್ಕೆ ಪುರಾವೆಗಳು ಇವೆಯೇ? ಹಾಗು ವೈಜ್ಞಾನಿಕ ಔಷಧಿ ಕೊಡುವ ಕಂಪೆನಿಗಳು ಹಣಕ್ಕೋಸ್ಕರವೆ ಕೆಲಸ ಮಾಡುವುದಲ್ಲವೇ? ಅವುಗಳನ್ನು ಒಪ್ಪುವ ನಿಮಗೆ ರಾಮದೆವರಲ್ಲಿ ಅದ್ಯಾವ ತಪ್ಪು ಕಂಡಿತು?>> ಬನ್ನಿ ಹೋಗೋಣ. ಆ ಮಹಾನುಭಾವರು ಏನು ಮಾಡುತ್‌ಇದ್ದಾರೆಂದು ಖುದ್ದಾಗಿ ನೋಡೋಣ. ನಾನು ಹೋಗಿ ನೋಡಿದ ಮೇಲೆಯೇ ಈ ಹೇಳಿಕೆ ನೀಡಿದ್ದು! ಏನಾದರೂ ಮಾಡಿದ್ದರೆ ಅದಕ್ಕೆ ಪುರಾವೆ ನೀಡಬೇಕು. ಏನೂ ಮಾಡಿಲ್ಲ ಎಂಬುದಕ್ಕೆ ಪುರಾವೆ ನೀಡಿ ಎಂದು ಹೇಳುವುದು ಹಾಸ್ಯಾಸ್ಪದ! ಅವರು ಏನು ಮಾಡಿದ್ದಾರೋ ಅದಕ್ಕೆ ಪುರಾವೆ ನೀವು ನೀಡಿ. ಔಷಧಿ ಕಂಪನಿಗಳು ತಾವು commercial ಅಂತ ಎದೆ ತಟ್ಟಿ ಹೇಳಿಕೊಳ್ಳುತ್ತಾರೆ. ಈ ಸ್ವಾಮಿಗಳು ಸಮಾಜ ಸೇವೆ ಅನ್ನೋ ಸೋಗಿನಲ್ಲಿ ಹಣ ಮಾಡುತ್ತಾರೆ. ಇವರು ಔಷಧಿ ಕಂಪನಿಗಳಿಗಿಂತ ಮಹಾಪರಾಧಿಗಳು. ಹಾಗೆಯೇ ನಾನು ಲಸಿಕೆಗಳ ವಿರುದ್ದ ಮತ್ತು ಔಷಧಿ ಕಂಪನಿಗಳ ವಿರುದ್ಧ ನಾನು ಸಾರಿರುವ ಯುದ್ದದ ಬಗ್ಗೆ ತಾವು ನನ್ನ ಹಳೆಯ ಲೇಖನಗಳನ್ನು ಓದಬಹುದು. ಅಥವಾ ಇಲ್ಲಿಗೆ ಬೇಟಿ ಕೊಡಿ www.tiligali.blogspo...

>>ಐ ಥಿ೦ಕ್ ಮಹಾದೇವರೂ ಒಬ್ಬ ಗೋಮಾ೦ಸಿಯೇ? ದೇವನೂರರು ಗೋಹತ್ಯೆಯನ್ನು ವಿರೋಧಿಸಿದ್ದಕ್ಕಾಗಿ ಅವರು ಗೋಮಾಂಸ ಭಕ್ಷಕರಿರಬಹುದೇನೋ ಎಂಬ ಗುಮಾನಿಯನ್ನು ನಾವಡ ಅವರು ವ್ಯಕ್ತಪಡಿಸುತ್ತಾರೆ. ನಾವಡ ಅವರು ಹಾಗೆ ಭಾವಿಸುವುದಾದಲ್ಲಿ ಭೇಸಿಪ್ಪುಗಳಂಥವರು ಪೂಜಿಸುವಂತ ಸಾವರಕರರನ್ನೂ ಗೋಮಾಂಸಭಕ್ಷಕರು ಎಂದು ಭಾವಿಸಬೇಕಾಗುತ್ತದೆ. ಏಕೆಂದರೆ ನಾವಡ ಅವರು ಪ್ರಸ್ತಾಪಿಸಿದಂಥ ಕನ್ನಡಪ್ರಭ ಪತ್ರಿಕೆಯಲ್ಲೇ ಮೈಸೂರು ವಿವಿಯ ಕನ್ನಡ ವಿಭಾಗದ ಬೋಧಕರಾದ ಪಂಡಿತಾರಾಧ್ಯರು ಲೇಖನ ಬರೆದು ಸಾವರಕರರ ನಿಲುವುಗಳನ್ನು ಅವರ ಮಾತಿನಲ್ಲೇ ಉಲ್ಲೇಖಿಸಿದ್ದಾರೆ. ನೋಡಿ ದೇವನೂರರ ಲೇಖನ ಬಂದ ಹಿಂದಿನ ದಿನ ಸಾವರಕರರ ಚಿಂತನೆಗಳ ಲೇಖನವಿದೆ. ಪ್ರೀತಿಯಿಂದ ಸಿ ಮರಿಜೋಸೆಫ್

ಹಳೇಕಾಲದಲ್ಲಿ, ಓಬೀ ರಾಯನ ಕಾಲದಲ್ಲಿ ಯಾರೆಲ್ಲಾ ತಿಂದರು, ಯಾರೆಲ್ಲಾ ತೇಗಿದರು, ಇವೆಲ್ಲಾ ಬೇಡ. ಈಗ ತಿನ್ನೋದು ಬೇಡ, ಅರ್ಥ ಆಯಿತಾ? :)

>>ಹಳೇಕಾಲದಲ್ಲಿ, ಓಬೀ ರಾಯನ ಕಾಲದಲ್ಲಿ ಯಾರೆಲ್ಲಾ ತಿಂದರು, ಯಾರೆಲ್ಲಾ ತೇಗಿದರು, ಇವೆಲ್ಲಾ ಬೇಡ. ಈಗ ತಿನ್ನೋದು ಬೇಡ, ಅರ್ಥ ಆಯಿತಾ? ಅಪ್ಪಣೆ ಪ್ರಭೂ. ಪ್ರೀತಿಯಿಂದ ಸಿ ಮರಿಜೋಸೆಫ್

ಮಾನ್ಯ ವೀರಕನ್ನಡಿಗರೇ, ಅಂದಹಾಗೆ ಈ ಪಂಡಿತಾರಾಧ್ಯ ಯಾರು? ಕನ್ನಡದ ಅಂಕಿಗಳನ್ನು ಬಳಸಿ ಎಂದು ಏಕವ್ಯಕ್ತಿ ಚಳವಳಿ ನಡೆಸಿದರಲ್ಲ ಎಂ ಎನ್ ವಿ ಪಂಡಿತಾರಾಧ್ಯ ಎಂದು ಅವರಿರಬಹುದೇ? ಇರಲಿ ಬಿಡಿ, ನನಗಿಂತ ನಿಮಗೇ ಅವರ ಬಗ್ಗೆ ಹೆಚ್ಚು ತಿಳಿದಿದೆ. ಆದರೆ ನೀವು ಹೇಳಿದಂತೆ >>ಅವರು ಸಾವರ್ಕರ್ ಬಗ್ಗೆ ಬರೆಯುತ್ತಾರೆ ಎಂದರೆ ಹ ಹ ಹ!!<< ಎಂಬುದರಲ್ಲಿ ಹುರುಳೇನೂ ಇಲ್ಲ. ಕನ್ನಡಪ್ರಭವನ್ನು ಓದಿ ನೋಡಿ, ಅವರು ಸಾವರ್ಕರ‍್ ಬಗ್ಗೆ ಏನೂ ಬರೆದಿಲ್ಲ. ಸಾವರ್ಕರ‍್ ಬರೆದಿರುವುದಷ್ಟನ್ನೂ ಉಲ್ಲೇಖಿಸಿದ್ದಾರೆ ಅಷ್ಟೇ. ಪ್ರೀತಿಯಿಂದ ಸಿ ಮರಿಜೋಸೆಫ್

ನಾವಡ ಅವರೇ, ನಿಮ್ಮ ಹೇಳಿಕೆಯಲ್ಲಿ ಉಪಸಂಹಾರವಾಗಿ ನೀವೊಂದು ಪ್ರಶ್ನೆ ಕೇಳಿದ್ದೀರಿ. >>ಅವಳನ್ನು ಕೊಲ್ಲಬಾರದು ಅ೦ಥ ಕಾನೂನು ತರೋದ೦ದ್ರೆ ಇವರಿಗ್ಯಾಕೆ ಕಷ್ಟ? ಐ ಥಿ೦ಕ್ ಮಹಾದೇವರೂ ಒಬ್ಬ ಗೋಮಾ೦ಸಿಯೇ?<< ಕಾನೂನು ಜಾರಿಗೆ ಒತ್ತಾಯಿಸುವುದರಲ್ಲಿ ದೇವನೂರರಿಗೆ ಯಾವ ಪೂರ್ವಗ್ರಹವೂ ಇಲ್ಲ. ಆದರೆ ಆ ಮಸೂದೆಯ ಹಿಂದಿನ ಆಶಯಗಳು ಸದಾಶಯಗಳಲ್ಲ ಎನ್ನುವುದು ಮಾತ್ರ ಎಲ್ಲರಿಗೂ ತಿಳಿದ ವಿಷಯ. ಅದನ್ನು ವಿರೋಧಿಸಿದ ಮಾತ್ರಕ್ಕೇ ದೇವನೂರರು ಗೋಮಾಂಸಿಯಾದರೆ ಸಾವರಕರರೂ ಗೋಮಾಂಸಿ ಇರಬಹುದಲ್ಲವೇ ಎಂಬುದು ನನ್ನ ವಾದ. (ನಾನೇನೂ ಗೋಮಾಂಸಿ ಅಲ್ಲ ಬಿಡಿ). >>ಸಮಾಜದ ``ಆದರ್ಶ`` ಅನ್ನಿಸಿಕೊ೦ಡವರೆಲ್ಲ ಹುಚ್ಚುಚ್ನ೦ಗೆ ಮಾತಾಡೋಕೆ ಶುರು ಮಾಡಿದ್ರೆ . . .<< ಹೌದಲ್ವೇ? ಪ್ರೀತಿಯಿಂದ ಸಿ ಮರಿಜೋಸೆಫ್

ಸಾವರ್ಕರ್ ಹೇಳಿದಾಕ್ಷಣ ಅದನ್ನು ಒಪ್ಪಿಕೊಳ್ಳಲೇ ಬೇಕೆ? ಎಡಪಂಥೀಯ ವಿಚಾರಧಾರೆಯ ಕುವೆಂಪು ವಿವಿಯ ಪಂಡಿತರಾಧ್ಯರಿಗೆ ಬಲಪಂಥೀಯ ಸಾರಕರ್ ಮೇಲೆ ಪ್ರೀತಿ ಉಕ್ಕಿ ಬಂದು ಸಾವರ್ಕರರ ಎಲ್ಲ ನಿಲುವುಗಳನ್ನು ಒಪ್ಪಿಕೊಳ್ಳುತ್ತಾರೆಯೆ? ತಮ್ಮ ಅನುಕೂಲಸಿಂಧು ಬರಹಕ್ಕೆ ಬಲಪಂಥೀಯರೊಬ್ಬರ ಉಲ್ಲೇಖ ತಂದರೆ ತಮ್ಮ ನಿಲುವು ಎಲ್ಲರಿಗೂ ಪ್ರಿಯವಾಗುತ್ತದೆಯೆಂಬ ವಿಚಾರ ಢಾಳಾಗಿ ಕಾಣಿಸುತ್ತದೆ. ಇಷ್ಟಕ್ಕೂ ಆವರೇ ಹೇಳಿದಂತೆ ಸಾವರ್ಕರ್ ಗೋಹತ್ಯೆ ನಿಷೇಧದ ಪರವಿರಲಿಲ್ಲ ಮತ್ತು ಗೋಮಾಂಸ ಭಕ್ಷಣೆಯ ವಿರೋಧಿಗಳಾಗಿದ್ದರು.

ನಾವಡ ಅವರೇ ದೇವನೂರ ಅವರು ಎತ್ತಿರುವ ಪ್ರಶ್ನೆಗಳ ಹಿಂದಿನ ಸದಾಶಯವನ್ನು ನೀವು ಗಮನಿಸಿಲ್ಲ. ಊಟದ ತಟ್ಟೆಯಲ್ಲಿ ಏನಿರಬೇಕೆಂದು ನಿರ್ಧರಿಸುವವನು ತಿನ್ನುವವನೇ ಹೊರತು ಮೂರನೆಯ ವ್ಯಕ್ತಿಯಲ್ಲ. <<ಐ ಥಿ೦ಕ್ ಮಹಾದೇವರೂ ಒಬ್ಬ ಗೋಮಾ೦ಸಿಯೇ?>> ಇದು ಕುಚೋದ್ಯವಲ್ಲವೆ!? ಕುಚೋದ್ಯಕ್ಕೇ ನಾನು ಕೆಲವು ಪ್ರಶ್ನೆಯನ್ನು ನಿಮಗೆ ಕೇಳುತ್ತೇನೆ. ಗೋವುಗಳ ಬಗ್ಗೆ ಇಷ್ಟೊಂದು ಕಾಳಜಿ ಹೊಂದಿರುವ ನೀವು ಎಷ್ಟು ಗೋವವುಗಳನ್ನು ಸಾಕಿದ್ದೀರಿ? ಅದರಲ್ಲಿ ಹಾಲು ಕೊಡದ ಹಸುಗಳೆಷ್ಟು? ಕೃಷಿ ಚಟುವಟಿಕೆಗೆ ಉಪಯೋಗಕ್ಕೆ ಬಾರದ ಎತ್ತುಗಳೆಷ್ಟು? ಈ ಪ್ರಶ್ನೆಗಳನ್ನು ನೀವು ನನಗೂ ಕೇಳಬಹುದೆಂದು ಮೊದಲೇ ಊಹಿಸಿ ಮೊದಲೇ ಉತ್ತರಿಸಿಬಿಡುತ್ತೇನೆ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಾನು ಬಾಲಕನಾಗಿದ್ದಾಗ ನಮ್ಮ ಮನೆಯಲ್ಲು ಸುಮಾರು ನಲವತ್ತಕ್ಕು ಹೆಚ್ಚು ಎಮ್ಮೆ ದನಗಳಿದ್ದವು. ನಂತರ ಅವುಗಳ ಸಂಖ್ಯೆ ಕಡಿಮೆಯಾಗುತ್ತಾ ಬಂತು. ಮೊನ್ನೆ ಅಂದರೆ 2009 ಆಗಸ್ಟ್ ತಿಂಗಳ ಹೊತ್ತಿಗೆ ನಮ್ಮ ಮನೆಯಲ್ಲಿ ಒಂದೇ ಒಂದು ದನವಾಗಲೀ ಎಮ್ಮೆಯಾಗಲೀ ಇಲ್ಲದಂತಾಯಿತು! ಕಾರಣ ಇಷ್ಟೆ. ಅವುಗಳನ್ನು ಸಾಕುವಷ್ಟು ಮಾನವಸಂಪನ್ಮೂಲವಾಗಲೀ ಸಮಯವಾಗಲೀ ನಮಗಿಲ್ಲ. ಜೊತೆಗೆ ಆರ್ಥಿಕವಾಗಿ ನಷ್ಟವುಂಟಾಗುತ್ತಿತ್ತು. ಹಾಲಿಗೆ ಎರಡು ರೂಪಾಯಿ ಹೆಚ್ಚಾದರೆ ಬೊಬ್ಬೆ ಹೊಡೆಯುವವರು ವರ್ಷದಲ್ಲಿ ನಾಲ್ಕು ಬಾರಿ ಬೂಸಾ ಬೆಲೆ ಹೆಚ್ಚಾದರೂ ಮಾತನಾಡುವುದಿಲ್ಲ! ಆರ್ಥಿಕವಾಗಿ ರೈತ ಎಷ್ಟೇ ನಷ್ಟ ಅನುಭವಿಸಿದರೂ ಕೇವಲ ಭಾವನಾತ್ಮಕ ತೃಪ್ತಿಗಾಗಿ ದನಗಳನ್ನು ಸಾಕಬೇಕೆ? ಹೋಗಲಿ ಆತ ಸಾಕಿದ ರಾಸುಗಳನ್ನು ಅವನಿಗೆ ಬೇಕಾದಾಗ ಮಾರುವ ಹಕ್ಕನ್ನು ಕಸಿದುಕೊಳ್ಲುವ ಈ ಕಾನೂನು ಬೇಕಿತ್ತೆ? ಮಾರುವವನಿಗೆ ಕೊಂಡುಕೊಳ್ಳುವವನು ಮಾಂಸಕ್ಕಾಗಿ ಕೊಂಡುಕೊಳ್ಳುತ್ತಾನೆಯೇ ಎಂದು ತಿಳಿಯುವುದು ಹೇಗೆ? ಯಾರೋ ಹೇಳಿದ್ದರು. ಸಾಕಲಾಗದವರು ಸರ್ಕಾರೀ ಗೋಶಾಲೆಗಳಿಗೆ ಒಪ್ಪಿಸಬಹುದು ಎಂದು. ಆದರೆ ೀಗ ಮಾಡಿರುವ ಕಾನೂನಿನಲ್ಲಿ ಅದು ಬದುಕಿರುವವರೆಗೂ ಇಂತಿಷ್ಟು ಹಣವನ್ನು ಅದರ ಮಾಲೀಕ ಸರ್ಕಾರಕ್ಕೆ ಪಾವತಿಸಬೇಕು ಎಂದಿರುವುದು ಸುಳ್ಳೆ? ಇನ್ನು ಮಾಂಸಕ್ಕಾಗಿ ಹತ್ಯೆಯಾಗುತ್ತಿರುವ ರಾಸುಗಳ ವಿಚಾರಕ್ಕೆ ಬರೋಣ. ನಮ್ಮ ಪ್ರದೇಶದಲ್ಲಿ ಹಾಲು ಕೊಡುವ ಹಸುವಿನ ಬೆಲೆ 15ರಿಂದ 40000 ದವರೆಗೂ ಇದೆ. ಸುಮಾರಾದ ಒಂದು ಜೊತೆ ಎತ್ತುಗಳ ಬೆಲೆ 25000 ರಿಂದ 40000 ರೂಪಾಯಿಗಳು. ಅವೆರಡನ್ನೂ ಇಡಿಯಾಗಿ ತೂಕ ಹಾಕಿದರೂ ಗರಿಷ್ಠ ಒಂದೂವರೆ ಟನ್ ಮಾಂಸ ಸಿಗಬಹುದು. ಈಗ ಮಾರುಕಟ್ಟೆಯಲ್ಲಿ 75 ರೂಪಾಯಿಗೆ ಸಿಕ್ಕುತ್ತಿರುವ ದನದ ಮಾಂಸ ಈ ರೀತಿಯ ಎತ್ತುಗಳನ್ನು ಕೊಂಡು ಮಾಂಸಕ್ಕಾಗಿ ಮಾರಿದರೆ ಕೇಜಿಗೆ 250-300 ರೂಪಾಯಿ ಆಗುತ್ತದೆ. ಈ ರೀತಿಯ ಎತ್ತುಗಳನ್ನು ಮಾಂಸಕ್ಕಾಗಿ ಮಾರುವವರು ಕೊಳ್ಳುವವರು ಯಾರಿದ್ದಾರೆ? ಈಗಲಾದರೂ ನಿಮಗೆ ಗೊತ್ತಾಗಿರಬೇಕು; ಮಾಂಸಕ್ಕಾಗಿ ಮಾರಾಟವಾಗುವ ರಾಸುಗಳು ಎಂತಹವು ಎಂದು. ಮಾಂಸ ತಿನ್ನುವುದರಿಂದ ಗೋಸಂತತಿ ಕಡಿಮೆಯಾಗುತ್ತದೆ ಎಂಬುದು ಒಂದು ಮಿಥ್ ಅಷ್ಟೆ. ಆದರೆ ಉತ್ಥೇಜನವಿಲ್ಲದೆ, ಹಾಲಿಗೆ ಒಳ್ಳೆಯ ದರವಿಲ್ಲದೆ, ಮೇವು ಬೆಳೆಯಲು ನೀರಿಲ್ಲದೆ, ಸ್ವತಃ ರಾಸುಗಳಿಗೆ ಕುಡಿಯಲು ನೀರಿಲ್ಲದೆ, ನೀರೆತ್ತಲು ಕರೆಂಟಿಲ್ಲದೆ, ಗಗನಕ್ಕೇರುತ್ತಿರುವ ಬೂಸಾ ಬೆಲೆಯನ್ನು ತೆರಲಾರದೆ, ಹಾಗೂ ಹಳ್ಳಿಗಳಲ್ಲಿ ಕ್ಷೀಣಿಸುತ್ತಿರುವ ಯುವಕರ ಸಂಖ್ಯೆಯಿಂದಾಗಿ ಉಂಟಾಗಿರುವ ಮಾನವಸಂಪನ್ಮೂಲದ ಕೊರತೆಯಿಂದಾಗಿ ಗೋಸಂತತಿ ಕಡಿಮೆಯಾಗುತ್ತದೆ ಎಂಬ ಸತ್ಯವನ್ನು ಮರೆಮಾಚುವುದು ಎಷ್ಟು ಸರಿ? ಅರ್ಧ ರಾತ್ರಿ ಕೊಡುವ ಮೂರುಗಂಟೆ ಮೂರು ಫೇಸ್ ವಿದ್ಯುತ್ತಿನಿಂದ ನೀರೆತ್ತಲು ಇಂದು ರೈತರು ಪಡುತ್ತಿರುವ ಕಷ್ಟ ಗೋವು ರಕ್ಷಿಸಿ ಎಂದು ಪುಕ್ಕಟ್ಟೆ ಉಪದೇಶ ಕೊಡುವವರಿಗೆ ತಿಳಿಯುವುದು ಹೇಗೆ?

ಬಿ.ಆರ್.ಎಸ್.ರೇ ನಮಸ್ಕಾರ. ನಾನು ದೇವನೂರುರವರನ್ನು ಕುಚೋದ್ಯ ಮಾಡಲಾಗಲೀ, ಗೋಮಾ೦ಸ ತಿನ್ನುವವರನ್ನು ಬೇಸರಪಡಿಸಲಿಕ್ಕಗಲೀ ನಾನು ಈ ಲೇಖನ ಬರೆದಿಲ್ಲ.ವಿಚಾರ ಏನೆ೦ದರೆ ನಮ್ಮ ಎಲ್ಲಾ ಬುಧ್ಡಿಜೀವಿಗಳೂ ಅಷ್ಟೇ. ಸರಿಯಾದ ಕಾರಣವನ್ನು ಹೇಳದೇಯೇ ಎಲ್ಲವನ್ನೂ ವಿರೋಧಿಸುತ್ತಾರೆ. ನಾನೂ ದೇವನೂರರ ಸಣ್ಣ ಕಥೆಗಳನ್ನು ಶಾಲೆಯಲ್ಲಿ ಓದಿಯೇ ಬೆಳೆದವನು.ಆದರೆ ಇಲ್ಲೊ೦ದು ವಿಚಾರವಿದೆ ಗೋ ಸ೦ತತಿ ತೀವ್ರ ತೆರನಾಗಿ ನಾಶವಾಗಲು ಅವುಗಳನ್ನು ಸಾಕಲು ಮೂಲಭೂತ ಸೌಕರ್ಯಗಳ ಕೊರತೆ, ಸರಕಾರದ ನಿರ್ಲ಼ಕ್ಶ್ಯ ಎಲ್ಲವೂ ಕಾರಣಗಳೇ.ನಾನು ಒಪ್ಪುತ್ತೇನೆ. ಆದರೆ ನಮ್ಮ ಕಡೆಯಿ೦ದ ಪ್ರಾಮಾಣಿಕ ಕಾಳಜಿಯನ್ನು ನಾವು ವಹಿಸಬಹುದಲ್ಲವೇ?.ಸಕಲ ತಿದ್ದುಪಡಿಗಳೊ೦ದಿಗೆ ಗೋಮಾತೆಯ ಹತ್ಯಾ ನಿರ್ಬ೦ಧ ಕಾಯಿದೆ ಬ೦ದರೆ ನಾನ೦ತೂ ಬೆ೦ಬಲಿಸುತ್ತೇನೆ. <<ಗೋವುಗಳ ಬಗ್ಗೆ ಇಷ್ಟೊಂದು ಕಾಳಜಿ ಹೊಂದಿರುವ ನೀವು ಎಷ್ಟು ಗೋವವುಗಳನ್ನು ಸಾಕಿದ್ದೀರಿ? ಅದರಲ್ಲಿ ಹಾಲು ಕೊಡದ ಹಸುಗಳೆಷ್ಟು? ಕೃಷಿ ಚಟುವಟಿಕೆಗೆ ಉಪಯೋಗಕ್ಕೆ ಬಾರದ ಎತ್ತುಗಳೆಷ್ಟು?<< ನಮ್ಮ ಹಳೇಮನೆಯಲ್ಲಿ ಜಾನುವಾರುಗಳಿದ್ದವು.ಈಗಿಲ್ಲ. ಆದರೆ ನಿಮ್ಮ ಪ್ರಕಾರ ಗೋವುಗಳನ್ನು ಸಾಕಿದರೆ ಮಾತ್ರವೇ ಗೋವಿನ ಬೆಲೆ ತಿಳೀಯೋದೇ? ಹಾಗಿದ್ದಲ್ಲಿ ನಾನು ಆ ಪ್ರಯೋಗಕ್ಕೂ ಸಿಧ್ಡ! ನಮಸ್ಕಾರ,ನನ್ನಿ

<<ಎಲ್ಲಾ ಬುಧ್ಡಿಜೀವಿಗಳೂ ಅಷ್ಟೇ. ಸರಿಯಾದ ಕಾರಣವನ್ನು ಹೇಳದೇಯೇ ಎಲ್ಲವನ್ನೂ ವಿರೋಧಿಸುತ್ತಾರೆ.>> ಅವರು ಅವರವರ ನೆಲೆಯಲ್ಲಿ ಸರಿಯಾದ ಕಾರಣ ಕೊಟ್ಟೇ ವಿರೋಧಿಸಿರುತ್ತಾರೆ. ಆದರೆ ಮೀಡಿಯಾಗಳು ತಮಗೆ ಎಷ್ಟು ಬೇಕೋ ಅಷ್ಟನ್ನು ರೋಚಕವಾಗಿ ರೋಚಕ ತಲೆಬರಹದೊಂದಿಗೆ ನಮಗೆ ಉಣಬಡಿಸುತ್ತವೆ! ದೇವನೂರರತು ಗೋಮಾಂಸಿಯೇ ಎಂಬ ಪ್ರಶ್ನೆಗೆ ನಾನು ಈ ಪ್ರಶ್ನೆ ಕೇಳಿದೆ ಅಷ್ಟೆ. ಖಂಡಿತಾ ಗೋವುಗಳ ಪ್ರಾಮುಖ್ಯತೆಯನ್ನು ಅರಿಯಲು ಅವುಗಳನ್ನು ಸಾಕಿರಲೇ ಬೇಕಿಲ್ಲ ಎನ್ನುವುದನ್ನು ನಾನು ಒಪ್ಪುತ್ತೇನೆ. ಹಾಗೇ ದೇವನೂರರು ಗೋಮಾಂಸಿಯಾಗಿರಲೀ ಆಗಿಲ್ಲದಿರಲಿ, ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಸ್ವತಂತ್ರರಲ್ಲವೆ? ಗೋಮಾಂಸ ಸೇವಿಸುವವರು ಮಾತ್ರ ಅದನ್ನು ವಿರೋಧಿಸಬೇಕೆ? ಸೇವಿಸದವರೂ ತಮಗೆ ಸರಿಕಂಡಂತೆ ವಿರೋಧಿಸಬಹುದಲ್ಲವೆ? <<ನಮ್ಮ ಕಡೆಯಿ೦ದ ಪ್ರಾಮಾಣಿಕ ಕಾಳಜಿಯನ್ನು ನಾವು ವಹಿಸಬಹುದಲ್ಲವೇ?.>> ಇದನ್ನು ನಾನೂ ಒಪ್ಪುತ್ತೇನೆ. ಪ್ರಮಾಣಿಕ ಕಾಳಜಿಯನ್ನು ನಾವು ಮಾಡಬೇಕದ್ದೇ. ಆದರೆ ಅದನ್ನು ಬೇರೆಯವರಿಂದ ನಿರೀಕ್ಷಿಸಬಹುದೇ ಹೊರತು, ಒತ್ತಾಯ ಮಾಡಿ ಪಡೆಯುವುದಲ್ಲ.

<<ಅಲ್ರೀ ಮಾ೦ಸ ತಿ೦ದ್ರೆ ಮಿಟಮಿನ್ ಗಳು ಸಿಗುತ್ತೆ, ಅದು ನನಗೂ ಗೊತ್ತು.ಹ೦ಗ೦ಥ ಬರೇ ಮಿಟಮಿನ್ ತಿ೦ದ್ರೆ ರೋಗ ವಾಸಿಯಾಗುತ್ತಾ? >> ಅಲ್ರೀ ಪ್ರತೀ ದಿನ ಮೂರೂ ಹೊತ್ತು ಬರೀ ಮಾಂಸ ಯಾರು ತಿನ್ನುತ್ತಾರೆ? ಭಾರತದಲ್ಲಿ ಸರಾಸರಿ ತಿಂಗಳಿಗೆ ಎರಡು ದಿನ ಹೆಚ್ಚಂದರೆ ವಾರಕ್ಕೆ ಒಂದು ದಿನ ಒಬ್ಬ ಮನುಷ್ಯ ಮಾಂಸ ತಿನ್ನುವುದೆ ಹೆಚ್ಚು! ಅದೂ ಮುಖ್ಯ ಊಟದ -ಅಂದರೆ ಚಪಾತಿ ಅಥವಾ ,ಮುದ್ದೆ ಅಥವಾ ಅನ್ನ ಇತ್ಯಾದಿಗಳ ಜೊತೆ!

ಕೆಲವರಿಗೆ ಕೆಲ ವ್ಯಕ್ತಿಗಳ ಬಗ್ಗೆ ವೈಯಕ್ತಿಕ ಅಸಹನೆ ಇದ್ದೀತು, ಹಾಗನ್ತ ಅವರ ಪ್ರತಿಪಾದನೆಗಳನ್ನು ವಕ್ರದೃಷ್ಟಿಯಿಂದ ನೋಡಬೇಕೆಂದಿಲ್ಲ. ಗೋಹತ್ಯೆ ನಿಷೇಧದ ಮಾತುಗಳ ಕುರಿತು ಸರಳ ಭಾಷೆಯಲ್ಲಿ ಹೇಳುವುದಾದರೆ ಹೀಗಿದ್ದೀತು. ಹಸು ಸಾಕುವ ಬಡವ ತಾನು ಕಷ್ಟಪಟ್ಟು ಗೇಯುವ ಹೊಲದ ಕೆಲಸದ ಜೊತೆಗೆ ದಿನನಿತ್ಯದ ಅಗತ್ಯಕ್ಕೆ ಇರಲಿ ಎಂದು ಸಾಲ ಸೋಲ ಮಾಡಿ ಹಸು ಕೊಂಡಿರುತ್ತಾನೆ. ಒಂದು ಹಸು ಕೊಳ್ಳಲು ಏನಿಲ್ಲವೆಂದರೂ ಹದಿನೈದರಿಂದ ಇಪ್ಪತ್ತು ಸಾವಿರ ರೂಪಾಯಿ ಹಣ ತೆರಬೇಕು. ಕೆಲ ಬ್ಯಾಂಕುಗಳು ಸಾಲ ನೀಡುತ್ತವೆ, ಇಲ್ಲವಾದರೆ ಇನ್ನೆಲ್ಲಾದರೂ ಆ ರೈತ ಅಧಿಕ ಬಡ್ಡಿಗೆ ಸಾಲ ಮಾಡಬೇಕು. ಹೀಗೆ ತಂದ ಹಸುವಿಗೆ ಅಗತ್ಯವಾದ ನೀರು, ನೆರಳು, ಮೇವು ಒದಗಿಸಬೇಕು. ಒಂದು ವರ್ಷದವರೆಗೆ ಹಸು ಹಾಲು ಕೊಡುತ್ತದೆ. ಆಮೇಲೆ ಬೆದೆಗೆ ಬಂದು ಹಾಲು ಕೊಡುವುದನ್ನು ನಿಲ್ಲಿಸಿಬಿಡುತ್ತದೆ. ಮತ್ತೆ ಅದಕ್ಕೆ ಹೋರಿ ಬಿಡಬೇಕು ಅಂದರೆ ಗರ್ಭಧಾರಣೆ ಮಾಡಿಸಬೇಕು, ಕೆಲವೊಮ್ಮೆ ಎಷ್ಟು ವರ್ಷಗಳಾದರೂ ಗರ್ಭ ನಿಲ್ಲುವುದೇ ಇಲ್ಲ, ಮುಪ್ಪಾದರಂತೂ ಕೇಳುವುದೇ ಬೇಡ. ಪರಿಸರ ಸಮತೋಲನವು ಏರುಪೇರಾಗಿರುವ ಇಂದಿನ ದಿನಗಳಲ್ಲಿ ಇಂಥ ಹಸುಗಳಿಗೆ ಮೇವು ಒದಗಿಸುವುದು ತುಂಬಾ ತುಟ್ಟಿಯ ಬಾಬತ್ತಾಗಿರುತ್ತದೆ. ಆ ಹಸುವನ್ನು ಉಪವಾಸ ಕೆಡಹುವುದಾಗಲೀ ಕೊಲ್ಲುವುದಾಗಲೀ ಆಗದ ಮಾತು. ತನಗಾಗಿ ಸೇವೆ ಮಾಡಿದ ಪಶುವಿನ ಬಗ್ಗೆ ಎಷ್ಟೇ ಪ್ರೀತಿಯಿದ್ದರೂ ತನ್ನದೇ ಹೊಟ್ಟೆಯನ್ನು ಅಲಕ್ಷಿಸಿಯಾದರೂ ಅದನ್ನು ಸಾಕಿ ಸಲಹಬೇಕೆನ್ನುವ ಸಂಗತಿಯೇ ಬಡತನದ ರೇಖೆಯ ಆಸುಪಾಸಿನಲ್ಲಿ ಇರುವವನಿಗೆ ಸಂಕಟದ ಸಂಗತಿ. ಅದಕ್ಕೆಂದೇ ಆತ ಬಂದಷ್ಟು ದುಡ್ಡಿಗೆ ಅವನ್ನು ಕಸಾಯಿಖಾನೆಗೆ ದಾಟಿಸಿಬಿಡುತ್ತಾನೆ. ಅತ್ತ ಕೊಂದ ಪಾಪವೂ ಇಲ್ಲ, ತಿಂದ ಪಾಪವೂ ಇಲ್ಲ. ಇನ್ನು ಅದರ ಮಾಂಸವನ್ನು ತಿನ್ನುವವರಾದರೂ ಯಾರು? ಆಡಿನ ಮಾಂಸ ಕಿಲೋಗ್ರಾಮಿಗೆ ಇನ್ನೂರು ಮುನ್ನೂರು ರೂಪಾಯಿಗಳಷ್ಟು ಇರುವುದರಿಂದ ಕಡಿಮೆ ಬೆಲೆಗೆ ದೊರೆಯುವ ದೊಡ್ಡಮಾಂಸವನ್ನು (ದೊಡ್ಡ ಮಾಂಸ ಎಂದರೆ ಹಸು, ಎಮ್ಮೆ, ಎತ್ತು, ಕೋಣ ಇವೆಲ್ಲ ಸೇರಿ) ತಿನ್ನುವವರು ಕೆಳವರ್ಗದ ಜನರು. ಅವರೇ ಅದರ ಚರ್ಮವನ್ನು ಹದಮಾಡಿ ಮೇಲ್ವರ್ಗದವರಿಗೆ ಪಾದರಕ್ಷೆ ಒದಗಿಸುವವರು. ಸುಮ್ಮನೇ ಅವರ ಹೊಟ್ಟೆಯ ಮೇಲೇಕೆ ಹೊಡೆಯುತ್ತೀರಿ? ಏಕೆಂದರೆ ಸರ್ಕಾರವು ಗೋಹತ್ಯೆ ನಿಷೇಧದ ನೆವದಲ್ಲಿ ಎಲ್ಲ ರೀತಿಯ ಜಾನುವಾರುಗಳ ಅಂದರೆ ಹಸು, ಎಮ್ಮೆ, ಎತ್ತು, ಕೋಣಗಳ ಹತ್ಯೆ ಮಾತ್ರವಲ್ಲ ಬೇರೆಡೆ ಅಥವಾ ಬೇರೆ ಕಾರಣದಿಂದ ಸತ್ತ ಈ ಪ್ರಾಣಿಗಳ ಮಾಂಸದ ವಿಲೇವಾರಿ, ಸಾಗಣೆ ಮತ್ತು ಮಾರಾಟದ ಮೇಲೂ ನಿಷೇಧ ಹೇರಿದೆ. ಆದರೆ ಅಂಥ ಪ್ರಾಣಿಗಳನ್ನು ತನ್ನ ಹಸಿವನ್ನೂ ಮೀರಿ ಸಾಕಲು ಬಡವನಾದವನಿಗೆ ಈ ಸರ್ಕಾರವೇನಾದರೂ ಸಹಾಯಧನ ನೀಡುತ್ತದೆಯೇ? ಅದೇನಿದ್ದರೂ ದುಡ್ಡು ತಗೊಂಡೋಗಿ ಮಠಗಳಿಗೆ ಸುರಿಯುತ್ತೆ. ಪ್ರೀತಿಯಿಂದ ಸಿ ಮರಿಜೋಸೆಫ್

ನಮಸ್ಕಾರ ಜೋಸೆಫ್ ರೇ, ನಿಮ್ಮ ಈ ಪ್ರತಿಕ್ರಿಯೆಗೆ ನಾನು ಬಿ.ಆರ್.ಎಸ್.ರಿಗೆ ನೀಡಿದ ಪ್ರತಿಕ್ರಿಯೆಯಲ್ಲಿಯೇ ಉತ್ತರಿಸಿದ್ದೇನೆ. <<ಕೆಲವರಿಗೆ ಕೆಲ ವ್ಯಕ್ತಿಗಳ ಬಗ್ಗೆ ವೈಯಕ್ತಿಕ ಅಸಹನೆ ಇದ್ದೀತು, ಹಾಗನ್ತ ಅವರ ಪ್ರತಿಪಾದನೆಗಳನ್ನು ವಕ್ರದೃಷ್ಟಿಯಿಂದ ನೋಡಬೇಕೆಂದಿಲ್ಲ<< ಸಮ೦ಜಸ ವಿಮರ್ಶೆ ಬೇರೆ-ವಕ್ರದೃಷ್ಟಿಯಿ೦ದ ಮಾಡುವ ವಿಮರ್ಶೆ ಬೇರೆ. ಯಾವುದೇ ವಿಚಾರಗಳನ್ನೂ ಪೂರ್ವಾಗ್ರಹ ಪೀಡಿತರಾಗಿ ವಿಮರ್ಶೆ ಮಾಡಬಾರದು. ದೇವನೂರರ ಬಗ್ಗೆ ನಮಗೆ ಗೌರವವಿದೆ. ಅವರ ಬಗ್ಗೆ ನಾನು ಯಾವುದೇ ಪೂರ್ವಾಗೆಗ್ರಹವನ್ನೂ ಹೊ೦ದಿಲ್ಲ.ಅ೦ದ ಮೇಲೆ ವಕ್ರದೃಷ್ಟಿ ಎನ್ನುವ ಪದದ ಪ್ರಯೋಗ ಅಗತ್ಯವಿಲ್ಲ ಅಲ್ಲವೇ? <<ಆತ ಬಂದಷ್ಟು ದುಡ್ಡಿಗೆ ಅವನ್ನು ಕಸಾಯಿಖಾನೆಗೆ ದಾಟಿಸಿಬಿಡುತ್ತಾನೆ. ಅತ್ತ ಕೊಂದ ಪಾಪವೂ ಇಲ್ಲ, ತಿಂದ ಪಾಪವೂ ಇಲ್ಲ. << ಪಾಪ ಬರೋಲ್ಲ ಅ೦ಥ ಮನಸ್ಸಿಗೆ ಬ೦ದದ್ದೆಲ್ಲ ಮಾಡಲಿಕ್ಕಾಗುತ್ತದೆಯೇ? ಮೂಲ ಸೌಕರ್ಯಗಳ ಕೊರತೆ ಈ ದೇಶದ ಕೃಷಿಕರನ್ನು ಕಾಡುತ್ತಿದೆ ಎ೦ಬುದು ನನಗೂ ಗೊತ್ತು. ಹಾಗ೦ಥ ಬಡ ದನಗಳನ್ನು ಕಸಾಯಿಖಾನೆಗೆ ಕೊಡಿ ಅ೦ಥ ಎಲ್ಲೂ ಇಲ್ಲ. ಇತ್ತೀಚೆಗೆ ರಾಜ್ಯದಲ್ಲಿ ಯಾ ದೇಶದಲ್ಲಿ ಅನೇಕ ದೇವಸ್ಠಾನಗಳು-ಮಠಗಳು ಹಾಗೂ ಬೇರೆ ಬೇರೆ ಸ೦ಘ ಸ೦ಸ್ಠೆಗಳು ಗೋಶಾಲೆಯನ್ನು ತೆರೆಯುತ್ತಿವೆ.ಅಲ್ಲಿಗೆ ಕೊಡಬಹುದಲ್ಲ? ಅವು ಅವುಗಳ ಲಾಲನೆ-ಪೋಷಣೆಯನ್ನು ಮಾಡುತ್ತವೆ. ಒ೦ದು ಸಮಸ್ಯೆಗೆ ಒ೦ದೇ ಪರಿಹಾರವಿರೋಲ್ಲ.ಹತ್ತು-ಹಲವು ದಾರಿಗಳಿರುತ್ತವೆ. ನಾವು ಆರಿಸ್ಕೊಳ್ಳಬೇಕು ಅಷ್ತೇ. <<ಸರ್ಕಾರವು ಗೋಹತ್ಯೆ ನಿಷೇಧದ ನೆವದಲ್ಲಿ ಎಲ್ಲ ರೀತಿಯ ಜಾನುವಾರುಗಳ ಅಂದರೆ ಹಸು, ಎಮ್ಮೆ, ಎತ್ತು, ಕೋಣಗಳ ಹತ್ಯೆ ಮಾತ್ರವಲ್ಲ ಬೇರೆಡೆ ಅಥವಾ ಬೇರೆ ಕಾರಣದಿಂದ ಸತ್ತ ಈ ಪ್ರಾಣಿಗಳ ಮಾಂಸದ ವಿಲೇವಾರಿ, ಸಾಗಣೆ ಮತ್ತು ಮಾರಾಟದ ಮೇಲೂ ನಿಷೇಧ ಹೇರಿದೆ. ಆದರೆ ಅಂಥ ಪ್ರಾಣಿಗಳನ್ನು ತನ್ನ ಹಸಿವನ್ನೂ ಮೀರಿ ಸಾಕಲು ಬಡವನಾದವನಿಗೆ ಈ ಸರ್ಕಾರವೇನಾದರೂ ಸಹಾಯಧನ ನೀಡುತ್ತದೆಯೇ? << ಇದರ ಬಗ್ಗೆ ಮತ್ತೊಮ್ಮೆ ಕಾನೂನು ಜಾರಿಗೆ ಬ೦ದಾಗ ಚರ್ಚಿಸೋಣ. << ಅದೇನಿದ್ದರೂ ದುಡ್ಡು ತಗೊಂಡೋಗಿ ಮಠಗಳಿಗೆ ಸುರಿಯುತ್ತೆ>> ಪೂರ್ವಾಗ್ರಹ ಪೀಡಿತರಾಗಿ ವಿಮರ್ಶೆ ಮಾಡುವುದು ಬೇಡ. ತಪ್ಪು ತಿಳಿದುಕೊಳ್ಳಬೇಡಿ.ಸರ್ಕಾರ ಕೇವಲ ಮಠಗಳಿಗೆ ಮಾತ್ರವೇ ದುಡ್ದು ಸುರಿಯುತ್ತೆ ಅನ್ನುವ ನಿಮ್ಮ ಹೇಳಿಕೆ ತಪ್ಪು.ಹಿ೦ದಿನ ಸರ್ಕಾರಗಳೂ ಜನಕಲ್ಯಾಣ ಯೋಜನೆಗಳು ಮಠಗಳಿ೦ದ ಹಮ್ಮಿಕೊ೦ಡಾಗ ಸರ್ಕಾರೀ ನೆರವು ಘೋಷಿಸಿದ್ದಿದೆ.ಮತ್ತೊ೦ದು ವಿಚಾರ ಏನ೦ದರೆ, ರಾಜ್ಯದ ಮುಜರಾಯಿ ಹಿ೦ದೂ ದೇವಸ್ಠಾನಗಳಿ೦ದ ಬರುವ ಆದಾಯ ಆಯಾಯ ದೇವಸ್ಠಾನಗಳ ಕಲ್ಯಾಣ ಯೋಜನೆಗಳಿಗಿ೦ತ ಬೇರೆ ಬಾಬತ್ತಿಗೆ/ ಬೇರೆ ಮ೦ದಿರಗಳ ನವೀಕರಣ ಮು೦ತಾದವಕ್ಕೆ ಖರ್ಚಾಗುತ್ತೆ.ನಿಮ್ಮ ಯಾವ ಇಗರ್ಜಿಗಳೂ ಸರ್ಕಾರೀ ನೆರವಿಲ್ಲದೆ ಈದಿನ ನಮ್ಮಲ್ಲಿವೆಯೇ? ಸರ್ವ ಜನ,ಸರ್ವ ಮತ,ಸರ್ವ ಕಾರ್ಯಗಳ ಸಮ ಸ೦ರಕ್ಷಣೆ ಸರಕಾರದ/ಯಾ ರಾಜನ ಕರ್ತವ್ಯ ಎ೦ದು ಚಾಣಕ್ಯ ತನ್ನ ಅರ್ಥಶಾಸ್ಥ್ರ ರಾಜನೀತಿಯಲ್ಲಿ ತಿಳಿಸಿದ್ದಾನೆ.ಅದನ್ನು ಯಥಾವತ್ತಾಗಿ ಪಾಲಿಸುತ್ತಾರೆಯೇ ಎ೦ಬ ಮತ್ತೊ೦ದು ಪ್ರಶ್ನೆಯನ್ನು ಕೇಳಬೇಡಿ!ನಿಮ್ಮ ವಕ್ರದೃಷ್ಟಿ ಮಠಗಳ ಮೇಲೆ ಮಾತ್ರ ಏಕೆ? ನಮಸ್ಕಾರ.

ನಮಸ್ಕಾರ ನಾವಡ ಅವರೇ. ನಿಮ್ಮ ನಿರ್ಮಲ ಹೃದಯದ ಪ್ರತಿಸ್ಪಂದನೆಗೆ ಧನ್ಯವಾದಗಳು. ಆದರೆ ನಿಮ್ಮ ವಾದದಲ್ಲಿ ಕೆಲ ಅರೆತಿಳಿವಿನ ಸಂಗತಿಗಳಿವೆ. ನಾನೂ ಕೆಲ ಸಂಗತಿಗಳ ಬಗ್ಗೆ ಕುರುಡಾಗಿದ್ದೇನೆ ನಿಜ, ಹಾಗನ್ತ ನಾವು ಒಂದೇ ವಾದಕ್ಕೆ ಜೋತು ಬೀಳುವುದು ಬೇಡ. >>ಇತ್ತೀಚೆಗೆ ರಾಜ್ಯದಲ್ಲಿ ಯಾ ದೇಶದಲ್ಲಿ ಅನೇಕ ದೇವಸ್ಠಾನಗಳು-ಮಠಗಳು ಹಾಗೂ ಬೇರೆ ಬೇರೆ ಸ೦ಘ ಸ೦ಸ್ಠೆಗಳು ಗೋಶಾಲೆಯನ್ನು ತೆರೆಯುತ್ತಿವೆ. ಈ ನಿಮ್ಮ ಮಾತಿಗೆ ಉತ್ತರವನ್ನು ನೀವು http://www.kendasamp... ಇಲ್ಲಿ ಕಾಣಬಹುದು. ಹಾಗೆಯೇ ಉತ್ತರ ಕರ್ನಾಟಕದ ನೆರೆಪೀಡಿತರಿಗೆ ೧.೬ ಕೋಟಿ ರೂಪಾಯಿ ವೆಚ್ಚದಲ್ಲಿ ಮನೆಗಳನ್ನು ಕಟ್ಟಿಕೊಟ್ಟು ಭಾರೀ ಪ್ರಚಾರ ಪಡೆದ ಅಮ್ಮನವರು ಬೆಂಗಳೂರಿನಲ್ಲಿ ಸುಮಾರು ೧೫ ಕೋಟಿ ರೂಪಾಯಿಗಳ ಜಮೀನನ್ನು ಹೊಡೆದುಕೊಂಡರು ಎಂಬುದನ್ನೂ ನಿಮಗೆ ನೆನಪಿಸುತ್ತೇನೆ. >>ಇದರ ಬಗ್ಗೆ ಮತ್ತೊಮ್ಮೆ ಕಾನೂನು ಜಾರಿಗೆ ಬ೦ದಾಗ ಚರ್ಚಿಸೋಣ. ಇದಂತೂ ತೀರಾ ಉಡಾಫೆಯ ಮಾತು. ಇಂದಿನ ಚರ್ಚೆ ಇಂದೇ ಆಗಲಿ. ಬದುಕನ್ನು ಕಿತ್ತುಕೊಳ್ಳುವ ಹಕ್ಕು ಯಾರಿಗೂ ಇಲ್ಲ. >>ಬೇರೆ ಬಾಬತ್ತಿಗೆ/ ಬೇರೆ ಮ೦ದಿರಗಳ ನವೀಕರಣ ಮು೦ತಾದವಕ್ಕೆ ಖರ್ಚಾಗುತ್ತೆ.ನಿಮ್ಮ ಯಾವ ಇಗರ್ಜಿಗಳೂ ಸರ್ಕಾರೀ ನೆರವಿಲ್ಲದೆ ಈದಿನ ನಮ್ಮಲ್ಲಿವೆಯೇ? ಅಲ್ಲಿಂದ ಎಷ್ಟು ಹಣ ಬರುತ್ತೆ ಹಾಗೂ ಬೇರೆ ಬಾಬತ್ತುಗಳಿಗೆ ಎಷ್ಟು ಖರ್ಚಾಗುವುದೋ ನನಗೆ ಗೊತ್ತಿಲ್ಲ. ಆದರೆ ಇಗರ್ಜಿಗಳಿಗೆ ಸರ್ಕಾರದ ನೆರವು ಹರಿದು ಬರುತ್ತದೆ ಎನ್ನುವುದು ಅಪ್ಪಟ ಸುಳ್ಳು. ಪ್ರಸಿದ್ಧವೂ ಪುರಾತನವೂ ಆದ ಚರ್ಚುಗಳ ನವೀಕರಣಕ್ಕೆ ಸುಣ್ಣಬಣ್ಣಕ್ಕೆ ಎಂದು ಬಂಗಾರಪ್ಪನವರ ಸರಕಾರವು ರೂಪಿಸಿದ ಆರಾದನಾ ಎಂಬ ಯೋಜನೆಯಲ್ಲಿ ಹಣ ನಿಗದಿ ಮಾಡಲಾಗಿತ್ತು. ಅಂದರೆ ಆ ಯೋಜನೆಯ ಪ್ರಕಾರ ಮೈಸೂರಿನ ಸಂತ ಫಿಲೋಮಿನಾ ಚರ್ಚಿಗೆ ಹಾಗೂ ವಿರಾಜಪೇಟೆಯ ಸಂತ ಅನ್ನಮ್ಮ ಚರ್ಚಿಗೆ ತಲಾ ಹದಿನೈದು ಸಾವಿರ ರೂಪಾಯಿ ಮಂಜೂರಾಗಿತ್ತು. ಅಬ್ಬಾ ಅದನ್ನು ಪಡೆದುಕೊಳ್ಳಲಿಕ್ಕೆ ಕಚೇರಿಗಳಿಗೆ ಟೇಬಲ್ಲುಗಳಿಗೆ ಅಲೆದಿದ್ದು ಒಂದು ದೊಡ್ಡ ಕತೆಯಾದೀತು. ನಮ್ಮ ಧರ್ಮದ ಪ್ರಕಾರ ಲಂಚ ಕೊಡುವಂತಿಲ್ಲ. ಸದರಿ ಟೇಬಲ್ಲುಗಳು ಲಂಚವಿಲ್ಲದೆ ಕೆಲಸ ಮಾಡೊಲ್ಲ. ಈಗ ಆರಾಧನಾ ಸ್ಕೀಮೇ ಇಲ್ಲ ಬಿಡಿ. ಇನ್ನೊಂದು ಚರ್ಚಿನ ನವೀಕರಣಕ್ಕಾಗಿ ಸ್ವಲ್ಪ ಮರಮಟ್ಟು ಬೇಕಾಗಿತ್ತು. ಸರ್ಕಾರದ ಅರಣ್ಯ ಇಲಾಖೆಯನ್ನು ಸಂಪರ್ಕಿಸಿ ಅರ್ಜಿ ಹಾಕಿಕೊಂಡಾಗ ಹಿಂದೂ ದೇವಾಲಯಗಳಿಗಷ್ಟೇ ಮರ ಕೊಡಲಿಕ್ಕೆ ಬರುತ್ತದೆ ಎಂಬ ಉತ್ತರ ಬಂತು. ಆ ಬಗ್ಗೆ ಸ್ಪಷ್ಟೀಕರಣ ಬಯಸಿದಾಗ ಸಚಿವಾಲಯದ ನೌಕರರು ತಮಗೆ ತೋಚಿದಂತೆ ದೇವಾಲಯವೆಂದರೆ ಹಿಂದೂ ಮಂದಿರವಷ್ಟೇ ಎಂಬ ತಪ್ಪು ತೀರ್ಮಾನಕ್ಕೆ ಬಂದಿದ್ದುದು ಅರಿವಾಯಿತು. ಅಲ್ಲಿ ಇಲ್ಲಿ ಅಲೆದಾಡಿ ಮರ ಮಂಜೂರಾತಿ ಪಡೆದು ಜಿಲ್ಲಾ ಅರಣ್ಯ ಗೋದಾಮಿಗೆ ತೆರಳಿದ್ದೊಂದು ದೊಡ್ಡ ಸಾಹಸ. ಅಲ್ಲಿ ಇನ್ನೂ ಆ ಪತ್ರ ಕೊಳೆಯುತ್ತಾ ಬಿದ್ದಿದೆ. ಅವರ ಪ್ರಕಾರ ಮರ ತಾನಾಗೇ ಬೀಳಬೇಕು, ಆಮೇಲಷ್ಟೇ ನಾಟಾ ಸಿಗುವುದು, ಅಂದರೆ ಮರ ಬೀಳುವವರೆಗೆ ಕಾಯಬೇಕು. ಇಂಥ ಕತೆಗಳು ಹಲವಾರು, ಹಾಗಾಗಿ ಚರ್ಚುಗಳು ತಂತಮ್ಮ ಸಂನ್ಮೂಲಗಳಿಂದಲೇ ನಡೆಯುತ್ತವೆ. >>ಸರ್ವ ಜನ,ಸರ್ವ ಮತ,ಸರ್ವ ಕಾರ್ಯಗಳ ಸಮ ಸ೦ರಕ್ಷಣೆ ಸರಕಾರದ/ಯಾ ರಾಜನ ಕರ್ತವ್ಯ ಎ೦ದು ಚಾಣಕ್ಯ ತನ್ನ ಅರ್ಥಶಾಸ್ಥ್ರ ರಾಜನೀತಿಯಲ್ಲಿ ತಿಳಿಸಿದ್ದಾನೆ. ಚಾಣಕ್ಯನದು ಹೇಳೀಕೇಳೀ ಎಕನಾಮಿಕ್ಸು. ನಾವೀಗ ಇರುವುದು ನಮ್ಮದೇ ಸಂವಿಧಾನ ಅಳವಡಿಸಿಕೊಂಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ. ಇಂದು ನಮ್ಮ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ರಿಯಲ್ ಎಸ್ಟೇಟ್ ಸರ್ಕಾರವು ನೀವು ಹೇಳಿದಂತೆ "ಸರ್ವ ಜನ,ಸರ್ವ ಮತ,ಸರ್ವ ಕಾರ್ಯಗಳ ಸಮ ಸ೦ರಕ್ಷಣೆ ಸರಕಾರದ/ಯಾ ರಾಜನ ಕರ್ತವ್ಯ" ಎಂಬುದನ್ನು ತುಂಬಾ ಚೆನ್ನಾಗಿ ಪಾಲಿಸುತ್ತಿದ್ದಾರೆನ್ನುವುದು ಜಗಜ್ಜಾಹೀರಾಗಿದೆ ಬಿಡಿ. ಅಂಗೈ ಹುಣ್ಣಿಗೆ ಕನ್ನಡಿ ಏಕೆ? ಪ್ರೀತಿಯಿಂದ ಸಿ ಮರಿಜೋಸೆಫ್

ನಮಸ್ಕಾರ ಜೋಸೆಫ್ ರೇ, ನಿಮಗೆ ಉಡಾಫೆ ಯ ಪ್ರತಿಕ್ರಿಯೆಯನ್ನು ನಾನು ನೀಡಿಲ್ಲ. ನಿಮ್ಮ ಪ್ರಶ್ನೆಗೆ ಉತ್ತರವನ್ನು ಕಾನೂನಿನ ಜಾರಿಯಾದ ನ೦ತರ ಅದರ ಸಾಧಕ-ಭಾಧಕಗಳ ಚರ್ಚೆಯಾಗುವಾಗ ಮತ್ತೊ೦ದು ಲೇಖನದಲ್ಲಿ ವಿವರಿಸೋಣ ಅ೦ದಿದ್ದೆನೇ ಹೊರತು ಉಡಾಫೆಯಿ೦ದ ಉತ್ತರಿಸಿಲ್ಲ ಎ೦ಬುದು ನಿಮ್ಮ ಗಮನಕ್ಕಿರಲಿ.ಬೇಸರಿಸಬೇಡಿ.ಟೆನ್ಶನ್ ತಗೋಬೇಡಿ.ಏನೇ ಆಗ್ಲಿ, ನಾವೆಲ್ಲ ( ಈ ಚರ್ಚೆಯಲ್ಲಿ ಪಾಲೊ೦ಡಿದ್ದವರೆಲ್ಲಾ) ನಮ್ಮ ರಾಜಕಾರಣಿಗಳ ಅ೦ದರೆ ವಿಧಾನಸೌಧದಲ್ಲಿ ಒ೦ದು ವಿಷಯದ ಮೇಲೆ ನಡೆಯುವ ಚರ್ಚೆಗಿ೦ತ ಹತ್ತು ಪಾಲು ಉತ್ತಮವಾಗಿ ಚರ್ಚೆಯಲ್ಲಿ ಪಾಲ್ಗೊ೦ಡೆವಲ್ಲ ಎನ್ನುವುದೇ ನನ್ನ ಸ೦ತಸ. ನಮಸ್ಕಾರಗಳು, ನನ್ನಿ

<< ಆದರೆ ಇಗರ್ಜಿಗಳಿಗೆ ಸರ್ಕಾರದ ನೆರವು ಹರಿದು ಬರುತ್ತದೆ ಎನ್ನುವುದು ಅಪ್ಪಟ ಸುಳ್ಳು >> ಕೇರಳದಲೂ ಇದೇ ಮಾತನ್ನು ಹೇಳುತ್ತೀರ? ಹೇಳುವಂತಿಲ್ಲ. ಚರ್ಚಿಗೆ ಹಣ ಕೊಡದೆ ಯಾವ ಕಮ್ಯುನಿಸ್ಟ್ ತಾನೇ ಉಧ್ಧಾರವಾದಾನು ಅಲ್ಲಿ? ಆದರೂ ಚರ್ಚಿಗೆ ಹೊರದೇಶದಿಂದ ಬರುವ ಹಣಕ್ಕೆ ಹೋಲಿಸಿದಲ್ಲಿ ಸರಕಾರ ಕೊಡುವ ಹಣ ಹಣವೇ ಅಲ್ಲ ಎನ್ನುವುದು ಸತ್ಯ ಅನಿಸುತ್ತದೆ.

ಸಂಪದ ನಿರ್ವಾಹಕರಲ್ಲಿ ಒಂದು ಸ್ಪಷ್ಟೀಕರಣ ಬಯಸಿದ್ದೇನೆ. >>ಮಾನ್ಯ rennie606 ಅವರೇ ಆ ಸಾಲನ್ನು ಮತ್ತೊಮ್ಮೆ ಓದಿನೋಡಿ. ಅದರಲ್ಲಿ 'ಸರಾಸರಿ' ಎಂಬ ಪದವೂ ಇದೆ. ಬಿಆರ್‌ಎಸ್ ಅವರ ಈ ಪ್ರತಿಕ್ರಿಯೆಗೆ ಯಾರೋ -೧ ಅಂಕ ಕೊಟ್ಟಿದ್ದಾರೆ. ಅದರರ್ಥ ಏನು? ಈ ಪ್ರತಿಕ್ರಿಯೆಯಲ್ಲಿ ಅನುಚಿತವಾದುದೇನು ಎಂಬುದನ್ನು ಆ ಋಣಾತ್ಮಕ ಅಂಕ ಕೊಟ್ಟವರಾದರೂ ತಿಳಿಸುವರೇ? ಪ್ರೀತಿಯಿಂದ ಸಿ ಮರಿಜೋಸೆಫ್

ಮಾನ್ಯ ಮರಿಜೋಸೆಫ್, ನಿಮ್ಮ ಕಾಮೆಂಟ್ ಬಗ್ಗೆ ಯಾರಾದರೂ ಓದುಗರು flag ಮಾಡುವಾಗ negative report ಮಾಡಿದರೆ ಅದು -೧ ಆಗುತ್ತದೆ. positive report ಮಾಡಿದರೆ +೧ ಆಗುತ್ತದೆ. ಸಂಪದ ನಿರ್ವಹಣಾ ತಂಡದ ಪರವಾಗಿ