ಬಂತಣ್ಣ ಬಂತು ಚುನಾವಣೆ,

To prevent automated spam submissions leave this field empty.

ಬಂತಣ್ಣ ಬಂತು ಚುನಾವಣೆ,
ಕೇಳ್ರಣ್ಣ ಕೇಳ್ರಿ ಇವ್ರ ಚಿತಾವಣೆ,

ಎಲ್ಲಾರೂ ಹೇಳ್ತಾರೆ ಒಂದೇ ಮಾತ್ನ,
ವೋಟ್ ಹಾಕಿ, ವೋಟ್ ಹಾಕಿ, ವೋಟ್ ಹಾಕ
ನಾವಂಗೆ ಮಾಡ್ತೀವಿ, ನಾವಿಂಗೆ ಮಾಡ್ತೀವಿ
ನಮ್ಗೇನೇ ವೋಟ್ ಹಾಕಿ, ಸ್ವರ್ಗಾನೆ ತರ್ತೀವಿ!

ಕಮ್ಲದವ್ರು, ಕೈನವ್ರು, ಹೆಂಗಸ್ನಿಂದೆ ಬಂದವ್ರು
ಮುಗಿದ್ರಣ್ಣ ಮುಗಿದ್ರಣ್ಣ ಎರ್ಡು ಕೈನ,
ಕೈ ಹಿಡಿದ್ರು ಕಾಲ್ ಹಿಡಿದ್ರು ಕೊನ್ಗೆ
ತೋರ್ಸಿದ್ರು ಐನೂರ್ರ ನೋಟನ್ನ!

ಬಾಂಬನ್ನ ಹಾಕ್ದವ್ರು, ಕೈಯನ್ನ ಕಡ್ದವ್ರು, ದುಡ್ಡನ್ನ ಕದ್ದವ್ರು
ಎಲ್ಲಾರ್ಗು ಬೇಕು ಚುನಾವಣೆ,
ಹೊಟ್ಟೆಗಿಲ್ಲ, ಬಟ್ಟೆಗಿಲ್ಲ, ರಾತ್ರಿಯಾದ್ರೆ
ಮಲ್ಗಾಕೆ ಮನೆಯಿಲ್ಲ, ಆದ್ರೂನು ಬೇಕು ಚುನಾವಣೆ!

ಅವ್ರು ಕೊಡೋ ಬಿರ್ಯಾನಿ, ಐನೂರ್ರನೋಟು
ಎಲ್ಲಾದ್ನೂ ಮರ್ಸುತ್ತೆ, ಮತ್ತನ್ನ ಏರ್ಸುತ್ತೆ,
ಮನೆಯನ್ನ ಮಕ್ಳನ್ನ, ಹೆಂಡ್ತೀನ ತಾಯನ್ನ
ಅಪ್ಪನ್ನ ಅಕ್ಕ ತಂಗೀರ್ನ ತೊರ್ಸುತ್ತೆ ಚುನಾವಣೆ!

ಗೆದ್ದವ್ರು ಮೆರೀತಾರೆ, ಸೋತವ್ರು ಮಖಾಡೆ ಮಲಗ್ತಾರೆ,
ಗೆದ್ದವ್ರ ಬಾಲ ಹಿಡಿದವ್ರು ಬದುಕ್ತಾರೆ,
ಅವ್ರಿಗೆದುರಾದವರ್ನ ತುಳೀತ ನಗ್ತಾರೆ, ಲೆಕ್ಕ ಹಾಕ್ತಾರೆ
ಎಲ್ಲೆಲ್ಲಿ ನುಂಗೋಣ, ಎಷ್ಟೆಷ್ಟು ನುಂಗೋಣ!

ಬಂತಣ್ಣ ಬಂತು ಚುನಾವಣೆ,
ಕೇಳ್ರಣ್ಣ ಕೇಳಿ ಇವ್ರ ಚಿತಾವಣೆ!!

ಲೇಖನ ವರ್ಗ (Category): 
ಸರಣಿ: 

ಪ್ರತಿಕ್ರಿಯೆಗಳು

ಅಯ್ಯೋ ಸಾರ್ ವೋಟರ್ ಐ ಡಿ ಮಾಡ್ಸೋದಕ್ಕೆ ಹೋದ್ರೆ ಒಂದು ನೂರು ವಾರ್ಡ್ಗೆ ಕಳಿಸ್ತಾರೆ, ಇನ್ನೆಲ್ಲಿ ವೋಟ್ ಹಾಕೋದು :(

ನಾನು ಕಳೆದ ಸಲ ರಜಕ್ಕೆ ಬಂದಾಗ ಸುಮಾರು ೩ ಘಂಟೆಗಳ ಕಾಲ ಶಂಕರಮಠದ ಮುಂದಿನ ಮೈದಾನದಲ್ಲಿ ಸಾಲಿನಲ್ಲಿ ನಿಂತು ನನ್ನ ಚುನಾವಣಾ ಗುರುತಿನ ಪತ್ರ ಪಡೆದು ಲೋಕಸಭಾ ಚುನಾವಣೆಯಲ್ಲಿ ನನ್ನ ಮತದಾನದ ಅಧಿಕಾರ(!) ಚಲಾಯಿಸಿದೆ. ಅದೃಷ್ಟವಶಾತ್ ಈ ಬಾರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲೂ ನಮ್ಮ ನೆಚ್ಚಿನ ಕರ್ನಾಟಕ ರಕ್ಷಣಾ ವೇದಿಕೆಯ ಬೆಂಬಲಿತ ಅಭ್ಯರ್ಥಿಗೆ ಮತ ಚಲಾಯಿಸಲಿದ್ದೇನೆ. ದುಬೈನಿಂದ ಬಂದು ನಾನು ಮತ ಚಲಾಯಿಸುವಾಗ ನೀವು ಬೆಂಗಳೂರಿನಲ್ಲೇ ಇದ್ದು ಬರೀ ಕಾಫಿ ಕುಡೀತಾ ಇದ್ರೆ ಹೇಗೆ ಚೇತನ್? "ಮರಳಿ ಯತ್ನವ ಮಾಡಿ, ಮತದಾನದ ಹಕ್ಕು, ಅಧಿಕಾರ, ಜವಾಬ್ಧಾರಿ ಸಿಗುವವರೆಗೂ ವಿಶ್ರಮಿಸದಿರಿ". ನಂತರ ಕಾಫಿ ಕುಡಿಯಿರಿ, ನನ್ನ ಜೊತೆಗೆ!

ಗುರುತಿನ ಪತ್ರದ ಬಗ್ಗೆ ಎರಡು ಪ್ರಶ್ನೆಗಳು.. - ವಿದೇಶದಲ್ಲಿ ೧೦-೧೨ ವರುಷಗಳಿದ್ದವರಿಗೆ ಮತದಾನ ಗುರುತಿನ ಪತ್ರ ಕೊಡ್ತಾರ ? ಅನಿವಾಸಿಗಳಿಗೆ (ಪಾಸ್ ಪೋರ್ಟ್ ಇದ್ದರೂ) ಕೊಡಲ್ಲ ಅಂತ ಕೇಳಿದ್ದೆ. - ಈಗ ತಾನೆ ೩ ವಾರ ಊರಿಗೆ ಹೋಗಿದ್ದೆ. ಡಿಸೆಂಬರ್ ನಲ್ಲಿ ಮತ್ತೆ ಹೋಗುವ ಸಾಧ್ಯತೆಗಳಿವೆ. ಯಾವಾಗ ಹೋದರೂ ಸಿಗುತ್ತ? ಅಥವಾ ನಿರ್ದಿಷ್ಟ ದಿನಗಳು ಅಂತ ಇವೆಯ? ಇತೀ, ಉಉನಾಶೆ

ಹೀಗಂದ್ರೆ ಹೇಗೆ ಚೇತನ್. ಈ ಕಾಲದಲ್ಲಿ ಯಾವ ಕೆಲಸ ಸುಲಭದಲ್ಲಿ ಆಗುತ್ತದೆ? ಕಷ್ಟ ಆಗುತ್ತೆ ಅಂತ ಬಿಟ್ರೆ, ಪರಿಸ್ಥಿತಿ ಸುಧಾರಿಸೋದು ಹೇಗೆ? ಕಳಕಳಿಯಿಂದ.. ಇತೀ, ಉಉನಾಶೆ